Copyrights and Attributions
The lesson plans created by India Literacy Project are not for profit or for sale. The content here has been compiled as open source and can be used, reproduced, derived of or modified by anyone as long as it is used for educational and non-profit use and released as open source.
All images and videos used in this presentation are sourced from the Internet and are owned and copyrighted as appropriate by the original owners.
India Literacy Project neither owns nor claims any copyright over them.
Free Distribution
ಉಚಿತ ವಿತರಣೆ
India Literacy Project
ILP ಸ್ವಯಂ ಸೇವಾ ಸಂಸ್ಥೆ ಉಚಿತ ವಿತರಣೆಗಾಗಿ ಈ ಡಿಜಿಟಲ್ ಸಂಪನ್ಮೂಲವನ್ನು ಸಿದ್ಧಪಡಿಸಿದೆ.
ಇದರ ಉದ್ದೇಶಗಳು:
ಇದರ ವೈಶಿಷ್ಟ್ಯತೆಗಳು:
ಡಿಜಿಟಲ್ ಸಂಪನ್ಮೂಲವನ್ನು ಬಳಸುವುದರಿಂದ ನಿಮ್ಮ ತರಗತಿ ಸ್ಮಾರ್ಟ್ ಕ್ಲಾಸ್ ಆಗಿ ಬದಲಾವಣೆಯಾಗಲು ಸಹಾಯಕವಾಗಿದೆ.
ನೋಟ್ ಬುಕ್ ಮತ್ತು ಪೆನ್ ನ್ನು ಸಿದ್ಧವಾಗಿಟ್ಟುಕೊಳ್ಳುವುದು.
India Literacy Project - email: info@ilpnet.org
ಶಿಕ್ಷಕರಿಗಾಗಿ
2022-2023 ಶೈಕ್ಷಣಿಕ ವರ್ಷದಲ್ಲಿ ಶಾಲೆಗಳಲ್ಲಿ ಕಲಿಕಾ ಚೇತರಿಕೆ ಕಾರ್ಯಕ್ರಮ
ಅನುಷ್ಠಾನವಾಗಲಿದೆ.
ಈ ppt ಗಳು ಕಲಿಕಾ ಚೇತರಿಕೆಯ ಕಲಿಕಾ ಹಾಳೆಗಳು ಮತ್ತು ಪಠ್ಯ ಪುಸ್ತಕದ
ವಿಷಯಗಳು ಸುಗಮವಾದ ಉಪಕ್ರಮಕ್ಕೆ ಶಿಕ್ಷಕರಿಗೆ ಸಹಾಯವಾಗುವಂತೆ ಇದೆ.
ಶಿಕ್ಷಕರಿಗಾಗಿ....
ಗುರುತ್ವ �(GRAVITATION)
ತರಗತಿ: 9
ಅಧ್ಯಾಯ: 10
ವಿಷಯ: ವಿಜ್ಞಾನ
ಶಿಕ್ಷಕರಿಗಾಗಿ……
1.ಗುರುತ್ವಾಕರ್ಷಣ ಬಲವನ್ನು ಸರಳವಾಗಿ ವಿವರಿಸುವೆ .
2.ಗುರುತ್ವ ಬಲ ಮತ್ತು ಕೇಂದ್ರಾಭಿಮುಖ ಬಲಕ್ಕೆ ಸಂಬಂಧ ಕಲ್ಪಿಸುವೆ.
3.ಚಲನೆಯ ಎರಡನೇ ನಿಯಮ ಬಳಸಿ ಭೂಮಿಯ ಸುತ್ತ ಚಂದ್ರನ ಚಲನೆ ,ಸೂರ್ಯನ ಸುತ್ತ ಭೂಮಿಯ ಚಲನೆ ಇವುಗಳಿಗೆ ಸಮರ್ಥನೆ ನೀಡುವೆ .
4.ನ್ಯೂಟೋನ್ ನ ವಿಶ್ವ ವ್ಯಾಪ್ತಿ ಗುರುತ್ವದ ನಿಯಮವನ್ನು ಅರ್ಥೈಸುವೆ .
5.ಸ್ವತಂತ್ರ ಪತನ ,ಗುರುತ್ವ ವೇಗೋತ್ಕರ್ಷ ಹಾಗು ಗುರುತ್ವ ಬಲಗಳಿಗೆ ಸಂಬಂಧ ಕಲ್ಪಿಸುವೆ .
.
ಕಲಿಕಾ ಫಲಗಳು
8.ನೂಕುಬಲ ಮತ್ತು ಒತ್ತಡಕ್ಕಿರುವ ಸಂಬಂಧ ತಿಳಿಯುವೆ .
9.ಪ್ಲವನತೆಯನ್ನು ವಿವರಿಸುವೆ ಮತ್ತು ಇದರ ಆಧಾರದ ಮೇಲೆ ವಸ್ತುಗಳು ಮುಳುಗಲು ಅಥವಾ ತೇಲಲು ಕಾರಣವನ್ನು ವಿವೇಚಿಸುವೆ
10.ಆರ್ಕಿಮೀಡೀಸ್ ತತ್ವವನ್ನು ನಿರೂಪಿಸುವೆ .
6.ವಸ್ತುವಿನ ರಾಶಿ ಸ್ಥಿರವಾಗಿದ್ದರೂ ತೂಕವು ಗುರುತ್ವಬಲದ ನಿಯಮಕ್ಕೆ ಒಳಪಟ್ಟು ಹೇಗೆ ಬದಲಾಗುತ್ತದೆ . ಎನ್ನುವುದಕ್ಕೆ ಸ್ಪಷ್ಟಿಕರಣ ನೀಡುವೆ
7.ರಾಶಿ ಮತ್ತಿ ತೂಕಗಳ ಸಂಬಂಧ ತಿಳಿಯುವೆ
.
ಆಲೋಚಿಸಿ:
ನೀವು ಮೇಲೆ ಎಸೆದ ಚೆಂಡು ಯಾಕೆ ಕೆಳಗೆ ಬೀಳುತ್ತದೆ ?
ಮರದಿಂದ ಹಣ್ಣುಗಳು ಏಕೆ ಕೆಳಗೆ ಬೀಳುತ್ತವೆ ?
ಗುರುತ್ವದ ಕುರಿತು
Why doesn't the moon fall down?
ಕಲಿಕಾ ಫಲ -1
ಗುರುತ್ವಾಕರ್ಷಣ ಬಲವನ್ನು ಸರಳವಾಗಿ ವಿವರಿಸುವೆ .
ಗುರುತ್ವ
ಗುರುತ್ವ
ಭೂಮಿಯು ಸೇಬನ್ನು ಆಕರ್ಷಿಸಬಹುದಾದರೆ, ಚಂದ್ರನನ್ನು ಆಕರ್ಷಿಸುವುದಿಲ್ಲವೇ?
ಎರಡೂ ಸನ್ನಿವೇಶಗಳಲ್ಲಿನ ಬಲವು ಒಂದೇ ಆಗಿದೆಯೇ? ಎಂದು ನ್ಯೂಟನ್ ಯೋಚಿಸಿದ್ದರು.
ಚಟುವಟಿಕೆ 1.1�
ಈ ವಿಶ್ವದ ಎಲ್ಲ ಕಾಯಗಳ ಚಲನೆಯನ್ನು ನಿಯಂತ್ರಿಸುವಲ್ಲಿ ಗುರುತ್ವ ಬಲವು ಮಹತ್ವದ ಪಾತ್ರವಹಿಸಿದೆ .ಇದೊಂದೂ ಸಂಪರ್ಕ ರಹಿತಬಲವಾಗಿದ್ದು ,ಪ್ರತಿಯೊಂದು ಕಾಯವು ತನ್ನ ಗುರುತ್ವಾಕರ್ಷಣ ಬಲದಿಂದ ಮತ್ತೊಂದು ಕಾಯವನ್ನು ತಮ್ಮ ಕಡೆಗೆ ಆಕರ್ಷಿಸುತ್ತದೆ .
ಪ್ರಕರಣ 1 | ಒಂದು ಹಾಳೆ ಮತ್ತು ಪುಸ್ತಕವನ್ನು ಒಂದೇ ಎತ್ತರದಿಂದ ಕೆಳಕ್ಕೆ ಬಿಟ್ಟಾಗ | ಎರಡು ಒಂದೇ ಗಾತ್ರದ ಪುಸ್ತಕಗಳನ್ನು ಒಂದೇ ಎತ್ತರದಿಂದ ಕೆಳಕ್ಕೆ ಬಿಟ್ಟಾಗ | ಎರಡು ಬೇರೆ ಬೇರೆ ಗಾತ್ರದ ವಸ್ತುಗಳನ್ನು ಕೆಳಕ್ಕೆ ಬಿಟ್ಟಾಗ |
ಭೂಮಿಯನ್ನು ಬೇಗ ತಲುಪುವ ವಸ್ತು | | | |
ಹಾಳೆ ಕೆಳಕ್ಕೆ ಪುಸ್ತಕಕ್ಕಿಂತ ನಿಧಾನವಾಗಿ ಬೀಳಲು ಕಾರಣವೇನು? ಹಾಳೆಯನ್ನು ನಿಧಾನಗೊಳಿಸುವ ಶಕ್ತಿ ಯಾವುದು ? ಇದು ವರ್ತಿಸದಿದ್ದರೆ ಏನಾಗುತ್ತಿತ್ತು ?
ಕಲಿಕಾ ಫಲ -2
ಗುರುತ್ವ ಬಲ ಮತ್ತು ಕೇಂದ್ರಾಭಿಮುಖ ಬಲಕ್ಕೆ ಸಂಬಂಧ ಕಲ್ಪಿಸುವೆ.
ಚಟುವಟಿಕೆ 2.1
ಗುರುತ್ವ ಬಲ ಮತ್ತು ಕೇಂದ್ರಾಭಿಮುಖ ಬಲ
1.ಮೊದಲ ಚಿತ್ರದಲ್ಲಿ ಲೋಲಕವು ಹಾರುವ ದಿಕ್ಕನ್ನು ರೇಖಾಕಿರಣದ ಮೂಲಕ ಸೂಚಿಸು .
2.ಇದು ಯಾವ ರೀತಿಯ ಚಲನೆ ?
3.ಇಲ್ಲಿ ದಾರವು ಲೋಲಕದ ಚಲನೆಯನ್ನು ನಿಯಂತ್ರಿಸುತ್ತಿತ್ತೇ ?
4.ಲೋಲಕವನ್ನು ಚಂದ್ರನಿಗೆ ಹೋಲಿಸುವುದಾದರೆ ದರವನ್ನು ಯಾವುದಕ್ಕೆ ಹೋಲಿಸಬಹುದು ?
5.ಭೂಮಿ ಮತ್ತು ಚಂದ್ರನ ನಡುವೆ ವರ್ತಿಸುತ್ತಿರುವ ಗುರುತ್ವ ಬಲ ಚಂದ್ರನ ಚಲನೆಯನ್ನು ನಿಯಂತ್ರಿಸುತ್ತಿದೆ .ಈ ಬಲ ಇಲ್ಲದಿದ್ದರೆ ಚಂದ್ರನ ಚಾಲನೆ ಹೇಗಿರುತ್ತಿತ್ತು?
ಗುರುತ್ವ
ಚಟುವಟಿಕೆಯ ಫಲಿತಾಂಶ
ಗುರುತ್ವ
ಕಲಿಕಾ ಫಲ -3
ಚಲನೆಯ ಎರಡನೇ ನಿಯಮ ಬಳಸಿ ಭೂಮಿಯ ಸುತ್ತ ಚಂದ್ರನ ಚಲನೆ, ಸೂರ್ಯನ ಸುತ್ತ ಭೂಮಿಯ ಚಲನೆ ಇವುಗಳಿಗೆ ಸಮರ್ಥನೆ ನೀಡುವೆ .
ಗುರುತ್ವ
ಉತ್ತರಿಸಿ
1. ಮೇಲೆ ಎಸೆದ ವಸ್ತುಗಳು ಯಾಕೆ ಕೆಳಗೆ ಬೀಳುತ್ತವೆ ?
2. ಗುರುತ್ವ ಬಲ ಎಂದರೇನು ?
3. ಭೂಮಿಯು ಚಂದ್ರನನ್ನು ಏಕೆ ಆಕರ್ಷಿಸುವುದಿಲ್ಲ ?
ಚಟುವಟಿಕೆ 3.1
ಎರಡೂ ಕಾಯಗಳ ನಡುವೆ ಇರುವ ಬಲ ಒಂದೇ ಅದರೂ ನ್ಯೂಟನ್ನನ ಎರಡನೇ ನಿಯಮದ ಪ್ರಕಾರ ಕಡಿಮೆರಾಶಿ ಇರುವ. ವೇಗೋತ್ಕರ್ಷಗೊಳ್ಳುತ್ತವೆ ಆದ್ದರಿಂದ ಚಂದ್ರನ ಚಲನೆ ನಮಗೆ ಕಾಣಿಸುತ್ತದೆ.
ಬೇಕಾಗುವ ವಸ್ತುಗಳು: ಒಂದು ಮರದಹಲಗೆ, ಒಂದುಕಬ್ಬಿಣದ ಗುಂಡು, ಒಂದು ಟೆನ್ನಿಸ್ ಚಂಡು
ವಿಧಾನ: ಮರದ ಹಲಗೆಯಿಂದ ಮೆಟ್ಟಿಲನ ಮೇಲೆ ಒಂದು ಇಳಿಜಾರನ್ನು ನಿರ್ಮಿಸು. ಕಬ್ಬಿಣದ ಗುಂಡು ಮತ್ತು ಚಂಡನ್ನು ಇಳಿಜಾರಿನ ಮೇಲೆ ಇಟ್ಟು ಅದು ಚಲಿಸದಂತೆ ಒಂದು ರಟ್ಟಿನಿಂದ ತಡೆಯೊಡ್ಡು. ಈಗ ತಡೆ ತೆರವುಗೊಳಿಸು.
ಗುಂಡು ಮತ್ತು ಚಂಡು ಏಕಕಾಲಕ್ಕೆ ಉರಳತೊಡಗುತ್ತವೆ.
ಯಾವುದು ಹೆಚ್ಚು ದೂರ ಚಲಿಸಿದೆ ಎಂದು ವೀಕ್ಷಿಸಿ
ಕಾರಣ ಚರ್ಚಿಸಿ
2. ಭೂಮಿಯು ಸೇಬಿನ ಮೇಲೆ ಹೆಚ್ಚು ಬಲವನ್ನು ಪ್ರಯೋಗಿಸಿದೆಯೇ ಅಥವಾ ಸೇಬು ಭೂಮಿಯ ಮೇಲೆ ಹೆಚ್ಚು ಬಲವನ್ನು ಪ್ರಯೋಗಿಸಿದೆಯೇ?
3. M" ಭೂಮಿಯ ದ್ರವ್ಯರಾಶಿಯಾಗಿದ್ದರೆ ಮತ್ತು "m" ಸೇಬಿನ ದ್ರವ್ಯರಾಶಿಯಾಗಿದ್ದರೆ , ಭೂಮಿಯ ಕಾರಣದಿಂದಾಗಿ ಸೇಬಿನ ಮೇಲೆ ಉಂಟಾಗುವ ವೇಗೋತ್ಕರ್ಷ ಏಷ್ಟು?
ಕಲಿಕಾ ಫಲ -4
ನ್ಯೂಟೋನ್ ನ ವಿಶ್ವ ವ್ಯಾಪ್ತಿ ಗುರುತ್ವದ ನಿಯಮವನ್ನು ಅರ್ಥೈಸುವೆ .
ನ್ಯೂಟನ್ ನ ವಿಶ್ವ ವ್ಯಾಪ್ತಿ ಗುರುತ್ವ ನಿಯಮ
ವಿಶ್ವದಲ್ಲಿರುವ ಪ್ರತಿಯೊಂದು ವಸ್ತುವು ಪ್ರತಿಯೊಂದು ಇತರೆ ವಸ್ತುವನ್ನು ಬಲವೊಮದರಿಂದ ಆಕರ್ಷಿಸುತ್ತದೆ.ಈ ಬಲವು ಅವುಗಳ ರಾಶಿಗಳ ಗುಣಲಬ್ಧಕ್ಕೆ ನೇರ ಅನುಪಾತದಲ್ಲಿ ಹಾಗೂ ಅವುಗಳ ನಡುವಿನ ದೂರದ ವರ್ಗಕ್ಕೆವಿಲೋಮಾನುಪಾತದಲ್ಲಿ ಇರುತ್ತದೆ. ಈ ಬಲವು ಎರಡು ವಸ್ತುಗಳ ಕೇಂದ್ರಗಳನ್ನು ಸೇರಿಸುವ ರೇಖೆಯ . ನೇರದಲ್ಲಿರುತ್ತದೆ
ಕಲಿಕಾ ಫಲ 4
ವಿಶ್ವವ್ಯಾಪಿ ಗುರುತ್ವ ನಿಯಮ
ವಿಶ್ವವ್ಯಾಪಿ ಗುರುತ್ವ ನಿಯಮ
ಒಂದಕ್ಕೊಂದು D ಅಂತರದಲ್ಲಿರಲಿ. ಈ ಎರಡು ವಸ್ತುಗಳ ನಡುವಿನ ಆಕರ್ಷಣಾ ಬಲವು F ಆಗಿರಲಿ, ವಿಶ್ವವ್ಯಾಪಿ ಗುರುತ್ವ ನಿಯಮದ ಆಧಾರದ ಮೇಲೆ, ಎರಡು ವಸ್ತುಗಳ ನಡುವಿನ ಆಕರ್ಷಣಾ ಬಲವು ಅವುಗಳ ರಾಶಿಗಳ ಗುಣಲಬ್ಧಕ್ಕೆ ನೇರ ಅನುಪಾತದಲ್ಲಿರುತ್ತದೆ.
F a M x m (10.1)
ಸಮೀಕರಣ (10.1) ಮತ್ತು (10.2) ನ್ನು ಸಂಯೋಜಿಸಿದಾಗ
ಇಲ್ಲಿ G ಎಂಬುದು ಅನುಪಾತೀಯ ಸ್ಥಿರಾಂಕವಾಗಿದ್ದು ಅದನ್ನು ವಿಶ್ವ ವ್ಯಾಪಿ ಗುರುತ್ವ ಸ್ಥಿರಾಂಕ ಎನ್ನುವರು. ಓರೆಯಾಗಿ ಗುಣಿಸಿದಾಗ ಸಮೀಕರಣ (10.4) ವನ್ನು ಹೀಗೆ ಬರೆಯಬಹುದು,
F x d2 = G M x m
ವಿಶ್ವವ್ಯಾಪಿ ಗುರುತ್ವ ನಿಯಮದ ಪ್ರಾಮುಖ್ಯತೆ
ಅಸಂಬಂಧಿತ ಎಂದು ಪರಿಗಣಿಸಲಾದ ಅನೇಕ ವಿದ್ಯಮಾನಗಳಿಗೆ ವಿಶ್ವವ್ಯಾಪಿ ಗುರುತ್ವ ನಿಯಮವು ಯಶಸ್ವಿಯಾದ ವಿವರಣೆಯನ್ನು ನೀಡಿತು.
i) ನಮ್ಮನ್ನು ಭೂಮಿಗೆ ಬಂಧಿಸಿರುವ ಬಲ
ii) ಭೂಮಿಯ ಸುತ್ತ ಚಂದ್ರನ ಚಲನೆ
iii) ಸೂರ್ಯನ ಸುತ್ತ ಗ್ರಹಗಳ ಚಲನೆ
iv) ಸೂರ್ಯ ಮತ್ತು ಚಂದ್ರರಿಂದಾಗುವ ಉಬ್ಬರ ಇಳಿತಗಳು.
ಕಂಡುಹಿಡಿಯಿರಿ
ಎರಡು ಕಾಯಗಳ ರಾಶಿಗಳು 1kg ಮತ್ತು ಆ ಕಾಯಗಳ ನಡುವಿನ ದೂರ 1ಮೀಟರ್ ಇದ್ದಾಗ ಆ ಕಾಯಗಳ ನಡುವೆ ವರ್ತಿಸುತ್ತಿರುವ ಗುರುತ್ವ ಬಲಗಳ ನ್ನು ಲೆಕ್ಕಿಸು .
ಚಟುವಟಿಕೆ 4.1
ಕಾಯಗಳ ರಾಶಿ ಹೆಚ್ಚಿಸಿದಾಗ ಗುರುತ್ವ ಬಲದ ಪರಿಮಾಣ ಮಾದರಿಯಂತೆ ಕಂಡುಹಿಡಿದು ಕೋಷ್ಠಕ ತುಂಬು
ಕಲಿಕಾ ಫಲ 5
ಸ್ವತಂತ್ರ ಪತನ ,ಗುರುತ್ವ ವೇಗೋತ್ಕರ್ಷ ಹಾಗು ಗುರುತ್ವ ಬಲಗಳಿಗೆ ಸಂಬಂಧ ಕಲ್ಪಿಸುವೆ .
ಭೂಗುರುತ್ವ ವೇಗೋತ್ಕರ್ಷ:
ಭೂಮಿಯು ಈ ಬಲದಿಂದ m ರಾಶಿಯುಳ್ಳ ಕಾಯಗಳನ್ನು g ಯಷ್ಟು ವೇಗೋತ್ಕರ್ಷಿತ ಗೊಳಿಸುತ್ತಾ ತನ್ನ ಕಡೆ ಬೀಳುವಂತೆ ಮಾಡುತ್ತದೆ.
ನ್ಯೂಟನ್ನನ ಚಲನೆಯ ನಿಯಮದಂತೆ F=mg…………(1)
ಈ ಬಲವು ಗುರುತ್ವ ಬಲಕ್ಕೆ ಸಮ
ಆದ್ದರಿಂದ ಗುರುತ್ವಬಲ F= GM m ……………….(2)
ಸಮೀಕರಣ (1) ಮತ್ತು (2) ರಿಂದ
m g = GM m / R2
g = GM/R2
ಮುಕ್ತ ಪತನ
ಚಟುವಟಿಕೆ
ಕಾರಣ
ಚಟುವಟಿಕೆ-5.1
ಸ್ವತಂತ್ರ ಪತನ ಎಂದರೇನು? ಚಿತ್ರ ನೋಡಿ ವಿವರಿಸಿ
1. ಇಲ್ಲಿ ಕಾಯಗಳು ಕೆಳ ಕ್ಕೆ ಬೀಳಲು ಕಾರಣವೇನು? ವಸ್ತುಗಳು ಕೆಳಕ್ಕೆ ಬೀಳಲು
ನಾವು ಬಲ ಪ್ರಯೋಗಿಸಬೇಕೇ?
2. ಈ ಕಾಯಗಳು ಮೇಲ್ಮುಖವಾಗಿ ಚಲಿಸುವ ಕಾಯಗಳಿಗಿಂತ ಹೆಚ್ಚು
ವೇಗೋತ್ಕರ್ಷಿತವಾಗಿರುತ್ತವೆ. ಏಕೆ? ಈ ವೇಗೋತ್ಕರ್ಷವನ್ನು ಏನೆಂದು
ಕರೆಯುತ್ತಾರೆ?
ಕಲಿಕಾ ಫಲ -6
ವಸ್ತುವಿನ ರಾಶಿ ಸ್ಥಿರವಾಗಿದ್ದರೂ ತೂಕವು ಗುರುತ್ವಬಲದ ನಿಯಮಕ್ಕೆ ಒಳಪಟ್ಟು ಹೇಗೆ ಬದಲಾಗುತ್ತದೆ . ಎನ್ನುವುದಕ್ಕೆ ಸ್ಪಷ್ಟಿಕರಣ ನೀಡುವೆ
g ಬೆಲೆಯನ್ನು ಲೆಕ್ಕ ಹಾಕುವುದು
'g' ಬೆಲೆಯನ್ನು ಕಂಡು ಹಿಡಿಯಲು G, M ಮತ್ತು R ನ ಉಪಯೋಗಿಸಿಕೊಳ್ಳಬೇಕು.
ವಿಶ್ವವ್ಯಾಪಿ ಗುರುತ್ವ ಸ್ಥಿರಾಂಕ G= 6.7 x 10-11Nm2Kg-2
ಭೂಮಿಯ ರಾಶಿ M= 6 x 1024Kg ಮತ್ತು
ಭೂಮಿಯ ತ್ರಿಜ್ಯ R= 6.4 x 106m
M
R2
g = G
6.7 x 10-11Nm2Kg-2 x 6 x 1024Kg
(6.4 x 106m)2
=
= 9.8 ms-2
ಹೀಗೆ, ಭೂಗುರುತ್ವ ವೇಗೋತ್ಕರ್ಷದ ಬೆಲೆ = 9.8 ms-2
ಚಟುವಟಿಕೆ 6.1
ಸೂತ್ರ ಬಳಸಿ g ಯ ಬೆಲೆಯನ್ನು ಲೆಕ್ಕಿಸಿ.
�ಭೂಮಿಯ ಗುರುತ್ವಾಕರ್ಷಣ ಬಲದಿಂದ ವಸ್ತುಗಳ ಚಲನೆ�
ಎಲ್ಲಾ ವಸ್ತುಗಳು ಟೊಳ್ಳಾಗಿರಲಿ ಅಥವಾ ಗಟ್ಟಿಯಾಗಿರಲಿ, ದೊಡ್ಡದಾಗಿರಲಿ ಅಥವಾ ಚಿಕ್ಕದಾಗಿರಲಿ,ಎತ್ತರದಿಂದ ಒಂದೇ ದರದಲ್ಲಿ ಬೀಳುತ್ತವೆ ಎಂಬುದನ್ನು ಒಂದು ಚಟುವಟಿಕೆ ಮಾಡುವ ಮೂಲಕ ಅರ್ಥೈಸಿಕೊಳ್ಳೊಣ.
ಚಟುವಟಿಕೆ
ಇದಕ್ಕೆ ಕಾರಣ ಗಾಳಿಯ ರೋಧ.
�ಭೂಮಿಯ ಗುರುತ್ವಾಕರ್ಷಣ ಬಲದಿಂದ ವಸ್ತುಗಳ ಚಲನೆ�
ಭೂಮಿಯ ಸಮೀಪ g ನ ಮೌಲ್ಯ ಸ್ಥಿರವಾಗಿರುವುದರಿಂದ ಏಕರೂಪ ವೇಗೋತ್ಕರ್ಷವಿರುವ ವಸ್ತುವಿನ ಚಲನೆಯ ಎಲ್ಲಾ ಸಮೀಕರಣಗಳು ವೇಗೋತ್ಕರ್ಷ a ನ್ನು g ಗೆ ಬದಲಾಯಿಸಿದಾಗ ಸಮ್ಮತವಾಗಿರುತ್ತವೆ.
u ಎಂಬುದು ಆರಂಭಿಕ ವೇಗ,
v ಎಂಬುದು ಅಂತಿಮ ವೇಗ,
s ಎಂಬುದು t ಸಮಯದಲ್ಲಿ ಕ್ರಮಿಸಿದ ದೂರ.
ಸಮೀಕರಣಗಳು:
�ಭೂಮಿಯ ಗುರುತ್ವಾಕರ್ಷಣ ಬಲದಿಂದ ವಸ್ತುಗಳ ಚಲನೆ�
ಉದಾಹರಣೆ:
ಒಂದು ವಸ್ತುವನ್ನು ಲಂಬವಾಗಿ ಮೇಲಕ್ಕೆ ಎಸೆದಾಗ ಅದು 10 m ಎತ್ತರವನ್ನು ತಲುಪುತ್ತದೆ, ಹಾಗಾದರೆ
ಪರಿಹಾರ :ಚಲಿಸಿದ ದೂರ, s =10 m
ಅಂತಿಮ ವೇಗ, v = 0ms-1
ಗುರುತ್ವ ವೇಗೋತ್ಕರ್ಷ, g = 9.8 ms-2
ವಸ್ತುವಿನ ವೇಗೋತ್ಕರ್ಷ, g = -9.8 ms-2. (ಮೇಲ್ಮುಖ ಚಲನೆ)
i) v2 = u2 + 2as
0 = u2 + 2 x (-9.8 ms-2) x 10 m
-u2 = -2 x 9.8 x 10 ms-2
u = 196 ms-1
u = 14 ms-1
ii) v = u + at
0 = 14 ms-1 - 9.8 ms-2 x t
t = 1.43 s.
ಹೀಗೆ, (i) ಆರಂಭಿಕ ವೇಗ, u = 14 ms-1 ಮತ್ತು
(ii) ತೆಗೆದುಕೊಂಡ ಕಾಲ t = 1.43 s.
ಕಲಿಕಾ ಫಲ -7
ರಾಶಿ ಮತ್ತಿ ತೂಕಗಳ ಸಂಬಂಧ ತಿಳಿಯುವೆ
ಗುರುತ್ವ:
ರಾಶಿ
ತೂಕ
ಗುರುತ್ವ:
ತೂಕ
ರಾಶಿ - ತೂಕ ಕುರಿತು
Is mass the same as weight?
Why do you weigh less on the moon?
ಬೇಕಾಗುವ ವಸ್ತುಗಳು:- ಸ್ಪ್ರಿಂಗ್ ಬ್ಯಾಲೆನ್ಸ್ , , ಗಾಜಿನ ನೀರಿನ ತೊಟ್ಟಿ
ವಿಧಾನ:- ಚಿತ್ರದಲ್ಲಿ ತೋರಿಸಿರುವಂತೆ ಕಲ್ಲನ್ನು ಸ್ಪ್ರಿಂಗ್ ಬ್ಯಾಲೆನಸ್ ಗೆ ನೇತು ಹಾಕಿ. ಸೂಚಕದ ಅಳತೆ ನೋಡಿ. ಈಗ
ಕಲ್ಲನ್ನು ಚಿತ್ರದಲ್ಲಿ ತೋರಿಸಿರುವಂತೆ ನೀರಿನಲ್ಲಿ ಮುಳುಗಿಸಿದಾಗ ಕಡಿಮೆ ಅಳತೆ ತೋರಿಸುತ್ತದೆ.
ನೀರಿನ ಮಟ್ಟದಲ್ಲಿ ಏರಿಕೆಯಾಗಲು ಕಾರಣವೇನು?
ಚಿತ್ರದಲ್ಲಿ ಉದಾಹರಣೆ ನೋಡಿದಾಗ ಕಲ್ಲು ಸ್ಪ್ರಿಂಗ್ ಮೇಲೆ 0.67N ಬಲ ಪ್ರಯೋಗಿಸುತ್ತದೆ. ನೀರಿನಲ್ಲಿ
ಮುಳುಗಿಸಿದಾಗ ಕೇವಲ ೦ ಬಲ ಪ್ರಯೋಗಿಸಿತ್ತದೆ.
ಹಾಗಾದರೆ ಬಲದ ವ್ಯತ್ಯಾಸ 0.67.N , N=0.27N
ಹಾಗಾದರೆ 0.27ಏನನ್ನು ¸ ಸೂ ಚಿಸುತ್ತದೆ
ರಾಶಿ ಮತ್ತು ತೂಕಗಳ ನಡುವಿನ ಸಂಬಂಧ
ಚಟುವಟಿಕೆ 7.1
ಗುರುತ್ವ:
�ಚಂದ್ರನ ಮೇಲೆ ಒಂದು ವಸ್ತುವಿನ ತೂಕ�
ಒಂದು ವಸ್ತುವಿನ ರಾಶಿ m .
ಚಂದ್ರನ ಮೇಲೆ ಅದರ ತೂಕ Wm ಆಗಿರಲಿ.
ಚಂದ್ರನ ರಾಶಿ Mm ಆಗಿರಲಿ
ತ್ರಿಜ್ಯ Rm ಆಗಿರಲಿ.
Mm x m
R2 m
Wm = G
�ಚಂದ್ರನ ಮೇಲೆ ಒಂದು ವಸ್ತುವಿನ ತೂಕ�
ಒಂದು ವಸ್ತುವಿನ ರಾಶಿ 10Kg. ಭೂಮಿಯ ಮೇಲೆ ಅದರ ತೂಕವೆಷ್ಟು ?
ಪರಿಹಾರ : ರಾಶಿ, m = 10kg
ಗುರುತ್ವದಿಂದ ವೇಗೋತ್ಕರ್ಷ, g = 9.8 ms-2
W = m x g
W = 10kg x 9.8 ms-2 = 98N
ಹೀಗೆ, ಆ ವಸ್ತುವಿನ ತೂಕ 98 N
ಬರೆಯಿರಿ
1. ಒಂದು ವಸ್ತುವಿನ ರಾಶಿ ಮತ್ತು ಅದರ ತೂಕ. ಇವುಗಳ ನಡುವಿನ ವ್ಯತ್ಯಾಸವೇನು ?
2. ಚಂದ್ರನ ಮೇಲೆ ಒಂದು ವಸ್ತುವಿನ ತೂಕವು ಭೂಮಿಯ ಮೇಲೆ ಅದರ ತೂಕದ 1 / 6 ರಷ್ಟಿರುತ್ತದೆ. ಏಕೆ ?
ಉತ್ತರಿಸಿ
ಒಂಟೆಯು ಮರುಭೂಮಿಯಲ್ಲಿ ಸುಲಭವಾಗಿ ಓಡುವುದು ನಿಮಗೆ ಆಶ್ಚರ್ಯವೆನಿಸುವುದಲ್ಲವೇ?
ಕಲಿಕಾ ಫಲ -8
ನೂಕುಬಲ ಮತ್ತು ಒತ್ತಡಕ್ಕಿರುವ ಸಂಬಂಧ ತಿಳಿಯುವೆ .
ಚಟುವಟಿಕೆ 8.1
ಬೇಕಾಗುವ ವಸ್ತುಗಳು : ಒಂದು ಗುಂಡು ಸೂಜಿ , ಒಂದು ಗಾಳಿ ತುಂಬಿದ ಬಲೂನು
ವಿಧಾನ:
1. ಗಾಳಿ ತುಂಬಿದ ಬಲೂನನ್ನು ಅಂಗೈಗಳಿಂ ದ ಒತ್ತಿದಾಗ ಬಲೂನಿನ ಆಕಾರ ಸ್ವಲ್ಪ ಬದಲಾಗುತ್ತದೆ.
2. ಬಲೂನನ್ನು ಇನ್ನೂ ಹೆಚ್ಚಾಗಿ ಒತ್ತಿದರೆ ಬಲೂನು ಒಡೆಯಲು ಕಾರಣವೇನು?
3. ಬಲೂನನ್ನು ಗುಂಡು¸ ಸೂ ಜಿಯಿಂದ ಚುಚ್ಚಿದಾಗ ಬಲೂನು ಒಡೆಯಲು ಕಾರಣವೇನು?
ಮೇಲಿನ ಮೂರು ಸನ್ನಿವೇಶಗಳಿಂದ ನಮಗೆ ತಿಳಿಯುವುದೇನೆಂದರೆ ಒತ್ತಡವು ಬಲದ ಪರಿಮಾಣಕ್ಕೆ ನೇರ
ಅನುಪಾತದಲ್ಲಿದೆ ಮತ್ತು ವಿಸ್ತೀರ್ಣಕ್ಕೆ ವಿಲೋಮಾನುಪಾತದಲ್ಲಿದೆ.
ಒತ್ತಡ α ಬಲ/ವಿಸ್ತೀರ್ಣ
P α F/A
ಒತ್ತಡದ ಏಕಮಾನ N/m2 ಅಥವ ಪ್ಯಾಸ್ಕಲ್
ನೂಕು ಬಲ ಮತ್ತು ಒತ್ತಡ
ನೂಕುಬಲ
ವಿಸ್ತೀರ್ಣ
ಒತ್ತಡ =
ನೂಕು ಬಲ ಮತ್ತು ಒತ್ತಡ
=
ಉದಾಹರಣೆ: ಒಂದು ಮೇಜಿನ ಮೇಲ್ಮೈ ಮೇಲೆ ಒಂದು ಮರದ ತುಂಡನ್ನು ಇಡಲಾಗಿದೆ, ಈ ಮರದ ತುಂಡಿನ ತೂಕ 5Kg ಮತ್ತು ಅದರ ಆಯಾಮಗಳು 40cm x 20cm x 10cm ಆಗಿದೆ, ಮರದ ತುಂಡನ್ನು ಮೇಜಿನ ಮೇಲೆ (a) 20cm x 10cm ಆಯಾಮದ ಬಾಹುಗಳಿರುವಂತೆ ಇಟ್ಟಾಗ ಅದು ಮೇಜಿನ ಮೇಲೆ ಹಾಕುವ ಒತ್ತಡವನ್ನು ಲೆಕ್ಕಿಸಿ.
20cm x 10cm ಆಯಾಮದ ಭಾಗವು 2450 Nm-2 ಒತ್ತಡವನ್ನು ಹಾಕುತ್ತದೆ.
ಪರಿಹಾರ : ನೂಕುಬಲ , F = m x g
= 5 kg x 9.8 ms-2
= 49 N
ಒಂದು ಭಾಗದ ವಿಸ್ತೀರ್ಣ = ಉದ್ದ x ಅಗಲ
=20 cm x 10 cm
=200 cm2 = 0.02m2
ಸಮೀಕರಣ (10.20)ರಿಂದ
ನೂಕುಬಲ
ವಿಸ್ತೀರ್ಣ
ಒತ್ತಡ =
2450 Nm-2
0.02m2
=
49N
ಘನ ,ದ್ರವ ,ಅನಿಲಗಳಲ್ಲಿ ಒತ್ತಡ ( ಚಟುವಟಿಕೆ 8.2)
ಬೇಕಾಗುವ ವಸ್ತುಗಳು:
ಪ್ಲಾಸ್ಟಿಕ್ ಹಾಳೆ ಸುತ್ತಿದ ಇಟ್ಟಿಗೆ, ಗೋಧಿಹಿಟ್ಟು ಅಥವಾ
ಒದ್ದೆಯಾದ ಮಣ್ಣು, ಕಾರ್ಡಬೋರ್ಡ ಡಬ್ಬ, ಅಳತೆ ಪಟ್ಟಿ.
ಚಿತ್ರದಲ್ಲಿ ತೋರಿಸಿರುವಂತೆ ಒಂದು ಕಾರ್ಡಬೋರ್ಡ ಡಬ್ಬದಲ್ಲಿ ಅರ್ಧದವರೆಗೆ ಗೋಧಿಹಿಟ್ಟು ಅಥವ
ಹಸಿಮಣ್ಣು ತುಂಬಿ ಪ್ಲಾಸ್ಟಿಕ್ ಹಾಳೆ ಸುತ್ತಿದ ಇಟ್ಟಿಗೆಯನ್ನು ಒಂದು ಬಾರಿ ಅಡ್ಡವಾಗಿ ಇಟ್ಟು ಎಷ್ಟು ಆಳಕ್ಕೆ ಹಳ್ಳ ಬಿದ್ದಿದೆ ಎಂದು ಅಳತೆಪಟ್ಟಿಯ ¸ ಸಹಾಯದಿಂದ ಅಳೆ . ಪುನಃ ಇದೇ ಪ್ರಯೋಗವನ್ನು ಇಟ್ಟಿಗೆಯನ್ನು ಲಂಬವಾಗಿಟ್ಟು ಪುನರಾವರ್ತಿಸಿ.
1.ಇಟ್ಟಿಗೆಯಿಂದ ಯಾವಾಗ ಹೆಚ್ಚು ಒತ್ತಡ ಉಂಟಾಗುತ್ತದೆ?ಏಕೆ?
2.ವಿಸ್ತೀರ್ಣ ,ಬಲ ಹಾಗು ಒತ್ತಡಕ್ಕಿರುವ ಸಂಬಂಧವೇನು ?
ಘನ ವಸ್ತುಗಳಲ್ಲಿ ಒತ್ತಡ
ಚಟುವಟಿಕೆ 8.3
ದ್ರವಗಳಲ್ಲಿ ಒತ್ತಡ
ಚಟುವಟಿಕೆ 8.4
ದ್ರವಗಳಲ್ಲಿ ಆಳ ಮತ್ತು ಒತ್ತಡಕ್ಕೆ ಇರುವ ಸಂಬಂ ಧ
ಬೇಕಾದ ವಸ್ತುಗಳು : ಖಾಲಿ ಪ್ಲಾಸ್ಟಿಕ್ ನೀರಿನ ಬಾಟಲಿ, ಬೇಸನ್(ತಟ್ಟೆ)
ಒಂದು ಉಪಯೋಗಿಸಿದ ಒಂದು ಲೀಟರ್ ನೀರಿನ ಖಾಲಿ
ಪ್ಲಾಸ್ಟಿಕ್ ಒಂದೇ ನೇರದ ಬೇರೆ ಬೇರೆ ಎತ್ತರಗಳಲ್ಲಿ ರಂದ್ರಗಳನ್ನು
ಮಾಡು. ಆ ರಂದ್ರಗಳನ್ನು ಬೆರಳಿನಿಂದ ಮುಚ್ಚಿ ನೀರನ್ನು ತುಂಬು. ಪ್ಲಾಸ್ಟಿಕ್
ಬಾಟಲಿಯನ್ನುಒಂದು ತಟ್ಟೆಯ ಮೇಲಿಟ್ಟು ಬೆರಳುಗಳನ್ನು ತೆಗೆ. ರಂದ್ರದಿಂದ
ಚಿಮ್ಮುವ ನೀರಿನ ಧಾರೆಯನ್ನು ಗಮನಿಸು.
1. ನೀರು ಅತ್ಯಂತ ದೂರಕ್ಕೆ ಎಲ್ಲಿ ಚಿಮ್ಮುತ್ತಿದೆ, ಚಿತ್ರದಲ್ಲಿ ಗುರುತಿಸು .
2. ಬಾಟಲಿಯ ಯಾವ ಭಾಗದಲ್ಲಿ ನೀರಿನ ಒತ್ತಡ ಹೆಚ್ಚಾಗಿದೆ?
ಚಟುವಟಿಕೆ 8.5
ಬೇಕಾಗುವ ವಸ್ತುಗಳು : ಇಂಜೆಕ್ಷನ್ ಸಿರಿಂಜ್, ಅತ್ಯಂತ ಸಣ್ಣ ಬಲೂನು
1. ಚಿತ್ರದಲ್ಲಿ ತೊರಿಸಿರುವಂತೆ ದೊಡ್ಡ ಸಿರಿಂಜ್ ನಲ್ಲಿ ಸಣ್ಣ ಗಾಳಿ ತುಂಬಿ ದಾರದಿಂದ ಗಂಟು ಹಾಕಿದ
ಬಲೂನನ್ನು ಇಡಿ. ಪ್ಲಂಜರನ್ನು ಒಳಕ್ಕೆ ತಳ್ಳಿ. ಬಲೂನಿನ ಗಾತ್ರದಲ್ಲಿ ಆದ ಬದಲಾವಣೆ ಏನು?
2. ಈಗ ಪ್ಲಂಜರನ್ನು ಹೊರಕ್ಕೆ ಎಳೆಯಿರಿ. ಬಲೂನಿನ ಗಾತ್ರದಲ್ಲಿ ಆದ ಬದಲಾವಣೆ ಏನು?
3.ಇದಕ್ಕೆ ಕಾರಣವನ್ನು ಚರ್ಚಿಸಿ
ಅನಿಲಗಳಲ್ಲಿ ಒತ್ತಡ
ಉತ್ತರಿಸಿ
ಒಂದು ಮೇಜಿನ ಮೇಲ್ಮೈ ಮೇಲೆ ಒಂದು ಮರದ ತುಂಡನ್ನು ಇಡಲಾಗಿದೆ, ಈ ಮರದ ತುಂಡಿನ ತೂಕ 5Kg ಮತ್ತು ಅದರ ಆಯಾಮಗಳು 40cm x 20cm x 10cm ಆಗಿದೆ, ಮರದ ತುಂಡನ್ನು ಮೇಜಿನ ಮೇಲೆ 40cm x 20cm ಆಯಾಮದ ಬಾಹುಗಳಿರುವಂತೆ ಇಟ್ಟಾಗ ಅದು ಮೇಜಿನ ಮೇಲೆ ಹಾಕುವ ಒತ್ತಡವನ್ನು ಲೆಕ್ಕಿಸಿ.
ಗುರುತ್ವ
ಹರಿಯುವ ಪದಾರ್ಥಗಳಲ್ಲಿ ಒತ್ತಡ
ಉತ್ತರಿಸಿ:
ನೀವು ಯಾವಾಗಲಾದರೂ ಈಜುಕೊಳದಲ್ಲಿ ಈಜುವಾಗ ಹಗುರವಾಗಿರುವಂತೆ ಅನುಭವವಾಗಿದೆಯೇ?
ಕಲಿಕಾ ಫಲ -9
ಪ್ಲವನತೆಯನ್ನು ವಿವರಿಸುವೆ ಮತ್ತು ಇದರ ಆಧಾರದ ಮೇಲೆ ವಸ್ತುಗಳು ಮುಳುಗಲು ಅಥವಾ ತೇಲಲು ಕಾರಣವನ್ನು ವಿವೇಚಿಸುವೆ
ಪ್ಲವನತೆ
ಒಂದು ಚಟುವಟಿಕೆಯನ್ನು ಮಾಡುವ ಮೂಲಕ ಪ್ಲವನತೆಯ ಅರ್ಥವನ್ನು ತಿಳಿದುಕೊಳ್ಳೋಣ.
ಚಟುವಟಿಕೆ
ಪ್ಲವನತೆ
ಬೇಕಾಗುವ ವಸ್ತುಗಳು: ಖಾಲಿ ಪ್ಲಾಸ್ಟಿಕ್ ಬಾಟಲಿ,ನೀರಿನ ತೊಟ್ಟಿ
ವಿಧಾನ: ಚಿತ್ರದಲ್ಲಿ ತೋರಿಸಿರುವಂತೆ ಮುಚ್ಚಳ ಹಾಕಿದ ಖಾಲಿ ಬಾಟಲಿಯನ್ನು ನೀರಿನ ತೊಟ್ಟಿಯಲ್ಲಿ ಮುಳುಗಿಸಲು
ಪ್ರಯತ್ನಿಸಿ.
ಬಾಟಲಿ ಮುಳುಗುತ್ತದೆಯೊ ,ತೇಲುತ್ತದೆಯೋ?. ವೀಕ್ಷಿಸಿ.ಈ ಪ್ರಯೋಗವನ್ನು ಬಾಟಲಿಯನ್ನು ನೀರಿನ ಬೇರೆ ಆಳ ದಲ್ಲಿ ಮುಳುಗಿಸಲು ಪ್ರಯತ್ನಿಸಿ.
ನೀವು ಎಷ್ಟು ಬಲ ಪ್ರಯೋಗಿಸುತ್ತೀರೋ ಅಷ್ಟೇ ಪ್ರಮಾಣದಲ್ಲಿ ಬಾಟಲಿ
ಮೇಲೇರಲು ಪ್ರಯತ್ನಿಸು ತ್ತದೆ.
ಇದಕ್ಕೆ ಕಾರಣವನ್ನು ನಿಮ್ಮ ಶಿಕ್ಷಕರೊಂದಿಗೆ ಚರ್ಚಿಸಿ.
�ನೀರಿನಲ್ಲಿ ಮೇಲ್ಮೈ ಮೇಲೆ ವಸ್ತುಗಳನ್ನು ಇಟ್ಟಾಗ ಅವು ತೇಲುವುದೇಕೆ? ಅಥವಾ ಮುಳುಗುವುದೇಕೆ ?�
ಮೇಲಿನ ಈ ಪ್ರಶ್ನೆಗೆ ಕೆಳಗಿನ ಚಟುವಟಿಕೆಗಳನ್ನು ಮಾಡುವುದರಿಂದ ಉತ್ತರವನ್ನು ಪಡೆಯಬಹುದು.
ಚಟುವಟಿಕೆ :-
�ನೀರಿನಲ್ಲಿ ಮೇಲ್ಮೈ ಮೇಲೆ ವಸ್ತುಗಳನ್ನು ಇಟ್ಟಾಗ ಅವು ತೇಲುವುದೇಕೆ? ಅಥವಾ ಮುಳುಗುವುದೇಕೆ?�
ಉತ್ತರಿಸಿ:
1. ಒಂದು ತೆಳುವಾದ ಮತ್ತು ಬಲಿಷ್ಟವಾದ ದಾರದಿಂದ ಮಾಡಲ್ಪಟ್ಟ ಒಂದು ಶಾಲಾ ಬ್ಯಾಗ್‍ನ ಪಟ್ಟಿಯನ್ನು ಹಿಡಿದುಕೊಳ್ಳುವುದು ಕಷ್ಟಕರ. ಏಕೆ?
2. ಪ್ಲವನತೆ ಎಂದರೇನು ?
3. ನೀರಿನ ಮೇಲಿಟ್ಟ ವಸ್ತುವೊಂದು ತೇಲಲು ಅಥವಾ ಮುಳುಗಲು ಕಾರಣವೇನು ?
ಪ್ಲವನತೆ ಕುರಿತು
What is Buoyancy?
Archimedes Principle
� ಕಲಿಕಾ ಫಲ 10 : ಆರ್ಕಿಮಿಡೀಸ್ ತತ್ವ�
ಚಟುವಟಿಕೆ:
ಕಲಿಕಾ ಫಲ 10
ಆರ್ಕಿಮೀಡೀಸ್ ತತ್ವವನ್ನು ನಿರೂಪಿಸುವೆ .
ಆರ್ಕಿಮಿಡೀಸ್ ತತ್ವ�
ಆರ್ಕಿಮಿಡೀಸ್ ತತ್ವ.:
ಒಂದು ವಸ್ತುವನ್ನು ಸಂಪೂರ್ಣವಾಗಿ ಅಥವಾ ಭಾಗಶಃ ದ್ರವದಲ್ಲಿ ಮುಳುಗಿಸಿದಾಗ, ಅದರಿಂದ ಪಲ್ಲಟಗೊಂಡ ದ್ರವದ ತೂಕದಷ್ಟೇ ಮೇಲ್ಮುಖ ಬಲವನ್ನು ಅದು ಅನುಭವಿಸು ತ್ತದೆ
�ಆರ್ಕಿಮಿಡೀಸ್ ತತ್ವ�
ಫಲಿತಾಂಶ:
ಉತ್ತರಿಸಿ:
1. ಒಂದು ತೂಗು ಯಂತ್ರದ ಮೇಲೆ ನಿಮ್ಮ ರಾಶಿ 42kg ಇರುವುದನ್ನು ಕಾಣುವಿರಿ. ನಿಮ್ಮ ರಾಶಿ 42kg ಗಿಂತ ಹೆಚ್ಚು ಅಥವಾ ಕಡಿಮೆ ಇದೆಯೇ ?
2. ನಿಮ್ಮ ಬಳಿ ತಕ್ಕಡಿಯಲ್ಲಿ ತೂಗಿದ 100kg ರಾಶಿಯಿರುವ ಒಂದು ಹತ್ತಿಯ ಚೀಲ ಮತ್ತು ಒಂದು ಕಬ್ಬಿಣದ ತುಂಡಿದೆ. ವಾಸ್ತವವಾಗಿ ಒಂದು ಇನ್ನೊಂದಕ್ಕಿಂತ ಭಾರವಾಗಿದೆ. ಅವುಗಳಲ್ಲಿ ಯಾವುದು ಭಾರವಾಗಿದೆ ಮತ್ತು ಏಕೆ ಎಂಬುದನ್ನು ಹೇಳುವಿರಾ?
ಸಾಪೇಕ್ಷ ಸಾಂದ್ರತೆ
ವಸ್ತುವಿನಸಾಂದ್ರತೆ
ನೀರಿನ ಸಾಂದ್ರತೆ
ಸಾಪೇಕ್ಷ ಸಾಂದ್ರತೆ =
ಸಾಪೇಕ್ಷ ಸಾಂದ್ರತೆ
ಬೆಳ್ಳಿಯ ಸಾಪೇಕ್ಷ ಸಾಂದ್ರತೆ 10.8 ನೀರಿನ ಸಾಂದ್ರತೆ 103Kgm-3,ಆದರೆ ಅಂತರಾಷ್ಟ್ರೀಯ ಏಕಮಾನದಲ್ಲಿ ಬೆಳ್ಳಿಯ ಸಾಂದ್ರತೆ ಎಷ್ಟು ?
ಉದಾಹರಣೆ:
ಬೆಳ್ಳಿಯ ಸಾಪೇಕ್ಷ ಸಾಂದ್ರತೆ = 10.8
ಬೆಳ್ಳಿಯ ಸಾಂದ್ರತೆ = ಸಾಪೇಕ್ಷ ಸಾಂದ್ರತೆ x ನೀರಿನ ಸಾಂದ್ರತೆ
= 10.803 Kgm-3
ಉತ್ತರಿಸಿ
ಚಿನ್ನದ ಸಾಪೇಕ್ಷ ಸಾಂದ್ರತೆ 10.8 ನೀರಿನ ಸಾಂದ್ರತೆ 103 Kgm-3,ಆದರೆ ಅಂತರಾಷ್ಟ್ರೀಯ ಏಕಮಾನದಲ್ಲಿ ಚಿನ್ನದ ಸಾಂದ್ರತೆ ಎಷ್ಟು ?
ಗುರುತ್ವದ ಕುರಿತು
The Amazing World Of Gravity
ಉತ್ತರಿಸಿ
2. ದ್ರುವಗಳಲ್ಲಿ g ನ ಮೌಲ್ಯವು ¸ ಸಮಭಾಜಕ ವೃತ್ತ ಪ್ರದೇಶಕ್ಕಿಂತ ಹೆಚ್ಚಾಗಿರುತ್ತದೆ.
3. ಸ್ವತಂತ್ರ ಪತನದಲಿ ವಸ್ತುವು ಅನುಭವಿಸುವ ವೇಗೋತ್ಕರ್ಷ ಅದರ ರಾಶಿಯನ್ನು ಅವಲಂಬಿಭಿಸಿರುತ್ತದೆ.
4. ಮೇಲ್ಮೈ ಓರೆಯಾಗಿ ಒಂದು ವಸ್ತುವಿನ ಮೇಲೆ ವರ್ತಿಸು ವ ಬಲವೇ ನೂಕುಬಲ.
ಉತ್ತರಿಸಿ
II. ಕೆಳಗಿನ ಪ್ರತಿಯೊಂದು ಪ್ರಶ್ನೆಗೆ ನಾಲ್ಕು ಆಯ್ಕೆಗಳನ್ನು ನೀಡಲಾಗಿದೆ. ಸೂಕ್ತವಾದ ಒಂದು ಆಯ್ಕೆಯನ್ನು ಆರಿಸಿ ಬರೆಯಿರಿ.
A. ಗುರುತ್ವಾಕರ್ಷಣ ಬಲ .B. ಸ್ನಾಯುಬಲ C. ನೂಕುಬಲ D ಘರ್ಷಣಾಬಲ
2. ನೀರು ತುಂಬಿರುವ ಬೀಕರ್‌ನಲಿ ಮೊಳೆಯನ್ನು ಹಾಕಿದಾಗ ಮುಳುಗುತ್ತದೆ. ಕಾರಣ
B. ಮೊಳೆಯ ಸಾಂದ್ರತೆ ನೀರಿನ ಸಾಂದ್ರತೆಗಿಂತ ಹೆಚ್ಚು
C. ಮೊಳೆಯ ಸಾಂದ್ರತೆ ನೀರಿನ ಸಾಂದ್ರತೆಗಿಂತ ಕಡಿಮೆ
D. ಮೊಳೆಯ ಸಾಂದ್ರತೆಯನ್ನು ನೀರಿನ ಸಾಂದ್ರತೆಗೆ ಹೋಲಿಸಲು ಸಾಧ್ಯವಿಲ್ಲ
ಉತ್ತರಿಸಿ
ಹೊಂದಿಸಿ ಬರೆಯಿರಿ
ಅ -ಪಟ್ಟಿ | ಬ -ಪಟ್ಟಿ | ಉತ್ತರ |
1. ಗುರುತ್ವಾಕರ್ಷಣ ಬಲ | a. Nm-2 | |
.2.ಒತ್ತಡ | b. ms-2 | |
3.ದ್ರವ್ಯರಾಶಿ | c.ms-1 | |
4.ವೇಗೋತ್ಕರ್ಷ | d. N | |
5.ಜವ | e. Kg | |
| f.kgms2 | |
| G .m | |
.ವೈಜ್ಞಾನಿಕ ಕಾರಣ ಕೊಡಿ.
2. ಭೂಮಿಯ ಮೇಲ್ಮೈ ತೂಕ ಹೊಂದಿರುವ ಒಂದು ಕಾಯವು ಚಂದ್ರನ ಮೇಲೆ ಎಷ್ಟು ತೂಕ
ಹೊಂದಿರುತ್ತದೆ?
. ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ.
2 ಭೂಮಿ ಮತ್ತು ಅದರ ಮೇಲ್ಮೈ ಮೇಲಿನ ವಸ್ತುವಿನ ನಡುವಿನ ಗುರುತ್ವಾಕರ್ಷಣೆ ಬಲದ ಪರಿಮಾಣ ಕಂಡು ಹಿಡಿಯುವ ಸೂತ್ರ ಬರೆಯಿರಿ.
. ಈ ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸು
2) ಬಸ್ ಅಥವಾ ಲಾರಿ ಅಗಲವಾದ ಚಕ್ರ ಗಳನ್ನು ಹೊಂದಿರುವುದೇಕೆ?
3) ಜಾತ್ರೆಗಳಲ್ಲಿ ಕೆಲವು ವ್ಯಕ್ತಿಗಳು ಮೊಳೆಗಳ ಪಾದುಕೆಯ ಮೇಲೆ ನಿಂತಿರುತ್ತಾರೆ.ಇದು ಹೇಗೆ ಸಾಧ್ಯ ?
4) ಇಂಜೆಕ್ಷನ್ ಚುಚ್ಚುವಾಗ ಪ್ಲಂಜರನ್ನು ಒತ್ತಲು ಕಾರಣವೇನು? ಇಲ್ಲಿ ಎಷ್ಟು ಬಾರಿ ಒತ್ತಡ ಉಂಟಾಗುತ್ತದೆ? ಅವು ಯಾವುವು?
ಚಟುವಟಿಕೆ
.1. ಒಂದು ವಾರ ನಿನ್ನ ಮನೆಯ ಸುತ್ತ ಚಂದ್ರನ ಸ್ಥಾನವನ್ನು ಗುರುತಿಸು.(ಮನೆಯ ಸುತ್ತ ಗಮನಿಸಿದ ಸ್ಥಾನಗಳನ್ನು ಚಿತ್ರಿಸು ಮತ್ತು ಸಂಖ್ಯೆ ಕೊಡು)
ಯೋಜನಾ ಕಾರ್ಯ
ದಿನ | ಚಂದ್ರನ ಸ್ಥಾನ |
1 | |
2 | |
3 | |
4 | |
5 | |
6 | |
7 | |