1 of 107

Copyrights and Attributions

The lesson plans created by India Literacy Project are not for profit or for sale. The content here has been compiled as open source and can be used, reproduced, derived of or modified by anyone as long as it is used for educational and non-profit use and released as open source.

All images and videos used in this presentation are sourced from the Internet and are owned and copyrighted as appropriate by the original owners.

India Literacy Project neither owns nor claims any copyright over them.

Free Distribution

ಉಚಿತ ವಿತರಣೆ

India Literacy Project

2 of 107

ILP ಸ್ವಯಂ ಸೇವಾ ಸಂಸ್ಥೆ  ಉಚಿತ ವಿತರಣೆಗಾಗಿ ಈ ಡಿಜಿಟಲ್ ಸಂಪನ್ಮೂಲವನ್ನು ಸಿದ್ಧಪಡಿಸಿದೆ. 

ಇದರ ಉದ್ದೇಶಗಳು:

  • ಶಾಲೆಯಲ್ಲಿ ಸ್ಮಾರ್ಟ್ ಕ್ಲಾಸ್ ಶಕ್ಯವಾಗಿಸಲು (ಸಕ್ರಿಯವಾಗಿಸಲು)  
  • ಶಾಲಾ ಮಕ್ಕಳಿಗೆ ಪಠ್ಯ ಪುಸ್ತಕದ ಜೊತೆಗೆ ಪರಿಕಲ್ಪನೆ ಅರ್ಥೈಸಿಕೊಳ್ಳುವುದಕ್ಕೆ    ಡಿಜಿಟಲ್ ಸಂಪನ್ಮೂಲ ಒದಗಿಸಲು  .
  • ಶಿಕ್ಷಕರು ಹಾಗು ಮಕ್ಕಳು ಬಹುಆಯಾಮ ಕಲಿಕೆಯ ಅನುಭವ  ಪಡೆಯಲು .   

ಇದರ ವೈಶಿಷ್ಟ್ಯತೆಗಳು:

  • ಪಠ್ಯ ಪುಸ್ತಕದಲ್ಲಿರುವ ಪರಿಕಲ್ಪನೆಗಳನ್ನು ಈ ಡಿಜಿಟಲ್ ಸಂಪನ್ಮೂಲ ಬಲಪಡಿಸುತ್ತದೆ. 

  • ಪ್ರತಿನಿತ್ಯ ಮಾಡುವ ಬೋಧನಾ ವಿಧಾನ ( ಕಪ್ಪುಹಲಗೆ, ಪ್ರಯೋಗಗಳು, ಚಟುವಟಿಕೆಗಳು ಹಾಗೂ ಇತರೆ)  ಜೊತೆಗೆ ಈ 

ಡಿಜಿಟಲ್  ಸಂಪನ್ಮೂಲವನ್ನು ಬಳಸುವುದರಿಂದ ನಿಮ್ಮ ತರಗತಿ ಸ್ಮಾರ್ಟ್ ಕ್ಲಾಸ್ ಆಗಿ ಬದಲಾವಣೆಯಾಗಲು ಸಹಾಯಕವಾಗಿದೆ.

  • PPTಯು  ಪಠ್ಯ ಪುಸ್ತಕದ  ಜೊತೆಗೆ  ಉಪಯೋಗಿಸುವಂಥಹದ್ದು.  ಈ PPT ಯನ್ನು ಉಪಯೋಗಿಸುವಾಗ ಮಕ್ಕಳು ಪಠ್ಯ ಪುಸ್ತಕ, 

ನೋಟ್ ಬುಕ್ ಮತ್ತು ಪೆನ್ ನ್ನು ಸಿದ್ಧವಾಗಿಟ್ಟುಕೊಳ್ಳುವುದು.

  • ಕಲಿಕೆಗೆ ಪೂರಕವಾಗಿ ಪರಿಕಲ್ಪನೆಗಳನ್ನು ಅರ್ಥೈಸಲು 2-5 ನಿಮಿಷಗಳ ಕಾಲದ ವಿಡಿಯೋ ಗಳನ್ನು ಅಳವಡಿಸಲಾಗಿದೆ. 

  • ಕಲಿಕೆಗೆ ಪೂರಕವಾಗುವಂತೆ  ಇದರಲ್ಲಿ ಬದಲಾವಣೆ ಮಾಡಿಕೊಳ್ಳಬಹುದಾಗಿದೆ. 

  • ಈ ಡಿಜಿಟಲ್ ಸಾಧನವನ್ನು ಶಿಕ್ಷಕರು ತಮ್ಮ  ಅನುಕೂಲತೆಗೆ ಅನುಗುಣವಾಗಿ ಉಪಯೋಗಿಸಬಹುದಾಗಿದೆ.  

  • ILP ವಿಜ್ಞಾನ ಪ್ರಯೋಗ ಕಿಟ್  ನಿಮ್ಮಲ್ಲಿದ್ದಲ್ಲಿ ಅದನ್ನು ಬಳಸಿಕೊಳ್ಳಬಹುದು.

  • ಈ ಪಾಠ ಯೋಜನೆಗಳನ್ನು ಉತ್ತಮಪಡಿಸಲು ಶಿಕ್ಷಕರು / ವಿದ್ಯಾರ್ಥಿಗಳು ತಮ್ಮ ಸಲಹೆಗಳನ್ನು ಮುಕ್ತವಾಗಿ ನೀಡಬಹುದಾಗಿದೆ.

India Literacy Project - email: info@ilpnet.org

ಶಿಕ್ಷಕರಿಗಾಗಿ

3 of 107

ಶಿಕ್ಷಕರಿಗಾಗಿ....

2022-2023 ಶೈಕ್ಷಣಿಕ ವರ್ಷದಲ್ಲಿ ಶಾಲೆಗಳಲ್ಲಿ ಕಲಿಕಾ ಚೇತರಿಕೆ ಕಾರ್ಯಕ್ರಮ

ಅನುಷ್ಠಾನವಾಗಲಿದೆ.

ಈ ppt ಗಳು ಕಲಿಕಾ ಚೇತರಿಕೆಯ ಕಲಿಕಾ ಹಾಳೆಗಳು ಮತ್ತು ಪಠ್ಯ ಪುಸ್ತಕದ

ವಿಷಯಗಳು ಸುಗಮವಾದ ಉಪಕ್ರಮಕ್ಕೆ ಶಿಕ್ಷಕರಿಗೆ ಸಹಾಯವಾಗುವಂತೆ ಇದೆ.

4 of 107

ಜೀವದ ಮೂಲ ಘಟಕ(The Fundamental unit of life)

ತರಗತಿ: 9

ಅಧ್ಯಾಯ: 5

ವಿಷಯ: ವಿಜ್ಞಾನ

5 of 107

ಕಲಿಕಾ ಫಲಗಳು

  • ಜೀವಕೋಶದ ಅರ್ಥ ವಿಧಗಳು ಗಾತ್ರ ಆಕಾರದ ಬಗ್ಗೆ ತಿಳಿಯುವೆ.

  • ಜೀವಕೋಶದಲ್ಲಿ ನಡೆಯುವ ಪ್ರಕ್ರಿಯೆಯನ್ನು ಅರ್ಥೈಸಿಕೊಳ್ಳುವೆ.

  • ಜೀವಕೋಶದ ರಚನಾತ್ಮಕ ವ್ಯವಸ್ಥೆಯ ಬಗ್ಗೆ ತಿಳಿಯುವೆ.

6 of 107

ಜೀವಕೋಶ - ಮಕ್ಕಳಿಗಾಗಿ

https://youtu.be/8vo59AKzU4Q

cell for kids

7 of 107

ಪರಿಚಯ:

ಇಟ್ಟಿಗೆಯು ಕಟ್ಟಡದ ಮೂಲ ಘಟಕವಾಗಿದೆ

8 of 107

ಅದೇ ರೀತಿ ಜೀವಕೋಶಗಳು ಜೀವಿಗಳ ಮೂಲ ಘಟಕಗಳಾಗಿವೆ - (ಪ್ರಾಣಿಗಳಲ್ಲಿ- ಪ್ರಾಣಿ ಜೀವಕೋಶ)

9 of 107

ಅದೇ ರೀತಿ ಜೀವಕೋಶಗಳು ಜೀವಿಗಳ ಮೂಲ ಘಟಕಗಳಾಗಿವೆ - (ಸಸ್ಯಗಳಲ್ಲಿ - ಸಸ್ಯ ಜೀವಕೋಶ)

10 of 107

ಸಸ್ಯಗಳು ಮತ್ತು ಪ್ರಾಣಿಗಳು ಬಹುಕೊಶೀಯ ಜೀವಿಗಳಾಗಿವೆ:

ಜೀವಕೊಶ

ಅಂಗಾಂಶ

ಅಂಗ

ಅಂಗವ್ಯವಸ್ತೆ

ಜೀವಿ

11 of 107

ಏಕಕೊಶೀಯ ಜೀವಿಗಳು(Unicellular organisms):

ಉದಾಹರಣೆ: ಬ್ಯಾಕ್ಟೀರಿಯಾ, ವೈರಸ್ ಮುಂತಾದ ಸೂಕ್ಷ್ಮಾಣು ಜೀವಿಗಳು

12 of 107

ಕಲಿಕಾ ಫಲ – 01

ಜೀವಕೋಶದ ಅರ್ಥ ವಿಧಗಳು ಗಾತ್ರ ಆಕಾರದ ಬಗ್ಗೆ ತಿಳಿಯುವೆ.

13 of 107

ನಮ್ಮ ಭೂಮಿಯ ಮೇಲೆ ವಿವಿಧ ಆವಾಸಗಳಲ್ಲಿ ಅನೇಕ ರೀತಿಯ ಸಸ್ಯಗಳು ಮತ್ತು ಪ್ರಾಣಿಗಳಿವೆ ಎಂಬುದನ್ನು ಹಿಂದಿನ ತರಗತಿಗಳಲ್ಲಿ ತಿಳಿದಿರುವಿರಿ.

14 of 107

ಇವುಗಳ ಜೊತೆಗೆ ವೈರಸ್ ಗಳು, ಬ್ಯಾಕ್ಟೀರಿಯಾಗಳು, ಹಾಗು ಕೆಳವರ್ಗದ ಸಸ್ಯಗಳು ಮತ್ತು ಪ್ರಾಣಿಗಳಂತಹ ವಿವಿಧ ರೀತಿಯ ಸೂಕ್ಷ್ಮ ಜೀವಿಗಳು ಕೂಡ ಇವೆ.

15 of 107

ಕೆಳವರ್ಗದ ಸಸ್ಯಗಳು

ಈ ಎಲ್ಲಾ ಸೂಕ್ಷ್ಮ ಜೀವಿಗಳು ಬರಿ ಕಣ್ಣಿಗೆ ಕಾಣಿಸುವುದಿಲ್ಲ. ಆದರೆ ಸೂಕ್ಷ್ಮದರ್ಶಕದ ಮೂಲಕ ನೋಡಿದಾಗ ಇವು ಕಾಣಿಸುತ್ತವೆ. ಆದ್ದರಿಂದ ಇಂತಹ ಜೀವಿಗಳನ್ನು ಸೂಕ್ಷ್ಮಜೀವಿಗಳು(micro-organisms) ಎನ್ನುವರು.

ವಿವಿಧ ರೀತಿಯ ವೈರಸ್ ಗಳು

ಎಬೋಲಾ ವೈರಸ್

ಕೊರೋನ ವೈರಸ್

ಹೆಪಟೈಟಿಸ್ ಬಿ

ಹೆಚ್.ಐ.ವಿ

16 of 107

ಡಚ್ ದೇಶದ ಆಂಟೋನ್ ವಾನ್ ಲೀವೆನ್ ಹಾಕ್ ರವರು ಬರಿ ಕಣ್ಣಿಗೆ ಕಾಣಿಸದ ವಸ್ತುಗಳನ್ನು ನೋಡಬಹುದಾದ ಒಂದು ಉಪಕರಣವನ್ನು ಮಸೂರ(lens) ಗಳನ್ನು ಬಳಸಿ ತಯಾರಿಸಿದರು.

17 of 107

ಜೀವಕೋಶದ ಆವಿಷ್ಕಾರ :

ರಾಬರ್ಟ್‍ಹುಕ್

ರಾಬರ್ಟ್‍ಹುಕ್ ಗಮನಿಸಿದ ಕಾರ್ಕ್‍ನ ಜೀವಕೋಶಗಳು

  • ರಾಬರ್ಟ್ ಹುಕ್ 1665ರಲ್ಲಿ ಒಂದು ಸರಳ ವರ್ಧಕ ಉಪಕರಣದ ಸಹಾಯದಿಂದ ಕಾರ್ಕ್‍ನ ತೆಳುವಾದಬಿಲ್ಲೆಗಳನ್ನು ಗಮನಿಸಿದರು.

  • ಕಾರ್ಕ್ ಎಂಬುದು ಮರವೊಂದರ ತೊಗಟೆಯ ಭಾಗ. ಅವರು ಕಾರ್ಕ್‍ನ ತೆಳುವಾದ ಬಿಲ್ಲೆಗಳನ್ನು ತೆಗೆದುಕೊಂಡರು ಮತ್ತು ಒಂದು ಸೂಕ್ಷ್ಮದರ್ಶಕದಡಿಯಲ್ಲಿ ಅವುಗಳನ್ನು ಗಮನಿಸಿದರು.

  • ಅವರು ಕಾರ್ಕ್‍ನ ಬಿಲ್ಲೆಗಳಲ್ಲಿ ವಿಭಾಗಿಸಿದ ಪೆಟ್ಟಿಗೆಯಂಥ ರಚನೆಗಳನ್ನು ಗುರುತಿಸಿದರು.

18 of 107

  • ಈ ಪೆಟ್ಟಿಗೆಗಳು ಜೇನುಹುಟ್ಟಿನಂತೆ (honeycomb) ಕಾಣುತ್ತಿದ್ದವು. ಒಂದು ಪೆಟ್ಟಿಗೆಯು ಇನ್ನೊಂದರಿಂದ ಒಂದು ಭಿತ್ತಿ ಅಥವಾ ವಿಭಾಗದಿಂದ ಬೇರೆಯಾಗಿರುವುದನ್ನೂ ಅವರು ಗುರುತಿಸಿದರು.

  • ಪ್ರತಿಯೊಂದು ಪೆಟ್ಟಿಗೆಗೆ ‘ಸೆಲ್’ (ಜೀವಕೋಶ) ಎಂಬ ಪದವನ್ನು ಹುಕ್ ಟಂಕಿಸಿದರು. ಕಾರ್ಕ್‍ನಲ್ಲಿ ಪೆಟ್ಟಿಗೆಗಳಂತೆ ಅಥವಾ ಜೀವಕೋಶಗಳಂತೆ ಏನನ್ನು ಹುಕ್ ಗಮನಿಸಿದರೋ ಅವು ನಿಜವಾಗಿ ಮೃತ ಜೀವಕೋಶಗಳಾಗಿದ್ದವು.

19 of 107

ಸೂಕ್ಷ್ಮದರ್ಶಕ

  • ಸುಧಾರಿತ ಸೂಕ್ಷ್ಮದರ್ಶಕಗಳ ಆವಿಷ್ಕಾರದ ನಂತರವಷ್ಟೇ ಜೀವಿಗಳ ಜೀವಕೋಶಗಳ ವೀಕ್ಷಿಸುವಿಕೆ ಸಾಧ್ಯವಾಯಿತು.

  • ರಾಬರ್ಟ್‍ಹುಕ್‍ರವರ ವೀಕ್ಷಣೆಗಳ ನಂತರ ಮುಂದಿನ 150 ವರ್ಷಗಳಲ್ಲಿ ಜೀವಕೋಶಗಳ ಬಗ್ಗೆ ಸ್ವಲ್ಪವಷ್ಟೇ ತಿಳಿಯಲು ಸಾಧ್ಯವಾಯಿತು.

  • ಅತ್ಯಧಿಕ ವರ್ಧನ ಸಾಮಥ್ರ್ಯವುಳ್ಳ ಸುಧಾರಿತ ಸೂಕ್ಷ್ಮದರ್ಶಕಗಳಿಂದಾಗಿ ನಾವಿಂದು ಜೀವಕೋಶಗಳ ಬಗ್ಗೆ ಸಾಕಷ್ಟು ತಿಳಿದುಕೊಂಡಿದ್ದೇವೆ.

20 of 107

ಜೀವಕೋಶ

  • ಕಟ್ಟಡದಲ್ಲಿನ ಇಟ್ಟಿಗೆಗಳು ಮತ್ತು ಜೀವಿಗಳಲ್ಲಿನ ಜೀವಕೋಶಗಳು ಎರಡೂ ಮೂಲಭೂತ ರಚನಾತ್ಮಕ ಘಟಕಗಳು.

  • ಕಟ್ಟಡಗಳು ಒಂದೇ ರೀತಿಯ ಇಟ್ಟಿಗೆಗಳಿಂದ ಕಟ್ಟಲ್ಪಟ್ಟಿದ್ದರೂ ವಿಭಿನ್ನ ವಿನ್ಯಾಸ, ರೂಪ ಮತ್ತು ಗಾತ್ರಗಳನ್ನು ಹೊಂದಿರುತ್ತವೆ.

  • ಅದೇ ರೀತಿ, ಜೀವಿಗಳ ಪ್ರಪಂಚದಲ್ಲಿ ಜೀವಿಗಳು ಪರಸ್ಪರ ವಿಭಿನ್ನವಾಗಿದ್ದರೂ ಜೀವಕೋಶಗಳಿಂದ ಉಂಟಾಗಿವೆ.

  • ಜೀವಿಗಳಲ್ಲಿನ ಜೀವಕೋಶಗಳು ನಿರ್ಜೀವ ಇಟ್ಟಿಗೆಗಳಂತಲ್ಲದೇ ಸಂಕೀರ್ಣ ಜೀವಂತ ರಚನೆಗಳಾಗಿವೆ.

21 of 107

ಜೀವಕೋಶಗಳ ಪರಿಚಯ:

Introduction to Cells

22 of 107

ಚಟುವಟಿಕೆ:

ಈರುಳ್ಳಿಯ ಒಂದು ಪದರವನ್ನು ತೆಗೆದುಕೊಳ್ಳಿ. ಈ ಚೂರಿನಿಂದ ತೆಳುವಾದ ಹೊರದರ್ಮದ ಪೊರೆಯನ್ನು ಪ್ರತ್ಯೇಕಿಸಿ. ಅದನ್ನು ನೀರಿರುವ ಪರೀಕ್ಷಾ ಗಾಜಿನಪಟ್ಟಿಕೆ (glass slide) ಮೇಲಿಡಿ. ಅದರ ಮೇಲೆ ಒಂದು ಹನಿ ಅಯೋಡಿನ್ ಅಥವಾ ಯಾವುದಾದರೂ ವರ್ಣದ್ರವ್ಯ(stain) ವನ್ನು ಹಾಕಿ. ತಯಾರಾದ ಗಾಜಿನ ಪಟ್ಟಿಕೆಯನ್ನು ಸಂಯುಕ್ತ ಸೂಕ್ಷ್ಮದರ್ಶಕದಲ್ಲಿ ವೀಕ್ಷಿಸಿ.

23 of 107

ಫೋಲ್ಡ್ ಸ್ಕೋಪ್ ನಲ್ಲಿ ಕಂಡುಬಂದ ಈರುಳ್ಳಿ ಪೊರೆಯ ಜೀವಕೋಶಗಳು

24 of 107

ಚಟುವಟಿಕೆ 1.1

ಸೂಕ್ಷ್ಮದರ್ಶಕ ಅಥವಾ ಚಾರ್ಟ್ ಗಳ ಮೂಲಕ ಬ್ಯಾಕ್ಟೀರಿಯಾ ,ಅಮೀಬಾ, ನರಕೋಶ ಮತ್ತು ಇತರ ಸಸ್ಯ ಮತ್ತು ಪ್ರಾಣಿಗಳ ಜೀವಕೋಶಗಳ ವೀಕ್ಷಣೆ ಮಾಡಿ ಗುರುತಿಸುವುದು, ಹಿಂದಿನ ತರಗತಿಯಲ್ಲಿ ಕಲಿತ ಅಂಶಗಳನ್ನು ನೆನಪಿಸುವುದು.

25 of 107

ಈರುಳ್ಳಿ ಪೋರೆಯಲ್ಲಿನ ಜೀವಕೋಶಗಳು

Onion Peel Cells under a Fold scope

26 of 107

ಜೀವಕೋಶಗಳು ಯಾವ ರೀತಿಯ ರಚನೆಗಳು?

  • ಈ ಚಟುವಟಿಕೆಯಿಂದ ನಾವು ಕಂಡುಕೊಂಡ ಅಂಶವೇನೆಂದರೆ ಸೂಕ್ಷ್ಮದರ್ಶಕದಡಿಯಲ್ಲಿ ಗಮನಿಸಿದಾಗ, ವಿವಿಧ ಗಾತ್ರದ ಈರುಳ್ಳಿ ಗಡ್ಡೆಗಳೆಲ್ಲ ಒಂದೇ ರೀತಿಯ ರಚನೆಗಳನ್ನು ಹೊಂದಿವೆ.

  • ನಾವು ನೋಡಿದ ಈ ಸಣ್ಣ ರಚನೆಗಳು ಈರುಳ್ಳಿ ಗಡ್ಡೆಯ ರಚನಾತ್ಮಕ ಮೂಲಘಟಕಗಳಾಗಿವೆ. ಈ ರಚನೆಗಳನ್ನು ಜೀವಕೋಶಗಳು ಎನ್ನುವರು.

  • ಈರುಳ್ಳಿಯೊಂದೇ ಅಲ್ಲದೇ ನಾವು ಸುತ್ತ ಮುತ್ತ ಗಮನಿಸುವ ಎಲ್ಲಾ ಜೀವಿಗಳೂ ಜೀವಕೋಶಗಳಿಂದ ಮಾಡಲ್ಪಟ್ಟಿವೆ.

27 of 107

  • ಒಂದು ಕೋಶವು ಒಂದು ಪೂರ್ಣ ಜೀವಿಯನ್ನು ಪ್ರತಿನಿಧಿಸಬಹುದು, ಈ ಜೀವಿಗಳನ್ನು ಏಕಕೋಶ (unicellular) ಜೀವಿಗಳು ಎಂದು ಕರೆಯಲಾಗುತ್ತದೆ.

  • ಉದಾ: ಅಮೀಬಾ, ಕ್ಲಾಮಿಡೋಮೊನಾಸ್, ಪ್ಯಾರಾಮೀಸಿಯಂ ಮತ್ತು ಬ್ಯಾಕ್ಟೀರಿಯ.

ಏಕಕೋಶೀಯ ಜೀವಿಗಳು (unicellular organisms):

  • ಅಂತಹ ಜೀವಿಗಳಲ್ಲಿ ಒಂದೇ ಜೀವಕೋಶವು ಯಾವುದೇ ಉನ್ನತ ಸಂಕೀರ್ಣ ಜೀವಿಯಂತೆ ತಿನ್ನುವ, ಬೆಳೆಯುವ, ಉಸಿರಾಡುವ, ವಿಸರ್ಜಿಸುವ, ಪ್ರಚೋದನೆಗೆ ಪ್ರತಿಕ್ರಿಯಿಸುವ ಮತ್ತು ಸಂತಾನೋತ್ಪತ್ತಿಯಂತಹ ಕಾರ್ಯಗಳನ್ನು ನಿರ್ವಹಿಸುತ್ತದೆ.ಜೀವಕೋಶದ ಒಳಗೆ ನಿರ್ದಿಷ್ಟ ಕಾರ್ಯಗಳನ್ನು ನಿರ್ವಹಿಸಲು ಅನೇಕ ವಿಶೇಷ ರಚನೆಗಳು ಇರುತ್ತವೆ.

28 of 107

ಅಮೀಬಾ:

29 of 107

ಯುಗ್ಲೀನಾ:

30 of 107

ಪ್ಯಾರಾಮೀಸಿಯಮ್:

31 of 107

ಕಲಿಕಾ ಹಾಳೆ ಚಟುವಟಿಕೆ 1.2

ಕೆಳಗೆ ಕೊಟ್ಟಿರುವ ಕೋಷ್ಟಕವನ್ನು ಪೂರ್ಣಗೊಳಿಸು

ಒಂದೇ ಒಂದು ಜೀವಕೋಶದಿಂದಮಾಡಲ್ಪಟ್ಟ ಜೀವಿಗಳು

ಜೀವಿಗಳು

ಪ್ರೋಕ್ಯಾರಿಯೋಟ್ ಯೂಕ್ಯಾರಿಯೋಟ್

ಉದಾಹರಣೆ ಉದಾಹರಣೆ

ಬ್ಯಾಕ್ಟೀರಿಯ

ಯೂಗ್ಲೀನಾ

ಏಕಕೋಶಿಯ ಬಹುಕೋಶಿಯ

ನ್ಯೂಕ್ಲಿಯರ್ ಪೋರೆಯಿಲ್ಲದ ನ್ಯೂಕ್ಲಿಯರ್

ಅಮೀಬಾ

ಉದಾಹರಣೆ

ಉದಾಹರಣೆ

ಸಸ್ಯ

ಪ್ರಾಣಿ

32 of 107

Foldscope Stagnant Rain Water (Kannada)

33 of 107

ಕೆಲವು ಶಿಲೀಂಧ್ರಗಳು, ಸಸ್ಯಗಳು ಮತ್ತು ಪ್ರಾಣಿಗಳಲ್ಲಿ ಅನೇಕ ಜೀವಕೋಶ ಗುಂಪುಗಳು ಒಂದೇ ಜೀವಿಯಲ್ಲಿದ್ದು ಬೇರೆ ಬೇರೆ ಕಾರ್ಯಗಳನ್ನು ನಿರ್ವಹಿಸುತ್ತವೆ ಹಾಗೂ ವಿವಿಧ ದೇಹಭಾಗಗಳನ್ನು ನಿರ್ಮಿಸಲು ಕಾರಣವಾಗಿವೆ ಇಂತಹ ಜೀವಿಗಳಿಗೆ ಬಹುಕೋಶೀಯ (Multicellular) ಜೀವಿಗಳು ಎಂದು ಹೆಸರು.

ಹೈಡ್ರಾ

ಇರುವೆ

ಆನೆ

ಆಲದಮರ

ಬಹುಕೋಶೀಯ ಜೀವಿಗಳು (Multicellularorganisms)

34 of 107

ಪ್ರತಿ ಬಹುಕೋಶೀಯ ಜೀವಿಯೂ ಒಂದೇ ಜೀವಕೋಶದಿಂದ ಉಂಟಾಗಿದೆ. ಹೇಗೆ?

ಜೀವಕೋಶಗಳು ವಿಭಜಿಸಿ ತಮ್ಮಂತೆಯೇ ಇರುವ ಹೊಸ ಜೀವಕೋಶಗಳನ್ನು ಉಂಟುಮಾಡುತ್ತವೆ.ಎಲ್ಲಾ ಜೀವಕೋಶಗಳೂ ಈಗಾಗಲೇ ಅಸ್ತಿತ್ವದಲ್ಲಿರುವ ಜೀವಕೋಶಗಳಿಂದ ಉಂಟಾಗಿವೆ.

35 of 107

ಚಟುವಟಿಕೆ

  • ಎಳೆಗಳ ತೆಳುಪದರ, ಈರುಳ್ಳಿ ಬೇರಿನ ತುದಿ ಅಥವಾ ವಿವಿಧ ಗಾತ್ರದ ಈರುಳ್ಳಿಯ ತೆಳುವಾದ ಪೊರೆಗಳಿಂದ ತಾತ್ಕಾಲಿಕ ಸ್ಲೈಡ್‍ಗಳನ್ನು ನಾವು ತಯಾರಿಸಬಹುದು.

  • ಈ ಮೇಲಿನ ಚಟುವಟಿಕೆಯನ್ನು ಕೈಗೊಂಡ ನಂತರ ಈ ಕೆಳಗಿನ ಪ್ರಶ್ನೆಗಳಿಗೆ ಯಾವ ಉತ್ತರವಿರಬಹುದು ಎಂದು ನೋಡೋಣ.

  1. ಎಲ್ಲಾ ಜೀವಕೋಶಗಳೂ ರೂಪ ಮತ್ತು ಗಾತ್ರದಲ್ಲಿ ಒಂದೇ ರೀತಿಯಾಗಿ ಕಾಣುತ್ತವೆಯೇ?

  • ಎಲ್ಲಾ ಜೀವಕೋಶಗಳು ರಚನೆಯಲ್ಲಿ ಒಂದೇ ರೀತಿಯಾಗಿವೆಯೇ?

  • ಸಸ್ಯದ ಬೇರೆ ಬೇರೆ ಭಾಗಗಳಲ್ಲಿರುವ ಜೀವಕೋಶಗಳ ಮಧ್ಯೆ ವ್ಯತ್ಯಾಸಗಳನ್ನು ನಾವು ಗಮನಿಸಬಹುದೇ?

  • ಜೀವಕೋಶಗಳ ಮಧ್ಯೆ ಯಾವ ಹೋಲಿಕೆಗಳನ್ನು ನಾವು ಗಮನಿಸಬಹುದು?

36 of 107

  • ಕೆಲವು ಜೀವಿಗಳು ವಿವಿಧ ರೀತಿಯ ಜೀವಕೋಶಗಳನ್ನು ಹೊಂದಿವೆ

  • ಜೀವಕೋಶಗಳ ಆಕಾರ ಮತ್ತು ಗಾತ್ರವು ಅವು ನಿರ್ವಹಿಸುವ ನಿರ್ದಿಷ್ಟ ಕಾರ್ಯಗಳಿಗೆ ಸಂಬಂಧಿಸಿದೆ.

  • ಕೆಲವು ಸಂದರ್ಭಗಳಲ್ಲಿ ನಿರ್ದಿಷ್ಟ ಜೀವಕೋಶದ ಆಕಾರವು ಹೆಚ್ಚು ಕಡಿಮೆ ಸ್ಥಿರವಾಗಿರುತ್ತದೆ ಹಾಗೂ ವಿಶಿಷ್ಟವಾಗಿರುತ್ತದೆ.

ಮನುಷ್ಯನ ದೇಹದಲ್ಲಿರುವ ಕೆಲವು ಕೋಶಗಳು

37 of 107

  • ಪ್ರತೀ ಜೀವಂತ ಜೀವಕೋಶವು ಎಲ್ಲಾ ಜೀವಿಗಳ ಗುಣಲಕ್ಷಣಗಳಾದ ಕೆಲವು ಮೂಲ ಕ್ರಿಯೆಗಳನ್ನು ನಿರ್ವಹಿಸುವ ಸಾಮಥ್ರ್ಯವನ್ನು ಹೊಂದಿದೆ. ಒಂದು ಜೀವಂತ ಕೋಶವು ಈ ಮೂಲ ಕ್ರಿಯೆಗಳನ್ನು ಹೇಗೆ ನಿರ್ವಹಿಸುತ್ತದೆ?

  • ಮನುಷ್ಯರಂತಹ ಬಹುಕೋಶೀಯ ಜೀವಿಗಳಲ್ಲಿ ದೇಹದ ವಿವಿಧ ಭಾಗಗಳು ವಿವಿಧ ಕಾರ್ಯಗಳನ್ನು ನಿರ್ವಹಿಸುತ್ತವೆ.

  • ಉದಾ:ಮನುಷ್ಯ ದೇಹವು ಹೃದಯವನ್ನು ಹೊಂದಿದ್ದು, ಅದು ರಕ್ತವನ್ನು ಪಂಪ್ ಮಾಡುತ್ತದೆ.

38 of 107

  • ಇದೇ ರೀತಿಯ ಕಾರ್ಯ ಹಂಚಿಕೆಯು ಒಂದೇ ಜೀವಕೋಶದಲ್ಲೂ ಕಂಡುಬರುತ್ತದೆ. ವಾಸ್ತವವಾಗಿ ಜೀವಕೋಶದಲ್ಲಿ ನಿರ್ದಿಷ್ಟ ಕಾರ್ಯಗಳನ್ನು ನಿರ್ವಹಿಸುವ ಜೀವಂತ ರಚನೆಗಳಿದ್ದು ಅವುಗಳನ್ನು ಕಣದಂಗಗಳು ಎನ್ನುವರು.

  • ಪ್ರತಿಯೊಂದು ಕಣದಂಗವೂ ನಿರ್ದಿಷ್ಟ ಕಾರ್ಯವನ್ನು ನಿರ್ವಹಿಸುತ್ತದೆ. ಉದಾಹರಣೆಗೆ, ಜೀವಕೋಶದೊಳಗೆ ಹೊಸ ವಸ್ತುವನ್ನು ತಯಾರಿಸುವುದು, ಉತ್ಪತ್ತಿಯಾದ ತ್ಯಾಜ್ಯವಸ್ತುಗಳನ್ನು ಹೊರಹಾಕುವುದು ಇತ್ಯಾದಿ.

  • ಒಂದು ಕೋಶವು ಜೀವಂತವಾಗಿದ್ದು ಎಲ್ಲಾ ಕಾರ್ಯಗಳನ್ನು ನಿರ್ವಹಿಸಲು ಈ ಕಣದಂಗಗಳೇ ಕಾರಣ. ಈ ಕಣದಂಗಗಳು ಒಟ್ಟುಗೂಡಿ ಮೂಲ ಘಟಕವಾದ ಜೀವಕೋಶವನ್ನು ರೂಪಿಸಿವೆ.

  • ಜೀವಕೋಶಗಳ ಕಾರ್ಯ ಯಾವುದೇ ಆಗಿರಲಿ ಮತ್ತು ಅವು ಯಾವುದೇ ಜೀವಿಗಳಲ್ಲಿ ಕಂಡುಬಂದಿರಲಿ ಎಲ್ಲಾ ಜೀವಕೋಶಗಳೂ ಒಂದೇ ರೀತಿಯ ಕಣದಂಗಗಳನ್ನು ಹೊಂದಿರುವುದು ಆಸಕ್ತಿದಾಯಕ ಸಂಗತಿಯಾಗಿದೆ.

ಕಣದಂಗಗಳು

39 of 107

ಜೀವಕೋಶ ಮತ್ತು ಅದರ ಕಣದಂಗಗಳು

40 of 107

ಕಲಿಕಾ ಹಾಳೆ ಚಟುವಟಿಕೆ 1.3

ಈ ಕೆಳಗಿನ ವಿವಿಧ ಜೀವಕೋಶಗಳನ್ನು ಗುರುತಿಸಿ,ಹೆಸರಿಸು.

1.

2.

3.

4.

5.

6.

7.

41 of 107

  1. ಜೀವಕೋಶಗಳನ್ನು ಯಾರು ಆವಿಷ್ಕರಿಸಿದರು ಮತ್ತು ಹೇಗೆ?

  • ಜೀವಕೋಶವನ್ನು ಜೀವಿಯ ರಚನೆಯ ಮತ್ತು ಕಾರ್ಯನಿರ್ವಹಣೆಯ ಮೂಲ ಘಟಕ ಎಂದು ಏಕೆ ಕರೆಯುತ್ತಾರೆ?

ಪ್ರಶ್ನೆಗಳು:

42 of 107

ಜೀವಕೋಶದ ರಚನೆ

Structure of a cell

https://youtu.be/yz3im4lcD5Y

https://youtu.be/1Z9pqST72is

ಜೀವಕೋಶ (cell)

A Tour of the Cell

43 of 107

ಜೀವಕೋಶವು ಯಾವುದರಿಂದ ಮಾಡಲ್ಪಟ್ಟಿದೆ? ಜೀವಕೋಶದ ರಚನಾತ್ಮಕ ವ್ಯವಸ್ಥೆಗಳು ಯಾವುವು?

  • ನಾವು ಒಂದು ಜೀವಕೋಶವನ್ನು ಸೂಕ್ಷ್ಮದರ್ಶಕದ ಅಡಿಯಲ್ಲಿ ಅಭ್ಯಾಸ ಮಾಡುವಾಗ ಮೂರು ರಚನೆಗಳನ್ನು ಬಹುತೇಕ ಪ್ರತಿಯೊಂದು ಜೀವಕೋಶದಲ್ಲಿ ಗಮನಿಸುತ್ತೇವೆ.

  • ಕೋಶಪೊರೆ (plasma membrane)
  • ಕೋಶಕೇಂದ್ರ (nucleus) ಮತ್ತು
  • ಕೋಶದ್ರವ್ಯ (cytoplasm).

  • ಜೀವಕೋಶದೊಳಗಿನ ಚಟುವಟಿಕೆಗಳು ಮತ್ತು ಹೊರಗಿನ ಪರಿಸರದೊಂದಿಗಿನ ಜೀವಕೋಶದ ವರ್ತನೆಗಳು ಸಾಧ್ಯವಾಗುವುದು ಈ ವಿಶಿಷ್ಟ ರಚನೆಗಳಿಂದಾಗಿಯೇ. ಇದು ಹೇಗೆ ಎಂಬುದನ್ನು ನಾವೀಗ ನೋಡೋಣ.

ಒಂದು ಜೀವಕೋಶವು ಹೇಗೆ ವ್ಯವಸ್ಥೆಗೊಳಿಸಲ್ಪಟ್ಟಿದೆ?

44 of 107

45 of 107

ಕಲಿಕಾ ಹಾಳೆ ಚಟುವಟಿಕೆ 1.4

ಈ ಕೆಳಗಿನ ಚಿತ್ರದಲ್ಲಿನ ಭಾಗಗಳನ್ನು ಗುರುತಿಸು

46 of 107

ಕಲಿಕಾ ಫಲ – 02

ಜೀವಕೋಶದಲ್ಲಿ ನಡೆಯುವ ಪ್ರಕ್ರಿಯೆಗಳು

47 of 107

ಕೋಶಪೊರೆ (plasma membrane or cell membrane)

  • ಇದು ಜೀವಕೋಶದ ಒಳಗಿನ ಭಾಗಗಳನ್ನು ಹೊರಗಿನ ಪರಿಸರದಿಂದ ಬೇರ್ಪಡಿಸುವ ಅತ್ಯಂತ ಹೊರಗಿನ ಹೊದಿಕೆ. ಕೋಶಪೊರೆಯು ಜೀವಕೋಶದ ಒಳಗೆ ಹೋಗುವ ಮತ್ತು ಹೊರಬರುವ ಕೆಲವು ವಸ್ತುಗಳ ಚಲನೆಯನ್ನೂ ನಿಯಂತ್ರಿಸುತ್ತದೆ. ಇದು ಕೆಲವು ವಸ್ತುಗಳ ಚಲನೆಯನ್ನು ತಡೆಗಟ್ಟುತ್ತದೆ. ಆದ್ದರಿಂದ ಕೋಶಪೊರೆಯನ್ನು 'ಅರೆವ್ಯಾಪ್ಯ ಪೊರೆ' (selectively permeable membrane) ಎಂದು ಕರೆಯುತ್ತಾರೆ.

48 of 107

  • ಕಾರ್ಬನ್ ಡೈಆಕ್ಸೈಡ್ ಅಥವಾ ಆಕ್ಸಿಜನ್‍ನಂತಹ ಕೆಲವು ವಸ್ತುಗಳು ಕೋಶಪೊರೆಯ ಮೂಲಕ ಚಲಿಸುತ್ತವೆ. ಈ ಪ್ರಕ್ರಿಯೆಯನ್ನು ವಿಸರಣೆ (diffusion) ಎಂದು ಕರೆಯುತ್ತೇವೆ.

  • ವಸ್ತುಗಳು ಅಧಿಕ ಸಾರತೆಯ ಪ್ರದೇಶದಿಂದ ಕಡಿಮೆ ಸಾರತೆಯ ಪ್ರದೇಶಕ್ಕೆ ಸಹಜವಾಗಿ ಚಲಿಸುವುದನ್ನು ನಾವು ಗಮನಿಸಿದ್ದೇವೆ. ಜೀವಕೋಶದಲ್ಲೂ ಇದೇ ಮಾದರಿಯಲ್ಲಿ ವಸ್ತುಗಳ ಚಲನೆ ಕಂಡುಬರುತ್ತದೆ.
  • ಕೋಶಪೊರೆ
  • ಉದಾಹರಣೆ: ಕಾರ್ಬನ್ ಡೈಆಕ್ಸೈಡ್ (ಕೋಶದಿಂದ ಹೊರ ಹಾಕಬೇಕಾದ ಕೋಶತ್ಯಾಜ್ಯ) ನಂತಹ ವಸ್ತುಗಳು ಅಧಿಕ ಸಾರತೆಯಲ್ಲಿ ಜೀವಕೋಶದೊಳಗೆ ಸಂಗ್ರಹವಾಗುತ್ತದೆ. ಇದಕ್ಕೆ ಹೋಲಿಸಿದರೆ ಜೀವಕೋಶದ ಹೊರಗಿನ ಪರಿಸರದಲ್ಲಿ ಕಾರ್ಬನ್ ಡೈಆಕ್ಸೈಡ್ ಸಾರತೆ ಕಡಿಮೆ ಇರುತ್ತದೆ.

  • ಜೀವಕೋಶದೊಳಗೆ ಮತ್ತು ಹೊರಗೆ ಕಾರ್ಬನ್‍ಡೈಆಕ್ಸೈಡ್ ಸಾರತೆಯಲ್ಲಿ ವ್ಯತ್ಯಾಸ ಕಂಡುಬಂದ ಕೂಡಲೇ ಕಾರ್ಬನ್‍ಡೈಆಕ್ಸೈಡ್ ಅಧಿಕ ಸಾರತೆ ಪ್ರದೇಶದಿಂದ ಕಡಿಮೆ ಸಾರತೆ ಪ್ರದೇಶಕ್ಕೆ ವಿಸರಣೆ ಪ್ರಕ್ರಿಯೆಯಿಂದ ಜೀವಕೋಶದೊಳಗಿನಿಂದ ಹೊರಗೆ ಚಲಿಸುತ್ತದೆ.

ಕೋಶಪೊರೆ - ವಿಸರಣೆ

49 of 107

  • ಅದೇ ರೀತಿ ಜೀವಕೋಶದೊಳಗೆ ಆಕ್ಸಿಜನ್‍ನ ಸಾರತೆ ಕಡಿಮೆಯಾಗುತ್ತಿದ್ದಂತೆ ವಿಸರಣೆ ಪ್ರಕ್ರಿಯೆಯಿಂದ ಆಕ್ಸಿಜನ್ ಜೀವಕೋಶದೊಳಗೆ ಪ್ರವೇಶಿಸುತ್ತದೆ.

  • ಈ ರೀತಿ, ವಿಸರಣೆ ಕ್ರಿಯೆಯು ಜೀವಕೋಶಗಳ ನಡುವೆ ಮತ್ತು ಜೀವಕೋಶ ಹಾಗೂ ಅದರ ಹೊರಗಿನ ಪರಿಸರದ ನಡುವೆ ನಡೆಯುವ ಅನಿಲಗಳ ವಿನಿಮಯದಲ್ಲಿ ಪ್ರಮುಖ ಪಾತ್ರವಹಿಸುತ್ತದೆ.

  • ಅರೆವ್ಯಾಪ್ಯ ಪೊರೆಯ ಮೂಲಕ ನೀರಿನ ಅಣುಗಳ ಚಲನೆಗೆ ಅಭಿಸರಣೆ (osmosis) ಎಂದು ಹೆಸರು.

  • ನೀರಿನಲ್ಲಿ ಕರಗಿರುವ ವಸ್ತುಗಳ ಪ್ರಮಾಣವು ಕೋಶಪೊರೆಯ ಮೂಲಕ ಚಲಿಸುವ ನೀರಿನ ಮೇಲೆ ಪ್ರಭಾವ ಬೀರುತ್ತದೆ.

  • ಆದ್ದರಿಂದ ಅಭಿಸರಣೆ ಎನ್ನುವುದು ನೀರಿನ ಅಣುಗಳು ಅಧಿಕ ಸಾರತೆಯ ಪ್ರದೇಶದಿಂದ ಕಡಿಮೆ ಸಾರತೆಯ ಪ್ರದೇಶಕ್ಕೆ ಅರೆವ್ಯಾಪ್ಯ ಪೊರೆಯ ಮೂಲಕ ಹಾದು ಹೋಗುವ ಕ್ರಿಯೆ.

ಕೋಶಪೊರೆ - ವಿಸರಣೆ

50 of 107

ಈ ಕೆಳಗಿನ ಮೂರು ಕ್ರಿಯೆಗಳಲ್ಲಿ ಯಾವುದಾದರೊಂದು ಕ್ರಿಯೆ ಜರುಗಬಹುದು

ಸಕ್ಕರೆಯ ಅಥವಾ ಉಪ್ಪಿನ ದ್ರಾವಣದಲ್ಲಿ ಒಂದು ಪ್ರಾಣಿ ಜೀವಕೋಶ ಅಥವಾ ಸಸ್ಯ ಜೀವಕೋಶವನ್ನು ಇರಿಸಿದರೆ ಏನಾಗಬಹುದು ??

51 of 107

.

  1. ಜೀವಕೋಶವನ್ನು ಆವರಿಸಿದ ಮಾಧ್ಯಮದ ನೀರಿನ ಸಾರತೆಯು ಜೀವಕೋಶದೊಳಗಿನ ನೀರಿನ ಸಾರತೆಗಿಂತ ಹೆಚ್ಚಾಗಿದ್ದಲ್ಲಿ ಅಂದರೆ ಜೀವಕೋಶವನ್ನು ಆವರಿಸಿದ ದ್ರಾವಣವು ಅತಿ ದುರ್ಬಲವಾಗಿದ್ದರೆ ಅಭಿಸರಣೆಯಿಂದ ಜೀವಕೋಶವು ನೀರನ್ನು ಪಡೆಯುತ್ತದೆ. ಇಂತಹ ದ್ರಾವಣವನ್ನು ಅತಿ ಕಡಿಮೆ ಸಾರತೆ (hypotonic solution) ದ್ರಾವಣ ಎನ್ನುವರು.

  • ನೀರಿನ ಅಣುಗಳು ಕೋಶಪೊರೆಯ ಮೂಲಕ ಎರಡೂ ದಿಕ್ಕಿನಲ್ಲಿ ಸರಾಗವಾಗಿ ಚಲಿಸುತ್ತವೆ. ಆದರೆ ಜೀವಕೋಶದಿಂದ ಹೊರಗೆ ಹೋಗುವುದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ನೀರು ಜೀವಕೋಶದೊಳಗೆ ಚಲಿಸುತ್ತದೆ. ಒಟ್ಟಾರೆ ಇದರ ಪರಿಣಾಮವಾಗಿ ನೀರು ಜೀವಕೋಶವನ್ನು ಪ್ರವೇಶಿಸುತ್ತದೆ. ಇದರಿಂದ ಜೀವಕೋಶವು ಉಬ್ಬುವ ಸಾಧ್ಯತೆ ಇದೆ.

52 of 107

2. ಜೀವಕೋಶವನ್ನು ಆವರಿಸಿದ ಮಾಧ್ಯಮದ ನೀರಿನ ಸಾರತೆಯು ನಿಖರವಾಗಿ ಜೀವಕೋಶದೊಳಗಿನ ನೀರಿನ ಸಾರತೆಯಷ್ಟೇ ಇದ್ದರೆ ಕೋಶಪೊರೆಯ ಮೂಲಕ ನೀರಿನ ಕಣಗಳ ಚಲನೆ ಇರುವುದಿಲ್ಲ. ಇಂತಹ ದ್ರಾವಣವನ್ನು ಸಮಸಾರತೆ ದ್ರಾವಣ (isotonic solution) ಎನ್ನುವರು.

ನೀರಿನ ಅಣುಗಳು ಕೋಶಪೊರೆಯ ಎರಡೂ ದಿಕ್ಕಿನಲ್ಲಿ ಸರಾಗವಾಗಿ ಚಲಿಸುತ್ತವೆ ಆದರೆ ಜೀವಕೋಶದ ಒಳಗೆ ಬರುವ ನೀರಿನ ಪ್ರಮಾಣವು ಹೊರಗೆ ಹೋಗುವ ನೀರಿನ ಪ್ರಮಾಣದಷ್ಟೇ ಇರುತ್ತದೆ. ಆದ್ದರಿಂದ ಒಟ್ಟಾರೆಯಾಗಿ ನೀರಿನ ಚಲನೆ ಇರುವುದಿಲ್ಲ. ಜೀವಕೋಶವು ಮೂಲ ಗಾತ್ರದಲ್ಲೇ ಇರುತ್ತದೆ.

53 of 107

3. ಜೀವಕೋಶವನ್ನು ಅವರಿಸಿದ ಮಾಧ್ಯಮದ ನೀರಿನ ಸಾರತೆಯು ಜೀವಕೋಶದೊಳಗಿನ ನೀರಿನ ಸಾರತೆಗಿಂತ ಕಡಿಮೆಯಾಗಿದ್ದಲ್ಲಿ ಅಂದರೆ ಜೀವಕೋಶವನ್ನು ಆವರಿಸಿದ ದ್ರಾವಣವು ಪ್ರಬಲವಾಗಿದ್ದರೆ, ಜೀವಕೋಶವು ಅಭಿಸರಣೆಯಿಂದ ನೀರನ್ನು ಕಳೆದುಕೊಳ್ಳುತ್ತದೆ. ಅಂತಹ ದ್ರಾವಣವನ್ನು ಅಧಿಕ ಸಾರತೆ ದ್ರಾವಣ (hypertonic solution) ಎನ್ನುವರು.

ಪುನಃ ನೀರು ಕೋಶಪೊರೆಯ ಮೂಲಕ ಎರಡೂ ದಿಕ್ಕಿನಲ್ಲಿ ಚಲಿಸುತ್ತದೆ. ಆದರೆ ಈ ಬಾರಿ ಜೀವಕೋಶದ ಒಳಗೆ ಹೋಗುವುದಕ್ಕಿಂತ ಹೆಚ್ಚಿನ ಪ್ರಮಾಣದ ನೀರು ಜೀವಕೋಶದಿಂದ ಹೊರಗೆ ಚಲಿಸುತ್ತದೆ. ಅದ್ದರಿಂದ ಜೀವಕೋಶವು ಮುದುಡುತ್ತದೆ.

54 of 107

1.ವಿಸರಣೆ (Diffusion) :

ಪ್ರಯೋಗ :ಒಂದು ಗಾಜಿನ ಲೋಟದಲ್ಲಿ ನೀರು ಹಾಕಿ. ಅದಕ್ಕೆ ಒಂದು ಹನಿ ನೀಲಿ ಶಾಹಿ ಹಾಕಿ, ಏನಾಗುವುದು ಎಂದು ಗಮನಿಸಿ ನಿಮ್ಮ ವೀಕ್ಷಣೆಯನ್ನು ತಿಳಿಸಿ.

ವ್ಯಾಖ್ಯಾನ: ವಸ್ತುಗಳು ಅಧಿಕ ಸಾರತೆಯ ಪ್ರದೇಶದಿಂದ ಕಡಿಮೆ ಸರತೆಯ ಪ್ರದೇಶಕ್ಕೆ ಸಹಜವಾಗಿ ಚಲಿಸುವುದನ್ನು ವಿಸಾರಣೆ ಎನ್ನುವರು.

ಜೀವಕೋಶದಲ್ಲಿ ಕಾರ್ಬನ್ ಡೈಆಕ್ಸೈಡ್ ಮತ್ತು ಆಕ್ಸಿಜನ್ ನಂತಹ ಕೆಲವು ವಸ್ತುಗಳು ಕೋಶಪೊರೆಯ ಮೂಲಕ ವಿತರಣೆ ಕ್ರಿಯೆಯ ಮೂಲಕ ಚಲಿಸುತ್ತವೆ.

ಈ ರೀತಿ, ವಿಸರಣೆ ಕ್ರಿಯೆಯು ಜೀವಕೋಶಗಳ ನಡುವೆ ಮತ್ತು ಜೀವಕೋಶ ಹಾಗೂ ಅದರ ಹೊರಗಿನ ಪರಿಸರದ ನಡುವೆ ನಡೆಯುವ ಅನಿಲಗಳ ವಿನಿಮಯದಲ್ಲಿ ಪ್ರಮುಖ ಪಾತ್ರವಹಿಸುತ್ತದೆ.

ಚಟುವಟಿಕೆ 2.1

55 of 107

ಚಟುವಟಿಕೆ 2.2

2.ಅಭಿಸರಣೆ (Osmosis):

ಪ್ರಯೋಗ :ಒಂದು ದೊಡ್ಡ ಆಲೂಗಡ್ಡೆಯನ್ನು ತೆಗೆದುಕೊಂಡು ಅದರ ಸಿಪ್ಪೆ ತೆಗೆದು ,ಅದನ್ನು ಬಟ್ಟಲಿನಾಕಾರದಲ್ಲಿ ಕತ್ತರಿಸಿ ಅದರಲ್ಲಿ ಒಂದು ಕುಳಿ ಮಾಡಿ ಅದರಲ್ಲಿ ಸಕ್ಕರೆಯ ದ್ರಾವಣ ಸ್ವಲ್ಪ ಹಾಕಿ ಅದರ ಮಟ್ಟವನ್ನು ಒಂದು ಗುಂಡು ಸೂಜಿಯಿಂದ ಗುರುತಿಸಿ ಈ ಆಲೂಗಡ್ಡೆ ಬಟ್ಟಲನ್ನು ನೀರಿರುವ ಒಂದು ಬಟ್ಟಲಿನಲ್ಲಿ ಹಾಕಿ ಗಂಟೆಗಳ ನಂತರ ಸಕ್ಕರೆಯ ಮಟ್ಟವು ಹೆಚ್ಚಾಗಿರುವುದನ್ನು ಗಮನಿಸಿ.

56 of 107

Osmosis in a Potato (Kannada)

57 of 107

ಚಟುವಟಿಕೆ 2.3

ಕೆಳಗಿನ ನಿದರ್ಶನಗಳಲ್ಲಿ ವಿಸರಣೆ ಅಥವಾ ಅಭಿಸರಣ ಕ್ರಿಯೆ ನಡೆದಿದೆ ಎಂದು ತಿಳಿಸಿ.

1.ಆಟವಾಡಿಕೊಂಡು ಬಂದ ನಿನ್ನ ಪಕ್ಕದಲ್ಲಿ ಕುಳಿತ ಸ್ನೇಹಿತನಿಂದ ಬೆವರಿನ ವಾಸನೆ ಬರುತ್ತಿದೆ.________

2.ಹೆಚ್ಚು ಸಮಯ ನೀರಿನಲ್ಲಿ ಇದ್ದ ನಿನ್ನ ಬೆರಳುಗಳು ಸುಕ್ಕುಗಟ್ಟಿವೆ.________

3.ಪಕ್ಕದ ಮನೆಯಲ್ಲಿ ಏನು ವಿಶೇಷ ತಿನಿಸು ತಯಾರಿಸುತ್ತಿರುವ ವಾಸನೆ ಬರುತ್ತಿದೆ._______

4.ಗಂಟಲು ನೋವಿನಿಂದ ಉದಿಕೊಂಡಾಗ ಉಪ್ಪು ನೀರಿನಿಂದ ಬಾಯಿ ಮುಕ್ಕಳಿಸಿದಾಗ ಊತ ಕಮ್ಮಿಯಾಗಿ ನೋವು ಕಡಿಮೆಯಾಗುತ್ತದೆ._________

5.ಎರಡು ಬೆಂಚು ಮುಂದೆ ಕುಳಿತಿರುವ ನಿನ್ನ ಸ್ನೇಹಿತೆಯಿಂದ ಸುಗಂಧದ್ರವ್ಯದ ವಾಸನೆ ಬರುತ್ತಿದೆ.______

6.ತರಕಾರಿ ಮಾರುವವನು ಆಗಾಗ್ಗೆ ತರಕಾರಿಗಳ ಮೇಲೆ ನೀರನ್ನು ಸಿಂಪಡಿಸಿ ಇರುತ್ತಾನೆ.________

58 of 107

ಚಟುವಟಿಕೆ 2.4

ವಿಸರಣೆ ಮತ್ತು ಅಭಿಸರಣೆ ಕ್ರಿಯೆಗಳನ್ನು ಹೋಲಿಸಿ ಕೆಳಗೆ ನೀಡಿರುವ ವಾಕ್ಯಗಳನ್ನು ಬಳಸಿ ವೆನ್ ನಕ್ಷೆಯನ್ನು ತುಂಬಿರಿ.

A)ಅರೆವ್ಯಾಪ್ಯ ಪೊರೆಯ ಅಗತ್ಯವಿಲ್ಲ.

B)ನೀರಿನ ಅಣುಗಳ ಚಲನೆ ಮಾತ್ರ.

C) ಯಾವುದೇ ಅತ್ಯಂತ ಚಿಕ್ಕ ವಸ್ತುಗಳ ಚಲನೆ.

D) ಅರೆವ್ಯಾಪ್ಯ ಪೊರೆಯ ಮೂಲಕ ಚಲನೆ.

E) ಎರಡು ದ್ರಾವಣಗಳ ಸಾರತೆ ಸಮನಾಗಿರುತ್ತವೆ.

F) ಅಧಿಕ ಸಾರತೆ ಇಂದ ಕಡಿಮೆ ಸಾರತೆಯ ಪ್ರದೇಶಕ್ಕೆ ಚಲನೆ

ವಿಸರಣೆ

ಅಭಿಸರಣೆ

59 of 107

ನಿಮಗಿದು ತಿಳಿದಿರಲಿ

ಜೀವಕೋಶಗಳಲ್ಲಿ ಅಭಿಸರಣೆಯು ಮೂರು ಕ್ರಿಯೆಗಳಲ್ಲಿ ತಿರುಗಬಹುದು

ಅತಿ ಕಡಿಮೆ ಸಾರತೆ ದ್ರಾವಣ

Hypotonic solution

ಸಮ ಸಾರತೆಯ ದ್ರಾವಣ

Isotonic solution

ಅಧಿಕ ಸಾರತೆಯ ದ್ರಾವಣ

Hypertonic solution

ಮಾಧ್ಯಮದ ನೀರಿನ ಸಾರತೆ ಜೀವಕೋಶದೊಳಗಿನ ನೀರಿನ ಸಾರತೆಗಿಂತ ಹೆಚ್ಚಾಗಿರುತ್ತದೆ.

ಜೀವಕೋಶವನ್ನು ಆವರಿಸಿದ ಮಾಧ್ಯಮದ ನೀರಿನ ಸಾರತೆಯ ನಿಖರವಾಗಿ ಜೀವಕೋಶದೊಳಗಿನ ನೀರಿನ ಸಾರತೆ ಅಷ್ಟೇ ಇರುತ್ತದೆ.

ಮಾಧ್ಯಮದ ನೀರಿನ ಸಾರತೆಯು ಜೀವಕೋಶದೊಳಗಿನ ನೀರಿನ ಸಾರತೆಗಿಂತ ಕಡಿಮೆ ಇರುತ್ತದೆ.

ಜೀವಕೋಶವು ಉಬ್ಬುತ್ತದೆ.

ಜೀವಕೋಶ ಮೂಲ ಗಾತ್ರದಲ್ಲೆ

ಇರುತ್ತದೆ.

ಜೀವಕೋಶ ಮುದುಡುತ್ತದೆ.

60 of 107

ಕಲಿಕಾ ಹಾಳೆ ಚಟುವಟಿಕೆ 2.5

ಪ್ರಯೋಗ:

ಈ ಮೇಲಿನ ಅಂಶಗಳನ್ನು ಗಮನದಲ್ಲಿರಿಸಿಕೊಂಡು ಪ್ರಯೋಗವನ್ನು ಕೈಗೊಳ್ಳಿರಿ.

ಕೆಲವು ಒಣದ್ರಾಕ್ಷಿಗಳನ್ನು ನೀರಿನಲ್ಲಿ ಹಾಕಿ ಸ್ವಲ್ಪ ಕಾಲ ಬಿಡಿ ನಂತರ ಅವುಗಳನ್ನು ಪ್ರಬಲ ಸಕ್ಕರೆಯ ದ್ರಾವಣದಲ್ಲಿ ಇರಿಸಿ ನೀವು ಈ ಕೆಳಗಿನ ಬದಲಾವಣೆಗಳನ್ನು ಕಾಣುವಿರಿ.

1.ನೀರಿನಲ್ಲಿ ಹಾಕಿದಾಗ ಒಣದ್ರಾಕ್ಷಿಯ ನೀರನ್ನು ಹೀರಿಕೊಂಡು ಉಬ್ಬಿ ಕೊಂಡಿರುತ್ತದೆ.

2.ಆದರೆ ಪುನಹ ಅವುಗಳನ್ನು ಸಕ್ಕರೆ ದ್ರಾವಣದಲ್ಲಿ ಇರಿಸಿದಾಗ ತಮ್ಮವರನ್ನು ಕಳೆದುಕೊಂಡು ಗಾತ್ರದಲ್ಲಿ ಸಂಕುಚಿಸುತ್ತದೆ.

1 ಮತ್ತು 2 ರಲ್ಲಿ ಆದ ಬದಲಾವಣೆಗೆ ಯಾವ ಕ್ರಿಯೆ ಕಾರಣ ಎಂದು ತಿಳಿಸಿ.

61 of 107

ಕಲಿಕಾ ಹಾಳೆ ಚಟುವಟಿಕೆ 2.6

ಈ ಕೆಳಗಿನ ಸಸ್ಯಜೀವಕೋಶದಲ್ಲಿ ಜರುಗಿರುವ ಅಭಿಸರಣೆ ಕ್ರಿಯೆಯನ್ನು ಗುರುತಿಸಿ ಹೆಸರಿಸಿ

62 of 107

Hypotonic, Isotonic, Hypertonic solutions

Egg Osmosis

63 of 107

  • ಸಿಹಿ ನೀರಿನಲ್ಲಿ ವಾಸಿಸುವ ಏಕಕೋಶ ಜೀವಿಗಳು ಮತ್ತು ಬಹುತೇಕ ಸಸ್ಯಗಳು ಅಭಿಸರಣೆ ಕ್ರಿಯೆಯಿಂದ ನೀರನ್ನು ಪಡೆದುಕೊಳ್ಳುತ್ತವೆ. ಸಸ್ಯಗಳು ಬೇರಿನಿಂದ ನೀರನ್ನು ಹೀರಿಕೊಳ್ಳುವ ಕ್ರಿಯೆ ಕೂಡಾ ಅಭಿಸರಣೆಗೆ ಒಂದು ಉದಾಹರಣೆ.

  • ಹೀಗೆ ಒಂದು ಜೀವಕೋಶದ ಜೀವಿತಾವಧಿಯಲ್ಲಿ ನಡೆಯುವ ಅನಿಲಗಳ ಮತ್ತು ನೀರಿನ ವಿನಿಮಯದಲ್ಲಿ ಅಭಿಸರಣೆ ಪ್ರಮುಖವಾಗಿದೆ. ಇದರ ಜೊತೆಗೆ ಜೀವಕೋಶವು ತನ್ನ ಪರಿಸರದಿಂದ ಪೋಷಣೆಯನ್ನೂ ಪಡೆಯುತ್ತದೆ. ಶಕ್ತಿಯನ್ನು ಬಳಸಿಕೊಳ್ಳುವ ಒಂದು ವಿಧದ ಸಾಗಾಣಿಕಾ ಕ್ರಿಯೆಯಲ್ಲಿ ವಿವಿಧ ಅಣುಗಳು ಜೀವಕೋಶದ ಒಳಗೆ ಮತ್ತು ಹೊರಗೆ ಚಲಿಸುತ್ತವೆ.

  • ಕೋಶಪೊರೆಯು(cell membrane) ನಮ್ಯವಾಗಿದ್ದು ಸಾವಯವ ಅಣುಗಳಾದ ಲಿಪಿಡ್ ಮತ್ತು ಪ್ರೋಟೀನ್‍ಗಳಿಂದ ಮಾಡಲ್ಪಟ್ಟಿದೆ. ಆದರೂ ಇಲೆಕ್ಟ್ರಾನ್ ಸೂಕ್ಷ್ಮದರ್ಶಕದ ಸಹಾಯದಿಂದ ಮಾತ್ರ ನಾವು ಕೋಶಪೊರೆಯ ರಚನೆಯನ್ನು ವೀಕ್ಷಿಸಬಹುದು.

ಎಲೆಕ್ಟ್ರಾನ್ ಮೈಕ್ರೋಸ್ಕೋಪ್ ನಲ್ಲಿ ಜೀವಕೋಶ

64 of 107

  • ಕೋಶಪೊರೆಯ ನಮ್ಯತೆಯಿಂದಾಗಿ ಜೀವಕೋಶವು ತನ್ನ ಹೊರಗಿನ ಪರಿಸರದಿಂದ ಆಹಾರ ಮತ್ತು ಇತರ ವಸ್ತುಗಳನ್ನು ತನ್ನೊಳಗೆ ತೆಗೆದುಕೊಳ್ಳಲು ಸಾಧ್ಯವಾಗಿದೆ. ಈ ಪ್ರಕ್ರಿಯೆಯನ್ನು ಎಂಡೋಸೈಟೋಸಿಸ್ (Endocytosis) ಎನ್ನುವರು. ಈ ವಿಧಾನದಿಂದ ಅಮೀಬಾವು ತನ್ನ ಆಹಾರವನ್ನು ಪಡೆಯುತ್ತದೆ.

ಅಮೀಬಾ

65 of 107

  1. ಕಾರ್ಬನ್ ಡೈಆಕ್ಸೈಡ್ ಮತ್ತು ನೀರಿನಂತಹ ವಸ್ತುಗಳು ಜೀವಕೋಶದ ಒಳಗೆ ಮತ್ತು ಹೊರಗೆ ಹೇಗೆ ಚಲಿಸುತ್ತವೆ? ಚರ್ಚಿಸಿ.

  • ಕೋಶಪೊರೆಯನ್ನು ಅರೆವ್ಯಾಪ್ಯಪೊರೆ ಎಂದು ಕರೆಯಲು ಕಾರಣವೇನು ?

ಪ್ರಶ್ನೆಗಳು

66 of 107

ಕೋಶ ಬಿತ್ತಿ (cell wall):-

  • ಸಸ್ಯ ಜೀವಕೋಶಗಳು ಕೋಶಪೊರೆಯ ಜೊತೆಗೆ ಗಡುಸಾದ ಹೊರ ಪದರವನ್ನು ಹೊಂದಿದೆ. ಇದನ್ನು ಕೋಶಭಿತ್ತಿ (cell wall) ಎನ್ನುವರು.

  • ಕೋಶಭಿತ್ತಿಯು ಕೋಶಪೊರೆಯ ಹೊರಭಾಗದಲ್ಲಿದೆ. ಸಸ್ಯಗಳ ಕೋಶಭಿತ್ತಿಯು ಪ್ರಮುಖವಾಗಿ ಸೆಲ್ಯುಲೋಸ್ ಎಂಬ ವಸ್ತುವಿನಿಂದಾಗಿದೆ. ಸೆಲ್ಯುಲೋಸ್ ಒಂದು ಸಂಕೀರ್ಣ ವಸ್ತುವಾಗಿದ್ದು ಸಸ್ಯಕ್ಕೆ ಆಧಾರ ಮತ್ತು ದೃಢತೆಯನ್ನು ಕೊಡುತ್ತದೆ.
  • ಒಂದು ಸಸ್ಯದ ಜೀವಂತ ಜೀವಕೋಶವು ಅಭಿಸರಣೆ ಕ್ರಿಯೆಯಿಂದಾಗಿ ನೀರಿನಂಶವನ್ನು ಕಳೆದುಕೊಂಡಾಗ ಅದರ ಘಟಕಗಳು ಸಂಕುಚಿಸಿ ಕೋಶಭಿತ್ತಿಯಿಂದ ದೂರ ಸರಿಯುತ್ತವೆ. ಈ ವಿದ್ಯಮಾನವನ್ನು ಜೀವದ್ರವ್ಯ ಆಕುಂಚನ (plasmolysis) ಎನ್ನುವರು.

67 of 107

Activity(ಚಟುವಟಿಕೆ)

  • ರಿಯೊ (Rheo) ಸಸ್ಯದ ಎಲೆಯ ತೆಳುವಾದ ಪೊರೆಯ ಸ್ಲೈಡನ್ನು ತಯಾರಿಸಿ ಒಂದು ಸಂಕೀರ್ಣ ಸೂಕ್ಷ್ಮದರ್ಶಕದ ಅಧಿಕ ಸಾಮಥ್ರ್ಯದ ಮಸೂರದಲ್ಲಿ ಪರೀಕ್ಷಿಸಿ.

  • ಅಲ್ಲಿ ಸಣ್ಣ ಹಸಿರು ಹರಳುಗಳನ್ನು ಗಮನಿಸಿ. ಅವುಗಳನ್ನು ಕ್ಲೋರೋಪ್ಲಾಸ್ಟ್ ಎಂದು ಕರೆಯುವರು.

  • ಅವು ಹಸಿರು ಬಣ್ಣದ ವಸ್ತುವನ್ನು ಹೊಂದಿರುತ್ತವೆ ಇದನ್ನು ಪತ್ರಹರಿತ್ತು (chlorophyll) ಎನ್ನುವರು.

  • ಸ್ಲೈಡ್‍ನ ಮೇಲೆ ಆರೋಹಿಸಿದ ಎಲೆಯ ಮೇಲೆ ಸಕ್ಕರೆ ಅಥವಾ ಉಪ್ಪಿನ ಪ್ರಬಲ ದ್ರಾವಣವನ್ನು ಹಾಕಿ ಒಂದು ನಿಮಿಷದವರೆಗೆ ಕಾಯಿರಿ.

  • ನಂತರ ಸೂಕ್ಷ್ಮದರ್ಶಕದಲ್ಲಿ ವೀಕ್ಷಿಸಿ. ನಾವು ಏನನ್ನು ಗಮನಿಸುತ್ತೇವೆ ?

68 of 107

  • ಈಗ ಕೆಲವು ರಿಯೋ ಎಲೆಗಳನ್ನು ಕುದಿಯುವ ನೀರಿನಲ್ಲಿ ಕೆಲವು ನಿಮಿಷಗಳವರೆಗೆ ಇಡಿ. ಇದ ಜೀವಕೋಶಗಳನ್ನು ಕೊಲ್ಲುತ್ತದೆ. ನಂತರ ಒಂದು ಎಲೆಯನ್ನು ಸ್ಲೈಡ್‍ನ ಮೇಲಿಟ್ಟು ಸೂಕ್ಷ್ಮದರ್ಶಕದಡಿ ವೀಕ್ಷಿಸಿ. ಸ್ಲೈಡ್‍ನ ಮೇಲಿರಿಸಿದ ಎಲೆಯ ಮೇಲೆ ಸಕ್ಕರೆಯ ಅಥವಾ ಉಪ್ಪಿನ ಪ್ರಬಲ ದ್ರಾವಣವನ್ನು ಹಾಕಿ. ಒಂದು ನಿಮಿಷದವರೆಗೆ ಕಾಯಿರಿ ನಂತರ ಸೂಕ್ಷ್ಮದರ್ಶಕದಡಿಯಲ್ಲಿ ಪುನಃ ವೀಕ್ಷಿಸಿ. ನಾವು ಏನನ್ನು ಕಾಣುತ್ತೇವೆ? ಈಗ ಜೀವದ್ರವ್ಯ ಆಕುಂಚನ ಕ್ರಿಯೆ ನಡೆದಿದೆಯೆ ?

  • ಈ ಚಟುವಟಿಕೆಯಿಂದ ನಾವು ಯಾವ ನಿರ್ಣಯಕ್ಕೆ ಬರಬಹುದು ?
  • ಮೃತ ಕೋಶಗಳಲ್ಲ, ಕೇವಲ ಜೀವಂತ ಕೋಶಗಳು ಮಾತ್ರ ಅಭಿಸರಣ ಕ್ರಿಯೆಯಿಂದ ನೀರನ್ನು ಹೀರಿಕೊಳ್ಳಬಲ್ಲವು ಎಂದು ಇದರಿಂದ ತಿಳಿದುಬರುತ್ತದೆ.

69 of 107

Study of Plasmolysis

70 of 107

  • ಸಸ್ಯಗಳು, ಶಿಲೀಂಧ್ರಗಳು ಮತ್ತು ಬ್ಯಾಕ್ಟೀರಿಯಾಗಳ ಕೋಶಭಿತ್ತಿಯು ಅತಿಕಡಿಮೆ ಸಾರತೆ ಇರುವ ದ್ರವ ಮಾಧ್ಯಮದಲ್ಲಿ ಛಿದ್ರವಾಗದೆ ಉಳಿಯಬಲ್ಲದು. ಅಂತಹ ಮಾಧ್ಯಮದಲ್ಲಿ ಜೀವಕೋಶಗಳು ಅಭಿಸರಣ ಕ್ರಿಯೆಯಿಂದ ನೀರನ್ನು ಹೀರಿಕೊಳ್ಳುವ ಒಲವು ತೋರುತ್ತವೆ.

  • ಕೋಶಭಿತ್ತಿಯಿಂದ ಏರ್ಪಡುವ ಒತ್ತಡವನ್ನು ವಿರೋಧಿಸಿ ಜೀವಕೋಶಗಳು ಉಬ್ಬುತ್ತವೆ. ಉಬ್ಬಿದ ಕೋಶಗಳ ವಿರುದ್ದ ಸಮನಾದ ಒತ್ತಡವನ್ನು ಕೋಶಭಿತ್ತಿ ಹೇರುತ್ತದೆ.

  • ಪ್ರಾಣಿ ಜೀವಕೋಶಗಳಿಗೆ ಹೋಲಿಸಿದರೆ ಕೋಶಭಿತ್ತಿಯಿಂದಾಗಿ ಇಂತಹ ಜೀವಕೋಶಗಳು ತಮ್ಮ ಸುತ್ತಲಿನ ಮಾಧ್ಯಮದಲ್ಲಿ ಉಂಟಾಗುವ ಅತಿ ಹೆಚ್ಚಿನ ಬದಲಾವಣೆಗಳನ್ನು ತಡೆದುಕೊಳ್ಳಬಲ್ಲವು.

ಕೋಶ ಬಿತ್ತಿ (cell wall):-

71 of 107

  • ನಾವು ತಯಾರಿಸಿದ ಈರುಳ್ಳಿ ಪೊರೆಯ ತಾತ್ಕಾಲಿಕ ಸ್ಲೈಡ್‍ನ್ನು ನೆನಪಿಸಿಕೊಳ್ಳಿ. ನಾವು ಈರುಳ್ಳಿ ಪೊರೆಯ ಮೇಲೆ ಅಯೋಡಿನ್ ದ್ರಾವಣವನ್ನು ಹಾಕಿದ್ದೆವು ಏಕೆ ? ಅಯೋಡಿನ್ ದ್ರಾವಣ ಹಾಕದೇ ಈರುಳ್ಳಿ ಪೊರೆಯ ಸ್ಲೈಡನ್ನು ವೀಕ್ಷಿಸಲು ಪ್ರಯತ್ನಿಸಿದರೆ ನಮಗೆ ಏನು ಕಂಡುಬರುತ್ತದೆ ? ಪ್ರಯತ್ನಿಸಿ ಮತ್ತು ವ್ಯತ್ಯಾಸಗಳನ್ನು ಗಮನಿಸಿ.

  • ನಾವು ಈರುಳ್ಳಿ ಪೊರೆಯ ಮೇಲೆ ಅಯೋಡಿನ್ ದ್ರಾವಣ ಹಾಕಿದಾಗ ಪ್ರತಿಯೊಂದು ಜೀವಕೋಶವು ಸಮನಾಗಿ ಬಣ್ಣವನ್ನು ಪಡೆಯುತ್ತದೆಯೇ? ಅವುಗಳ ರಾಸಾಯನಿಕ ಸಂಯೋಜನೆಗಳಿಗನುಗುಣವಾಗಿ ಜೀವಕೋಶದ ವಿವಿಧ ಭಾಗಗಳು ವಿಭಿನ್ನವಾಗಿ ಬಣ್ಣವನ್ನು ಪಡೆಯುತ್ತವೆ.
  • ಜೀವಕೋಶದ ಕೆಲವು ಭಾಗಗಳು ಇತರ ಭಾಗಗಳಿಗಿಂತ ದಟ್ಟವಾಗಿ ಕಾಣಬಹುದು. ಅಯೋಡಿನ್ ದ್ರಾವಣದ ಬದಲಿಗೆ ನಾವು ಸ್ಯಾಫ್ರನಿನ್ ದ್ರಾವಣ ಅಥವಾ ಮೆಥಿಲಿನ್ ಬ್ಲ್ಯೂ ದ್ರಾವಣವನ್ನೂ ಸಹ ಜೀವಕೋಶಕ್ಕೆ ಬಣ್ಣ ಹಾಕಲು ಬಳಸಬಹುದು.

72 of 107

ಚಟುವಟಿಕೆ(Activity)

  • ನಾವು ಈ ಹಿಂದೆ ಈರುಳ್ಳಿಯ ಜೀವಕೋಶಗಳನ್ನು ವೀಕ್ಷಿಸಿದ್ದೇವೆ; ಈಗ ನಾವು ನಮ್ಮದೇ ದೇಹದ ಜೀವಕೋಶಗಳನ್ನು ಅಭ್ಯಾಸ ಮಾಡೋಣ.

  • ಒಂದು ಗಾಜಿನ ಸ್ಲೈಡ್‍ನ್ನು ತೆಗೆದುಕೊಂಡು ಅದರ ಮೇಲೆ ಒಂದು ಹನಿ ನೀರನ್ನು ಹಾಕಿ. ಒಂದು ಐಸ್‍ಕ್ರೀಮ್ ಚಮಚವನ್ನು ಬಳಸಿಕೊಂಡು ಕೆನ್ನೆಯ ಒಳಭಾಗವನ್ನು ಮೃದುವಾಗಿ ಕೆರೆದು ತೆಗೆಯಿರಿ.

  • ಚಮಚೆಯಲ್ಲಿ ಯಾವುದಾದರೂ ಪದಾರ್ಥ ಅಂಟಿಕೊಂಡಿದೆಯೆ ? ಒಂದು ಸೂಜಿಯ ಸಹಾಯದಿಂದ ಈ ಪದಾರ್ಥವನ್ನು ಮೊದಲೇ ಸಿದ್ಧಪಡಿಸಿಟ್ಟುಕೊಂಡಿದ್ದ ಗಾಜಿನ ಸ್ಲೈಡ್‍ಗೆ ವರ್ಗಾಯಿಸಿ, ಸಮನಾಗಿ ಹರಡಿ.

73 of 107

  • ಈ ಪದಾರ್ಥಕ್ಕೆ ಬಣ್ಣ ನೀಡಲು ಮೆಥಲೀನ್ ಬ್ಲ್ಯೂನ ಒಂದು ಹನಿ ಸೇರಿಸಿ. ಈಗ ಪದಾರ್ಥವು ಸೂಕ್ಷ್ಮದರ್ಶಕದಲ್ಲಿ ವೀಕ್ಷಿಸಲು ಸಿದ್ಧವಾಯಿತು. ಇದರ ಮೇಲೆ ಕವರ್‍ಸ್ಲಿಪ್ ಹಾಕಲು ಮರೆಯಬೇಡಿ.

  • ನಾವು ಏನನ್ನು ಗಮನಿಸುತ್ತೇವೆ ? ನಾವು ನೋಡುವ ಜೀವಕೋಶಗಳ ಆಕಾರ ಯಾವುದು? ಒಂದು ಬಿಳಿ ಹಾಳೆಯ ಮೇಲೆ ಚಿತ್ರಿಸಿ.

  • ಪ್ರತಿಜೀವಕೋಶದ ಮಧ್ಯಭಾಗದಲ್ಲಿ ದಟ್ಟವಾದ ಬಣ್ಣದ, ದುಂಡಾದ ಅಥವಾ ಅಂಡಾಕಾರದ ಚುಕ್ಕೆಯಂತಹ ರಚನೆಗಳು ಕಂಡುಬರುತ್ತವೆಯೆ ? ಈ ರಚನೆಯನ್ನು ನ್ಯೂಕ್ಲಿಯಸ್ ಎನ್ನುವರು. ಈರುಳ್ಳಿ ಪೊರೆಯ ಜೀವಕೋಶಗಳಲ್ಲೂ ಈ ರೀತಿಯ ರಚನೆಗಳು ಕಂಡು ಬಂದಿದ್ದವೇ ?

74 of 107

Human Cheek Cells

under microscope

ಮನುಷ್ಯನ ಕೆನ್ನೆಯಲ್ಲಿನ ಜೀವಕೋಶಗಳು

75 of 107

ಸಸ್ಯ ಜೀವಕೋಶ(Plant cell):-

76 of 107

ಪ್ರಾಣಿ ಜೀವಕೋಶ(Animal cell):-

77 of 107

ಜೀವಕೋಶದ ಎಲ್ಲಾ ಚಟುವಟಿಕೆಗಳನ್ನು ಸಂಯೋಜಿಸುತ್ತದೆ ಮತ್ತು ನಿಯಂತ್ರಿಸುತ್ತದೆ. ಆದ್ದರಿಂದ ಇದನ್ನು ಜೀವಕೋಶದ ಕೇಂದ್ರ ಕಾರ್ಯ ಸ್ಥಾನ ಎನ್ನುವರು.

ಕಾರ್ಯಗಳು:-

ಕೋಶಕೇಂದ್ರ (ನ್ಯೂಕ್ಲಿಯಸ್)

ಕೋಶಕೇಂದ್ರ

78 of 107

  • ಪ್ರತಿ ನ್ಯೂಕ್ಲಿಯಸ್ ಕೋಶಕೇಂದ್ರ ಪೊರೆ (ನ್ಯೂಕ್ಲಿಯಾರ್‍ಮೆಂಬ್ರೇನ್) nuclear membrane ಎಂಬ ಎರಡು ಪದರದ ಪೊರೆಯನ್ನು ಹೊಂದಿದೆ. ನ್ಯೂಕ್ಲಿಯಾರ್ ಮೆಂಬ್ರೇನ್ ರಂಧ್ರಗಳನ್ನು ಹೊಂದಿದ್ದು ಇದರ ಮೂಲಕ ವಸ್ತುಗಳು ನ್ಯೂಕ್ಲಿಯಸ್‍ನ ಒಳಭಾಗದಿಂದ ಹೊರಭಾಗಕ್ಕೆ ಅಂದರೆ ಕೋಶದ್ರವ್ಯಕ್ಕೆ ವರ್ಗಾವಣೆಗೊಳ್ಳುತ್ತದೆ.

79 of 107

  • ನ್ಯೂಕ್ಲಿಯಸ್ ಕ್ರೋಮೋಸೋಮ್‍ಗಳನ್ನು ಹೊಂದಿದೆ. ಕೋಶವಿಭಜನೆಯ ಸಮಯದಲ್ಲಿ ಮಾತ್ರ ಇವು ದಂಡಾಕಾರದ ರಚನೆಗಳಾಗಿ ಗೋಚರಿಸುತ್ತವೆ.

  • ಕ್ರೋಮೋಸೋಮ್‍ಗಳು ತಂದೆತಾಯಿಗಳಿಂದ ಮುಂದಿನ ಪೀಳಿಗೆಗೆ ವರ್ಗಾವಣೆಗೊಳ್ಳುವ ಆನುವಂಶೀಯ ಗುಣಗಳನ್ನು ಡಿ.ಎನ್.ಎ (ಡಿಆಕ್ಸಿರೈಬೋ ನ್ಯೂಕ್ಲಿಕ್ ಆಮ್ಲ) ಅಣುಗಳ ರೂಪದಲ್ಲಿ ಹೊಂದಿರುತ್ತವೆ.

  • ಕ್ರೋಮೋಸೋಮ್‍ಗಳು ಡಿ.ಎನ್.ಎ ಮತ್ತು ಪ್ರೋಟೀನ್‍ಗಳ ಸಂಯೋಜನೆಯಿಂದ ಉಂಟಾಗಿವೆ. ಜೀವಕೋಶದ ನಿರ್ಮಾಣ ಮತ್ತು ಸಂಘಟಿಸುವಿಕೆಗೆ ಬೇಕಾದ ಮಾಹಿತಿಯನ್ನು ಡಿ.ಎನ್.ಎ ಅಣುಗಳು ಹೊಂದಿರುತ್ತವೆ. ಡಿ.ಎನ್.ಎ ಅಣುವಿನ ಕ್ರಿಯಾಶೀಲ ಭಾಗಗಳನ್ನು ಜೀನ್‍ಗಳು ಎನ್ನುವರು.

  • ವಿಭಜನೆಯ ಸ್ಥಿತಿಯಲ್ಲಿರದ ಜೀವಕೋಶದಲ್ಲಿ ಈ ಡಿ.ಎನ್.ಎ ಕ್ರೋಮ್ಯಾಟಿನ್ ವಸ್ತುವಿನ ಭಾಗವಾಗಿರುತ್ತದೆ. ಕ್ರೋಮ್ಯಾಟಿನ್ ವಸ್ತುವು ಪರಸ್ಪರ ಹೆಣೆದುಕೊಂಡಿರುವ ದಾರದ ಎಳೆಗಳ ರಚನೆಯಂತೆ ಕಾಣುತ್ತದೆ.

80 of 107

  • ಜೀವಕೋಶ ವಿಭಜನೆಯ ಸಂದರ್ಭದಲ್ಲಿ ಕ್ರೋಮ್ಯಾಟಿನ್ ವಸ್ತುವು ಕ್ರೋಮೋಸೋಮ್‍ಗಳಾಗಿ ಪರಿವರ್ತನೆ ಹೊಂದುತ್ತವೆ.

  • ಜೀವಕೋಶದ ಪ್ರಜನನ ಕ್ರಿಯೆ ಅಂದರೆ ಒಂದು ಪ್ರೌಢ ಜೀವಕೋಶವು ವಿಭಜನೆ ಹೊಂದಿ ಎರಡು ಹೊಸ ಜೀವಕೋಶಗಳಾಗುವ ಪ್ರಕ್ರಿಯೆಯಲ್ಲಿ ನ್ಯೂಕ್ಲಿಯಸ್ ಪ್ರಧಾನ ಪಾತ್ರವಹಿಸುತ್ತದೆ ಅಲ್ಲದೆ, ಪರಿಸರದೊಂದಿಗೆ ಸೇರಿ ಜೀವಕೋಶದ ರಾಸಾಯನಿಕ ಚಟುವಟಿಕೆಗಳನ್ನು ನಿರ್ದೇಶಿಸುವ ಮೂಲಕ ಜೀವಕೋಶದ ಬೆಳವಣಿಗೆಯ ಹಂತ ಮತ್ತು ಪ್ರೌಢಾವಸ್ಥೆಯಲ್ಲಿ ಜೀವಕೋಶವು ಯಾವ ರೂಪವನ್ನು ಪ್ರದರ್ಶಿಸಬೇಕು ಎನ್ನುವುದರ ಬಗ್ಗೆ ನಿರ್ಣಾಯಕ ಪಾತ್ರ ವಹಿಸುತ್ತದೆ.

ಕ್ರೋಮೋಸೋಮ್‍ಗಳು

81 of 107

  • ಬ್ಯಾಕ್ಟೀರಿಯಾಗಳಂತಹ ಕೆಲವು ಜೀವಿಗಳಲ್ಲಿ ನ್ಯೂಕ್ಲಿಯಸ್ ಭಾಗವು ನ್ಯೂಕ್ಲಿಯಾರ್ ಮೆಂಬ್ರೇನ್ ಇಲ್ಲದೆ ಅಪೂರ್ಣವಾಗಿರುತ್ತದೆ. ಕೇವಲ ನ್ಯೂಕ್ಲಿಕ್ ಆಮ್ಲ ಮಾತ್ರ ಇರುವ ಇಂತಹ ಅಸ್ಪಷ್ಟ ನ್ಯೂಕ್ಲಿಯಾರ್ ಪ್ರದೇಶವನ್ನು ನ್ಯೂಕ್ಲಿಯಾಯ್ಡ್ (nucleoid) ಎಂದು ಕರೆಯುವರು.

  • ನ್ಯೂಕ್ಲಿಯಾರ್‍ಮೆಂಬ್ರೇನ್ ಇಲ್ಲದ ಜೀವಕೋಶವನ್ನು ಹೊಂದಿರುವ ಇಂತಹ ಜೀವಿಗಳನ್ನು ಪ್ರೊಕ್ಯಾರಿಯೋಟ್‍ಗಳು ಎನ್ನುವರು (Prokyaryotes: Pro- primitive or primary, ಪ್ರಾಚೀನ ಅಥವಾ ಪ್ರಥಮಾವಸ್ಥೆ, Karyote = nucleus ನ್ಯೂಕ್ಲಿಯಸ್) ನ್ಯೂಕ್ಲಿಯಾರ್ ಮೆಂಬ್ರೇನ್ ಇರುವ ಜೀವಕೋಶವನ್ನು ಹೊಂದಿರುವ ಜೀವಿಗಳಿಗೆ ಯೂಕ್ಯಾರಿಯೋಟ್‍ಗಳು ಎಂದು ಕರೆಯುವರು.

ಪ್ರೊಕ್ಯಾರಿಯೋಟ್‍ಗಳು ಮತ್ತು ಯೂಕ್ಯಾರಿಯೋಟ್‍ಗಳು:

82 of 107

  • ಯೂಕ್ಯಾರಿಯೋಟಿಕ್ ಜೀವಕೋಶಗಳ ಕೋಶದ್ರವ್ಯದಲ್ಲಿ ಕಂಡುಬರುವ ಬಹುತೇಕ ಕಣದಂಗಗಳು ಪ್ರೊಕ್ಯಾರಿಯೋಟಿಕ್ ಜೀವಕೋಶಗಳಲ್ಲಿ ಇರುವುದಿಲ್ಲ.

  • ಈ ಕಣದಂಗಗಳಿಂದ ಆಗಬೇಕಿದ್ದ ಬಹಳಷ್ಟು ಕಾರ್ಯಗಳು ಸೈಟೋಪ್ಲಾಸಮ್‍ನ ದುರ್ಬಲವಾಗಿ ಬೆಳವಣಿಗೆ ಹೊಂದಿದ ಭಾಗಗಳಿಂದ ನಿರ್ವಹಿಸಲ್ಪಡುತ್ತವೆ.
  • ದ್ಯುತಿ ಸಂಶ್ಲೇಷಣೆ (photosynthesis) ನಡೆಸುವ ಪ್ರೊಕ್ಯಾರಿಯೋಟಿಕ್ ಬ್ಯಾಕ್ಟೀರಿಯಗಳು ಸೂಕ್ಷ್ಮ ಪೊರೆಯಿಂದಾದ ಚೀಲಗಳಂತಹ ರಚನೆಗಳಲ್ಲಿ ಪತ್ರಹರಿತ್ತನ್ನು ಒಳಗೊಂಡಿದ್ದರೆ, ಯೂಕ್ಯಾರಿಯೋಟಿಕ್ ಜೀವಕೋಶಗಳು ಪ್ಲಾಸ್ಟಿಡ್‍ಗಳಲ್ಲಿ ಪತ್ರಹರಿತ್ತನ್ನು ಹೊಂದಿವೆ.

83 of 107

ಕೋಶದ್ರವ್ಯ (cytoplasm)

  • ಈರುಳ್ಳಿ ಪೊರೆಯ ಮತ್ತು ಮಾನವನ ಗಲ್ಲಗಳ ಒಳಭಾಗದ ಜೀವಕೋಶಗಳ ತಾತ್ಕಾಲಿಕ ಸ್ಲೈಡ್‍ನ್ನು ವೀಕ್ಷಿಸಿದಾಗ ನಮಗೆ ಜೀವಕೋಶದಲ್ಲಿ ಕೋಶಪೊರೆಯಿಂದ ಆವೃತವಾದ ವಿಶಾಲ ಪ್ರದೇಶವು ಕಂಡುಬರುತ್ತದೆ.

  • ಈ ಪ್ರದೇಶವು ಅತ್ಯಂತ ಕಡಿಮೆ ಪ್ರಮಾಣದಲ್ಲಿ ಬಣ್ಣವನ್ನು ಪಡೆದಿರುತ್ತದೆ. ಇದಕ್ಕೆ ಕೋಶದ್ರವ್ಯ (cytoplasm) ಎಂದು ಹೆಸರು. ಸೈಟೋಪ್ಲಾಸಮ್ ಕೋಶಪೊರೆಯೊಳಗಿರುವ ದ್ರವರೂಪದ ವಸ್ತು. ಇದು ವಿಶಿಷ್ಟ ರಚನೆಗಳಾದ ಕಣದಂಗಗಳನ್ನೂ ಹೊಂದಿದೆ. ಪ್ರತಿ ಕಣದಂಗವೂ ಜೀವಕೋಶಕ್ಕಾಗಿ ನಿರ್ದಿಷ್ಟ ಕಾರ್ಯವನ್ನು ನಿರ್ವಹಿಸುತ್ತದೆ.

ಕೋಶದ್ರವ್ಯ (cytoplasm)

84 of 107

  • ಕಣದಂಗಗಳು ಪೊರೆಯಿಂದ ಆವೃತವಾಗಿವೆ. ನಿರ್ದಿಷ್ಟ ನ್ಯೂಕ್ಲಿಯಸ್‍ನ್ನು ಹೊಂದಿರದ ಪ್ರೋಕ್ಯಾರಿಯೋಟ್ ಗಳಲ್ಲಿ ಪೊರೆಯಿಂದ ಆವೃತವಾಗಿರುವ ಕಣದಂಗಗಳೂ ಕಂಡು ಬರುವುದಿಲ್ಲ. ಇನ್ನೊಂದು ಕಡೆ ಯೂಕ್ಯಾರಿಯೋಟ್ ಜೀವಕೋಶಗಳು ನ್ಯೂಕ್ಲಿಯಾರ್ ಮೆಂಬ್ರೇನ್ ಹಾಗೂ ಪೊರೆಸಹಿತ ಕಣದಂಗಗಳನ್ನು ಹೊಂದಿವೆ.

ಕಣದಂಗಗಳು

  • ವೈರಸ್‍ಗಳ ಉದಾಹರಣೆಯನ್ನು ತೆಗೆದುಕೊಂಡು ಪೊರೆಯ ಮಹತ್ವವನ್ನು ಚಿತ್ರಿಸಬಹುದು. ವೈರಸ್‍ಗಳು ಯಾವುದೇ ಪೊರೆಯನ್ನು ಹೊಂದಿರುವುದಿಲ್ಲ. ಆದ್ದರಿಂದ ಜೀವಿಗಳ ದೇಹದ ಒಳಗೆ ಪ್ರವೇಶಿಸಿ ಅವುಗಳ ಕೋಶ ವ್ಯವಸ್ಥೆಯನ್ನು ತಮ್ಮ ಸಂತಾನೋತ್ಪತ್ತಿಗೆ ಬಳಸಿಕೊಳ್ಳವವರೆಗೂ ಅವು ಯಾವುದೇ ಜೈವಿಕ ಲಕ್ಷಣಗಳನ್ನು ತೋರಿಸುವುದಿಲ್ಲ.

85 of 107

ಚಟುವಟಿಕೆ (Activity)

ಈ ಕೆಳಗಿನ ಕೋಷ್ಟಕದಲ್ಲಿ ಪ್ರೊಕ್ಯಾರಿಯೋಟ್ ಮತ್ತು ಯೂಕ್ಯಾರಿಯೋಟ್ ಜೀವಕೋಶಗಳ ನಡುವಿನ ವ್ಯತ್ಯಾಸಗಳನ್ನು ನೀಡಲಾಗಿದೆ. ಖಾಲಿ ಬಿಟ್ಟ ಭಾಗಗಳನ್ನು ಸರಿಯಾದ ಉತ್ತರದಿಂದ ಭರ್ತಿ ಮಾಡಿ.

ಪ್ರೊಕ್ಯಾರಿಯೋಟ್ ಜೀವಕೋಶ

ಯೂಕ್ಯಾರಿಯೋಟ್ ಜೀವಕೋಶ

1) ಗಾತ್ರ : ಸಾಮಾನ್ಯವಾಗಿ ಸಣ್ಣದು(1-10μm)

1μm= 10-6m

  1. ಗಾತ್ರ : ಸಮಾನ್ಯವಾಗಿ ದೊಡ್ಡದು (5-100μm)

2) ನ್ಯೂಕ್ಲಿಯಾರ್ ಪ್ರದೇಶ __________________________________________________________

ಎಂದು ಕರೆಯುವರು.

2) ನ್ಯೂಕ್ಲಿಯರ್ ಪ್ರದೇಶ : ನಿರ್ದಿಷ್ಟವಾಗಿದೆ ಮತ್ತು

ನ್ಯೂಕ್ಲಿಯಾರ್ ಮೆಂಬ್ರೇನ್‍ನಿಂದ ಆವೃತವಾಗಿದೆ.

3) ಒಂದೇ ಕ್ರೋಮೋಸೋಮ್ ಹೊಂದಿದೆ.

3) ಒಂದಕ್ಕಿಂತ ಹೆಚ್ಚು ಕ್ರೋಮೋಸೋಮ್ ಹೊಂದಿದೆ.

4) ಪೊರೆಸಹಿತ ಕಣದಂಗಗಳು ಕಂಡುಬರುವದಿಲ್ಲ.

4)_____________________________________________________________________________________

86 of 107

ಕಲಿಕಾ ಫಲ – 03

ಜೀವಕೋಶದ ರಚನಾತ್ಮಕ ವ್ಯವಸ್ಥೆಯ ಬಗ್ಗೆ ತಿಳಿಯುವೆ.

87 of 107

  • ಜೀವಕೋಶದ ಒಳಗಿನ ಭಾಗಗಳನ್ನು ಹೊರಗಿನ ಪರಿಸರದಿಂದ ಬೇರ್ಪಡಿಸಲು ಪ್ರತಿ ಜೀವಕೋಶವು ಪೊರೆಯಿಂದ ಆವೃತವಾಗಿದೆ.

  • ಬಹುಕೋಶೀಯ ಜೀವಿಗಳ ಜೀವಕೋಶಗಳನ್ನೂ ಒಳಗೊಂಡಂತೆ ದೊಡ್ಡದಾದ ಮತ್ತು ಸಂಕೀರ್ಣ ಜೀವಕೋಶಗಳಿಗೆ ತಮ್ಮ ಸಂಕೀರ್ಣ ರಚನೆ ಮತ್ತು ಕಾರ್ಯಗಳನ್ನು ನಿರ್ವಹಿಸಲು ಬಹಳಷ್ಟು ರಾಸಾಯನಿಕ ಚಟುವಟಿಕೆಗಳ ಅಗತ್ಯವಿದೆ.

  • ಈ ರೀತಿಯ ವಿಭಿನ್ನ ರಾಸಾಯನಿಕ ಚಟುವಟಿಕೆಗಳನ್ನು ನಿರ್ವಹಿಸಲು ಜೀವಕೋಶಗಳು ಪೊರೆಸಹಿತ ಸಣ್ಣ ರಚನೆಗಳನ್ನು ಅಥವಾ ಕಣದಂಗಗಳನ್ನು ಹೊಂದಿವೆ.

ಕಣದಂಗಗಳು (cell organelles)

88 of 107

  • ಇದು ಯೂಕ್ಯಾರಿಯೋಟ್ ಜೀವಕೋಶಗಳಲ್ಲಿ ಕಂಡುಬರುವ ಒಂದು ವಿಶಿಷ್ಟ ಲಕ್ಷಣವಾಗಿದ್ದು, ಇದು ಅವುಗಳನ್ನು ಪ್ರೋಕ್ಯಾರಿಯೋಟ್‍ಗಳಿಂದ ಪ್ರತ್ಯೇಕಿಸುತ್ತದೆ. ಇಂತಹ ಕೆಲವು ಕಣದಂಗಗಳನ್ನು ಇಲೆಕ್ಟ್ರಾನ್ ಸೂಕ್ಷ್ಮದರ್ಶಕದ ಮೂಲಕ ಮಾತ್ರ ನೋಡಬಹುದು.

  • ನಾವು ನ್ಯೂಕ್ಲಿಯಸ್‍ನ ಬಗ್ಗೆ ಈ ಹಿಂದಿನ ಭಾಗದಲ್ಲಿ ಚರ್ಚಿಸಿದ್ದೇವೆ. ಈಗ ನಾವು ಚರ್ಚಿಸುವ ಕೆಲವು ಮುಖ್ಯ ಕಣದಂಗಗಳೆಂದರೆ ಎಂಡೋಪ್ಲಾಸ್ಮಿಕ್ ರೆಟಿಕ್ಯುಲಮ್, ಗಾಲ್ಗಿ ಸಂಕೀರ್ಣ, ಲೈಸೋಸೋಮ್‍ಗಳು, ಮೈಟೋಕಾಂಡ್ರಿಯ, ಪ್ಲಾಸ್ಟಿಡ್‍ಗಳು ಮತ್ತು ರಸದಾನಿಗಳು. ಈ ಕಣದಂಗಗಳು ಕೋಶದ ಕೆಲವು ನಿರ್ಣಾಯಕ ಕಾರ್ಯಗಳನ್ನು ನಿರ್ವಹಿಸುವುದರಿಂದ ಪ್ರಮುಖವಾಗಿವೆ.

89 of 107

ವಿವಿಧ ವಸ್ತುಗಳನ್ನು ಕೋಶದ ಒಂದು ಭಾಗದಿಂದ

ಇನ್ನೊಂದು ಭಾಗಕ್ಕೆ ಮತ್ತು ಒಂದು ಕೋಶದಿಂದ

ಇನ್ನೊಂದು ಕೋಶಕ್ಕೆ ಸಾಗಿಸುತ್ತದೆ.

ಕಾರ್ಯಗಳು:-

ಎಂಡೊಪ್ಲಾಸ್ಮಿಕ್ ರೆಟಿಕ್ಯುಲಮ್

ಎಂಡೋಪ್ಲಾಸ್ಮಿಕ್ ರೆಟಿಕ್ಯುಲಮ್‍(Endoplasmic reticulam)

90 of 107

  • ಎಂಡೋಪ್ಲಾಸ್ಮಿಕ್ ರೆಟಿಕ್ಯುಲಮ್(ER) ಒಂದು ಪೊರೆಸಹಿತ ಕೊಳವೆ ಹಾಗೂ ಹಾಳೆಗಳ ಆಕಾರದ ದೊಡ್ಡ ಜಾಲ. ಇದು ಉದ್ದನೆಯ ಕೊಳವೆಯಂತೆ ಅಥವಾ ದುಂಡಾದ ಅಥವಾ ಆಯತಾಕಾರದ ಚೀಲಗಳಂತೆ ಕಾಣುತ್ತದೆ.

  • ಎಂಡೋಪ್ಲಾಸ್ಮಿಕ್ ರೆಟಿಕ್ಯುಲಮ್‍ಅನ್ನು ಆವರಿಸಿದ ಪೊರೆಯ ರಚನೆಯು ಕೋಶಪೊರೆಯಂತೆಯೇ ಇರುತ್ತದೆ.
  • ಎಂಡೋಪ್ಲಾಸ್ಮಿಕ್ ರೆಟಿಕ್ಯುಲಮ್‍ನಲ್ಲಿ ಎರಡು ವಿಧ:

ಒರಟು ಎಂಡೋಪ್ಲಾಸ್ಮಿಕ್ ರೆಟಿಕ್ಯುಲಮ್ (RER) ಮತ್ತು

ನಯವಾದ ಎಂಡೋಪ್ಲಾಸ್ಮಿಕ್ ರೆಟಿಕ್ಯುಲಮ್(SER).

  • ಒರಟು ಎಂಡೋಪ್ಲಾಸ್ಮಿಕ್ ರೆಟಿಕ್ಯುಲಮ್‍ನ ಮೇಲ್ಮೈ ಮೇಲೆ ರೈಬೋಸೋಮ್ ಕಣಗಳು ಅಂಟಿಕೊಂಡಿರುವುದರಿಂದ ಸೂಕ್ಷ್ಮದರ್ಶಕದ ಮೂಲಕ ನೋಡಿದಾಗ ಅವು ಒರಟಾಗಿ ಕಾಣುತ್ತವೆ.

91 of 107

  • ರೈಬೋಸೋಮ್‍ಗಳು ಎಲ್ಲಾ ಕ್ರಿಯಾಶೀಲ ಜೀವಕೋಶಗಳಲ್ಲಿದ್ದು ಪ್ರೋಟೀನ್ ಉತ್ಪಾದನೆಯ ಸ್ಥಳಗಳಾಗಿವೆ. ಹೀಗೆ ಉತ್ಪತ್ತಿಯಾದ ಪ್ರೋಟೀನನ್ನು ಅವಶ್ಯಕತೆ ಇರುವ ಜೀವಕೋಶಗಳಿಗೆ ಎಂಡೋಪ್ಲಾಸ್ಮಿಕ್ ರೆಟಿಕ್ಯುಲಮ್‍ನ ಮೂಲಕ ಕಳಿಸಲಾಗುತ್ತದೆ.

  • ಮೃದು ಎಂಡೋಪ್ಲಾಸ್ಮಿಕ್ ರೆಟಿಕ್ಯುಲಮ್ ಜೀವಕೋಶದ ಚಟುವಟಿಕೆಗಳಿಗೆ ಅತ್ಯವಶ್ಯಕವಾಗಿ ಬೇಕಾದ ಕೊಬ್ಬಿನ ಅಥವಾ ಲಿಪಿಡ್‍ನ ಕಣಗಳನ್ನು ಉತ್ಪಾದಿಸಲು ಸಹಾಯ ಮಾಡುತ್ತದೆ.

  • ಇವುಗಳಲ್ಲಿ ಕೆಲವು ಪ್ರೋಟೀನ್ ಮತ್ತು ಲಿಪಿಡ್‍ಗಳು ಕೋಶಪೊರೆಯ ನಿರ್ಮಾಣದಲ್ಲಿ ನೆರವಾಗುತ್ತವೆ. ಈ ಪ್ರಕ್ರಿಯೆಯನ್ನು 'ಮೆಂಬ್ರೇನ್ ಬಯೋಜೆನಿಸಿಸ್' (membrane biogenesis) ಎನ್ನುವರು.

92 of 107

  • ಇನ್ನು ಕೆಲವು ಪ್ರೋಟೀನ್ ಮತ್ತು ಲಿಪಿಡ್‍ಗಳು ಕಿಣ್ವಗಳಂತೆ ಮತ್ತು ಹಾರ್ಮೋನ್‍ಗಳಂತೆ ಕಾರ್ಯನಿರ್ವಹಿಸುತ್ತವೆ. ವಿವಿಧ ಜೀವಕೋಶಗಳಲ್ಲಿ ಎಂಡೊಪ್ಲಾಸ್ಮಿಕ್ ರೆಟಿಕ್ಯುಲಮ್ ವಿಭಿನ್ನವಾಗಿ ಕಂಡುಬಂದರೂ ಯಾವಾಗಲೂ ಒಂದು ಜಾಲ ವ್ಯವಸ್ಥೆಯನ್ನು ರೂಪಿಸುತ್ತದೆ.

  • ಹೀಗೆ, ಎಂಡೋಪ್ಲಾಸ್ಮಿಕ್ ರೆಟಿಕ್ಯುಲಮ್‍ನ ಒಂದು ಮುಖ್ಯ ಕಾರ್ಯವೆಂದರೆ ಕೋಶದ್ರವ್ಯದ ವಿವಿಧ ಭಾಗಗಳ ನಡುವೆ ಅಥವಾ ಕೋಶದ್ರವ್ಯ ಮತ್ತು ನ್ಯೂಕ್ಲಿಯಸ್‍ನ ನಡುವೆ ವಸ್ತುಗಳ (ಮುಖ್ಯವಾಗಿ ಪ್ರೋಟೀನ್‍ಗಳ) ಸಾಗಾಣಿಕೆಗೆ ಸಂಪರ್ಕ ಕಲ್ಪಿಸುವುದಾಗಿದೆ.

  • ಎಂಡೋಪ್ಲಾಸ್ಮಿಕ್ ರೆಟಿಕ್ಯುಲಮ್‍ನ ಇನ್ನೊಂದು ಕಾರ್ಯವೆಂದರೆ ಕೋಶದ್ರವ್ಯಕ್ಕೆ ಆಧಾರ ಚೌಕಟ್ಟು ನಿರ್ಮಿಸುವ ಮೂಲಕ ಕೋಶದಲ್ಲಿ ನಡೆಯುವ ಕೆಲವು ಜೀವರಾಸಾಯನಿಕ ಕ್ರಿಯೆಗಳಿಗೆ ಮೇಲ್ಮೈಯನ್ನು ಒದಗಿಸುವುದು.

93 of 107

ಎಂಡೊಪ್ಲಾಸ್ಮಿಕ್ ರೆಟಿಕ್ಯುಲಮ್

  • ಕಶೇರುಕ ಪ್ರಾಣಿಗಳ ಯಕೃತ್ತಿನ ಜೀವಕೋಶಗಳಲ್ಲಿ ಕಂಡುಬರುವ ಮೃದುವಾದ ಎಂಡೋಪ್ಲಾಸ್ಮಿಕ್ ರೆಟಿಕ್ಯುಲಮ್ ಅನೇಕ ವಿಷವಸ್ತುಗಳು ಮತ್ತು ಔಷಧಗಳ ನಂಜನ್ನು ನಿವಾರಿಸಿ ದುರ್ಬಲಗೊಳಿಸುವಲ್ಲಿ ನಿರ್ಣಾಯಕ ಪಾತ್ರವಹಿಸುತ್ತದೆ.

ಕಶೇರುಕ ಪ್ರಾಣಿಗಳು ಎಂದರೆ ಯಾವುವು? ಒಮ್ಮೆ ನೆನಪಿಸಿಕೊಳ್ಳಿ...!

94 of 107

ಗಾಲ್ಗಿ ಸಂಕೀರ್ಣ(Golgi apparatus)

ಕೋಶೀಯ ಚಟುವಟಿಕೆಗಳಿಗೆ ಅಗತ್ಯವಿರುವ

ರಾಸಾಯನಿಕಗಳನ್ನು ಸ್ರವಿಸುತ್ತದೆ.

ಗಾಲ್ಗಿ ಸಂಕೀರ್ಣ

ಕಾರ್ಯಗಳು:-

ವಸ್ತುಗಳ ಸಂಗ್ರಹಣೆ, ಸುಧಾರಣೆ ಪ್ಯಾಕ್ ಮಾಡುವಿಕೆ

95 of 107

  • ಗಾಲ್ಗಿ ಸಂಕೀರ್ಣದ (Golgi apparatus) ಬಗ್ಗೆ ಮೊದಲ ಬಾರಿಗೆ ವಿವರಣೆ ನೀಡಿದ ವಿಜ್ಞಾನಿ ಕ್ಯಾಮಿಲೋ ಗಾಲ್ಗಿ (Camilla Golgi). ಗಾಲ್ಗಿ ಸಂಕೀರ್ಣವು ಪೊರೆಯಿಂದ ಆವೃತವಾದ ಚೀಲಗಳಂತೆ ಇದ್ದು ಸರಿಸುಮಾರು ಸಮಾಂತರವಾಗಿ ಬಣವೆಯಂತೆ ಜೋಡಿಸಲ್ಪಟ್ಟಿವೆ. ಇವುಗಳನ್ನು ಸಿಸ್ಟರ್ನ್‍ಗಳು ಎನ್ನುವರು. ಗಾಲ್ಗಿ ಸಂಕೀರ್ಣದ ಪೊರೆಗಳು ಎಂಡೋಪ್ಲಾಸ್ಮಿಕ್ ರೆಟಿಕ್ಯುಲಮ್‍ನ ಪೊರೆಗಳೊಂದಿಗೆ ಸಂಪರ್ಕ ಹೊಂದಿದ್ದು ಸಂಕೀರ್ಣ ಕೋಶಪೊರೆ ವ್ಯವಸ್ಥೆಯ ಇನ್ನೊಂದು ಭಾಗವನ್ನು ನಿರ್ಮಿಸುತ್ತವೆ.

  • ಎಂಡೋಪ್ಲಾಸ್ಮಿಕ್ ರೆಟಿಕ್ಯುಲಮ್‍ನ ಹತ್ತಿರ ಸಂಶ್ಲೇಷಿಸಲ್ಪಟ್ಟ ವಸ್ತುವನ್ನು ಪ್ಯಾಕ್ ಮಾಡಿ ಕೋಶದ ಒಳಭಾಗ ಮತ್ತು ಹೊರಭಾಗದ ಹಲವಾರು ಗುರಿ ಅಂಗಗಳಿಗೆ ಗಾಲ್ಗಿ ಸಂಕೀರ್ಣದ ಮೂಲಕ ರವಾನಿಸಲಾಗುತ್ತದೆ. ವಸ್ತುಗಳ ಸಂಗ್ರಹಣೆ, ಸುಧಾರಣೆ ಮತ್ತು ಪ್ಯಾಕ್ ಮಾಡುವಿಕೆ ಗಾಲ್ಗಿ ಸಂಕೀರ್ಣದ ಪ್ರಮುಖ ಕಾರ್ಯಗಳಾಗಿವೆ. ಕೆಲವು ಸಂದರ್ಭಗಳಲ್ಲಿ ಸರಳ ಸಕ್ಕರೆಯ ಅಣುಗಳಿಂದ ಸಂಕೀರ್ಣ ಸಕ್ಕರೆಯ ಅಣುಗಳು ಗಾಲ್ಗಿ ಸಂಕೀರ್ಣದಲ್ಲಿ ಉಂಟಾಗಬಹುದು. ಗಾಲ್ಗಿ ಸಂಕೀರ್ಣವು ಲೈಸೋಸೋಮ್‍ಗಳ ನಿರ್ಮಾಣದಲ್ಲೂ ಭಾಗವಹಿಸುತ್ತದೆ

96 of 107

ಕೋಶದಲ್ಲಿನ ಕಾರ್ಬನಿಕ ವಸ್ತುಗಳನ್ನು ಜೀರ್ಣಿಸಲು

ಸಹಾಯ ಮಾಡುತ್ತದೆ. ಇದು ಮುಪ್ಪಾದ ಅಥವಾ

ಹಾನಿಗೊಳಗಾದ ತನ್ನದೇ ಜೀವಕೋಶವನ್ನು

ನಾಶಪಡಿಸುತ್ತದೆ. ಆದ್ದರಿಂದ ಇದನ್ನು ಜೀವಕೋಶದ

ಆತ್ಮಹತ್ಯಾ ಸಂಚಿ ಎನ್ನುವರು.

ಕಾರ್ಯಗಳು:-

ಲೈಸೋಸೋಮ್

ಲೈಸೋಸೋಮ್ (lysosome)

97 of 107

  • ಲೈಸೋಸೋಮ್‍ಗಳು (lysosomes) ಜೀವಕೋಶದ ತ್ಯಾಜ್ಯ ವಿಲೇವಾರಿ ಮಾಡುವ ಒಂದು ವಿಧದ ವ್ಯವಸ್ಥೆ. ಲೈಸೋಸೋಮ್‍ಗಳು ಜೀವಕೋಶದಲ್ಲಿರಬಹುದಾದ ಪರಕೀಯ ವಸ್ತುಗಳನ್ನು ಮತ್ತು ಸವೆದ ಕಣದಂಗಗಳನ್ನು ಜೀರ್ಣಿಸಿ ಜೀವಕೋಶವನ್ನು ಸ್ವಚ್ಚವಾಗಿಡುತ್ತದೆ.
  • ಬ್ಯಾಕ್ಟೀರಿಯ, ಆಹಾರದ ಕಣಗಳಂತಹ ಪರಕೀಯ ವಸ್ತುಗಳು ಹಾಗೂ ವಯಸ್ಸಾದ ಕಣದಂಗಗಳ ಅಂತ್ಯವು ಲೈಸೋಸೋಮ್‍ನಲ್ಲಿ ಆಗುತ್ತದೆ. ಅಲ್ಲಿ ಅವುಗಳನ್ನು ಲೈಸೋಸೋಮ್ ಸಣ್ಣ ಸಣ್ಣ ಕಣಗಳಾಗಿ ವಿಭಜಿಸುತ್ತದೆ.

98 of 107

  • ಲೈಸೋಸೋಮ್‍ಗಳು ಈ ಕಾರ್ಯವನ್ನು ನಿರ್ವಹಿಸಬಲ್ಲವು ಏಕೆಂದರೆ ಅವುಗಳಲ್ಲಿ ಪ್ರಬಲ ಜೀರ್ಣಕಾರಕ ಕಿಣ್ವಗಳಿದ್ದು ಅವು ಎಲ್ಲಾಸಾವಯವ ಪದಾರ್ಥಗಳನ್ನು ವಿಭಜಿಸುವ ಸಾಮಥ್ರ್ಯ ಹೊಂದಿವೆ.

  • ಕೋಶೀಯ ಚಯಾಪಚಯ ಕ್ರಿಯೆಗೆ ತೊಂದರೆಯಾದ ಸಮಯದಲ್ಲಿ ಉದಾಹರಣೆಗೆ ಜೀವಕೋಶವು ತೀವ್ರವಾಗಿ ಹಾನಿಗೊಳಗಾದ ಸಂದರ್ಭದಲ್ಲಿ ಲೈಸೋಸೋಮ್‍ಗಳು ಒಡೆದು ಹೋಗಿ ಕಿಣ್ವಗಳು ತಮ್ಮದೇ ಕೋಶವನ್ನು ಜೀರ್ಣಿಸುತ್ತವೆ. ಆದ್ದರಿಂದ ಲೈಸೋಸೋಮ್‍ಗಳನ್ನು ಜೀವಕೋಶದ `ಆತ್ಮಹತ್ಯಾ ಸಂಚಿಗಳು' ಎಂದೂ ಕರೆಯುತ್ತಾರೆ.

  • ರಚನೆಯ ಬಗ್ಗೆ ಹೇಳುವುದಾದರೆ ಲೈಸೋಸೋಮ್‍ಗಳು ಪೊರೆ ಸಹಿತ ಚೀಲದಂತಿರುವ ಕಣದಂಗವಾಗಿದ್ದು ಒಳಗೆ ಜೀರ್ಣಕಾರಕ ಕಿಣ್ವಗಳು ತುಂಬಿಕೊಂಡಿವೆ. ಈ ಕಿಣ್ವಗಳು ಒರಟು ಎಂಡೋಪ್ಲಾಸ್ಮಿಕ್ ರೆಟಿಕ್ಯುಲಮ್‍ನಿಂದ ಉತ್ಪತ್ತಿಯಾಗುತ್ತವೆ.

99 of 107

ಮೈಟೊಕಾಂಡ್ರಿಯನ್

ಆಹಾರದಿಂದ ಶಕ್ತಿ ಉತ್ಪಾದಿಸಲು ಸಹಾಯ ಮಾಡುತ್ತದೆ. ಇದನ್ನು ಜೀವಕೋಶದ ಶಕ್ತಿ ಉತ್ಪಾದನಾ ಕೇಂದ್ರ ಎನ್ನುವರು.

ಕಾರ್ಯಗಳು:-

ಮೈಟೊಕಾಂಡ್ರಿಯ(Mitochondria)

100 of 107

  • ಮೈಟೋಕಾಂಡ್ರಿಯಾ (mitochondria) ಜೀವಕೋಶದ ಶಕ್ತಿ ಕೇಂದ್ರವೆಂದು ಹೆಸರಾಗಿದೆ. ಜೀವದ ಉಳಿಯುವಿಕೆಗೆ ಅಗತ್ಯವಾದ ಅನೇಕ ರಾಸಾಯನಿಕ ಚಟುವಟಿಕೆಗಳನ್ನು ನಿರ್ವಹಿಸಲು ಅಗತ್ಯವಾದ ಶಕ್ತಿಯನ್ನು ಮೈಟೋಕಾಂಡ್ರಿಯಾವು ಎ.ಟಿ.ಪಿ (ಅಡಿನೋಸಿನ್ ಟ್ರೈಪಾಸ್ಫೇಟ್) ಅಣುವಿನ ರೂಪದಲ್ಲಿ ಬಿಡುಗಡೆಮಾಡುತ್ತದೆ.
  • ಎ.ಟಿ.ಪಿ ಯನ್ನು ಜೀವಕೋಶದ `ಚಲಾವಣೆಯಲ್ಲಿರುವ ಶಕ್ತಿಯ ನಾಣ್ಯ' (energy currency) ಎಂದು ಕರೆಯಲಾಗುತ್ತದೆ. ಶರೀರವು ಹೊಸ ರಾಸಾಯನಿಕ ಸಂಯುಕ್ತಗಳನ್ನು ಉಂಟುಮಾಡಲು ಮತ್ತು ಯಾಂತ್ರಿಕ ಕೆಲಸಗಳನ್ನು ನಿರ್ವಹಿಸಲು ಎ.ಟಿ.ಪಿ ರೂಪದಲ್ಲಿ ಸಂಗ್ರಹವಾಗಿರುವ ಶಕ್ತಿಯನ್ನು ಬಳಸಿಕೊಳ್ಳುತ್ತದೆ.

101 of 107

  • ಮೈಟೋಕಾಂಡ್ರಿಯಾವು ಜೋಡಿ ಪೊರೆಯಿಂದ ಆವೃತವಾಗಿದೆ. ಹೊರಗಿನ ಪೊರೆಯು ಅನೇಕ ಸೂಕ್ಷ್ಮ ರಂಧ್ರಗಳನ್ನು ಹೊಂದಿದೆ. ಹಾಗೆಯೇ ಒಳಗಿನ ಪೊರೆಯಲ್ಲಿ ಆಳವಾದ ಮಡಿಕೆಗಳಿವೆ. ಈ ಮಡಿಕೆಗಳು ಎ.ಟಿ.ಪಿ ಯಿಂದಾಗುವ ರಾಸಾಯನಿಕ ಕ್ರಿಯೆಗಳಿಗೆ ವಿಶಾಲವಾದ ಮೇಲ್ಮೈ ಪ್ರದೇಶವನ್ನು ಒದಗಿಸುತ್ತದೆ.
  • ಮೈಟೋಕಾಂಡ್ರಿಯಾಗಳು ತನ್ನದೇ ಆದ ಡಿ.ಎನ್.ಎ ಮತ್ತು ರೈಬೋಸೋಮ್‍ಗಳನ್ನು ಹೊಂದಿರುವುದರಿಂದ ಅವುಗಳನ್ನು ವಿಶಿಷ್ಟ ಕಣದಂಗಗಳು ಎನ್ನುವರು. ಆದ್ದರಿಂದ, ಮೈಟೋಕಾಂಡ್ರಿಯಾಗಳು ತಮ್ಮದೇ ಕೆಲವು ಪ್ರೋಟೀನ್‍ಗಳನ್ನು ಸಂಶ್ಲೇಷಿಸಬಲ್ಲವು.

102 of 107

ಯೂಕ್ಯಾರಿಯೋಟ್ ಜೀವಕೋಶವಿರುವ ಸಸ್ಯಗಳಲ್ಲಿ ಪ್ಲಾಸ್ಟಿಡ್‍ಗಳೆಂಬ ಮತ್ತೊಂದು ಬಗೆಯ ಕಣದಂಗ ಕಂಡುಬರುತ್ತವೆ. ವಿವಿಧ ರೀತಿಯ ಪ್ಲಾಸ್ಟಿಡ್‍ಗಳಲ್ಲಿ ಹಸಿರು ಬಣ್ಣದ ಕ್ಲೋರೋಪ್ಲಾಸ್ಟ್‍ಗಳು ಸಾಮಾನ್ಯವಾಗಿ ಕಂಡುಬರುತ್ತವೆ ಮತ್ತು ಅವು ದ್ಯುತಿ ಸಂಶ್ಲೇಷಣೆ(Photosynthesis)ಗೆ ಸಹಾಯ ಮಾಡುತ್ತವೆ.

ಪ್ಲಾಸ್ಟಿಡ್‍ಗಳು (Plastids)

ಕ್ಲೋರಪ್ಲಾಸ್ಟ್

103 of 107

  • ಪ್ಲಾಸ್ಟಿಡ್‍ಗಳು (plastids) ಸಸ್ಯಜೀವಕೋಶದಲ್ಲಿ ಮಾತ್ರ ಕಂಡುಬರುತ್ತವೆ. ಪ್ಲಾಸ್ಟಿಡ್‍ಗಳಲ್ಲಿ ಎರಡು ವಿಧಗಳಿವೆ - ಕ್ರೋಮೋಪ್ಲಾಸ್ಟ್‍ಗಳು chromoplasts (ಬಣ್ಣದ ಪ್ಲಾಸ್ಟಿಡ್‍ಗಳು) ಮತ್ತು ಲ್ಯೂಕೋಪ್ಲಾಸ್ಟ್‍ಗಳು (leucoplasts ಬಿಳಿ ಅಥವಾ ಬಣ್ಣರಹಿತ ಪ್ಲಾಸ್ಟಿಡ್‍ಗಳು).

ಕ್ಲೋರಪ್ಲಾಸ್ಟ್

  • ಕ್ಲೋರೋಫಿಲ್‍ಗಳಿರುವ ಪ್ಲಾಸ್ಟಿಡ್‍ಗಳನ್ನು ಕ್ಲೋರೋಪ್ಲಾಸ್ಟ್‍ಗಳೆನ್ನುವರು. ಸಸ್ಯಗಳ ದ್ಯುತಿಸಂಶ್ಲೇಷಣೆ ಕ್ರಿಯೆಯಲ್ಲಿ ಕ್ಲೋರೋಪ್ಲಾಸ್ಟ್‍ನ ಪಾತ್ರ ಪ್ರಮುಖವಾಗಿದೆ. ಕ್ಲೋರೋಫಿಲ್‍ನ ಜೊತೆ ವಿವಿಧ ಹಳದಿ ಮತ್ತು ಕಿತ್ತಳೆ ಬಣ್ಣದ ವರ್ಣಕಗಳನ್ನೂ ಕ್ಲೋರೋಪ್ಲಾಸ್ಟ್ ಹೊಂದಿದೆ.

104 of 107

  • ಲ್ಯುಕೊಪ್ಲಾಸ್ಟ್ ಗಳು ಪ್ರಾಥಮಿಕ ಕಣದಂಗಗಳಾಗಿದ್ದು ಅವುಗಳಲ್ಲಿ ಪಿಷ್ಠ, ತೈಲಹನಿ ಮತ್ತು ಪ್ರೋಟಿನ್ ಕಣಗಳು ಸಂಗ್ರಹಿತವಾಗಿದೆ.

  • ಪ್ಲಾಸ್ಟಿಡ್‍ಗಳ ಒಳಗಿನ ರಚನೆಯು ಪೊರೆಗಳಿಂದಾದ ಅಸಂಖ್ಯಾತ ಪದರಗಳನ್ನು ಹೊಂದಿದ್ದು ಸ್ಟ್ರೋಮ ಎಂದು ಕರೆಯಲ್ಪಡುವ ಮಾತೃಕೆಯಲ್ಲಿ ಹುದುಗಿವೆ.

  • ಪ್ಲಾಸ್ಟಿಡ್‍ಗಳು ಹೊರ ರಚನೆಯಲ್ಲಿ ಮೈಟೋಕಾಂಡ್ರಿಯವನ್ನು ಹೋಲುತ್ತವೆ. ಮೈಟೋಕಾಂಡ್ರಿಯಾದಂತೇ ಪ್ಲಾಸ್ಟಿಡ್‍ಗಳೂ ಕೂಡಾ ತಮ್ಮದೇ ಆದ ಡಿ.ಎನ್.ಎ ಮತ್ತು ರೈಬೋಸೋಮ್‍ಗಳನ್ನು ಹೊಂದಿವೆ.

ಕ್ಲೋರಪ್ಲಾಸ್ಟ್

105 of 107

ರಸದಾನಿಗಳು (vacuoles)

  • ರಸದಾನಿಗಳು (vacuoles) ಘನ ಅಥವಾ ದ್ರವ ವಸ್ತುಗಳ ಸಂಗ್ರಹಣಾ ಚೀಲಗಳು. ಪ್ರಾಣಿಜೀವಕೋಶದಲ್ಲಿ ಕಂಡುಬರುವ ರಸದಾನಿಗಳು ಗಾತ್ರದಲ್ಲಿ ಚಿಕ್ಕದಾಗಿರುತ್ತವೆ ಆದರೆ ಸಸ್ಯಜೀವಕೋಶದಲ್ಲಿ ಅತಿದೊಡ್ಡ ರಸದಾನಿಗಳು ಕಂಡುಬರುತ್ತವೆ. ಕೆಲವು ಸಸ್ಯಜೀವಕೋಶದ ಕೇಂದ್ರಭಾಗದಲ್ಲಿರುವ ರಸದಾನಿಯು ಜೀವಕೋಶದ ಗಾತ್ರದ ಶೇ.50 ರಿಂದ ಶೇ.90 ಭಾಗವನ್ನು ಆಕ್ರಮಿಸಿಕೊಳ್ಳುತ್ತದೆ.

  • ಸಸ್ಯಜೀವಕೋಶದಲ್ಲಿ ಕಂಡುಬರುವ ರಸದಾನಿಗಳು ಸಸ್ಯರಸದಿಂದ ತುಂಬಿಕೊಂಡು ಜೀವಕೋಶಕ್ಕೆ ಉಬ್ಬಿದ ರಚನೆ (turgidity) ಮತ್ತು ಬಿಗಿತ (rigidity)ವನ್ನು ನೀಡುತ್ತದೆ. ಸಸ್ಯಜೀವಕೋಶ ಜೀವಂತವಾಗಿರಲು ಅಗತ್ಯವಾಗಿ ಬೇಕಾದ ಅನೇಕ ವಸ್ತುಗಳು ರಸದಾನಿಗಳಲ್ಲಿ ಸಂಗ್ರಹಿತವಾಗಿರುತ್ತವೆ. ಅವುಗಳೆಂದರೆ ಅಮೀನೋ ಆಮ್ಲಗಳು, ಸಕ್ಕರೆ, ವಿವಿಧ ಸಾವಯವ ಆಮ್ಲಗಳು ಮತ್ತು ಕೆಲವು ಪ್ರೋಟೀನ್‍ಗಳು.

106 of 107

ಚಟುವಟಿಕೆ 3.1

ಈ ಕೆಳಗಿನವುಗಳನ್ನು ಪಟ್ಟಿಮಾಡಿ

ಪೊರೆ ಸಹಿತ ಕಣದಂಗ

ಪೊರೆ ರಹಿತ ಕಣದಂಗ

107 of 107

ಚಟುವಟಿಕೆ 3.2

ಈ ಕೆಳಗಿನ ಕಣದಂಗಗಳನ್ನು ಹೆಸರಿಸಿ

1. ಜೀವಕೋಶದ ಸಾಗಾಣಿಕಾ ಕಣದಂಗ._______

2. ಜೀವಕೋಶದ ನಿಯಂತ್ರಣ ಕೇಂದ್ರ._______

3. ಜೀವಕೋಶದ ಶಕ್ತಿಯ ಉತ್ಪಾದನಾ ಕೇಂದ್ರ ಮತ್ತು ಉಸಿರಾಟದ ಕೇಂದ್ರ._______

4. ದ್ಯುತಿಸಂಶ್ಲೇಷಣೆ ಕ್ರಿಯೆಗೆ ಸಹಾಯ ಮಾಡುವ ಕಣದಂಗ._______

5. ಜೀವಕೋಶದ ಆತ್ಮಹತ್ಯಾ ಸಂಚಿ_______

6. ಸಸ್ಯ ಜೀವಕೋಶದ ಅಡುಗೆ ಮನೆ.______

7.ಜೀವಕೋಶದ ರಾಸಾಯನಿಕ ವಸ್ತುಗಳ ಸ್ರವಿಕೆಗೆ ನೆರವಾಗುವ ಕಣದಂಗ______

8. ಜೀವಕೋಶದ ಸಂಗ್ರಹಣ ಕೊಠಡಿ_______

9. ಜೀವಕೋಶದ ಪ್ರೋಟೀನ್ ಕಾರ್ಖಾನೆ.______

10. ಕೋಶವಿಭನೆಯ ಸಮಯದಲ್ಲಿ ಕ್ರೋಮೋಜೋಮ್ ಗಳನ್ನು ಹಿಡಿದಿಡುವ ಕಣದಂಗ.________