���ಕರ್ನಾಟಕ ಸರಕಾರ�ಸಾರ್ವಜನಿಕ ಶಿಕ್ಷಣ ಇಲಾಖೆ�ಸರಕಾರಿ ಪದವಿಪೂರ್ವ ಕಾಲೇಜ್ (ಪ್ರೌಢ ಶಾಲಾ ವಿಭಾಗ) �ಹಿರೇಮ್ಯಾಗೇರಿ�
ರಾಷ್ಟ್ರೀಯ ವಿಜ್ಞಾನ ದಿನಾಚರಣೆ
2023 ರ ಧ್ಯೇಯ ವಾಕ್ಯ ಜಾಗತಿಕ ಯೋಗಕ್ಷೇಮಕ್ಕಾಗಿ ಜಾಗತಿಕ ವಿಜ್ಞಾನ
ಪ್ರಸ್ತುತಿ : ಶಂಕರಗೌಡ ಬಸಾಪೂರ ವಿಜ್ಞಾನ ಶಿಕ್ಷಕರು
* ಜೀವನದಲ್ಲಿ ಅದರ ವಿಜ್ಞಾನದ ಮಹತ್ವದ ಬಗ್ಗೆ ಜನಸಾಮಾನ್ಯರಲ್ಲಿ ಅರಿವು ಮೂಡಿಸುವುದು ರಾಷ್ಟ್ರೀಯ ವಿಜ್ಞಾನ ದಿನ ಆಚರಣೆಯ ಉದ್ದೇಶ.
*ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವನೆಯನ್ನು ಬೆಳೆಸುವುದು.
ಮೂಢನಂಬಿಕೆಗಳನ್ನು ಹೋಗಲಾಡಿಸುವುದು.
ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಆಚರಣೆ ಉದ್ದೇಶ
ವಿಜ್ಞಾನವನ್ನು ತಮ್ಮ ವೃತ್ತಿಯನ್ನಾಗಿ ಆಯ್ಕೆ ಮಾಡಿಕೊಳ್ಳಲು ಮಕ್ಕಳನ್ನು ಪ್ರೋತ್ಸಾಹಿಸಲಾಗುತ್ತದೆ. ಆದ್ದರಿಂದ ನಮ್ಮ ದೇಶದ ಮುಂಬರುವ ಪೀಳಿಗೆಯು ವಿಜ್ಞಾನ ಕ್ಷೇತ್ರದಲ್ಲಿ ಕೊಡುಗೆ ನೀಡಬಹುದು ಮತ್ತು ನಮ್ಮ ದೇಶಕ್ಕೆ ಪ್ರಗತಿ ಸಾಧಿಸಬಹುದು.
ರಾಷ್ಟ್ರೀಯ ವಿಜ್ಞಾನ ದಿನ ಆಚರಣೆ ಮಾಡಬೇಕೆಂದು ರಾಷ್ಟ್ರೀಯ ವಿಜ್ಞಾನ ಮತ್ತು ತಂತ್ರಜ್ಞಾನ ಸಂವಹನ ಮಂಡಳಿಯು 1986ರಲ್ಲಿ ಸರ್ಕಾರಕ್ಕೆ ಮನವಿ ಮಾಡಿತ್ತು.
1987ರಿಂದ ದೇಶದಾದ್ಯಂತ ಶಾಲೆ–ಕಾಲೇಜುಗಳು, ವಿಶ್ವವಿದ್ಯಾಲಯಗಳು, ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಗಳು, ವೈದ್ಯಕೀಯ ಹಾಗೂ ತಂತ್ರಜ್ಞಾನ ಕೇಂದ್ರಗಳಲ್ಲಿ ರಾಷ್ಟ್ರೀಯ ವಿಜ್ಞಾನ ದಿನದ ಆಚರಣೆ ನಡೆಯುತ್ತಿದೆ.
ಯಾವಾಗಿನಿಂದ ಆಚರಣೆ ಆರಂಭ
1928ರ ಫೆಬ್ರುವರಿ 28ರಂದು ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಡಾ.ಸಿ.ವಿ.ರಾಮನ್ ಬೆಳಕಿನ ಚದುರುವಿಕೆಯ ಪರಿಣಾಮಗಳನ್ನು ವಿವರಿಸಿದರು.
ಫೆಬ್ರುವರಿ 28 ನ್ನು ಏಕೆ ಆಯ್ಕೆ ಮಾಡಿದರು
ಮುಂದೆ ಆ ಸಂಶೋಧನೆ 'ರಾಮನ್ ಪರಿಣಾಮ' (ರಾಮನ್ ಎಫೆಕ್ಟ್) ಎಂದೇ ಜಗತ್ಪ್ರಸಿದ್ಧಿಯಾಯಿತು.
ವಿಜ್ಞಾನ ಜಗತ್ತಿನಲ್ಲಿ ಭಾರತವನ್ನು ಮೇರು ಶಿಖರಕ್ಕೆ ಕೊಂಡೊಯ್ದ ಸರ್ ಸಿ.ವಿ.ರಾಮನ್ ಅವರ ಅಪೂರ್ವ ಸಾಧನೆಗಳ ನೆನಪಿನಲ್ಲಿ ರಾಷ್ಟ್ರೀಯ ವಿಜ್ಞಾನ ದಿನವನ್ನು ಆಚರಿಸಲಾಗುತ್ತದೆ.
ಏನಿದು ರಾಮನ್ ಎಫೆಕ್ಟ್ ?
ಏನಿದು ರಾಮನ್ ಎಫೆಕ್ಟ್ ?
ಯಾವುದೇ ಪಾರದರ್ಶಕ ರಾಸಾಯನಿಕ ವಸ್ತುವಿನ ಮೂಲಕ ಬೆಳಕನ್ನು ಹಾಯಿಸಿದಾಗ ಅದರಿಂದ ಹೊರಬರುವ ಕಿರಣಗಳು ಒಳಬರುವ ಕಿರಣಗಳಿಗಿಂತ ಭಿನ್ನವಾದ ದಿಕ್ಕಿನತ್ತ ಹೊರಳಿರುವುದನ್ನು ನಾವು ನೋಡಬಹುದು (ಗಾಜಿನ ಪಟ್ಟಕದ ಮೂಲಕ ಬೆಳಕನ್ನು ಹಾಯಿಸುವ ಉದಾಹರಣೆ ನೆನಪಿಸಿಕೊಳ್ಳಿ).
ಹೀಗೆ ಚದುರಿದ ಬಹುಪಾಲು ಕಿರಣಗಳ ಸ್ವರೂಪ ಮೂಲ ಕಿರಣದಂತೆಯೇ ಇರುತ್ತದಾದರೂ ಒಂದಷ್ಟು ಭಾಗದ ಕಿರಣಗಳ ತರಂಗಾಂತರ ಮೂಲಕ್ಕಿಂತ ಬದಲಾಗಿರುತ್ತದೆ. ರಾಮನ್ ಪರಿಣಾಮವೆಂದು ಕರೆಯುವುದು ಇದನ್ನೇ.
ರಾಮನ್ ಪರಿಣಾಮದ ಅನ್ವಯಗಳು
ಮಾತ್ರೆಗಳಲ್ಲಿ ಸಂಯುಕ್ತಗಳ ವಿತರಣೆ ತಿಳಿಯಲು
ಏಕರೂಪತೆಯ ಮಿಶ್ರಣ ಮಾಡಲು.& ಅಧ್ಯಾಯ ಮಾಡಲು
ಕಚ್ಚಾ ವಸ್ತುಗಳ ಪರಿಶೀಲನೆ ಮಾಡಲು
ಯಾವದೇ ಪುಡಿ ವಿಷಯದ ಅಧ್ಯಯನ ಮತ್ತು ಶುದ್ಧತೆ ತಿಳಿಯಲು
ಸ್ಫಟಿಕತ್ವ ಅಧ್ಯಯನ ಮಾಡಲು
ಬಹುರೂಪಿಗಳ ಅಧ್ಯಯನದಲ್ಲಿ
ರಾಮನ್ ಜೀವನದಲ್ಲಿ ತಿರುವು ಪಡೆದ ಹಂತ
ಒಮ್ಮೆ ಹಡಗಿನಲ್ಲಿ ಪ್ರಯಾಣಿಸುವಾಗ ರಾಮನ್ ಅವರಿಗೆ ಸಮುದ್ರ ಏಕೆ ಯಾವಾಗಲೂ ನೀಲಿಯಾಗಿಯೇ ಕಾಣುತ್ತದೆ ಎಂಬ ಪ್ರಶ್ನೆ ಎದುರಾಯಿತಂತೆ. ಅದು ಆಕಾಶದ ಬಣ್ಣದ ಪ್ರತಿಫಲನವೋ ಅಥವಾ ಈ ನೀಲಿ ಬಣ್ಣದ ಹಿಂದೆ ಬೇರೇನಾದರೂ ಗುಟ್ಟು ಅಡಗಿದೆಯೋ ಎಂದು ಪತ್ತೆಮಾಡಲು ಹೊರಟ ರಾಮನ್ ಸೂರ್ಯನ ಬೆಳಕು ನೀರಿನಲ್ಲಿ ಚದುರಿಹೋಗುವುದೇ ಸಮುದ್ರದ ನೀರು ನೀಲಿಯಾಗಿ ಕಾಣಲು ಕಾರಣ ಎಂಬ ವಿಷಯ ಕಂಡುಹಿಡಿದರು.
ಇದೇ ಅಂಶ ಮುಂದೆ ಅವರು ತಮ್ಮ ಅಧ್ಯಯನವನ್ನು ಮುಂದುವರೆಸಲು ಪ್ರೇರಣೆಯಾಯಿತು. ಕೋಲ್ಕತಾದ ಇಂಡಿಯನ್ ಅಸೋಸಿಯೇಷನ್ ಫಾರ್ ಕಲ್ಟಿವೇಷನ್ ಆಫ್ ಸೈನ್ಸ್‌ನಲ್ಲಿ ರಾಮನ್ ಅವರು ತಮ್ಮ ಸಹೋದ್ಯೋಗಿಗಳೊಡನೆ ನಡೆಸಿದ ಅಧ್ಯಯನಗಳ ಪರಿಣಾಮವೇ ರಾಮನ್ ಪರಿಣಾಮದ ಶೋಧ
ಸಮುದ್ರ ಏಕೆ ಯಾವಾಗಲೂ ನೀಲಿಯಾಗಿಯೇ ಕಾಣುತ್ತದೆ
ಪ್ರಶಸ್ತಿಗಳು
ವಿಜ್ಞಾನದಲ್ಲಿ ನೊಬೆಲ್ ಪ್ರಶಸ್ತಿ ಪಡೆದ ಏಷ್ಯಾದ ಮೊತ್ತಮೊದಲ ವಿಜ್ಞಾನಿ ಎಂಬ ಹೆಗ್ಗಳಿಕೆ ಅದು ನಮ್ಮೆಲ್ಲ ಭಾರತೀಯರ ಹೆಮ್ಮೆ
ಸರ್ ಎಂಬ ಬಿರುದು
ಫ್ರಾಂಕ್ಲಿನ್ ಪ್ರಶಸ್ತಿ
ಲೆನಿನ್ ಪ್ರಶಸ್ತಿ
ರಾಯಲ್ ಸೊಸೈಟಿ ಹ್ಯೂಜ್ ಪ್ರಶಸ್ತಿ
ಇಟಾಲಿಯನ್ ಅವಾರ್ಡ
ರಾಮನ್ ಪರಿಣಾಮದ ಮೇಲೆ 5000 ಪ್ರಬಂಧಗಳು
ವೈಜ್ಞಾನಿಕ ಮನೋಭಾವದ ಸಾರವೇನೆಂದರೆ ನಾವು ಬದುಕುತ್ತಿರುವುದು ಎಂತಹ ಅದ್ಭುತ ಪ್ರಪಂಚ ಎಂಬುದನ್ನು ಅರಿತುಕೊಳ್ಳುವುದು
------ ಸಿ.ವಿ.ರಾಮನ್
�ವಂದನೆಗಳು�
ಇಂತಿ
ಶ್ರೀ ಶಂಕರಗೌಡ ಬಸಾಪೂರ
ಸ.ಪ.ಪೂ.ಕಾ(ಪ್ರೌ.ಶಾ.ವಿ) ಹಿರೇಮ್ಯಾಗೇರಿ
https://basapurs.blogspot.com
�ಜಾಗತಿಕ ಯೋಗಕ್ಷೇಮಕ್ಕಾಗಿ ಜಾಗತಿಕ ವಿಜ್ಞಾನ