ನಾಮಪದಗಳ ಪ್ರಕಾರಗಳು
ಎಲ್ಲ ವಿದ್ಯಾರ್ಥಿಗಳಿಗ
BY:- Venkatesh A
ಖಂಡಿತ ಉತ್ತಮವಾಗಿದೆ
ನಾಮಪದಗಳ ಮುಖ್ಯವಾದ ಪ್ರಕಾರಗಳುಈ ಕೆಳಗಿನಂತಿವೆ.
ವಸ್ತುವಾಚಕಗಳು
ಗುಣವಾಚಕಗಳು
ಸಂಖ್ಯಾವಾಚಕಗಳು
ಸಂಖ್ಯೇಯವಾಚಕಗಳು
ಭಾವನಾಮಗಳು
ಪರಿಮಾಣವಾಚಕಗಳು
ಪ್ರಕಾರವಾಚಕಗಳು
ದಿಗ್ವಾಚಕಗಳು
ಸರ್ವನಾಮಗಳು
ವಸ್ತುವಾಚಕಗಳು :
ವಸ್ತುಗಳ ಹೆಸರುಗಳನ್ನು ಸೂಚಿಸುವ ಪದಗಳನ್ನು ವಸ್ತುವಾಚಕ ನಾಮಪದಗಳೆನ್ನುತ್ತಾರೆ. ಇವುಗಳಲ್ಲಿ ಮೂರು ಪ್ರಕಾರಗಳು ಅವು ರೂಢನಾಮ, ಅಂಕಿತನಾಮ ಮತ್ತು ಅನ್ವರ್ಥನಾಮ.
ರೂಢನಾಮ :
ರೂಢಿಯಿಂದ ಬಂದ ಹೆಸರುಗಳನ್ನು ರೂಢನಾಮ ಎನ್ನುವರು.
ಉದಾ :
ಹೂವು, ಮನೆ, ಊರು, ರಸ್ತೆ, ಸಮುದ್ರ, ಪಕ್ಷಿ, ಶಾಲೆ ಇತ್ಯಾದಿ.
ಅಂಕಿತನಾಮ :
ವ್ಯವಹಾರದ ಉಪಯೋಗಕ್ಕಾಗಿ ಇಟ್ಟುಕೊಂಡ ಹೆಸರುಗಳನ್ನೆಲ್ಲ ಅಂಕಿತನಾಮಗಳು ಎನ್ನುತ್ತಾರೆ.
ಉದಾ:
ವಿಧಾನಸೌಧ, ಕಾವೇರಿ, ಹಿಮಾಲಯ ಪರ್ವತ, ಅರಬ್ಬೀ ಸಮುದ್ರ ಇತ್ಯಾದಿ.
ಅನ್ವರ್ಥ ನಾಮಗಳು :
ಅರ್ಥಕ್ಕೆ ಅನುಗುಣವಾದ ಹೆಸರುಗಳನ್ನು ಅನ್ವರ್ಥನಾಮ ಎನ್ನುವರು.
ಉದಾ:
ರೈತ, ವ್ಯಾಪಾರಿ , ಕಮ್ಮಾರ, ಜಾಣ ಇತ್ಯಾದಿ.
ಗುಣವಾಚಕಗಳು :
ವ್ಯಕ್ತಿ ಅಥವಾ ವಸ್ತುಗಳ ಗುಣ, ಸ್ವಭಾವಗಳನ್ನು ತಿಳಿಸುವ ಪದಗಳನ್ನು ಗುಣವಾಚಕಗಳೆನ್ನುವರು.
ಉದಾ:
ಒಳ್ಳೆಯ, ಬಿಳಿಯ, ಹಳೆಯ , ಹೊಸದಾದ ಇತ್ಯಾದಿ.
ಸಂಖ್ಯಾವಾಚಕಗಳು :
ಸಂಖ್ಯೆಯನ್ನು ಸೂಚಿಸುವ ಪದಗಳನ್ನು ಸಂಖ್ಯಾವಾಚಕಗಳ ಎಂದು ಕರೆಯುತ್ತಾರೆ.
ಉದಾ :
ಒಂದು , ಹತ್ತು, ಸಾವಿರ, ಇಪ್ಪತ್ತು , ಒಂದು ಕೋಟಿ ಇತ್ಯಾದಿ.
ಸಂಖ್ಯೇಯವಾಚಕಗಳು :
ಸಂಖ್ಯೆಗಳಿಂದ ಕೂಡಿದ ಶಬ್ದಗಳನ್ನು ಸಂಖ್ಯೇಯವಾಚಕಗಳು ಎನ್ನುವರು.
ಉದಾ :
ಮೂರನೆಯ, ದುಪ್ಪಟ್ಟು ಇತ್ಯಾದಿ.
ಭಾವನಾಮಗಳು :
ಭಾವನೆಗಳನ್ನು ವ್ಯಕ್ತ ಪಡಿಸುವ ಪದಗಳನ್ನು ಭಾವನಾಮಗಳು ಎನ್ನುವರು.
ಉದಾ :
ಅರೆ, ಅಬ್ಬ , ಆಹಾ ಇತ್ಯಾದಿ.
ಪರಿಮಾಣವಾಚಕಗಳು :
ಯಾವುದೇ ವಸ್ತುವಿನ ಪರಿಮಾಣಗಳಾದ ಗಾತ್ರ, ಅಳತೆ ಮುಂತಾದವುಗಳನ್ನು ಹೇಳುವ ಶಬ್ದಗಳನ್ನು ಪರಿಣಾಮವಾಚಕಗಳು ಎನ್ನುವರು .
ಉದಾ:
ಇನ್ನಷ್ಟು, ಅಷ್ಟು, ಕೆಲವು, ಹಲವಾರು ಇತ್ಯಾದಿ
ದಿಗ್ವಾಚಕಗಳು :
ದಿಕ್ಕುಗಳನ್ನು ಸೂಚಿಸುವ ಪದಗಳು ದಿಗ್ವಾಚಕಗಳಾಗಿವೆ.
ಉದಾ :
ಉತ್ತರ , ದಕ್ಷಿಣ, ಪೂರ್ವ, ಪಶ್ಚಿಮ, ನೈಋತ್ಯ, ಈಶಾನ್ಯ ಇತ್ಯಾದಿ.
ಸರ್ವನಾಮ ಮುಂದಿನ ವಿಡಿಯೋ ದಲ್ಲಿ
ಸರ್ವನಾಮ ಮುಂದಿನ ವಿಡಿಯೋ ದಲ್ಲಿ
ಧನ್ಯವಾದಗಳು