1 of 123

Copyrights and Attributions

The lesson plans created by India Literacy Project are not for profit or for sale. The content here has been compiled as open source and can be used, reproduced, derived of or modified by anyone as long as it is used for educational and non-profit use and released as open source.

All images and videos used in this presentation are sourced from the Internet and are owned and copyrighted as appropriate by the original owners.

India Literacy Project neither owns nor claims any copyright over them.

Free Distribution

ಉಚಿತ ವಿತರಣೆ

India Literacy Project

2 of 123

ಶಿಕ್ಷಕರಿಗಾಗಿ

ILP ಸ್ವಯಂ ಸೇವಾ ಸಂಸ್ಥೆ  ಉಚಿತ ವಿತರಣೆಗಾಗಿ ಈ ಪಾಠ ಯೋಜನೆಗಳನ್ನು ಸಿದ್ಧಪಡಿಸಿದೆ. 

ಇದರ ಉದ್ದೇಶಗಳು:

- ಶಾಲಾ ಶಿಕ್ಷಕರ  ಭೋದನಾ  ಚಟುವಟಿಕೆಯನ್ನು ಮತ್ತಷ್ಟು  ಪರಿಣಾಮಕಾರಿಯನ್ನಾಗಿ ಮಾಡುವುದು. 

-ಶಾಲಾ ಮಕ್ಕಳಿಗೆ ಪಠ್ಯ ಪುಸ್ತಕದ ಹೊರತಾಗಿ ಪರಿಕಲ್ಪನೆ ಅರ್ಥೈಸಿಕೊಳ್ಳುವುದಕ್ಕೆ ಈ PPTಯು ಇನ್ನೊಂದು ಸಾಧನ. -ಶಿಕ್ಷಕರು ಹಾಗು ಮಕ್ಕಳು ಬಹುಆಯಾಮ ಕಲಿಕೆಯ ಅನುಭವ  ಪಡೆದು, ಕಲಿಕೆಯ ಮಟ್ಟವನ್ನು ಹೆಚ್ಚಿಸಿ ಕೊಳ್ಳುವುದು.  

ಇದರ ವೈಶಿಷ್ಟ್ಯತೆಗಳು:

-ಈ PPT ಪಠ್ಯ ಪುಸ್ತಕದಲ್ಲಿರುವ ಪರಿಕಲ್ಪನೆಗಳನ್ನು ಸ್ಪಷ್ಟಿಕರಿಸುತ್ತದೆ. 

-ಸ್ಮಾರ್ಟ್ ಕ್ಲಾಸ್ ಮೂಲಕ ಮಾಡುವ ತರಗತಿಯನ್ನು ನಿಮ್ಮ ಪ್ರತಿನಿತ್ಯ ಮಾಡುವ ಬೋಧನ ವಿದಾನದ ( ಕಪ್ಪುಹಲಗೆ, ಪ್ರಯೋಗಗಳು, ಚಟುವಟಿಕೆಗಳು ಹಾಗು ಇತರೆ) ಜೊತೆಗೆ ಬಳಸುವುದು.

-ಈ PPTಯು  ಪಠ್ಯ ಪುಸ್ತಕದ  ಜೊತೆಗೆ  ಉಪಯೋಗಿಸುವಂಥಹದು.  ಈ PPT ಯನ್ನು ಉಪಯೋಗಿಸುವಾಗ ಮಕ್ಕಳು ಪಠ್ಯ ಪುಸ್ತಕ, ನೋಟ್ ಬುಕ್ ಮತ್ತು ಪೆನ್ ನ್ನು ಸಿದ್ಧವಾಗಿಟ್ಟು ಕೊಳ್ಳುವುದು.

-ಕಲಿಕೆ ದೃಶ್ಯ, ಶ್ರಾವ್ಯ ಹಾಗು ಪ್ರಾಯೋಗಿಕ/ಅನುಭವಾತ್ಮಕ ವಿಧಾನಗಳನ್ನು ಒಳಗೊಂಡಿದೆ. 

-ಶಿಕ್ಷಕರಿಗೆ ಕಷ್ಟಕರವಾದ ಪರಿಕಲ್ಪನೆಗಳನ್ನು ಅರ್ಥೈಸಲು 2-5 ನಿಮಿಷಗಳ ಕಾಲದ ವಿಡಿಯೋ ಗಳನ್ನೂ ಅಳವಡಿಸಲಾಗಿದೆ. 

-ಮಕ್ಕಳ ಕಲಿಕೆಗೆ ಮತ್ತು ನಿಮ್ಮ ಬೋಧನಾ ವಿಧಾನಕ್ಕೆ ಪೂರಕವಾಗುವಂತೆ   ಶಿಕ್ಷಕರು ಇದರಲ್ಲಿ  ಬದಲಾವಣೆ ಮಾಡಿಕೊಳ್ಳಬಹುದಾಗಿದೆ. 

-ಈ ಚಟುವಟಿಕೆ/ ಪ್ರಯೋಗಗಳನ್ನು ಶಿಕ್ಷಕರು ತಮ್ಮ ಮಕ್ಕಳ ಕಲಿಕೆಗೆ ಅನುಗುಣವಾಗಿ ಪಾಠವನ್ನು ಪರಿಚಯಿಸಲು  / ಪರಿಕಲ್ಪನೆಗಳನ್ನು ಅರ್ಥೈಸಲೂ ಉಪಯೋಗಿಸಬಹುದಾಗಿದೆ. 

- ILP ಕಿಟ್ ನಿಮ್ಮಲ್ಲಿದ್ದಲ್ಲಿ ಅದನ್ನು ಬಳಸಿಕೊಳ್ಳಬಹುದು.

-ಈ ಪಾಠ ಯೋಜನೆಗಳನ್ನು ಉತ್ತಮಪಡಿಸಲು  ಶಿಕ್ಷಕರು / ವಿದ್ಯಾರ್ಥಿಗಳು ತಮ್ಮ ಸಲಹೆಗಳನ್ನೂ  ಮುಕ್ತವಾಗಿ ನೀಡಬಹುದಾಗಿದೆ.

India Literacy Project - email: info@ilpnet.org

3 of 123

2022-2023 ಶೈಕ್ಷಣಿಕ ವರ್ಷದಲ್ಲಿ ಶಾಲೆಗಳಲ್ಲಿ ಕಲಿಕಾ ಚೇತರಿಕೆ ಕಾರ್ಯಕ್ರಮ

ಅನುಷ್ಠಾನವಾಗಲಿದೆ.

ಈ ppt ಗಳು ಕಲಿಕಾ ಚೇತರಿಕೆಯ ಕಲಿಕಾ ಹಾಳೆಗಳು ಮತ್ತು ಪಠ್ಯ ಪುಸ್ತಕದ

ವಿಷಯಗಳು ಸುಗಮವಾದ ಉಪಕ್ರಮಕ್ಕೆ ಶಿಕ್ಷಕರಿಗೆ ಸಹಾಯವಾಗುವಂತೆ ಇದೆ.

ಶಿಕ್ಷಕರಿಗಾಗಿ....

4 of 123

ನಮ್ಮ ಸುತ್ತಲಿನ ದ್ರವ್ಯವು ಶುದ್ಧವೇ(Is matter around us pure)

ತರಗತಿ: 9

ಅಧ್ಯಾಯ: 2

ವಿಷಯ: ವಿಜ್ಞಾನ

5 of 123

ಶಿಕ್ಷಕರಿಗಾಗಿ....

ಕಲಿಕಾ ಫಲಗಳು

1. ಶುದ್ಧ ಮತ್ತು ಅಶುದ್ಧ ವಸ್ತುಗಳು, ದ್ರಾವಣ, ಕಲಿಲ ಮತ್ತು ನಿಲಂಬಿತ ಕ್ಷಣಗಳು ವಿಭಾಗಳನ್ನು ಅವುಗಳ ಗುಣಲಕ್ಷಣಗಳ ಆಧಾರದ ಮೇಲೆ ವಿಂಗಡಿಸುವೆ ಮತ್ತು ವಿವರಿಸುವೆ.

2. ಮಿಶ್ರಣನದಲ್ಲಿರುವ ಘಟಕಾಂಶಗಳನ್ನು ಬೇರ್ಪಡಿಸಬಹುದಾದ ವಿಧಾನಗಳನ್ನು ತಿಳಿಯುವ ಮತ್ತು ಪ್ರಯೋಗಗಳ ಮೂಲಕ ಬೇರ್ಪಡಿಸುವೆ.

3. ನಮ್ಮ ಸುತ್ತ ಮುತ್ತಲಿನ ಬದಲಾವಣೆಗಳನ್ನು ಭೌತ ಮತ್ತು ರಾಸಾಯನಿಕ ಬದಲಾವಣೆಗಳೆಚಿದು ವರ್ಗೀಕರಿಸುವೆ ಮತ್ತು ಅದರ ಹಿಂದಿನ ಕ್ಷರಣಗಳನ್ನು ವಿವರಿಸುವೆ.

6 of 123

ಶುದ್ಧ ಮತ್ತು ಅಶುದ್ಧ ವಸ್ತುಗಳು, ದ್ರಾವಣ, ಕಲಿಲ ಮತ್ತು ನಿಲಂಬಿತ ಕ್ಷಣಗಳು ವಿಭಾಗಳನ್ನು ಅವುಗಳ ಗುಣಲಕ್ಷಣಗಳ ಆಧಾರದ ಮೇಲೆ ವಿಂಗಡಿಸುವೆ ಮತ್ತು ವಿವರಿಸುವೆ.

ಕಲಿಕಾ ಫಲ -1

7 of 123

ಈ ಪದಾರ್ಥಗಳು ಶುದ್ದವೇ?

ಈ ಪದಾರ್ಥಗಳು ಶುದ್ಧ ಎಂದು ಹೇಗೆ ತಿಳಿಯುವುದು?

8 of 123

ಈ ಚಿತ್ರಗಳನ್ನು ಗಮನಿಸಿ.

  1. ಇವರೆಲ್ಲ ಏನು ಮಾಡುತ್ತಿದ್ದಾರೆ?

  • ಏಕೆ ಆ ಕೆಲಸವನ್ನು ಮಾಡುತ್ತಿರಬಹುದು?

9 of 123

ಪರಿಚಯ

  • ಒಂದು ವೈಜ್ಞಾನಿಕ ಜಗತ್ತಿನಲ್ಲಿ ನಾವು ಕಾಣುವ ನಮ್ಮ ಸುತ್ತಲಿರುವ ಹೆಚ್ಚಿನ ಅಂಶಗಳು ಎರಡು ಅಥವಾ ಹೆಚ್ಚು ಶುದ್ಧ ಘಟಕಗಳ ಮಿಶ್ರಣಗಳಾಗಿವೆ.

  • ಹಾಲು ಎಂಬುದು ನೀರು, ಕೊಬ್ಬು, ಪ್ರೋಟೀನ್ ಇತ್ಯಾದಿಗಳ ಮಿಶ್ರಣವಾಗಿದೆ.

  • ಒಂದು ವಸ್ತುವಿನ ಘಟಕ ಕಣಗಳು ಅವುಗಳ ರಾಸಾಯನಿಕ ಪ್ರಕೃತಿಯಲ್ಲಿ ಒಂದೇ ಆಗಿರುವಾಗ ಒಂದು ವಸ್ತುವನ್ನು ಶುದ್ಧ ಎಂದು ಪರಿಗಣಿಸಲಾಗುತ್ತದೆ.

  • ಶುದ್ಧ ವಸ್ತುವು ಶುದ್ಧ ಏಕೈಕ ರೂಪವಾಗಿದೆ.

10 of 123

ಮಿಶ್ರಣ ಎಂದರೇನು?

  • ಮಿಶ್ರಣಗಳು ಒಂದಕ್ಕಿಂತ ಹೆಚ್ಚು ವಿಧದ ಶುದ್ಧ ರೂಪದ ದ್ರವ್ಯದಿಂದ ರಚಿಸಲ್ಪಟ್ಟಿವೆ, ಇದು ಒಂದು ವಸ್ತುವೆಂದು ಕರೆಯಲ್ಪಡುತ್ತದೆ.

  • ಯಾವುದೇ ರೀತಿಯ ಭೌತಿಕ ಪ್ರಕ್ರಿಯೆಯಿಂದ ಒಂದು ವಸ್ತುವನ್ನುಬೇರೆ ರೀತಿಯ ವಸ್ತುಗಳನ್ನಾಗಿ ಬೇರ್ಪಡಿಸಲು ಸಾಧ್ಯವಿಲ್ಲ.

  • ನಮಗೆ ತಿಳಿದಿರುವಂತೆ ಕರಗಿರುವ ಸೋಡಿಯಂ ಕ್ಲೋರೈಡನ್ನು ನೀರಿನಿಂದ ಬೇರ್ಪಡಿಸಲು ಭೌತ ಪ್ರಕ್ರಿಯೆಯಾದ ಆವೀಕರಣದಿಂದ ಸಾಧ್ಯವಿದೆ.

  • ಆದಾಗ್ಯೂ, ಸೋಡಿಯಂ ಕ್ಲೋರೈಡ್( NaCl )ವಸ್ತುವಾಗಿದ್ದು, ಅದನ್ನು ಭೌತ ಪ್ರಕ್ರಿಯೆಯಿಂದ ಅದರ ರಾಸಾಯನಿಕ (Na ಸೋಡಿಯಂ Cl ಕ್ಲೋರಿನ್) ಘಟಕಾಂಶಗಳಾಗಿ ಬೇರ್ಪಡಿಸಲು ಸಾಧ್ಯವಿಲ್ಲ.

  • ಉಪ್ಪು ಒಂದು ಶುದ್ಧ ವಸ್ತು.

.

11 of 123

ಮಿಶ್ರಣ ಎಂದರೇನು?

ಅದೇ ರೀತಿಯಾಗಿ, ಸಕ್ಕರೆ (C6H1206) ಒಂದು ವಸ್ತುವಾಗಿದ್ದು,

ಒಂದೇ ರೀತಿಯ ಶುದ್ಧ ದ್ರವ್ಯವನ್ನು ಹೊಂದಿದೆ ಮತ್ತು ಅದರ ಸಂಯೋಜನೆ ಎಲ್ಲೆಡೆಯೂ ಒಂದೇ ಆಗಿರುತ್ತದೆ.

ತಂಪು ಪಾನೀಯ ಮತ್ತು ಮಣ್ಣು ಏಕ ರೀತಿಯ ಒಂದೇ ವಸ್ತುಗಳಲ್ಲ.

ವಸ್ತುವಿನ ಆಕರವು ಯಾವುದಾಗಿದ್ದರೂ, ಅದು ಯಾವಾಗಲೂ ಒಂದೇ ಗುಣಲಕ್ಷಣವನ್ನು ಹೊಂದಿರುತ್ತದೆ.

ಆದ್ದರಿಂದ, ಮಿಶ್ರಣವು ಒಂದಕ್ಕಿಂತ ಹೆಚ್ಚು ವಸ್ತುಗಳನ್ನು ಹೊಂದಿದೆ ಎಂದು ನಾವು ಹೇಳಬಹುದು.

  • ಮಣ್ಣು, ಹಣ್ಣಿನ ರಸವು ಮಿಶ್ರಣವಾಗಿದೆ

12 of 123

ಧಾತುಗಳು

1661 ರಲ್ಲಿ ಧಾತು ಎಂಬ ಪದವನ್ನು ಮೊದಲ ಬಾರಿಗೆ ರಾಬರ್ಟ್ ಬಾಯ್ಲ್ ಎಂಬ ವಿಜ್ಞಾನಿ ಬಳಸಿದರು.

13 of 123

ಧಾತುಗಳ ವಿಧಗಳು

  • ಧಾತುಗಳನ್ನು ಲೋಹಗಳು, ಅಲೋಹಗಳು ಮತ್ತು ಲೋಹಾಭಗಳು ಎಂದು ಮೂರು ಭಾಗಗಳಾಗಿ ವಿಂಗಡಿಸುತ್ತೇವೆ.

14 of 123

ಲೋಹಗಳ ಲಕ್ಷಣಗಳು

  • ಹೊಳಪನ್ನು ಹೊಂದಿರುತ್ತವೆ.
  • ಬೆಳ್ಳಿಯ ಬೂದು ಅಥವಾ ಬಂಗಾರದ ಹಳದಿ ಬಣ್ಣವನ್ನು ಹೊಂದಿರುತ್ತವೆ
  • ಶಾಖ ಮತ್ತು ವಿದ್ಯುತ್ ವಾಹಕ
  • ತನ್ಯತೆಯನ್ನು ಹೊಂದಿವೆ
  • ಕುಟ್ಯತೆಯನ್ನು ಹೊಂದಿವೆ

ಉದಾ: ಚಿನ್ನ, ಬೆಳ್ಳಿ, ಸೋಡಿಯಂ,........

15 of 123

ಅಲೋಹಗಳ ಗುಣ ಲಕ್ಷಣಗಳು

  • ವೈವಿಧ್ಯಮಯ ಬಣ್ಣಗಳನ್ನು ಪ್ರದರ್ಶಿಸುತ್ತವೆ.

  • ಶಾಖ ಮತ್ತು ವಿದ್ಯುತ್ ದುರ್ಬಲ ವಾಹಕಗಳು.

  • ಹೊಳಪು, ಶಬ್ದ ಮತ್ತು ಕುಟ್ಯ ಗುಣಗಳನ್ನು ಹೊಂದಿರುವುದಿಲ್ಲ.

ಉದಾ: ಹೈಡ್ರೋಜನ್, ಆಕ್ಸಿಜನ್, ಬ್ರೋಮಿನ್,.....

16 of 123

ಲೋಹಾಭಗಳು

  • ಕೆಲವು ಧಾತುಗಳು ಲೋಹ ಮತ್ತು ಅಲೋಹಗಳ ನಡುವಣ ಗುಣಗಳನ್ನು ಹೊಂದಿರುತ್ತವೆ. ಅವುಗಳನ್ನು ಲೋಹಾಭಗಳು ಎನ್ನುತ್ತಾರೆ.

ಉದಾ: ಬೋರಾನ್, ಸಿಲಿಕಾನ್,,......

ಸಿಲಿಕಾನ್

17 of 123

ಸಂಯುಕ್ತಗಳು

  • ಎರಡು ಅಥವಾ ಹೆಚ್ಚಿನ ಧಾತುಗಳು ರಾಸಾಯನಿಕವಾಗಿ ಒಂದಕ್ಕೊಂದು ನಿರ್ದಿಷ್ಟ ಪ್ರಮಾಣದಲ್ಲಿ ಸಂಯೋಗ ಹೊಂದಿದ ವಸ್ತುವಿಗೆ ಸಂಯುಕ್ತ ವಸ್ತು ಎನ್ನುತ್ತಾರೆ.

ಉದಾ: ನೀರು, ಹೈಡ್ರೋಜನ್ ಕ್ಲೋರೈಡ್, ಸೋಡಿಯಂಕ್ಲೋರೈಡ್,.... ಕಾರ್ಬನ್ಡೈಆಕ್ಸೈಡ್,ಗ್ಲುಕೋಸ್,

18 of 123

ಚಟುವಟಿಕೆ .1.1

ಈ ಕೆಳಗಿನ ವಸ್ತುಗಳನ್ನು ಶುದ್ಧ ಮತ್ತು ಅಶುದ್ಧ ವಸ್ತುಗಳಾಗಿ ವಿಂಗಡಿಸಿ ಮತ್ತು ಕಾರಣ ನೀಡಿ.

ವಸ್ತುಗಳು

ಶುದ್ಧ ವಸ್ತುಗಳು

ಅಶುದ್ಧ ವಸ್ತುಗಳು

ಕಾರಣ

ಹಾಲು

ನೀರು

ಉಪ್ಪು+ನೀರು

ಉಪ್ಪು

ಕಬ್ಬಿಣದ ಮೊಳೆ

ಮಣ್ಣು

ತಾಮ್ರದ ಮೊಳೆ

ಚಿನ್ನ

ಆಕ್ಸಿಜನ್

ಎಣ್ಣೆ+ನೀರು

ಜೇನುತುಪ್ಪ

ಗಾಳಿ

ಸಕ್ಕರೆ

19 of 123

ಚಟುವಟಿಕೆ .1.1

ಸೂಚನೆ : ವರ್ಗೀಕರಿಸುವಾಗ ಘನ ದ್ರವ ಮತ್ತು ಅನಿಲಗಳನ್ನು ವರ್ಗೀಕರಿಸಿ ಬರೆಯುವುದು

  • ಉಪ್ಪು ನೀರು ಮತ್ತು ಉಪ್ಪಿಗೂ ಇರುವ ವ್ಯತ್ಯಾಸವೇನು? _______________________________________________________

  • ಕಬ್ಬಿಣದ ಮೊಳೆ ಶುದ್ಧ ವಸ್ತುವೇ ಹೇಗೆ ಹೇಳುತ್ತೀರಿ? ________________________________________________________

  • ಒಂದಕ್ಕಿಂತ ಹೆಚ್ಚು ವಸ್ತುಗಳು ಬೌತಿಕವಾಗಿ ಬೆರೆತಿದ್ದರೆ, ಅಂತಹ ವಸ್ತುಗಳನ್ನು _________ ಎನ್ನುವರು.

20 of 123

ಚಟುವಟಿಕೆ .1.1

ಈ ಮೇಲಿನ ಚಟುವಟಿಕೆಯನ್ನು ಆಧಾರಿಸಿ ಒಂದೇ ರೀತಿಯ ಗುಣಲಕ್ಷಣಗಳ ಆಧಾರದ ಮೇಲೆ ವಸ್ತುಗಳನ್ನು ಧಾತು, ಸಂಯುಕ್ತ ಮತ್ತು ಮಿಶ್ರಣಗಳಾಗಿ ವಿಂಗಡಿಸಿ.

ನಿಮಗೆ ಗೊತ್ತೆ : ಪ್ರಸ್ತುತ 100 ಕ್ಕಿಂತ ಹೆಚ್ಚು ಧಾತುಗಳು ಇದ್ದು, 92 ಧಾತುಗಳು ಪ್ರಕೃತಿಯಿಂದ ದೊರೆಯುತ್ತವೆ. ಉಳಿದವು ಮಾನವ ನಿರ್ಮಿತ.

  • ರಾಸಾಯನಿಕ ಸಂಯೋಜನೆಯ ಆಧಾರದ ಮೇಲೆ ವಸ್ತುಗಳನ್ನು ___________ ಮತ್ತು _________ ಗಳಾಗಿ ವಿಂಗಡಿಸಬಹುದು.

ಧಾತುಗಳು

ಸಂಯುಕ್ತಗಳು

ಮಿಶ್ರಣಗಳು

21 of 123

ಚಟುವಟಿಕೆ .1.2

ನಿಮಗೆ ತಿಳಿದಿರುವ ಧಾತುಗಳು, ಸಂಯುಕ್ತಗಳು ಮತ್ತು ಮಿಶ್ರಣಗಳನ್ನು ಪಟ್ಟಿ ಮಾಡಿ

ಧಾತುಗಳು

ಸಂಯುಕ್ತಗಳು

ಮಿಶ್ರಣಗಳು

  • ಎರಡು ಅಥವಾ ಎರಡಕ್ಕಿಂತ ಹೆಚ್ಚು ಧಾತುಗಳು ಅಥವಾ ಸಂಯುಕ್ತಗಳು ಬೌತಿಕವಾಗಿ ಬೆರೆಯುವುದರಿಂದ _________ ಸಿಗುತ್ತದೆ.

  • ನಾವೇ ಮಿಶ್ರಣಗಳನ್ನು ತಯಾರಿಸಬಹುದು? 2 ಉದಾಹರಣೆ ನೀಡಿ.

22 of 123

ಮಿಶ್ರಣದಲ್ಲಿರುವ ಘಟಕಾಂಶಗಳನ್ನು ಬೇರ್ಪಡಿಸಬಹುದಾದ ವಿಧಾನಗಳನ್ನು ತಿಳಿಯುವರು ಮತ್ತು ಪ್ರಯೋಗಗಳ ಮೂಲಕ ಬೇರ್ಪಡಿಸುವರು.

ಕಲಿಕಾ ಫಲ- 2

23 of 123

ಆಟದ ಚಟುವಟಿಕೆ

A ಗುಂಪಿನವರು ಒಂದು ಬೀಕರಿನಲ್ಲಿ 50 ml ನೀರನ್ನು ತೆಗೆದುಕೊಂಡು ಅದರಲ್ಲಿ ಒಂದು ಚಮಚ ತಾಮ್ರದ ಸಲ್ಪೇಟ್  ಪುಡಿಯನ್ನು ಹಾಕಿರಿ.

B ಗುಂಪಿನವರು, ಇನ್ನೊಂದು ಬೀಕರಿನಲ್ಲಿ 50 ml. ನೀರು ಮತ್ತು 2 ಚಮಚ ತಾಮ್ರದ ಸಲ್ಪೇಟ್ ಅನ್ನು ತೆಗೆದುಕೊಳ್ಳಿ

C ಮತ್ತು D ಗುಂಪಿನವರು , ವಿವಿಧ ಪ್ರಮಾಣದ ತಾಮ್ರದ ಸಲ್ಪೇಟ್  ಮತ್ತು ಪೊಟ್ಯಾಷಿಯಂ ಪರ್ಮಾಂಗನೇಟ್ ಅಥವಾ ಸಾಮಾನ್ಯ ಉಪ್ಪು (ಸೋಡಿಯಂ ಕ್ಲೋರೈಡ್) ಇವುಗಳ ಮಿಶ್ರಣವನ್ನು ತೆಗೆದುಕೊಳ್ಳಲಿ.

ಬಣ್ಣ ಮತ್ತು ಸಂರಚನೆಯ ಏಕರೂಪತೆಯನ್ನು ವೀಕ್ಷಿಸಿ ವರದಿ ಮಾಡಿ

ತರಗತಿಯಲ್ಲಿನ ಮಕ್ಕಳನ್ನು A,B, C ಮತ್ತು D ಎಂದು ನಾಲ್ಕು ಭಾಗಗಳನ್ನಾಗಿ ಮಾಡಿ.

24 of 123

ಆಟದ ಚಟುವಟಿಕೆ

ಗುಂಪು A ಮತ್ತು B ಏಕರೂಪ ಸಂಯೋಜನೆ ಹೊಂದಿರುವ ಮಿಶ್ರಣವನ್ನು ಪಡೆಯುತ್ತಾರೆ. ಈ ರೀತಿಯ ಮಿಶ್ರಣಗಳನ್ನು

ಸಮರೂಪ (homogenous mixture)ಮಿಶ್ರಣ ಅಥವಾ ದ್ರಾವಣಗಳು ಎನ್ನುತ್ತೇವೆ.

ಈ ರೀತಿಯ ಮಿಶ್ರಣಗಳಿಗೆ ಇನ್ನಿತರ ಉದಾಹರಣೆಗಳು

  1. ನೀರಿನಲ್ಲಿ ಉಪ್ಪು ಮತ್ತು ನೀರಿನಲ್ಲಿ ಸಕ್ಕರೆ.

  • ಎರಡೂ ಗುಂಪುಗಳ ದ್ರಾವಣಗಳ ಬಣ್ಣವನ್ನು ಹೋಲಿಸಿ.
  • ಎರಡೂ ಗುಂಪುಗಳು ತಾಮ್ರದ ಸಲ್ಪೇಟ್ ದ್ರಾವಣಗಳನ್ನೇ ಪಡೆದಿದ್ದರೂ ಎರಡೂ ಗುಂಪುಗಳ ತಾಮ್ರದ ಸಲ್ಪೇಟ್ ದ್ರಾವಣದ ಬಣ್ಣದ ಗಾಡತೆಯು ಬೇರೆಯಾಗಿದೆ.
  • ಇದರಿಂದ ಸಮರೂಪ ಮಿಶ್ರಣವು ವಿಭಿನ್ನ ಸಂಯೋಜನೆಯನ್ನು ಹೊಂದಿರಬಹುದು ಎನ್ನುವುದು ತಿಳಿಯುತ್ತದೆ.

A -ಒಂದು ಚಮಚ ನೀರನ್ನು ತಾಮ್ರದ ಸಲ್ಪೇಟ್  ಪುಡಿ

B- ನೀರು 2 ಚಮಚ ತಾಮ್ರದ ಸಲ್ಪೇಟ್ ಪುಡಿ

25 of 123

  • ಗುಂಪು C ಮತ್ತು D : ಪಡೆದಿರುವ ವಿಭಿನ್ನ ಘಟಕಾಂಶಗಳನ್ನು ಹೊಂದಿದ್ದು ಭೌತಿಕವಾಗಿ ನಿರ್ದಿಷ್ಟ ಭಾಗಗಳನ್ನೊಳಗೊಂಡಿದೆ. ಇಂತಹ ಮಿಶ್ರಣಗಳನ್ನು ಅಸಮರೂಪ ಮಿಶ್ರಣಗಳು( heterogeneous mixture) ಎನ್ನುತ್ತೇವೆ.

  • ಸೋಡಿಯಂ ಕ್ಲೋರೈಡ್ ಮತ್ತ್ತು ಕಬ್ಬಿಣ ಚೂರಿನ ಮಿಶ್ರಣ, ಉಪ್ಪು ಮತ್ತು ಸಲ್ಫರ್ ಮಿಶ್ರಣ, ತೈಲ ಮತ್ತು ನೀರಿನ ಮಿಶ್ರಣಗಳು ಅಸಮರೂಪ ಮಿಶ್ರಣಗಳಿಗೆ ಉದಾಹರಣೆಗಳು.

ಆಟದ ಚಟುವಟಿಕೆ - ಗಮನ

C ಮತ್ತು D ಗುಂಪಿನವರು , ವಿವಿಧ ಪ್ರಮಾಣದ ತಾಮ್ರದ ಸಲ್ಪೇಟ್  ಮತ್ತು ಪೊಟ್ಯಾಷಿಯಂ ಪರ್ಮಾಂಗನೇಟ್ ಅಥವಾ ಸಾಮಾನ್ಯ ಉಪ್ಪು (ಸೋಡಿಯಂ ಕ್ಲೋರೈಡ್) ಇವುಗಳ ಮಿಶ್ರಣ.

26 of 123

ಚಟುವಟಿಕೆ - 2

ತರಗತಿಯನ್ನು A,B,C,D ಎಂದು ಗುಂಪುಗಳಾಗಿ ವಿಂಗಡಿಸಿ

ಗುಂಪು A ಗೆ ತಾಮ್ರದ ಸಲ್ಪೇಟ್  ಹರಳುಗಳು .

ಗುಂಪು B ಒಂದು ಚಮಚ ತಾಮ್ರದ ಸಲ್ಪೇಟ್ .

ಗುಂಪು C ಗೆ ಸುಣ್ಣದ ಪುಡಿ ಅಥವಾ ಗೋಧಿ ಹಿಟ್ಟು .

D ಗುಂಪಿಗೆ ಕೆಲವು ಹಾಲಿನ ಹನಿಗಳು ಅಥವಾ ಶಾಯಿಯ ಹನಿಗಳು .

ಪ್ರತಿ ತಂಡವೂ ನೀಡಿರುವ ಮಾದರಿಗಳನ್ನು ನೀರಿಗೆ ಬೆರೆಸಿ (ಸ್ವಚ್ಚವಾದ) ಕಡ್ಡಿಯಿಂದ ಚೆನ್ನಾಗಿ ಕಲಕಬೇಕು. ಮಿಶ್ರಣದಲ್ಲಿರುವ ಕಣಗಳು ಕಾಣಿಸುತ್ತವೆಯೇ? ಬೀಕರ್ ನಲ್ಲಿರುವ ಮಿಶ್ರಣದ ಮೂಲಕ ಹಾಯುವಂತೆ ಬೆಳಕನ್ನು ಹಾಯಿಸಿ ಮತ್ತು ಮುಂಭಾಗದಿಂದ ವೀಕ್ಷಿಸಿ. ಬೆಳಕಿನ ಕಿರಣದ ಪಥ ಕಾಣಿಸುತ್ತದೆಯೇ?

27 of 123

  • ಮಿಶ್ರಣಗಳು ಅಲುಗಾಡದಂತೆ ಕೆಲವು ನಿಮಿಷಗಳ ಕಾಲ ಬಿಡಿ.(ಈ ಸಮಯದಲ್ಲಿ ಸೋಸುವಿಕೆ ಉಪಕರಣವನ್ನು ಜೋಡಿಸಿ) ಮಿಶ್ರಣವು ಸ್ಥಿರವಗಿದೆಯೇ ಅಥವಾ ಕಣಗಳು ಸ್ವಲ್ಪ ಸಮಯದ ನಂತರ ತಳ ಸೇರುತ್ತಿದೆಯೇ?

  • ಮಿಶ್ರಣವನ್ನು ಸೋಸಿ. ಸೋಸು ಕಾಗದದ ಮೇಲೆ ಏನಾದರೂ ಉಳಿಕೆ ಕಂಡು ಬಂದಿದೆಯೇ? ಫಲಿತಾಂಶವನ್ನು ಚರ್ಚಿಸಿ ಮತ್ತು ಅಭಿಪ್ರಾಯವನ್ನು ರೂಪಿಸಿ.
  • A ಮತ್ತು B ಗುಂಪುಗಳು ದ್ರಾವಣವನ್ನು ಪಡೆದಿವೆ.

  • C ಗುಂಪು ನಿಲಂಬಿತ ಮಿಶ್ರಣವನ್ನು ಪಡೆದಿದೆ.

  • D ಗುಂಪು ಕಲಿಲ ದ್ರಾವಣವನ್ನು ಪಡೆದಿದೆ.

ಚಟುವಟಿಕೆ - 2

28 of 123

  • ದ್ರವ್ಯ ಎಂದರೇನು?

  • ಸಮರೂಪ ಮತ್ತು ಅಸಮರೂಪ ಮಿಶ್ರಣಗಳಿಗಿರುವ ವ್ಯತ್ಯಾಸವನ್ನು ಪಟ್ಟಿ ಮಾಡಿ.

  • ಮಿಶ್ರಣ ಎಂದರೇನು?

  • ಸಮರೂಪ ಮಿಶ್ರಣ ಎಂದರೇನು?

  • ಅಸಮರೂಪ ಮಿಶ್ರಣ ಎಂದರೇನು?

  • ಅಸಮರೂಪ ಮಿಶ್ರಣಕ್ಕೆ ಉದಾಹರಣೆ ಕೊಡಿ.

ಉತ್ತರಿಸಿ.

29 of 123

ಚಟುವಟಿಕೆ .2.1

ಈ ಕೆಳಗೆ ನೀಡಿರುವ ವಸ್ತುಗಳನ್ನು ಬಳಸಿ, ಮಿಶ್ರಣ ತಯಾರಿಸಿ ಮತ್ತು ಕೊಟ್ಟಿರುವ ಕೋಷ್ಟಕ ತುಂಬಿ.

ಮಿಶ್ರಣಗಳು

ಮಿಶ್ರಣ ನೋಡಲು ಒಂದೇ ರೀತಿ ಕಾಣುತ್ತಿದೆಯೇ?

ಸಮರೂಪ ಮಿಶ್ರಣಗಳು

ಅಸಮರೂಪ ಮಿಶ್ರಣಗಳು

ಉಪ್ಪು+ನೀರು

ತಾಮ್ರದ ಸಲ್ಫೇಟ್+ನೀರು

ನೀರು+ಸೂರ್ಯಕಾಂತಿ ಎಣ್ಣೆ

ಬೇಳೆ+ಅಕ್ಕಿ

ನೀರು+ಸಕ್ಕರೆ

ಕಬ್ಬಿಣದ ಚೂರು+ ಸಲ್ಫರ್

ಸೂಚನೆ : ಭೌತಿಕ ವಿಧಾನಗಳಿಂದ ಆಹಾರ ಪದಾರ್ಥಗಳನ್ನು ಬೇರ್ಪಡಿಸುವ ಹಲವಾರು ವಿಧಾನಗಳನ್ನು ನಾವು ಮನೆಯಲ್ಲಿ ವೀಕ್ಷಿಸುತ್ತೇವೆ.

30 of 123

ಚಟುವಟಿಕೆ .2.1

  • ಉಪ್ಪು-ನೀರು ಮತ್ತು ಅಕ್ಕಿ-ಬೇಳೆ ಮಿಶ್ರಣಕ್ಕೂ ಇರುವ ವ್ಯತ್ಯಾಸ:

_________________________________________________

_________________________________________________

___________

  • ವಾತಾವರಣದ ಗಾಳಿಯು ಸಮರೂಪ ಮಿಶ್ರಣವೇ? ಹೇಗೆ.

_________________________________________________

___________

31 of 123

ದ್ರಾವಣ ಎಂದರೇನು?

ಎರಡು ಅಥವಾ ಹೆಚ್ಚು ವಸ್ತುಗಳ ಸಮರೂಪ ಮಿಶ್ರಣವೇ ದ್ರಾವಣ

32 of 123

ದ್ರಾವಣ

  • ಒಂದು ದ್ರಾವಣದಲ್ಲಿ ಎರಡು ಘಟಕಗಳು, ದ್ರಾವಕ ಮತ್ತು ದ್ರಾವ್ಯವನ್ನು ಹೊಂದಿರುತ್ತದೆ.

  • ಇತರ ಅಂಶವನ್ನು ಕರಗಿಸಿಕೊಳ್ಳುವ ದ್ರಾವಣದ ಘಟಕಾಂಶವು (ದೊಡ್ಡ ಪ್ರಮಾಣದಲ್ಲಿ ಕಂಡುಬರುತ್ತದೆ) ದ್ರಾವಕ ಎಂದು ಕರೆಯಲ್ಪಡುತ್ತದೆ.

  • ದ್ರಾವಕದಲ್ಲಿ ಕರಗುವ ದ್ರಾವಣದ ಘಟಕಾಂಶವನ್ನು (ಕಡಿಮೆ ಪ್ರಮಾಣದಲ್ಲಿ ಇರುತ್ತದೆ ) ದ್ರಾವ್ಯ ಎನ್ನುತ್ತಾರೆ.

33 of 123

ದ್ರಾವ್ಯ + ದ್ರಾವಕ = ದ್ರಾವಣ

ಸಕ್ಕರೆಯನ್ನು ನೀರಿನಲ್ಲಿ ಕರಗಿಸಿದರೆ ಅದು ದ್ರಾವಣ ವಾಗುತ್ತದೆ.

ಈ ದ್ರಾವಣದಲ್ಲಿ ಸಕ್ಕರೆಯು ದ್ರಾವ್ಯ ಮತ್ತು ನೀರು ದ್ರಾವಕ

ದ್ರಾವಣ

34 of 123

  • ದ್ರಾವಣಗಳಲ್ಲಿ ಕಣಗಳ ಮಟ್ಟದಲ್ಲಿ ಏಕರೂಪತೆ ಇರುತ್ತದೆ. ಉದಾಹರಣೆಗೆ, ಲಿಮೊನೇಡ್‍ನಾದ್ಯಂತ ರುಚಿಯು ಒಂದೇ ರೀತಿಯಾಗಿರುತ್ತದೆ. ಇದರಿಂದಾಗಿ ಸಕ್ಕರೆ ಅಥವಾ ಉಪ್ಪಿನ ಕಣಗಳು ದ್ರಾವಣದಲ್ಲಿ ಏಕರೂಪವಾಗಿ ವಿತರಣೆಗೊಂಡಿವೆ ಎಂದು ತಿಳಿಯುತ್ತದೆ.

  • ಲಿಮೊನೆಡ್, ಸೋಡಾ ನೀರು ದ್ರಾವಣಗಳಿಗೆ ಉದಾಹರಣೆಗಳು.

  • ಘನ ರೂಪದ ದ್ರಾವಣಗಳು(ಮಿಶ್ರ ಲೋಹಗಳು) ಮತ್ತು ಅನಿಲ ರೂಪದ ದ್ರಾವಣಗಳು (ಗಾಳಿ) ಕೂಡಾ ಇವೆ.

  • ದ್ರಾವಣಗಳಲ್ಲಿ ಕಣಗಳ ಮಟ್ಟದಲ್ಲಿ ಏಕರೂಪತೆ ಇರುತ್ತದೆ.

  • ಅಂದರೆ ಆ ಪ್ರತಿಯೊಂದು ಕಣಗಳ ಗುಣಗಳು ಒಂದೇ ಆಗಿರುತ್ತದೆ

ದ್ರಾವಣ

35 of 123

ದ್ರಾವಣದ ಗುಣಗಳು

  • ದ್ರಾವಣವು ಸಮರೂಪ ಮಿಶ್ರಣವಾಗಿದೆ.

  • ದ್ರಾವಣದಲ್ಲಿರುವ ಕಣಗಳ ವ್ಯಾಸವು 1 nm ಗಿಂತ ಕಡಿಮೆ ಇರುತ್ತದೆ. ಆದ್ದರಿಂದ ಇವು ಬರಿಗಣ್ಣಿಗೆ ಕಾಣಿಸುವುದಿಲ್ಲ.

  • ಕಣಗಳ ಗಾತ್ರವು ಬಹಳ ಸಣ್ಣದಾಗಿರುವುದರಿಂದ, ತನ್ನಲ್ಲಿ ಹಾದುಹೋಗುವ ಬೆಳಕಿನ ಕಿರಣಗಳನ್ನು ಚದುರಿಸುವುದಿಲ್ಲ. ಆದ್ದರಿಂದ ಬೆಳಕಿನ ಪಥವು ದ್ರಾವಣದಲ್ಲಿ ಕಂಡು ಬರುವುದಿಲ್ಲ.

  • ಸೋಸುವಿಕೆ ವಿಧಾನದಿಂದ ಮಿಶ್ರಣದಲ್ಲಿರುವ ದ್ರವ್ಯದ ಕಣಗಳನ್ನು ಬೇರ್ಪಡಿಸಲು ಸಾಧ್ಯವಿಲ್ಲ. ದ್ರಾವಣವನ್ನು ಅಲುಗಾಡಿಸದಿದ್ದರೂ ದ್ರವ್ಯದ ಕಣಗಳು ತಳ ಸೇರುವುದಿಲ್ಲ. ಅಂದರೆ, ದ್ರಾವಣವು ಸ್ಥಿರವಾಗಿದೆ.

36 of 123

ಘನ ಮಿಶ್ರಣ.

ಮಿಶ್ರಲೋಹಗಳು ಘನ ದ್ರಾವಣಕ್ಕೆ ಉದಾಹರಣೆಗಳಾಗಿವೆ.

ಮಿಶ್ರಲೋಹವು ಎರಡು ಅಥವಾ ಹೆಚ್ಚಿನ ಲೋಹ ಅಥವಾ ಲೋಹ ಮತ್ತು ಆಲೋಹದ ಮಿಶ್ರಣವಾಗಿದೆ

ಹಿತ್ತಾಳೆಯು ಮಿಶ್ರಲೋಹದ ಒಂದು ಉದಾಹರಣೆಯಾಗಿದೆ

ಹಿತ್ತಾಳೆ -30% ಸತು ಮತ್ತು 70% ತಾಮ್ರದಿಂದ ಆಗಿದೆ

37 of 123

ಘನ, ಅನಿಲ - ಮಿಶ್ರಣ

ಕಂಚು ಒಂದು ಮಿಶ್ರ ಲೋಹ..... 12% ತವರ ಮತ್ತು 88% ತಾಮ್ರದಿಂದ ಆಗಿದೆ

ಸ್ಟೇನ್ಲೆಸ್ ಸ್ಟೀಲ್ ಕಬ್ಬಿಣ,10.5% ಕ್ರೋಮಿಯುಂ ,1.2%ಕಾರ್ಬನ್ C

ಹಾಗು ಇನ್ನಿತರ ವಸ್ತುಗಳ ಮಿಶ್ರಣ.

ಗಾಳಿ

38 of 123

ಚಟುವಟಿಕೆ .2.2

ಕೊಟ್ಟಿರುವ ದ್ರಾವಣಗಳಲ್ಲಿರುವ ದ್ರವ್ಯ ಮತ್ತು ದ್ರವಕಗಳನ್ನು ಗುರುತಿಸಿ ಬರೆಯಿರಿ.

ದ್ರವಣ

ದ್ರವ್ಯ

ದ್ರಾವಕ

ಉಪ್ಪುನೀರು

ಸಕ್ಕರೆ ನೀರು

ಸೋಡಾ ನೀರು

ಸೂಚನೆ : ಕರಗುವವಸ್ತುಗಳೇ ದ್ರವ್ಯ ಮತ್ತು ಕರಗಿಸಿಕೊಳ್ಳುವ ವಸ್ತುಗಳನ್ನು ದ್ರಾವಕ ಎನ್ನುತ್ತೇವೆ.

  • ತನ್ನಲ್ಲಿ ಇತರ ಘಟಕಾಂಶಗಳನ್ನು ಕರಗಿಸಿಕೊಳ್ಳುವ ದ್ರಾವಣದ ಘಟಕಾಂಶಗವನ್ನು _______ ಎನ್ನುತ್ತಾರೆ.

  • ದ್ರಾವಣವು ____________ ಮತ್ತು ____________ ಘಟಕಗಳನ್ನು ಹೊಂದಿದೆ.

  • ದ್ರಾವಣದಲ್ಲಿ ಬೆರೆತಿರುವ ದ್ರವ್ಯವನ್ನು ಸೋಸುವಿಕೆ ವಿಧಾನದಿಂದ ಬೇರ್ಪಡಿಸಬಹುದೇ?

39 of 123

ಸಾರೀಕೃತ ದ್ರಾವಣ (ದ್ರಾವಣದ ಸಾರತೆ)

ಚಟುವಟಿಕೆ 2 ರಲ್ಲಿ ಗುಂಪು A ಮತ್ತು B ಗಳು ವಿಭಿನ್ನ ರೀತಿಯ ಛಾಯೆಯುಳ್ಳ ದ್ರಾವಣಗಳನ್ನು ಪಡೆದಿರುವುದನ್ನು ನಾವು ಗಮನಿಸಿದ್ದೇವೆ. ಆದ್ದರಿಂದ ನಮಗೆ ತಿಳಿಯುವುದೇನೆಂದರೆ ದ್ರಾವಣದಲ್ಲಿ ದ್ರಾವ್ಯ ಮತ್ತು ದ್ರಾವಕಗಳ ಪ್ರಮಾಣವನ್ನು ವ್ಯತ್ಯಾಸಗೊಳಿಸಬಹುದು. ದ್ರಾವಣದಲ್ಲಿರುವ ದ್ರಾವ್ಯದ ಪರಿಮಾಣವನ್ನು ಆಧರಿಸಿ ಸಾರರಿಕ್ತ, ಸಾರೀಕೃತ ಅಥವಾ ಪರ್ಯಾಪ್ತ ದ್ರಾವಣ ಎನ್ನುತ್ತಾರೆ. ಚಟುವಟಿಕೆ 2 ರಲ್ಲಿ , A ಗುಂಪು ಪಡೆದ ದ್ರಾವಣವು B ಗುಂಪು ಪಡೆದ ದ್ರಾವಣಕ್ಕೆ ಹೋಲಿಸಿದಲ್ಲಿ ಸಾರರಿಕ್ತ.

ಗುಂಪು A ಗೆ ತಾಮ್ರದ ಸಲ್ಪೇಟ್  ಹರಳುಗಳು .

ಗುಂಪು B ಒಂದು ಚಮಚ ತಾಮ್ರದ ಸಲ್ಪೇಟ್ .

40 of 123

  • ಒಂದು ಚಮಚದಷ್ಟು ಉಪ್ಪನ್ನು ನೀರಿನಲ್ಲಿ ಸೇರಿಸಿ ಅದು ಕರಗುವವರೆಗೂ ಚೆನ್ನಾಗಿ ಕಲಕಿ.

  • ಮತ್ತೆ ಒಂದು ಚಮಚದಷ್ಟು ಉಪ್ಪನ್ನು ಸೇರಿಸಿ ಚೆನ್ನಾಗಿ ಕಲಕಿ. ಹೀಗೆ ಪ್ರತಿ ಬಾರಿಯೂ ಒಂದು ಚಮಚ ಉಪ್ಪನ್ನು ಬೆರೆಸುತ್ತಾ ಕಲಕುತ್ತಿರಿ

  • ಕೆಲವು ಚಮಚಗಳಷ್ಟು ಉಪ್ಪನ್ನು ಬೆರೆಸಿದ ಮೇಲೆ ಸ್ವಲ್ಪ ಉಪ್ಪು ಕರಗದೇ ಬೀಕರ್‍ ನ ತಳದಲ್ಲಿ ಸಂಗ್ರಹಣೆಗೊಳ್ಳುವುದನ್ನು ನೀವು ನೋಡುವಿರಾ? ಹೌದು ಎಂದಾದರೆ, ನಾವು ತೆಗೆದುಕೊಂಡಿರುವ ನೀರಿನ ಪ್ರಮಾಣದಲ್ಲಿ ಇನ್ನೂ ಹೆಚ್ಚಿನ ಉಪ್ಪು ಕರಗಲು ಸಾಧ್ಯವಿಲ್ಲ ಎಂದರ್ಥ.

  • ಈಗ ದ್ರಾವಣ ಪೂರ್ತಿ ಪರ್ಯಾಪ್ತ (saturated) ಎನಿಸಿಕೊಳ್ಳುವುದು.

ಪರ್ಯಾಪ್ತ ಮಣ್ಣಿನ ಬಗ್ಗೆ ತಿಳಿಯಿರಿ..

ಪರ್ಯಾಪ್ತ ದ್ರಾವಣ - ನೆನಪಿಸಿಕೊಳ್ಳಿ

41 of 123

ಚಟುವಟಿಕೆ - 3

ಸರಿಸುಮಾರು 50 ml ನೀರನ್ನು ಎರಡು ಬೀಕರ್ ನಲ್ಲಿ ತೆಗೆದುಕೊಳ್ಳಿ

ಒಂದು ಬೀಕರ್ ಗೆ ಉಪ್ಪು ಮತ್ತು ಎರಡನೇ ಬೀಕರ್ ಗೆ ಸಕ್ಕರೆ ಅಥವಾ ಬೇರಿಯಮ್ ಕ್ಲೋರೈಡ್ ಸೇರಿಸಿ ಚೆನ್ನಾಗಿ ಕಲಕಿ.

ಇನ್ನೂ ಹೆಚ್ಚಿನ ದ್ರಾವ್ಯವನ್ನು ಕರಗಿಸಲು ಸಾಧ್ಯವಿಲ್ಲದಿದ್ದಾಗ , ಬೀಕರ್ ನಲ್ಲಿರುವ ದ್ರಾವಣವನ್ನು ಕಾಯಿಸಿ. ತಾಪವನ್ನು 50 C ಹೆಚ್ಚಿಸಿ

ಮತ್ತೆ ದ್ರಾವ್ಯವನ್ನು ಸೇರಿಸಲು ಪ್ರಾರಂಭಿಸಿ.

42 of 123

ದ್ರಾವಣದ ವಿಲೀನತೆ.

ನಿರ್ದಿಷ್ಟ ತಾಪದಲ್ಲಿ ನೀರಿನಲ್ಲಿ ವಿಲೀನವಾಗಿರುವ ಉಪ್ಪು ಮತ್ತು ಸಕ್ಕರೆ ಅಥವಾ ಬೇರಿಯಮ್ ಕ್ಲೋರೈಡ್ ಪರಿಮಾಣವು ಒಂದೇ ಆಗಿದೆಯೇ?

  • ಯಾವುದೇ ನಿರ್ದಿಷ್ಟ ತಾಪಮಾನದಲ್ಲಿ, ತಾನು ವಿಲೀನಗೊಳಿಸಿಕೊಳ್ಳಬಹುದಾದಷ್ಟು ದ್ರಾವ್ಯವನ್ನು ವಿಲೀನಗೊಳಿಸಿಕೊಂಡಿರುವ ದ್ರಾವಣಕ್ಕೆ ಸಂತೃಪ್ತ ದ್ರಾವಣ ಎನ್ನುವರು.

  • ಈ ನಿರ್ದಿಷ್ಟ ತಾಪದಲ್ಲಿ ಪರ್ಯಾಪ್ತ ದ್ರಾವಣದಲ್ಲಿ ವಿಲೀನವಾಗಿರುವ ದ್ರಾವ್ಯದ ಪರಿಮಾಣಕ್ಕೆ ಆ ದ್ರಾವಣದ ವಿಲೀನತೆ (ವಿಲೀನಗೊಳ್ಳುವ ಸಾಮರ್ಥ್ಯ) ಎನ್ನುವರು.

  • ಒಂದು ದ್ರಾವಣವು ಹೊಂದಿರುವ ದ್ರಾವ್ಯದ ಪರಿಣಾಮವು ಒಂದೊಮ್ಮೆ ಪರ್ಯಾಪ್ತ ಮಟ್ಟಕ್ಕಿಂತ ಕಡಿಮೆ ಇದ್ದಲ್ಲಿ, ಅದನ್ನು ಅಪರ್ಯಾಪ್ತ ದ್ರಾವಣ ಎನ್ನುವರು.

43 of 123

ದ್ರಾವಣದ ಸಾರತೆ

  • ಒಂದು ವೇಳೆ ನೀವು ನಿರ್ದಿಷ್ಟ ತಾಪದಲ್ಲಿನ ಪರ್ಯಾಪ್ತ ದ್ರಾವಣವನ್ನು ತೆಗೆದುಕೊಂಡು ನಿಧಾನವಾಗಿ ತಂಪುಗೊಳಿಸಿದರೆ ಏನಾಗಬಹುದು?

  • ಬೇರೆ ಬೇರೆ ವಸ್ತುಗಳು ಕೊಟ್ಟಿರುವ ದ್ರಾವಕದಲ್ಲಿ ಒಂದೇ ತಾಪದಲ್ಲಿ ಬೇರೆ ಬೇರೆ ವಿಲೀನತೆಯನ್ನು ಹೊಂದಿರುತ್ತವೆ (ತೋರಿಸುತ್ತವೆ) ಎಂದು ಮೇಲಿನ ಚಟುವಟಿಕೆಯಿಂದ ನಾವು ನಿರ್ಣಯಿಸಬಹುದು.

  • ಕೊಟ್ಟಿರುವ ಪರಿಮಾಣ (ರಾಶಿ ಅಥವಾ ಗಾತ್ರ)ದ ದ್ರಾವಣದಲ್ಲಿ ಕರಗಿರುವ ದ್ರಾವ್ಯದ ಪರಿಮಾಣವನ್ನು,ಆ ದ್ರಾವಣದ ಸಾರತೆ ಎನ್ನುತ್ತಾರೆ.

  • ಅಥವಾ ಒಂದು ದ್ರಾವಣದ ಸಾರತೆ ಎಂದರೆ, ಕೊಟ್ಟಿರುವ ನಿರ್ದಿಷ್ಟ ಪರಿಮಾಣದ ದ್ರಾವಕದಲ್ಲಿ (ಗಾತ್ರ ಅಥವಾ ರಾಶಿ) ಕರಗಿರುವ ದ್ರಾವ್ಯದ ಪರಿಮಾಣ.

44 of 123

ದ್ರಾವಣದ ವಿಲೀನತೆ

ದ್ರಾವಣದ ಸಾರತೆ =

ದ್ರಾವ್ಯದ ಪರಿಮಾಣ

ದ್ರಾವಣದ ಪರಿಮಾಣ

ಒಂದು ದ್ರಾವಣದ ಸಾರತೆಯನ್ನು ವ್ಯಕ್ತಪಡಿಸಲು ಹಲವಾರು ಮಾರ್ಗಗಳಿವೆ ಆದರೆ ಇಲ್ಲಿ ನಾವು ಎರಡು ವಿಧಾನಗಳನ್ನು ಕರೆಯುತ್ತೇವೆ?

1. ದ್ರಾವಣದ ಶೇಕಡಾ ರಾಶಿಗಳ ಅನುಪಾತ =

ದ್ರಾವಣದ ರಾಶಿ

ದ್ರಾವ್ಯದ ರಾಶಿ

x 100

2. ದ್ರಾವಣದ ಶೇಕಡಾ ಗಾತ್ರದಿಂದ ರಾಶಿ =

ದ್ರಾವಣದ ಗಾತ್ರ

ದ್ರಾವ್ಯದ ರಾಶಿ

x 100

45 of 123

ದ್ರಾವಣದ ರಾಶಿ

320 g ನೀರಿನಲ್ಲಿ 40 g ಸಾಮಾನ್ಯ ಉಪ್ಪನ್ನು ಕರಗಿಸಿ ದ್ರಾವಣವನ್ನು ತಯಾರಿಸಿದೆ. ದ್ರಾವಣದ ಶೇಕಡಾವರು ರಾಶಿಗಳ ಅನುಪಾತದಲ್ಲಿ ಸಾರತೆಯನ್ನು ಕಂಡು ಹಿಡಿಯಿರಿ.

ದ್ರಾವ್ಯದ ರಾಶಿ (ಉಪ್ಪು) = 40 g

ದ್ರಾವಕದ ರಾಶಿ (ನೀರು) = 320 g

ನಾವು ತಿಳಿದಿರುವಂತೆ,

ದ್ರಾವಣದ ರಾಶಿ = ದ್ರಾವ್ಯದ ರಾಶಿ + ದ್ರಾವಕದ ರಾಶಿ

= 40 g + 320 g

= 360 g

ದ್ರಾವಣದ ರಾಶಿ =

ದ್ರಾವಣದ ರಾಶಿ

ದ್ರಾವ್ಯದ ರಾಶಿ

x 100

40

36೦

= x 100

____

= 11.1 %

46 of 123

ಚಟುವಟಿಕೆ .2.3

ಈ ಕೆಳಗಿನ ಚಟುವಟಿಕೆಯನ್ನು ಮಾಡಿ, ಯಾವುದು ಹೆಚ್ಚು ಸಾರರಿಕ್ತ ದ್ರಾವಣ ಮತ್ತು ಏಕೆ ಎಂಬುದನ್ನು ಚರ್ಚಿಸಿ.

  • ಯಾವ ಬೀಕರ್ ನ ಮಿಶ್ರಣದಲ್ಲಿ ಸಿಹಿ ಹೆಚ್ಚಿತ್ತು?

__________________________________________________________

  • ಹಾಗಾದರೆ, ದ್ರಾವಣದ ಸಾರತೆ ಯಾವುದರ ಆಧಾರದ ಮೇಲೆ ತೀರ್ಮಾನಿಸುತ್ತೇವೆ?

__________________________________________________________

(ಸೂಚನೆ : ದ್ರಾವಣದ ರುಚಿಯನ್ನು ನೋಡುವ ಮೊದಲು ಯೋಚಿಸಿ, ಆಹಾರ ಪದಾರ್ಥವಾಗಿದ್ದಲ್ಲಿ ಮಾತ್ರ ರುಚಿ ನೋಡುವುದು.)

47 of 123

ನಿಲಂಬಿತ ಮಿಶ್ರಣ ಎಂದರೇನು?

ಅಸಮರೂಪ ವ್ಯವಸ್ಥೆಯಲ್ಲಿ ಘನ ವಸ್ತುಗಳು ದ್ರವ ವಸ್ತುವಿನಲ್ಲಿ ಚದುರಿಸುತ್ತವೆ. ಇದನ್ನು ನಿಲಂಬಿತ ಮಿಶ್ರಣ ಎನ್ನುವರು.

ಉದಾಹರಣೆ : ಸೀಮೆಸುಣ್ಣದ ನೀರು, ಮಂಜು, ಧೂಳುಇರುವ ವಾಯು,

ಕಲುಷಿತ ನೀರು

48 of 123

ನಿಲಂಬನದ ಗುಣ ಲಕ್ಷಣಗಳು

  • ನಿಲಂಬಿತ ಮಿಶ್ರಣವು ಒಂದು ಅಸಮರೂಪ ಮಿಶ್ರಣವಾಗಿದೆ.

  • ನಿಲಂಬಿತ ಮಿಶ್ರಣದ ಕಣಗಳನ್ನು ಬರಿಗಣ್ಣಿನಲ್ಲಿ ನೋಡಬಹುದು

  • ನಿಲಂಬಿತ ಮಿಶ್ರಣದ ಕಣಗಳು ತಮ್ಮ ಮೂಲಕ ಹಾದು ಹೋಗುವ ಬೆಳಕಿನ ಕಿರಣವನ್ನು ಚದುರಿಸುತ್ತವೆ. ಮತ್ತು ಅದರ ಪಥ ಕಾಣುವಂತೆ ಮಾಡುತ್ತವೆ.

49 of 123

ಹಾಲು ಏನು?

ಹಾಲು ದ್ರವವೇ?

ವ್ಯವಹಾರಿಕವಾಗಿ ಹಾಲು ದ್ರವ.

ಆದರೆ ತಾಂತ್ರಿಕವಾಗಿ ಅದು ದ್ರವ ಒಂದೇ ಅಲ್ಲ.

ಹಾಲು ಒಂದು ಕಲಿಲ ದ್ರಾವಣ. (colloid)

ಹಾಗಾದರೆ ಅದು ಏನು?

50 of 123

ಕಲಿಲದ ಲಕ್ಷಣಗಳು

  • ಕಲಿಲವು ಒಂದು ಅಸಮರೂಪ ಮಿಶ್ರಣ.

  • ಕಲಿಲದ ಕಣಗಳ ಗಾತ್ರವು ಬರಿಗಣ್ಣಿನಿಂದ ಪ್ರತ್ಯೇಕವಾಗಿ ನೋಡಲಾಗದಷ್ಟು ಸಣ್ಣದಾಗಿವೆ.

  • ಕಲಿಲದ ಕಣಗಳು ತಮ್ಮಲ್ಲಿ ಹಾದು ಹೋಗುವ ಬೆಳಕಿನ ಕಿರಣಗಳನ್ನು ಚದುರಿಸಿ ಅದರ ಪಥವು ಕಾಣುವಂತೆ ಮಾಡುವಷ್ಟು ದೊಡ್ಡದಾಗಿವೆ.

  • ಕಲಿಲದ ಕಣಗಳು ಸಾಕಷ್ಟು ಸ್ಥಿರವಾಗಿದ್ದು, ಅಲುಗಾಡಿಸದೆ ಬಿಟ್ಟರೂ ತಳ ಸೇರುವುದಿಲ್ಲ.

  • ಸೋಸುವಿಕೆ ವಿಧಾನದಿಂದ ಅವುಗಳನ್ನು ಮಿಶ್ರಣದಿಂದ ಬೇರ್ಪಡಿಸಲು ಸಾಧ್ಯವಿಲ್ಲ.

51 of 123

ಕಲಿಲ ದ್ರಾವಣ ಎಂದರೇನು?

ಕಲಿಲ ದ್ರಾವಣವು ವೈವಿಧ್ಯಮಯ ಮಿಶ್ರಣವಾಗಿದ್ದು, ಅಲ್ಲಿ ದ್ರಾವಣದಲ್ಲಿ ಕಣಗಳ ಗಾತ್ರವು ಬರಿಗಣ್ಣಿಗೆ ಕಾಣಿಸಿಕೊಳ್ಳುವಷ್ಟು ಚಿಕ್ಕದಾಗಿದೆ.

(a)ತಾಮ್ರದ ಸಲ್ಫೇಟ್ ದ್ರಾವಣವು ಟಿಂಡಾಲ್ ಪರಿಣಾಮವನ್ನು ತೋರಿಸುವುದಿಲ್ಲ

(b) ನೀರು ಮತ್ತು ಹಾಲಿನ ಮಿಶ್ರಣವು ಟಿಂಡಾಲ್ ಪರಿಣಾಮವನ್ನು ತೋರಿಸುತ್ತದೆ.

52 of 123

ಟಿಂಡಾಲ್ ಪರಿಣಾಮ

ಕಲಿಲಗಳಿಂದ ಈ ರೀತಿ ಬೆಳಕಿನ ಕಿರಣಗಳ ಚದುರುವಿಕೆಯನ್ನು ಟಿಂಡಾಲ್ ಪರಿಣಾಮ ಎನ್ನುವರು.

ಒಂದು ಕೋಣೆಯ ಸಣ್ಣ ರಂಧ್ರದಲ್ಲಿ ಸೂಕ್ಷ್ಮ ಬೆಳಕಿನ ಕಿರಣಗಳು ಹಾದು ಹೋದಾಗಲೂ ಟಿಂಡಾಲ್ ಪರಿಣಾಮವನ್ನು ಗಮನಿಸುತ್ತೇವೆ. ಗಾಳಿಯಲ್ಲಿರುವ ಹೊಗೆ ಮತ್ತು ಧೂಳಿನ ಕಣಗಳಿಂದ ಬೆಳಕಿನ ಚದುರುವಿಕೆಯಾಗಿ ಈ ವಿದ್ಯಮಾನ ಉಂಟಾಗುತ್ತದೆ.

53 of 123

ಟಿಂಡಾಲ್ ಪರಿಣಾಮ

Tyndall Effect - Why does the sky appear blue?

54 of 123

ಕಲಿಲಗಳ ಸಾಮಾನ್ಯ ಉದಾಹರಣೆಗಳು

ಕ್ರೀಮ್

ಹಾಲು

ಶೇವಿಂಗ್ ಕ್ರೀಮ್

55 of 123

ದ್ರಾವಣ, ನಿಲಂಬನ ಮತ್ತು ಕಲಿಲ

Solution, Suspension and Colloid

56 of 123

  1. ಉದಾಹರಣೆಗಳೊಂದಿಗೆ ಸಮರೂಪ ಮತ್ತು ಅಸಮ ರೂಪ ಮಿಶ್ರಣಗಳ ನಡುವಿನ ವ್ಯತ್ಯಾಸ ತಿಳಿಸಿ.

  • ಕಲಿಲ, ದ್ರಾವಣ ಮತ್ತು ನಿಲಂಬಿತ ಮಿಶ್ರಣ ಪರಸ್ಪರ ಹೇಗೆ ಭಿನ್ನವಾಗಿವೆ?

ಉತ್ತರಿಸಿ

57 of 123

ಚಟುವಟಿಕೆ .2.4

ಈ ಕೆಳಗೆ ನೀಡಿರುವ ಮಿಶ್ರಣಗಳನ್ನು ತಯಾರಿಸಿ. ಈಮಿಶ್ರಣಗಳನ್ನು ಸೋಸು ಕಾಗದದ ಮೂಲಕ ಶೋಧಿಸಿ ಘಟಕಗಳನ್ನು ಪ್ರತ್ಯೇಕಿಸಲು ಪ್ರಯತ್ನಿಸಿ.

ಮಿಶ್ರಣಗಳು

ಕಣಗಳು ಕಾಣುತ್ತವೆ

ಕಣಗಳು ತಳದಲ್ಲಿವೆ

ಸಮರೂಪ ಮಿಶ್ರಣ/ಅಸಮರೂಪ ಮಿಶ್ರಣ

ಸೋಸುಕಾಗದದಿಂದ ಕಣಗಳನ್ನು ಪಡೆಯಬಹುದು

ಬೆಳಕಿನ ಕಿರಣದ ಪಥ ಕಾಣುತ್ತದೆ (ಟಾರ್ಚ್ ಉಪಯೋಗಿಸುವುದು)

ದ್ರಾವಣ

ನಿಲಂಬಿತ ಮಿಶ್ರಣ

ಕಲಿಲ

ನೀರು+ಕಬ್ಬಿಣದ ರಜಗಳು

ಹೌದು

ಹೌದು

ಅಸಮರೂಪ

ಹೌದು

ತಾಮ್ರದ ಸಲ್ಫೇಟ್+ನೀರು

ಗೋಧಿ ಹಿಟ್ಟು+ನೀರು

ನೀಲಿ+ನೀರು

ಉಪ್ಪು+ನೀರು

58 of 123

ಚಟುವಟಿಕೆ .2.4

  • ಯಾವ ಮಿಶ್ರಣವನ್ನು ಶೋಧಿಸಿದಾಗ ಅದರ ಘಟಕಗಳು ಪ್ರತ್ಯೇಕಗೊಂಡವು?

_____________________________________________________________

  • ಯಾವ ವಿಶ್ರಣವನ್ನು ಶೋಧಿಸಿದಾಗ ಅದರ ಘಟಕಗಳು ಪ್ರತ್ಯೇಕಗೊಳ್ಳಲಿಲ್ಲ?

____________________________________________________________

  • ನೀವು ತಯಾರಿಸಿದ ಕೆಲವು ವಿಶ್ರಣಗಳನ್ನು ಶೋಧಿಸಿದಾಗ ಅದರ ಘಟಕಗಳು ಪ್ರತ್ಯೇಕಗೊಳ್ಳದಿರಲು ಕಾರಣವೇನು?

_____________________________________________________________

  • ನಿಲಂಬಿತ ಮಿಶ್ರಣ ಮತ್ತು ಕಲಿಲಗಳಿಗೆ ಇರುವ ವ್ಯತ್ಯಾಸವೇನು?

_____________________________________________________________

  • ಕಲಿಲವು ಒಂದು ಅಸಮರೂಪ ಮಿಶ್ರಣ ಹೇಗೆ?

______________________________________________________________

59 of 123

ಚಟುವಟಿಕೆ .2.5

ಒಂದು ಗಾಜಿನ ಲೋಟಕ್ಕೆ ಸ್ವಲ್ಪ ಹಾಲು ಮತ್ತು ನೀರು ಹಾಕಿ ಮಿಶ್ರಣ ಮಾಡಿ.

ಇನ್ನೊಂದು ಬೀಕರ್ ನಲ್ಲಿ ಉಪ್ಪು ನೀರಿನ ದ್ರಾವಣ ತೆಗೆದುಕೊಳ್ಳಿ. ನಂತರ,

ಎರಡು ಮಿಶ್ರಣದ ಮೂಲಕ ಟಾರ್ಚ್ ನ ಬೆಳಕನ್ನು ಹಾಯಿಸಿ. ನಿಮ್ಮ ವೀಕ್ಷಣೆ ಏನು?

_______________________________________________________________

  • ಬೆಳಕಿನ ಪಥವು ಯಾವ ದ್ರಾವಣವಿರುವ ಬೀಕರ್ ನಲ್ಲಿ ಗೋಚರಿಸಿತು?

__________________________________________________

  • ಈ ರೀತಿಯ ಪರಿಣಾಮವನ್ನು ಏನೆಂದು ಕರೆಯುತ್ತಾರೆ?

__________________________________________________

ಚರ್ಚಿಸಿ:

  • ಹೆಂಚಿನ ಮನೆಯ ಸಣ್ಣ ರಂಧ್ರಗಳ ಮೂಲಕ ಸೂರ್ಯನ ಬೆಳಕಿನ ಕಿರಣಗಳು ಹಾದುಹೋದಾಗ ಕಾಣುವ ವಿದ್ಯಾಮಾನಕಕ್ಕೆ ಎನೆನ್ನುತ್ತೇವೆ? ಚರ್ಚಿಸಿ.

__________________________________________________

  • ಕಲಿಲಗಳಲ್ಲಿ ಇರುವ ದ್ರಾವ್ಯದ ಕಣಗಳನ್ನು ಭೌತಿಕವಾಗಿ ಬೇರ್ಪಡಿಸಬಹುದೇ? ಯೋಚಿಸಿ.

__________________________________________________

60 of 123

ಚಟುವಟಿಕೆ .2.5

ಈ ಕೆಳಗಿನ ಪ್ರಯೋಗ ನಡೆಸಿ ನಿಮ್ಮ ತೀರ್ಮಾನ ತಿಳಿಸಿ.

100 ಮಿ.ಲಿ ನೀರಿಗೆ ಉಪ್ಪು ಹಾಕುತ್ತಾ ಕರಗಿಸುತ್ತ ಬನ್ನಿ, ಎಷ್ಟು ಪ್ರಮಾಣದ ಉಪ್ಪು ಹಾಕಿದ ಮೇಲೆ ಕರಗುವಿಕೆ ನಿಂತಿತು ಗುರುತು ಮಾಡಿಕೊಳ್ಳಿ, ನಂತರ, ಬಿಸಿ ಮಾಡಿ. ಕೊನೆಯಲ್ಲಿ ಹಾಕಿದ್ದ ಕರಗದೇ ಉಳಿದ ಉಪ್ಪು ಕರಗಿತೆ? ವೀಕ್ಷಿಸಿ.

___________________________________________________

___________________________________________________

____________ ಈ ರೀತಿಯ ದ್ರಾವಣವನ್ನು _________________ ಎನ್ನುವರು.

61 of 123

ಮಿಶ್ರಣದ ಘಟಕಗಳನ್ನು ಬೇರ್ಪಡಿಸುವಿಕೆ

  • ನಾವು ದಿನ ನಿತ್ಯ ಬಳಸುವ ಸರಳ ಭೌತಿಕ ವಿಧಾನಗಳಾದ ಕೈ ಯಿಂದ ಆರಿಸುವುದು, ಜರಡಿ ಹಿಡಿಯುವುದು, ಸೋಸುವಿಕೆ ವಿಧಾನಗಳಿಂದ ಅಸಮರೂಪ ಮಿಶ್ರಣಗಳನ್ನು ಅವುಗಳ ಘಟಕಾಂಶಗಳಾಗಿ ಬೇರ್ಪಡಿಸಬಹುದು.

  • ಕೆಲವೊಮ್ಮೆ ಮಿಶ್ರಣದಲ್ಲಿರುವ ಘಟಕಾಂಶಗಳನ್ನು ಪ್ರತ್ಯೇಕಪಡಿಸಲು ವಿಶೇಷ ವಿಧಾನಗಳನ್ನು ಬಳಸಬೇಕಾಗುತ್ತದೆ.

ಅವುಗಳನ್ನು ತಿಳಿಯೋಣ.

62 of 123

ಚಟುವಟಿಕೆ .2.6

ಮಿಶ್ರಣಗಳ ಬೇರ್ಪಡಿಸುವಿಕೆ

ನಮ್ಮ ಸುತ್ತ ಮುತ್ತ ವಿವಿಧ ರೀತಿಯ ಮಿಶ್ರಣಗಳಿದ್ದು ಅವುಗಳನ್ನು ಬೇರ್ಪಡಿಸಲು ಸಾಧ್ಯವೇ? ಹಾಗಾದರೆ, ಈ ಕೆಳಗೆ ನೀಡಿರುವ ಮಿಶ್ರಣಗಳನ್ನು ಯಾವ ವಿಧಾನದಿಂದ ಬೇರ್ಪಡಿಸಬಹುದು.

ಮಿಶ್ರಣಗಳು

ಬೇರ್ಪಡಿಸುವ ವಿಧಾನ

ಅಕ್ಕಿ+ಬೇಳೆ+ಎಳ್ಳು

ಅಕ್ಕಿಹಿಟ್ಟು+ಅಕ್ಕಿ

ಭತ್ತದ ಜೆಳ್ಳು+ಭತ್ತ

ಮಣ್ಣಿನಲ್ಲಿರುವ ಕಬ್ಬಿಣದ ರಜಗಳು

63 of 123

ನೀಲಿ/ಕಪ್ಪು ಶಾಯಿಯಲ್ಲಿರುವ ವರ್ಣ ಘಟಕಾನ್ಶವನ್ನು ನಾವು ಹೇಗೆ ಪಡೆಯಬಹುದು?

  • ಬೀಕರ್ ನ ಅರ್ಧದಷ್ಟು ನೀರನ್ನು ತುಂಬಿಸಿ.
  • ವಾಚ್ ಗ್ಲಾಸ್ ನಿಂದ ಬೀಕರ್ ಅನ್ನು ಮುಚ್ಚಿ ಕೆಲವು ಹನಿ ಶಾಯಿಯನ್ನು ವಾಚ್ ಗ್ಲಾಸ್ ನಲ್ಲಿ ಸುರಿಯಿರಿ ಈಗ ಬೀಕರ್ ಅನ್ನು ಕಾಯಿಸಲು ಪ್ರಾರಂಭಿಸಿ, ನಮಗೆ ಶಾಯಿಯನ್ನು ನೇರವಾಗಿ ಕಾಯಿಸುವುದರ ಅಗತ್ಯವಿಲ್ಲ.
  • ನೀವು ವಾಚ್ ಗ್ಲಾಸ್ ನಿಂದ ಆವಿಯಾಗುವ ಪ್ರಕ್ರಿಯೆಯನ್ನು ನೋಡಬಹುದು
  • ಕಾಯಿಸುವುದನ್ನು ಮುಂದುವರೆಸಿದಂತೆ ಆವೀಕರಣ ನಡೆಯುತ್ತದೆ ಮತ್ತು ವಾಚ್ ಗ್ಲಾಸ್ ನಲ್ಲಿ ಯಾವುದೇ ಬದಲಾವಣೆ ಕಂಡು ಬಾರದಿದ್ದಾಗ ಕಾಯಿಸುವುದನ್ನು ನಿಲ್ಲಿಸಿ.
  • ಎಚ್ಚರಿಕೆಯಿಂದ ವೀಕ್ಷಿಸಿ ಮತ್ತು ನಿಮ್ಮ ವೀಕ್ಷಣೆಯನ್ನು ದಾಖಲಿಸಿ.

64 of 123

ಇವುಗಳಿಗೆ ಉತ್ತರಿಸಿ

  1. ವಾಚ್ ಗ್ಲಾಸ್ ನಿಂದ ಆವಿಯಾದದ್ದು ಏನೆಂದು ನೀವು ಯೋಚಿಸಿರುವಿರಿ?

  • ವಾಚ್ ಗ್ಲಾಸ್ ನಲ್ಲಿ ಏನಾದರೂ ಉಳಿಕೆ ಇದೆಯೇ?

  • ನಿಮ್ಮ ಅರ್ಥೈಸುವಿಕೆ ಏನು? ಶಾಯಿ ಒಂದು ವಸ್ತುವೇ? ಅಥವಾ ಒಂದು ಮಿಶ್ರಣವೇ? ಶಾಯಿಯು ನೀರಿನಲ್ಲಿ ವರ್ಣದ ಮಿಶ್ರಣ ಎನ್ನುವುದನ್ನು ನಾವು ಕಂಡು ಕೊಳ್ಳುತ್ತೇವೆ. ಹೀಗೆ ಆವೀಕರಣ ವಿಧಾನದಿಂದ ಆವಿಶೀಲ ಘಟಕವನ್ನು ಅದರ ಆವಿಯಾಗದ ಘಟಕದಿಂದ ಬೇರ್ಪಡಿಸಬಹುದು.

65 of 123

How To Separate Solutions,

Mixtures & Emulsions

ದ್ರಾವಣ ಮತ್ತು ಮಿಶ್ರಣಗಳನ್ನು ಬೇರ್ಪಡಿಸುವುದು

66 of 123

ಈ ಕೆಳಗೆ ನೀಡಿರುವ ಮಿಶ್ರಣವನ್ನು ಹೇಗೆ ಬೇರ್ಪಡಿಸುವವಿರಿ?

ಭೀಕರ್ ಗೆ ಅರ್ಧದಷ್ಟು ನೀರು ತುಂಬಿ ಅದರ ಮೇಲೆ ವಾಚ್ ಗ್ಲಾಸ್ ಇತ್ತು ಕೆಲವು ಹನಿ ಶಾಹಿ (ಇಂಕ್) ಹಾಕಿ. ನಂತರ ಬೀಕರನ್ನು ನಿಧಾನವಾಗಿ ಕಾಯಿಸಲು ಪ್ರಾರಂಭಿಸಿ. ವೀಕ್ಷಿಸಿ.

ಸೂಚನೆ: ಶಾಯಿಯು ಒಂದೇ ಬಣ್ಣದಿಂದ ಉಂಟಾಗಿದೆಯಾ ಅಥವಾ ಬೇರೆ ವರ್ಣಗಳಿಂದ ಉಂಟಾಗಿದೆಯಾ ಎಂದು ಪ್ರಯೋಗದಿಂದ ತಿಳಿಯಿರಿ

  • ವಾಚ್ ಗ್ಲಾಸ್ ನಲ್ಲಿ ಆದ ಬದಲಾವಣೆ ಏನು?

__________________________________________________

  • ವಾಚ್ ಗ್ಲಾಸ್ ನಿಂದ ಆವಿಯಾದದ್ದು ಏನು? ಯಾವ ವರ್ಣ ಕಂಡುಬರುತ್ತದೆ?

________________________________________________________

  • ಈ ಪ್ರಕ್ರಿಯೆಯಲ್ಲಿ ಬಳಸಿದ ಬೇರ್ಪಡಿಸುವಿಕೆಯ ವಿಧಾನ ಯಾವುದು?

__________________________________________________

ಚಟುವಟಿಕೆ .2.7

67 of 123

ಮಿಶ್ರಗೊಳ್ಳದ ದ್ರವಗಳ ಬೇರ್ಪಡಿಸುವಿಕೆ

  • ಪ್ರತ್ಯೇಕನ ಆಲಿಕೆಯನ್ನು ಬಳಸಿ ಸೀಮೆ ಎಣ್ಣೆಯನ್ನು ನೀರಿನಿಂದ ಬೇರ್ಪಡಿಸಲು ಪ್ರಯತ್ನಿಸೋಣ.
  • ಸೀಮೆ ಎಣ್ಣೆ ಮತ್ತು ನೀರಿನ ಮಿಶ್ರಣವನ್ನು ಪ್ರತ್ಯೇಕನ ಆಲೆಕೆಯಲ್ಲಿ ಸುರಿಯಿರಿ.
  • ಮಿಶ್ರಣವು ಅಲುಗಾಡದಂತೆ ಬಿಡಿ. ಆಗ ಎಣ್ಣೆ ಮತ್ತು ನೀರಿನ ಬೇರೆ ಬೇರೆ ಪದರಗಳು ಉಂಟಾಗುತ್ತವೆ.
  • ಪ್ರತ್ಯೇಕನ ಆಳಿಕೆಯ ಬಿರಡೆಯನ್ನು ತೆಗೆಯಿರಿ

ಮತ್ತು ಕೆಳ ಪದರವಾದ ನೀರನ್ನು ಹೊರ ಸುರಿಯಿರಿ.

  • ಎಣ್ಣೆಯು ಪ್ರತ್ಯೇಕನ ಆಲಿಕೆಯ ಬಿರಡೆಯ

ಬಳಿ ಬಂದಾಗ, ಬಿರಡೆಯನ್ನು ಮುಚ್ಚಿ.

68 of 123

ಮಿಶ್ರಗೊಳ್ಳದ ದ್ರವಗಳ ಬೇರ್ಪಡಿಸುವಿಕೆ

Separating Funnel

69 of 123

ಚಟುವಟಿಕೆ .2.8

  • ನೀರು ಮತ್ತು ಎಣ್ಣೆಯ ಬೇರೆ ಬೇರೆ ಪದರಗಳು ಉಂಟಾಗಲು ಕಾರಣವೇನು? ___________________________________________________________

  • ಎಣ್ಣೆ ಮತ್ತು ನೀರು ಎಂತಹ ವಿಶ್ರಣ: ____________________________________________________________

ಅಡಿಗೆ ಎಣ್ಣೆ ಮತ್ತು ನೀರಿನ ವಿಶ್ರಣವನ್ನು ಹೇಗೆ ಬೇರ್ಪಡಿಸುವುದು?

70 of 123

ಚಟುವಟಿಕೆ .2.8

ಅಡುಗೆ ಎಣ್ಣೆ ಮತ್ತು ನೀರಿನ ಮಿಶ್ರಣವನ್ನು ಒಂದು ಪ್ರತ್ಯಾಕನಾ ಆಲಿಕೆಗೆ ಹಾಕಿರಿ. ಮತ್ತು ವಿಶ್ರಣವನ್ನು ಅಲುಗಾಡಿಸದೆ, ಸ್ವಲ್ಪ ಸಮಯ ಬಿಡಿ ಆಗ ಎಣ್ಣೆ ಮತ್ತು ನೀರಿನ ಬೇರೆ ಬೇರೆ ಪದಗಳು ಉಂಟಾಗುತ್ತವೆ. ನಂತರ ಆಲಿಕೆಯ ಬಿರಡೆಯನ್ನು ತೆಗೆದು ಬಿಕರ್ ಗೆ ಸಂಗ್ರಹಿಸಿ. ಎಣ್ಣೆಯು ಪ್ರತ್ಯೇಕನಾ ಆಲಿಕೆಯ ಬಳಿ ಬಂದಾಗ ಬಿರಡೆ ಹಾಕಿರಿ. ಮತ್ತೆ ಬೇರೆ ಬಿಕರ್ ಗೆ ಎಣ್ಣೆಯನ್ನು ಸಂಗ್ರಹಿಸಿ.

ಚರ್ಚಿಸಿ :

ಬೀಕರ್ ಗಿಂತ ಪ್ರತ್ಯೇಕನಾ ನಲಿಕೆ ಬಳಸಿ ಬೇರ್ಪಡಿಸುವುದು ಸೂಕ್ತ. ಏಕೆ?

_________________________________________________________________________

71 of 123

ಹಾಲಿನಿಂದ ಕೆನೆಯನ್ನು ನಾವು ಹೇಗೆ ಬೇರ್ಪಡಿಸಬಹುದು?

  • ಸ್ವಲ್ಪ ಕೆನೆಭರಿತ ಹಾಲನ್ನು ಪ್ರನಾಳದ ತೆಗೆದುಕೊಳ್ಳಿ.
  • ಕೇಂದ್ರ ತ್ಯಾಗಿ ಯಂತ್ರವನ್ನು ಎರಡು ನಿಮಿಷಗಳ ಕಾಲ ಬಳಸಿ, ಸೆಂತ್ರಿ ಫುಸ್ ಮಾಡಿ, ಶಾಲೆಯಲ್ಲಿ ಯಂತ್ರವಿಲ್ಲದಿದ್ದಲ್ಲಿ ನೀವು ಈ ಚಟುವಟಿಕೆಯನ್ನು ನಿಮ್ಮ ಮನೆಯಲ್ಲಿ ಅಡುಗೆ ಕೊನೆಯಲ್ಲಿ ಬಳಸುವ ಮೊಸರು ಕಡೆಯುವ ಕಡಗೋಲನ್ನು ಬಳಸಿ ಮಾಡಬಹುದು.
  • ಬೆಣ್ಣೆ ಮೊಸರಿನಿಂದ ಬೇರೆ ಅಗುತ್ತದೆ.
  • ಹತ್ತಿರದಲ್ಲಿ ಹಾಲಿನ ಕೆಂದ್ರವಿದ್ದರೆ ಭೇಟಿ ಮಾಡಿ.
  • ಹಾಲಿನಿಂದ ಕೆನೆಯನ್ನು ಅವರು ಹೇಗೆ ಬೇರ್ಪದಿಸುತ್ತಾರೆ ಮತ್ತು ಹಾಲಿನಿಂದ ಪನ್ನೀರ್ ಹೇಗೆ ಮಾಡುತ್ತಾರೆ ಎನ್ನುವುದನ್ನು ಕೇಳಿ ತಿಳಿಯಿರಿ.
  1. ಹಾಲನ್ನು ಕಡೆಯುವಾಗ ನೀವು ಏನನ್ನು ಗಮನಿಸಿದಿರಿ?.
  2. ಹಾಲಿನಿಂದ ಕೆನೆ ಹೇಗೆ ಬೇರ್ಪಡೆ ಆಗುತ್ತದೆ ಎಂದು ವಿವರಿಸಿ.

72 of 123

ಕೇಂದ್ರತ್ಯಾಗಿ ಯಂತ್ರ ಹೇಗೆ ಕೆಲಸ ಮಾಡುತ್ತದೆ?

ಕೆಲವೊಮ್ಮೆ ದ್ರವದಲ್ಲಿರುವ ಘನ ಕಣಗಳು ಅತಿ ಸಣ್ಣದಾಗಿದ್ದು ಸೋಸು ಕಾಗದದ ಮೂಲಕ ಹಾದು ಹೋಗುತ್ತವೆ. ಸೋಸುವಿಕೆ ತಂತ್ರವನ್ನು ಅಂತಹ ಕಣಗಳನ್ನು ಬೇರ್ಪಡಿಸಲು ಉಪಯೋಗಿಸಲಾಗದು. ಕೇಂದ್ರತ್ಯಾಗಿ ಯಂತ್ರದಿಂದ ಅಂತಹ ಮಿಶ್ರಣಗಳನ್ನು ಬೇರ್ಪಡಿಸಬಹುದು.

ಮೊಸರನ್ನು ಕಡೆದಾಗ...ಬೆಣ್ಣೆ ಮೇಲೆ ತೇಲುತ್ತದೆ. ಏಕೆ?

ಕೇಂದ್ರತ್ಯಾಗಿ ( ಅಥವಾ ಕಡಗೋಲು) ತ್ವರಿತವಾಗಿ ತಿರುಗಿಸಿದಾಗ

  • ಸಾಂದ್ರ ಕಣಗಳು ತಳಕ್ಕೆ ತಳ್ಳಲ್ಪಡುತ್ತವೆ
  • ಮತ್ತು ಹಗುರ ಕಣಗಳು ಮೇಲೆ ತೇಲುತ್ತವೆ.

  • ಕೇಂದ್ರಾಪಗಾಮಿ ಹೆಚ್ಚಿನ ವೇಗದಲ್ಲಿ ಬಲವಾದ ಕೇಂದ್ರಾಭಿಮುಖ ಬಲವನ್ನು ಸೃಷ್ಟಿಸುತ್ತದೆ, ಇದರಿಂದಾಗಿ ಪದಾರ್ಥಗಳು ಅವುಗಳ ಸಾಂದ್ರತೆಯ ಮೇಲೆ ಬೇರೆ ಬೇರೆ ಆಗುತ್ತವೆ.

73 of 123

Centrifuge Separator

ಸುಲಭವಾಗಿ ಮಾಡುವ ಕೇಂದ್ರತ್ಯಾಗಿ ಯಂತ್ರ

blood separator

Centrifuge Separator

74 of 123

ಕೇಂದ್ರತ್ಯಾಗಿ ಯಂತ್ರ -ಅನ್ವಯಗಳು

  • ರೋಗ ನೈದಾನಿಕ ಪ್ರಯೋಗಾಲಯಗಳಲ್ಲಿ ರಕ್ತ ಮತ್ತು ಮೂತ್ರ ಪರೀಕ್ಷೆಗಳಲ್ಲಿ ಬಳಸುತ್ತಾರೆ.

  • ಹಾಲಿನ ಕೇಂದ್ರಗಳಲ್ಲಿ ಮತ್ತು ಮನೆಯಲ್ಲಿ ಕೆನೆಯಿಂದ ಬೆಣ್ಣೆ

ಬೇರ್ಪಡಿಸಲು ಬಳಸುತ್ತಾರೆ.

  • ಒದ್ದೆ ಬಟ್ಟೆಗಳಿಂದ ನೀರನ್ನು ಹಿಂಡಿ ಹೊರತೆಗೆಯಲು ಬಳಸುತ್ತಾರೆ.

  • ಬಟ್ಟೆ ಒಗೆಯುವ ಯಂತ್ರಗಳಲ್ಲಿ ಬಳಸುತ್ತಾರೆ.

Eg., ಒಬ್ಬ ರೋಗಿಗೆ ಬರಿಯ ಪ್ಲಾಸ್ಮಾ ಅಥವಾ ಬಿಳಿ ರಕ್ತ ಕಣಗಳು ಬೇಕಾದಾಗ.

75 of 123

ಅನ್ವಯಗಳು

  • ಎಣ್ಣೆ ಮತ್ತು ನೀರಿನ ಮಿಶ್ರಣವನ್ನು ಬೇರ್ಪಡಿಸಲು.

  • ಊದುಕುಲುಮೆಯಲ್ಲಿ ತಳ ಭಾಗದಲ್ಲಿರುವ ದ್ರವಿತ ಕಬ್ಬಿಣ ಮತ್ತು ಹಗುರವಾದ ಕಿಟ್ಟವನ್ನು ಕಬ್ಬಿಣದ ಉದ್ಧರಣೆಯಲ್ಲಿ ಈ ವಿಧಾನದಿಂದ ಬೇರ್ಪಡಿಸಬಹುದು.

  • ಇಲ್ಲಿ ಅಳವಡಿಸಲಾದ ತತ್ವವೆಂದರೆ ಮಿಶ್ರಗೊಳ್ಳದ ದ್ರವಗಳನ್ನು ಅವುಗಳ ಸಾಂದ್ರತೆಯ ಆಧಾರದ ಮೇಲೆ ಬೇರೆ ಬೇರೆ ಪದರಗಳಾಗಿ ಬೇರ್ಪಡಿಸಬಹುದು.

76 of 123

ಕಲಿಕಾ ಹಾಳೆಯ ಚಟುವಟಿಕೆ .2.9

ಹಾಲಿನಿಂದ ಕೆನೆಯನ್ನು ಹೇಗೆ ಬೇರ್ಪಡಿಸಬಹುದು? ಈ ಕೆಳಗಿನ ಪ್ರಯೋಗ ಕೈಗೊಳ್ಳಿ.

ಸ್ವಲ್ಪ ಕೆನೆಭರಿತ ಹಾಲನ್ನು ಪ್ರನಾಳದಲ್ಲಿ ತೆಗೆದುಕೊಳ್ಳಿ, ಮತ್ತು ಸೆಂಟ್ರಿಪ್ಯೂಜ್ ಅನ್ನು ಎರಡು ನಿಮಿಷ ಬಳಸಿ ಅಥವಾ ಅಡುಗೆ ಮನೆಯಲ್ಲಿರುವ ಮೊಸರು ಕಡೆಯುವ ಕಡಗೋಲನ್ನು ಬಳಸಿ ಒಂದು ಪಾತ್ರೆಯಲ್ಲಿನ ಹಾಲನ್ನು ಕಡೆಯಿರಿ. ನಿಮ್ಮ ವೀಕ್ಷಣೆ ಏನು?

  • ಹಾಲನ್ನು ಕಡೆಯುವಾಗ ಏನನ್ನು ಗಮನಿಸಿದ್ದೀರಿ:

___________________________________________________________

  • ಹಾಲಿನಿಂದ ಕೆನೆ ಬೇರ್ಪಟ್ಟಿತೆ?

__________________________________________________________

77 of 123

ಉಪ್ಪು ಮತ್ತು ಅಮೋನಿಯಂ ಕ್ಲೋರೈಡ್ ಮಿಶ್ರಣವನ್ನು ಬೇರ್ಪಡಿಸುವಿಕೆ

  • ಅಮೋನಿಯಂ ಕ್ಲೋರೈಡ್ ಕಾಯಿಸಿದಾಗ ನೇರವಾಗಿ ಘನ ಸ್ಥಿತಿಯಿಂದ ಅನಿಲ ಸ್ಥಿತಿಗೆ ಪರಿವರ್ತನೆಯಾಗುತ್ತದೆ.

  • ಆದ್ದರಿಂದ ಉತ್ಪತನಗೊಲ್ಲಬಲ್ಲ ಬಾಷ್ಪಶೀಲ ಘಟಕವನ್ನು ಭಾಷ್ಪಶೀಲವಲ್ಲದ ಅಶುದ್ಧ ವಸ್ತುವನ್ನು ಹೊಂದಿರುವ ಮಿಶ್ರಣವನ್ನು ಬೇರ್ಪಡಿಸಲು ಉತ್ಪತನ ಪ್ರಕ್ರಿಯೆಯನ್ನು ಬಳಸುತ್ತಾರೆ.
  • ಉದಾ: ಅಮೋನಿಯಂ ಕ್ಲೋರೈಡ್, ಕರ್ಪೂರ, ನ್ಯಾಫ್ತಲೀನ್ ಮತ್ತು ಅಂಥ್ರಸೀನ್

78 of 123

ಉತ್ಪತನಕ್ಕೆ ಉದಾರಹರಣೆಗಳು

ನ್ಯಾಫ್ತಲೀನ್

79 of 123

ಉಪ್ಪು ಮತ್ತು ಅಮೋನಿಯಂ ಕ್ಲೋರೈಡ್ ಮಿಶ್ರಣವನ್ನು ಬೇರ್ಪಡಿಸುವಿಕೆ

Separating mixtures

using sublimation

80 of 123

ಚಟುವಟಿಕೆ .2.10

ಉಪ್ಪು ಮತ್ತು ಅಮೋನಿಯಂ ಕ್ಲೋರೈಡ್ ಗಳ ಮಿಶ್ರಣವನ್ನು ಹೇಗೆ ಬೇರ್ಪಡಿಸುವುದು?

ಅಮೋನಿಯಂ ಕ್ಲೋರೈಡ್ ಮತ್ತು ಉಪ್ಪಿನ ಪುಡಿಯನ್ನು ಒಂದು ಪಿಂಗಾಣಿ ಬಟ್ಟಲಿಗೆ ಹಾಕಿ ಅದರ ಮೇಲೆ ಚಿತ್ರದಲ್ಲಿ ತೋರಿಸಿರುವಂತೆ ಒಂದು ಆಲಿಕೆಯನ್ನು ಬೋರಲು ಹಾಕಿ ಮತ್ತು ಅದರ ತುದಿಯನ್ನು ಹತ್ತಿ ಉಂಡೆಯಿಂದ ಮುಚ್ಚಿ, ಪಿಂಗ್ ಣಿ ಪಾತ್ರೆಯನ್ನು ಮದ್ಯಸಾರ ದೀಪದಿಂದ ಕಾಯಿಸಿ ಮತ್ತು ಬದಲಾವಣೆ ಗಮನಿಸಿ.

  • ಮಿಶ್ರಣದಲ್ಲಾದ ಪ್ರಮುಖ ಬದಲಾವಣೆ:

_________________________________________________

  • ಆಲಿಕೆಯ ಕೊಳವೆಯ ತುದಿಯಲ್ಲಿ (ಹತ್ತಿಯ ಕೆಳಭಾಗ) ಏನನ್ನು ಗಮನಿಸಿದಿರಿ?

_________________________________________________

  • ಪಿಂಗಾಣಿ ಬಟ್ಟಲಿನಲ್ಲಿ ಉಳಿದ ದ್ರವ್ಯ ಯಾವುದು?

_________________________________________________

  • ಉತ್ಪತನಗೊಂಡ ದ್ರವ್ಯ ಯಾವುದು?

_________________________________________________

  • ಉತ್ಪತನ ಕ್ರಿಯೆ ಎಂದರೇನು ಏನು?

_________________________________________________

81 of 123

ವರ್ಣರೇಖನವನ್ನು ಬಳಸಿ ಕಪ್ಪು ಶಾಯಿಯಲ್ಲಿರುವ ಬಣ್ಣಗಳನ್ನು ಬೇರ್ಪಡಿಸುವಿಕೆ

  • ಸೋಸು ಕಾಗದದ ಸಣ್ಣ ಪಟ್ಟಿಯನ್ನು ತೆಗೆದುಕೊಳ್ಳಿ
  • ಕೆಳ ತುದಿಯಿಂದ ಸುಮಾರು 3 cm ಮೇಲೆ ಸೀಸದಿಂದ ಒಂದು ಗೆರೆ ಎಳೆಯಿರಿ.
  • ಗೆರೆಯ ಮಧ್ಯದಲ್ಲಿ ಶಾಯಿಯ ಒಂದು ಹನಿಯನ್ನು ಇಡಿ. ಒಣಗಲು ಬಿಡಿ.
  • ಚಿತ್ರದಲ್ಲಿ ತೋರಿಸಿರುವಂತೆ ಸೋಸು ಕಾಗದವನ್ನು ಜಾಡಿ/ ಗಾಜಿನ ಲೋಟ/ ಬೀಕರ್/ ಪ್ರನಾಳದಲ್ಲಿ ನೀರಿಗೆ ಇಳಿ ಬಿಡಿ. ಆದರೆ ಕಾಗದದ ಮೇಲಿರುವ ಶಾಯಿಯ ಚುಕ್ಕೆ ನೀರಿಗೆ ಸೋಕದಂತಿರಲಿ ಮತ್ತು ಅಲುಗಾಡದಂತೆ ಬಿಡಿ.
  • ಸೋಸು ಕಾಗದದಲ್ಲಿ ನೀರು ಮೇಲೇರುವುದನ್ನು ಜಾಗ್ರತೆಯಿಂದ ಗಮನಿಸಿ. ನಿಮ್ಮ ವೀಕ್ಷಣೆಗಳನ್ನು ದಾಖಲಿಸಿ.

82 of 123

ಆ ಚಟುವಟಿಕೆಯ ನಂತರ ಇವುಗಳಿಗೆ ಉತ್ತರಿಸಿ

  • ಸೋಸು ಕಾಗದದಲ್ಲಿ ನೀರು ಮೇಲೇರುತ್ತಿದ್ದಂತೆ ನೀವೇನನ್ನು ಗಮನಿಸಿದಿರಿ.
  • ಸೋಸು ಕಾಗದದ ಪಟ್ಟಿಯಲ್ಲಿ ವಿವಿಧ ಬಣ್ಣಗಳನ್ನು ನೀವು ಪಡೆದಿರಾ?
  • ನಿಮ್ಮ ಪ್ರಕಾರ ಕಾಗದದ ಪಟ್ಟಿಯ ಮೇಲೆ ಬಣ್ಣದ ಚುಕ್ಕೆಯು ಮೇಲೇರಲು ಕಾರಣವೇನಿರಬಹುದು?

83 of 123

  • ನಾವು ಬಳಸುವ ಶಾಯಿಯಲ್ಲಿ ನೀರು ದ್ರಾವಕವಾಗಿದೆ ಮತ್ತು ಶಾಯಿಯ ಬಣ್ಣವು ನೀರಿನಲ್ಲಿ ವಿಲೀನಗೊಳ್ಳುತ್ತದೆ.

  • ಸೋಸು ಕಾಗದದಲ್ಲಿ ನೀರು ಮೇಲೇರುತ್ತಿದ್ದಂತೆ, ಜೊತೆಯಲ್ಲಿ ಶಾಯಿಯ ವರ್ಣದಲ್ಲಿರುವ ಕಣಗಳು ಮೇಲೇರುತ್ತವೆ.

  • ಸಾಮಾನ್ಯವಾಗಿ ವರ್ಣಗಳು ಒಂದು ಅಥವಾ ಹೆಚ್ಚು ಬಣ್ಣಗಳ ಮಿಶ್ರಣವಾಗಿವೆ. ನೀರಿನಲ್ಲಿ ವಿಲೀನಗೊಳ್ಳದ ಬಣ್ಣದ ಘಟಕವು ವೇಗವಾಗಿ ಮೇಲೆರುತ್ತವೆ ಮತ್ತು ಈ ರೀತಿಯಾಗಿ ಬಣ್ಣಗಳು ಬೇರ್ಪಡುತ್ತವೆ.

  • ಮಿಶ್ರಣದಲ್ಲಿರುವ ಘಟಕಗಳನ್ನು ಬೇರ್ಪಡಿಸುವ ಪ್ರಕ್ರಿಯೆಯನ್ನು ವರ್ಣರೇಖನ ಎನ್ನುತ್ತೇವೆ.

ವರ್ಣರೇಖನ ಕ್ರಿಯೆ

84 of 123

ವರ್ಣರೇಖನ-crometography -ಅನ್ವಯಗಳು

  • ವರ್ಣಗಳಲ್ಲಿನ ಬಣ್ಣಗಳನ್ನು ಬೇರ್ಪಡಿಸಲು

  • ನೈಸರ್ಗಿಕ ಬಣ್ಣಗಳಲ್ಲಿರುವ ವರ್ಣಕಗಳನ್ನು ಬೇರ್ಪಡಿಸಲು

  • ರಕ್ತದಲ್ಲಿರುವ ರಾಸಾಯನಿಕ ಔಷಧಿಗಳನ್ನು ಬೇರ್ಪಡಿಸಲು

85 of 123

Paper Chromatography

ಪೇಪರ್ ನ ಮೇಲೆ ವರ್ಣರೇಖನ

86 of 123

ಚಟುವಟಿಕೆ .2.11

ನಿನ್ನ ಕಲಿಕ ಗುಂಪಿನಲ್ಲಿ ಈ ಚಟುವಟಿಕೆಯನ್ನು ಶಿಕ್ಷಕರ ಮಾರ್ಗದರ್ಶನದಲ್ಲಿ ನಿರ್ವಹಿಸಿ ನಿನ್ನ ವೀಕ್ಷಣೆಯನ್ನು ದಾಖಲಿಸು

ಕಪ್ಪು ಬಣ್ಣ ಬೇರೆ ಬಣ್ಣಗಳ ಮಿಶ್ರಣವೇ?

ಸೋಸು ಕಾಗದದ ಸಣ್ಣ ಪಟ್ಟಿಯನ್ನು (10ಸೆಂ.ಮೀ ಉದ್ದದ) ತೆಗೆದುಕೊಳ್ಳಿ, ಕೆಳತುದಿಯಿಂದ ಸುಮಾರು 3ಸೆಂ.ಮೀ ಮೇಲಕ್ಕೆ ಕಪ್ಪು ಇಂಕ್ ಅನ್ನಿ ಹಾಕಿ. ಸ್ವಲ್ಪ ಒಣಗಲು ಬಿಡಿ. ನಂತರ, ಸ್ವಲ್ಪ ನೀರಿರುವ ಜಾಗಕ್ಕೆ ಇಳಿ ಬಿಡಿ. ವೀಕ್ಷಿಸಿ. ಸೋಸು ಕಾಗದದಲ್ಲಿ ನೀರು ಮೇಲೆ ಚಲಿಸುವುದನ್ನು ಗಮನಿಸಿ. ನಿಮ್ಮ ವೀಕ್ಷಣೆಯನ್ನು ಗಮನಿಸಿ.

  • ಸೋಸು ಕಾಗದದಲ್ಲಿ ನೀರು ಮೇಲೇರುತ್ತಿದ್ದಂತೆ ನೀವೇನನ್ನು ಗಮನಿಸಿದ್ದೀರಿ? ________________________________________________________

  • ಸೋಸು ಕಾಗದದ ಮೇಲೆ ಕಪ್ಪು ಬಣ್ಣ ಮಾತ್ರವೇ ಹಾಕಿದ್ದರೂ ಸಹಾ, ಸಮಯ ಕಳೆದಂತೆ ಬೇರೆ ಬೇರೆ ಬಣ್ಣಗಳು ಏಕೆ ಕಾಣಿಸಿದವು? _______________________________________________________

87 of 123

ಚಟುವಟಿಕೆ .2.11

  • ನಿಮ್ಮ ಪ್ರಕಾರ ಕಾಗದದ ಪಟ್ಟಿಯ ಮೇಲೆ ಬಣ್ಣದ ಚುಕ್ಕಿಯು ಮೇಲೇರಲು ಕಾರಣವೇನಿರಬಹುದು?_________________________________________________________

  • ವರ್ಣರೇಖನ ಎಂದರೆ.

_________________________________________________________

ಚರ್ಚಿಸಿ:

  • ಇದೇರೀತಿ, ಸೋಸು ಕಾಗದದ ಬದಲಾಗಿ, ಸೀಮೆ ಸುಣ್ಣ ಬಳಸಿ ಈ ಪ್ರಯೋಗನಡೆಸಬಹುದೇ

__________________________________________________

  • ವರ್ಣರೇಖವನ್ನು ದಿನ ನಿತ್ಯ ಜೀವನದಲ್ಲಿ ಎಲ್ಲೆಲ್ಲಿ ಬಳಸುತ್ತಾರೆ?

__________________________________________________

  • ಪ್ರಯೋಗಾಲಯಗಳಲ್ಲಿ ಕೆಲವು ವಸ್ತುಗಳ ಶುದ್ಧತೆಯನ್ನು ಪರೀಕ್ಷಿಸಲು ವರ್ಣರೇಖನವನ್ನು ಹೆಚ್ಚಾಗಿ ಬಳಸುತ್ತಾರೆ. ಏಕೆ?

__________________________________________________

88 of 123

ನಿಮಗಿದು ಗೊತ್ತೇ?

25K ಕ್ಕಿಂತ ಕಡಿಮೆ ಕುದಿಯುವ ಬಿಂದುವಿರುವ ದ್ರವಗಳಿಗೆ, ಭಾಗಶಃ ಶುದ್ಧೀಕರಣವನ್ನು ಬಳಸಲಾಗುತ್ತದೆ.

ಭಟ್ಟಿ ಇಳಿಸುವಿಕೆಯು ಪೆಟ್ರೋಲಿಯಂ ಉತ್ಪನ್ನಗಳನ್ನು, ಗಾಳಿಯಿಂದ ಅನಿಲಗಳನ್ನು ಪ್ರತ್ಯೇಕಿಸುತ್ತದೆ.

89 of 123

Solar Water Distiller

ಸೌರಶಕ್ತಿಯಿಂದ ಭಟ್ಟಿ ಇಳಿಸುವುದು

90 of 123

ಎರಡು ಬೆರಕೆಯಾಗುವ ದ್ರವಗಳ ಮಿಶ್ರಣವನ್ನು ನೀವು ಹೇಗೆ ಬೇರ್ಪದಿಸುವಿರಿ?

  • ಅಸಿಟೋನ್ ಮತ್ತು ನೀರನ್ನು ಅವುಗಳ ಮಿಶ್ರಣದಿಂದ ಬೇರ್ಪಡಿಸಲು ಪ್ರಯತ್ನಿಸೋಣ
  • ಮಿಶ್ರಣವನ್ನು ಆಸವನ ಫ್ಲಾಸ್ಕ್ ನಲ್ಲಿ ತೆಗೆದುಕೊಳ್ಳಿ. ಉಷ್ಣತಾಮಾಪಕವನ್ನು ಜೋಡಿಸಿ.
  • ಉಪಕರಣಗಳನ್ನು ಚಿತ್ರದಲ್ಲಿರುವಂತೆ ಜೋಡಿಸಿ.
  • ಉಷ್ಣತಾ ಮಾಪಕವನ್ನು ಸೂಕ್ಷ್ಮವಾಗಿ ಗಮನಿಸುತ್ತಾ, ಮಿಶ್ರಣವನ್ನು ನಿಧಾನವಾಗಿ ಕಾಯಿಸಿ.
  • ಆವಿಯಾದ ಅಸಿಟೋನ್, ಸಾಂದ್ರಕದಲ್ಲಿ. ಸಾಂದ್ರಗೊಳ್ಳುತ್ತದೆ ಮತ್ತು ಅದನ್ನು ಸಾಂದ್ರಕದ ನಿರ್ಗಮ ನಳಿಕೆಯ ಮೂಲಕ ಸಂಗ್ರಹಿಸಿ.ನೀರು ಆಸವನ ಫ್ಲಾಸ್ಕ್ ನಲ್ಲಿ ಉಳಿಯುತ್ತದೆ.

ಆಸವನ

Distillation

91 of 123

ಇವುಗಳಿಗೆ ಉತ್ತರಿಸಿ

  • ಮಿಶ್ರಣವನ್ನು ಕಾಯಿಸಲು ಪ್ರಾರಂಭಿಸಿದಾಗ ನೀವು ಏನನ್ನು ಗಮನಿಸಿದಿರಿ?

  • ಉಷ್ಣತಾಮಾಪಕದ ಸೂಚಿಯು ಯಾವ ತಾಪದಲ್ಲಿ ಕೆಲ ಕಾಲ ಸ್ಥಿರವಾಗಿರುತ್ತದೆ?

  • ಅಸಿಟೋನ್ ನ ಕುದಿಯುವ ಬಿಂದು ಎಷ್ಟು?

  • ಎರಡೂ ಘಟಕಗಳು ಏಕೆ ಬೇರ್ಪಡುತ್ತವೆ?

ಕುದಿ ಬಿಂದುವಿನಲ್ಲಿ ಸಾಕಷ್ಟು ವ್ಯತ್ಯಾಸವಿರುವ ಮತ್ತು ಕುದಿಸಿದರೂ ವಿಘಟನೆಗೊಳಪಡದ ಎರಡು ಬೆರಕೆಯಾಗುವ ದ್ರವಗಳ ಮಿಶ್ರಣದ ಘಟಕಾಂಶಗಳನ್ನು ಬೇರ್ಪಡಿಸಲು ಈ ವಿಧಾನವನ್ನು ಬಳಸುತ್ತಾರೆ.

92 of 123

ಆಂಶಿಕ ಆಸವನ

  • ಕುದಿ ಬಿಂದು ವ್ಯತ್ಯಾಸ 25 K ಗಿಂತ ಕಡಿಮೆ ಇರುವ ಎರಡು ಅಥವಾ ಹೆಚ್ಚು ಬೆರಕೆಯಾಗುವ ದ್ರವಗಳ ಮಿಶ್ರಣವನ್ನು ಬೇರ್ಪಡಿಸಲು ಆಂಶಿಕ ಆಸವನ ವಿಧಾನವನ್ನು ಬಳಸುತ್ತಾರೆ.

  • ಉದಾಹರಣೆಗೆ, ಗಾಳಿಯಲ್ಲಿರುವ ವಿವಿಧ ಅನಿಲಗಳನ್ನು ಬೇರ್ಪಡಿಸುವುದು, ಪೆಟ್ರೋಲಿಯಂ ಉತ್ಪನ್ನಗಳ ವಿವಿಧ ಘಟಕಗಳನ್ನು ಬೇರ್ಪಡಿಸುವುದು ಇತ್ಯಾದಿ.

  • ಸರಳ ಆಸವನ ಕ್ರಿಯೆಯಲ್ಲಿ ಬಳಸುವ ಉಪಕರಣಗಳನ್ನೇ ಇಲ್ಲಿ ಬಳಸುತ್ತಾರೆ. ಆದರೆ ಆಂಶಿಕ ಸ್ಥಂಭವನ್ನು ಆಸವನ ಫ್ಲಾಸ್ಕ್ ಮತ್ತು ಸಾಂದ್ರಕದ ನಡುವೆ ಜೋಡಿಸಿರುತ್ತಾರೆ.

  • ಸರಳ ಆಂಶಿಕ ಸ್ಥಂಭವು ಗಾಜಿನ ಗೋಲಿಗಳಿಂದ ತುಂಬಿರುವ ಒಂದು ಕೊಳವೆ. ಚಿತ್ರದಲ್ಲಿ ತೋರಿಸಿರುವಂತೆ ಆವಿಯು ತಣ್ಣಗಾಗಲು ಮತ್ತು ಸತತವಾಗಿ ಸಾಂದ್ರಗೊಳ್ಳಲು ಗೋಲಿಗಳು ಮೇಲ್ಮೈಯನ್ನು ಒದಗಿಸುತ್ತವೆ.

93 of 123

ಆಂಶಿಕ ಆಸವನ

94 of 123

  • ನಾವು ಗಾಳಿಯಲ್ಲಿರುವ ಆಕ್ಸಿಜನ್ ಪಡೆಯ ಬಯಸಿದಲ್ಲಿ, ನಾವು ಗಾಳಿಯಲ್ಲಿರುವ ಇತರ ಎಲ್ಲಾ ಅನಿಲಗಳನ್ನು ಬೇರ್ಪಡಿಸಬೇಕು.

  • ಒತ್ತಡವನ್ನ್ನು ಹೆಚ್ಚಿಸಿ ಗಾಳಿಯನ್ನು ಸಂಪೀಡನೆಗೊಳಿಸಬೇಕು ಮತ್ತು ದ್ರವಿತ ಗಾಳಿ, ಪಡೆಯಲು ತಾಪವನ್ನು ಕಡಿಮೆ ಮಾಡಿ ಗಾಳಿಯನ್ನು ತಂಪುಗೊಳಿಸಿ ಆಂಶಿಕ ಆಸವನ ಸ್ಥಂಭದಲ್ಲಿ ನಿಧಾನವಾಗಿ ದ್ರವಿತ ಗಾಳಿಯನ್ನು ಬೆಚ್ಚಗಾಗಲು ಬಿಡಿ,

  • ಕುದಿ ಬಿಂದುವಿನ ಆಧಾರದಲ್ಲಿ ಅನಿಲಗಳು ವಿವಿಧ ಎತ್ತರದಲ್ಲಿ ಬೇರ್ಪಡಿಸುತ್ತವೆ

ಗಾಳಿ ಒಂದು ಸಮರೂಪ ಮಿಶ್ರಣವಾಗಿದೆ ಮತ್ತು ಇದನ್ನು ಆಂಶಿಕ ಆಸವನ ವಿಧಾನದಿಂದ ವಿವಿಧ ಘಟಕಗಳಾಗಿ ಬೇರ್ಪಡಿಸಬಹುದು.

ಆಂಶಿಕ ಆಸವನ

95 of 123

ಗಾಳಿ ಒಂದು ಸಮರೂಪ ಮಿಶ್ರಣವಾಗಿದೆ ಮತ್ತು ಇದನ್ನು ಆಂಶಿಕ ಆಸವನ ವಿಧಾನದಿಂದ ವಿವಿಧ ಘಟಕಗಳಾಗಿ ಬೇರ್ಪಡಿಸಬಹುದು.

ಗಾಳಿ

ತಾಪವನ್ನು ಕಡಿಮೆ ಮಾಡಿ ಮತ್ತು ಒತ್ತಡವನ್ನು ಹೆಚ್ಚು ಮಾಡಿ, ಸಂಪೀಡನೆಗೊಳಿಸುವುದು ಮತ್ತು ತಂಪುಗೊಳಿಸುವುದು

ದ್ರವಿತ ಗಾಳಿ

ಆಂಶಿಕ ಆಸವನ ಸ್ಥಂಭದಲ್ಲಿ ನಿಧಾನವಾಗಿ ಬೆಚ್ಚಗಾಗಲು ಬಿಡಿ

ವಿವಿಧ ಎತ್ತರಗಳಲ್ಲಿ ಅನಿಲಗಳು ಬೇರ್ಪಡುತ್ತವೆ

96 of 123

ಗಾಳಿಯ ಘಟಕಾಂಶಗಳನ್ನು ಬೇರ್ಪಡಿಸುವುದು

97 of 123

ಭಟ್ಟಿ ಇಳಿಸುವಿಕೆ

Introduction to

Fractional distillation

98 of 123

ಕಚ್ಚಾ ತೈಲವು ಒಂದು ಸಮರೂಪ ಮಿಶ್ರಣವಾಗಿದೆ ಮತ್ತು ಇದನ್ನು ಆಂಶಿಕ ಆಸವನ ವಿಧಾನದಿಂದ ವಿವಿಧ ಘಟಕಗಳಾಗಿ ಬೇರ್ಪಡಿಸಬಹುದು.

Crude Oil Distillation

99 of 123

ಶುದ್ಧ ತಾಮ್ರದ ಸಲ್ಫೇಟ್ ಅನ್ನು ಅಶುದ್ಧ ಮಾದರಿಯಿಂದ ಪಡೆಯುವುದು

  • ಅಶುದ್ಧ ತಾಮ್ರದ ಸಲ್ಫೇಟ್ ಮಾದರಿಯನ್ನು ಜೇಡಿ ಮಣ್ಣಿನ ಮೂಸೆಯಲ್ಲಿ ತೆಗೆದುಕೊಳ್ಳಿ.

  • ಕನಿಷ್ಠ ಪ್ರಮಾಣದ ನೀರಿನಲ್ಲಿ ಅಶುದ್ಧ ಮಾದರಿಯನ್ನು ಕರಗಿಸಿ.

  • ಅಶುದ್ಧತೆಗಳನ್ನು ಸೋಸಿ ಹೊರ ತೆಗೆಯುವುದು.

  • ಪರ್ಯಾಯ ದ್ರಾವಣವನ್ನು ಪಡೆಯಲು ತಾಮ್ರದ ಸಲ್ಫೇಟ್ ದ್ರಾವಣದಿಂದ ನೀರನ್ನು ಆವೀಕರಣಗೊಳಿಸಿ.

100 of 123

ಸ್ಪಟಿಕೀಕರಣ

  • ದ್ರಾವಣವನ್ನು ಸೋಸು ಕಾಗದದಿಂದ ಮುಚ್ಚಿರಿ ಮತ್ತು ಕೊಠಡಿ ತಾಪಕ್ಕೆ ಒಂದು ದಿನವಿಡೀ ನಿಧಾನವಾಗಿ ತಂಪುಗೊಳ್ಳಲು ಅಲುಗಾಡಿಸದೆ ಬಿಡಿ.

  • ಜೇಡಿ ಮಣ್ಣಿನ ಮೂಸೆಯಲ್ಲಿ ಸ್ಪಟಿಕ ರೂಪದ ತಾಮ್ರದ ಸಲ್ಫೇಟ್ಅನ್ನು ನೀವು ಪಡೆಯುವಿರಿ.

  • ಈ ಪ್ರಕ್ರಿಯಯನ್ನು ಸ್ಪಟಿಕೀಕರಣ ಎನ್ನುತ್ತಾರೆ.

101 of 123

ಶುದ್ಧ ತಾಮ್ರದ ಸಲ್ಫೇಟ್ ಅನ್ನು ಅಶುದ್ಧ ಮಾದರಿಯಿಂದ ಪಡೆಯುವುದು

Copper Sulphate Crystallization

102 of 123

ಸ್ಫಟಿಕೀಕರಣ

  • ಘನವಸ್ತುಗಳನ್ನು ಶುದ್ಧೀಕರಿಸಲು ಸ್ಫಟಿಕೀಕರಣ ವಿಧಾನವನ್ನು ಬಳಸುತ್ತಾರೆ.

  • ಉದಾಹರಣೆಗೆ, ಸಮುದ್ರದ ನೀರಿನಿಂದ ನಾವು ಪಡೆಯುವ ಉಪ್ಪಿನಲ್ಲಿ ಹೆಚ್ಚಿನ ಆಶುದ್ಧ ವಸ್ತುಗಳಿರುತ್ತವೆ. ಈ ಎಲ್ಲಾ ಆಶುದ್ಧ ವಸ್ತುಗಳನ್ನುಬೇರ್ಪಡಿಸಲು ಸ್ಫಟಿಕೀಕರಣ ಪ್ರಕ್ರಿಯೆಯನ್ನು ಬಳಸುತ್ತಾರೆ.

  • ಶುದ್ಧ ಘನವಸ್ತುವನ್ನು ಸ್ಫಟಿಕ ರೂಪದಲ್ಲಿ ದ್ರಾವಣದಿಂದ ಬೇರ್ಪಡಿಸುವ ಪ್ರಕ್ರಿಯೆಯೇ ಸ್ಫಟಿಕೀಕರಣ.

  • ಸ್ಫಟಿಕೀಕರಣ ತಂತ್ರವು ಸರಳ ಆವೀಕರಣ ತಂತ್ರಕ್ಕಿಂತ ಉತ್ತಮ ಏಕೆಂದರೆ,

●● ಶುಷ್ಕವಾಗುವವರೆಗೆ ಕಾಸಿದಾಗ ಕೆಲವು ಘನಗಳು ವಿಘಟನೆಗೊಳ್ಳುತ್ತವೆ

ಅಥವಾ ಸಕ್ಕರೆಯಂತಹ ಕೆಲವು ಕರಕಲಾಗಬಹುದು.

●● ಸೋಸುವಿಕೆಯ ನಂತರವೂ ಕೆಲವು ಅಶುದ್ಧ ವಸ್ತುಗಳು ದ್ರಾವಣದಲ್ಲಿ

ವಿಲೀನಗೊಂಡಿರಬಹುದು. ಆವೀಕರಣಗೊಳಿಸಿದಾಗ ಅವು ಘನವನ್ನು

ಕಲುಷಿತಗೊಳಿಸುತ್ತವೆ.ne

103 of 123

ಅನ್ವಯಗಳು

  • ಸಮುದ್ರದ ನೀರಿನಿಂದ ನಾವು ಪಡೆಯುವ ಉಪ್ಪನ್ನು ಶುದ್ಧೀಕರಿಸುವುದು.

  • ಅಶುದ್ಧ ಮಾದರಿಯಿಂದ ಸ್ಪಟಿಕದ ಹರಳುಗಳನ್ನು ಬೇರ್ಪಡಿಸುವುದು

  • ನಗರಗಳಲ್ಲಿ ಕುಡಿಯುವ ನೀರಿನ ಸರಬರಾಜನ್ನು ಜಲಾಗಾರಗಳಿಂದ ಮಾಡುತ್ತಾರೆ.

ಜಲಾಗಾರಗಳಿಂದ ಕುಡಿಯುವ ನೀರನ್ನು ಮನೆಗಳಿಗೆ ಸರಬರಾಜು ಮಾಡುವ ಪ್ರಕ್ರಿಯೆಯ ನಕಾಶೆ

104 of 123

ಉತ್ತರಿಸಿ

  • ಒಂದರಲ್ಲೊಂದು ಬೆರಕೆಯಾಗಬಲ್ಲ ಸೀಮೆ ಎಣ್ಣೆ ಮತ್ತು ಪೆಟ್ರೋಲ್ ಮಿಶ್ರಣವನ್ನು ನೀವು ಹೇಗೆ ಬೇರ್ಪಡಿಸುವಿರಿ?

  • ಇವುಗಳನ್ನು ಬೇರ್ಪಡಿಸಲು ಬಳಸುವ ತಂತ್ರವನ್ನು ಹೆಸರಿಸಿ.
      • ಮೊಸರಿನಿಂದ ಬೆಣ್ಣೆ
      • ಸಮುದ್ರದ ನೀರಿನಿಂದ ಉಪ್ಪು
      • ಉಪ್ಪಿನಿಂದ ಕರ್ಪೂರ

105 of 123

ಚಟುವಟಿಕೆ .2.12

ಎರಡು ಬೇರೆಕೆಯಾಗದ ಮಿಶ್ರಣಗಳನ್ನು ಬೇರ್ಪಡಿಸಲು ಪ್ರತ್ಯೇಕನಾ ಆಲಿಕೆಯನ್ನು ಬಳಸಿ ಬೇರ್ಪಡಿಸಬಹುದು. ಹಾಗಾದರೆ, ಎರಡು ಬೆರೆಕೆಯಾಗುವ ದ್ರವಗಳು ಬೆರೆತಿದ್ದರೆ. ಹೇಗೆ ಬೇರ್ಪಡಿಸುವುದು? ನಿನಗಿದು ತಿಳಿದಿರಲಿ :

ಪರಸ್ಪರ ಬೆರೆಕೆಯಾಗುವ ದ್ರವಗಳು ಬೆರೆತಿದ್ದಾಗ ಅವುಗಳ ಕುದಿ ಬಿಂದಗಳ ನಡುವಿನ ವತ್ಯಾಸದ ಆದಾರದ ಮೇಲೆ ಆ ಮಿಶ್ರಣವನ್ನು ಕುದಿಸಿ ಆವಿಯನ್ನು ತಂಪುಗೊಳಿಸಿ ಘಟಕಗಳನ್ನು ಶುದ್ದ ರೂಪದಲ್ಲಿ ಪ್ರತ್ಯೇಕಿಸುವ ವಿದಾನವೇ ಆಸವನ ವಿಧಾನ

ಉದಾಹರಣೆಗೆ, ಅಸಿಟೋನ್ ಮತ್ತು ನೀರು ಬೆರೆತ ಮಿಶ್ರಣವನ್ನು ಹೇಗೆ ಬೇರ್ಪಡಿಸುವುದು ಚರ್ಚಿಸಿ.

106 of 123

ಚಟುವಟಿಕೆ .2.12

ಮಿಶ್ರಣವನ್ನು ಆಸವನ ಫ್ಲಾಸ್ಕ್ ಗೆ ಹಾಕಿ, ಉಷ್ಣತಾ ಮಾಪಕವನ್ನು ಜೋಡಿಸಿ ಮತ್ತು ಚಿತ್ರದಲ್ಲಿರುವಂತೆ ಉಪಕರಣಗಳನ್ನು ಜೋಡಿಸಿ. ಕಾಯಿಸಲು ಪ್ರಾರಂಭಿಸಿ ಮತ್ತು ಉಷ್ಣತಾ ಮಾಪಕದ ಉಷ್ಣತೆಯನ್ನು ಗಮನಿಸುತ್ತಾ. ಆವಿಯಾಗುವ ಅಸಿಟೋನ್ ಅನ್ನು ಸಾಂದ್ರಕದ ನಿರ್ಗಮ ನಳಿಕೆಯ ಮೂಲಕ ಸಂಗ್ರಹಿಸಿ. ನೀರು ಆಸವನ ಫ್ಲಾಸ್ಕ್ ನಲ್ಲಿ ಉಳಿಯುತ್ತದೆ.

  • ಈ ಪ್ರಕ್ರಿಯೆಯಲ್ಲಿ ಎರಡೂ ದ್ರವಗಳು ಬೇರ್ಪಟ್ಟವೇ?

______________________________________________________________

  • ನೀರು ಮತ್ತು ಅಸಿಟೋನ್ ನ ಕುದಿನಿಂದ ಎಷ್ಟು?

_____________________________________________________________

  • ಈ ವಿಧಾನಕ್ಕೆ ಏನೆಂದು ಕರೆಯುವರು?

_____________________________________________________________

107 of 123

ಚಟುವಟಿಕೆ .2.12

ಯೋಚಿಸಿ: ಎರಡು ದ್ರವಗಳ ಕುದಿಬಿಂದು ಬಹಳ ಹತ್ತಿರದಲ್ಲೇ ಇದ್ದಾಗ, ಯಾವ ವಿಧಾನ ಬಳಸಿ ಬೇರ್ಪಡಿಸಬಹುದು? ಮತ್ತು ಹೇಗೆ?

____________________________________________________________

ಚರ್ಚಿಸಿ: ಗಾಳಿಯು ಒಂದು ಮಿಶ್ರಣ ಎಂದು ನೀವು ಈಗಾಗಲೇತಿಳಿದಿದ್ದೀರಿ. ಇದರಲ್ಲಿರುವ ಘಟಕಗಳನ್ನು ಹೇಗೆ ಬೇರ್ಪಡಿಸುವುದು? ಚರ್ಚಿಸಿ.

____________________________________________________________

  • ಅಶುದ್ಧ ತಾಮ್ರದ ಸಲ್ಫೇಟ್ ನಿಂದ ಶುದ್ಧ ತಾಮ್ರದ ಸಲ್ಫೇಟ್ ಅನ್ನು ಹೇಗೆ ಪಡೆಯುವುದು?

_____________________________________________________________

  • ಸ್ಪಟಿಕೀಕರಣ ವಿಧಾನವನ್ನು ಯಾವ ರೀತಿಯ ವಸ್ತುಗಳನ್ನು ಬೇರ್ಪಡಿಸಲು ಬಳಸುತ್ತಾರೆ.

_____________________________________________________________

108 of 123

ಚಟುವಟಿಕೆ .2.13

ಈ ಕೆಳಗಿನ ಮಿಶ್ರಣಗಳನ್ನು ಯಾವ ವಿಧಾನದಿಂದ ಬೇರ್ಪಡಿಸಬಹುದು?

ಮಿಶ್ರಣಗಳು

ಬೇರ್ಪಡಿಸುವಿಕೆಯ ವಿಧಾನ

ಏಕೆ?

ತಾಮ್ರದ ಸಲ್ಫೇಟ್-ನೀರಿನ ದ್ರವಣ

ಮೊಸರಿನಿಂದ ಬೆಣ್ಣೆ

ಸಮುದ್ರದ ನೀರಿನಿಂದ ಉಪ್ಪು

ಪೆಟ್ರೋಲಿಯಂ ಉತ್ಪನ್ನಗಳ

ಆಲ್ಕೋಹಾಲ್ ಮತ್ತು ನೀರು

ಸೂಚನೆ : ಈಗಾಗಲೇ ಕಲಿತಿರುವ ಮಿಶ್ರಣಗಳ ಬೇರ್ಪಡಿಸುವಿಕೆಯ ವಿಧಾನಗಳನ್ನು ಅರಿತು ಪೂರ್ಣಗೊಳಿಸುವುದು.

109 of 123

ನಮ್ಮ ಸುತ್ತ ಮುತ್ತಲಿನ ಬದಲಾವಣೆಗಳನ್ನು ಭೌತ ಮತ್ತು ರಾಸಾಯನಿಕ ಬದಲಾವಣೆಗಳೆಂದು ವರ್ಗೀಕರಿಸುವರು ಮತ್ತು ಕಾರಣಗಳನ್ನು ತಿಳಿಯುವರು.

ಕಲಿಕಾ ಫಲ -3

110 of 123

ಭೌತಿಕ ಬದಲಾವಣೆಗಳು

  • ವೀಕ್ಷಿಸಬಹುದಾದ ಮತ್ತು ನಿರ್ದಿಷ್ಟಗೊಳಿಸಬಹುದಾದ ಗುಣಗಳಾದ ಬಣ್ಣ, ಗಡಸುತನ, ದ್ರವತೆ, ಸಾಂದ್ರತೆ, ದ್ರವನ ಬಿಂದು, ಕುದಿ ಬಿಂದು ಮುಂತಾದವು ಭೌತಿಕ ಗುಣಗಳಾಗಿವೆ.

ಉದಾ: ಮಂಜುಗಡ್ಡೆ ಕರಗುವುದು, ಕಾಗದದ ದಹನ, ಕಡ್ಡಿಯನ್ನು ಮುರಿಯುವುದು,....

111 of 123

ರಾಸಾಯನಿಕ ಬದಲಾವಣೆ

  • ರಾಸಾಯನಿಕ ಬದಲಾವಣೆಯು ದ್ರವ್ಯದ ರಾಸಾಯನಿಕ ಗುಣಗಳಲ್ಲಿ ಬದಲಾವಣೆ ತರುತ್ತದೆ ಮತ್ತು ಹೊಸ ವಸ್ತುಗಳು ದೊರೆಯುತ್ತವೆ.

ಉದಾ: ಕಬ್ಬಿಣ ತುಕ್ಕು ಹಿಡಿಯುವುದು, ಹಾಲು ಮೊಸರಾಗುವುದು,.....

112 of 123

ರಾಸಾಯನಿಕ ಬದಲಾವಣೆ

113 of 123

ಕೆಳಗಿನವುಗಳನ್ನು ಭೌತ ಮತ್ತು ರಾಸಾಯನಿಕ ಬದಲಾವಣೆಗಳೆಂದು ಹೆಸರಿಸಿ

  • ಮರಗಳನ್ನ್ನು ಕಡಿಯುವುದು

  • ಹೆಂಚಿನಲ್ಲಿ ಬೆಣ್ಣೆಯನ್ನು ಕರಗಿಸುವುದು

  • ತುಕ್ಕು ಹಿಡಿಯುವುದು

  • ನೀರನ್ನು ಕುದಿಸಿ ಆವಿಯಾಗಿಸುವುದು

  • ನೀರಲ್ಲಿ ಉಪ್ಪನ್ನು ಕರಗಿಸುವುದು

  • ಕಾಯಿ ಹಣ್ಣು ಆಗುವುದು

  • ಕಾಗದದ ದಹನ

114 of 123

ಚಟುವಟಿಕೆ .3.1

'ತುಕ್ಕು ಹಿಡಿದಿರುವ ಮೊಳೆ ಮತ್ತು ಆವಿಯಾಗುತ್ತಿರುವ ನೀರು' ಈ ಎರಡರ ನಡುವಿನ ವ್ಯತ್ಯಾಸವೇನು?

ನಿನಗಿತ್ತು ತಿಳಿದಿರಲಿ : ನಿಮ್ಮ ಮನೆಯಲ್ಲಿ ತರಕಾರಿ ನೀರು ಹಾಕಿ ಆಹಾರ ತಯಾರಿಸುವಾಗ ರುಚಿ, ವಾಸನೆ ಹೊಸ ಬದಲಾವಣೆಗಳು ಉಂಟಾಗುತ್ತವೆ. ನೀರನ್ನು ಕಾಯಿಸಿದಾಗ ವಾಸನೆ ರುಚಿ, ಹೊಸ ಉತ್ಪನ್ನ ಉಂಟಾಗುತ್ತದೆಯೇ ಗಮನಿಸಿ

ಒಂದು ತುಕ್ಕು ಹಿಡಿದಿರುವ ಮೊಳೆ ತೆಗೆದುಕೊಳ್ಳಿ ಮತ್ತು ಒಂದು ಬೀಕರ್ ನಲ್ಲಿ ನೀರನ್ನು ಕಾಯಿಸುತ್ತಾ ವೀಕ್ಷಿಸಿ.

  • ಆವಿಯಾಗುತ್ತಿರುವ ನೀರು ಎಂತಹ ಬದಲಾವಣೆ?

__________________________________________________

  • ಆವಿಯಾನ್ನು ತಣ್ಣಗೆ ಮಾಡುವುದರಿಂದ ನೀರು ಪಡೆಯಬಹುದು?

__________________________________________________

  • ತುಕ್ಕು ಹಿಡಿದಿರುವ ಮೊಳೆಯಲ್ಲಿ ತುಕ್ಕು ಮತ್ತು ಮೊಳೆಯ ನಡುವಿನ ವ್ಯತ್ಯಾಸವೇನು?

__________________________________________________

115 of 123

ಚಟುವಟಿಕೆ .3.2

ಈ ಕೆಳಗಿನ ಉದಾಹರಣೆಗಳನ್ನು ಭೌತ ಮತ್ತು ರಾಸಾಯನಿಕ ಬದಲಾವಣೆಗಳಾಗಿ ವರ್ಗೀಕರಿಸಿ.

ಸೂಚನೆ : ಬಣ್, ರುಚಿ ವಾಸನೆ ಹೊಸ ಉತ್ಪನ್ನಗಳ ಆಧಾರದ ಮೇಲೆ ಈ ಚಟುವಟಿಕೆ ನಿರ್ವಹಿಸುವುದು:

ಉದಾಹರಣೆಗಳು

ಬದಲಾವಣೆಯಲ್ಲಿನ ಪ್ರಮುಖ ಅಂಶಗಳು

ಭೌತ ಬದಲಾವಣೆ/ ರಾಸಾಯನಿಕ ಬದಲಾವಣೆ

ಹಾಲಿನಿಂದ ಮೊಸರು

ಕಬ್ಬಿಣವನ್ನು ಬಗ್ಗಿಸುವುದು

ಅಗರಬತ್ತಿ ಉರಿಸುವುದು

ಮೇಣದ ಬತ್ತಿಯ ಕರಗುವಿಕೆ

ಕಾಗದ ಸುಡುವುದು

ಗೋಡೆಗೆ ಸುಣ್ಣ ಹೊಡೆಯುವುದು

ಕಾಗದವನ್ನು ಮುದುಡುವುದು

116 of 123

ಚಟುವಟಿಕೆ

  • ತರಗತಿಯನ್ನು ಎರಡು ಗುಂಪುಗಳಾಗಿ ವಿಭಜಿಸಿ. ಎರಡೂ ಗುಂಪುಗಳಿಗೆ 5g ಕಬ್ಬಿಣದ ಚೂರು ಮತ್ತು 3g ಸಲ್ಫರ್ ಪುಡಿಯನ್ನು ಪಿಂಗಾಣಿ ಬಟ್ಟಲಿನಲ್ಲಿ ನೀಡಿ.

  • A ಗುಂಪು: ಕಬ್ಬಿಣದ ಚೂರು ಮತ್ತು ಸಲ್ಫರ್ ಪುಡಿಯನ್ನು ಮಿಶ್ರಣ ಮಾಡಿ ಮತ್ತು ನಯವಾಗಿ ಅರೆಯಿರಿ

  • B ಗುಂಪು: ಕಬ್ಬಿಣದ ಚೂರು ಮತ್ತು ಸಲ್ಫರ್ ಪುಡಿಯನ್ನು ಮಿಶ್ರಣ ಮಾಡಿ ಮತ್ತು

ನಯವಾಗಿ ಅರೆಯಿರಿ. ಮಿಶ್ರಣವನ್ನು ಕೆಂಪಾಗಿ ಕಾಯುವವರಗೂ

ಕಾಯಿಸಿ. ಬೆಂಕಿಯ ಜ್ವಾಲೆಯಿಂದ ತೆಗೆಯಿರಿ ಮತ್ತು ಮಿಶ್ರಣವನ್ನು

ತಂಪಾಗಲು ಬಿಡಿ.

ಪಡೆದ ವಸ್ತುವಿನ ಕಾಂತೀಯತೆಯನ್ನು ಪರಿಶೀಲಿಸಿ, ವಸ್ತುವಿನ ಸನಿಹ ಕಾಂತವನ್ನು ತನ್ನಿರಿ ಮತ್ತು ವಸ್ತುವು ಕಾಂತದೆಡೆಗೆ ಆಕರ್ಷಿತಗೊಳ್ಳುತ್ತದೆಯೇ ಎಂದು ಪರಿಶೀಲಿಸಿ. ಗುಂಪುಗಳು ಪಡೆದಿರುವ ವಸ್ತುಗಳ ಬಣ್ಣ ಮತ್ತು ರಚನೆಯನ್ನು ಹೋಲಿಸಿ

117 of 123

ಚಟುವಟಿಕೆ

  • ಪಡೆದಿರುವ ವಸ್ತುವಿನ ಒಂದು ಭಾಗಕ್ಕೆ ಕಾರ್ಬನ್ ಡೈ ಸಲ್ಫೈಡ್ ಅನ್ನು ಸೇರಿಸಿ. ಚೆನ್ನಾಗಿ ಕುಲುಕಿ ಮತ್ತು ಸೋಸಿ.
  • ಪಡೆದಿರುವ ವಸ್ತುವಿನ ಇನ್ನುಳಿದ ಭಾಗಕ್ಕೆ ಸಾರರಿಕ್ತ ಸಲ್ಫುರಿಕ್ ಆಮ್ಲ ಅಥವಾ ಸಾರರಿಕ್ತ ಹೈಡ್ರೋಕ್ಲೋರಿಕ್ ಆಮ್ಲವನ್ನು ಸೇರಿಸಿ.

●● ಎರಡೂ ಗುಂಪುಗಳು ಪಡೆದಿರುವ ವಸ್ತುಗಳು ನೋಡಲು ಒಂದೇ ರೀತಿಯಾಗಿವೆಯೇ ?

●● ಕಾಂತೀಯ ಗುಣಗಳನ್ನು ಹೊಂದಿರುವ ವಸ್ತುಗಳನ್ನು ಯಾವ ಗುಂಪು ಪಡೆಯಿತು ?

●● ಪಡೆದ ವಸ್ತುಗಳ ಘಟಕಾಂಶಗಳನ್ನು ನಾವು ಬೇರ್ಪಡಿಸಬಹುದೇ

●● ತಂಡಗಳು ಅನಿಲವೊಂದನ್ನು ಪಡೆದವೇ ? ಎರಡೂ ಸನ್ನಿವೇಶಗಳಲ್ಲಿ ಪಡೆದ ಅನಿಲವು ಒಂದೇ ರೀತಿಯ ವಾಸನೆಯನ್ನು ಹೊಂದಿದೆಯೇ ಅಥವಾ ಬೇರೆ ಬೇರೆಯಾಗಿದೆಯೆ ?

ಗುಂಪು-I ಪಡೆದ ಅನಿಲ ಹೈಡ್ರೋಜನ್. ಅದು ಬಣ್ಣ ರಹಿತ, ವಾಸನೆ ರಹಿತ ಮತ್ತು ದಹ್ಯ. ತರಗತಿಯಲ್ಲಿ ಹೈಡ್ರೋಜನ್ ದಹನ ಪರೀಕ್ಷೆಯನ್ನು ಮಾಡಲು ಸಲಹೆ ನೀಡುವುದಿಲ್ಲ. ಗುಂಪು-II ಪಡೆದ ಅನಿಲ ಹೈಡ್ರೋಜನ್ ಸಲ್ಫೈಡ್. ಇದು ಕೊಳೆತ ಮೊಟ್ಟೆಯ ವಾಸನೆಯುಳ್ಳ ಬಣ್ಣರಹಿತ ಅನಿಲ.

118 of 123

ಎರಡೂ ಗುಂಪುಗಳ ಪ್ರಾರಂಭದ ವಸ್ತುಗಳು ಒಂದೇ ಆಗಿದ್ದರೂ ಪಡೆದಿರುವ ಉತ್ಪನ್ನಗಳು ಬೇರೆ ಬೇರೆ ಗುಣಗಳನ್ನು ಹೊಂದಿರುವುದನ್ನು ನೀವು ಗಮನಿಸುವಿರಿ.

ಭೌತ ಬದಲಾವಣೆಗಳನ್ನು ಒಳಗೊಂಡ ಚಟುವಟಿಕೆಗಳನ್ನು ಗುಂಪು-I ನಡೆಸಿದರೆ,

ರಾಸಾಯನಿಕ ಬದಲಾವಣೆಗಳನ್ನು (ರಾಸಾಯನಿಕ ವರ್ತನೆ) ಒಳಗೊಂಡವುಗಳನ್ನು ಗುಂಪು -II ಮಾಡಿತು.

ಗುಂಪು- I ಪಡೆದ ವಸ್ತು, ಎರಡು ವಸ್ತುಗಳ ಮಿಶ್ರಣವಾಗಿದೆ.

  • ಕಬ್ಬಿಣ ಮತ್ತು ಸಲ್ಫರ್ ಧಾತುಗಳನ್ನು ನೀಡಲಾಗಿತ್ತು.
  • ಮಿಶ್ರಣದ ಗುಣಗಳು ಅದರಲ್ಲಿರುವ ಘಟಕಾಂಶಗಳ ಗುಣಗಳೂ ಒಂದೇ ಆಗಿರುತ್ತವೆ.

ಗುಂಪು- II ಪಡೆದುಕೊಂಡ ವಸ್ತುವು ಸಂಯುಕ್ತವಾಗಿದೆ.

  • ಎರಡು ಧಾತುಗಳನ್ನು ಪ್ರಬಲವಾಗಿ ಕಾಸಿದಾಗ ನಮಗೆ ಸಂಯುಕ್ತ ದೊರೆಯುತ್ತದೆ. ಅದರ ಗುಣಗಳು ಸಂಯೋಗಗೊಂಡ ಧಾತುಗಳಿಗೆ ಹೋಲಿಸಿದಲ್ಲಿ ಬೇರೆಯಾಗಿರುತ್ತದೆ.
  • ಸಂಯುಕ್ತದ ಸಂಯೋಜನೆಯು ಸಮಗ್ರವಾಗಿ ಒಂದೇ ಆಗಿರುತ್ತದೆ. ಸಂಯುಕ್ತದ ಬಣ್ಣ ಮತ್ತು ರಚನೆ ಸಮಗ್ರವಾಗಿ ಒಂದೇ ಆಗಿರುವುದನ್ನು ನಾವು ಕಾಣಬಹುದು. ಆದ್ದರಿಂದ ದ್ರವ್ಯದ ಭೌತ ಮತ್ತು ರಾಸಾಯನಿಕ ಸ್ವಭಾವವನ್ನು ಈ ಕೆಳಕಂಡ ನಕ್ಷಾ ವ್ಯವಸ್ಥೆಯಲ್ಲಿ ನಾವು ಸಂಕ್ಷಿಪ್ತಗೊಳಿಸಬಹುದು.

119 of 123

ತಿಳಿಯಿರಿ

ದ್ರವ್ಯ

(ಘನ, ದ್ರವ ಮತ್ತು ಅನಿಲ)

ಶುದ್ಧ ವಸ್ತು

ಮಿಶ್ರಣಗಳು (ನಿರ್ದಿಷ್ಟ ಸಂಯೋಜನೆಯಿಲ್ಲ)

ಧಾತುಗಳು

ಸರಳ ವಸ್ತುಗಳಾಗಿ ವಿಭಜಿಸಲು ಸಾಧ್ಯವಿಲ್ಲ

ಉದಾಹರಣೆ ತಾಮ್ರ , ಆಕ್ಸಿಜನ್, ಕಬ್ಬಿಣ, ಹೈಡ್ರೋಜನ್, ಪಾದರಸ ಮುಂತಾದವು

ಸಂಯುಕ್ತಗಳು

ನಿರ್ದಿಷ್ಟ ಸಂಯೋಜನೆಯನ್ನು ಹೊಂದಿವೆ. ರಾಸಾಯನಿಕ ಅಥವಾ ವಿದ್ಯುತ್ ರಾಸಾಯನಿಕ ವರ್ತನೆಗಳಿಂದ ಧಾತುಗಳಾಗಿ ವಿಭಜಿಸಬಹುದು

ಉದಾಹರಣೆ : ನೀರು, ಮೀಥೇನ್, ಸಕ್ಕರೆ, ಉಪ್ಪು ಮುಂತಾದವು

ಸಮರೂಪ

ಏಕರೂಪ ಸಂಯೋಜನೆ

ಉದಾಹರಣೆ: ನೀರಿನಲ್ಲಿ ಸಕ್ಕರೆ, ನೀರಿನಲ್ಲಿ ಉಪ್ಪು, ಕಾರ್ಬನ್ ಡೈ ಸಲ್ಫೈಡ್ ನಲ್ಲಿ ಸಲ್ಫರ್, ಆಲ್ಕೋಹಾಲ್ ನಲ್ಲಿ ನೀರು ಮುಂತಾದವು

ಸಮರೂಪವಲ್ಲದ

ಅಸಮರೂಪ ಸಂಯೋಜನೆ

ಉದಾಹರಣೆ : ಮಣ್ಣು ಮತ್ತು ಉಪ್ಪು, ಸಕ್ಕರೆ ಮತ್ತು ಉಪ್ಪು, ಎಣ್ಣೆಯಲ್ಲಿ ನೀರು ಮುಂತಾದವು

120 of 123

ಮಿಶ್ರಣಗಳು ಮತ್ತು ಸಂಯುಕ್ತಗಳ ನಡುವಿನ ವ್ಯತ್ಯಾಸ

ಮಿಶ್ರಣಗಳು

ಸಂಯುಕ್ತಗಳು

ಧಾತುಗಳನ್ನು ಅಥವಾ ಸಂಯುಕ್ತಗಳನ್ನು ಕೇವಲ ಬೆರೆಸಿದರೆ ಮಿಶ್ರಣ ಉಂಟಾಗುತ್ತದೆ. ಹೊಸ ವಸ್ತುಗಳು ಉಂಟಾಗುವುದಿಲ್ಲ.

ಧಾತುಗಳು ವರ್ತಿಸಿ ಹೊಸ ವಸ್ತುಗಳು ಉಂಟಾಗುತ್ತವೆ

ಮಿಶ್ರಣಗಳು ವಿವಿಧ ಬಗೆಯ ಸಂಯೋಜನೆಗಳನ್ನು ಹೊಂದಿರುತ್ತವೆ.

ಪ್ರತಿಯೊಂದು ಹೊಸ ವಸ್ತುವಿನ ಸಂಯೋಜನೆ ನಿರ್ದಿಷ್ಟವಾಗಿರುತ್ತದೆ.

ಮಿಶ್ರಣಗಳು ಅವುಗಳಲ್ಲಿರುವ ಘಟಕ ವಸ್ತುಗಳ ಗುಣಗಳನ್ನು ಪ್ರದರ್ಶಿಸುತ್ತವೆ

ಹೊಸ ವಸ್ತುವು ಸಂಪೂರ್ಣವಾಗಿ ಬೇರೆ ಗುಣಗಳನ್ನು ಹೊಂದಿರುತ್ತದೆ.

ಭೌತ ವಿಧಾನಗಳಿಂದ ಘಟಕಾಂಶಗಳನ್ನು ತಕ್ಕಮಟ್ಟಿಗೆ

ಸುಲಭವಾಗಿ ಬೇರ್ಪಡಿಸಬಹುದು.

ಕೇವಲ ರಾಸಾಯನಿಕ ಅಥವಾ ವಿದ್ಯುತ್

ರಾಸಾಯನಿಕ ವರ್ತನೆಗಳ ಮೂಲಕ

ಘಟಕಾಂಶಗಳನ್ನು ಬೇರ್ಪಡಿಸಬಹುದು

121 of 123

ಉತ್ತರಿಸಿ

  1. ಭೌತಿಕ ಮತ್ತು ರಾಸಾಯನಿಕ ಬದಲಾವಣೆಗಳಿಗಿರುವ ವ್ಯತ್ಯಾಸವನ್ನು ತಿಳಿಸಿ

  • ಇವುಗಳನ್ನು ಲೋಹ , ಆಲೋಹಗಳಾಗಿ ವಿಂಗಡಿಸಿ

ಕಬ್ಬಿಣ, ಮರ, ಚಿನ್ನ, ಕಲ್ಲು, ಪ್ಲಾಸ್ಟಿಕ್, ಪುಸ್ತಕ, ಅಲ್ಯೂಮಿನಿಯಂ

3 . ಇವುಗಳನ್ನು ಧಾತು ಮತ್ತು ಸಂಯುಕ್ತಗಳಾಗಿ ವಿಂಗಡಿಸಿ

ತಾಮ್ರ, ನೀರು, ಸೋಡಿಯಂ ಕ್ಲೋರೈಡ್, ಹೈಡ್ರೋಜನ್, ಕಾರ್ಬನ್, ಸತು, ಕಾರ್ಬನ್ ಡೈಆಕ್ಸೈಡ್

122 of 123

ಚಟುವಟಿಕೆ .3.3

ಈ ಕೆಳಗಿನ ನಕ್ಷೆ ಪೂರ್ಣಗೊಳಿಸಿ.

ಸೂಚನೆ : ದ್ರವ್ಯಕ್ಕೆ ಸಂಬಂಧಿಸಿದ ಅಂಶಗಳನ್ನು ಈ ಚಟುವಟಿಕೆ ಒಳಗೊಂಡಿದ್ದು ಯೋಚಿಸಿ ಪೂರ್ಣಗೊಳಿಸುವುದು.

123 of 123

ಉತ್ತರಿಸಿ

ನನ್ನ ತಿಳುವಳಿಕೆಯನ್ನು ನಾನೇ ಪರಿಶೀಲಿಸಿಕೊಳ್ಳುವೆ :-

  1. ಮಿಶ್ರಣಗಳು ಮತ್ತು ಸಂಯುಕ್ತಗಳು ನಡುವಿನ ಪ್ರಮುಖ ವ್ಯತ್ಯಾಸಗಳನ್ನು ತಿಳಿಸಿ.
  2. ಅಸಮರೂಪ ಮಿಶ್ರಣಗಳಿಗೆ ಉದಾಹರಣೆ ನೀಡಿ.
  3. ನೀರು ಆಕ್ಸಿಜನ್ ಮತ್ತು ಹೈಡ್ರೋಜನ್ ಗಳಿಂದಾಗಿದ್ದರೂ ಸಹ, ಮೂಲ ಧಾತುವಿನ ಗುಣಗಳನ್ನು ನೀರು ತೋರಿಸುವುದಿಲ್ಲ ಏಕೆ?
  4. ಕೊಟ್ಟಿರುವ ವಸ್ತುಗಳನ್ನು ಧಾತು, ಸಂಯುಕ್ತ ಮತ್ತು ಮಿಶ್ರಣಗಳಾಗಿ ವರ್ಗೀಕರಿಸಿ. ಚಿನ್ನ, ಮಣ್ಣು, ಉಪ್ಪು,ನೀರು, ಕಾರ್ಪೂರ, ಸಲ್ಫೇಟ್, ತಾಮ್ರ, ಆಕ್ಸಿಜನ್, ಸೋಡಿಯಂ, ನೀಲಿ ಶಾಹಿ, ಗಾಳಿ, ಹಿಲಿಯಂ
  5. ಮನೆಯಲ್ಲಿ ಅಮ್ಮ ಕಡಗೋಲನ್ನು ಬಳಸಿ ಮೊಸರಿನಿಂದ ಬೆಣ್ಣೆಯನ್ನು ಬೇರ್ಪಡಿಸುವುದನ್ನು ನೋಡಿರಬಹುದು? ಇದು ಯಾವ ರೀತಿಯ ಬೇರ್ಪಡಿಸುವಿಕೆ ವಿಧಾನ?