1 of 8

ಅವ್ಯಯಗಳು

1.ಸಾಮಾನ್ಯಾರ್ಥಕಾವ್ಯಯ :

2.ಅನುಕರಣಾವ್ಯಯಗಳು :

3.ಭಾವಸೂಚಕಾವ್ಯಯಗಳು :

4. ಕ್ರಿಯಾರ್ಥಕಾವ್ಯಯಗಳು :

5.ಸಂಬಂಧಾರ್ಥಕಾವ್ಯಯಗಳು:

6.ಅವಧಾರಣಾರಕಾವ್ಯಯ :-

ಎಲ್ಲ ವಿದ್ಯಾರ್ಥಿಗಳಿಗೆ

BY:- Venkatesh A

ಖಂಡಿತ ಉತ್ತಮವಾಗಿದೆ

2 of 8

1.ಸಾಮಾನ್ಯಾರ್ಥಕಾವ್ಯಯ :

ಯಾವುದಾದರೊಂದು ಕ್ರಿಯೆ ನಡೆದ ರೀತಿಯನ್ನು ಹೇಳುವಂತಹ ಅವ್ಯಯಗಳೇ ಸಾಮಾನ್ಯಾವ್ಯಯಗಳು.

��ಉದಾ:-

ಬೇಗನೆ, ಮೆಲ್ಲಗೆ, ಸೊಗಸಾಗಿ, ಸುಮ್ಮನೆ, ತಟ್ಟನೆ, ತರುವಾಯ, ಹಾಗೆ, ಅಂತು, ಬೇರೆ, ಬಳಿಕ, ಕೂಡಲೆ, ಚೆನ್ನಾಗಿ ಇತ್ಯಾದಿಗಳು.

3 of 8

2.ಅನುಕರಣಾವ್ಯಯಗಳು :

ನಿರ್ದಿಷ್ಟ ಅರ್ಥವಿಲ್ಲದ ಧ್ವನಿ ವಿಶೇಷಣಗಳನ್ನು�ತಾನು ಕಿವಿಯಿಂದ ಕೇಳಿದಂತೆ ಅನುಕರಣೆ ಮಾಡಿ ಹೇಳುವ ಪದಗಳನ್ನು 'ಅನುಕರಣಾವ್ಯಯಗಳೆಂದು' ಕರೆಯುತ್ತಾರೆ.

ಉದಾ:

ಚಟಚಟ, ಕರಕರ, ಚುರುಚುರು, ಧಗಧಗ, ರೊಯ್ಯನೆ, ಸುಯ್ಯನೆ, ಫುಳುಘುಳು, ದಡದಡ ಇತ್ಯಾದಿ ಪದಗಳು.

4 of 8

3.ಭಾವಸೂಚಕಾವ್ಯಯಗಳು :

ಮನಸ್ಸಿನಲ್ಲಿ ಉಂಟಾಗುವ ಕೋಪ, ಹರ್ಷ,ದುಃಖ, ಮೆಚ್ಚುಗೆ, ಆಕ್ಷೇಪ, ತಿರಸ್ಕಾರ ಇತ್ಯಾದಿ ಭಾವಗಳನ್ನು ವ್ಯಕ್ತಪಡಿಸುವಾಗ ಅರ್ಥವಿಲ್ಲದ ಕೆಲವು ಪದಗಳನ್ನು ಬಳಸುತ್ತೇವೆ. ಅಂತಹ ಪದಗಳನ್ನು ಭಾವಸೂಚಕ ಅವ್ಯಯಗಳೆಂದು ಕರೆಯುತ್ತಾರೆ.

ಉದಾ:-

ಆಹಾ! ಭಳಿರೆ! ಅಯ್ಯೋ! ಓಹೋ! ಹೋ!, ಅ! ಆ, ಓ ಇತ್ಯಾದಿ ಪದಗಳು, ಅಥವಾ ಪದರೂಪದ ಅಕ್ಷರಗಳು.

5 of 8

4. ಕ್ರಿಯಾರ್ಥಕಾವ್ಯಯಗಳು :

ಕ್ರಿಯಾಪದದ ಸ್ಥಾನದಲ್ಲಿದ್ದು ವಾಕ್ಯದಅರ್ಥವನ್ನು ಪೂರ್ಣಗೊಳಿಸುವ ಅವ್ಯಯಗಳನ್ನು ಅವ್ಯಯಗಳು ಎಂದು ಕರೆಯಲಾಗಿದೆ. ಕ್ರಿಯಾರ್ಥಕ��ಉದಾ:-��ಅಹುದು, ಸಾಕು, ಅಲ್ಲ, ಹೌದು, ಬೇಡ, ಉಂಟು-ಇತ್ಯಾದಿ.

6 of 8

5.ಸಂಬಂಧಾರ್ಥಕಾವ್ಯಯಗಳು:

ಎರಡು ಪದಗಳನ್ನಾಗಲೀ ಹಲವು ಪದಸಮುಚ್ಚಯಗಳನ್ನಾಗಲೀ, ವಾಕ್ಯಗಳನ್ನಾಗಲೀ, ಜೋಡಿಸುವಂತಹ ಅಥವಾ ಸಂಬಂಧಗೊಳಿಸುವಂತಹ ಪದಗಳೇ ಸಂಬಂಧಾರ್ಥಕ ಅವ್ಯಯಗಳು.��ಉದಾ:-�ಮತ್ತು, ಅಥವಾ, ಆದ್ದರಿಂದ, ಊ. ಉಂ, ಅಲ್ಲದೆ ಇತ್ಯಾದಿ.

7 of 8

6.ಅವಧಾರಣಾರಕಾವ್ಯಯ :-

ಒಂದು ನಿಶ್ಚಯಾರ್ಥದಲ್ಲಿರುವಅವ್ಯಯವನ್ನು ಅವಧಾರಣಾರ್ಥಕಾವ್ಯಯ ಎನ್ನುವರು. ಹಲವು ವಸ್ತುಗಳಲ್ಲಿ ಒಂದನ್ನು ನಿಶ್ಚಯವಾಗಿ ಹೇಳುವ ಸಂದರ್ಭದಲ್ಲಿ ಈ ಅವ್ಯಯವನ್ನು ಬಳಸಲಾಗುತ್ತದೆ.�

ಉದಾ:-

ಅವನೇ, ಅದುವೇ, ನೀನೇ, ಅವಳೇ, ಅವರೇ, ಇತ್ಯಾದಿ ಪದಗಳ ಕೊನೆಯಲ್ಲಿರುವ 'ಏ' ಎಂಬ ಅಕ್ಷರವೇ ಅವಧಾರಣಾರ್ಥಕ ಅವ್ಯಯ

8 of 8

THANK YOU

FOR YOUR ATTENTION

ಧನ್ಯವಾದಗಳು