1 of 99

Copyrights and Attributions

The lesson plans created by India Literacy Project are not for profit or for sale. The content here has been compiled as open source and can be used, reproduced, derived of or modified by anyone as long as it is used for educational and non-profit use and released as open source.

All images and videos used in this presentation are sourced from the Internet and are owned and copyrighted as appropriate by the original owners.

India Literacy Project neither owns nor claims any copyright over them.

Free Distribution

ಉಚಿತ ವಿತರಣೆ

India Literacy Project

2 of 99

ILP ಸ್ವಯಂ ಸೇವಾ ಸಂಸ್ಥೆ  ಉಚಿತ ವಿತರಣೆಗಾಗಿ ಈ ಡಿಜಿಟಲ್ ಸಂಪನ್ಮೂಲವನ್ನು ಸಿದ್ಧಪಡಿಸಿದೆ. 

ಇದರ ಉದ್ದೇಶಗಳು:

  • ಶಾಲೆಯಲ್ಲಿ ಸ್ಮಾರ್ಟ್ ಕ್ಲಾಸ್ ಶಕ್ಯವಾಗಿಸಲು (ಸಕ್ರಿಯವಾಗಿಸಲು)  
  • ಶಾಲಾ ಮಕ್ಕಳಿಗೆ ಪಠ್ಯ ಪುಸ್ತಕದ ಜೊತೆಗೆ ಪರಿಕಲ್ಪನೆ ಅರ್ಥೈಸಿಕೊಳ್ಳುವುದಕ್ಕೆ    ಡಿಜಿಟಲ್ ಸಂಪನ್ಮೂಲ ಒದಗಿಸಲು  .
  • ಶಿಕ್ಷಕರು ಹಾಗು ಮಕ್ಕಳು ಬಹುಆಯಾಮ ಕಲಿಕೆಯ ಅನುಭವ  ಪಡೆಯಲು .   

ಇದರ ವೈಶಿಷ್ಟ್ಯತೆಗಳು:

  • ಪಠ್ಯ ಪುಸ್ತಕದಲ್ಲಿರುವ ಪರಿಕಲ್ಪನೆಗಳನ್ನು ಈ ಡಿಜಿಟಲ್ ಸಂಪನ್ಮೂಲ ಬಲಪಡಿಸುತ್ತದೆ. 

  • ಪ್ರತಿನಿತ್ಯ ಮಾಡುವ ಬೋಧನಾ ವಿಧಾನ ( ಕಪ್ಪುಹಲಗೆ, ಪ್ರಯೋಗಗಳು, ಚಟುವಟಿಕೆಗಳು ಹಾಗೂ ಇತರೆ)  ಜೊತೆಗೆ ಈ 

ಡಿಜಿಟಲ್  ಸಂಪನ್ಮೂಲವನ್ನು ಬಳಸುವುದರಿಂದ ನಿಮ್ಮ ತರಗತಿ ಸ್ಮಾರ್ಟ್ ಕ್ಲಾಸ್ ಆಗಿ ಬದಲಾವಣೆಯಾಗಲು ಸಹಾಯಕವಾಗಿದೆ.

  • PPTಯು  ಪಠ್ಯ ಪುಸ್ತಕದ  ಜೊತೆಗೆ  ಉಪಯೋಗಿಸುವಂಥಹದ್ದು.  ಈ PPT ಯನ್ನು ಉಪಯೋಗಿಸುವಾಗ ಮಕ್ಕಳು ಪಠ್ಯ ಪುಸ್ತಕ, 

ನೋಟ್ ಬುಕ್ ಮತ್ತು ಪೆನ್ ನ್ನು ಸಿದ್ಧವಾಗಿಟ್ಟುಕೊಳ್ಳುವುದು.

  • ಕಲಿಕೆಗೆ ಪೂರಕವಾಗಿ ಪರಿಕಲ್ಪನೆಗಳನ್ನು ಅರ್ಥೈಸಲು 2-5 ನಿಮಿಷಗಳ ಕಾಲದ ವಿಡಿಯೋ ಗಳನ್ನು ಅಳವಡಿಸಲಾಗಿದೆ. 

  • ಕಲಿಕೆಗೆ ಪೂರಕವಾಗುವಂತೆ  ಇದರಲ್ಲಿ ಬದಲಾವಣೆ ಮಾಡಿಕೊಳ್ಳಬಹುದಾಗಿದೆ. 

  • ಈ ಡಿಜಿಟಲ್ ಸಾಧನವನ್ನು ಶಿಕ್ಷಕರು ತಮ್ಮ  ಅನುಕೂಲತೆಗೆ ಅನುಗುಣವಾಗಿ ಉಪಯೋಗಿಸಬಹುದಾಗಿದೆ.  

  • ILP ವಿಜ್ಞಾನ ಪ್ರಯೋಗ ಕಿಟ್  ನಿಮ್ಮಲ್ಲಿದ್ದಲ್ಲಿ ಅದನ್ನು ಬಳಸಿಕೊಳ್ಳಬಹುದು.

  • ಈ ಪಾಠ ಯೋಜನೆಗಳನ್ನು ಉತ್ತಮಪಡಿಸಲು ಶಿಕ್ಷಕರು / ವಿದ್ಯಾರ್ಥಿಗಳು ತಮ್ಮ ಸಲಹೆಗಳನ್ನು ಮುಕ್ತವಾಗಿ ನೀಡಬಹುದಾಗಿದೆ.

India Literacy Project - email: info@ilpnet.org

ಶಿಕ್ಷಕರಿಗಾಗಿ

3 of 99

2022-2023 ಶೈಕ್ಷಣಿಕ ವರ್ಷದಲ್ಲಿ ಶಾಲೆಗಳಲ್ಲಿ ಕಲಿಕಾ ಚೇತರಿಕೆ ಕಾರ್ಯಕ್ರಮ

ಅನುಷ್ಠಾನವಾಗಲಿದೆ.

ಈ ppt ಗಳು ಕಲಿಕಾ ಚೇತರಿಕೆಯ ಕಲಿಕಾ ಹಾಳೆಗಳು ಮತ್ತು ಪಠ್ಯ ಪುಸ್ತಕದ

ವಿಷಯಗಳು ಸುಗಮವಾದ ಉಪಕ್ರಮಕ್ಕೆ ಶಿಕ್ಷಕರಿಗೆ ಸಹಾಯವಾಗುವಂತೆ ಇದೆ.

ಶಿಕ್ಷಕರಿಗಾಗಿ....

4 of 99

ಪಾಠದ ಕಲಿಕೆಗೆ ಬೇಕಾಗಿರುವ ಪೂರಕ ಸಾಮಗ್ರಿಗಳು:

ಎರಡು ಗಾಜಿನ ಜಾರು

ಎರಡು ಈರುಳ್ಳಿ

ನೀರು

ಬ್ಲೇಡ್

ಗಾಜಿನ ಸ್ಲೈಡ್

ಫೋಲ್ಡ್ಸ್ಕೋಪ್(ಸೂಕ್ಷ್ಮದರ್ಶಕ)

ಸ್ಯಾಫ್ರನಿನ್ ಬಣ್ಣ

ಗ್ಲಿಸರಿನ್

ಸಸ್ಯವೊಂದರ ಕಾಂಡ

ರಿಯೋ ಗಿಡದ ಎಲೆ

ಕವರ್ ಸ್ಲಿಪ್

5 of 99

ಜೀವಕೋಶ ಎಂದರೇನು ?

6 of 99

ಏಕ ಕೋಶ ಜೀವಿ ಎಂದರೇನು ?

ಬಹ ಕೋಶ ಜೀವಿ ಎಂದರೇನು ?

7 of 99

ಏಕಕೋಶೀಯ ಜೀವಿಗಳು ಉದಾ: ಬ್ಯಾಕ್ಟೀರಿಯಾ

8 of 99

ಬಹುಕೊಶಿಯ ಜೀವಿಗಳು ಉದಾ: ಇಲಿ

9 of 99

ಜೀವ ಕೋಶಗಳ ಗುಂಪಿಗೆ ಏನೆಂದು ಕರೆಯುತ್ತಾರೆ ?

ಅಂಗಾಂಶ

10 of 99

ಅಂಗಾಂಶಗಳು(Tissues)

ತರಗತಿ: 9

ಅಧ್ಯಾಯ: 6

ವಿಷಯ: ವಿಜ್ಞಾನ

11 of 99

ಶಿಕ್ಷಕರಿಗಾಗಿ…..

ಕಲಿಕಾಫಲಗಳು

1. ಸಸ್ಯ ಅಂಗಾಂಶಗಳು ಮತ್ತು ಅದರ ವಿಧಗಳನ್ನು ಗುರುತಿಸಿ ಅರ್ಥೈಸಿಕೊಳ್ಳುವೆ.

2. ಪ್ರಾಣಿ ಅಂಗಾಂಶಗಳು ಮತ್ತು ಅದರ ವಿಧಗಳನ್ನು ಗುರುತಿಸಿ ಅರ್ಥೈಸಿಕೊಳ್ಳುವೆ.

12 of 99

ಕಲಿಕಾ ಫಲ -1

ಸಸ್ಯ ಅಂಗಾಂಶಗಳು ಮತ್ತು ಅದರ ವಿಧಗಳನ್ನು ಗುರುತಿಸಿ ಅರ್ಥೈಸಿಕೊಳ್ಳುವರು.

13 of 99

ಅಂಗಾಂಶ

ಒಂದೇ ರೀತಿಯ ರಚನೆ ಅಥವಾ ಒಂದು ನಿರ್ದಿಷ್ಟ ಕಾರ್ಯವನ್ನು ಪೂರೈಸಲು ಒಟ್ಟಿಗೇ ಕೆಲಸ ಮಾಡುವ ಒಂದು ಜೀವಕೋಶಗಳ ಗುಂಪಿಗೆ ಅಂಗಾಂಶ ಎನ್ನುವರು.

ಅಂಗಾಂಶ

ಜೀವಕೋಶ

14 of 99

  1. ಸಸ್ಯಗಳು ಮತ್ತು ಪ್ರಾಣಿಗಳು ಒಂದೇ ರೀತಿಯ ಅಂಗಾಂಶದಿಂದ ಉಂಟಾಗಿವೆಯೇ?

  • ಸಸ್ಯಗಳು ಮತ್ತು ಪ್ರಾಣಿಗಳು ಒಂದೇ ರೀತಿಯ ರಚನೆಯನ್ನು ಹೊಂದಿವೆಯೇ?

  • ಅವೆರಡೂ ಒಂದೇ ರೀತಿಯ ಕಾರ್ಯಗಳನ್ನು ನಿರ್ವಹಿಸುತ್ತವೆಯೆ?

ಯೋಚಿಸಿ...

15 of 99

ಸಸ್ಯ ಮತ್ತು ಪ್ರಾಣಿ ಅಂಗಾಂಶಗಳು:

ಸಸ್ಯ ಅಂಗಾಂಶಗಳು

ಪ್ರಾಣಿ ಅಂಗಾಂಶಗಳು

  • ಸಸ್ಯಗಳು ಅಚಲ ಅಥವಾ ಸ್ಥಿರ - ಅವು ಚಲಿಸುವುದಿಲ್ಲ. ಅವುಗಳು ಹೊಂದಿರುವ ಬಹುತೇಕ ಅಂಗಾಂಶಗಳು ಆಧಾರ ಒದಗಿಸುವ ಅಂಗಾಂಶಗಳಾಗಿವೆ.
  • ಪ್ರಾಣಿಗಳು ಆಹಾರ, ಸಂಗಾತಿ ಮತ್ತು ಆಶ್ರಯವನ್ನು ಹುಡುಕುತ್ತಾ ಎಲ್ಲಾ ಕಡೆ ಚಲಿಸುತ್ತವೆ.
  • ಇವು ಸಸ್ಯಗಳ ದೇಹಕ್ಕೆ ದೃಢತೆಯನ್ನು ನೀಡುತ್ತವೆ. ಇವುಗಳಲ್ಲಿ ಬಹುತೇಕ ಮೃತ ಅಂಗಾಂಶಗಳಾಗಿವೆ.
  • ಸಸ್ಯಗಳಿಗೆ ಹೋಲಿಸಿದರೆ ಅವು ಹೆಚ್ಚು ಶಕ್ತಿಯನ್ನು ಬಳಸುತ್ತವೆ. ಅವುಗಳು ಬಹುತೇಕ ಜೀವಂತ ಅಂಗಾಂಶಗಳನ್ನು ಹೊಂದಿವೆ.
  • ಏಕೆಂದರೆ ಜೀವಂತ ಜೀವಕೋಶಗಳಂತೆಯೇ ಮೃತಕೋಶಗಳೂ ಸಸ್ಯಗಳಿಗೆ ಸುಲಭವಾಗಿ ಯಾಂತ್ರಿಕ ದೃಢತೆಯನ್ನು ನೀಡಬಲ್ಲವು ಮತ್ತು ಇವುಗಳಿಗೆ ಕಡಿಮೆ ನಿರ್ವಹಣೆ ಸಾಕಾಗುತ್ತದೆ.
  • ಪ್ರಾಣಿಗಳು ಮತ್ತು ಸಸ್ಯಗಳ ನಡುವಿನ ಇನ್ನೊಂದು ವ್ಯತ್ಯಾಸವೆಂದರೆ ಅವುಗಳ ಬೆಳವಣಿಗೆಯ ರೀತಿ. ಸಸ್ಯಗಳಲ್ಲಿ ಬೆಳವಣಿಗೆಯು ಕೆಲವು ಭಾಗಗಳಿಗೆ ಸೀಮಿತವಾಗಿದೆ. ಅದೇ ಪ್ರಾಣಿಗಳಲ್ಲಿ ಹೀಗಿರುವುದಿಲ್ಲ.
  • ಸಸ್ಯಗಳಲ್ಲಿರುವ ಕೆಲವು ಅಂಗಾಂಶಗಳು ಜೀವಮಾನವಿಡೀ ವಿಭಜನೆ ಹೊಂದುತ್ತಿರುತ್ತವೆ. ಈ ಅಂಗಾಂಶಗಳು ಕೆಲವು ಭಾಗಗಳಲ್ಲಿ ಸಾಮಾನ್ಯವಾಗಿ ಕಂಡುಬರುತ್ತವೆ. ಈ ಅಂಗಾಂಶಗಳ ವಿಭಜನೆಯ ಸಾಮಥ್ರ್ಯವನ್ನು ಆಧರಿಸಿ ಸಸ್ಯ ಅಂಗಾಂಶಗಳನ್ನು ಬೆಳವಣಿಗೆ ಅಥವಾ ವರ್ಧನ ಅಂಗಾಂಶ (meristamatic tissue) ಮತ್ತು ಶಾಶ್ವತ ಅಂಗಾಂಶ (permanent tissue) ಎಂದು ವರ್ಗೀಕರಿಸಲಾಗಿದೆ.
  • ಪ್ರಾಣಿಗಳಲ್ಲಿ ಜೀವಕೋಶದ ಬೆಳವಣಿಗೆಯು ಬಹುತೇಕ ಏಕರೂಪವಾಗಿರುತ್ತದೆ. ಆದ್ದರಿಂದ ಪ್ರಾಣಿಗಳ ದೇಹದಲ್ಲಿ ಕೋಶ ವಿಭಜಿಸುವ ಭಾಗ ಮತ್ತು ವಿಭಜನೆಯಾಗದ ಭಾಗ ಎಂದು ಯಾವುದೇ ಗುರುತಿಸುವಿಕೆ ಕಂಡುಬರುವುದಿಲ್ಲ.

16 of 99

Plant and animal Tissues

17 of 99

  • ಎರಡು ಗಾಜಿನ ಜಾಡಿ (Jar) ಗಳನ್ನು ತೆಗೆದುಕೊಂಡು ನೀರನ್ನು ಭರ್ತಿ ಮಾಡಿ.

  • ಎರಡು ಈರುಳ್ಳಿ ಗಡ್ಡೆಗಳನ್ನು ತೆಗೆದುಕೊಂಡು ಚಿತ್ರದಲ್ಲಿ ತೋರಿಸಿರುವಂತೆ ಜಾಡಿಗಳಲ್ಲಿ ತಲಾ ಒಂದರಂತೆ ಇಡಿ.

  • ಎರಡೂ ಗಡ್ಡೆಗಳಲ್ಲಿನ ಬೇರುಗಳ ಬೆಳವಣಿಗೆಯನ್ನು ಕೆಲವು ದಿನಗಳವರೆಗೆ ಗಮನಿಸಿ.

  • 1, 2 ಮತ್ತು 3ನೇ ದಿನಗಳವರೆಗೆ ಬೇರುಗಳ ಉದ್ದವನ್ನು ಅಳೆಯಿರಿ.

ಚಟುವಟಿಕೆ .1.1

18 of 99

  • 4ನೇ ದಿನ ಎರಡನೇ ಜಾಡಿಯಲ್ಲಿರುವ ಈರುಳ್ಳಿ ಗಡ್ಡೆಯ ಬೇರುಗಳ ತುದಿಯನ್ನು ಸುಮಾರು 1 ಸೆಂ. ಮೀ. ನಷ್ಟು ಕತ್ತರಿಸಿ. ಇದಾದ ನಂತರ ಎರಡೂ ಜಾಡಿಗಳಲ್ಲಿನ ಬೇರುಗಳ ಬೆಳವಣಿಗೆಯನ್ನು ಗಮನಿಸಿ ಮತ್ತು ಮುಂದಿನ ಐದು ದಿನಗಳವರೆಗೆ ಅವುಗಳ ಉದ್ದವನ್ನು ಅಳೆಯಿರಿ. ನಿಮ್ಮ ಅವಲೋಕನವನ್ನು ಈ ಕೆಳಗಿನ ಮಾದರಿಯ ಕೋಷ್ಟಕದಲ್ಲಿ ದಾಖಲಿಸಿ.

ಉದ್ದ

1ನೇ ದಿನ

2ನೇ ದಿನ

3ನೇ ದಿನ

4ನೇ ದಿನ

5ನೇ ದಿನ

ಜಾಡಿ 1

ಜಾಡಿ 2

ಚಟುವಟಿಕೆ .1.1

19 of 99

ಮೇಲಿನ ಅವಲೋಕನಗಳಿಂದ ಈ ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ:

  1. ಎರಡು ಈರುಳ್ಳಿಗಳಲ್ಲಿ ಯಾವುದು ಉದ್ದವಾದ ಬೇರುಗಳನ್ನು ಹೊಂದಿದೆ? ಏಕೆ?

  • ಬೇರುಗಳ ತುದಿಯನ್ನು ನಾವು ತೆಗೆದು ಹಾಕಿದಾಗಲೂ ಅವುಗಳ ಬೆಳವಣಿಗೆ ಮುಂದುವರೆಯಿತೇ?

  • ಎರಡನೇ ಜಾಡಿಯಲ್ಲಿ ಬೇರುಗಳ ತುದಿಯನ್ನು ಕತ್ತರಿಸಿದ ನಂತರ ಅವುಗಳ ಬೆಳವಣಿಗೆ ನಿಂತು ಹೋದುದೇಕೆ?

20 of 99

ವರ್ಧನ ಅಂಗಾಂಶದ ವಿಧಗಳು :

  • ಸಸ್ಯಗಳ ಬೆಳವಣಿಗೆ ಕೆಲವು ನಿರ್ದಿಷ್ಟ ಭಾಗಗಳಲ್ಲಿ ಮಾತ್ರ ನಡೆಯುತ್ತದೆ. ಏಕೆಂದರೆ ವಿಭಜನೆ ಹೊಂದುವ ಅಂಗಾಂಶಗಳು, ಇವುಗಳನ್ನು ವರ್ಧನ ಅಂಗಾಂಶ (meristamatic tissue) ಎಂದು ಕರೆಯುತ್ತಾರೆ, ಕೇವಲ ಈ ಭಾಗಗಳಲ್ಲಿ ಮಾತ್ರ ಕಂಡುಬರುತ್ತವೆ.

  • ಅವುಗಳು ಕಂಡುಬರುವ ಭಾಗಗಳ ಆಧಾರದ ಮೇಲೆ ವರ್ಧನ ಅಂಗಾಂಶಗಳನ್ನು ತುದಿ ವರ್ಧನ ಅಂಗಾಂಶ (apical meristem) ಪಾಶ್ರ್ವ ವರ್ಧನ ಅಂಗಾಂಶ (Lateral meristem) ಮತ್ತು ಅಂತರಗೆಣ್ಣು ವರ್ಧನ ಅಂಗಾಂಶ (intercalary meristem) ಗಳೆಂದು ವರ್ಗೀಕರಿಸಲಾಗಿದೆ.

ಸಸ್ಯ ದೇಹದಲ್ಲಿ ವರ್ಧನ ಅಂಗಾಂಶದ ನೆಲೆಗಳು

21 of 99

  • ವರ್ಧನ ಅಂಗಾಂಶದಿಂದ ಉತ್ಪತ್ತಿಯಾಗುವ ಹೊಸ ಜೀವಕೋಶಗಳು ಪ್ರಾರಂಭದಲ್ಲಿ ವರ್ಧನ ಅಂಗಾಂಶದ ಜೀವಕೋಶಗಳಂತೆಯೇ ಇರುತ್ತವೆ.

  • ಆದರೆ ಅವು ಬೆಳೆದು ಪ್ರೌಢತೆಯನ್ನು ಗಳಿಸಿಕೊಂಡಂತೆಲ್ಲ, ಅವುಗಳ ಗುಣಲಕ್ಷಣಗಳು ನಿಧಾನವಾಗಿ ಬದಲಾವಣೆ ಹೊಂದಿ ಇತರ ಅಂಗಾಂಶಗಳ ಘಟಕಗಳಾಗಿ ಗುರುತಿಸಲ್ಪಡುತ್ತವೆ.

  • ತುದಿ ವರ್ಧನ ಅಂಗಾಂಶವು ಬೆಳೆಯುತ್ತಿರುವ ಕಾಂಡ ಮತ್ತು ಬೇರುಗಳ ತುದಿಗಳಲ್ಲಿ ಕಂಡು ಬರುತ್ತದೆ ಮತ್ತು ಕಾಂಡ ಹಾಗೂ ಬೇರುಗಳ ಉದ್ದವನ್ನು ಹೆಚ್ಚಿಸುತ್ತದೆ.

  • ಕಾಂಡ ಅಥವಾ ಬೇರುಗಳ ಸುತ್ತಳತೆಯು ಪಾಶ್ರ್ವ ವರ್ಧನ ಅಂಗಾಂಶ (Cambium) ದಿಂದಾಗಿ ಹೆಚ್ಚಳವಾಗುತ್ತದೆ.

22 of 99

  • ಅಂತರಗೆಣ್ಣು ವರ್ಧನ ಅಂಗಾಂಶವು ಎಲೆಗಳ ಬುಡಭಾಗ ಅಥವಾ ರೆಂಬೆಯ ಅಂತರಗೆಣ್ಣು (ಗೆಣ್ಣುಗಳ ಎರಡೂ ಭಾಗ)ಗಳಲ್ಲಿ ಕಂಡುಬರುತ್ತದೆ.

  • ಈ ಅಂಗಾಂಶವು ತುಂಬಾ ಕ್ರಿಯಾಶೀಲವಾಗಿರುವುದರಿಂದ ಇವುಗಳ ಜೀವಕೋಶಗಳು ಸಾಂದ್ರವಾದ ಕೋಶದ್ರವ್ಯವನ್ನು, ತೆಳುವಾದ ಕೋಶಭಿತ್ತಿಯನ್ನು ಮತ್ತು ದೊಡ್ಡದಾದ ನ್ಯೂಕ್ಲಿಯಸ್‍ನ್ನು ಹೊಂದಿವೆ.

  • ಇವುಗಳಲ್ಲಿ ರಸದಾನಿಗಳು ಕಂಡುಬರುವುದಿಲ್ಲ.

23 of 99

ಕಲಿಕಾ ಹಾಳೆಯ ಚಟುವಟಿಕೆ .1.2

ಚಟುವಟಿಕೆ: 1.2 : ಸಸ್ಯ ದೇಹದಲ್ಲಿನ ವರ್ಧನ ಅಂಗಾಂಶದ ನೆಲೆಗಳನ್ನು ಗುರುತಿಸಿ, ಅವುಗಳ ಕಾರ್ಯ ತಿಳಿಸು.

ಕಾಯ೯:

24 of 99

ಸಸ್ಯದ ಬೆಳವಣಿಗೆ:

Bean Growth - Time - Lapse

25 of 99

ಶಾಶ್ವತ ಅಂಗಾಂಶ (Permanent tissue)

,

  • ವರ್ಧನ ಅಂಗಾಂಶದಿಂದ ಉಂಟಾಗುವ ಜೀವಕೋಶಗಳಿಗೆ ಏನಾಗುತ್ತದೆ? ಅವು ಪ್ರೌಢತೆಯನ್ನು ಗಳಿಸಿಕೊಳ್ಳುತ್ತವೆ ಮತ್ತು ತಮ್ಮ ಕೋಶ ವಿಭಜನೆಯ ಸಾಮಥ್ರ್ಯವನ್ನು ಕಳೆದುಕೊಳ್ಳುತ್ತವೆ.

  • ಇದರ ಪರಿಣಾಮವಾಗಿ ಅವು ಶಾಶ್ವತ ಅಂಗಾಂಶಗಳಾಗಿ ರೂಪುಗೊಳ್ಳುತ್ತವೆ. ಈ ರೀತಿ ಶಾಶ್ವತವಾದ ರೂಪ, ಗಾತ್ರ ಮತ್ತು ನಿರ್ದಿಷ್ಟ ಕಾರ್ಯವನ್ನು ನಿರ್ವಹಿಸುವ ಸಾಮಥ್ರ್ಯ ಪಡೆದುಕೊಳ್ಳುವ ವಿಧಾನಕ್ಕೆ ವಿಭೇದೀಕರಣ (Differentation) ಎನ್ನುವರು. ವರ್ಧನ ಅಂಗಾಂಶದ ಜೀವಕೋಶಗಳು ವಿವಿಧ ಬಗೆಯ ಶಾಶ್ವತ ಅಂಗಾಂಶಗಳಾಗಲು ರೂಪಾಂತರಗೊಳ್ಳುತ್ತವೆ.

26 of 99

ಸೂಕ್ಷ್ಮದರ್ಶಕದಲ್ಲಿ ಸಸ್ಯದ ಕಾಂಡ

Sunflower stem under microscope

27 of 99

  • ಈಗ, ನೀವು ಮಾಡಿದ ಅವಲೋಕನಗಳಿಂದ ಈ ಕೆಳಗಿನ ಪ್ರಶ್ನೆಗಳಿಗೆ ಉತ್ತರ ನೀಡಿ.

  1. ಎಲ್ಲಾ ಜೀವಕೋಶಗಳು ಒಂದೇ ರೀತಿಯ ರಚನೆಯನ್ನು ಹೊಂದಿರುವವೆ?
  2. ಎಷ್ಟು ವಿಧದ ಜೀವಕೋಶಗಳನ್ನು ನೋಡಬಹುದು?
  3. ಇಷ್ಟು ವಿಧದ ಜೀವಕೋಶಗಳಿರಲು ಕಾರಣವೇನೆಂದು ನಾವು ಯೋಚಿಸಬಹುದೆ?

  • ನಾವು ಸಸ್ಯದ ಬೇರಿನ ತೆಳುವಾದ ಪದರಗಳನ್ನು ಕತ್ತರಿಸಿ ತೆಗೆಯಲೂ ಸಹ ಪ್ರಯತ್ನಿಸಬಹುದು.

  • ವಿವಿಧ ಸಸ್ಯಗಳ ಬೇರು ಮತ್ತು ಕಾಂಡಗಳ ತೆಳುವಾದ ಪದರಗಳನ್ನೂ ಕತ್ತರಿಸಿ ತೆಗೆಯಲು ನಾವು ಪ್ರಯತ್ನಿಸಬಹುದು.

28 of 99

ಚಟುವಟಿಕೆ

ಗಮನಿಸು: ನಿನ್ನ ಶಿಕ್ಷಕರ ಸಹಾಯದಿಂದ ಶಾಲಾ ಪ್ರಯೋಗಾಲಯದಲ್ಲಿನ ಸಂಯುಕ್ತ ಸೂಕ್ಮದಶ೯ಕದಲ್ಲಿ ಎಲೆಯ ಅಡ್ಡ ಸೀಳಿಕೆ ಮತ್ತು ಕಾಂಡದ ಸೀಳಿಕೆಯ ನೋಟ ನೋಡಿ ವಿವಿಧ ಅಂಗಾಂಶಗಳನ್ನು ಗುರುತಿಸಲು ಪ್ರಯತ್ನಿಸು.

29 of 99

ಸಸ್ಯ ಅಂಗಾಂಶಗಳು

ವರ್ಧನ ಅಂಗಾಂಶ

ತುದಿ ವರ್ಧನ ಅಂಗಾಂಶ

ಪಾಶ್ರ್ವ ವರ್ಧನ ಅಂಗಾಂಶ

ಅಂತರಗೆಣ್ಣು ವರ್ಧನ ಅಂಗಾಂಶ

ಶಾಶ್ವತ ಅಂಗಾಂಶ

ಸರಳ ಶಾಶ್ವತ ಅಂಗಾಂಶ

ಪೇರಂಕೈಮ

ಕ್ಲೋರಂಕೈಮ

ಏರಂಕೈಮ

ಕೋಲಂಕೈಮ

ಸ್ಕ್ಲೀರಂಕೈಮ

ಸಕೀರ್ಣ ಶಾಶ್ವತ ಅಂಗಾಂಶ

ಕ್ಸೈಲಂ

1.ಟ್ರೇಕಿಡ್

2.ನಾಳಗಳು

3. ಕ್ಸೈಲಂ ಪೇರಂಕೈಮ

ಫ್ಲೋಯಂ

1.ಜರಡಿ ತಟ್ಟೆ

2.ಜರಡಿ ನಾಳ

3.ಫ್ಲೋಯಂ ಪೇರಂಕೈಮ

4.ಸಂಗಾತಿ ಜೀವಕೋಶಗಳು

ಸಸ್ಯ ಅಂಗಾಂಶಗಳು

30 of 99

ಶಾಶ್ವತ ಅಂಗಾಂಶಗಳಲ್ಲಿ 2 ವಿಧ:

i. ಸರಳ ಶಾಶ್ವತ ಅಂಗಾಂಶ (simple permanent tissue)

ii. ಸಂಕೀರ್ಣ ಶಾಶ್ವತ ಅಂಗಾಂಶ (complex permanent tissue)

ನಿನಗಿದು ತಿಳಿದಿರಲಿ: ಶಾಶ್ವತ ಅಂಗಾಂಶ

ವಿಭಜನಾ ಸಾಮರ್ಥ್ಯವನ್ನು ಕಳೆದುಕೊಂಡ ವಧ೯ನ ಅಂಗಾಂಶದಿಂದ ಶಾಶ್ವತ ಅಂಗಾಂಶಗಳು

ರೂಪುಗೊಂಡಿವೆ ಅವುಗಳನ್ನು ಸರಳ ಮತ್ತು ಸಂಕೀರ್ಣ ಶಾಶ್ವತ ಅಂಗಾಂಶಗಳೆಂದು ವರ್ಗೀಕರಿಸಲಾಗಿದೆ.

31 of 99

i. ಸರಳ ಶಾಶ್ವತ ಅಂಗಾಂಶದಲ್ಲಿ 3 ವಿಧಗಳು:

32 of 99

1.ಪೇರಂಕೈಮ (Parenchyma)

  • ಪೇರಂಕೈಮ (Parenchyma)ಕೆಲವು ಪದರದಲ್ಲಿರುವ ಜೀವಕೋಶಗಳು ಮೂಲ ಜೋಡಣೆ ಅಂಗಾಂಶವನ್ನು ರೂಪಿಸುತ್ತವೆ. ಈ ಅಂಗಾಂಶವೇ ಪೇರಂಕೈಮ (parenchyma), ಒಂದು ವಿಧದ ಶಾಶ್ವತ ಅಂಗಾಂಶ.

33 of 99

a. ಕ್ಲೋರಂಕೈಮ (Chlorenchyma)

ಕ್ಲೋರೋಫಿಲ್

ಕೆಲವು ಸಂದರ್ಭಗಳಲ್ಲಿ ಪೇರಂಕೈಮ ಅಂಗಾಂಶವು ಕ್ಲೋರೋಫಿಲ್ ಅನ್ನು ಹೊಂದಿದ್ದು ದ್ಯುತಿ ಸಂಶ್ಲೇಷಣೆ ಕ್ರಿಯೆಯನ್ನು ನಡೆಸಿದರೆ, ಆಗ ಅದನ್ನು ಕ್ಲೋರಂಕೈಮ ಎಂದು ಕರೆಯುವರು.

34 of 99

b.ಏರಂಕೈಮ (aerenchyma)

  • ಜಲ ಸಸ್ಯಗಳ ಪೇರಂಕೈಮದಲ್ಲಿ ದೊಡ್ಡ ಗಾಳಿ ಚೀಲಗಳಿದ್ದು ಸಸ್ಯಗಳು ತೇಲಲು ಸಹಾಯಕವಾಗುವಂತೆ ಸಂಪ್ಲವನ ಶಕ್ತಿ (buoyancy) ಯನ್ನು ಕೊಡುತ್ತದೆ. ಈ ವಿಧದ ಪೇರಂಕೈಮವನ್ನು ಏರಂಕೈಮ ಎಂದು ಕರೆಯುತ್ತಾರೆ.

  • ಕಾಂಡ ಮತ್ತು ಬೇರುಗಳಲ್ಲಿರುವ ಪೇರಂಕೈಮ ಅಂಗಾಂಶವು ಪೋಷಕಾಂಶಗಳು ಮತ್ತು ನೀರನ್ನು ಸಹ ಸಂಗ್ರಹಿಸುತ್ತದೆ.

35 of 99

2. ಕೋಲಂಕೈಮ (collenchyma)

  • ಸಸ್ಯಗಳಲ್ಲಿ ನಮ್ಯತೆಗೆ ಕಾರಣವಾಗಿರುವ ಇನ್ನೊಂದು ಶಾಶ್ವತ ಅಂಗಾಂಶವೆಂದರೆ ಕೋಲಂಕೈಮ (collenchyma). ಇದು ಸಸ್ಯದ ವಿವಿಧ ಭಾಗಗಳು (ಎಲೆ, ಕಾಂಡ) ಮುರಿಯದಂತೆ ಸುಲಭ ಬಾಗುವಿಕೆಯನ್ನು ಸಾಧ್ಯವಾಗಿಸುತ್ತದೆ.

  • ಇದು ಸಸ್ಯಗಳಿಗೆ ಯಾಂತ್ರಿಕ ಆಧಾರವನ್ನೂ ಒದಗಿಸುತ್ತದೆ. ಎಲೆ ತೊಟ್ಟುಗಳಲ್ಲಿ ಎಪಿಡರ್ಮಿಸ್‍ನ ಕೆಳಗೆ ನಾವು ಈ ಅಂಗಾಂಶವನ್ನು ನೋಡಬಹುದು. ಈ ಅಂಗಾಂಶದ ಜೀವಕೋಶಗಳು ಜೀವಂತವಾಗಿದ್ದು, ಉದ್ದವಾಗಿರುತ್ತವೆ ಮತ್ತು ಜೀವಕೋಶಗಳು ಪರಸ್ಪರ ಸೇರುವ ಮೂಲೆಗಳಲ್ಲಿ ಅನಿಯಮಿತವಾಗಿ ದಪ್ಪವಾಗಿರುತ್ತದೆ. ಅಂತರಕೋಶೀಯ ಅವಕಾಶಗಳು ತುಂಬಾ ಕಡಿಮೆ ಸಂಖ್ಯೆಯಲ್ಲಿರುತ್ತವೆ.

ಅಡ್ಡಸೀಳಿಕೆಯ ಚಿತ್ರ

ಉದ್ದಸೀಳಿಕೆಯ ಚಿತ್ರ

36 of 99

3. ಸ್ಕ್ಲೀರಂಕೈಮ (Sclerenchyma)

  • ಇನ್ನೊಂದು ವಿಧದ ಶಾಶ್ವತ ಅಂಗಾಂಶವೆಂದರೆ ಸ್ಕ್ಲೀರಂಕೈಮ (sclerenchyma) ಇದು ಸಸ್ಯವನ್ನು ದೃಢ ಮತ್ತು ಗಡಸಾಗಿಸುತ್ತದೆ. ನಾವು ತೆಂಗಿನ ಸಿಪ್ಪೆಯನ್ನು ನೋಡಿದ್ದೇವೆ. ಇದು ಸ್ಕ್ಲೀರಂಕೈಮ ಅಂಗಾಂಶದಿಂದಾಗಿದೆ.

  • ಈ ಅಂಗಾಂಶವು ನಿರ್ಜೀವ ಜೀವಕೋಶಗಳಿಂದಾಗಿದೆ. ಈ ಜೀವಕೋಶಗಳು ಉದ್ದವಾಗಿ, ತೆಳುವಾಗಿದ್ದು ಕೋಶಭಿತ್ತಿಯು ಲಿಗ್ನಿನ್ ಎಂಬ ವಸ್ತುವಿನಿಂದಾಗಿ ಮಂದವಾಗಿದೆ (ಲಿಗ್ನಿನ್ ಎಂಬುದು ಒಂದು ಬಗೆಯ ರಾಸಾಯನಿಕ ವಸ್ತುವಾಗಿದ್ದು ಸಿಮೆಂಟ್ ರೀತಿ ವರ್ತಿಸಿ ಕೋಶಭಿತ್ತಿಯನ್ನು ಗಟ್ಟಿಯಾಗಿಸುತ್ತದೆ).
  • ಕೋಶಭಿತ್ತಿಯು ಎಷ್ಟು ದಪ್ಪವಾಗಿರುತ್ತದೆ ಎಂದರೆ ಜೀವಕೋಶದೊಳಗೆ ಕೋಶೀಯ ಅವಕಾಶಗಳಿರುವುದಿಲ್ಲ. ಈ ಅಂಗಾಂಶವು ಕಾಂಡದಲ್ಲಿ ನಾಳಕೂರ್ಚಗಳ (vascular bundles) ಸುತ್ತ, ಎಲೆಗಳ ನಾರುಗಳಲ್ಲಿ ಮತ್ತು ಬೀಜಗಳು ಹಾಗೂ ಕಾಯಿಗಳ ಗಟ್ಟಿಯಾದ ಕವಚಗಳಲ್ಲಿ ಕಂಡುಬರುತ್ತದೆ. ಈ ಅಂಗಾಂಶವು ಸಸ್ಯಭಾಗಗಳಿಗೆ ದೃಢತೆಯನ್ನು ಕೊಡುತ್ತದೆ.

37 of 99

Simple Permanent Tissue

38 of 99

ಚಟುವಟಿಕೆ:

  • ಆಗತಾನೆ ಕಿತ್ತಿರುವ ರಿಯೊ ಗಿಡದ ಎಲೆಯನ್ನು ತೆಗೆದುಕೊಳ್ಳಿ. ಒತ್ತಡವನ್ನು ಉಪಯೋಗಿಸಿ ಎಳೆದು ತುಂಡರಿಸಿ.

  • ಇದನ್ನು ಮುರಿಯುವಾಗ, ಮುರಿದ ಭಾಗದಿಂದ ಸ್ವಲ್ಪ ತೊಗಟೆ ಅಥವಾ ಸಿಪ್ಪೆ ಹೊರಬರುವಂತೆ ಎಲೆಯನ್ನು ಸೌಮ್ಯವಾಗಿ ಎಳೆದು ಹಿಡಿದುಕೊಳ್ಳಿ.

  • ಸುಲಿದ ಈ ತೊಗಟೆ ಭಾಗವನ್ನು ತೆಗೆದು ನೀರು ತುಂಬಿದ ಒಂದು ಪೆಟ್ರಿ ತಟ್ಟೆಯಲ್ಲಿಡಿ. ಇದಕ್ಕೆ ಕೆಲವು ಹನಿ ಸ್ಯಾಫ್ರನಿನ್ ಬಣ್ಣವನ್ನು ಸೇರಿಸಿ.

  • ಕೆಲವು ನಿಮಿಷಗಳವರೆಗೆ ಕಾಯಿರಿ ಮತ್ತು ಇದನ್ನು ಗಾಜಿನ ಸ್ಲೈಡ್ ಮೇಲೆ ವರ್ಗಾಯಿಸಿ. ಸ್ಲೈಡ್‍ನ ಮೇಲೆ ಕವರ್‍ಸ್ಲಿಪ್‍ನ್ನು ನಿಧಾನವಾಗಿ ಇಳಿಸಿ. ಸೂಕ್ಷ್ಮದರ್ಶಕದ ಅಡಿಯಲ್ಲಿ ಗಮನಿಸಿ.

39 of 99

ಕಾವಲು ಜೀವಕೋಶಗಳು ಮತ್ತು ಎಪಿಡರ್ಮಲ್ ಜೀವಕೋಶಗಳು : (a) ಪಾಶ್ರ್ವ ನೋಟ (b) ಮೇಲ್ಮೈ ನೋಟ

40 of 99

ಎಪಿಡರ್ಮಲ್ ಜೀವಕೋಶಗಳು:

  • ನೀವು ಗಮನಿಸಿದ ಅತ್ಯಂತ ಹೊರಪದರದ ಜೀವಕೋಶಗಳನ್ನು ಎಪಿಡರ್ಮಿಸ್ ಎನ್ನುವರು. ಎಪಿಡರ್ಮಿಸ್ ಸಾಮಾನ್ಯವಾಗಿ ಒಂದೇ ಪದರದ ಜೀವಕೋಶಗಳಿಂದ ಮಾಡಲ್ಪಟ್ಟಿದೆ.

  • ಅತಿ ಶುಷ್ಕ ಆವಾಸಗಳಲ್ಲಿ ಕಂಡುಬರುವ ಸಸ್ಯಗಳಲ್ಲಿ ನೀರಿನ ನಷ್ಟವನ್ನು ತಡೆಯಲು ಎಪಿಡರ್ಮಿಸ್ ದಪ್ಪವಾಗಿರಬಹುದು.

  • ಒಂದು ಸಸ್ಯದ ಸಂಪೂರ್ಣ ಹೊರಮೈ ಎಪಿಡರ್ಮಿಸ್ ಎಂಬ ಈ ಹೊರ ಹೊದಿಕೆಯನ್ನು ಹೊಂದಿದೆ. ಇದು ಸಸ್ಯದ ಎಲ್ಲಾ ಭಾಗಗಳನ್ನು ರಕ್ಷಿಸುತ್ತದೆ.

  • ಸಸ್ಯದ ಹೊರಭಾಗದಲ್ಲಿ ಕಂಡುಬರುವ ಎಪಿಡರ್ಮಲ್ ಜೀವಕೋಶಗಳು ನೀರನ್ನು ಪ್ರತಿರೋಧಿಸುವ ಮೇಣದಂತಹ ಪದಾರ್ಥವನ್ನು ತಮ್ಮ ಹೊರಪದರದಲ್ಲಿ ಸ್ರವಿಸುತ್ತವೆ.

  • ಇದು ನೀರಿನ ನಷ್ಟದ ವಿರುದ್ಧ, ಯಾಂತ್ರಿಕ ಆಘಾತಗಳಿಂದ ಮತ್ತು ಪರೋಪಜೀವಿ ಶಿಲೀಂಧ್ರಗಳ ಆಕ್ರಮಣದಿಂದ ರಕ್ಷಣೆಯನ್ನು ಒದಗಿಸುತ್ತದೆ.

41 of 99

  • ಇದು ರಕ್ಷಣಾತ್ಮಕ ಕಾರ್ಯವನ್ನು ನಿರ್ವಹಿಸಬೇಕಿರುವುದರಿಂದ ಎಪಿಡರ್ಮಲ್ ಅಂಗಾಂಶವು ಯಾವುದೇ ಅಂತರಕೋಶೀಯ ಅವಕಾಶಗಳಿಲ್ಲದ ಉದ್ದನೆಯ ಪದರವನ್ನು ಸಸ್ಯದ ಹೊರಮೈನಲ್ಲಿ ಉಂಟುಮಾಡುತ್ತದೆ.

  • ಬಹುತೇಕ ಎಪಿಡರ್ಮಲ್ ಜೀವಕೋಶಗಳು ಸಾಪೇಕ್ಷವಾಗಿ ಚಪ್ಪಟೆಯಾಗಿವೆ. ಆದರೂ ಅವುಗಳ ಹೊರಗಿನ ಮತ್ತು ಪಾಶ್ರ್ವ ಭಿತ್ತಿಗಳು ಒಳಗಿನ ಭಿತ್ತಿಗಿಂತ ದಪ್ಪನಾಗಿವೆ.

42 of 99

  • ಎಲೆಗಳ ಎಪಿಡರ್ಮಿಸ್‍ನ ಅಲ್ಲಲ್ಲಿ ಸಣ್ಣ ರಂಧ್ರಗಳನ್ನು ನಾವು ಗಮನಿಸಬಹುದು. ಈ ರಂಧ್ರಗಳನ್ನು ಪತ್ರರಂಧ್ರಗಳು (stomata) ಎನ್ನುವರು. ಪತ್ರರಂಧ್ರಗಳು ಮೂತ್ರಪಿಂಡದ ಆಕಾರದ ಎರಡು ಜೀವಕೋಶಗಳಿಂದ ಆವೃತವಾಗಿವೆ.

  • ಇವುಗಳನ್ನು ಕಾವಲು ಜೀವಕೋಶಗಳು (guard cells ) ಎನ್ನುವರು. ವಾತಾವರಣದಿಂದ ಅನಿಲಗಳ ವಿನಿಮಯ ಪ್ರಕ್ರಿಯೆಗೆ ಪತ್ರರಂಧ್ರಗಳ ಅಗತ್ಯವಿದೆ. ಬಾಷ್ಪ ವಿಸರ್ಜನೆ (transpiration) (ನೀರಾವಿಯ ರೂಪದಲ್ಲಿ ಸಸ್ಯದೇಹದಿಂದ ನೀರಿನ ನಷ್ಟವಾಗುವಿಕೆ) ಕೂಡಾ ಪತ್ರರಂಧ್ರಗಳ ಮೂಲಕವೇ ಜರುಗುತ್ತದೆ.

  • ನೀರನ್ನು ಹೀರಿಕೊಳ್ಳುವ ಕಾರ್ಯವೇ ಪ್ರಧಾನವಾಗಿರುವ ಬೇರಿನ ಎಪಿಡರ್ಮಲ್ ಜೀವಕೋಶಗಳು ಸಾಮಾನ್ಯವಾಗಿ ಉದ್ದನೆಯ ಕೂದಲಿನಂತಹ ರಚನೆಗಳನ್ನು ಹೊಂದಿರುತ್ತವೆ. ಇವು ನೀರನ್ನು ಹೀರುವ ಮೇಲ್ಮೈ ಪ್ರದೇಶವನ್ನು ಬಹಳಷ್ಟು ಹೆಚ್ಚಿಸುತ್ತವೆ.

43 of 99

(a) ತೆರೆದ ಮತ್ತು (b) ಮುಚ್ಚಿದ ಪತ್ರರಂಧ್ರ

ಪತ್ರರಂಧ್ರಗಳು (stomata):

44 of 99

ಕೆಲವು ಮರುಭೂಮಿ ಸಸ್ಯಗಳಲ್ಲಿ ಎಪಿಡರ್ಮಿಸ್‍ನ ಹೊರಪದರವು ಕ್ಯೂಟಿನ್ (ನೀರನ್ನು ಪ್ರತಿರೋದಿಸುವ ಗುಣವುಳ್ಳ ರಾಸಾಯನಿಕ ವಸ್ತು) ನಿಂದಾದ ದಪ್ಪ ಮೇಣದಂತಹ ಪದರವನ್ನು ಹೊಂದಿದೆ. ನಾವು ಇದಕ್ಕೆ ಒಂದು ಕಾರಣವನ್ನು ಯೋಚಿಸಬಹುದೆ?

45 of 99

ಮರದ ಕೊಂಬೆಯೊಂದರ ಹೊರಪದರವು ಎಳೆಯ ಕಾಂಡದ ಹೊರ ಪದರಕ್ಕಿಂತ ಭಿನ್ನವಾಗಿದೆಯೇ?

ಆಲೋಚಿಸಿ

46 of 99

ರಕ್ಷಣಾ ಅಂಗಾಂಶ

  • ಸಸ್ಯಗಳು ಬೆಳೆದು ಪ್ರೌಢವಾಗುತ್ತಿದ್ದಂತೆಯೇ ಹೊರಗಿನ ರಕ್ಷಣಾತ್ಮಕ ಅಂಗಾಂಶವು ಕೆಲವು ಬದಲಾವಣೆಗಳಿಗೆ ಒಳಪಡುತ್ತದೆ. ದ್ವಿತೀಯಕ ವರ್ಧನ ಅಂಗಾಂಶದ ಒಂದು ಪಟ್ಟಿಯು ಕಾಂಡದ ಎಪಿಡರ್ಮಿಸ್ ಅಂಗಾಂಶವನ್ನು ಬದಲಿಸುತ್ತದೆ.

  • ಸಸ್ಯದ ಹೊರಭಾಗದ ಜೀವಕೋಶಗಳು ಈ ಪದರದಿಂದ ಉಂಟಾಗುತ್ತವೆ. ಇದು ಹಲವಾರು ಪದರಗಳುಳ್ಳ ದಪ್ಪವಾದ ಮರದ ತೊಗಟೆಯನ್ನು ಉಂಟುಮಾಡುತ್ತದೆ. ತೊಗಟೆಯ ಜೀವಕೋಶಗಳು ನಿರ್ಜೀವವಾಗಿದ್ದು, ಯಾವುದೇ ಅಂತರಕೋಶೀಯ ಅವಕಾಶಗಳಿಲ್ಲದಂತೆ ಒತ್ತಾಗಿ ಜೋಡಣೆಗೊಂಡಿರುತ್ತವೆ.
  • ತೊಗಟೆಯ ಪದರಗಳಲ್ಲಿ ಸೂಬರಿನ್ (suberin) ಎಂಬ ರಾಸಾಯನಿಕ ಕೂಡಾ ಇದ್ದು, ಇದು ಕಾಂಡದೊಳಗೆ ಗಾಳಿ ಮತ್ತು ನೀರು ಪ್ರವೇಶಿಸದಂತೆ ತಡೆಯುತ್ತದೆ

47 of 99

ಎಪಿಡರ್ಮಲ್ ಜೀವಕೋಶಗಳು:

Epidermal Tissue

48 of 99

ii.ಸಂಕೀರ್ಣ ಶಾಶ್ವತ ಅಂಗಾಂಶ

  • ಶಾಶ್ವತ ಅಂಗಾಂಶದ ಇನ್ನೊಂದು ವಿಧವಿದೆ ಅದೇ ಸಂಕೀರ್ಣ ಶಾಶ್ವತ ಅಂಗಾಂಶ. (complex permanent tissue) ಸಂಕೀರ್ಣ ಶಾಶ್ವತ ಅಂಗಾಂಶಗಳು ಒಂದಕ್ಕಿಂತ ಹೆಚ್ಚು ವಿಧದ ಜೀವಕೋಶಗಳಿಂದಾಗಿವೆ.

  • ಈ ಎಲ್ಲಾ ಜೀವಕೋಶಗಳು ಸಮನ್ವಯ ಸಾಧಿಸಿ ಒಂದು ಸಾಮಾನ್ಯ ಕಾರ್ಯವನ್ನು ನಿರ್ವಹಿಸುತ್ತವೆ. ಕ್ಸೈಲಂ ಮತ್ತು ಫ್ಲೋಯಂಗಳು ಅಂತಹ ಸಂಕೀರ್ಣ ಅಂಗಾಂಶಗಳಿಗೆ ಉದಾಹರಣೆಗಳು.

  • ಅವೆರಡೂ ವಾಹಕ ಅಂಗಾಂಶಗಳು ಮತ್ತು ಒಟ್ಟಾಗಿ ನಾಳಕೂರ್ಚ (vascular bundle) ವನ್ನು ನಿರ್ಮಿಸುತ್ತವೆ. ವಾಹಕ ಅಂಗಾಂಶಗಳು ಅಥವಾ ನಾಳಕೂರ್ಚಗಳು ಮೇಲ್ಮಟ್ಟದ ಸಸ್ಯಗಳ ವಿಶಿಷ್ಟ ಲಕ್ಷಣವಾಗಿದ್ದು ಭೂ ಮಂಡಲದಲ್ಲಿ ಅವುಗಳು ಬದುಕುಳಿಯಲು ಸಾಧ್ಯವಾಗುವಂತೆ

ಮಾಡಿವೆ.

49 of 99

  • ಕ್ಸೈಲಂ ಅಂಗಾಂಶವು ಟ್ರೇಕಿಡ್‍ಗಳು,ನಾಳಗಳು, ಕ್ಸೈಲಂ ಪೇರಂಕೈಮ ಮತ್ತು ಕ್ಸೈಲಂನಾರುಗಳನ್ನು ಹೊಂದಿವೆ. ಕೋಶಗಳು ದಪ್ಪವಾದ ಕೋಶಭಿತ್ತಿಯನ್ನು ಹೊಂದಿದ್ದು ಬಹುತೇಕ ನಿರ್ಜೀವ ಜೀವಕೋಶಗಳಾಗಿವೆ.

  • ಟ್ರೇಕಿಡ್‍ಗಳು ಮತ್ತು ನಾಳಗಳು ಕೊಳವೆಯಾಕಾರದ ರಚನೆ ಹೊಂದಿವೆ. ಇದು ನೀರು ಮತ್ತು ಲವಣಗಳನ್ನು ಮೇಲ್ಮುಖವಾಗಿ ಸಾಗಿಸಲು ಸಹಾಯಕವಾಗಿದೆ.

  • ಕ್ಸ್ಯೆಲಂ ಪೇರಂಕೈಮ ಆಹಾರ ಸಂಗ್ರಹಿಸುತ್ತದೆ ಮತ್ತು ನೀರಿನ ಪಾಶ್ರ್ವಹರಿಯುವಿಕೆಗೆ ಸಹಾಯಕವಾಗಿದೆ. ಕ್ಸೈಲಂ ನಾರು ಪ್ರಧಾನವಾಗಿ ಸಸ್ಯ ದೇಹಕ್ಕೆ ಆಧಾರ ಒದಗಿಸುವ ಕಾರ್ಯ ನಿರ್ವಹಿಸುತ್ತದೆ.

1. ಕ್ಸೈಲಂ ಅಂಗಾಂಶ:

50 of 99

  • ಫ್ಲೋಯಂ ನಾಲ್ಕು ವಿಧದ ಘಟಕಗಳಿಂದ ಉಂಟಾಗಿದೆ. ಜರಡಿನಾಳಗಳು, ಸಂಗಾತಿ ಕೋಶಗಳು, ಫ್ಲೋಯಂ ನಾರುಗಳು, ಫ್ಲೋಯಂ ಪೇರಂಕೈಮ

  • ರಂಧ್ರಗಳುಳ್ಳ ಭಿತ್ತಿಯನ್ನು ಹೊಂದಿವೆ. ಫ್ಲೋಯಂ, ಕ್ಸೈಲಂಗಿಂತ ಭಿನ್ನವಾಗಿದ್ದು ಅದರಲ್ಲಿ ವಸ್ತುಗಳು ಎರಡೂ ದಿಕ್ಕಿನಲ್ಲಿ ಚಲಿಸುತ್ತವೆ. ಫ್ಲೋಯಂ ಎಲೆಗಳಿಂದ ಆಹಾರವನ್ನು ಸಸ್ಯದ ವಿವಿಧ ಭಾಗಗಳಿಗೆ ಸಾಗಿಸುತ್ತದೆ.

  • ಫ್ಲೋಯಂ ನಾರುಗಳನ್ನು ಹೊರತುಪಡಿಸಿ ಉಳಿದೆಲ್ಲಾ ಫ್ಲೋಯಂ ಜೀವಕೋಶಗಳು ಜೀವಂತ ಕೋಶಗಳಾಗಿವೆ.

2. ಫ್ಲೋಯಂ ಅಂಗಾಂಶ:

51 of 99

Transportation in Plants

52 of 99

Plant tissues

53 of 99

ಚಟುವಟಿಕೆ .1.3

ಚಟುವಟಿಕೆ: 1.3 : ಇಲ್ಲಿ ಕೊಟ್ಟಿರುವ ಸಸ್ಯ ಅಂಗಾಂಶದ ನಕ್ಷಾ ಹರಿವನ್ನು ಗಮನಿಸಿ, ಪೂರ್ಣಗೊಳಿಸು.

54 of 99

ಕಲಿಕಾ ಹಾಳೆಯ ಚಟುವಟಿಕೆ 1.4.1

ಈ ಕೆಳಗಿನ ಅಂಗಾಂಶಗಳ ಚಿತ್ರಗಳನ್ನ ಗಮನಿಸಿ ಅವುಗಳನ್ನು ಹೆಸರಿಸಿ, ಕಾರ್ಯವನ್ನು ಬರೆದು ಕೋಷ್ಟಕವನ್ನು ಪೂರ್ಣಗೊಳಿಸು.

ಕ್ರ.ಸಂ

ಅಂಗಾಂಶ

ಹೆಸರು

ಕಾಯ೯

1

2

3

55 of 99

ಚಟುವಟಿಕೆ .1.4.2

ವಿವಿಧ ಬಗೆಯ ಸಸ್ಯ ಅಂಗಾಂಶಗಳು ಆವರಿಸಿರುವ ಭಾಗಗಳಿಗನುಗುಣವಾಗಿ ಈ ಕೆಳಗಿನ ಕೋಷ್ಟಕ ಪೂರ್ಣಗೊಳಿಸು.

ಕ್ರ.ಸಂ

ಅಂಗಾಂಶದ ವಿಧ

ಕಂಡುಬರುವ ಸ್ಥಳ

1

ವಧ೯ನ ಅಂಗಾಂಶ

2

ಸಸ್ಯದ ಎಲ್ಲಾ ಭಾಗಗಳಲ್ಲಿ

3

ಕೋಲೆಂಕೈಮ

4

ಸಸ್ಯದ ಗಟ್ಟಿ ಭಾಗಗಳಲ್ಲಿ

5

ಪ್ಲೋಯಂ

6

ಸಸ್ಯದ ಹೊರಪದರ

56 of 99

ಕಲಿಕಾ ಫಲ -2

ಪ್ರಾಣಿ ಅಂಗಾಂಶಗಳು ಮತ್ತು ಅದರ ವಿಧಗಳನ್ನು ಗುರುತಿಸಿ ಅರ್ಥೈಸಿಕೊಳ್ಳುವೆ.

ಅಂಗಾಂಶಗಳು

57 of 99

  • ನಾವು ಯಾವಾಗ ಉಸಿರಾಡುತ್ತೇವೆಯೋ ಆಗ ನಿಜವಾಗಿ ನಾವು ನಮ್ಮ ಎದೆಯ ಚಲನೆಯನ್ನು ಅನುಭವಿಸುತ್ತೇವೆ. ದೇಹದ ಈ ಭಾಗಗಳು ಹೇಗೆ ಚಲಿಸುತ್ತವೆ?

  • ಇದಕ್ಕಾಗಿ ನಾವು ಸ್ನಾಯು ತಂತುಗಳೆಂಬ ವಿಶೇಷ ಜೀವಕೋಶಗಳನ್ನು ಹೊಂದಿದ್ದೇವೆ. ಈ ಜೀವಕೋಶಗಳ ಸಂಕುಚನ ಮತ್ತು ವಿಕಸನಗಳಿಂದ ಚಲನೆ ಉಂಟಾಗುತ್ತದೆ.

  • ಉಸಿರಾಡುವಾಗ ನಾವು ಆಕ್ಸಿಜನ್ ಅನಿಲವನ್ನು ಒಳಗೆ ತೆಗೆದುಕೊಳ್ಳುತ್ತೇವೆ. ಈ ಆಕ್ಸಿಜನ್ ಎಲ್ಲಿಗೆ ಹೋಗುತ್ತದೆ? ಇದು ಶ್ವಾಸಕೋಶಗಳಲ್ಲಿ ಹೀರಲ್ಪಟ್ಟು ನಂತರ ರಕ್ತದ ಮೂಲಕ ದೇಹದ ಎಲ್ಲಾ ಜೀವಕೋಶಗಳಿಗೆ ಸಾಗಿಸಲ್ಪಡುತ್ತದೆ.

ಪ್ರಾಣಿ ಅಂಗಾಂಶಗಳು

58 of 99

  • ಜೀವಕೋಶಗಳಿಗೆ ಆಕ್ಸಿಜನ್ ಏಕೆ ಅಗತ್ಯ? ನಾವು ಈ ಮೊದಲು ಅಧ್ಯಯನ ಮಾಡಿದ ಮೈಟೋಕಾಂಡ್ರಿಯದ ಕಾರ್ಯವು ಈ ಪ್ರಶ್ನೆಗೆ ಉತ್ತರದ ಸುಳಿವನ್ನು ನೀಡುತ್ತದೆ.

  • ರಕ್ತವು ಹರಿಯುತ್ತದೆ ಮತ್ತು ಹಲವು ವಸ್ತುಗಳನ್ನು ದೇಹದ ಒಂದು ಭಾಗದಿಂದ ಇನ್ನೊಂದು ಭಾಗಕ್ಕೆ ಒಯ್ಯುತ್ತದೆ. ಉದಾಹರಣೆಗೆ, ಇದು ಆಕ್ಸಿಜನ್ ಮತ್ತು ಆಹಾರವನ್ನು ಎಲ್ಲಾ ಜೀವಕೋಶಗಳಿಗೆ ಒಯ್ಯುತ್ತದೆ.

  • ಇದು ದೇಹದ ಎಲ್ಲಾ ಭಾಗಗಳಿಂದ ತ್ಯಾಜ್ಯ ಪದಾರ್ಥಗಳನ್ನು ಸಂಗ್ರಹಿಸಿ ಅವುಗಳನ್ನು ವಿಸರ್ಜಿಸುವ ಸಲುವಾಗಿ ಪಿತ್ತಕೋಶ ಮತ್ತು ಮೂತ್ರಪಿಂಡಗಳಿಗೆ ಸಾಗಿಸುತ್ತದೆ.

59 of 99

ಪ್ರಾಣಿ ಅಂಗಾಂಶಗಳು:

  • ರಕ್ತ ಮತ್ತು ಸ್ನಾಯುಗಳೆರಡೂ ನಮ್ಮ ದೇಹದಲ್ಲಿ ಕಂಡುಬರುವ ಅಂಗಾಂಶಗಳಿಗೆ ಉದಾಹರಣೆಗಳು.

  • ಅವುಗಳು ನಿರ್ವಹಿಸುವ ಕಾರ್ಯಗಳ ಆಧಾರದ ಮೇಲೆ ವಿವಿಧ ಬಗೆಯ ಪ್ರಾಣಿ ಅಂಗಾಂಶಗಳ ಬಗ್ಗೆ ನಾವು ಯೋಚಿಸಬಹುದು.

  • ಅವುಗಳೆಂದರೆ, ಅನುಲೇಪಕ ಅಂಗಾಂಶ (Epithelial tissue) ಸಂಯೋಜಕ ಅಂಗಾಂಶ (Connective tissue) ಸ್ನಾಯು ಅಂಗಾಂಶ (Muscular tissue) ಮತ್ತು ನರಅಂಗಾಂಶ (Nervous tissue)

  • ರಕ್ತವು ಒಂದು ವಿಧದ ಸಂಯೋಜಕ ಅಂಗಾಂಶ ಮತ್ತು ಸ್ನಾಯು, ಸ್ನಾಯು ಅಂಗಾಂಶವನ್ನು ಉಂಟು ಮಾಡುತ್ತದೆ.

60 of 99

ಅನುಲೇಪಕ ಅಂಗಾಂಶ:

  • ಪ್ರಾಣಿಗಳ ದೇಹವನ್ನು ಆವರಿಸಿರುವ ಅಥವಾ ರಕ್ಷಣಾತ್ಮಕ ಅಂಗಾಂಶಗಳೇ ಅನುಲೇಪಕ ಅಂಗಾಂಶಗಳು. (epithelial tissue) ಅನುಲೇಪಕವು ದೇಹದೊಳಗಿನ ಬಹುತೇಕ ಅಂಗಗಳು ಮತ್ತು ಕುಹರಗಳನ್ನು ಹೊದಿಕೆಯಾಗಿ ಆವರಿಸಿದೆ. ಇದು ದೇಹದ ವಿವಿಧ ಅಂಗವ್ಯೂಹಗಳನ್ನು ಪ್ರತ್ಯೇಕವಾಗಿಡಲು ತಡೆಗೋಡೆಗಳನ್ನೂ ನಿರ್ಮಿಸುತ್ತದೆ.

  • ಚರ್ಮ, ಬಾಯಿಯ ಪದರ, ರಕ್ತನಾಳಗಳನ್ನು ಆವರಿಸಿದ ಪದರ, ಶ್ವಾಸಕೋಶದ ಗಾಳಿಗೂಡುಗಳು ಮತ್ತು ಮೂತ್ರಪಿಂಡದ ನಾಳಗಳೆಲ್ಲವೂ ಅನುಲೇಪಕ ಅಂಗಾಂಶದಿಂದ ಮಾಡಲ್ಪಟ್ಟಿವೆ. ಅನುಲೇಪಕ ಅಂಗಾಂಶದ ಜೀವಕೋಶಗಳು ಒತ್ತಾಗಿ ಜೋಡಣೆಗೊಂಡು, ನಿರಂತರವಾದ ಪದರವನ್ನು ನಿರ್ಮಿಸಿವೆ. ಅವುಗಳು ತಮ್ಮ ನಡುವೆ ಕೇವಲ ಅಲ್ಪ ಪ್ರಮಾಣದ ಬಂಧಕ ವಸ್ತುವನ್ನು ಹೊಂದಿದ್ದು ಅಂತರಕೋಶೀಯ ಅವಕಾಶಗಳು ಬಹುತೇಕ

ಇರುವುದಿಲ್ಲ.

61 of 99

ಅನುಲೇಪಕ ಅಂಗಾಂಶ:

  • ಯಾವುದೇ ವಸ್ತು ಶರೀರವನ್ನು ಪ್ರವೇಶಿಸಲಿ ಅಥವಾ ಶರೀರದಿಂದ ಹೊರಹೋಗಲಿ, ನಿಸ್ಸಂಶಯವಾಗಿ, ಅವು ಒಂದಾದರೂ ಅನುಲೇಪಕ ಅಂಗಾಂಶದ ಪದರವನ್ನು ಹಾದುಹೋಗಲೇಬೇಕಾಗುತ್ತದೆ.

  • ಇದರ ಪರಿಣಾಮವಾಗಿ ಪ್ರವೇಶ್ಯತೆಯ ಗುಣವಿರುವ ವಿವಿಧ ಅನುಲೇಪಕ ಅಂಗಾಂಶಗಳು ಶರೀರ ಮತ್ತು ಹೊರಗಿನ ಪರಿಸರಗಳ ನಡುವೆ ಹಾಗೂ ದೇಹದ ವಿವಿಧ ಭಾಗಗಳ ನಡುವೆ ವಸ್ತುಗಳ ವಿನಿಮಯವನ್ನು ನಿಯಂತ್ರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ.
  • ಯಾವುದೇ ವಿಧದ ಅನುಲೇಪಕ ಅಂಗಾಂಶವಾದರೂ ಯಾವಾಗಲೂ ಒಂದು ನಾರಿನಂತಹ ತಳ ಪೊರೆಯಿಂದ (basement membrane) ಕೆಳಗಿರುವ ಅಂಗಾಂಶದಿಂದ ಪ್ರತ್ಯೇಕಿಸಲ್ಪಟ್ಟಿರುತ್ತದೆ

62 of 99

ವಿವಿಧ ಅನುಲೇಪಕ ಅಂಗಾಂಶಗಳು:

  • ಸರಳ ಚಪ್ಪಟೆ ಅನುಲೇಪಕ ಅಂಗಾಂಶ (simple suqamous epithelium)

  • ಘನಾಕೃತಿ ಅನುಲೆಪಕ ಅಂಗಾಂಶ (Solid shaped epithelium)

  • ಕಶಾಂಗ ಸಹಿತ ಸ್ತಂಭಾಕೃತಿ ಅನುಲೇಪಕ ಅಂಗಾಂಶ (ciliated columnar epithelium)

  • ಸ್ತರೀಕೃತ ಚಪ್ಪಟೆ ಅನುಲೇಪಕ ಅಂಗಾಂಶ (stratified squamous epithelium)

63 of 99

  • ಅರೆಪಾರಕ ಪೊರೆಯ ಮೂಲಕ ವಸ್ತಗಳ ಸಾಗಾಣಿಕೆ ನಡೆಯುವ ಲೋಮನಾಳಗಳಲ್ಲಿ ಅಥವಾ ಶ್ವಾಸಕೋಶದ ಆಲ್ವಿಯೋಲೈಗಳಲ್ಲಿ ಸರಳ, ಚಪ್ಪಟೆಯಾದ ಅನುಲೇಪಕ ಅಂಗಾಂಶ ಕಂಡು ಬರುತ್ತದೆ. ಇದನ್ನು ಸರಳ ಚಪ್ಪಟೆ ಅನುಲೇಪಕ ಅಂಗಾಂಶ (simple suqamous epithelium) ಎಂದು ಕರೆಯುವರು.

  • ಸರಳ ಚಪ್ಪಟೆ ಅನುಲೇಪಕ ಅಂಗಾಂಶದ ಜೀವಕೋಶಗಳು ತುಂಬಾ ತೆಳುವಾಗಿದ್ದು ಮತ್ತು ಚಪ್ಪಟೆಯಾಗಿದ್ದು ಸೂಕ್ಷ್ಮ ಪದರವನ್ನು ಉಂಟು ಮಾಡುತ್ತವೆ.

  • ಅನ್ನನಾಳ ಮತ್ತು ಬಾಯಿಯ ಅಂಗಳವೂ ಕೂಡಾ ಚಪ್ಪಟೆ ಅನುಲೇಪಕ ಅಂಗಾಂಶದಿಂದ ಆವೃತವಾಗಿವೆ. ದೇಹವನ್ನು ರಕ್ಷಿಸುವ ಚರ್ಮವೂ ಕೂಡಾ ಚಪ್ಪಟೆ ಅನುಲೇಪಕ ಅಂಗಾಂಶದಿಂದಾಗಿದೆ.

a. ಸರಳ ಚಪ್ಪಟೆ ಅನುಲೇಪಕ

64 of 99

ಚರ್ಮದಲ್ಲಿನ ಅನುಲೇಪಕ ಅಂಗಾಂಶದ ಜೀವಕೋಶಗಳು ಅನೇಕ ಪದರಗಳಾಗಿ

ಜೋಡಣೆಗೊಂಡಿದ್ದು ಚರ್ಮದ ಸವೆತವನ್ನು ತಡೆಗಟ್ಟುತ್ತವೆ. ಚರ್ಮದಲ್ಲಿ ಅನುಲೇಪಕ ಅಂಗಾಂಶವು ಪದರಗಳ ಮಾದರಿಯಲ್ಲಿ ಜೋಡಣೆಗೊಂಡಿರುವುದರಿಂದ ಇದನ್ನು ಸ್ತರೀಕೃತ ಚಪ್ಪಟೆ ಅನುಲೇಪಕ ಅಂಗಾಂಶ (stratified squamous epithelium) ಎಂದು ಕರೆಯುವರು.

b. ಸ್ತರೀಕೃತ ಚಪ್ಪಟೆ ಅನುಲೇಪಕ ಅಂಗಾಂಶ (stratified squamous epithelium)

65 of 99

c. ಕಶಾಂಗ ಸಹಿತ ಸ್ತಂಭಾಕೃತಿ ಅನುಲೇಪಕ ಅಂಗಾಂಶ (ciliated columnar epithelium)

  • ಹೀರುವಿಕೆ ಮತ್ತು ಸ್ರವಿಸುವಿಕೆಯಂಥ ಕ್ರಿಯೆಗಳು ನಡೆಯುವ ಸಣ್ಣ ಕರುಳಿನ ಒಳಭಿತ್ತಿಯಂತಹ ಭಾಗಗಳಲ್ಲಿ ಉದ್ದನೆಯ ಅನುಲೇಪಕ ಅಂಗಾಂಶದ ಜೀವಕೋಶಗಳು ಕಂಡುಬರುತ್ತವೆ. ಈ ಸ್ತಂಭಾಕಾರದ ಅನುಲೇಪಕ ಜೀವಕೋಶಗಳು ಅನುಲೇಪಕ ಅಂಗಾಂಶದ ತಡೆಗೋಡೆಯನ್ನು ದಾಟಲು ಸಹಾಯಕವಾಗುವ ಚಲನೆಯನ್ನು ಒದಗಿಸುತ್ತವೆ.

  • ಶ್ವಾಸನಾಳಗಳಲ್ಲಿ ಕಂಡುಬರುವ ಸ್ತಂಭಾಕೃತಿ ಅನುಲೇಪಕ ಅಂಗಾಂಶವು ಕಶಾಂಗಗಳನ್ನು ಹೊಂದಿದೆ. ಕಶಾಂಗ (cilia) ಎಂಬುದು ಅನುಲೇಪಕ ಅಂಗಾಂಶದ ಜೀವಕೋಶಗಳ ಹೊರಮೈ ಮೇಲೆ ಮುಂಚಾಚಿರುವ ಕೂದಲಿನಂತಹ ರಚನೆಯಾಗಿವೆ. ಈ ಸೀಲಿಯಾಗಳು ಚಲಿಸಬಲ್ಲವು ಮತ್ತು ಅವುಗಳ ಚಲನೆಯು ಲೋಳೆಯಂತಹ ವಸ್ತುವನ್ನು ಮುಂದೆ ತಳ್ಳಿ ಹೊರಹಾಕುತ್ತದೆ.

  • ಈ ರೀತಿಯ ಅನುಲೇಪಕ ಅಂಗಾಂಶವನ್ನು ಕಶಾಂಗ ಸಹಿತ ಸ್ತಂಭಾಕೃತಿ ಅನುಲೇಪಕ ಅಂಗಾಂಶ (ciliated columnar epithelium) ಎನ್ನುವರು.

66 of 99

  • ಘನಾಕೃತಿ ಅನುಲೇಪಕ ಅಂಗಾಂಶ (ಘನಾಕೃತಿ ರೂಪದ ಜೀವಕೋಶಗಳು) ಮೂತ್ರ ಪಿಂಡದ ನಾಳಗಳಲ್ಲಿ ಮತ್ತು ಲಾಲಾರಸ ಗ್ರಂಥಿಯ ನಾಳಗಳ ಪದರಗಳಲ್ಲಿ ಕಂಡುಬರುತ್ತದೆ. ಅಲ್ಲಿ ಅವು ಯಾಂತ್ರಿಕ ಆಧಾರವನ್ನು ಒದಗಿಸುತ್ತವೆ.

  • ಇವುಗಳಲ್ಲಿ ಕಂಡುಬರುವ ಅನುಲೇಪಕ ಅಂಗಾಂಶದ ಜೀವಕೋಶಗಳು ಹೆಚ್ಚುವರಿಯಾಗಿ ಸ್ರವಿಕೆಯ ಕಾರ್ಯ ನಿರ್ವಹಿಸಲು ಗ್ರಂಥಿಯಾಗಿ ವೈಶಿಷ್ಟ್ಯತೆಯನ್ನು ಪಡೆದಿವೆ. ಇವು ತಮ್ಮ ಹೊರಪದರದಲ್ಲಿ ಕೆಲವು ವಸ್ತುಗಳನ್ನು ಸ್ರವಿಸುತ್ತವೆ.

  • ಕೆಲವೊಮ್ಮೆ ಅನುಲೇಪಕ ಅಂಗಾಂಶಗಳ ಒಂದು ಭಾಗವು ಒಳಮುಖವಾಗಿ ಮಡಚಿಕೊಂಡು ಒಂದು ಬಹುಕೋಶೀಯ ಗ್ರಂಥಿಯನ್ನು ಉಂಟುಮಾಡುತ್ತದೆ. ಇದು ಗ್ರಂಥಿ ಅನುಲೇಪಕ ಅಂಗಾಂಶ. (glandular epithelium).

d. ಘನಾಕೃತಿ ಅನುಲೇಪಕ ಅಂಗಾಂಶ:

67 of 99

ಚಟುವಟಿಕೆ 2.1

ಕ್ರ.ಸಂ

ಅಂಗಾಂಶ

ಹೆಸರು

ಕಾಯ೯

1

2

ಈ ಕೆಳಗಿನ ಪ್ರಾಣಿ ಅಂಗಾಂಶಗಳ ಚಿತ್ರಗಳನ್ನು ಹೆಸರಿಸಿ ಕಾರ್ಯವನ್ನು ಬರೆದು ಕೋಷ್ಟಕವನ್ನು ಪೂರ್ಣಗೊಳಿಸು.

68 of 99

ಚಟುವಟಿಕೆ 2.1

ಕ್ರ.ಸಂ

ಅಂಗಾಂಶ

ಹೆಸರು

ಕಾಯ೯

3

4

69 of 99

2. ಸಂಯೋಜಕ ಅಂಗಾಂಶ (connective tissue) ವಿಧಗಳು

  • ರಕ್ತವು ಒಂದು ವಿಧದ ಸಂಯೋಜಕ ಅಂಗಾಂಶ. ಇದನ್ನು ಸಂಯೋಜಕ ಅಂಗಾಂಶ ಎಂದು ಏಕೆ ಕರೆಯುತ್ತಾರೆ? ಈ ಪ್ರಶ್ನೆಗೆ ಉತ್ತರದ ಸುಳಿವನ್ನು ಈ ಪಾಠದ ಪೀಠಿಕೆಯಲ್ಲಿ ನೀಡಲಾಗಿದೆ. ಈಗ ನಾವು ಈ ರೀತಿಯ ಅಂಗಾಂಶದ ಬಗ್ಗೆ ಸ್ವಲ್ಪ ವಿವರವಾಗಿ ಅಭ್ಯಾಸ ಮಾಡೋಣ.

  • ಸಂಯೋಜಕ ಅಂಗಾಂಶದ ಜೀವಕೋಶಗಳು ಅಂತರಕೋಶೀಯ ಮಾತೃಕೆಯಲ್ಲಿ ಸಡಿಲವಾಗಿ ಹುದುಗಿಕೊಂಡಿವೆ ಮಾತೃಕೆಯು ಲೋಳೆ, ದ್ರವ, ಮಂದ ಅಥವಾ ಗಟ್ಟಿಯಾಗಿರಬಹುದು. ನಿರ್ದಿಷ್ಟ ಸಂಯೋಜಕ ಅಂಗಾಂಶಗಳ ಕಾರ್ಯಗಳಿಗೆ ಹೊಂದಿಕೊಂಡು ಅವುಗಳಲ್ಲಿರುವ ಮಾತೃಕೆಯ ಸ್ವರೂಪ ಬದಲಾಗುತ್ತದೆ.

70 of 99

ಚಟುವಟಿಕೆ

ಒಂದು ಗಾಜಿನ ಸ್ಲೈಡ್‍ನ ಮೇಲೆ ಒಂದು ಹನಿ ರಕ್ತವನ್ನು ತೆಗೆದುಕೊಂಡು ಸೂಕ್ಷ್ಮದರ್ಶಕದ ಅಡಿಯಲ್ಲಿ ಅದರಲ್ಲಿರುವ ವಿವಿಧ ಜೀವಕೋಶಗಳನ್ನು ವೀಕ್ಷಿಸಿ.

71 of 99

  • ರಕ್ತವು ದ್ರವ ಮಾತೃಕೆಯನ್ನು ಹೊಂದಿದೆ. ಇದನ್ನು ಪ್ಲಾಸ್ಮ ಎಂದು ಕರೆಯುವರು. ಇದರಲ್ಲಿ ಕೆಂಪು ರಕ್ತ ಕಣಗಳು (RBCs) ಬಿಳಿ ರಕ್ತ ಕಣಗಳು (WBCs) ಮತ್ತು ಕಿರುತಟ್ಟೆಗಳು (platelets) ನಿಲಂಬಿತ ಸ್ಥಿತಿಯಲ್ಲಿರುತ್ತವೆ.

  • ಪ್ಲಾಸ್ಮಾವು ಪ್ರೋಟೀನ್‍ಗಳು, ಲವಣಗಳು ಮತ್ತು ಹಾರ್ಮೋನ್‍ಗಳನ್ನು ಹೊಂದಿದೆ. ರಕ್ತವು ಹರಿಯುತ್ತದೆ ಮತ್ತು ತ್ಯಾಜ್ಯ ಅನಿಲಗಳು, ಜೀರ್ಣವಾದ ಆಹಾರ, ಹಾರ್ಮೋನ್‍ಗಳು ಮತ್ತು ಪದಾರ್ಥಗಳನ್ನು ದೇಹದ ವಿವಿಧ ಭಾಗಗಳಿಗೆ ಸಾಗಿಸುತ್ತದೆ.

72 of 99

Components of Blood

73 of 99

ಮೂಳೆ:

ಮೂಳೆಯು ಸಂಯೋಜಕ ಅಂಗಾಂಶಕ್ಕೆ ಇನ್ನೊಂದು ಉದಾಹರಣೆಯಾಗಿದೆ. ಇದು ದೇಹಕ್ಕೆ ಆಧಾರ ನೀಡುವ ಚೌಕಟ್ಟನ್ನು ನಿರ್ಮಿಸುತ್ತದೆ. ಇದು ಸ್ನಾಯುಗಳಿಗೆ ಆಧಾರ ನೀಡುವ ಮೂಲಕ ದೇಹದ ಪ್ರಮುಖ ಅಂಗಗಳಿಗೂ ಆಧಾರ ಒದಗಿಸುತ್ತದೆ. ಇದೊಂದು ಬಲಯುತವಾದ ಮತ್ತು ಅನಮ್ಯ ಅಂಗಾಂಶ (ಮೂಳೆಗಳ ಕಾರ್ಯ ನಿರ್ವಹಣೆಯಲ್ಲಿ ಈ ಗುಣಲಕ್ಷಣಗಳ ಮಹತ್ವವೇನಿರಬಹುದು?) ಮೂಳೆ ಜೀವಕೋಶಗಳು ಕ್ಯಾಲ್ಸಿಯಂ ಮತ್ತು ಫಾಸ್ಫರಸ್ (ರಂಜಕ) ಸಂಯುಕ್ತಗಳಿಂದಾದ ದಟ್ಟ ಮಾತೃಕೆಯಲ್ಲಿ ಹುದುಗಿಕೊಂಡಿವೆ.

74 of 99

ಅಸ್ಥಿರಜ್ಜು:

  • ಅಸ್ಥಿರಜ್ಜು (Ligament) ಎಂಬ ಇನ್ನೊಂದು ವಿಧದ ಸಂಯೋಜಕ ಅಂಗಾಂಶದಿಂದ ಎರಡು ಮೂಳೆಗಳು ಪರಸ್ಪರ ಬಂಧಿಸಲ್ಪಡುತ್ತವೆ. ಈ ಅಂಗಾಂಶವು ಹೆಚ್ಚು ಸ್ಥಿತಿಸ್ಥಾಪಕತೆ ಹೊಂದಿದೆ.

  • ಇದು ಸಾಕಷ್ಟು ಶಕ್ತಿಯನ್ನೂ ಹೊಂದಿದೆ. ಅಸ್ಥಿರಜ್ಜುಗಳು ಅತಿ ಕಡಿಮೆ ಪ್ರಮಾಣದ ಮಾತೃಕೆಯನ್ನು ಹೊಂದಿವೆ. ಸ್ನಾಯುರಜ್ಜುಗಳು (Tendons) ಸ್ನಾಯುಗಳನ್ನು ಮೂಳೆಗಳಿಗೆ ಬಂಧಿಸುವ ಇನ್ನೊಂದು ಬಗೆಯ ಸಂಯೋಜಕ ಅಂಗಾಂಶ.

  • ಸ್ನಾಯುರಜ್ಜುಗಳು ನಾರಿನಂತಹ ಅಂಗಾಂಶವಾಗಿದ್ದು ಅತ್ಯಧಿಕ ಶಕ್ತಿ ಆದರೆ ಸೀಮಿತ ನಮ್ಯತೆಯನ್ನು ಹೊಂದಿವೆ.

75 of 99

ಮೃದ್ವಸ್ಥಿ:

  • ಮೃದ್ವಸ್ಥಿ (cartilage) ಎಂಬುದು ಮತ್ತೊಂದು ವಿಧದ ಸಂಯೋಜಕ ಅಂಗಾಂಶವಾಗಿದ್ದು ವಿಶಾಲ ಕೋಶಾವಕಾಶವಿರುವ ಜೀವಕೋಶಗಳನ್ನು ಹೊಂದಿವೆ. ಇದರ ಘನರೂಪಿ ಮಾತೃಕೆಯು ಪ್ರೋಟೀನ್ ಮತ್ತು ಸಕ್ಕರೆಯಿಂದಾಗಿದೆ.

  • ಕೀಲುಗಳಲ್ಲಿನ ಮೂಳೆಯ ಮೇಲ್ಮೈಯನ್ನು ಮೃದ್ವಸ್ಥಿ ಅಂಗಾಂಶವು ಮೃದುಗೊಳಿಸುತ್ತದೆ ಮತ್ತು ಈ ಅಂಗಾಂಶವು ಮೂಗು, ಕಿವಿ, ಶ್ವಾಸನಾಳ ಮತ್ತು ಉಸಿರ್ನಾಳಗಳಲ್ಲಿ ಕಂಡುಬರುತ್ತದೆ. ಕಿವಿಗಳಲ್ಲಿನ ಮೃದ್ವಸ್ಥಿಯನ್ನು ನಾವು ಮಡಚಬಹುದು ಆದರೆ ಕೈಗಳಲ್ಲಿನ ಮೂಳೆಯನ್ನು ಬಾಗಿಸಲಾರೆವು.

76 of 99

ಏರಿಯೋಲಾರ್:

ಚರ್ಮ ಮತ್ತು ಸ್ನಾಯುಗಳ ಮಧ್ಯೆ, ನರಗಳು ಮತ್ತು ರಕ್ತನಾಳಗಳ ಸುತ್ತ ಹಾಗೂ ಅಸ್ಥಿಮಜ್ಜೆಗಳಲ್ಲಿ ಏರಿಯೋಲಾರ್ (areolar) ಸಂಯೋಜಕ ಅಂಗಾಂಶವು ಕಂಡುಬರುತ್ತದೆ. ಇದು ಅಂಗಗಳ ಒಳಗಿರುವ ಖಾಲಿ ಅವಕಾಶವನ್ನು ಭರ್ತಿ ಮಾಡುತ್ತದೆ, ದೇಹದ ಒಳಗಿನ ಅಂಗಗಳಿಗೆ ಆಧಾರ ಒದಗಿಸುತ್ತದೆ ಮತ್ತು ಅಂಗಾಂಶಗಳ ದುರಸ್ತಿಗೆ ಸಹಾಯ ಮಾಡುತ್ತದೆ.

77 of 99

ಅಡಿಪೋಸ್:

ನಮ್ಮ ದೇಹದಲ್ಲಿ ಕೊಬ್ಬು ಎಲ್ಲಿ ಸಂಗ್ರಹವಾಗುತ್ತದೆ? ಚರ್ಮದ ಕೆಳಗೆ ಮತ್ತು ದೇಹದ ಒಳಗಿನ ಅಂಗಗಳ ನಡುವೆ ಕೊಬ್ಬು ಸಂಗ್ರಹವಾಗುವ ಅಡಿಪೋಸ್ (adipose) ಅಂಗಾಂಶ ಕಂಡುಬರುತ್ತದೆ. ಈ ಅಂಗಾಂಶದ ಜೀವಕೋಶಗಳು ಕೊಬ್ಬಿನ ಹನಿಗಳಿಂದ ತುಂಬಿರುತ್ತವೆ. ಕೊಬ್ಬಿನ ಸಂಗ್ರಹಣೆಯಿಂದಾಗಿ ಅಡಿಪೋಸ್ ಅಂಗಾಂಶವು ದೇಹದ ಉಷ್ಣ ನಾಶವನ್ನು ತಡೆಯುತ್ತದೆ.

78 of 99

ಸ್ನಾಯು ಅಂಗಾಂಶ(muscular tissue):

  • ಸ್ನಾಯು ಅಂಗಾಂಶವು (muscular tissue) ಸ್ನಾಯುತಂತುಗಳೆಂದು ಕರೆಯಲ್ಪಡುವ ಉದ್ದವಾದ ಜೀವಕೋಶಗಳನ್ನು ಹೊಂದಿದೆ.

  • ನಮ್ಮ ದೇಹದ ಚಲನವಲನಗಳಿಗೆ ಈ ಅಂಗಾಂಶವೇ ಕಾರಣ.

  • ಸ್ನಾಯು ಅಂಗಾಂಶವು ಸಂಕುಚಿಸುವ ಪ್ರೋಟೀನ್ (contractile protein) ಎಂಬ ವಿಶೇಷ ಪ್ರೋಟಿನ್‍ಗಳನ್ನು ಹೊಂದಿದ್ದು ಇವುಗಳ ಸಂಕುಚನ ಮತ್ತು ವಿಕಸನಗಳು ಚಲನೆಗೆ ಕಾರಣವಾಗಿವೆ.

79 of 99

ಪಟ್ಟೆ ಸಹಿತ ಸ್ನಾಯುಗಳು:

ನಮ್ಮ ಇಚ್ಚೆಯಂತೆ ನಾವು ಕೆಲವು ಸ್ನಾಯುಗಳನ್ನು ಚಲಿಸುವಂತೆ ಮಾಡಬಲ್ಲೆವು. ನಮ್ಮ ಕಾಲುಗಳಲ್ಲಿರುವ ಸ್ನಾಯುಗಳನ್ನು ನಾವು ಬಯಸಿದರೆ ಚಲಿಸಬಹುದು ಮತ್ತು ನಮ್ಮ ತೀರ್ಮಾನದಂತೆ ನಿಲ್ಲಿಸಬಹುದು. ಇಂತಹ ಸ್ನಾಯುಗಳನ್ನು ಐಚ್ಚಿಕ ಸ್ನಾಯುಗಳು (Voluntary muscles) ಎನ್ನುವರು. ಇವುಗಳು ಸಾಮಾನ್ಯವಾಗಿ ಮೂಳೆಗಳಿಗೆ ಅಂಟಿಕೊಂಡು ದೇಹದ ಚಲನೆಗೆ ಸಹಾಯ ಮಾಡುವುದರಿಂದ ಇವುಗಳನ್ನು `ಅಸ್ಥಿಸ್ನಾಯುಗಳು'(Skeletal muscles) ಎಂದೂ ಕರೆಯುತ್ತಾರೆ.

80 of 99

ಈ ಸ್ನಾಯುಗಳಿಗೆ ಸೂಕ್ತ ಬಣ್ಣಹಾಕಿ ಸೂಕ್ಷ್ಮದರ್ಶಕದ ಅಡಿಯಲ್ಲಿ ಗಮನಿಸಿದಾಗ ಇವುಗಳಲ್ಲಿ ತೆಳುವಾದ ಮತ್ತು ದಟ್ಟವಾದ ಪಟ್ಟೆಗಳು ಅಥವಾ ಅಡ್ಡಗೆರೆಗಳು ಅನುಕ್ರಮವಾಗಿ ಕಂಡುಬರುತ್ತವೆ. ಇದರಿಂದಾಗಿ ಇವುಗಳನ್ನು ಪಟ್ಟೆಸಹಿತ ಸ್ನಾಯುಗಳು ಎಂದೂ ಕರೆಯುತ್ತಾರೆ. ಈ ಸ್ನಾಯುಗಳ ಜೀವಕೋಶಗಳು ನೀಳವಾಗಿ ಕೊಳವೆಯಾಕಾರದಲ್ಲಿವೆ, ಇವು ಶಾಖೆಗಳನ್ನು ಹೊಂದಿಲ್ಲ ಮತ್ತು ಅನೇಕ ನ್ಯೂಕ್ಲಿಯಸ್‍ಗಳನ್ನು ಹೊಂದಿವೆ.

81 of 99

ಮೃದು ಸ್ನಾಯುಗಳು:

  • ಅನ್ನನಾಳದಲ್ಲಿನ ಆಹಾರ ಚಲನೆ ಅಥವಾ ರಕ್ತನಾಳಗಳ ಸಂಕುಚನ ಮತ್ತು ವಿಕಸನಗಳು ಅನೈಚ್ಚಿಕ ಚಲನೆಗಳು. ಇದನ್ನು ಮಾಡಬೇಕೆಂದು ಬಯಸಿದಾಕ್ಷಣ ನಾವು ನಿಜವಾಗಿ ಇದನ್ನು ಪ್ರಾರಂಭಿಸುವುದಾಗಲೀ ನಿಲ್ಲಿಸುವುದಾಗಲೀ ಮಾಡಲಾರೆವು.

  • ಮೃದು ಸ್ನಾಯುಗಳು (smooth muscles) ಅಥವಾ ಅನೈಚ್ಚಿಕ ಸ್ನಾಯುಗಳು (involuntary muscles) ಇಂತಹ ಚಲನೆಗಳನ್ನು ನಿಯಂತ್ರಿಸುತ್ತವೆ. ಕಣ್ಣಿನ ಪಾಪೆಯಲ್ಲಿ, ಮೂತ್ರನಾಳಗಳಲ್ಲಿ ಮತ್ತು ಶ್ವಾಸಕೋಶದ ಉಸಿರ್ನಾಳಗಳಲ್ಲಿ ಕೂಡಾ ಇವು ಕಂಡುಬರುತ್ತವೆ.
  • ಸ್ನಾಯುತಂತುಗಳು ಉದ್ದವಾಗಿದ್ದು ಚೂಪಾದ ತುದಿಯನ್ನು ಹೊಂದಿವೆ (ಕದಿರಿನಾಕಾರ) ಮತ್ತು ಒಂದೇ ನ್ಯೂಕ್ಲಿಯಸ್ ಅನ್ನು ಹೊಂದಿವೆ. ಇವುಗಳನ್ನು ಪಟ್ಟೆರಹಿತ ಸ್ನಾಯುಗಳು (unstriated muscles) ಎಂದೂ ಕರೆಯುತ್ತಾರೆ.

82 of 99

ಹೃದಯ ಸ್ನಾಯುಗಳು:

ಹೃದಯ ಸ್ನಾಯುಗಳು ಅತ್ಯಂತ ಲಯಬದ್ಧವಾದ ಸಂಕುಚನ ಮತ್ತು ವಿಕಸನಗಳನ್ನು ಜೀವಮಾನವಿಡೀ ತೋರುತ್ತವೆ. ಈ ಅನೈಚ್ಚಿಕ ಸ್ನಾಯುಗಳನ್ನು `ಹೃದಯ ಸ್ನಾಯುಗಳು' ಎಂದು ಕರೆಯುವರು. ಹೃದಯ ಸ್ನಾಯುತಂತುಗಳು ಕೊಳವೆಯಾಕಾರವಾಗಿದ್ದು ಶಾಖೆಗಳಾಗಿ ಒಡೆಯುತ್ತವೆ ಮತ್ತು ಒಂದೇ ನ್ಯೂಕ್ಲಿಯಸ್ ಅನ್ನು ಹೊಂದಿವೆ.

83 of 99

ನರ ಅಂಗಾಂಶ (Nervous tissue):

ಎಲ್ಲಾ ಜೀವಕೋಶಗಳು ಪ್ರಚೋದನೆಗೆ ಪ್ರತಿಕ್ರಿಯೆ ವ್ಯಕ್ತಪಡಿಸುವ ಸಾಮಥ್ರ್ಯ ಹೊಂದಿವೆ. ಆದರೆ, ನರ ಅಂಗಾಂಶದ ಜೀವಕೋಶಗಳು ಪ್ರಚೋದನೆಗಳನ್ನು ಗ್ರಹಿಸುವಲ್ಲಿ ಮತ್ತು ನರಾವೇಗಗಳನ್ನು ದೇಹದೊಳಗೆ ಒಂದು ಭಾಗದಿಂದ ಮತ್ತೊಂದು ಭಾಗಕ್ಕೆ ಅತ್ಯಂತ ವೇಗವಾಗಿ ಸಾಗಿಸಲು ಅತಿ ಹೆಚ್ಚಿನ ವೈಶಿಷ್ಟ್ಯತೆಯನ್ನು ಪಡೆದಿವೆ.

84 of 99

ನರ ಅಂಗಾಂಶ (Nervous tissue)

  • ಮಿದುಳು, ಮಿದುಳು ಬಳ್ಳಿ ಮತ್ತು ನರಗಳು ಎಲ್ಲವೂ ನರ ಅಂಗಾಂಶಗಳಿಂದ ಉಂಟಾಗಿವೆ. ಈ ಅಂಗಾಂಶದ ಜೀವಕೋಶಗಳನ್ನು ನರಕೋಶಗಳು ಅಥವಾ ನ್ಯೂರಾನ್‍ಗಳು ಎಂದು ಕರೆಯುತ್ತಾರೆ.

  • ಒಂದು ನರಕೋಶ ಅಥವಾ ನ್ಯೂರಾನ್ ಕೋಶ ಕಾಯವನ್ನು ಹೊಂದಿದ್ದು ಅದರೊಳಗೆ ನ್ಯೂಕ್ಲಿಯಸ್ ಮತ್ತು ಸೈಟೋಪ್ಲಾಸಂ ಇರುತ್ತವೆ. ಕೋಶಕಾಯದಿಂದ ಉದ್ದನೆಯ ಕೂದಲಿನಂತಹ ರಚನೆಗಳು ಹೊರಡುತ್ತವೆ. ಸಾಮಾನ್ಯವಾಗಿ ಪ್ರತಿ ನ್ಯೂರಾನ್ ಆಕ್ಸಾನ್ ಎಂದು ಕರೆಯಲ್ಪಡುವ ಉದ್ದನೆಯ ರಚನೆಯನ್ನು ಹೊಂದಿರುತ್ತದೆ. ಮತ್ತು ಅನೇಕ ಸಣ್ಣ ಸಣ್ಣ ಶಾಖೆಗಳಂತಹ ಭಾಗಗಳನ್ನು ಹೊಂದಿರುತ್ತದೆ. ಇವುಗಳನ್ನು ಡೆಂಡ್ರೈಟ್‍ಗಳು ಎನ್ನುವರು.

85 of 99

  • ಒಂದು ನರಕೋಶವು ಸುಮಾರು ಒಂದು ಮೀಟರ್‍ನಷ್ಟು ಉದ್ದವಿರಬಹುದು. ಅನೇಕ ನರತಂತುಗಳು ಒಟ್ಟಾಗಿ ಸಂಯೋಜಕ ಅಂಗಾಂಶದಿಂದ ಬಂಧಿಸಲ್ಪಟ್ಟು ಒಂದು ನರವನ್ನು ರಚಿಸುತ್ತವೆ.

  • ನರಾವೇಗಗಳು ನಾವು ಬಯಸಿದಾಗ ಸ್ನಾಯುಗಳನ್ನು ಚಲಿಸಲು ನೆರವಾಗುತ್ತವೆ.

  • ನರ ಅಂಗಾಂಶ ಮತ್ತು ಸ್ನಾಯು ಅಂಗಾಂಶಗಳ ಕಾರ್ಯದ ಹೊಂದಾಣಿಕೆಯು ಬಹುತೇಕ ಪ್ರಾಣಿಗಳ ಮೂಲಭೂತ ಲಕ್ಷಣವಾಗಿದೆ.

  • ಪ್ರಚೋದನೆಗೆ ಕೂಡಲೇ ಪ್ರತಿಕ್ರಿಯಿಸಲು ಪ್ರಾಣಿಗಳಿಗೆ ಈ ಹೊಂದಾಣಿಕೆಯು ನೆರವಾಗುತ್ತದೆ.

86 of 99

ಪ್ರಾಣಿ ಅಂಗಾಂಶ

Animal Tissues

87 of 99

ಚಟುವಟಿಕೆ 2.2

ಇಲ್ಲಿ ಕೊಟ್ಟಿರುವ ಪ್ರಾಣಿ ಅಂಗಾಂಶದ ನಕ್ಷಾ ಹರಿವನ್ನು ಗಮನಿಸಿ, ಪೂರ್ಣಗೊಳಿಸು.

88 of 99

ಚಟುವಟಿಕೆ 2.2

ಮೇಲೆ ಕೊಟ್ಟಿರುವ ಪ್ರಾಣಿ ಅಂಗಾಂಶದ ನಕ್ಷಾ ಹರಿವನ್ನು ಗಮನಿಸಿ ಮತ್ತು ಮೇಲೆ ನೀಡಿರುವ ಮಾಹಿತಿಯನ್ನು ಅವಲೋಕಿಸಿ ಕೊಟ್ಟಿರುವ ಪ್ರಶ್ನೆಗಳಿಗೆ ಉತ್ತರ ಬರೆ.

1. ಮೂತ್ರಪಿಂಡದ ನಾಳ ಮತ್ತು ಲಾಲಾರಸ ಗ್ರಂಥಿಯ ನಾಳ ಪದರಗಳಲ್ಲಿ ಕಂಡುಬರುವ ಅನುಲೇಪಕ

ಅಂಗಾಂಶದ ವಿಧ_____________________________

2. ಶ್ವಾಸಕೋಶದ ಆಲ್ವಿಯೋಲೈಗಳಲ್ಲಿ ಕಂಡುಬರುವ ಅನುಲೇಪಕ ಅಂಗಾಂಶ_________________ .

3. ಸಣ್ಣ ಕರುಳಿನ ಒಳ ಬಿತ್ತಿಯಲ್ಲಿ ಕಂಡುಬರುವ ಅನುಲೇಪಕ ಅಂಗಾಂಶದ ವಿಧ

____________________.

4. ಸಣ್ಣ ಕರುಳಿನಲ್ಲಿ ಲೋಳೆಯನ್ನು ಸ್ರವಿಸಿ ಆಹಾರವು ಸುಲಭವಾಗಿ ಚಲಿಸಲು ಸಹಾಯ ಮಾಡುವ ಅನುಲೇಪಕ ಅಂಗಾಂಶದ ವಿಧ. ____________________

89 of 99

ಚಟುವಟಿಕೆ 2.2

5. ದ್ರವರೂಪ ಸಂಯೋಜಕ ಅಂಗಾಂಶದ ವಿಧ.___________________________

6. ಮೂಳಯನ್ನು ಪರಸ್ಪರ ಜೋಡಿಸುವ ಸಂಯೋಜಕ ಅಂಗಾಂಶ

__________________________

7. ಸ್ನಾಯುಗಳನ್ನು ಮೂಳೆಗಳಿಗೆ ಬಂಧಿಸುವ ಸಂಯೋಜಕ ಅಂಗಾಂಶ

________________________

8. ಮೂಗು ಕಿವಿ ಶಾಸನಾಳಗಳಲ್ಲಿ ಕಂಡುಬರುವ ಸಂಯೋಜಕ ಅಂಗಾಂಶ

_____________________

9. ದೇಹದ ಒಳಗಿನ ಅಂಗಾಂಶಗಳಿಗೆ ಆಧಾರ ಮತ್ತು ಅಂಗಾಂಶಗಳ ದುರಸ್ತಿಗೆ ಸಹಾಯಮಾಡುವ

ಸಂಯೋಜಕ ಅಂಗಾಂಶ._______________________

10. ದೇಹದ ಉಷ್ಣ ನಿಯಂತ್ರಕವಾಗಿ ಕಾರ್ಯಮಾಡುವ ಸಂಯೋಜಕ ಅಂಗಾಂಶ

___________________

90 of 99

ಚಟುವಟಿಕೆ

ಗಮನಿಸು : ನಿನ್ನ ಶಿಕ್ಷಕರ ಸಹಾಯದಿಂದ ಶಾಲಾ ಪ್ರಯೋಗಾಲಯದಲ್ಲಿನ ಸಂಯುಕ್ತ

ಸೂಕ್ಮದಶ೯ಕದ ಅಡಿಯಲ್ಲಿ ಲಭ್ಯವಿರುವ ಶಾಶ್ವತ ಪ್ರಾಣಿ ಅಂಗಾಂಶದ ಸ್ಲೈಡ್‌ಗಳನ್ನು ವೀಕ್ಷಿಸಿ ಅವುಗಳನ್ನು ಗುರುತಿಸಲು ಪ್ರಯತ್ನಿಸು.

91 of 99

ನೀವು ಕಲಿತಿರುವುದು:

  • ಅಂಗಾಂಶವೆಂದರೆ ಒಂದೇ ರೀತಿಯ ರಚನೆ ಮತ್ತು ಕಾರ್ಯವನ್ನು ಹೊಂದಿರುವ ಜೀವಕೋಶಗಳ ಗುಂಪು.

  • ಸಸ್ಯ ಅಂಗಾಂಶಗಳಲ್ಲಿ ಎರಡು ಮುಖ್ಯ ವಿಧಗಳಿವೆ – ವರ್ಧನ ಅಂಗಾಂಶ ಮತ್ತು ಶಾಶ್ವತ ಅಂಗಾಂಶ.

  • ವರ್ಧನ ಅಂಗಾಂಶವು ವಿಭಜನೆ ಹೊಂದುತ್ತಿರುವ ಅಂಗಾಂಶವಾಗಿದ್ದು ಸಸ್ಯದ ಬೆಳವಣಿಗೆ ಆಗುತ್ತಿರುವ ಭಾಗಗಳಲ್ಲಿ ಕಂಡುಬರುತ್ತದೆ.

  • ವಿಭಜನೆ ಸಾಮಥ್ರ್ಯವನ್ನು ಕಳೆದುಕೊಂಡ ವರ್ಧನ ಅಂಗಾಂಶದಿಂದ ಶಾಶ್ವತ ಅಂಗಾಂಶಗಳು ರೂಪುಗೊಂಡಿವೆ. ಅವುಗಳನ್ನು ಸರಳ ಮತ್ತು ಸಂಕೀರ್ಣ ಶಾಶ್ವತ ಅಂಗಾಂಶಗಳೆಂದು ವರ್ಗೀಕರಿಸಲಾಗಿದೆ.

  • ಪೇರಂಕೈಮ, ಕೋಲಂಕೈಮ ಮತ್ತು ಸ್ಕ್ಲೀರಂಕೈಮಗಳು ಮೂರು ವಿಧದ ಸರಳ ಶಾಶ್ವತ ಅಂಗಾಂಶಗಳು. ಕ್ಸೈಲಂ ಮತ್ತು ಫ್ಲೋಯಂಗಳು ಸಂಕೀರ್ಣ ಶಾಶ್ವತ ಅಂಗಾಂಶಗಳು.

92 of 99

  • ಅನುಲೇಪಕ ಅಂಗಾಂಶ, ಸಂಯೋಜಕ ಅಂಗಾಂಶ, ಸ್ನಾಯು ಅಂಗಾಂಶ ಮತ್ತು ನರ ಅಂಗಾಂಶಗಳು ಪ್ರಾಣಿ ಅಂಗಾಂಶಗಳಾಗಿವೆ.

  • ರೂಪ ಮತ್ತು ಕಾರ್ಯಗಳಿಗನುಗುಣವಾಗಿ ಅನುಲೇಪಕ ಅಂಗಾಂಶವನ್ನು ಚಪ್ಪಟೆ ಅನುಲೇಪಕ, ಘನಾಕೃತಿ ಅನುಲೇಪಕ, ಸ್ತಂಭ ಅನುಲೇಪಕ, ಕಶಾಂಗ ಸಹಿತ ಅನುಲೇಪಕ ಮತ್ತು ಗ್ರಂಥಿ ಅನುಲೇಪಕ ಅಂಗಾಂಶಗಳೆಂದು ವರ್ಗೀಕರಿಸಲಾಗಿದೆ.

  • ನಮ್ಮ ದೇಹದಲ್ಲಿರುವ ವಿವಿಧ ರೀತಿಯ ಸಂಯೋಜಕ ಅಂಗಾಂಶಗಳೆಂದರೆ, ಏರಿಯೋಲಾರ್ ಅಂಗಾಂಶ, ಅಡಿಪೋಸ್ ಅಂಗಾಂಶ, ಮೂಳೆ ಅಂಗಾಂಶ, ಸ್ನಾಯು ರಜ್ಜು, ಅಸ್ಥಿರಜ್ಜು, ಮೃದ್ವಸ್ಥಿ ಮತ್ತು ರಕ್ತ ಅಂಗಾಂಶ.

  • ಪಟ್ಟೆಸಹಿತ ಸ್ನಾಯು, ಪಟ್ಟೆರಹಿತ ಸ್ನಾಯು ಮತ್ತು ಹೃದಯ ಸ್ನಾಯುಗಳು ಮೂರು ವಿಧದ ಸ್ನಾಯು ಅಂಗಾಂಶಗಳಾಗಿವೆ.

  • ನರ ಅಂಗಾಂಶವು ನರಕೋಶಗಳಿಂದಾಗಿದ್ದು, ನರಾವೇಗಗಳನ್ನು ಸ್ವೀಕರಿಸುತ್ತದೆ ಮತ್ತು ಸಾಗಿಸುತ್ತದೆ.

93 of 99

ಚಟುವಟಿಕೆ 2.3

ಇಲ್ಲಿ ಕೊಟ್ಟಿರುವ ಅಂಗಾಂಶದ ವಿಧಗಳ ಚಿತ್ರಗಳನ್ನು ಗುರುತಿಸಿ ಇವು ರಚನೆಯಲ್ಲಿ ಪರಸ್ಪರ ಹೇಗೆ ಭಿನ್ನವಾಗಿವೆ ಎಂದು ಬರೆ.

94 of 99

ಚಟುವಟಿಕೆ 2.3

95 of 99

ಚಟುವಟಿಕೆ 2.4

ನರಕೋಶದ ಅಂದವಾದ ಚಿತ್ರ ಬಿಡಿಸಿ, ಭಾಗಗಳನ್ನು ಗುರುತಿಸು.

96 of 99

ಕಲಿಕಾ ಹಾಳೆಯ ಚಟುವಟಿಕೆ 2.4

ನನ್ನ ತಿಳಿವಳಿಕೆಯನ್ನು ನಾನೇ ಪರಿಸೀಲಿಸಿಕೊಳ್ಳುವೆ !!!

ಈ ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ.

೦೧. ಅಂಗಾಂಶವನ್ನು ನಿರೂಪಿಸಿ.

೦೨. ಸಸ್ಯ ಅಂಗಾಂಶದ ವರ್ಗೀಕರಣವನ್ನು ತಿಳಿಸಿ.

೦೩. ಫ್ಲೋಯಂ ಅಂಗಾಂಶದ ವಿವಿಧ ಘಟಕಗಳನ್ನು ಹೆಸರಿಸಿ.

೦೪. ಪಟ್ಟೆ ಸಹಿತ ಸ್ನಾಯುಗಳನ್ನು ಅಸ್ಥಿ ಸ್ನಾಯುಗಳು ಎನ್ನಲು ಕಾರಣವೇನು?

೦೫. ಪೇರಂಕೈಮ ಮತ್ತು ಕೋಲಂಕೈಮ ಅಂಗಾಂಶದ ಚಿತ್ರ ಬಿಡಿಸಿ

97 of 99

ಚಟುವಟಿಕೆ 2.4

ಹೊಂದಿಸಿ ಬರೆ

ಉತ್ತರ

ಏರಂಕೈಮ

ಪತ್ರಹರಿತ್ತು

ಕ್ಲೋರಂಕೈಮ

ಕಾವಲು ಜೀವಕೋಶಗಳು

ಅಡಿಪೋಸ್

ಖಾಲಿ ಅವಕಾಶ

ಕ್ಯೂಟಿನ್

ಕೊಬ್ಬು

ಪತ್ರರಂದ್ರ

ಮೇಣದ ದರ

98 of 99

ಚಟುವಟಿಕೆ 2.4

ಸರಿ ಅಥವಾ ತಪ್ಪು ತಿಳಿಸು.

01.ಪೇರಂಕೈಮ ಅಂಗಾಂಶ ಸಸ್ಯ ಭಾಗಗಳಿಗೆ ಆಧಾರ ಮತ್ತು ದೃಢತೆಯನ್ನು ನೀಡುತ್ತದೆ. ( )

02.. ಬೇರಿನ ಎಪಿಡಮ೯ಲ್ ಜೀವಕೋಶಗಳಲ್ಲಿನ ಉದ್ದನೆಯ ಕೂದಲಿನಂತಹ ರಚನೆಗಳು ನೀರನ್ನು ಹೀರುವ ಪ್ರದೇಶವನ್ನು ಹೆಚ್ಚಿಸುತ್ತದೆ. ( )

03. ಮೃದ್ವಸ್ತಿ ಒಂದು ಬಗೆಯ ಸ್ನಾಯು ಅಂಗಾಂಶವಾಗಿದೆ. ( )

04. ತೆಂಗಿನ ಕಾಯಿ ಸಿಪ್ಪೆಯು ಸ್ಕ್ಲೀರಂಕೈಮ ಅಂಗಾಂಶದಿಂದಾಗಿದೆ. ( )

99 of 99

  1. ತಾವರೆ ಸಸ್ಯದ ಎಲೆಗಳು ಸದಾಕಾಲ ನೀರಿನಲ್ಲಿ ಇದ್ದರೂ ಸಹ ಕೊಳೆಯುವುದಿಲ್ಲ.ಆಲೋಚಿಸಿ.

02. ವಧ೯ನ ಅಂಗಾಂಶದಲ್ಲಿ ರಸದಾನಿಗಳು ಕಂಡು ಬರುವುದಿಲ್ಲ .ಏಕೆ ?

ಆಲೋಚಿಸಿ