1 of 60

1

9 ನೇ ತರಗತಿ ಸಮಾಜ ವಿಜ್ಞಾನ�ಸೇತುಬಂಧ

8ನೇ ತರಗತಿ ಸಮಾಜ ವಿಜ್ಞಾನ

ವಿಷಯದ ಪ್ರಮುಖ ಅಂಶಗಳ ಪುನರ್ಮನನ

ರಚನೆ: ಶ್ರೀನಿವಾಸ್ ಹೆಚ್. ಕಲಾಲ್. ಕರ್ನಾಟಕ ಪಬ್ಲಿಕ್ ಶಾಲೆ ಆಡೂರ ಜಿ|| ಹಾವೇರಿ

SHRINIVAS H.K

2 of 60

2

ಕಲಿಕಾಂಶಗಳು

1. ಆಧಾರಗಳ ಅರ್ಥ, ವಿಧಗಳು.

2. ಚರಿತ್ರೆ ಪೂರ್ವ ಕಾಲ ಮತ್ತು ಪ್ರಾಚೀನ ನಾಗರಿಕತೆಗಳ ಪರಿಚಯ.

3. ಪ್ರಾಚೀನ ಕಾಲದಲ್ಲಿ ಭಾರತವನ್ನು ಆಳಿದ ಪ್ರಮುಖ ಸಾಮ್ರಾಜ್ಯಗಳು, ರಾಜರು, ಕೊಡುಗೆಗಳ

ಪರಿಚಯ.

4. ರಾಜ್ಯಶಾಸ್ತ್ರದ ಪರಿಚಯ, ಪೌರತ್ವ, ಪ್ರಜಾಪ್ರಭುತ್ವ.

5. ಸ್ಥಳೀಯ ಸ್ವಯಂ ಸರಕಾರಗಳ ರಚನೆ, ಕಾರ್ಯಗಳು.

6. ಸಮಾಜಶಾಸ್ತ್ರ ಪರಿಚಯ, ಸಂಸ್ಕೃತಿ, ಸಾಮಾಜಿಕ ಸಂಸ್ಥೆ ಮತ್ತು ಸಮಾಜದ ಪ್ರಕಾರಗಳು.

7. ಭೂಮಿಯ ಆಕಾರ, ಗಾತ್ರ, ಚಲನೆ, ಅಕ್ಷಾಂಶ ಮತು ರೇಖಾಂಶ ಪರಿಚಯ.

8. ಶಿಲಾಗೋಳ, ವಾಯುಗೋಳ, ಜಲಗೋಳ, ಮತ್ತು ಜೀವಿಗೋಳ ಪರಿಚಯ.

9. ಅರ್ಥಶಾಸ್ತ್ರದ ಪರಿಚಯ, ವಲಯಗಳು, ರಾಷ್ಟ್ರೀಯ ಮತ್ತು ತಲಾ ಆದಾಯ, ಅರ್ಥವ್ಯವಸ್ಥೆಗಳು.

10. ವ್ಯವಹಾರದ ಅರ್ಥ, ಭಾಗಗಳು, ವ್ಯವಹಾರ ಸಂಘಟನೆಗಳು.

SHRINIVAS H.K

3 of 60

ಭಾರತದ ಭೌಗೋಳಿಕ ಲಕ್ಷಣಗಳು

3

  1. ಉತ್ತರದ ಹಿಮಾಲಯ

ಪರ್ವತಗಳು.

2. ಉತ್ತರದ ಮಹಾ

ಮೈದಾನ.

3. ದಕ್ಷಿಣದ ಪ್ರಸ್ಥಭೂಮಿ.

4. ಕರಾವಳಿ ಮೈದಾನ

SHRINIVAS H.K

4 of 60

ಆಧಾರಗಳು

  •  “ಇತಿಹಾಸ ರಚನೆಗೆ ಬೇಕಾಗುವ ಮೂಲ ಸಾಮಗ್ರಿಗಳಿಗೆ ಆಧಾರಗಳೆನ್ನುವರು” ಉದಾ: ಗ್ರಂಥಗಳು, ಶಾಸನಗಳು, ನಾಣ್ಯಗಳು, ಸ್ಮಾರಕಗಳು ಇತ್ಯಾದಿ.
  • 2 ವಿಧ : 1)ಲಿಖಿತ ಆಧಾರಗಳು (ಗ್ರಂಥಗಳು) 2) ಪ್ರಾಕ್ತನ ಆಧಾರಗಳು(ಶಾಸನ, ನಾಣ್ಯ, ಸ್ಮಾರಕ, ಅವಶೇಷ. ಇತ್ಯಾದಿಗಳು)

4

SHRINIVAS H.K

5 of 60

ಭಾರತದ ಇತಿಹಾಸದ ಕಾಲಾನುಕ್ರಮ

ಸಾ.ಶಾ.ಪೂ.406ಕೋಟಿ– ಭೂಮಿ ಉಗಮ

‘’ 70ಕೋಟಿ– ಜೀವಿಗಳ ಉಗಮ

‘’ 50ಕೋಟಿ– ಏಕಕೋಶ ಜೀವಿ ಉಗಮ

‘’ 40ಲಕ್ಷ - ಮೀನು,ಕಪ್ಪೆ,ಹಲ್ಲಿ ಉಗಮ

‘’ 30ಲಕ್ಷ - ಕಪಿ,ಚಿಂಪಾಜಿ,ಗಿಬ್ಬನ್ಉಗಮ

‘’ 5ಲಕ್ಷ - ಮಾನವನ ಉಗಮ

‘’ 4ಲಕ್ಷ -

‘’ 4ಲಕ್ಷ -

‘’ 4ಲಕ್ಷ - ಹಳೆ ಶಿಲಾಯುಗ

‘’ 2ಲಕ್ಷ -

‘’ 1ಲಕ್ಷ -

‘’ 50000-

‘’ 10000-

‘’ 9000- ಮಧ್ಯ ಶಿಲಾಯುಗ

‘’ 8000-

‘’ 7000-

‘’ 6000-

‘’ 5000- ನವ ಶಿಲಾಯುಗ

‘’ 2500-

5

ಸಾ.ಶಾ.ಪೂ2500-

‘’ 2000– ಹರಪ್ಪಾ ನಾಗರಿಕತೆ

‘’ 1500–

‘’ 1400-

‘’ 1200-

‘’ 1000- ವೇದಕಾಲನಾಗರಿಕತೆ

‘’ 800-

‘’ 600-

‘’ 500-

‘’ 400-

‘’ 300-

‘’ 200- ಮೌರ್ಯರು

‘’ 100- ಶಾತವಾಹನರು

‘’ 50-

‘’ 30

‘’ 20-

‘’ 10-

‘’ 1-

ಸಾ.ಶಾ 1- ಕ್ರಿಸ್ತನ ಜನನ

ಸಾ.ಶಾ.1-

‘’ 50-

‘’ 100- ಕುಶಾಣರು

‘’ 200-

‘’ 300- ಗುಪ್ತರು,ಕದಂಬ,ಗಂಗ,ಪಲ್ಲವ

‘’ 500-

‘’ 600- ಬಾದಾಮಿ ಚಾಲುಕ್ಯರು

‘’ 700- ವರ್ಧನರು,ಗಂಗರು

‘’ 800- ರಾಷ್ಟ್ರಕೂಟ

‘’ 1000- ಕಲ್ಯಾಣದ ಚಾಲುಕ್ಯರು

‘’ 1100- ಮುಸ್ಲಿಮ್ ದಾಳಿ,ಚೋಳ

‘’ 1200- ದೆಹಲಿಸುಲ್ತಾನರು,ಹೊಯ್ಸಳ

‘’ 1500-

‘’ 1600- ಮೊಘಲರು,

‘’ 1700- ಬ್ರಿಟೀಷ್ ಸಮ್ರಾಜ್ಯ ವಿಸ್ತರಣೆ

‘’ 1800-

‘’ 1857- ಸಿಪಾಯಿ ದಂಗೆ

‘’ 1885-1947- ಸ್ವಾತಂತ್ರ್ಯ ಹೋರಾಟ

‘’ 1947- ಸ್ವಾತಂತ್ರ್ಯ ಮತ್ತು ವಿಭಜನೆ

SHRINIVAS H.K

6 of 60

ಭಾರತದ ಪ್ರಾಚೀನ ಕಾಲದ ಇತಿಹಾಸ

  • ಚರಿತ್ರೆ ಪೂರ್ವ ಭಾರತ (ಪ್ರಾಗೈತಿಹಾಸಿಕ ಕಾಲ)
  • “ಮಾನವ ಲೇಖನ ಕಲೆ ಕಂಡುಹಿಡಿಯುವುದಕ್ಕಿಂತ ಹಿಂದಿನ ಕಾಲ”
  • ಪುರಾತತ್ವ ಆಧಾರಗಳು.
  • ಇದನ್ನು ಶಿಲಾಯುಗ ಎನ್ನುವರು 3 ಯುಗ
  • 1)ಹಳೆ ಶಿಲಾಯುಗ (12,000 ವರ್ಷಗಳಿಗಿಂತ ಹಿಂದಿನದು)
  • 2)ಮದ್ಯ ಶಿಲಾಯುಗ (12,000 ದಿಂದ 10,000 ವರ್ಷಗಳ ಹಿಂದಿನದು)
  • 3)ನವ ಶಿಲಾಯುಗ (10,000 ವರ್ಷಗಳ ಈಚಿನದು).

6

SHRINIVAS H.K

7 of 60

ಪ್ರಾಚೀನ ನಾಗರೀಕತೆಗಳು

  • 1) ಹರಪ್ಪಾ ನಾಗರೀಕತೆ (ಸಿಂಧೂ ನದಿ ನಾಗರಿಕತೆ) (ಸಾ.ಶಾ.ಪೂ 2600 ರಿಂದ ಸಾ.ಶಾ.ಪೂ 1500) ವಾಯುವ್ಯ ಭಾರತದಲ್ಲಿ ಬೆಳೆದು ಬಂದಿತು.
  • ಪ್ರಮುಖ ನೆಲೆಗಳು : ಹರಪ್ಪಾ, ಮೊಹೆಂಜೋದಾರೋ, ಕಾಲಿಬಂಗನ್, ಲೋಥಾಲ್.
  • ಪ್ರಮುಖ ಲಕ್ಷಣಗಳು : ವ್ಯವಸ್ಥಿತ ನಗರ ಯೋಜನೆ, ಮೊಹೆಂಜೋದಾರೋದಲ್ಲಿ ಬೃಹತ್ ಸ್ನಾನದ ಕೊಳ, ಲೋಥಾಲ್ ನಲ್ಲಿ ಬಂದರು.

7

SHRINIVAS H.K

8 of 60

ಪ್ರಾಚೀನ ನಾಗರೀಕತೆಗಳು

  • 2) ವೇದ ಕಾಲದ ನಾಗರೀಕತೆ (ಸಾ.ಶಾ.ಪೂ1500 ರಿಂದ ಸಾ.ಶಾ.ಪೂ 700) ವಾಯುವ್ಯ ಮತ್ತು ಉತ್ತರ ಭಾರತದಲ್ಲಿ ಬೆಳೆದು ಬಂದಿತು.
  • ಋಗ್ವೇದ ಕಾಲ (ಸಾ.ಶಾ.ಪೂ1500 ರಿಂದ ಸಾ.ಶಾ.ಪೂ1000) ಉತ್ತರ ವೇದಗಳ ಕಾಲ(ಸಾ.ಶಾ.ಪೂ1000-ಸಾ.ಶಾ.ಪೂ 700).
  • ಪ್ರಮುಖ ಲಕ್ಷಣಗಳು : 4 ವೇದಗಳ ರಚನೆ (ಋಗ್ವೇದ, ಯಜುರ್ವೇದ, ಸಾಮವೇದ, ಅಥರ್ವಣ ವೇದ), ಅರಣ್ಯಕಗಳು ಮತ್ತು ಉಪನಿಷತ್ ಗಳ ರಚನೆ, 2ಮಹಾಕಾವ್ಯಗಳಾದ ಮಹಾಭಾರತ ಮತ್ತು ರಾಮಾಯಣ ರಚನೆ,
  • ಗೋವುಗಳು ಸಂಪತ್ತಿನ ಪ್ರತೀಕ,
  • ಸಮಾಜದಲ್ಲಿ ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರ

ಎಂಬ ನಾಲ್ಕು ವರ್ಗಗಳ ಉದಯ.

8

SHRINIVAS H.K

9 of 60

ಪ್ರಾಚೀನ ನಾಗರೀಕತೆಗಳು

3) ಈಜಿಪ್ಟ್ ನಾಗರೀಕತೆ (ಸಾ.ಶಾ.ಪೂ. 3100 ರಿಂದ ಸಾ.ಶಾ.ಪೂ. 332)

  • ಆಫ್ರಿಕಾ ಖಂಡದ ಈಜಿಪ್ಟ್ ದೇಶದ ನೈಲ್ ನದಿ ದಡದಲ್ಲಿ ಬೆಳೆದು ಬಂದಿತು.
  • ಪ್ರಮುಖ ಲಕ್ಷಣಗಳು : ರಾಜನನ್ನು ಫೆರೋ ಎನ್ನುತ್ತಿದ್ದರು, ಹಲವು ಬಾರಿ ವಿದೇಶೀಯರ ದಾಳಿ (ಅಲೆಗ್ಸಾಂಡರ್ ಸಹ), ಮಮ್ಮಿ ಮತ್ತು ಪಿರಮಿಡ್ ಗಳು.

9

SHRINIVAS H.K

10 of 60

ಪ್ರಾಚೀನ ನಾಗರೀಕತೆಗಳು

  • 4) ಮೆಸಪಟೋಮಿಯಾ ನಾಗರೀಕತೆ. (ಬ್ಯಾಬಿಲೋನಿಯನ್ ನಾಗರೀಕತೆ)
  • ಪಶ್ಚಿಮ ಏಷ್ಯಾದ ಯುಪ್ರಟಿಸ್ ಮತ್ತು ಟೈಗ್ರಿಸ್ ನದಿ ದಡದಲ್ಲಿ(ಈಗಿನ ಇರಾಕ್) ಬೆಳೆದು ಬಂದಿತು.
  • ಪ್ರಮುಖ ಲಕ್ಷಣಗಳು : ಹಲವು ಮನೆತನಗಳ ಆಳ್ವಿಕೆ(ಸುಮೇರಿಯನ್ನರು, ಅಕ್ಕೇಡಿಯನ್ನರು, ಅಮೋರೈಟರು, ಹಿಟೈಟರು, ಅಸ್ಸೀರಿಯನ್ನರು), ಹಮ್ಮುರಭಿಯ ಕಾನೂನುಗಳು, ಜಿಗ್ಗುರಾಟ್ ಮತ್ತು ತೂಗು ಉದ್ಯಾನಗಳು.

10

SHRINIVAS H.K

11 of 60

ಪ್ರಾಚೀನ ನಾಗರೀಕತೆಗಳು

5) ಚೀನಾ ದೇಶದ ನಾಗರೀಕತೆ.

  • ಚೀನಾದ ಹವಾಂಗೋ ನದಿ ದಡದಲ್ಲಿ ಬೆಳೆದು ಬಂದಿತು.
  • ಪ್ರಮುಖ ಲಕ್ಷಣಗಳು : ಹಲವು ಮನೆತನಗಳ ಆಳ್ವಿಕೆ (ಶಾಂಗ್, ಚೌ, ಷಿನ್), ಚೀನಾದ ಮಹಾಗೋಡೆ ನಿರ್ಮಾಣ(5000ಕಿ.ಮೀ. ಉದ್ದ) (ಸಾ.ಶಾ.ಪೂ 7ರಿಂದ 16 ನೇ ಶತಮಾನದ ನಡುವೆ).

11

SHRINIVAS H.K

12 of 60

ಪ್ರಾಚೀನ ನಾಗರೀಕತೆಗಳು

6) ಗ್ರೀಕ್ ನಾಗರೀಕತೆ

  • ಯುರೋಪ್ ಖಂಡದ ಮೆಡಿಟರೇನಿಯನ್ ಸಮುದ್ರಕ್ಕೆ ಹೊಂದಿಕೊಂಡಿರುವ ಗ್ರೀಕ್ ದೇಶದ ಡ್ಯಾನ್ಯೂಬ್ ನದಿ ದಡದಲ್ಲಿ ಬೆಳೆದು ಬಂದಿತು.
  • ವಿಶೇಷ ಅಂಶಗಳು : ನಗರ ರಾಜ್ಯಗಳು (ಅಥೆನ್ಸ್, ಸ್ಪಾರ್ಟಾ, ಮೆಸಿಡೋನಿಯಾ), ಪೆರಿಕ್ಲಿಸ್ ನ ಕಾಲ ಸುವರ್ಣ ಯುಗ, ಮಹಾ ದಿಗ್ವಿಜಯಿ ಅಲೆಗ್ಸಾಂಡರ್, ಶ್ರೇಷ್ಟ ಸಾಹಿತಿ ಹೋಮರ್, ಇತಿಹಾಸದ ಪಿತಾಮಹ ಹೆರಾಡೊಟಸ್, ಶ್ರೇಷ್ಠ ತತ್ವಜ್ಞಾನಿಗಳಾದ ಸಾಕ್ರಟಿಸ್ ಪ್ಲೇಟೋ, ಅರಿಸ್ಟಾಟಲ್, ಓಲಂಪಿಕ್ ಕ್ರೀಡೆಗಳ ಆರಂಭ.

12

SHRINIVAS H.K

13 of 60

ಪ್ರಾಚೀನ ನಾಗರೀಕತೆಗಳು

7) ರೋಮನ್ ನಾಗರೀಕತೆ

  • ಯುರೋಪ್ ಖಂಡದ ಇಟಲಿ ದೇಶದ ಟೈಬರ್ ನದಿ ದಡದಲ್ಲಿ ಬೆಳೆದು ಬಂದಿತು.
  • ವಿಶೇಷ ಅಂಶಗಳು: ಅಸೆಂಬ್ಲಿ ಮತ್ತು ಸೆನೆಟ್ ಎಂಬ ರಾಜಕೀಯ ಸಲಹಾ ಸಂಸ್ಥೆಗಳು, ಸರ್ವಾಧಿಕಾರಿಗಳಾದ ಜೂಲಿಯಸ್ ಸೀಜರ್ ಮತ್ತು ಆಗಸ್ಟಸ್ ಸೀಜರ್ ಆಳ್ವಿಕೆ, ಫ್ಯೂನಿಕ್ ಯುದ್ಧಗಳು, ಗ್ಲಾಡಿಯೇಟರ್ ಗಳ ಸೆಣೆಸಾಟ, ಕಲೋಸಿಯಂ, ಎಂಪಿಥಿಯೇಟರ್, ಪ್ಯಾಂಥಿಯೋನ್ ಎಂಬ ಬೃಹತ್ ಕಟ್ಟಡಗಳು.�

13

SHRINIVAS H.K

14 of 60

ಪ್ರಾಚೀನ ನಾಗರೀಕತೆಗಳು

8) ಅಮೇರಿಕಾದ ನಾಗರೀಕತೆಗಳು (ಪ್ರಾಚೀನ ಕೊಲಂಬಿಯಾದ

ನಾಗರೀಕತೆಗಳು)

  • ಅಮೇರಿಕಾದ ಮೂಲ ನಿವಾಸಿಗಳಾದ ಇಂಡಿಯನ್ನರಿಂದ ಪ್ರಾರಂಭ.
  • 3 ಪ್ರತ್ಯೇಕ ಸಂಸ್ಕೃತಿಗಳು 1)ಮಾಯಾ: ಮೆಕ್ಸಿಕೋದ ಯುಕಟೆನ್ ಪ್ರದೇಶದಲ್ಲಿತ್ತು, ವಿಶೇಷತೆ: ಬೃಹತ್ ಆಚರಣೆ ಕೇಂದ್ರಗಳು
  • 2)ಆಸ್ಟೆಕ್: ಮೆಕ್ಸಿಕೋದ ಟೆಕ್ಸ್ ಕೊಕೋ ಸರೋವರದ ದ್ವೀಪದ ಮೇಲೆ, ವಿಶೇಷತೆ: ಬೃಹತ್ ದೇವಾಲಯ, ಪಿರಮಿಡ್, ಅರಮನೆಗಳು, ಚಿನಂಪ.
  • 3)ಇಂಕಾ: ಪೆರುವಿನ ಕುಸ್ಕೋ ಕಣಿವೆಯಲ್ಲಿ(ಇಕ್ವೆಡಾರ್, ಪೆರು, ಚಿಲಿ, ಅರ್ಜೆಂಟೈನಾ), ವಿಶೇಷತೆ: ಉತ್ತಮ ಆಡಳಿತ ಸಂಘಟನೆ, ಬೃಹತ್ ಶಿಲಾ ಕಟ್ಟಡಗಳು.

14

SHRINIVAS H.K

15 of 60

ಭಾರತದ ಪ್ರಾಚೀನ ಕಾಲದ ಇತಿಹಾಸ

* ಜೈನ ಧರ್ಮ ಮತ್ತು ಬೌದ್ಧ ಧರ್ಮ

  • ಜೈನ ಧರ್ಮ : 24 ತೀರ್ಥಂಕರರಿಂದ ಜೈನ ಸಿದ್ಧಾಂತ ಪ್ರಚಾರ
  • ವರ್ಧಮಾನ ಮಹಾವೀರ(ಸಾ.ಶಾ.ಪೂ599 ರಿಂದ 527) 24 ನೇ ತೀರ್ಥಂಕರ
  • ಜನನ : ಸಾ.ಶಾ. ಪೂ. 599 ವೈಶಾಲಿಯ ಕುಂಡಲಗ್ರಾಮದಲ್ಲಿ ತಂದೆ: ಸಿದ್ಧಾರ್ಥ ತಾಯಿ: ತ್ರಿಶಲಾದೇವಿ. 30 ನೇ ವಯಸ್ಸಿನಲ್ಲಿ ಸನ್ಯಾಸ, 12ವರ್ಷ ಕಠಿಣ ತಪಸ್ಸು, 30 ವರ್ಷ ದೇಶ ಸಂಚಾರ.
  • ಜೈನ ಧರ್ಮದ ತತ್ವಗಳು : ಪಂಚ ಪ್ರತಿಜ್ಞೆ (ಅಹಿಂಸೆ, ಸತ್ಯ, ಆಸ್ತೇಯ, ಅಪರಿಗ್ರಹ, ಬ್ರಹ್ಮಚರ್ಯ). ತ್ರಿರತ್ನ: ಸಮ್ಯಕ್ ಜ್ಞಾನ, ದರ್ಶನ, ಚಾರಿತ್ರ್ಯ.
  • 2ಪಂಗಡಗಳು : ಶ್ವೇತಾಂಬರರು, ದಿಗಂಬರರು.

15

SHRINIVAS H.K

16 of 60

ಭಾರತದ ಪ್ರಾಚೀನ ಕಾಲದ ಇತಿಹಾಸ

* ಜೈನ ಧರ್ಮ ಮತ್ತು ಬೌದ್ಧ ಧರ್ಮ

  • ಬೌದ್ಧ ಧರ್ಮ :
  • ಗೌತಮ ಬುದ್ಧ (ಸಾ.ಶಾ.ಪೂ 563 ರಿಂದ ಸಾ.ಶಾ.ಪೂ.483)
  • ಜನನ : ಸಾ.ಶಾ.ಪೂ.563 ನೇಪಾಳದ ಲುಂಬಿನಿವನ
  • ತಂದೆ: ಶುದ್ಧೋಧನ ತಾಯಿ: ಮಾಯಾದೇವಿ.
  • 29ನೇ ವಯಸ್ಸಿನಲ್ಲಿ ಸನ್ಯಾಸ, 6ವರ್ಷ ಕಠಿಣ ತಪಸ್ಸು, ದೇಶ ಸಂಚಾರ,
  • ಬೋಧನೆಗಳು : ಆಸೆಯೇ ದು‍ಖಕ್ಕೆ ಮೂಲ, ಆಸೆ ತೊರೆದರೆ ನೆಮ್ಮದಿ, ಆಸೆ ತೊರೆಯಲು ಅಷ್ಟಾಂಗ ಮಾರ್ಗ : ಒಳ್ಳೆಯ ನಡತೆ, ಮಾತು, ನೋಟ, ಬದುಕು, ಪ್ರಯತ್ನ, ನೆನಪು, ನಿರ್ಧಾರ, ಚಿಂತನೆ.
  • 3 ಪಂಗಡಗಳು : ಹೀನಾಯಾನ, ಮಹಾಯಾನ, ವಜ್ರಯಾನ.

16

SHRINIVAS H.K

17 of 60

ಭಾರತದ ಪ್ರಾಚೀನ ಕಾಲದ ಸಾಮ್ರಾಜ್ಯಗಳು

  • 1) ಮೌರ್ಯರು (ಸಾ.ಶಾ.ಪೂ.325 ರಿಂದ ಸಾ.ಶಾ.ಪೂ 185). ಮಗಧ ಪ್ರದೇಶದಲ್ಲಿ ಆಳ್ವಿಕೆ.
  • ರಾಜಧಾನಿ: ಪಾಟಲೀಪುತ್ರ(ಇಂದಿನ ಪಾಟ್ನಾ).
  • ಸ್ಥಾಪಕ: ಚಂದ್ರಗುಪ್ತ ಮೌರ್ಯ.
  • ಪ್ರಸಿದ್ಧ ಅರಸ : ಅಶೋಕ (ಸಾ.ಶಾ.ಪೂ.273 ರಿಂದ 232): ಕಳಿಂಗ ಯುದ್ಧದ ಸಾವು ನೋವುಗಳಿಂದ ಮನಃಪರಿವರ್ತನೆ, ಬೌದ್ಧ ಧರ್ಮ ಪ್ರಚಾರ, ಪ್ರಜಾಹಿತ ಕಾರ್ಯ. ಶಿಲಾಶಾಸನಗಳ ರಚನೆ.

17

SHRINIVAS H.K

18 of 60

ಭಾರತದ ಪ್ರಾಚೀನ ಕಾಲದ ಸಾಮ್ರಾಜ್ಯಗಳು

  • 2) ಕುಶಾಣರು :(ಸಾ.ಶಾ.50 ರಿಂದ ಸಾ.ಶಾ.230): ವಾಯುವ್ಯ ಭಾರತದಲ್ಲಿ ಆಳ್ವಿಕೆ.
  • ರಾಜಧಾನಿ: ಪುರುಷಪುರ(ಈಗಿನ ಪೇಶಾವರ)
  • ಸ್ಥಾಪಕ : ಕುಜಲ ಕಡಪಸಿಸ್.
  • ಪ್ರಸಿದ್ಧ ಅರಸ: ಕನಿಷ್ಕ (ಸಾ.ಶಾ.78 ರಿಂದ 101): ಸಾ.ಶಾ.78 ರಲ್ಲಿ ಶಕಯುಗ ಆರಂಭಿಸಿದ, ವಿಶಾಲ ಸಾಮ್ರಾಜ್ಯ ಕಟ್ಟಿದ, ಬೌದ್ಧ ಧರ್ಮ ಪ್ರಚಾರ.

18

SHRINIVAS H.K

19 of 60

ಭಾರತದ ಪ್ರಾಚೀನ ಕಾಲದ ಸಾಮ್ರಾಜ್ಯಗಳು

  • 3) ಗುಪ್ತ ಸಾಮ್ರಾಜ್ಯ (ಸಾ.ಶಾ.275 ರಿಂದ 455) ಮಗಧ ಪ್ರದೇಶದಲ್ಲಿ ಆಳ್ವಿಕೆ.
  • ರಾಜಧಾನಿ: ಪಾಟಲೀಪುತ್ರ.
  • ಸ್ಥಾಪಕ: ಶ್ರೀಗುಪ್ತ.
  • ಪ್ರಸಿದ್ಧ ಅರಸರು: ಸಮುದ್ರಗುಪ್ತ(ಸಾ.ಶಾ.335 ರಿಂದ 380):ಅನೇಕ ಯುದ್ಧಗಳಿಂದ ದೊಡ್ಡ ಸಾಮ್ರಾಜ್ಯ ಕಟ್ಟಿದ. 2ನೇ ಚಂದ್ರಗುಪ್ತ (ಸಾ.ಶಾ.380 ರಿಂದ 412): ವೈವಾಹಿಕ ಸಂಬಂಧಗಳಿಂದ ಪ್ರಸಿದ್ಧಿ.
  • ಪ್ರಸಿದ್ಧ ಸಾಹಿತಿ: ಕಾಳಿದಾಸ(ಮೇಘದೂತ, ರಘುವಂಶ, ಅಭಿಜ್ಞಾನ ಶಾಕುಂತಲ).
  • ಪ್ರಸಿದ್ಧ ವಿಜ್ಞಾನಿಗಳು: ಧನ್ವಂತರಿ, ಚರಕ, ಆರ್ಯಭಟ.

19

SHRINIVAS H.K

20 of 60

ಭಾರತದ ಪ್ರಾಚೀನ ಕಾಲದ ಸಾಮ್ರಾಜ್ಯಗಳು

  • 4) ವರ್ಧನರು (ಸಾ.ಶಾ.6ನೇ ಶತಮಾನದಿಂದ ಸಾ.ಶಾ.8ನೇ ಶತಮಾನ) ಉತ್ತರ ಬಾರತದಲ್ಲಿ ಆಳ್ವಿಕೆ.
  • ರಾಜಧಾನಿ: ಠಾಣೇಶ್ವರ, ಕನೂಜ್.
  • ಸ್ಥಾಪಕ: ಪುಶ್ಯಭೂತಿ.
  • ಪ್ರಸಿದ್ಧ ಅರಸ : ಹರ್ಷವರ್ಧನ: ಸಾಮ್ರಾಜ್ಯ ಬಹಳಷ್ಟು ವಿಸ್ತರಿಸಿ ಉತ್ತರಾಪಥೇಶ್ವರ ಬಿರುದು. 2ನೇ ಪುಲಿಕೇಶಿಯೊಡನೆ ನರ್ಮದಾ ನದಿ ಕದನ, ನಳಂದಾ ವಿಶ್ವ ವಿದ್ಯಾಲಯದ ಅಭಿವೃದ್ಧಿ.

20

SHRINIVAS H.K

21 of 60

ಭಾರತದ ಪ್ರಾಚೀನ ಕಾಲದ ಸಾಮ್ರಾಜ್ಯಗಳು

  • 5) ಶಾತವಾಹನರು: (ಸಾ.ಶಾ.ಪೂ230 ರಿಂದ ಸಾ.ಶಾ.220) ಗೋದಾವರಿಯಿಂದ ಕೃಷ್ಣಾ ನದಿ ಮಧ್ಯೆ ಆಳ್ವಿಕೆ.
  • ರಾಜಧಾನಿ: ಪೈಠಾಣ(ಪ್ರತಿಷ್ಟಾನ),
  • ಲಾಂಛನ: ಕುದುರೆ
  • ಸ್ಥಾಪಕ: ಸಿಮುಖ
  • ಪ್ರಸಿದ್ಧ ಅರಸ: ಗೌತಮಿ ಪುತ್ರ ಶಾತಕರಣಿ(ಸಾ.ಶಾ.106 ರಿಂದ 131): ಅನೇಕ ಪ್ರದೇಶಗಳನ್ನು ಗೆದ್ದ, ಬಿರುದುಗಳು: ತ್ರೈಸಮುದ್ರತೋಯಾ ಪಿತಾವಾಹನ, ಶಾತವಾಹನ ಕುಲ ಯಶ: ಪ್ರತಿಷ್ಟಾಪನಕರ.

21

SHRINIVAS H.K

22 of 60

ಭಾರತದ ಪ್ರಾಚೀನ ಕಾಲದ ಸಾಮ್ರಾಜ್ಯಗಳು

  • 6) ಕದಂಬರು (ಸಾ.ಶಾ.325 ರಿಂದ ಸಾ.ಶಾ.540) ಉತ್ತರ ಕರ್ನಾಟಕ ಭಾಗದಲ್ಲಿ ಆಳ್ವಿಕೆ. ರಾಜಧಾನಿ: ಬನವಾಸಿ ಲಾಂಛನ: ಸಿಂಹ
  • ಸ್ಥಾಪಕ ಮತ್ತು ಪ್ರಸಿದ್ಧ ಅರಸ: ಮಯೂರ ವರ್ಮ (ಸಾ.ಶಾ.345 ರಿಂದ 540): ಪಲ್ಲವರಿಂದ ಅಪಮಾನಿತಗೊಂಡು ದೊಡ್ಡ ಸಾಮ್ರಾಜ್ಯ ಕಟ್ಟಿದ, ಕನ್ನಡಿಗರ ಸ್ವಾಭಿಮಾನದ ಸಂಕೇತ.
  • ಕನ್ನಡದ ಮೊದಲ ಶಾಸನ ಹಲ್ಮಿಡಿ ಶಾಸನ ಈ ಕಾಲದಲ್ಲಿ ರಚನೆ,
  • ಬನವಾಸಿಯಲ್ಲಿ ಮದುಕೇಶ್ವರ ದೇವಾಲಯ ಮತ್ತು ಬಸದಿಗಳ ನಿರ್ಮಾಣ.

22

SHRINIVAS H.K

23 of 60

ಭಾರತದ ಪ್ರಾಚೀನ ಕಾಲದ ಸಾಮ್ರಾಜ್ಯಗಳು

  • 7)ಗಂಗರು (ಸಾ.ಶಾ.350 ರಿಂದ ಸಾ.ಶಾ.1004): ದಕ್ಷಿಣ ಕರ್ನಾಟಕದಲ್ಲಿ ಆಳ್ವಿಕೆ,
  • ರಾಜಧಾನಿ: ತಲಕಾಡು
  • ಲಾಂಛನ: ಗಜ
  • ಸ್ಥಾಪಕ: ದಡಿಗ ಮತ್ತು ಮಾಧವ.
  • ಪ್ರಸಿದ್ಧ ಅರಸ: ದುರ್ವಿನೀತ (ಸಾ.ಶಾ.495 ರಿಂದ 535) ಅನೇಕ ಪ್ರದೇಶಗಳನ್ನು ಗೆದ್ದ, ನೀರಾವರಿಗೆ ಪ್ರೋತ್ಸಾಹ, ಸ್ವತಃ ಸಾಹಿತಿ.
  • ಪ್ರಸಿದ್ಧ ಮಂತ್ರಿ: ಚಾವುಂಡರಾಯ ಶ್ರವಣ ಬೆಳಗೋಳದಲ್ಲಿ ಗೊಮ್ಮಟೇಶ್ವರ ವಿಗ್ರಹ ನಿರ್ಮಾಣ.
  • ಸಾಹಿತ್ಯ: ಶ್ರೀಪುರುಷ (ಗಜಶಾಸ್ತ್ರ), 2ನೇ ಶಿವಮಾರ(ಗಜಾಷ್ಟಕ), ಹೇಮಸೇನ(ರಾಘವ ಪಾಂಡವೀಯ), ನೇಮಿಚಂದ್ರ(ದ್ರವ್ಯಸಾರ ಸಂಗ್ರಹ)
  • ಕಲೆ: ಗೊಮ್ಮಟೇಶ್ವರ ವಿಗ್ರಹ, ಬಸದಿ, ದೇವಾಲಯಗಳು.

23

SHRINIVAS H.K

24 of 60

ಭಾರತದ ಪ್ರಾಚೀನ ಕಾಲದ ಸಾಮ್ರಾಜ್ಯಗಳು

  • 8) ಬಾದಾಮಿಯ ಚಾಳುಕ್ಯರು (ಸಾ.ಶಾ.540 ರಿಂದ 753) ನರ್ಮದೆಯಿಂದ ಕಾವೇರಿ ವರೆಗೆ ಆಳ್ವಿಕೆ. ರಾಜಧಾನಿ: ಬಾದಾಮಿ(ವಾತಾಪಿ) ಲಾಂಛನ: ವರಾಹ ಸ್ಥಾಪಕ: ರಾಜಾ ಜಯಸಿಂಹ.
  • ಪ್ರಸಿದ್ಧ ಅರಸ : ಇಮ್ಮಡಿ ಪುಲಿಕೇಶಿ (ಸಾ.ಶಾ.610 ರಿಂದ 642): ಇಡೀ ದಕ್ಷಿಣ ಭಾರತ ಗೆದ್ದು ದಕ್ಷಿಣಾಪಥೇಶ್ವರ ಬಿರುದು ಪಡೆದ, ನರ್ಮದಾ ನದಿ ಕದನದಲ್ಲಿ ಹರ್ಷವರ್ಧನನನ್ನು ಸೋಲಿಸಿದ.
  • ಕಲೆ ಮತ್ತು ವಾಸ್ತುಶಿಲ್ಪ: ಬದಾಮಿಯಲ್ಲಿ 4 ಗುಹಾ ದೇವಾಲಯಗಳು, ಐಹೊಳೆಯಲ್ಲಿ ದುರ್ಗಾ ದೇವಾಲಯ ಮತ್ತು ಮೆಗೂತಿ ದೇವಾಲಯ, ಪಟ್ಟದಕಲ್ಲಿನಲ್ಲಿ ವಿರುಪಾಕ್ಷ(ಲೋಕೇಶ್ವರ) ಮತ್ತು ಮಲ್ಲಿಕಾರ್ಜುನ(ತ್ರೈಲೋಕೇಶ್ವರ) ದೇವಾಲಯ.

24

SHRINIVAS H.K

25 of 60

ಭಾರತದ ಪ್ರಾಚೀನ ಕಾಲದ ಸಾಮ್ರಾಜ್ಯಗಳು

  • 9) ಕಂಚಿಯ ಪಲ್ಲವರು (ಸಾ.ಶಾ.350 ರಿಂದ 895): ತಮಿಳುನಾಡಿನಲ್ಲಿ ಆಳ್ವಿಕೆ ರಾಜಧಾನಿ: ಕಂಚಿ ಸ್ಥಾಪಕ: ಶಿವಸ್ಕಂದ ವರ್ಮ
  • ಪ್ರಸಿದ್ಧ ಅರಸ : ಒಂದನೇ ನರಸಿಂಹ ವರ್ಮ (ಸಾ.ಶಾ.630-668) : ಇಮ್ಮಡಿ ಪುಲಿಕೇಶಿಯನ್ನು ಸೋಲಿಸಿ ‘ವಾತಾಪಿಕೊಂಡ’, ‘ಮಹಾಮಲ್ಲ’ ಎಂಬ ಬಿರುದು, ಸಿಂಹಳಕ್ಕೆ ನೌಕಾ ದಂಡಯಾತ್ರೆ.
  • ಕಲೆ: ಮಹಾಬಲಿಪುರಂನಲ್ಲಿ ಏಕಶಿಲಾ ವಿಗ್ರಹಗಳು, ಕಂಚಿಯಲ್ಲಿ ಅನೇಕ ದೇವಾಲಯಗಳು.
  • ಸಾಹಿತ್ಯ: ಒಂದನೇ ಮಹೇಂದ್ರವರ್ಮ(ಮತ್ತವಿಲಾಸಪ್ರಹಸನ), ಭಾರವಿ(ಕಿರಾತಾರ್ಜುನೀಯ), ದಂಡಿ(ದಶಕುಮಾರಚರಿತ).

25

SHRINIVAS H.K

26 of 60

ಭಾರತದ ಪ್ರಾಚೀನ ಕಾಲದ ಸಾಮ್ರಾಜ್ಯಗಳು

  • 10) ಮಾನ್ಯಖೇಟದ ರಾಷ್ಟ್ರಕೂಟರು (ಸಾ.ಶಾ.753-973): ನರ್ಮದೆಯಿಂದ ಕಾವೇರಿವರೆಗೆ ಆಳ್ವಿಕೆ.
  • ರಾಜಧಾನಿ: ಮಾನ್ಯಖೇಟ(ಮಳಖೇಡ) ಲಾಂಛನ: ಗರುಡ.
  • ಸ್ಥಾಪಕ: ದಂತಿದುರ್ಗ.
  • ಪ್ರಸಿದ್ಧ ಅರಸ: ಅಮೋಘವರ್ಷ ನೃಪತುಂಗ(ಸಾ.ಶಾ.814 ರಿಂದ 878): ಅನೇಕ ಯುದ್ಧಗಳಿಂದ ಸಾಮ್ರಾಜ್ಯ ವಿಸ್ತಾರ, ಪ್ರಜಾಹಿತ ಕಾರ್ಯ, ಸ್ವತಃ ಸಾಹಿತಿ(ಪ್ರಶ್ನೋತ್ತರ ಮಾಲಾ)
  • ಸಾಹಿತ್ಯ: ಶ್ರೀವಿಜಯ(ಕವಿರಾಜಮಾರ್ಗ), ಪಂಪ(ಆದಿಪುರಾಣ, ವಿಕ್ರಮಾರ್ಜುನ ವಿಜಯ), ಪೊನ್ನ(ಶಾಂತಿಪುರಾಣ).
  • ಕಲೆ: ಎಲ್ಲೋರಾದ ಪ್ರಸಿದ್ಧ ಕೈಲಾಸನಾಥ ದೇವಾಲಯ(ಒಂದನೇ ಕೃಷ್ಣ), ಎಲಿಫೆಂಟಾದ ಗುಹೆಗಳಲ್ಲಿ ಸುಂದರ ಮೂರ್ತಿಶಿಲ್ಪಗಳು.

26

SHRINIVAS H.K

27 of 60

ಭಾರತದ ಪ್ರಾಚೀನ ಕಾಲದ ಸಾಮ್ರಾಜ್ಯಗಳು

  • 11) ಕಲ್ಯಾಣದ ಚಾಳುಕ್ಯರು (ಸಾ.ಶಾ.973 ರಿಂದ 1189) ಉತ್ತರ ಕರ್ನಾಟಕದಲ್ಲಿ ಆಳ್ವಿಕೆ.
  • ರಾಜಧಾನಿ: ಕಲ್ಯಾಣ(ಈಗಿನ ಬಸವಕಲ್ಯಾಣ) ಸ್ಥಾಪಕ: 2ನೇ ತೈಲಪ
  • ಪ್ರಸಿದ್ಧ ಅರಸ: 6ನೇ ವಿಕ್ರಮಾದಿತ್ಯ(ಸಾ.ಶಾ.1076 ರಿಂದ 1127): ಅನೇಕ ಯುದ್ದಗಳಿಂದ ಸಾಮ್ರಾಜ್ಯ ವಿಸ್ತಾರ. ಸಾಹಿತ್ಯ ಕಲೆಗೆ ಅಪಾರ ಪ್ರೋತ್ಸಾಹ.
  • ಸಾಹಿತ್ಯ: ರನ್ನ(ಗದಾಯುದ್ಧ), ಬಿಲ್ಹಣ(ವಿಕ್ರಮಾಂಕದೇವ ಚರಿತ), ವಿಜ್ಞಾನೆಶ್ವರ(ಮಿತಾಕ್ಷರ).
  • ನಡುವೆ ಕೆಲಕಾಲ ಕಲ್ಯಾಣದಿಂದ ಕಲಚೂರಿಗಳ ಆಡಳಿತ: ಅವರ ಆಸ್ಥಾನದಲ್ಲಿ ಪ್ರಸಿದ‍್ದ ಸಮಾಜ ಸುಧಾರಕ ಬಸವೇಶ್ವರರು.
  • ಕಲೆ: ಲಕ್ಕುಂಡಿಯ ಕಾಶಿವಿಶ್ವೇಶ್ವರ ದೇವಾಲಯ, ಇಟಗಿಯ ಮಹಾದೇವ ದೇವಾಲಯ. 

27

SHRINIVAS H.K

28 of 60

ಭಾರತದ ಪ್ರಾಚೀನ ಕಾಲದ ಸಾಮ್ರಾಜ್ಯಗಳು

  • 12) ಚೋಳರು(ಸಾ.ಶಾ.850 ರಿಂದ 1279): ತಮಿಳುನಾಡು, ಆಂಧ್ರ, ಕರ್ನಾಟಕ ಭಾಗದಲ್ಲಿ ಆಳ್ವಿಕೆ. ರಾಜಧಾನಿ: ತಂಜಾವೂರು. ಲಾಂಛನ: ವ್ಯಾಘ್ರ. ಸ್ಥಾಪಕ: ಕರಿಕಾಲ ಚೋಳ.
  • ಪ್ರಸಿದ್ಧ ಅರಸರು: ಒಂದನೇ ರಾಜರಾಜ ಚೋಳ(ಸಾ.ಶಾ.985 ರಿಂದ 1014): ಅನೇಕ ಯುದ್ಧ, ಕಲೆಗೆ ಪ್ರೋತ್ಸಾಹ. ಒಂದನೇ ರಾಜೇಂದ್ರ ಚೋಳ(ಸಾ.ಶಾ.1014 ರಿಂದ 1044): ಸಿಂಹಳ ಪೂರ್ಣ ವಶ, ಉತ್ತರಭಾರತದಲ್ಲಿ ಗಂಗಾನದಿವರೆಗೆ ದಂಡಯಾತ್ರೆ.
  • ಕಲೆ: ಬೃಹದೀಶ್ವರ ದೇವಾಲಯ(ತಂಜಾವೂರು), ಚೋಳೇಶ್ವರ ದೇವಾಲಯ (ಗಂಗೈಕೊಂಡಚೋಳಪುರಂ).

28

SHRINIVAS H.K

29 of 60

ಭಾರತದ ಪ್ರಾಚೀನ ಕಾಲದ ಸಾಮ್ರಾಜ್ಯಗಳು

  • 13) ಹೊಯ್ಸಳರು(ಸಾ.ಶಾ.984 ರಿಂದ 1346): ದಕ್ಷಿಣ ಕರ್ನಾಟಕ ಭಾಗದಲ್ಲಿ ಆಳ್ವಿಕೆ.
  • ರಾಜಧಾನಿ: ದ್ವಾರಸಮುದ್ರ(ಹಳೆಬೀಡು).
  • ಲಾಂಛನ: ಹುಲಿಯೊಡನೆ ಕಾದಾಡುವ ಸಳ.
  • ಸ್ಥಾಪಕ: ಸಳ
  • ಪ್ರಸಿದ್ಧ ಅರಸ: ವಿಷ್ಣುವರ್ಧನ (ಸಾ.ಶಾ1108 ರಿಂದ1141): ಅನೇಕ ಯುದ್ಧಗಳಿಂದ ಸಾಮ್ರಾಜ್ಯ ವಿಸ್ತಾರ. ಸಾಹಿತ್ಯ, ಕಲೆಗೆ ಪ್ರೋತ್ಸಾಹ.
  • ಸಾಹಿತ್ಯ: ಜನ್ನ(ಯಶೋಧರ ಚರಿತ), ಹರಿಹರ(ಗಿರಿಜಾ ಕಲ್ಯಾಣ), ರಾಘವಾಂಕ(ಹರಿಶ್ಚಂದ್ರ ಕಾವ್ಯ), ಕೇಶಿರಾಜ(ಶಬ್ದಮಣಿ ದರ್ಪಣ).
  • ಕಲೆ: ಚನ್ನಕೇಶವ ದೇವಾಲಯ(ಬೇಲೂರು), ಹೊಯ್ಸಳೇಶ್ವರ ದೇವಾಲಯ(ಹಳೆಬೀಡು), ಕೇಶವ ದೇವಾಲಯ(ಸೋಮನಾಥಪುರ), ಕೀರ್ತಿನಾರಾಯಣ ದೇವಾಲಯ(ತಲಕಾಡು).

29

SHRINIVAS H.K

30 of 60

ಭಾರತದ ಪ್ರಾಚೀನ ಕಾಲದ ಕಲೆ ವಾಸ್ತುಶಿಲ್ಪ

30

ನಲಂದಾ ವಿಶ್ವ ವಿದ್ಯಾಲಯ (ವರ್ಧನರು)

ಕಾರ್ಲೆಯ ಚೈತ್ಯಾಲಯ

ಕಾರ್ಲೆಯ ಚೈತ್ಯಾಲಯ

(ಶಾತವಾನರು)

ಗ್ವಾಲಿಯರ್ ನ ದೇವಾಲಯ (ಗುಪ್ತರು)

ಗಾಂಧಾರಾ ಶೈಲಿ ಬುದ್ಧನ ವಿಗ್ರಹ

(ಕುಶಾಣರು)

SHRINIVAS H.K

31 of 60

ಭಾರತದ ಪ್ರಾಚೀನ ಕಾಲದ ಕಲೆ ವಾಸ್ತುಶಿಲ್ಪ

31

ಮದುಕೇಶ್ವರ ದೇವಾಲಯ-ಬನವಾಸಿ(ಕದಂಬರು)

ಮರುಳೇಶ್ವರ ದೇವಾಲಯ –

ತಲಕಾಡು

(ಗಂಗರು)

ಗೊಮ್ಮಟೇಶ್ವರ ವಿಗ್ರಹ ಶ್ರವಣಬೆಳಗೋಳ(ಗಂಗರು)

SHRINIVAS H.K

32 of 60

ಭಾರತದ ಪ್ರಾಚೀನ ಕಾಲದ ಕಲೆ ವಾಸ್ತುಶಿಲ್ಪ

32

ಲೋಕೇಶ್ವರ ಮತ್ತು ತ್ರೈಲೋಕೇಶ್ವರ ದೇವಾಲಯಗಳು- ಪಟ್ಟದಕಲ್ಲು (ಬಾದಾಮಿ ಚಾಳುಕ್ಯರು)

ದುರ್ಗಾ ದೇವಾಲಯ ಐಹೊಳೆ

(ಬಾದಾಮಿ ಚಾಳುಕ್ಯರು)

ಗುಹಾಲಯಗಳು-ಬಾದಾಮಿ

ಏಕಶಿಲಾ ಪಂಚರಥಗಳು-ಮಹಾಬಲಿಪುರಂ (ಪಲ್ಲವರು)

SHRINIVAS H.K

33 of 60

ಭಾರತದ ಪ್ರಾಚೀನ ಕಾಲದ ಕಲೆ ವಾಸ್ತುಶಿಲ್ಪ

33

ಕೈಲಾಸನಾಥ ದೇವಾಲಯ-ಕಂಚಿ (ಪಲ್ಲವರು)

ಏಕಶಿಲಾ ಕೈಲಾಸನಾಥ ದೇವಾಲಯ-ಎಲ್ಲೋರಾ (ರಾಷ್ಟ್ರಕೂಟರು)

ಅಜಂತಾ ಗುಹಾಲಯಗಳು (ರಾಷ್ಟ್ರಕೂಟರು)

ಮಹಾದೇವ ದೇವಾಲಯ�ಇಟಗಿ(ಕಲ್ಯಾಣದ ಚಾಲುಕ್ಯರು

SHRINIVAS H.K

34 of 60

ಭಾರತದ ಪ್ರಾಚೀನ ಕಾಲದ ಕಲೆ ವಾಸ್ತುಶಿಲ್ಪ

34

ಬೃಹದೀಶ್ವರ ದೇವಾಲಯ-ತಂಜಾವೂರು

(ಚೋಳರು)

ಚೋಳೇಶ್ವರ ದೇವಾಲಯ ಗಂಗೈಕೊಂಡಚೋಳಪುರಂ(ಚೋಳರು)

ಹೊಯ್ಸಳೇಶ್ವರ ದೇವಾಲಯ-ಹಳೆಬೀಡು(ಹೊಯ್ಸಳರು)

ಚನ್ನಕೇಶವ ದೇವಾಲಯ-ಬೇಲೂರು(ಹೊಯ್ಸಳರು)

SHRINIVAS H.K

35 of 60

ಭೂಗೋಳ ವಿಜ್ಞಾನ

ಭೂಮಿ – ನಮ್ಮ ಜೀವಂತ ಗ್ರಹ

  • ಭೂಮಿ ಸೌರವ್ಯೂಹದಲ್ಲಿರುವ 8 ಗ್ರಹಗಳಲ್ಲಿ ಒಂದಾಗಿದೆ.
  • ಇದೊಂದು ವಿಶಿಷ್ಟ ಗ್ರಹ ಕಾರಣ ಜೀವಿಗಳನ್ನು ಹೊಂದಿದೆ , ಅಧಿಕ ನೀರನ್ನು ಹೊಂದಿರುವುದರಿಂದ ‘ನೀಲಿಗ್ರಹ’ ಎಂದೂ ಕರೆಯುವುವರು.
  • ಸೂರ್ಯನಿಂದ ಮೂರನೇ ಸ್ಥಾನದಲ್ಲಿದೆ, ಸೌರವ್ಯೂಹದಲ್ಲಿ 5 ನೇ ದೊಡ್ಡ ಗ್ರಹ.
  • 71% ನೀರಿನಿಂದ ಕೂಡಿದೆ, 29% ಭೂ ಭಾಗ ಹೊಂದಿದೆ.
  • ಭೂಮಿಯ ಆಕಾರ: ಗೋಳಾಕಾರ ಅಥವಾ ಭೂಮ್ಯಾಕಾರ(ಧೃವಗಳಲ್ಲಿ ಚಪ್ಪಟೆಯಾಗಿದ್ದು ಸಮಭಾಜಕ ವೃತ್ತದಲ್ಲಿ ಉಬ್ಬಿದೆ)

35

SHRINIVAS H.K

36 of 60

ಭೂಗೋಳ ವಿಜ್ಞಾನ

  • ಭೂಮಿ – ನಮ್ಮ ಜೀವಂತ ಗ್ರಹ
  • 7 ಖಂಡಗಳು: ಏಷ್ಯಾ, ಆಫ್ರಿಕಾ, ಉತ್ತರ ಅಮೇರಿಕಾ, ದಕ್ಷಿಣ ಅಮೇರಿಕಾ, ಅಂಟಾರ್ಟಿಕಾ, ಯುರೋಪ್, ಆಸ್ಟ್ರೇಲಿಯಾ.
  • 4 ಮಹಾ ಸಾಗರಗಳು:
  • ಫೆಸಿಫಿಕ್,
  • ಅಂಟ್ಲಾಂಟಿಕ್,
  • ಹಿಂದೂ ಮಹಾಸಾಗರ,
  • ಆರ್ಕ್ಟಟಿಕ್.

36

SHRINIVAS H.K

37 of 60

ಭೂಗೋಳ ವಿಜ್ಞಾನ

  • ಅಕ್ಷಾಂಶ: ಭೂ ಗೋಳದ ಮೇಲೆ ಅಥವಾ ನಕ್ಷೆಯ ಮೇಲೆ ಪೂರ್ವ ಪಶ್ಚಿಮವಾಗಿ(ಅಡ್ಡಲಾಗಿ) ಎಳೆದಿರುವ ಕಾಲ್ಪನಿಕ ರೇಖೆಗಳು (ಸಮಭಾಜಕ ವೃತ್ತವನ್ನು ಸೇರಿ 181 ಅಕ್ಷಾಂಶಗಳಿವೆ)
  • ರೇಖಾಂಶ: ಭೂ ಗೋಳದ ಮೇಲೆ ಅಥವಾ ನಕ್ಷೆಯ ಮೇಲೆ ಉತ್ತರ ದಕ್ಷಿಣವಾಗಿ(ಉದ್ದವಾಗಿ) ಎಳದಿರುವ ಕಾಲ್ಪನಿಕ ರೇಖೆಗಳು (ಒಟ್ಟು 360 ರೇಖಾಂಶಗಳಿವೆ) ಇವು ವೇಳೆಗಳ ವ್ಯತ್ಯಾಸ ಗುರುತಿಸಲು ಸಹಾಯಕ. ಈ ರೇಖೆಯ ನೇರಕ್ಕೆ ಸೂರ್ಯನ ಕಿರಣಗಳು ಬಂದಾಗ ಮಧ್ಯಾಹ್ನ 12ಗಂಟೆ.
  • ಭಾರತದ ಪ್ರಮಾಣಿತ ವೇಳೆ(ಆದರ್ಶ ವೇಳೆ) ನಿರ್ಧರಿಸುವ ರೇಖಾಂಶ: 821/2 ಪೂ. ರೇಖಾಂಶ.
  • 1800 ರೇಖಾಂಶವು ಅಂತರಾಷ್ಟ್ರೀಯ ದಿನ ರೇಖೆಯಾಗಿದೆ.

37

SHRINIVAS H.K

38 of 60

ಭೂಗೋಳ ವಿಜ್ಞಾನ

ಭೂವಿಯ 4 ವಲಯಗಳು

  • 1) ಶಿಲಾಗೋಳ: “ಭೂಮಿಯ ಅತ್ಯಂತ ಮೇಲ್ಭಾಗದಲ್ಲಿರುವ ಘನ ಪದರವನ್ನು ಶಿಲಾಗೋಳ ಎನ್ನುವರು”
  • ಇದು ವಿವಿಧ ಶಿಲೆಗಳು, ಖನಿಜ ಮತ್ತು ಮಣ್ಣುಗಳಿಂದ ಕೂಡಿದೆ.
  • ಭೂಮಿಯ ಅಂತರಾಳದ 3 ಪದರಗಳು 1)ಭೂಚಿಪ್ಪು 2)ಮ್ಯಾಂಟಲ್ 3)ಕೇಂದ್ರಗೋಳ.
  • 3 ಬಗೆಯ ಶಿಲೆಗಳು: 1)ಅಗ್ನಿ ಶಿಲೆ 2)ಕಣ ಶಿಲೆ 3)ರೂಪಾಂತರ ಶಿಲೆ.

38

SHRINIVAS H.K

39 of 60

ಭೂಗೋಳ ವಿಜ್ಞಾನ

ಭೂವಿಯ 4 ವಲಯಗಳು

  • 1) ಶಿಲಾಗೋಳ: ಭೂ ಚಿಪ್ಪಿನ 2 ಶಕ್ತಿಗಳು (ಇವು ಭೂ ಮೇಲ್ಮೈ ಸ್ವರೂಪವನ್ನು ಬದಲಿಸುತ್ತವೆ)
  • 1)ಆಂತರ್ಜನಿತ ಶಕ್ತಿಗಳು: ಭೂಕಂಪ, ಜ್ವಾಲಾಮುಖಿ, ಸುನಾಮಿ.
  • 2)ಬಹಿರ್ಜನಿತ ಶಕ್ತಿಗಳು: ಶಿಥಿಲೀಕರಣ(ಶಿಲೆಗಳು ಒಡೆದು ಚೂರಾಗುವುದು), ನಗ್ನೀಕರಣ(ಶಿಲೆಗಳ ಸವೆತ, ಸಾಗಾಣಿಕೆ, ಸಂಚಯನ)

39

SHRINIVAS H.K

40 of 60

ಭೂಗೋಳ ವಿಜ್ಞಾನ

  • 2) ವಾಯುಗೋಳ “ಭೂಮಿಯನ್ನು ಸುತ್ತುವರೆದಿರುವ ಅನಿಲ, ಧೂಳಿನ ಕಣಗಳು, ನೀರಾವಿಯ ತೆಳುವಾದ ಪದರವನ್ನು ವಾಯುಗೋಳ ಎನ್ನುವರು”
  • ವಾಯುಗೋಳ 5 ಪದರುಗಳಿಂದ ಕೂಡಿದೆ: 1)ಪರಿವರ್ತನ ಮಂಡಲ 2)ಸಮೋಷ್ಣ ಮಂಡಲ(ಇಲ್ಲಿ ಓಜೋನ್ ಅನಿಲವಿದೆ) 3)ಮಧ್ಯಂತರ ಮಂಡಲ 4)ಉಷ್ಣತಾ ಮಂಡಲ 5)ಬಾಹ್ಯ ಮಂಡಲ.
  • ವಾಯುಗೋಳದಲ್ಲಿರುವ ಹವಾಗುಣದ ಘಟಕಾಂಶಗಳು: ಉಷ್ಣಾಂಶ, ಒತ್ತಡ, ಮಾರುತಗಳು, ತೇವಾಂಶ, ಮೋಡ, ಮಳೆ.

40

SHRINIVAS H.K

41 of 60

ಭೂಗೋಳ ವಿಜ್ಞಾನ

  • 2) ವಾಯುಗೋಳ.
  • ಉಷ್ಣಾಂಶ: ಭೂಮಿಯ ಉಷ್ಣಾಂಶಕ್ಕೆ ಸೂರ್ಯನೇ ಮೂಲ, 3 ಉಷ್ಣಾಂಶ ವಲಯಗಳಿವೆ:1)ಉಷ್ಣವಲಯ 2)ಸಮೋಷ್ಣ ವಲಯ 3)ಶೀತವಲಯ
  • ಒತ್ತಡ: ವಾಯು ತೂಕ ಹೊಂದಿದ್ದು ಇದನ್ನು ‘ಒತ್ತಡ’ ಎನ್ನುವರು. ಉಷ್ಣಾಂಶ ಕಡಿಮೆ ಇದ್ದಲ್ಲಿ ಒತ್ತಡ ಹೆಚ್ಚು.
  • ಮಾರುತ: ಭೂ ಮೇಲ್ಮೈಗೆ ಸಮಾಂತರವಾಗಿ ಬೀಸುವ ವಾಯುವಿಗೆ ‘ಮಾರುತ’ ಎನ್ನುವರು. 4 ವಿಧ: 1)ನಿರಂತರ ಮಾರುತಗಳು 2)ಋತುಕಾಲಿಕ ಮಾರುತಗಳು 3)ಸ್ಥಳೀಯ ಮಾರುತಗಳು 4)ಆವರ್ತ ಮತ್ತು ಪ್ರತ್ಯಾವರ್ತ ಮಾರುತಗಳು.

41

SHRINIVAS H.K

42 of 60

ಭೂಗೋಳ ವಿಜ್ಞಾನ

  • 3) ಜಲಗೋಳ “ನೀರಿನಿಂದಾವೃತವಾದ ಭೂಮೇಲ್ಮೈನ ಭಾಗವನ್ನು ಜಲಗೋಳ ಎನ್ನುವರು”
  • ಸಾಗರ: ಆಳವಾದ ಮತ್ತು ವಿಸ್ತಾರವಾದ ಲವಣೀಯ ಜಲರಾಶಿ.
  • ಸಮುದ್ರ: ಸಾಗರಕ್ಕಿಂತ ಚಿಕ್ಕದಾದ ಸಾಗರದ ಭಾಗಗಳು.
  • ಖಾರಿ: ಭೂಭಾಗದೊಳಗೆ ಕಿರಿದಾಗಿ ಮತ್ತು ನೀಳವಾಗಿ ಚಾಚಿಕೊಂಡಿರುವ ಸಾಗರ ಅಥವಾ ಸಮುದ್ರದ ಭಾಗ.
  • ಕೊಲ್ಲಿ: ಪ್ರಾಯಶ: ಭೂಭಾಗದಿಂದ ಸುತ್ತುವರೆದಿರುವ ಅರ್ಧವೃತ್ತಾಕಾರದ ಸಮುದ್ರ ಭಾಗ.
  • ನದಿಗಳು ವಿವಿಧ ಲವಣಗಳನ್ನು ತಂದು ಸಾಗರಕ್ಕೆ ಬಿಡುವುದರಿಂದ ಸಾಗರದ ನೀರು ಉಪ್ಪಾಗಿದೆ, ಅದನ್ನೇ ಸಾಗರದ ಲವಣತೆ ಎನ್ನುವರು.
  • 2 ರೀತಿಯ ಸಾಗರ ಪ್ರವಾಹಗಳಿವೆ 1)ಉಷ್ಣ ಸಾಗರ ಪ್ರವಾಹ 2)ಶೀತ ಸಾಗರ ಪ್ರವಾಹ.

42

SHRINIVAS H.K

43 of 60

ಭೂಗೋಳ ವಿಜ್ಞಾನ

  • 4) ಜೀವಗೋಳ “ಭೂಮಿ ವಿವಿಧ ಬಗೆಯ ಜೀವಿಗಳನ್ನು ಹೊಂದಿದೆ ಇದನ್ನೇ ಜೀವಗೋಳ ಎನ್ನುವರು”
  • ಪರಿಸರ: “ಎಲ್ಲಾ ಜೀವಿಗಳ ಸುತ್ತಲಿನ ಸನ್ನಿವೇಶವನ್ನು ಪರಿಸರ ಎನ್ನುವರು”
  • 2 ವಿಧ 1)ಭೌತಿಕ 2) ಸಾಂಸ್ಕೃತಿಕ
  • 2 ವಿಧ 1)ಜೈವಿಕ 2)ಅಜೈವಿಕ.

43

SHRINIVAS H.K

44 of 60

ಭೂಗೋಳ ವಿಜ್ಞಾನ

  • 4) ಜೀವಗೋಳ
  • “ಪರಿಸರ ಮಾಲಿನ್ಯ: ಮಾನವ ಚಟುವಟಿಕೆಗಳಿಂದ ಪರಿಸರದಲ್ಲಾಗುವ ಅನಪೇಕ್ಷಣೀಯ ಬದಲಾವಣೆಗಳನ್ನು ಪರಿಸರ ಮಾಲಿನ್ಯ ಎನ್ನುವರು.
  • 4 ವಿಧ: 1)ವಾಯುಮಾಲಿನ್ಯ, 2)ಜಲಮಾಲಿನ್ಯ, 3)ಶಬ್ದ ಮಾಲಿನ್ಯ, 4)ಮಣ್ಣಿನ ಮಾಲಿನ್ಯ.
  • ಜಾಗತಿಕ ತಾಪಮಾನ: ಭೂಮಿಯ ಉಷ್ಣಾಂಶ ಹೆಚ್ಚಾಗುವುದು.
  • ಹಸಿರು ಮನೆ ಪರಿಣಾಮ: ಪರಿಸರದಲ್ಲಿ ಹಸಿರು ಅನಿಲಗಳ ಬಿಡುಗಡೆ ಹೆಚ್ಚಾಗಿ, ಅವುಗಳು ಉಷ್ಣಾಂಶ ಹೀರಿ ಹೆಚ್ಚಿಸುತ್ತವೆ, ಇದನ್ನೇ ಹಸಿರುಮನೆ ಪರಿಣಾಮ ಎನ್ನುವರು.

44

SHRINIVAS H.K

45 of 60

ರಾಜ್ಯಶಾಸ್ತ್ರ

  • “ದೇಶದ ಸರಕಾರ ಮತ್ತು ಮಾನವನ ರಾಜಕೀಯ ಚಟುವಟಿಕೆಗಳ ಅಧ್ಯಯನವೇ ರಾಜ್ಯಶಾಸ್ತ್ರ” ಅಥವಾ “ದೇಶದ ಆಡಳಿತ ಕುರಿತ ಅಧ್ಯಯನ”
  • ರಾಜ್ಯಶಾಸ್ತ್ರದ ಪಿತಾಮಹ: ಅರಿಸ್ಟಾಟಲ್.
  • ರಾಜ್ಯಶಾಸ್ತ್ರದ ಪ್ರಾಮುಖ್ಯತೆ: ದೇಶದ ಆಡಳಿತ, ಕಾನೂನು, ಸಂವಿಧಾನ, ಸರ್ಕಾರಗಳ ರಚನೆ, ಅಂಗಗಳು ಮತ್ತು ಕಾರ್ಯಗಳ ಬಗ್ಗೆ ಜ್ಞಾನ ಸಿಗುತ್ತದೆ.

45

SHRINIVAS H.K

46 of 60

ರಾಜ್ಯಶಾಸ್ತ್ರ

  • ಪೌರತ್ವ:
  • “ಒಂದು ರಾಷ್ಟ್ರದ ಸದಸ್ಯತ್ವ ಹೊಂದಿ, ತಾನು ವಾಸಿಸುವ ರಾಷ್ಟ್ರಕ್ಕೆ ನಿಷ್ಠೆಯಿಂದ ಇದ್ದು, ರಾಷ್ಟ್ರವು ನೀಡುವ ನಾಗರಿಕ ಮತ್ತು ರಾಜಕೀಯ ಹಕ್ಕುಗಳನ್ನು ಅನುಭವಿಸುವ ಯಾವುದೇ ವ್ಯಕ್ತಿಯನ್ನು ಪೌರನೆಂದು ಕರೆಯಲಾಗಿದೆ.
  • ಪೌರತ್ವದಲ್ಲಿ ಎರಡು ವಿಧಗಳಿವೆ.
  • 1) ಏಕ ಪೌರತ್ವ 2) ದ್ವಿ ಪೌರತ್ವ.
  • ಏಕ ಪೌರತ್ವ ದಲ್ಲಿ ವ್ಯಕ್ತಿಯೊಬ್ಬ ತಾನು ವಾಸಿಸುವ ದೇಶದ ಯಾವುದೇ ರಾಜ್ಯದವನಾಗಿದ್ದರೂ ರಾಷ್ಟ್ರೀಯ ಪೌರತ್ವವನ್ನು ಹೊಂದುವುದಾಗಿದೆ. ಇಂತಹ ಸಂಧರ್ಭದಲ್ಲಿ ರಾಜ್ಯಗಳ ಪೌರತ್ವ ಎಂಬುದಿರುವುದಿಲ್ಲ. ಉದಾ: ಭಾರತ
  • ದ್ವಿಪೌರತ್ವ ದಲ್ಲಿ ರಾಜ್ಯ ಹಾಗೂ ರಾಷ್ಟ್ರಗಳಿಗೆ ಪ್ರತ್ಯೇಕವಾಗಿ ಪೌರತ್ವ ಹೊಂದಿರುತ್ತಾರೆ. ಉದಾ : ಅಮೆರಿಕಾ ಮತ್ತು ಸ್ವಿಟ್ಜರ್‍ಲೆಂಡ್‍

46

SHRINIVAS H.K

47 of 60

ರಾಜ್ಯಶಾಸ್ತ್ರ

  • ಪ್ರಜಾಪ್ರಭುತ್ವ:
  • ಪ್ರಜೆಗಳಿಂದ, ಪ್ರಜೆಗಳಿಗಾಗಿ, ಪ್ರಜೆಗಳೇ ನಡೆಸುವ ಸರಕಾರ ಪದ್ಧತಿಯೇ “ಪ್ರಜಾಪ್ರಭುತ್ವ”
  • ಜನರಿಂದ ಆಯ್ಕೆಯಾದ ಪ್ರತಿನಿಧಿಗಳಿಂದ ನಡೆಯುವ ಆಳ್ವಿಕೆ.
  • ಇದಕ್ಕಾಗಿ ಚುನಾವಣೆಗಳು ನಡೆಯುತ್ತವೆ.
  • 2 ವಿಧಗಳು:

1. ಪ್ರತ್ಯಕ್ಷ ಪ್ರಜಾಪ್ರಭುತ್ವ.

2. ಪರೋಕ್ಷ ಪ್ರಜಾಪ್ರಭುತ್ವ.

47

SHRINIVAS H.K

48 of 60

ರಾಜ್ಯಶಾಸ್ತ್ರ

  • ಮಾನವ ಹಕ್ಕುಗಳು:
  • “ಮಾನವನ ಸರ್ವತೋಮುಖ ಅಭಿವೃದ್ಧಿಗೆ ಅಗತ್ಯವಾದ ಅಂಶಗಳೇ ಮಾನವ ಹಕ್ಕುಗಳು”
  • ವಿಶ್ವ ಸಂಸ್ಥೆಯಿಂದ ಮಾನವ ಹಕ್ಕುಗಳ ಘೋಷಣೆ: ಡಿಸೆಂಬರ್10, 1948
  • ಭಾರತ ಸಂವಿದಾನದಲ್ಲಿ 6 ಮೂಲಭೂತ ಹಕ್ಕುಗಳು: ಸಮಾನತೆಯ ಹಕ್ಕು, ಸ್ವಾತಂತ್ರ್ಯದ ಹಕ್ಕು, ಶೋಷಣೆಯ ವಿರುದ್ಧದ ಹಕ್ಕು, ಧಾರ್ಮಿಕ ಸ್ವಾತಂತ್ರ್ಯದ ಹಕ್ಕು, ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಹಕ್ಕು, ಸಂವಿಧಾನಾತ್ಮಕ ಪರಿಹಾರದ ಹಕ್ಕು.
  • ಮಾನವ ಹಕ್ಕುಗಳ ಸಂರಕ್ಷಣೆಗಾಗಿ ಭಾರತದಲ್ಲಿ 1993 ರಲ್ಲಿ ರಾಷ್ಟ್ರೀಯ ಮತ್ತು ರಾಜ್ಯ ಮಾನವ ಹಕ್ಕುಗಳ ಆಯೋಗಗಳ ಸ್ಥಾಪನೆ.

48

SHRINIVAS H.K

49 of 60

ರಾಜ್ಯಶಾಸ್ತ್ರ

  • ಸ್ಥಳೀಯ ಸರಕಾರಗಳು
  • ಸ್ಥಳೀಯ ಜನರಿಗೆ ಆಡಳಿತ ಜ್ಞಾನ ಮತ್ತು ಸ್ಥಳೀಯ ಸಮಸ್ಯೆಗಳ ಪರಿಹಾರಕ್ಕಾಗಿ.
  • ಕರ್ನಾಟಕ ಪಂಚಾಯತ್ ರಾಜ್ ಅಧಿನಿಯಮ 1993 ರ ಪ್ರಕಾರ ಗ್ರಾಮಾಡಳಿತಕ್ಕೆ 3 ಪಂಚಾಯಿತಿಗಳು.
  • 1) ಗ್ರಾಮ ಪಂಚಾಯಿತಿ: 5000 ದಿಂದ 7000 ಜನಸಂಖ್ಯೆ ಗ್ರಾಮಗಳಿಗೊಂದು, 400 ಜನಸಂಖ್ಯೆಗೆ ಓರ್ವ ಪ್ರತಿನಿಧಿ(ಸದಸ್ಯ), ಅಧ್ಯಕ್ಷ, ಉಪಾಧ್ಯಕ್ಷ, ಪಿ.ಡಿ.ಒ. ಮತ್ತು ಕಾರ್ಯದರ್ಶಿ.
  • 2) ತಾಲ್ಲೂಕು ಪಂಚಾಯಿತಿ: ಪ್ರತಿ ತಾಲ್ಲೂಕಿಗೆ ಒಂದು, 12500 ರಿಂದ 15000 ಜನಸಂಖ್ಯೆಗೆ ಓರ್ವ ಪ್ರತಿನಿಧಿ. ಅಧ್ಯಕ್ಷ, ಉಪಾಧ್ಯಕ್ಷ, ಇ.ಒ.
  • 3) ಜಿಲ್ಲಾ ಪಂಚಾಯಿತಿ: ಪ್ರತಿ ಜಿಲ್ಲೆಗೆ ಒಂದು 35 ರಿಂದ 45 ಸಾವಿರ ಜನಸಂಖ್ಯೆಗೆ ಓರ್ವ ಪ್ರತಿನಿಧಿ. ಅಧ್ಯಕ್ಷ, ಉಪಾಧ್ಯಕ್ಷ, ಸಿ.ಇ.ಒ.

49

SHRINIVAS H.K

50 of 60

ರಾಜ್ಯಶಾಸ್ತ್ರ

  • ಸ್ಥಳೀಯ ಸರಕಾರಗಳು
  • ನಗರ ಸ್ಥಳೀಯ ಸಂಸ್ಥೆಗಳು 3
  • 1)ಪುರಸಭೆ (20 ರಿಂದ 50 ಸಾವಿರ ಜನಸಂಖ್ಯೆ) 2)ನಗರ ಸಭೆ (50 ಸಾವಿರದಿಂದ 3 ಲಕ್ಷ ಜನಸಂಖ್ಯೆ) ಸದಸ್ಯರಿಗೆ ಕೌನ್ಸಿಲರ್ ಎನ್ನುವರು.
  • 3)ಮಹಾನಗರ ಪಾಲಿಕೆ (2ಲಕ್ಷಕ್ಕಿಂತ ಅಧಿಕ ಜನಸಂಖ್ಯೆ ಮತ್ತು 1ಕೋಟಿಗೂ ಅಧಿಕ ಆದಾಯ): ಸದಸ್ಯರಿಗೆ ಕಾರ್ಪೋರೇಟರ್ ಎನ್ನುವರು, ಅಧ‍್ಯಕ್ಷ ಉಪಾಧ್ಯಕ್ಷರಿಗೆ ಮೇಯರ್ ಉಪಮೇಯರ್ ಎನ್ನುವರು.
  • ಸ್ಥಳೀಯ ಸರಕಾರಗಳ ಕಾರ್ಯಗಳು: ಗ್ರಾಮ ನಗರದ ಆಡಳಿತ, ಆಯವ್ಯಯ, ಆರೋಗ್ಯ, ಸ್ವಚ್ಚತೆ, ರಸ್ತೆ, ವಿದ್ಯುತ್, ಶಿಕ್ಷಣ, ಪಡಿತರ ವಿತರಣೆ.

50

SHRINIVAS H.K

51 of 60

ಸಮಾಜಶಾಸ್ತ್ರ

ಸಮಾಜಶಾಸ್ತ್ರ ಪರಿಚಯ

  • “ಸಮಾಜದ ಕುರಿತ ವೈಜ್ಞಾನಿಕ ಅಧ್ಯಯನವೇ ಸಮಾಜ ಶಾಸ್ತ್ರ
  • “ಮಾನವನ ಸಂಘ ಜೀವನವೇ ಸಮಾಜ”
  • ಸಮಾಜ ಶಾಸ್ತ್ರದ ಅಧ್ಯಯನ ದಿಂದ ಸಮಾಜದ ರಚನೆ, ಬೆಳವಣಿಗೆ, ಬದಲಾವಣೆ, ಧರ್ಮ, ಸಂಸ್ಕೃತಿ, ನಿಯಮ, ಭಾಷೆ ಮೌಲ್ಯಗಳ ಬಗ್ಗೆ ತಿಳಿಯುತ್ತದೆ.
  • ಪ್ರಮುಖ ವಿದೇಶೀ ಸಮಾಜಶಾಸ್ತ್ರಜ್ಞರು: ಆಗಷ್ಟ್ ಕಾಮ್ಟೆ(ಸಮಾಜಶಾಸ್ತ್ರದ ಪಿತಾಮಹ), ಕಾರ್ಲ್ ಮಾರ್ಕ್ಸ್, ಎಮಿಲಿ ಡರ್ಕಿಮ್, ಮ್ಯಾಕ್ಸ್ ವೆಬೆರ್.
  • ಪ್ರಮುಖ ಭಾರತೀಯ ಸಮಾಜಶಾಸ್ತ್ರಜ್ಞರು: ಬಿ.ಆರ್.ಅಂಬೇಡ್ಕರ್, ಜಿ.ಎಸ್.ಘುರ್ಯೆ, ಎಮ್.ಎನ್.ಶ್ರೀನಿವಾಸ್, ಪಾರ್ವತಮ್ಮ ಸಿ., ಇರಾವತಿ ಕರ್ವೆ, ಎ.ಆರ್. ದೇಸಾಯಿ.

51

SHRINIVAS H.K

52 of 60

ಸಮಾಜಶಾಸ್ತ್ರ

ಸಂಸ್ಕೃತಿ

  • “ಸಂಸ್ಕೃತಿ ಎಂದರೆ ಒಂದು ಗುಂಪಿನ ಜನರ ಜೀವನ ಕ್ರಮ, ಅಂದರೆ ನಡವಳಿಕೆ, ನಂಬಿಕೆ, ಮೌಲ್ಯಗಳು ಮತ್ತು ಜೀವನ ಸಂಕೇತಗಳು”
  • 2 ವಿಧ 1)ಭೌತಿಕ ಸಂಸ್ಕೃತಿ(ಗೋಚರ) 2)ಅಭೌತಿಕ ಸಂಸ್ಕೃತಿ(ಅಗೋಚರ)
  • ಸಂಸ್ಕೃತಿಯ ಮಹತ್ವ: ಮೌಲ್ಯಗಳನ್ನು ತಿಳಿಸಿ ನಮ್ಮ ವರ್ತನೆ ತಿದ್ದುತ್ತದೆ, ಜ್ಞಾನ ನೀಡುತ್ತದೆ.

52

SHRINIVAS H.K

53 of 60

ಸಮಾಜಶಾಸ್ತ್ರ

  • ಸಾಮಾಜಿಕ ಸಂಸ್ಥೆಗಳು
  • “ಸಾಮಾಜಿಕ ಅಗತ್ಯಗಳಿಗಾಗಿ ಸ್ಥಾಪಿತವಾದ, ನಿಯಮಗಳು ಮೌಲ್ಯಗಳು, ಕ್ರಿಯೆ ಮತ್ತು ನಂಬಿಕೆಗಳಿಂದ ಕೂಡಿರುವ ವ್ಯವಸ್ಥೆಗೆ ಸಾಮಾಜಿಕ ಸಂಸ್ಥೆ ಎನ್ನುವರು”. ಉದಾ: ಕುಟುಂಬ, ವಿವಾಹ, ಶಾಲೆ, ಧರ್ಮ, ಕಾನೂನು ಇತ್ಯಾದಿ.
  • ಮಹತ್ವ: ಸಂಸ್ಕೃತಿಯ ವಾಹಕ, ಅಗತ್ಯಗಳ ಪೂರೈಕೆ, ವರ್ತನೆ ನಿಯಂತ್ರಣ, ಪಾತ್ರ ನೀಡಿಕೆ.

53

SHRINIVAS H.K

54 of 60

ಸಮಾಜಶಾಸ್ತ್ರ

  • ಸಮಾಜದ ಪ್ರಕಾರಗಳು
  • “ಸಮಾಜ ಎಂದರೆ ಒಡನಾಡಿಗಳ ಒಡನಾಟದಿಂದ ಒಟ್ಟುಗೂಡಿರುವ ವ್ಯವಸ್ಥೆ”.
  • ಸಮಾಜದ ಪ್ರಕಾರಗಳು: 1)ಬೇಟೆ ಮತ್ತು ಆಹಾರ ಸಂಗ್ರಹಣಾ ಸಮಾಜ 2) ಪಶುಪಾಲನಾ ಸಮಾಜ 3) ಕೃಷಿ/ಗ್ರಾಮೀಣ ಸಮಾಜ 4)ಕೈಗಾರಿಕಾ/ನಗರ ಸಮಾಜ 5)ಮಾಹಿತಿ ಸಮಾಜ.

54

SHRINIVAS H.K

55 of 60

ಅರ್ಥಶಾಸ್ತ್ರ

  • ಅರ್ಥಶಾಸ್ತ್ರ ಪರಿಚಯ
  • “ಆರ್ಥಿಕ ಚಟುವಟಿಕೆಗಳ ಅಧ್ಯಯನವೇ ಅರ್ಥಶಾಸ್ತ್ರ” ಅಥವಾ “ಹಣಕಾಸಿನ ಕುರಿತ ಅಧ್ಯಯನ”.
  • ಅರ್ಥಶಾಸ್ತ್ರದ ಪಿತಾಮಹ ‘ಆಡಂ ಸ್ಮಿತ್’ ಪ್ರಕಾರ “ಸಂಪತ್ತಿನ ಕುರಿತ ಅಧ್ಯಯನ”
  • ಆರ್ಥಶಾಸ್ತ್ರದ ಮೂಲ ಪರಿಕಲ್ಪನೆಗಳು

ಹಣ, ಬೇಡಿಕೆ, ಪೂರೈಕೆ, ಉತ್ಪಾದನೆ, ವಿನಿಮಯ(ವಿತರಣೆ) ಅನುಭೋಗ, ಉಪಯುಕ್ತತೆ, ಬೆಲೆ, ಶ್ರಮ, ಉದ್ಯೋಗ, ರಾಷ್ಟ್ರೀಯ ಆದಾಯ, ತಲಾ ಆದಾಯ. ಸಹಕಾರ ಇತ್ಯಾದಿ.

55

SHRINIVAS H.K

56 of 60

ಅರ್ಥಶಾಸ್ತ್ರ

  • ರಾಷ್ಟ್ರೀಯ ಆದಾಯ, ತಲಾ ಆದಾಯ
  • “ಒಂದು ರಾಷ್ಟ್ರದಲ್ಲಿ ಒಂದು ವರ್ಷದಲ್ಲಿ ಉತ್ಪಾದಿಸಿದ ಸರಕು ಮತ್ತು ಸೇವೆಗಳ ಒಟ್ಟು ಮೌಲ್ಯವೇ ರಾಷ್ಟ್ರೀಯ ಆದಾಯ
  • “ಒಂದು ರಾಷ್ಟ್ರದ ಜನರ ಒಂದು ವರ್ಷದ ಸರಾಸರಿ ಆದಾಯವೇ ತಲಾ ಆದಾಯತಲಾ ಆದಾಯ=ಒಟ್ಟು ರಾಷ್ಟ್ರೀಯ ಆದಾಯ

ಒಟ್ಟು ಜನಸಂಖ್ಯೆ.

  • ಭಾರತದ ಅರ್ಥವ್ಯವಸ್ಥೆಯ 3 ವಲಯಗಳು : 1)ಪ್ರಾಥಮಿಕ ವಲಯ (ಕೃಷಿ,ಪಶುಸಂಗೋಪನೆ,ಗಣಿಗಾರಿಕೆ ಇತ್ಯಾದಿ) 2)ದ್ವಿತೀಯ ವಲಯ(ಕೈಗಾರಿಕೆ) 3)ತೃತೀಯ ವಲಯ(ಸೇವೆಗಳು).

56

SHRINIVAS H.K

57 of 60

ಅರ್ಥಶಾಸ್ತ್ರ

  • ಅರ್ಥವ್ಯವಸ್ಥೆಗಳು
  • “ಆರ್ಥಿಕ ಚಟುವಟಿಕೆಗಳ ಒಂದು ನಿಯಮಿತ ವ್ಯವಸ್ಥೆಗೆ ಅರ್ಥವ್ಯವಸ್ಥೆ ಎನ್ನುವರು”
  • ಪ್ರಮುಖವಾಗಿ 3 ರೀತಿಯ ಅರ್ಥವ್ಯವಸ್ಥೆಗಳಿವೆ
  • 1)ಸಮಾಜವಾದಿ ಅರ್ಥವ್ಯವಸ್ಥೆ (ಸರಕಾರದ ಸಂಪೂರ್ಣ ಒಡೆತನ ಮತ್ತು ನಿಯಂತ್ರಣ)(ಚೀನಾ).
  • 2)ಬಂಡವಾಳಶಾಹಿ ಅರ್ಥವ್ಯವಸ್ಥೆ (ಖಾಸಗಿ ಒಡೆತನ ಮತ್ತು ಸರಕಾರದ ಅಲ್ಪ ನಿಯಂತ್ರಣ)(ಅಮೆರಿಕ)
  • 3)ಮಿಶ್ರ ಅರ್ಥ ವ್ಯವಸ್ಥೆ

(ಸಾರ್ವಜನಿಕ ಮತ್ತು ಖಾಸಗಿ

ಸಹಭಾಗಿತ್ವ)(ಭಾರತ).

57

SHRINIVAS H.K

58 of 60

ಅರ್ಥಶಾಸ್ತ್ರ

  • ಆರ್ಥಿಕ ಯೋಜನೆಗಳು
  • ಅರ್ಥವ್ಯಸ್ಥೆಯ ಅಭಿವೃದ್ದಿಗಾಗಿ ಸರ್ಕಾರ ಯೋಜನೆಗಳನ್ನು ರೂಪಿಸುತ್ತದೆ.
  • ಭಾರತದಲ್ಲಿ 1950 ರಲ್ಲಿ ಸ್ಥಾಪನೆಯಾದ ಯೋಜನಾ ಆಯೋಗ(2015ರಲ್ಲಿ ಅದು ನೀತಿ ಆಯೋಗವಾಗಿದೆ) ಪಂಚವಾರ್ಷಿಕ ಯೋಜನೆಗಳನ್ನು ತಯಾರಿಸುತ್ತದೆ. 1951-56 ರಲ್ಲಿ ಮೊದಲ ಪಂಚವಾರ್ಷಿಕ ಯೋಜನೆ, ಇದುವರೆಗೆ 12 ಪಂ.ವಾ.ಯೋಜನೆಗಳು ಮತ್ತು ಹಲವು ವಾರ್ಷಿಕ ಯೋಜನೆಗಳು, ಹಲವು ಕ್ಷೇತ್ರಗಳ ಪ್ರಗತಿ, ಕೆಲ ಕ್ಷೇತ್ರಗಳಲ್ಲಿ ವಿಫಲತೆ.
  • 1991 ರಲ್ಲಿ ಸರಕಾರದಿಂದ ಎಲ್.ಪಿ.ಜಿ. ಆಧಾರಿತ ಆರ್ಥಿಕ ಸುಧಾರಣೆಗಳ ಜಾರಿ.

58

SHRINIVAS H.K

59 of 60

ವ್ಯವಹಾರ ಅಧ್ಯಯನ

  • “ಲಾಭಕ್ಕಾಗಿ ವಸ್ತುಗಳ ಉತ್ಪಾದನೆ, ಸಂಗ್ರಹ, ಸಾಗಾಣಿಕೆ ಮತ್ತು ವ್ಯಾಪಾರ ಅದಕ್ಕೆ ಸಂಭಂಧಿಸಿದ ಚಟುವಟಿಕೆಗಳಿಗೆ ವ್ಯವಹಾರ ಎನ್ನುವರು”. ಉದಾ: ಕೈಗಾರಿಕೆ, ವ್ಯಾಪಾರ, ಬ್ಯಾಂಕ್, ವಿಮೆ, ಸಾರಿಗೆ ಇತ್ಯಾದಿ. ವ್ಯವಹಾರವು ಒಂದು ಆರ್ಥಿಕ ಚಟುವಟಿಕೆಯಾಗಿದೆ.
  • ವ್ಯವಹಾರದ ಉದ್ದೇಶಗಳು: ಲಾಭ, ವಸ್ತುಗಳ ಪೂರೈಕೆ, ಉದ್ಯೋಗ, ಜೀವನ ಮಟ್ಟ ಸುಧಾರಣೆ, ಆರ್ಥಿಕ ಅಭಿವೃದ್ದಿ.
  • ವ್ಯವಹಾರದ ಭಾಗಗಳು: 1)ವ್ಯಾಪಾರ(ಕೊಳ್ಳುವುದು,ಮಾರುವುದು) 2)ಕೈಗಾರಿಕೆ(ಉತ್ಪಾದನೆ) 3)ವಾಣಿಜ್ಯ(ಸಾರಿಗೆ,ಬ್ಯಾಂಕ್,ವಿಮೆ,ಜಾಹಿರಾತು,ಶೇಖರಣೆ)
  • ವ್ಯವಹಾರ ಸಂಘಟನೆಗಳು
  • 1)ಏಕವ್ಯಕ್ತಿ ಮಾಲೀಕತ್ವದ ವ್ಯವಹಾರ ಸಂಘಟನೆ 2)ಪಾಲುದಾರಿಕೆ ವ್ಯವಹಾರ ಸಂಘಟನೆ 3)ಹಿಂದೂ ಅವಿಭಕ್ತ ಕುಟುಂಬ ವ್ಯವಹಾರ ಸಂಘಟನೆ 4) ಸಹಕಾರ ಸಂಘಗಳು 5)ಕೂಡು ಬಂಡವಾಳ ಸಂಸ್ಥೆಗಳು 6)ಬಹುರಾಷ್ಟ್ರೀಯ ಕಂಪನಿಗಳು

59

SHRINIVAS H.K

60 of 60

60

ಈ ಮೆಲಿನ 8 ನೇ ತರಗತಿ ಸಮಾಜ ವಿಜ್ಞಾನ ವಿಷಯದ ಪ್ರಮುಖ ಅಂಶಗಳನ್ನು ನೆನಪಿನಲ್ಲಿಟ್ಟುಕೊಳ್ಳುವ ಮೂಲಕ 9 ನೇ ತರಗತಿ ಸಮಾಜ ವಿಜ್ಞಾನ ಉತ್ತಮವಾಗಿ ಅಧ್ಯಯನ ಮಾಡಬಹುದಾಗಿದೆ

ALL THE BEST FOR 9th Standard

ಈ ಮೇಲಿನ ಸೇತು ಬಂಧ ಪ್ರಮುಖಾಂಶಗಳ ನೋಟ್ಸ್ ಗಳನ್ನು ತಯಾರಿಸಲಾಗಿದ್ದು ಅದಕ್ಕಾಗಿ ಈ ಕೆಳಗಿನ ಲಿಂಕ್ ಮೂಲಕ ನಮ್ಮ ಬ್ಲಾಗ್ ನಿಂದ ಪಡೆಯಿರಿ.

ಲಿಂಕ್: https://shreesavisampattu.blogspot.com/

ಶ್ರೀನಿವಾಸ್ ಹೆಚ್.ಕೆ. ಕರ್ನಾಟಕ ಪಬ್ಲಿಕ್ ಸ್ಕೂಲ್ ಆಡೂರ ತಾ|| ಹಾನಗಲ್ಲ ಜಿ|| ಹಾವೇರಿ 9980875828

SHRINIVAS H.K