1 of 132

Copyrights and Attributions

The lesson plans created by India Literacy Project are not for profit or for sale. The content here has been compiled as open source and can be used, reproduced, derived of or modified by anyone as long as it is used for educational and non-profit use and released as open source.

All images and videos used in this presentation are sourced from the Internet and are owned and copyrighted as appropriate by the original owners.

India Literacy Project neither owns nor claims any copyright over them.

Free Distribution

ಉಚಿತ ವಿತರಣೆ

India Literacy Project

2 of 132

ILP ಸ್ವಯಂ ಸೇವಾ ಸಂಸ್ಥೆ  ಉಚಿತ ವಿತರಣೆಗಾಗಿ ಈ ಡಿಜಿಟಲ್ ಸಂಪನ್ಮೂಲವನ್ನು ಸಿದ್ಧಪಡಿಸಿದೆ. 

ಇದರ ಉದ್ದೇಶಗಳು:

  • ಶಾಲೆಯಲ್ಲಿ ಸ್ಮಾರ್ಟ್ ಕ್ಲಾಸ್ ಶಕ್ಯವಾಗಿಸಲು (ಸಕ್ರಿಯವಾಗಿಸಲು)  
  • ಶಾಲಾ ಮಕ್ಕಳಿಗೆ ಪಠ್ಯ ಪುಸ್ತಕದ ಜೊತೆಗೆ ಪರಿಕಲ್ಪನೆ ಅರ್ಥೈಸಿಕೊಳ್ಳುವುದಕ್ಕೆ    ಡಿಜಿಟಲ್ ಸಂಪನ್ಮೂಲ ಒದಗಿಸಲು  .
  • ಶಿಕ್ಷಕರು ಹಾಗು ಮಕ್ಕಳು ಬಹುಆಯಾಮ ಕಲಿಕೆಯ ಅನುಭವ  ಪಡೆಯಲು .   

ಇದರ ವೈಶಿಷ್ಟ್ಯತೆಗಳು:

  • ಪಠ್ಯ ಪುಸ್ತಕದಲ್ಲಿರುವ ಪರಿಕಲ್ಪನೆಗಳನ್ನು ಈ ಡಿಜಿಟಲ್ ಸಂಪನ್ಮೂಲ ಬಲಪಡಿಸುತ್ತದೆ. 

  • ಪ್ರತಿನಿತ್ಯ ಮಾಡುವ ಬೋಧನಾ ವಿಧಾನ ( ಕಪ್ಪುಹಲಗೆ, ಪ್ರಯೋಗಗಳು, ಚಟುವಟಿಕೆಗಳು ಹಾಗೂ ಇತರೆ)  ಜೊತೆಗೆ ಈ 

ಡಿಜಿಟಲ್  ಸಂಪನ್ಮೂಲವನ್ನು ಬಳಸುವುದರಿಂದ ನಿಮ್ಮ ತರಗತಿ ಸ್ಮಾರ್ಟ್ ಕ್ಲಾಸ್ ಆಗಿ ಬದಲಾವಣೆಯಾಗಲು ಸಹಾಯಕವಾಗಿದೆ.

  • PPTಯು  ಪಠ್ಯ ಪುಸ್ತಕದ  ಜೊತೆಗೆ  ಉಪಯೋಗಿಸುವಂಥಹದ್ದು.  ಈ PPT ಯನ್ನು ಉಪಯೋಗಿಸುವಾಗ ಮಕ್ಕಳು ಪಠ್ಯ ಪುಸ್ತಕ, 

ನೋಟ್ ಬುಕ್ ಮತ್ತು ಪೆನ್ ನ್ನು ಸಿದ್ಧವಾಗಿಟ್ಟುಕೊಳ್ಳುವುದು.

  • ಕಲಿಕೆಗೆ ಪೂರಕವಾಗಿ ಪರಿಕಲ್ಪನೆಗಳನ್ನು ಅರ್ಥೈಸಲು 2-5 ನಿಮಿಷಗಳ ಕಾಲದ ವಿಡಿಯೋ ಗಳನ್ನು ಅಳವಡಿಸಲಾಗಿದೆ. 

  • ಕಲಿಕೆಗೆ ಪೂರಕವಾಗುವಂತೆ  ಇದರಲ್ಲಿ ಬದಲಾವಣೆ ಮಾಡಿಕೊಳ್ಳಬಹುದಾಗಿದೆ. 

  • ಈ ಡಿಜಿಟಲ್ ಸಾಧನವನ್ನು ಶಿಕ್ಷಕರು ತಮ್ಮ  ಅನುಕೂಲತೆಗೆ ಅನುಗುಣವಾಗಿ ಉಪಯೋಗಿಸಬಹುದಾಗಿದೆ.  

  • ILP ವಿಜ್ಞಾನ ಪ್ರಯೋಗ ಕಿಟ್  ನಿಮ್ಮಲ್ಲಿದ್ದಲ್ಲಿ ಅದನ್ನು ಬಳಸಿಕೊಳ್ಳಬಹುದು.

  • ಈ ಪಾಠ ಯೋಜನೆಗಳನ್ನು ಉತ್ತಮಪಡಿಸಲು ಶಿಕ್ಷಕರು / ವಿದ್ಯಾರ್ಥಿಗಳು ತಮ್ಮ ಸಲಹೆಗಳನ್ನು ಮುಕ್ತವಾಗಿ ನೀಡಬಹುದಾಗಿದೆ.

India Literacy Project - email: info@ilpnet.org

ಶಿಕ್ಷಕರಿಗಾಗಿ

3 of 132

2022-2023 ಶೈಕ್ಷಣಿಕ ವರ್ಷದಲ್ಲಿ ಶಾಲೆಗಳಲ್ಲಿ ಕಲಿಕಾ ಚೇತರಿಕೆ ಕಾರ್ಯಕ್ರಮ

ಅನುಷ್ಠಾನವಾಗಲಿದೆ.

ಈ ppt ಗಳು ಕಲಿಕಾ ಚೇತರಿಕೆಯ ಕಲಿಕಾ ಹಾಳೆಗಳು ಮತ್ತು ಪಠ್ಯ ಪುಸ್ತಕದ

ವಿಷಯಗಳು ಸುಗಮವಾದ ಉಪಕ್ರಮಕ್ಕೆ ಶಿಕ್ಷಕರಿಗೆ ಸಹಾಯವಾಗುವಂತೆ ಇದೆ.

ಶಿಕ್ಷಕರಿಗಾಗಿ....

4 of 132

ಆಹಾರ ಸಂಪನ್ಮೂಲಗಳಲ್ಲಿ ಸುಧಾರಣೆ(Improvements in Food Resources)

ತರಗತಿ: 9

ಅಧ್ಯಾಯ: 15

ವಿಷಯ: ವಿಜ್ಞಾನ

5 of 132

ಕಲಿಕಾ ಫಲಗಳು

1.ಬೆಳಯ ಉತ್ಪಾದನೆ ಮತ್ತು ನಿರ್ವಹಣೆಯಲ್ಲಿ ಹಂತಗಳನ್ನು ತಿಳಿಯುವೆನು.

2.ಪಸುಸಂಗೋಪನೆ ದನ ಸಾಕಾಣಿಕೆ, ಕೋಳಿ ಸಾಕಾಣಿಕೆ, ಮೀನು ಸಾಕಾಣಿಕೆ ಮತ್ತು ಜೇನು ಸಾಕಾಣಿಕೆಯ ಮಹತ್ವ ಅರಿಯುವೆನು.

6 of 132

ಆಹಾರದ ಅರ್ಥ (Meaning of Food):

ಜೀವಿಯೊಂದರ ಬೆಳವಣಿಗೆಗೆ ಮತ್ತು ವಿಕಾಸಕ್ಕೆ ಬೇಕಾದ ಪೋಷಕಗಳು ಮತ್ತು ಶಕ್ತಿಯನ್ನು ಒದಗಿಸುವ ವಸ್ತುಗಳನ್ನು ಏನೆಂದು ಕರೆಯುವರು!!?------------------🡪

7 of 132

Introduction to Agriculture 

ಆಹಾರ ಸಂಪನ್ಮೂಲಗಳಲ್ಲಿ ಸುಧಾರಣೆ.

8 of 132

ಆಹಾರದ ಪ್ರಾಮುಖ್ಯತೆ (Importance of Food)

ಗಾಯಗಳನ್ನು

ವಾಸಿಮಾಡುವುದು 

ಉಸಿರಾಟ 

ರೋಗ ನಿರೋಧಕ 

ಕೆಲಸ ಮಾಡಲು ಶಕ್ತಿ 

ಅಂಗಾಂಗಗಳ ವಿಕಸನ 

ದೈಹಿಕ ದೃಢತೆ 

9 of 132

ಆಹಾರವು ಯಾವ ಯಾವ ಮೂಲದಿಂದ ದೊರೆಯುತ್ತದೆ .?

ನಾವು ಆಹಾರವನ್ನು ಸಸ್ಯಗಳು ಮತ್ತು ಪ್ರಾಣಿಗಳ ಮೂಲದಿಂದ ಪಡೆಯುತ್ತೇವೆ .

10 of 132

ಅಕ್ಕಿ, ನವಣೆ, ಮಾಂಸ, ಸಜ್ಜೆ, ಮಾವು, ಗಿಣ್ಣು, ರಾಗಿ, ತುಪ್ಪ, ಮೊಟ್ಟೆ, ಹೂಕೋಸು, ಹಾಲು, ಮೆಂತ್ಯ, ಕ್ಯಾರೆಟ್, ಮಜ್ಜಿಗೆ, ಮೂಲಂಗಿ.

ಕೆಳಗಿನ ಆಹಾರ ಪದಾರ್ಥಗಳನ್ನು ಗಮನಿಸಿ:

ಸಸ್ಯಮೂಲ ಆಹಾರ ಪದಾರ್ಥಗಳು

ಪ್ರಾಣಿ ಮೂಲ ಆಹಾರ ಪದಾರ್ಥಗಳು

ಮೇಲೆ ನೀಡಲಾದ ಆಹಾರ ಪದಾರ್ಥಗಳನ್ನು ಕೆಳಗೆ ನೀಡಲಾದ ಪಟ್ಟಿಯಲ್ಲಿ ವಿಂಗಡಿಸಿ ಬರೆಯಿರಿ.

11 of 132

  • ನಾವು ಯಾವ ರೀತಿಯ ಆಹಾರವನ್ನು ಸೇವಿಸುತ್ತೇವೆ?

  • ಯಾಕೆ ನಾವು ಈ ರೀತಿಯಾದ ಆಹಾರವನ್ನು ಸೇವಿಸಬೇಕು?

  • ಯಾವ  ಯಾವ ರೀತಿಯ ಆಹಾರವನ್ನು ಎಷ್ಟೆಷ್ಟು ಪ್ರಮಾಣದಲ್ಲಿ ಸೇವಿಸಬೇಕು? 

12 of 132

ನಿಮಗಿದು ಗೊತ್ತೇ?

  • ಭಾರತವು ಜಗತ್ತಿನಲ್ಲಿಯೇ ಮಧುಮೇಹದಲ್ಲಿ ಮೊದಲ ಸ್ಥಾನ ಪಡೆದಿದೆ ಮತ್ತು

  • ಬೊಜ್ಜಿ ನ ಸಮಸ್ಯೆಯಲ್ಲಿ  ಎರಡನೇ ಸ್ಥಾನದಲ್ಲಿದೆ. 

13 of 132

BMI ಚಾರ್ಟ್ (Body Mass Index)

Kg/m2

ತೂಕ

ಎತ್ತರ 2

BMI =

ಮುಂದಿನ ಸ್ಲೈಡ್ ನಲ್ಲಿ ತಿಳಿದುಕೊಳ್ಳಿ.

  • ನಿಮ್ಮ ದೇಹ ಬೊಜ್ಜೆ ಅಥವಾ ಇಲ್ಲವೇ??

14 of 132

ನಿಮ್ಮ ಎತ್ತರಕ್ಕೆ ದೇಹದ ತೂಕ ಹೊಂದಿಸಿಕೊಳ್ಳಿ.

ನಿಮ್ಮ ತೂಕದ ಮೇಲೆ ಗಮನವಿರಲಿ.

ನಿಮ್ಮ BMI ಎಷ್ಟಿದೆ ಎಂದು ತಿಳಿಯಿರಿ..

15 of 132

  • ನಮಗೆ ತಿಳಿದಿರುವಂತೆ ಎಲ್ಲಾ ಜೀವಿಗಳಿಗೂ ಆಹಾರದ ಅವಶ್ಯಕತೆ ಇದೆ.

  • ಕಾರ್ಬೋಹೈಡ್ರೇಟ್‍ಗಳು, ಕೊಬ್ಬುಗಳು, ವಿಟಮಿನ್‍ಗಳು ಮತ್ತು ಖನಿಜಗಳನ್ನು ಆಹಾರವು ಪೂರೈಸುತ್ತದೆ.

  • ಇವೆಲ್ಲವೂ ದೇಹದ ಅಭಿವೃದ್ಧಿ, ಬೆಳವಣಿಗೆ ಮತ್ತು ಆರೋಗ್ಯಕ್ಕೆ ನಮಗೆ ಅಗತ್ಯವಾಗಿದೆ.

  • ಸಸ್ಯ ಮತ್ತು ಪ್ರಾಣಿಗಳೆರಡೂ ನಮ್ಮ ಆಹಾರದ ಪ್ರಮುಖ ಆಕರಗಳಾಗಿವೆ.

  • ನಾವು ಬಹಳಷ್ಟು ಆಹಾರವನ್ನು ಕೃಷಿ ಮತ್ತು ಪಶು ಸಂಗೋಪನೆಯಿಂದ ಪಡೆಯುತ್ತಿದ್ದೇವೆ.

ಆಹಾರ

16 of 132

ಆಹಾರದ ಮೂಲಗಳು :

  • ಕೃಷಿ ಮತ್ತು ಪಶು ಸಂಗೋಪನೆಯಿಂದ ಆಹಾರದ ಉತ್ಪದನೆಯನ್ನು ಹೆಚ್ಚಿಸುವ ಪ್ರಯತ್ನಗಳು ನಿರಂತರವಾಗಿ ಸಾಗುತ್ತಿವೆ ಎಂಬುದನ್ನು ನಾವು ವಾರ್ತಾ ಪತ್ರಿಕೆಗಳಲ್ಲಿ ಓದುತ್ತಿರುತ್ತೇವೆ ಇದು ಏಕೆ ಅವಶ್ಯಕ? ಪ್ರಚಲಿತ ಹಂತದ ಉತ್ಪಾದನೆಯಲ್ಲಿಯೇ ನಾವು ಏಕೆ ಇದನ್ನು ಮಾಡಲಾಗುತ್ತಿಲ್ಲ?

.��

17 of 132

ಆಹಾರದ ಮೂಲಗಳು:

Food from Plants and Animals

18 of 132

  • ಭಾರತವು ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ದೇಶ.

  • ನಮ್ಮ ಜನಸಂಖ್ಯೆಯು ಒಂದು ಬಿಲಿಯನ್‍ಗಿಂತಲೂ ಹೆಚ್ಚಿದೆ, ಮತ್ತು ಇದು ಇನ್ನೂ ಹೆಚ್ಚುತ್ತಿದೆ.

  • ಬೆಳೆಯುತ್ತಿರುವ ಈ ಜನಸಂಖ್ಯೆಗೆ ಆಹಾರವಾಗಿ ಒಂದು ಬಿಲಿಯನ್ ಟನ್‍ನ ನಾಲ್ಕನೇ ಒಂದು ಭಾಗಕ್ಕಿಂತಲೂ ಅಧಿಕ ಆಹಾರ ಧಾನ್ಯಗಳು ಸದ್ಯದಲ್ಲೇ ಪ್ರತಿ ವರ್ಷ ನಮಗೆ ಬೇಕಾಗಬಹುದು.

  • ಅಧಿಕ ಪ್ರಮಾಣದ ಭೂಮಿಯಲ್ಲಿ ಕೃಷಿ ಮಾಡುವುದರಿಂದ ಇದನ್ನು ಸಾಧಿಸಬಹುದು. ಆದರೆ, ಭಾರತವು ಈಗಾಗಲೇ ತೀವ್ರವಾಗಿ ಕೃಷಿಗೆ ಒಳಪಟ್ಟಿದೆ.

  • ಇದರ ಪರಿಣಾಮವಾಗಿ ಕೃಷಿ ಮಾಡುವ ಭೂ ಪ್ರದೇಶವನ್ನು ವಿಸ್ತರಿಸುವ ಯಾವುದೇ ಪ್ರಮುಖ ಅವಕಾಶ ನಮಗಿಲ್ಲದಂತಾಗಿದೆ.
  • ಆದ್ದರಿಂದ, ಬೆಳೆ ಹಾಗೂ ಜಾನುವಾರು ಎರಡರಲ್ಲೂ ನಮ್ಮ ಉತ್ಪಾದನೆಯ ಸಾಮಥ್ರ್ಯ ಹೆಚ್ಚಿಸುವ ಅಗತ್ಯವಿದೆ.

ಆಹಾರ-ಭಾರತ

19 of 132

  • ಆಹಾರದ ಉತ್ಪಾದನೆಯನ್ನು ಹೆಚ್ಚಿಸುವ ಮೂಲಕ ಆಹಾರದ ಬೇಡಿಕೆಯನ್ನು ಪೂರೈಸಲು ಮಾಡಿದ ಪ್ರಯತ್ನಗಳು ಇಲ್ಲಿಯವರೆಗೆ ಸ್ವಲ್ಪ ಮಟ್ಟಿನ ಯಶಸ್ಸಿಗೆ ಕಾರಣವಾಗಿವೆ.

  • ನಾವು ಸಾಧಿಸಿದ ಹಸಿರು ಕ್ರಾಂತಿಯು ಆಹಾರ ಧಾನ್ಯಗಳ ಅಧಿಕ ಉತ್ಪಾದನೆಗೆ ತನ್ನದೇ ಆದ ಕೊಡುಗೆ ನೀಡಿದೆ.

  • ನಾವು ಕ್ಷೀರ ಕ್ರಾಂತಿಯನ್ನು (ಬಿಳಿ ಕ್ರಾಂತಿ) ಕೂಡಾ ಸಾಧಿಸಿದ್ದೇವೆ, ಅದು ಹಾಲಿನ ಅಧಿಕ ಲಭ್ಯತೆಯ ಜೊತೆಗೆ ಅದರ ಉತ್ತಮ ಮತ್ತು ಹೆಚ್ಚು ಪರಿಣಾಮಕಾರಿಯಾದ ಬಳಕೆಯನ್ನು ಮಾಡಲು ದಾರಿ ತೋರಿಸಿದೆ.

ಆಹಾರ-ಪೂರೈಕೆ.

20 of 132

  • ಆದಾಗ್ಯೂ, ಇಂಥ ಕ್ರಾಂತಿಗಳ ಅರ್ಥವೇನೆಂದರೆ ನಮ್ಮ ನೈಸರ್ಗಿಕ ಸಂಪನ್ಮೂಲಗಳು ಹೆಚ್ಚು ತೀವ್ರವಾಗಿ ಬಳಸಲ್ಪಡುತ್ತಿವೆ.

  • ಇದರ ಪರಿಣಾಮವಾಗಿ, ನೈಸರ್ಗಿಕ ಸಂಪನ್ಮೂಲಗಳ ಸಮತೋಲನವನ್ನು ಸಂಪೂರ್ಣವಾಗಿ ನಾಶಪಡಿಸುವ ಮೂಲಕ ಅವುಗಳಿಗೆ ಹಾನಿಯುಂಟು ಮಾಡುವ ಅವಕಾಶಗಳು ಅಧಿಕವಾಗಿವೆ.

  • ಆದ್ದರಿಂದ, ನಮ್ಮ ಪರಿಸರಕ್ಕೆ ಹಾನಿಯುಂಟುಮಾಡದೇ ಮತ್ತು ಅದನ್ನು ನಿರ್ವಹಿಸುತ್ತಿರುವ ಸಮತೋಲನಗಳನ್ನು ಹಾಳುಗೆಡವದೆ ನಾವು ಆಹಾರ ಉತ್ಪಾದನೆಯನ್ನು ಹೆಚ್ಚಿಸುವುದು ಅತಿ ಪ್ರಮುಖವಾಗಿದೆ.

  • ಈ ಕಾರಣದಿಂದಾಗಿ ಕೃಷಿ ಮತ್ತು ಪಶು ಸಂಗೋಪನೆಯಲ್ಲಿ ಸಮರ್ಥ ವಿಧಾನಗಳನ್ನು ಅಳವಡಿಸಿಕೊಳ್ಳುವ ಅವಶ್ಯಕತೆಯಿದೆ.

ಆಹಾರ ಸಂಗೋಪನೆಯಲ್ಲಿ ಸುಧಾರಣೆ. ಏಕೆ?

ಜಾನುವಾರು ಸಾಕಣೆ ವಿಶ್ವಾದ್ಯಂತ ಮಾನವ ಉತ್ಪಾದಿಸಿದ ಹಸಿರುಮನೆ ಅನಿಲ ಹೊರಸೂಸುವಿಕೆಯ 18% ನಷ್ಟು ಕೊಡುಗೆ ನೀಡುತ್ತದೆ .

21 of 132

  • ಸುಮ್ಮನೆ ಧಾನ್ಯ ಉತ್ಪದನೆಯನ್ನು ಹೆಚ್ಚಿಸಿ ಗೋದಾಮುಗಳಲ್ಲಿ ಸಂಗ್ರಹಿಸಿಟ್ಟರೆ ಅಪೌಷ್ಟಿಕತೆ ಮತ್ತು ಹಸಿವಿನ ಸಮಸ್ಯೆಯನ್ನು ಪರಿಹರಿಸಲು ಸಾಧ್ಯವಿಲ್ಲ.

  • ಆಹಾರ ಖರೀದಿಸಲು ಜನರು ಹಣವನ್ನು ಹೊಂದಿರಲೇಬೇಕು.

  • ಆಹಾರ ಭದ್ರತೆಯು ಆಹಾರದ ಲಭ್ಯತೆ ಮತ್ತು ಅದನ್ನು ಹೊಂದುವ ಮಾರ್ಗ ಎರಡರ ಮೇಲೂ ಅವಲಂಬಿತವಾಗಿದೆ.

ಆಹಾರ ಸಂಪನ್ಮೂಲಗಳಲ್ಲಿ ಸುಧಾರಣೆ.

22 of 132

  • ನಮ್ಮ ಜನಸಂಖ್ಯೆಯ ಬಹುಪಾಲು ಜನರು ತಮ್ಮ ಜೀವನಕ್ಕಾಗಿ ಕೃಷಿಯನ್ನು ಅವಲಂಬಿಸಿದ್ದಾರೆ.

  • ಆದ್ದರಿಂದ ಹಸಿವಿನ ಸಮಸ್ಯೆಯ ವಿರುದ್ಧ ಹೋರಾಡಲು ಕೃಷಿ ಕೆಲಸಗಳಲ್ಲಿ ತೊಡಗಿಸಿಕೊಂಡ ಜನರ ಆದಾಯ ಹೆಚ್ಚಿಸುವುದು ಅಗತ್ಯವಾಗಿದೆ.

  • ಕೃಷಿ ಭೂಮಿಗಳಿಂದ ಅಧಿಕ ಇಳುವರಿ ಪಡೆಯಲು ವೈಜ್ಞಾನಿಕ ನಿರ್ವಹಣಾ ಅಭ್ಯಾಸಗಳನ್ನು ಕೈಗೊಳ್ಳಬೇಕು.

  • ಸುಸ್ಥಿರ ಬದುಕಿಗಾಗಿ ಪ್ರತಿಯೊಬ್ಬರೂ ಮಿಶ್ರಬೇಸಾಯ, ಅಂತರ ಬೆಳೆ ಪದ್ಧತಿ ಮತ್ತು ಸಮಗ್ರ ಕೃಷಿ ಪದ್ಧತಿಗಳನ್ನು ಕೈಗೊಳ್ಳಬೇಕು.

  • ಉದಾಹರಣೆಗೆ, ಕೃಷಿಯ ಜೊತೆ ಜೊತೆಗೆ ಜಾನುವಾರುಗಳು/ಕೋಳಿ ಸಾಕಣೆ/ಮೀನು ಸಾಕಣೆ/ಜೇನು ಸಾಕಾಣಿಕೆಯನ್ನು ನಿರ್ವಹಿಸುವುದು.

ಈಗ ಉಂಟಾದ ಪ್ರಶ್ನೆ ಎಂದರೆ-ಬೆಳೆಯ ಮತ್ತು ಜಾನುವಾರುಗಳ ಇಳುವರಿಯನ್ನು ನಾವು ಹೆಚ್ಚಿಸುವುದು ಹೇಗೆ?

ಆಹಾರ ಸಂಪನ್ಮೂಲಗಳಲ್ಲಿ ಸುಧಾರಣೆ. ಹೇಗೆ?

23 of 132

ಕಲಿಕಾ ಫಲ – 01

ಬೆಳಯ ಉತ್ಪಾದನೆ ಮತ್ತು ನಿರ್ವಹಣೆಯಲ್ಲಿ ಹಂತಗಳನ್ನು ತಿಳಿಯುವೆನು.

24 of 132

ಬೆಳೆಗಳ ಇಳುವರಿ

  • ಬೆಳೆಯ ಇಳುವರಿಯಲ್ಲಿ ಸುಧಾರಣೆ

  • ಬೆಳೆಯ ತಳಿ ಸುಧಾರಣೆ

  • ಬೆಳೆ ಉತ್ಪಾದನೆಯ ನಿರ್ವಹಣೆ

  • ಪೋಷಕಾಂಶ ನಿರ್ವಹಣೆ

  • ಬೆಳೆ ರಕ್ಷಣೆಯ ನಿರ್ವಹಣೆ

ಬೆಳೆಗಳ ಇಳುವರಿಯಲ್ಲಿ ನಾವು ತಿಳಿಯುವ ಅಂಶಗಳು:

25 of 132

ಬೆಳೆಯ ಇಳುವರಿಯಲ್ಲಿ ಸುಧಾರಣೆ

  • ಗೋಧಿ, ಅಕ್ಕಿ, ಮೆಕ್ಕೆಜೋಳ, ರಾಗಿ ಮತ್ತು ಬಿಳಿ ಜೋಳಗಳಂತಹ ಧಾನ್ಯಗಳು ನಮ್ಮ ಶಕ್ತಿ ಅವಶ್ಯಕತೆಯನ್ನು ಪೂರೈಸುವ ಕಾರ್ಬೋಹೈಡ್ರೇಟ್‍ಗಳನ್ನು ಒದಗಿಸುತ್ತವೆ.

  • ದ್ವಿದಳ ಧಾನ್ಯಗಳಾದ ಕಡಲೆ, ಬಟಾಣಿ, ಉದ್ದಿನ ಬೇಳೆ, ಲೆಂಟಿಲ್, ಹೆಸರುಬೇಳೆ, ನಮಗೆ ಪ್ರೋಟೀನ್‍ಗಳನ್ನು ನೀಡುತ್ತಿವೆ

  • ಎಣ್ಣೆಯ ಬೀಜಗಳಾದ ಸೋಯಾಬೀನ್, ಕಡಲೆಕಾಯಿ, ಹರಳು ಬೀಜ, ಎಳ್ಳು, ಸಾಸಿವೆ, ಅಗಸೆಬೀಜ, ಸೂರ್ಯಕಾಂತಿಗಳು ನಮಗೆ ಅವಶ್ಯಕವಿರುವ ಕೊಬ್ಬುಗಳನ್ನು ಪೂರೈಸುತ್ತಿವೆ.

  • ತರಕಾರಿಗಳು ಮತ್ತು ಹಣ್ಣುಗಳು ಕಡಿಮೆ ಪ್ರಮಾಣದ

ಪ್ರೋಟೀನ್‍ಗಳು, ಕಾರ್ಬೋಹೈಡ್ರೇಟ್‍ಗಳು ಮತ್ತು ಜೊತೆಗೆ

ಹಲವಾರು ಜೀವಸತ್ವಗಳು ಮತ್ತು ಖನಿಜಗಳನ್ನು ಒದಗಿಸುತ್ತವೆ.

  • ಈ ಆಹಾರ ಬೆಳೆಗಳ ಜೊತೆಗೆ ಮೇವು ಬೆಳೆಗಳಾದ ಬರ್‍ಸೀಮ್,

ಓಟ್ಸ್ ಅಥವಾ ಸುಡಾನ್ ಹುಲ್ಲುಗಳನ್ನು ಜಾನುವಾರುಗಳ

ಆಹಾರವಾಗಿ ಬೆಳೆಯಲಾಗುತ್ತಿದೆ.

  • ಧಾನ್ಯಗಳು, ದ್ವಿದಳ ಧಾನ್ಯಗಳು, ಹಣ್ಣುಗಳು ಮತ್ತು ತರಕಾರಿಗಳಿಂದ ನಾವು ಏನನ್ನು ಪಡೆಯುತ್ತೇವೆ?

26 of 132

ಬೆಳೆಯ ಇಳುವರಿಯಲ್ಲಿ ಸುಧಾರಣೆ

  • ತಮ್ಮ ಬೆಳವಣಿಗೆ ಮತ್ತು ಜೀವನ ಚಕ್ರವನ್ನು ಚಕ್ರವನ್ನು ಪೂರ್ತಿಗೊಳಿಸಲು ವಿವಿಧ ಬೆಳೆಗಳಿಗೆ ವಿಭಿನ್ನ ಹವಾಮಾನ ಪರಿಸ್ಥಿತಿ, ಉಷ್ಣತೆ ಮತ್ತು ದ್ಯುತಿ ಅವಧಿಯ ಅಗತ್ಯವಿದೆ.

  • ದ್ಯುತಿ ಅವಧಿಯು ಸೌರಬೆಳಕಿನ ಅವಧಿಗೆ ಸಂಬಂಧಿಸಿದೆ. ಸಸ್ಯಗಳ ಬೆಳವಣಿಗೆ ಮತ್ತು ಹೂ ಬಿಡುವಿಕೆ ಸೌರಬೆಳಕಿನ ಮೇಲೆ ಅವಲಂಬಿತವಾಗಿದೆ. ನಮಗೆಲ್ಲ ತಿಳಿದಿರುವಂತೆ ಸಸ್ಯಗಳು ತಮ್ಮ ಆಹಾರವನ್ನು ಸೌರಬೆಳಕಿನಲ್ಲಿ ದ್ಯುತಿಸಂಶ್ಲೇಷಣೆ ಕ್ರಿಯೆಯಿಂದ ತಯಾರಿಸಿಕೊಳ್ಳುತ್ತವೆ.

  • ಕೆಲವು ಬೆಳೆಗಳಿವೆ ಅವು ಮಳೆಗಾಲದಲ್ಲಿ ಬೆಳೆಯುತ್ತವೆ. ಖಾರಿಫ್ ಋತು ಎಂದು ಕರೆಯಲಾಗುವ ಈ ಕಾಲವು ಜೂನ್ ತಿಂಗಳಿನಿಂದ ಅಕ್ಟೋಬರ್ ತಿಂಗಳವರೆಗೆ ಇರುತ್ತದೆ. ಭತ್ತ, ಸೋಯಾಬೀನ್, ತೊಗರಿಬೇಳೆ (pigeon pea) ಮೆಕ್ಕೆಜೋಳ, ಉದ್ದಿನಬೇಳೆಗಳು ಖಾರಿಫ್ ಬೆಳೆಗಳು

  • ಇನ್ನೂ ಕೆಲವು ಬೆಳೆಗಳು ಚಳಿಗಾಲದಲ್ಲಿ ಬೆಳೆಯುತ್ತವೆ. ಇದನ್ನು ರಬಿ ಋತು ಎಂದು ಕರೆಯಲಾಗುತ್ತದೆ. ಇದರ ಅವಧಿಯು ನವೆಂಬರ್ ನಿಂದ ಏಪ್ರಿಲ್‍ವರೆಗೆ ಇರುತ್ತದೆ.
  • ಹಾಗೆಯೇ ಗೋಧಿ, ಕಡಲೆ, ಬಟಾಣಿ, ಸಾಸಿವೆ, ಅಗಸೆಬೀಜಗಳು ರಬಿ ಬೆಳೆಗಳು

27 of 132

  • ಭಾರತದಲ್ಲಿ 1960 ರಿಂದ 2004ರ ಅವಧಿಯಲ್ಲಿ ಕೇವಲ ಶೇ.25ರಷ್ಟು ಕೃಷಿ ಭೂಮಿಯ ಹೆಚ್ಚಳದೊಂದಿಗೆ ಆಹಾರಧಾನ್ಯಗಳ ಉತ್ಪಾದನೆಯಲ್ಲಿ ನಾಲ್ಕು ಪಟ್ಟು ಹೆಚ್ಚಳವಾಗಿದೆ.

  • ಉತ್ಪಾದನೆಯಲ್ಲಿ ಈ ಹೆಚ್ಚಳವನ್ನು ಹೇಗೆ ಸಾಧಿಸಲಾಯಿತು? ಕೃಷಿಪದ್ಧತಿಗಳ ಬಗ್ಗೆ ನಾವು ಆಲೋಚಿಸಿದರೆ ಅದನ್ನು ನಾವು ಮೂರು ಹಂತಗಳಲ್ಲಿ ವಿಭಾಗಿಸಬಹುದು.

  • ಮೊದಲನೆಯದಾಗಿ :ಬಿತ್ತನೆ ಮಾಡಲು ಬೀಜಗಳ ಆಯ್ಕೆ.

  • ಎರಡನೆಯದಾಗಿ : ಬೆಳೆ ಸಸ್ಯಗಳನ್ನು ಪೋಷಿಸುವುದು.

  • ಮೂರನೆಯದಾಗಿ: ಬೆಳೆಯುತ್ತಿರುವ ಮತ್ತು ಕಟಾವು ಮಾಡಿದ ಬೆಳೆಗಳನ್ನು

ನಷ್ಟವಾಗುವಿಕೆಯಿಂದ ರಕ್ಷಿಸುವುದು.

  • ಆದ್ದರಿಂದ ಬೆಳೆಯ ಇಳುವರಿಯನ್ನು ಉತ್ತಮಪಡಿಸುವ ಚಟುವಟಿಕೆಗಳನ್ನು ಈ ಕೆಳಗಿನ ಪ್ರಮುಖ ಗುಂಪುಗಳಾಗಿ ವರ್ಗೀಕರಿಸಬಹುದು.

ಬೆಳೆಯ ಇಳುವರಿಯಲ್ಲಿ ಸುಧಾರಣೆ (improvement in crop yields):

28 of 132

  • ಬೆಳೆಯ ತಳಿ ಸುಧಾರಣೆ (crop variety improvement).
  • ಬೆಳೆ ಉತ್ಪಾದನೆಯ ನಿರ್ವಹಣೆ (crop production management).
  • ಬೆಳೆ ರಕ್ಷಣೆಯ ನಿರ್ವಹಣೆ (crop protection management).

ಬೆಳೆಯ ಇಳುವರಿಯಲ್ಲಿ ಸುಧಾರಣೆ ಕುರಿತು ಗುಂಪುಗಳ ವರ್ಗೀಕರಣ

29 of 132

ಬೆಳೆಯ ತಳಿ ಸುಧಾರಣೆ (Crop Variety Improvement):

Crop Variety Improvement

Cropping Patterns

30 of 132

ಬೆಳೆಯ ತಳಿ ಸುಧಾರಣೆ (Crop Variety Improvement):

  • ಈ ವಿಧಾನವು ಉತ್ತಮ ಇಳುವರಿಯನ್ನು ನೀಡುವ ಒಂದು ಬೆಳೆಯ ತಳಿಯನ್ನು ಕಂಡುಕೊಳ್ಳುವುದರ ಮೇಲೆ ಅವಲಂಬಿತವಾಗಿದೆ.

  • ರೋಗನಿರೋಧತೆ, ರಸಗೊಬ್ಬರಗಳಿಗೆ ಪ್ರತಿಕ್ರಿಯಿಸುವಿಕೆ, ಉತ್ಪನ್ನಗಳ ಗುಣಮಟ್ಟ ಮತ್ತು ಅಧಿಕ ಇಳುವರಿಯಂತಹ ವಿವಿಧ ಉಪಯುಕ್ತ ಗುಣಲಕ್ಷಣಗಳನ್ನು ಹೊಂದಿರುವ ಸಸ್ಯಗಳ ತಳಿ ಸಂವರ್ಧನೆಯಿಂದ ಬೆಳೆಯ ವಿಧ ಅಥವಾ ತಳಿಯನ್ನು ಆಯ್ಕೆ ಮಾಡಬಹುದು.

  • ಅಪೇಕ್ಷಿತ ಗುಣಗಳನ್ನು ಬೆಳೆ ತಳಿಗಳ ಒಳಗೆ ಸಂಯೋಜಿಸುವ ಒಂದು ವಿಧಾನವೆಂದರೆ ಸಂಕರಣ(Hybridization)
  • ಸಂಕರಣವೆಂದರೆ ಆನುವಂಶೀಯವಾಗಿ ವಿಭಿನ್ನವಾಗಿರುವ ಸಸ್ಯಗಳನ್ನು ಅಡ್ಡಹಾಯಿಸುವುದು ಅಥವಾ ಸಂಕರಗೊಳಿಸುವುದು ಎಂದಾಗುತ್ತದೆ.

31 of 132

ಬೆಳೆಯ ತಳಿ ಸುಧಾರಣೆ (Crop Variety Improvement):

ಈ ಸಂಕರಗೊಳಿಸುವಿಕೆಯು

  • ಅಂತರ ತಳೀಯ (ವಿಭಿನ್ನ ತಳಿ ಸಸ್ಯಗಳ ನಡುವೆ),
  • ಅಂತರ ಪ್ರಭೇದ (ಒಂದೇ ಜಾತಿಯ ಎರಡು ವಿಭಿನ್ನ

ಪ್ರಭೇದಕ್ಕೆ ಸೇರಿದ ಸಸ್ಯಗಳ ನಡುವೆ)

  • ಅಂತರ ಜಾತೀಯ (ವಿಭಿನ್ನ ಜಾತಿಯ ಸಸ್ಯಗಳ

ನಡುವೆ) ಆಗಿರಬಹುದು.

  • ಬೆಳೆಯನ್ನು ಸುಧಾರಿಸುವ ಇನ್ನೊಂದು ಮಾರ್ಗವೆಂದರೆ ಅಪೇಕ್ಷಿತ ಗುಣಗಳನ್ನು ಒದಗಿಸುವ ವಂಶವಾಹಿಯನ್ನು (gene) ಸೇರಿಸುವುದು.

  • ಇದು ಅನುವಂಶೀಯವಾಗಿ ಸುಧಾರಿತ ಬೆಳೆಗಳಾದ ಕುಲಾಂತರಿ ಸಸ್ಯಗಳು (genetically modified plants) ಉಂಟಾಗಲು ಕಾರಣವಾಗುತ್ತದೆ.

32 of 132

  • ಬೆಳೆಗಳ ಹೊಸ ತಳಿಯನ್ನು ಒಪ್ಪಿಕೊಳ್ಳಬೇಕಾದರೆ ಅದು ವಿವಿಧ ಪ್ರದೇಶಗಳಲ್ಲಿನ ವಿಭಿನ್ನ ಹವಾಮಾನ ಪರಿಸ್ಥಿತಿಗಳಲ್ಲಿ ಅಧಿಕ ಇಳುವರಿಯನ್ನು ನೀಡುವುದು ಅಗತ್ಯವಾಗಿದೆ.

  • ಎಲ್ಲಾ ಬೀಜಗಳೂ ಒಂದೇ ರೀತಿಯ ತಳಿಗೆ ಸಂಬಂಧಿಸಿದ್ದು ಒಂದೇ ರೀತಿಯ ಹವಾಮಾನ ಪರಿಸ್ಥಿತಿಗಳಲ್ಲಿ ಮೊಳೆಯುವಂತಿರಬೇಕು.

  • ಅಂತಹ ಒಂದು ನಿರ್ದಿಷ್ಟ ತಳಿಗೆ ಸಂಬಂಧಿಸಿದ ಉತ್ತಮ ಗುಣಮಟ್ಟದ ಬೀಜಗಳನ್ನು ರೈತರಿಗೆ ಪೂರೈಸುವಂತಾಗಬೇಕು. ಕೃಷಿ ಪದ್ದತಿಗಳು ಮತ್ತು ಬೆಳೆಯ ಇಳುವರಿ ಹವಾಮಾನ ,ಮಣ್ಣಿನ ಗುಣಮಟ್ಟ ಮತ್ತು ನೀರಿನ ಲಭ್ಯತೆರಿಯನ್ನು ಅವಲಂಬಿಸಿವೆ.

  • ಬರ ಮತ್ತು ಪ್ರವಾಹ ಪರಿಸ್ಥಿತಿಗಳಂತಹ ಹವಾಮಾನ ಸ್ಥಿತಿಗಳನ್ನು ಊಹಿಸಲು ಸಾಧ್ಯವಿಲ್ಲದಿರುವುದರಿಂದ ಪ್ರತಿಕೂಲ ಹವಾಮಾನ ಪರಿಸ್ಥಿತಿಗಳಲ್ಲಿ ಬೆಳೆಯಬಹುದಾದ ತಳಿಗಳು ಉಪಯುಕ್ತವಾಗಿವೆ.

  • ಹಾಗೆಯೇ ಮಣ್ಣಿನ ಅಧಿಕ ಲವಣಾಂಶವನ್ನು ಸಹಿಸಿಕೊಳ್ಳುವ ತಳಿಗಳನ್ನೂ ಅಭಿವೃದ್ಧಿಪಡಿಸಲಾಗಿದೆ.

ಹೊಸ ತಳಿಯು ಹೇಗಿರಬೇಕು? (Crop Variety Improvement):

33 of 132

ತಳಿ ಸುಧಾರಣೆ ಅಂಶಗಳಿಗೆ ಸಂಬಂಧಿಸಿದಂತೆ ಕೆಲವೊಂದು ಲಕ್ಷಣಗಳು

1.ಅಧಿಕ ಇಳುವರಿ :

ಪ್ರತಿ ಎಕರೆ ಬೆಳೆಯ ಉತ್ಪಾದನೆಯ ಪ್ರಮಾಣವನ್ನು ಹೆಚ್ಚಿಸುವುದು.

2. ಸುಧಾರಿತ ಗುಣಮಟ್ಟ :

ಬೆಳೆಯ ಉತ್ಪಾದನೆಯ ಗುಣಮಟ್ಟದ ಪರಿಗಣನೆಯು ಬೆಳೆಯಿಂದ

ಬೆಳೆಗೆ ಬದಲಾಗುತ್ತದೆ. ಗೋಧಿಯಲ್ಲಿ ಬೇಯುವ ಗುಣಮಟ್ಟ ಪ್ರಮುಖವಾಗುತ್ತದೆ, ಕಾಳುಗಳಲ್ಲಿ ಪ್ರೋಟೀನ್ ಗುಣಮಟ್ಟ, ಎಣ್ಣೆ ಬೀಜಗಳಲ್ಲಿ ಎಣ್ಣೆಯ ಗುಣಮಟ್ಟ ಮತ್ತು ಹಣ್ಣುಗಳು ಹಾಗೂ ತರಕಾರಿಗಳಲ್ಲಿ ಅಧಿಕ ಬಾಳಿಕೆಯ ಗುಣಮಟ್ಟ.

3. ಜೈವಿಕ ಮತ್ತು ಅಜೈವಿಕ ಪ್ರತಿರೋಧಕತೆ:

ವಿವಿಧ ರೀತಿಯ ಸಂದರ್ಭಗಳಲ್ಲಿ ಬೆಳೆಗಳ ಉತ್ಪಾದನೆಯು ಜೈವಿಕ (ರೋಗಗಳು, ಕೀಟಗಳು ಮತ್ತು ಹುಳುಗಳು) ಮತ್ತು ಅಜೈವಿಕ (ಬರ, ಲವಣಾಂಶ, ಜೌಗುವಿಕೆ, ಉಷ್ಣತೆ, ಶೀತ ಮತ್ತು ಹಿಮ) ಒತ್ತಡಗಳಿಂದಾಗಿ ಕಡಿಮೆಯಾಗಬಹುದು. ಈ ರೀತಿಯ ಒತ್ತಡಗಳನ್ನು ಪ್ರತಿರೋಧಿಸುವ ತಳಿಗಳು ಬೆಳೆಯ ಉತ್ಪಾದನೆಯನ್ನು ಸುಧಾರಿಸುತ್ತವೆ.

34 of 132

4 ಪರಿಪಕ್ವತೆಯ ಅವಧಿ ಬದಲಾವಣೆ:

ಬೆಳೆಯ ಬಿತ್ತನೆಯಿಂದ ಕೊಯ್ಲಿನವರೆಗಿನ ಅವಧಿ ಕಡಿಮೆ ಇದ್ದಷ್ಟೂ ತಳಿ ಆರ್ಥಿಕವಾಗಿ ಲಾಭದಾಯಕವಾಗಿರುತ್ತದೆ. ಅಂತಹ ಕಡಿಮೆ ಅವಧಿಗಳು ವರ್ಷದಲ್ಲಿ ಹಲವಾರು ಬಾರಿ ಬೆಳೆಗಳನ್ನು ಬೆಳೆಯಲು ರೈತರಿಗೆ ಅನುವು ಮಾಡಿಕೊಡುತ್ತವೆ.

ಕಡಿಮೆ ಅವಧಿಯು ಬೆಳೆಯ ಉತ್ಪಾದನಾ ವೆಚ್ಚವನ್ನೂ ಕಡಿಮೆ ಮಾಡುತ್ತದೆ.

ಏಕ ಪ್ರಕಾರದ ಪಕ್ವತೆಯು ಕೊಯ್ಲಿನಪ್ರಕ್ರಿಯೆಗಳನ್ನು ಸುಲಭಗೊಳಿಸುತ್ತದೆ ಮತ್ತು ಕೊಯ್ಲಿನ ಸಮಯದಲ್ಲಾಗುವ ಬೆಳೆನಷ್ಟವನ್ನು ಕಡಿಮೆಗೊಳ್ಳಿಸುತ್ತದೆ.

5 ವ್ಯಾಪಕ ಹೊಂದಾಣಿಕೆ: ವ್ಯಾಪಾರ ಹೊಂದಾಣಿಕೆಯ ತಳಿಗಳ ಅಭಿವೃದ್ಧಿಯು ವಿವಿಧ ಪರಿಸರ ಪರಿಸ್ಥಿತಿಯಲ್ಲಿ ಬೆಳೆಯ ಉತ್ಪಾದನೆಯು ಸ್ಥಿರವಾಗಿಡಲು ಸಹಾಯ ಮಾಡುತ್ತದೆ. ನಂತರ ಒಂದು ತಳಿಯನ್ನು ವಿಭಿನ್ನ ಪ್ರದೇಶಗಳಲ್ಲಿ ವಿಭಿನ್ನ, ಹವಾಮಾನ ಪರಿಸ್ಥಿತಿಗಳಲ್ಲಿ ಬೆಳೆಯಬಹುದು.

6 ಬೆಳೆಗೆ ಸಂಬಂಧಿಸಿದ ಅಪೇಕ್ಷಣೀಯ ಗುಣ ಲಕ್ಷಣಗಳು: ಎತ್ತರ ಮತ್ತು ಅಮಿತ ಕವಲೊಡೆಯುವಿಕೆಗಳು ಮೇವಿನ ಬೆಳೆಯ ಅಪೇಕ್ಷಣೀಯ ಗುಣಲಕ್ಷಣಗಳು.

ಧಾನ್ಯಗಳಲ್ಲಿ ಗಿಡ್ಡತನವು –ಅಪೇಕ್ಷಣೀಯ ಇದರಿಂದಾಗಿ ಕಡಿಮೆ ಪೋಷಕಾಂಶಗಳು ಈ ಬೆಳೆಗಳಿಂದ ಬಳಸಲ್ಪಡುತ್ತವೆ. ಹೀಗೆ ಬೆಳೆಗೆ ಸಂಬಂಧಿಸಿದ ಅಪೇಕ್ಷಣೀಯ ಗುಣಲಕ್ಷಣಗಳ ತಳಿಯ ಅಭಿವೃದ್ಧಿಯು ಅಧಿಕ ಇಳುವರಿಯನ್ನು ನೀಡಲು ಸಹಾಯಕವಾಗಿದೆ.

ತಳಿ ಸುಧಾರಣೆ ಅಂಶಗಳಿಗೆ ಸಂಬಂಧಿಸಿದಂತೆ ಕೆಲವೊಂದು ಲಕ್ಷಣಗಳು

35 of 132

ಚಟುವಟಿಕೆ 1.1.1

ಈ ಕೆಳಗಿನ ನಕ್ಷ ಹಾಳೆಯನ್ನು ಪೂರ್ಣಗೊಳಿಸು.

36 of 132

ಈ ಕೆಳಗಿನ ನಕ್ಷ ಹಾಳೆಯನ್ನು ಪೂರ್ಣಗೊಳಿಸು.

37 of 132

ಪ್ರಶ್ನೆಗಳು :

  1. ಬೆಳೆಯ ಉತ್ಪನ್ನದ ಮೇಲೆ ಜೈವಿಕ ಮತ್ತು ಅಜೈವಿಕ ಅಂಶಗಳು ಹೇಗೆ ಪ್ರಭಾವ ಬೀರುತ್ತವೆ?

  • ಬೆಳೆ ಸುಧಾರಣೆಗೆ ಸಂಬಂಧಿಸಿದಂತೆ ಬೆಳೆಗೆ ಸಂಬಂಧಿಸಿದ ಅಪೇಕ್ಷಣೀಯ ಗುಣ ಲಕ್ಷಣಗಳು ಯಾವುವು?

38 of 132

ಬೆಳೆ ಉತ್ಪಾದನೆಯ ನಿರ್ವಹಣೆ (Crop production Management):

  • ಇತರೆ ಅನೇಕ ಕೃಷಿ ಆಧಾರಿತ ರಾಷ್ಟ್ರಗಳಲ್ಲಿರುವಂತೆ ಭಾರತದಲ್ಲೂ ವ್ಯವಸಾಯವು ಸಣ್ಣ ಕೃಷಿ ಭೂಮಿಯಿಂದ ಹಿಡಿದು ಅತಿ ದೊಡ್ಡ ಕೃಷಿ ಭೂಮಿಗಳಲ್ಲಿ ನಡೆಯುತ್ತದೆ.

  • ಹೀಗೆ ಬೇರೆ ಬೇರೆ ರೈತರು ಹೆಚ್ಚು ಅಥವಾ ಕಡಿಮೆ ಕೃಷಿ ಭೂಮಿ, ಹಣ ಹಾಗೂ ಮಾಹಿತಿ ಮತ್ತು ತಂತ್ರಜ್ಞಾನಗಳ ಲಭ್ಯತೆಯನ್ನು ಹೊಂದಿದ್ದಾರೆ.

  • ಸಂಕ್ಷಿಪ್ತವಾಗಿ ಹೇಳುವುದಾದರೆ, ಹಣ ಅಥವಾ ಆರ್ಥಿಕ ಪರಿಸ್ಥಿತಿಯು ರೈತರನ್ನು ವಿಭಿನ್ನ ಕೃಷಿ ಪದ್ಧತಿಗಳು ಮತ್ತು ಕೃಷಿ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳಲು ಅನುವು ಮಾಡಿಕೊಡುತ್ತದೆ.

39 of 132

ಬೆಳೆ ಉತ್ಪಾದನೆಯ ನಿರ್ವಹಣೆ (Crop production Management):

  • ಅಧಿಕ ಒಳಸುರಿ ಮತ್ತು ಇಳುವರಿಯ ಮಧ್ಯೆ ಪರಸ್ಪರ ಸಂಬಂಧವಿದೆ.

  • ಹೀಗೆ ಒಳಸುರಿಯನ್ನು ನಿರ್ವಹಿಸುವ ಒಬ್ಬ ರೈತನ ಕೊಂಡುಕೊಳ್ಳುವ ಸಾಮಥ್ರ್ಯವು ಕೃಷಿ ಪದ್ಧತಿ ಮತ್ತು ಉತ್ಪಾದನಾ ಪದ್ಧತಿಗಳನ್ನು ನಿರ್ಧರಿಸುತ್ತದೆ.

  • ಆದ್ದರಿಂದ ಉತ್ಪಾದನಾ ಪದ್ಧತಿಗಳು ವಿವಿಧ ರೀತಿಯಲ್ಲಿರಬಹುದು.

  • ಅವು `ವೆಚ್ಚರಹಿತ' ಉತ್ಪಾದನೆ, `ಕಡಿಮೆ ವೆಚ್ಚದ' ಉತ್ಪಾದನೆ ಮತ್ತು `ಅಧಿಕ ವೆಚ್ಚದ‘ ಉತ್ಪಾದನೆ ಪದ್ಧತಿಗಳನ್ನು ಒಳಗೊಂಡಿರುತ್ತದೆ.

40 of 132

ಬೆಳೆ ಉತ್ಪಾದನೆಯ ನಿರ್ವಹಣೆ & ಪೋಷಕಾಂಶ ನಿರ್ವಹಣೆ:

Soil & Crop Nutrient Management

41 of 132

ಬೆಳೆ ಉತ್ಪಾದನೆಯ ನಿರ್ವಹಣೆ (Crop production Management):

(i) ಪೋಷಕಾಂಶ ನಿರ್ವಹಣೆ(Nutrient Management):

  • ಬೆಳವಣಿಗೆ, ಅಭಿವೃದ್ಧಿ ಮತ್ತು ಆರೋಗ್ಯವಾಗಿರಲು ಹೇಗೆ ನಮಗೆ ಆಹಾರದ ಅಗತ್ಯವಿದೆಯೋ, ಸಸ್ಯಗಳಿಗೂ ಸಹ ಬೆಳವಣಿಗೆಗಾಗಿ ಪೋಷಕಾಂಶಗಳ ಅಗತ್ಯವಿದೆ.
  • ಗಾಳಿ, ನೀರು ಮತ್ತು ಮಣ್ಣಿನ ಮೂಲಕ ಪೋಷಕಾಂಶಗಳ ಪೂರೈಕೆಯಾಗುತ್ತದೆ.

ಸಸ್ಯಗಳಿಗೆ ಅಗತ್ಯವಾಗಿ ಬೇಕಾದ ಹದಿನಾರು ಪೋಷಕಾಂಶಗಳಿವೆ.

  • ಗಾಳಿಯು ಕಾರ್ಬನ್ ಮತ್ತು ಆಕ್ಸಿಜನ್ ಅನ್ನು ಪೂರೈಸುತ್ತದೆ,

ನೀರಿನಿಂದ ಹೈಡ್ರೋಜನ್ ದೊರೆಯುತ್ತದೆ ಮತ್ತು ಮಣ್ಣು ಇತರ

ಹದಿಮೂರು ಪೋಷಕಾಂಶಗಳನ್ನು ಸಸ್ಯಗಳಿಗೆ ಒದಗಿಸುತ್ತದೆ.

  • ಈ ಹದಿಮೂರು ಪೋಷಕಾಂಶಗಳಲ್ಲಿ, ಆರು ಪೋಷಕಾಂಶಗಳು

ಅಧಿಕ ಪ್ರಮಾಣದಲ್ಲಿ ಬೇಕಾಗುತ್ತವೆ ಮತ್ತು ಹೀಗಾಗಿ ಅವುಗಳನ್ನು

ಬೃಹತ್ ಪೋಷಕಾಂಶಗಳು(Macro nutrients) ಎಂದು ಕರೆಯುತ್ತಾರೆ.

  • ಉಳಿದ ಏಳು ಪೋಷಕಾಂಶಗಳನ್ನು ಸಸ್ಯಗಳು ಕಡಿಮೆ ಪ್ರಮಾಣದಲ್ಲಿ

ಬಳಸುತ್ತವೆ ಮತ್ತು ಹೀಗಾಗಿ ಇವುಗಳನ್ನು ಸೂಕ್ಷ್ಮ ಪೋಷಕಾಂಶಗಳು (Micro nutrients)

ಎಂದು ಕರೆಯುತ್ತಾರೆ.

42 of 132

ಕೋಷ್ಟಕ : ಗಾಳಿ, ನೀರು ಮತ್ತು ಮಣ್ಣಿನಿಂದ ಸರಬರಾಜಾದ ಪೋಷಕಾಂಶಗಳು.

ಆಕರ

ಪೋಷಕಾಂಶಗಳು

ಗಾಳಿ

ನೀರು

ಮಣ್ಣು

ಕಾರ್ಬನ್, ಆಕ್ಸಿಜನ್

ಹೈಡ್ರೋಜನ್, ಆಕ್ಸಿಜನ್

  1. ಬೃಹತ್ ಪೋಷಕಾಂಶಗಳು :
  2. ನೈಟ್ರೋಜನ್, ಫಾಸ್ಪರಸ್, ಪೊಟ್ಯಾಸಿಯಂ, ಕ್ಯಾಲ್ಸಿಯಂ, ಮೆಗ್ನೀಷಿಯಂ, ಸಲ್ಫರ್

(ii) ಸೂಕ್ಷ್ಮ ಪೋಷಕಾಂಶಗಳು :

ಕಬ್ಬಿಣ, ಮ್ಯಾಂಗನೀಸ್, ಬೋರಾನ್,

ಸತು (ಜಿಂಕ್), ತಾಮ್ರ, ಮಾಲಿಬ್ಡಿನಮ್, ಕ್ಲೋರಿನ್

43 of 132

  • ಈ ಪೋಷಕಾಂಶಗಳ ಕೊರತೆಯು ಸಸ್ಯಗಳ ಸಂತಾನೋತ್ಪತ್ತಿ, ಬೆಳವಣಿಗೆ ಮತ್ತು ರೋಗಗಳ ಪ್ರಭಾವಕ್ಕೆ ಸಿಲುಕುವುದು ಇವೇ ಮುಂತಾದ ಶಾರೀರಿಕ ಕ್ರಿಯೆಗಳ ಮೇಲೆ ಪ್ರಭಾವ ಬೀರುತ್ತದೆ.

  • ಇಳುವರಿಯನ್ನು ಹೆಚ್ಚಿಸಲು ಸಾವಯವ ಗೊಬ್ಬರ ಹಾಗೂ ರಸಗೊಬ್ಬರಗಳ ಮೂಲಕ ಈ ಪೋಷಕಾಂಶಗಳನ್ನು ಪೂರೈಸಿ ಮಣ್ಣನ್ನು ಪುಷ್ಟೀಕರಿಸಬೇಕು.

ಬೆಳೆ ಉತ್ಪಾದನೆಯ ನಿರ್ವಹಣೆ & ಪೋಷಕಾಂಶ ನಿರ್ವಹಣೆ:

44 of 132

ಪ್ರಶ್ನೆಗಳು :

  1. ಬೃಹತ್ ಪೋಷಕಾಂಶಗಳು ಎಂದರೇನು ? ಮತ್ತು ಅವುಗಳನ್ನು ಬೃಹತ್ ಪೋಷಕಾಂಶಗಳೆಂದು ಏಕೆ ಕರೆಯುತ್ತಾರೆ ?

2) ಸಸ್ಯಗಳು ಪೋಷಕಾಂಶಗಳನ್ನು ಹೇಗೆ ಪಡೆಯುತ್ತವೆ ?

45 of 132

ಸಾವಯವ ಗೊಬ್ಬರ :

(i) ಪೋಷಕಾಂಶ ನಿರ್ವಹಣೆ(Nutrient Management):

  • ಸಾವಯವ ಗೊಬ್ಬರ (manure) ಹೆಚ್ಚಿನ ಪ್ರಮಾಣದ ಸಾವಯವ ವಸ್ತುಗಳನ್ನು ಹೊಂದಿರುತ್ತದೆ, ಮತ್ತು ಮಣ್ಣಿಗೆ ಅಲ್ಪ ಪ್ರಮಾಣದಲ್ಲಿ ಪೋಷಕಾಂಶಗಳನ್ನು ಒದಗಿಸುತ್ತದೆ.

  • ಪ್ರಾಣಿಗಳ ಮಲ ಮತ್ತು ಸಸ್ಯ ತ್ಯಾಜ್ಯಗಳ ವಿಘಟನೆಯಿಂದ ಸಾವಯವ ಗೊಬ್ಬರವನ್ನು ತಯಾರಿಸಬಹುದು.

  • ಮಣ್ಣನ್ನು ಪೋಷಕಾಂಶಗಳಿಂದ ಮತ್ತು ಸಾವಯವ ವಸ್ತುಗಳಿಂದ ಪುಷ್ಪಿಕರಿಸಲು ಹಾಗೂ ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸಲು ಸಾವಯವ ಗೊಬ್ಬರವು ಸಹಾಯ ಮಾಡುತ್ತದೆ.

  • ಸಾವಯವ ಗೊಬ್ಬರದಲ್ಲಿರುವ ಸಾವಯವ ವಸ್ತುಗಳ ರಾಶಿಯು ಮಣ್ಣಿನ ಸ್ವರೂಪವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಇದು ಮರಳು ಮಣ್ಣಿನ ನೀರು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯವನ್ನು ಹೆಚ್ಚಿಸಲು ಸಹಾಯವಾಗಿದೆ .

  • ಜೇಡಿಮಣ್ಣಿನಲ್ಲಿರುವ ಅಧಿಕ ಪ್ರಮಾಣದ ಸಾವಯವ ವಸ್ತುಗಳು ನೀರು ಸುಲಭವಾಗಿ ಹರಿದುಹೋಗುವಂತೆ ಮಾಡುತ್ತದೆ ಮತ್ತು ಜೌಗುವಿಕೆ (water logging) ಉಂಟಾಗುವುದನ್ನು ತಪ್ಪಿಸುತ್ತದೆ.

46 of 132

  • ಸಾವಯವ ಗೊಬ್ಬರಗಳ ಬಳಕೆಯ ಮೂಲಕ ನಾವು ಜೈವಿಕ ತ್ಯಾಜ್ಯಗಳನ್ನು ಬಳಸುತ್ತೇವೆ, ಇದು ಅತಿಯಾದ ರಸಗೊಬ್ಬರಗಳ ಬಳಕೆಯಿಂದ ನಮ್ಮ ಪರಿಸರವನ್ನು ರಕ್ಷಿಸಲು ಅನುಕೂಲಕರವಾಗಿದೆ.

  • ಜೈವಿಕ ತ್ಯಾಜ್ಯವಸ್ತುಗಳ ಬಳಕೆಯು ಕೃಷಿ ತ್ಯಾಜ್ಯದ ಮರುಬಳಕೆಯ ಒಂದು ವಿಧಾನವಾಗಿದೆ.

  • ಬಳಕೆ ಮಾಡುವ ಜೈವಿಕ ವಸ್ತುಗಳ ಆಧಾರದ ಮೇಲೆ ಸಾವಯವ ಗೊಬ್ಬರವನ್ನು ಈ ಕೆಳಗಿನಂತೆ ವರ್ಗೀಕರಿಸಬಹುದು.

(i) ಪೋಷಕಾಂಶ ನಿರ್ವಹಣೆ(Nutrient Management):

ಸಾವಯವ ಗೊಬ್ಬರ :

47 of 132

ಸಾವಯವ ಗೊಬ್ಬರ :-ಮಿಶ್ರಗೊಬ್ಬರ ಮತ್ತು ಎರೆಗೊಬ್ಬರ :

(i)ಮಿಶ್ರಗೊಬ್ಬರ:

ಕೃಷಿ ತ್ಯಾಜ್ಯ ವಸ್ತುಗಳಾದ ಜಾನುವಾರು ಮಲ (ಹಸು ಸಗಣಿ ಮುಂತಾದವು) ತರಕಾರಿ ತ್ಯಾಜ್ಯ, ಪ್ರಾಣಿಗಳು ತಿನ್ನದೆ ಬಿಟ್ಟ ಆಹಾರ, ಗೃಹತ್ಯಾಜ್ಯ, ಚರಂಡಿ ತ್ಯಾಜ್ಯ, ಒಣಹುಲ್ಲು, ಕಿತ್ತ ಕಳೆಗಿಡಗಳು ಮುಂತಾದವುಗಳನ್ನು ಗುಂಡಿಯಲ್ಲಿ ವಿಘಟನೆಗೆ ಒಳಪಡಿಸುವ ಪ್ರಕ್ರಿಯೆ ಮೂಲಕ ಮಿಶ್ರಗೊಬ್ಬರ (compost) ಪಡೆಯುತ್ತಾರೆ.

  • ಮಿಶ್ರಗೊಬ್ಬರವು ಸಾವಯವ ವಸ್ತು ಮತ್ತು ಪೋಷಕಾಂಶಗಳನ್ನು ಗರಿಷ್ಟ ಪ್ರಮಾಣದಲ್ಲಿ ಹೊಂದಿರುತ್ತದೆ.

  • ಮಿಶ್ರಗೊಬ್ಬರದ ತಯಾರಿಕೆಯಲ್ಲಿ ಎರೆಹುಳುಗಳನ್ನು ಬಳಸಿ ಸಸ್ಯ ಮತ್ತು ಪ್ರಾಣಿಗಳು ತಿನ್ನದೇ ಬಿಟ್ಟ ಆಹಾರದ ವಿಘಟನೆಯನ್ನು ವೇಗಗೊಳಿಸುವ ಪ್ರಕ್ರಿಯೆಯ ಮೂಲಕ ಎರೆಗೊಬ್ಬರ (vermi compost) ಪಡೆಯುತ್ತಾರೆ.

48 of 132

ಸಾವಯವ ಗೊಬ್ಬರ : ಹಸಿರು ಗೊಬ್ಬರ .

ii) ಹಸಿರು ಗೊಬ್ಬರ:

  • ಕೃಷಿ ಬೀಜಗಳನ್ನು ಬಿತ್ತನೆ ಮಾಡುವುದಕ್ಕೆ ಮೊದಲು ಸನ್ ಹೆಂಪ್ ಅಥವಾ ಗೌರ್ (cluster bean) ನಂತಹ ಕೆಲವು ಸಸ್ಯಗಳನ್ನು ಬೆಳೆಸಿ ನಂತರ ಉಳುಮೆ ಮಾಡಿ ಮಣ್ಣಿನಲ್ಲಿ ಮಿಶ್ರಣ ಮಾಡುತ್ತಾರೆ.

  • ಹೀಗೆ ಈ ಹಸಿರು ಸಸ್ಯಗಳು ಹಸಿರು ಗೊಬ್ಬರ (green manure)ವಾಗಿ ಬದಲಾಗುತ್ತವೆ, ಹಾಗೂ ಮಣ್ಣನ್ನು ನೈಟ್ರೋಜನ್ ಮತ್ತು ಫಾಸ್ಫರಸ್‍ನಿಂದ ಸಮೃದ್ಧಗೊಳಿಸುತ್ತವೆ.

49 of 132

ರಸಗೊಬ್ಬರಗಳು (Fertilizers) :

(i) ಪೋಷಕಾಂಶ ನಿರ್ವಹಣೆ(Nutrient Management):

  • ವಾಣಿಜ್ಯ ಉದ್ದೇಶಕ್ಕಾಗಿ ತಯಾರಿಸಲಾದ ಸಸ್ಯ ಪೋಷಕಾಂಶಗಳೇ ರಸಗೊಬ್ಬರಗಳು.
  • ಇವು ನೈಟ್ರೋಜನ್, ಫಾಸ್ಫರಸ್ ಮತ್ತು ಪೋಟ್ಯಾಷಿಯಂಗಳನ್ನು ಒದಗಿಸುತ್ತವೆ.
  • ಸಸ್ಯಭಾಗಗಳ (ಎಲೆಗಳು, ರೆಂಬೆಗಳು ಮತ್ತು ಹೂವು) ಉತ್ತಮ ಬೆಳವಣಿಗೆಗೆ ರಸಗೊಬ್ಬರಗಳನ್ನು ಬಳಸುತ್ತಾರೆ. ಇವು ಆರೋಗ್ಯಕರ ಸಸ್ಯಗಳನ್ನು ಉಂಟುಮಾಡುತ್ತವೆ.
  • ಹೆಚ್ಚು ವೆಚ್ಚದ ಕೃಷಿಯ ಅತ್ಯಧಿಕ ಇಳುವರಿಯಲ್ಲಿ ರಸಗೊಬ್ಬರಗಳು ಒಂದು ಪ್ರಮುಖ ಅಂಶವಾಗಿದೆ.
  • ರಸಗೊಬ್ಬರಗಳ ಸಂಪೂರ್ಣ ಸದ್ಬಳಕೆಗಾಗಿ ಬಳಸುವ ಮುನ್ನ ಮತ್ತು ನಂತರದ ಮುನ್ನೆಚ್ಚರಿಕೆಗಳನ್ನು ಗಮನಿಸಬೇಕು ಹಾಗೂ ಬಳಸುವಾಗ ಎಚ್ಚರಿಕೆಯಿಂದ ಸೂಕ್ತ ಪ್ರಮಾಣದಲ್ಲಿ ಮತ್ತು ಸಮಯದಲ್ಲಿ ಉಪಯೋಗಿಸಬೇಕು.

50 of 132

ರಸಗೊಬ್ಬರಗಳು(Fertilizers) :

  • ಉದಾಹರಣೆಗೆ ಕೆಲವೊಮ್ಮೆ ರಸಗೊಬ್ಬರಗಳು ಮಿತಿಮೀರಿದ ನೀರಾವರಿಯಿಂದ ಕೊಚ್ಚಿ ಹೋಗುತ್ತವೆ ಮತ್ತು ಸಸ್ಯಗಳು ಪೂರ್ತಿಯಾಗಿ ಹೀರಿಕೊಳ್ಳಲು ಸಾಧ್ಯವಾಗುವುದಿಲ್ಲ.

  • ಹೀಗೆ ಕೊಚ್ಚಿಹೋದ ರಸಗೊಬ್ಬರಗಳು ನಂತರ ಜಲಮಾಲಿನ್ಯ ಉಂಟುಮಾಡುತ್ತವೆ.

  • ರಸಗೊಬ್ಬರಗಳ ಸತತ ಬಳಕೆಯು ಮಣ್ಣಿನ ಫಲವತ್ತತೆಯನ್ನು ನಾಶಗೊಳಿಸುತ್ತದೆ. ಏಕೆಂದರೆ ಮಣ್ಣಿನಲ್ಲಿ ಸಾವಯವ ವಸ್ತುಗಳು ಮರುಭರ್ತಿಯಾಗುವುದಿಲ್ಲ ಮತ್ತು ಮಣ್ಣಿನಲ್ಲಿರುವ ಸೂಕ್ಷ್ಮಜೀವಿಗಳು ರಸಗೊಬ್ಬರಗಳ ಬಳಕೆಯಿಂದ ತೊಂದರೆಗೊಳಗಾಗುತ್ತವೆ.

  • ಬೆಳೆ ಉತ್ಪಾದನೆಯಲ್ಲಿ ಗರಿಷ್ಟ ಇಳುವರಿ ಪಡೆಯುವ ಗುರಿಯನ್ನು ಇಟ್ಟುಕೊಳ್ಳುವ ಮುನ್ನ ರಸಗೊಬ್ಬರಗಳ ಬಳಕೆಯಿಂದಾಗುವ ಅಲ್ಪಾವಧಿ ಲಾಭಗಳು ಮತ್ತು ಮಣ್ಣಿನ ಫಲವತ್ತತೆಯನ್ನು ಕಾಪಾಡಲು ಬಳಸುವ ಸಾವಯವ ಗೊಬ್ಬರಗಳಿಂದಾಗುವ ದೀರ್ಘಾವಧಿ ಲಾಭಗಳನ್ನು ಪರಿಗಣಿಸಬೇಕು.

51 of 132

ಚಟುವಟಿಕೆ 1.1.2

ಈ ಕೆಳಗಿನ ವ್ಯತ್ಯಾಸಗಳು ಬರೆಯಿರಿ

ಸಾವಯವ ಗೊಬ್ಬರ

ರಾಸಾಯನಿಕ ಗೊಬ್ಬರ

52 of 132

ಸಾವಯವ ಕೃಷಿ

  • ರಸಗೊಬ್ಬರಗಳು ಕಳೆನಾಶಕಗಳು, ಕೀಟನಾಶಕಗಳು ಮುಂತಾದ ರಾಸಾಯನಿಕಗಳನ್ನು ಬಳಸದೇ ಇರುವುದು ಅಥವಾ ಕಡಿಮೆ ಬಳಸುವುದು, ಮತ್ತು ಗರಿಷ್ಟ ಒಳಸುರಿಯಾಗಿ ಸಾವಯವ ಗೊಬ್ಬರಗಳು, ಮರುಬಳಕೆ ಮಾಡಿದ ಕೃಷಿ ತ್ಯಾಜ್ಯಗಳು (ಒಣ ಹುಲ್ಲು ಮತ್ತು ಜಾನುವಾರು ಮಲ) ನೀಲಿಹಸಿರು ಶೈವಲಗಳಂತಹ ಜೈವಿಕ ಮಾಧ್ಯಮಗಳಿಂದ ತಯಾರಿಸಿದ ಜೈವಿಕ ರಸಗೊಬ್ಬರಗಳು, ಧಾನ್ಯಗಳ ಸಂರಕ್ಷಣೆಯಲ್ಲಿ ಜೈವಿಕ ಪೀಡೆನಾಶಕವಾಗಿ ಬಳಸುವ ಬೇವಿನ ಎಲೆ ಅಥವಾ ಅರಶಿಣಗಳು ಹಾಗೂ ಆರೋಗ್ಯಕರ ಕೃಷಿ ವ್ಯವಸ್ಥೆ [ ಮಿಶ್ರಬೆಳೆ, ಅಂತರ ಬೆಳೆ ಮತ್ತು ಸರದಿ ಬೆಳೆ ಪದ್ಧತಿ] ಗಳಿಂದ ಕೃಷಿ ಮಾಡುವ ಪದ್ಧತಿಗೆ ಸಾವಯವ ಕೃಷಿ ಎನ್ನುವರು.

  • ಈ ಕೃಷಿ ಪದ್ಧತಿಗಳು ಕೀಟ, ಪೀಡೆ ಮತ್ತು ಕಳೆಗಳ ನಿಯಂತ್ರಣದ ಜೊತೆಗೆ ಪೋಷಕಾಂಶಗಳನ್ನು ಒದಗಿಸುವಲ್ಲಿ ಲಾಭದಾಯಕವಾಗಿವೆ.

ರಾಸಾಯನಿಕ

ವಸ್ತುಗಳು

53 of 132

ಬೆಳೆ ಉತ್ಪಾದನೆಯ ನಿರ್ವಹಣೆ

(ii) ನೀರಾವರಿ (Irrigation):

  • ಭಾರತದಲ್ಲಿ ವ್ಯವಸಾಯವು ಬಹುತೇಕ ಮಳೆಯಾಧಾರಿತವಾಗಿದೆ.

  • ಅಂದರೆ ಬಹಳಷ್ಟು ಪ್ರದೇಶದಲ್ಲಿನ ಬೆಳೆಗಳ ಯಶಸ್ಸು ಸಕಾಲಿಕ ಮುಂಗಾರು ಮತ್ತು ಬೆಳವಣಿಗೆ ಋತುವಿನುದ್ದಕ್ಕೂ ಹರಡಿದ ಸಾಕಷ್ಟು ಮಳೆಯನ್ನು ಅವಲಂಬಿಸಿದೆ.

  • ಆದ್ದರಿಂದ ದುರ್ಬಲ ಮುಂಗಾರುಗಳು ಬೆಳೆಯ ನಷ್ಟಕ್ಕೆ ಕಾರಣವಾಗುತ್ತವೆ.
  • ಬೆಳವಣಿಗೆಯ ಋತುವಿನ ಸರಿಯಾದ ಹಂತಗಳಲ್ಲಿ ಅವುಗಳಿಗೆ ನೀರು ದೊರಕುವ ಭರವಸೆಯು ಯಾವುದೇ ಬೆಳೆಯ ನಿರೀಕ್ಷಿತ ಇಳುವರಿಯನ್ನು ಹೆಚ್ಚಿಸಬಹುದು.

  • ಆದ್ದರಿಂದ ಹೆಚ್ಚು ಕೃಷಿ ಭೂಮಿಯನ್ನು ನೀರಾವರಿಗೆ ಒಳಪಡಿಸಲು ಹಲವು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ

54 of 132

ಬೆಳೆ ಉತ್ಪಾದನೆಯ ನಿರ್ವಹಣೆ (Crop production Management):

55 of 132

ನೀರಾವರಿ ವಿಧಾನಗಳು.

Methods of Irrigation

56 of 132

  • ಭಾರತವು ಅತ್ಯಧಿಕ ವೈವಿಧ್ಯದ ಹವಾಮಾನ ಮತ್ತು ವ್ಯಾಪಕ ವಿಧದ ನೀರಿನ ಸಂಪನ್ಮೂಲಗಳನ್ನು ಹೊಂದಿದೆ.
  • ಇಂತಹ ಪರಿಸ್ಥಿತಿಗಳಲ್ಲಿ ಲಭ್ಯವಿರುವ ಹಲವು ವಿಧದ ನೀರಿನ ಸಂಪನ್ಮೂಲಗಳ ಆಧಾರದ ಮೇಲೆ ಕೃಷಿ ಭೂಮಿಗೆ ನೀರನ್ನು ಪೂರೈಸಲು ಹಲವು ವಿಧದ ನೀರಾವರಿ ವ್ಯವಸ್ಥೆಗಳನ್ನು ಅಳವಡಿಸಿಕೊಳ್ಳಲಾಗಿದೆ.
  • ಇವು ಬಾವಿಗಳು, ಕಾಲುವೆಗಳು, ನದಿಗಳು ಮತ್ತು ಕೆರೆಗಳನ್ನು ಒಳಗೊಂಡಿವೆ.

(ii) ನೀರಾವರಿ (Irrigation):

57 of 132

  • ಬಾವಿಗಳು : ಎರಡು ವಿಧದ ಬಾವಿಗಳಿವೆ . ಅವುಗಳೆಂದರೆ, ತೋಡಿದ ಅಥವಾ ತೆರೆದ ಬಾವಿಗಳು ಮತ್ತು ಕೊಳವೆ ಬಾವಿಗಳು.
  • ತೋಡಿದ ಬಾವಿಗಳಲ್ಲಿ ನೀರನ್ನು ಹೊಂದಿರುವ ಭೂ ಸ್ತರಗಳಿಂದ ನೀರು ಸಂಗ್ರಹವಾಗುತ್ತದೆ.
  • ಕೊಳವೆ ಬಾವಿಗಳು ಭೂಮಿಯ ಆಳವಾದ ಸ್ತರಗಳಿಂದ ನೀರನ್ನು ಸಂಗ್ರಹಿಸುತ್ತವೆ. ನೀರಾವರಿಗಾಗಿ ಈ ಬಾವಿಗಳಿಂದ ನೀರನ್ನು ಪಂಪ್‍ಗಳ ಮೂಲಕ ಮೇಲೆತ್ತಲಾಗುತ್ತದೆ.

● ಕಾಲುವೆಗಳು : ಸಾಮಾನ್ಯವಾಗಿ ಇದು ವಿಸ್ತಾರವಾದ ಮತ್ತ ವ್ಯಾಪಕವಾದ ನೀರಾವರಿ ವ್ಯವಸ್ಥೆಯಾಗಿದೆ.

  • ಈ ವ್ಯವಸ್ಥೆಯಲ್ಲಿ ಕಾಲುವೆಗಳು ಒಂದು ಅಥವಾ ಹೆಚ್ಚು ಜಲಾಶಯಗಳಿಂದ ಅಥವಾ ನದಿಗಳಿಂದ ನೀರನ್ನು ಪಡೆಯುತ್ತವೆ.
  • ಮುಖ್ಯ ಕಾಲುವೆಯು ಕವಲು ಕಾಲುವೆಗಳಾಗಿ ವಿಭಜಿಸುತ್ತವೆ, ಮುಂದುವರೆದಂತೆ ಅವು ವಿತರಣಾ ನಾಲೆಗಳ ಮೂಲಕ ಜಮೀನುಗಳಿಗೆ ನೀರೊದಗಿಸುತ್ತವೆ.

(ii) ನೀರಾವರಿ (Irrigation):

58 of 132

ಏತ ನೀರಾವರಿ ವ್ಯವಸ್ಥೆಗಳು :

ಜಲಾಶಯಗಳಿಂದ ಸಾಕಷ್ಟು ನೀರಿನ ಹೊರ ಹರಿವು ಇಲ್ಲದೇ ಕಾಲುವೆಗಳಲ್ಲಿ ನೀರಿನ ಹರಿವು ಅನಿಯಮಿತವಾಗಿರುವ ಇಲ್ಲವೇ ಕೊರತೆ ಇರುವ ಪ್ರದೇಶಗಳಲ್ಲಿ ಏತನೀರಾವರಿ ವ್ಯವಸ್ಥೆ ಹೆಚ್ಚು ವಿವೇಚನೆಯುಳ್ಳದ್ದಾಗಿದೆ. ಇಲ್ಲಿ ನದಿಗಳಿಗೆ ಹತ್ತಿರವಿರುವ ಪ್ರದೇಶಗಳಿಗೆ ನೀರಾವರಿ ಕಲ್ಪಿಸಲು ನೀರನ್ನು ನೇರವಾಗಿ ನದಿಗಳಿಂದ ಸೆಳೆಯಲಾಗುತ್ತದೆ.

ಕೃಷಿಹೊಂಡಗಳು :

ಇವು ಸಣ್ಣ ಸಂಗ್ರಹಣಾ ಜಲಾಶಯಗಳು, ಇವು ಸಣ್ಣ ಸಣ್ಣ ಜಲಾಶಯಗಳ ಪ್ರದೇಶಗಳಲ್ಲಿ ಹರಿದು ಹೋಗುವ ನೀರನ್ನು ತಡೆದು ಸಂಗ್ರಹಿಸುತ್ತವೆ.

(ii) ನೀರಾವರಿ (Irrigation):

ಏತ ನೀರಾವರಿ

ಕೃಷಿಹೊಂಡಗಳು

59 of 132

  • ಕೃಷಿಗಾಗಿ ನೀರಿನ ಲಭ್ಯತೆ ಹೆಚ್ಚಿಸಲು ಹೊಸ ಉಪಕ್ರಮಗಳು ಮಳೆನೀರು ಕೊಯ್ಲು ಮತ್ತು ಜಲಾನಯನ ಪ್ರದೇಶಗಳ ನಿರ್ವಹಣೆಯನ್ನು ಒಳಗೊಂಡಿದೆ.
  • ಇದು ನೀರುತಡೆ ಜಲಾಶಯ (Check-dam)ಗಳನ್ನು ನಿರ್ಮಿಸಿ ಅಂತರ್ಜಲ ಮಟ್ಟವನ್ನು ಹೆಚ್ಚಿಸುವುದಾಗಿದೆ.
  • ಈ ನೀರುತಡೆ ಜಲಾಶಯಗಳು ಮಳೆ ನೀರು ಹರಿದು ಹೋಗುವುದನ್ನು ತಡೆಗಟ್ಟುತ್ತದೆ ಮತ್ತು ಮಣ್ಣಿನ ಸವಕಳಿಯನ್ನೂ ಸಹ ಕಡಿಮೆ ಮಾಡುತ್ತದೆ.

(ii) ನೀರಾವರಿ (Irrigation):

60 of 132

ಬೆಳೆ ಉತ್ಪಾದನೆಯ ನಿರ್ವಹಣೆ):

(iii) ಬೆಳೆಯ ಮಾದರಿಗಳು (Cropping Patterns):

  • ಗರಿಷ್ಟ ಲಾಭವನ್ನು ಪಡೆಯಲು ಬೇರೆ ಬೇರೆ ಮಾದರಿಯ ಬೆಳೆ ಪದ್ಧತಿಯನ್ನು ಬಳಸಬಹುದು.

ಮಿಶ್ರ ಬೆಳೆ ಪದ್ಧತಿ ಅಥವಾ ಅಂತರ ಬೇಸಾಯ

  • ಮಿಶ್ರ ಬೆಳೆ ಪದ್ಧತಿ ಎಂದರೆ ಎರಡು ಅಥವಾ ಹೆಚ್ಚು ಬೆಳೆಗಳನ್ನು ಒಂದೇ ಸಮಯದಲ್ಲಿ ಒಂದೇ ಭೂಮಿಯಲ್ಲಿ ಬೆಳೆಯುವುದು.
  • ಉದಾಹರಣೆಗೆ, ಗೋಧಿ +ಕಡಲೆ ಅಥವಾ ಗೋಧಿ + ಸಾಸಿವೆ ಅಥವಾ ನೆಲಗಡಲೆ+ಸೂರ್ಯಕಾಂತಿ.
  • ಇದು ಅಪಾಯವನ್ನು ಕಡಿಮೆ ಮಾಡುತ್ತದೆ ಮತ್ತು ಯಾವುದಾದರೊಂದು ಬೆಳೆ ನಷ್ಟವಾಗುವುದರ ವಿರುದ್ಧ ಸ್ವಲ್ಪ ಮಟ್ಟಿಗಿನ ಭದ್ರತೆಯನ್ನು ನೀಡುತ್ತದೆ.

61 of 132

  • ಅಂತರ ಬೇಸಾಯ ಎಂದರೆ ಎರಡು ಅಥವಾ ಹೆಚ್ಚು ಬೆಳೆಗಳನ್ನು ಒಂದೇ ಸಮಯದಲ್ಲಿ ಒಂದೇ ಭೂಮಿಯಲ್ಲಿ ನಿರ್ದಿಷ್ಟ ಮಾದರಿಯಲ್ಲಿ) ಬೆಳೆಯುವುದು.

  • ಕೆಲವು ಅಡ್ಡಸಾಲುಗಳಲ್ಲಿ ಒಂದು ಬೆಳೆಯನ್ನೂ ನಂತರದ ಕೆಲವು ಅಡ್ಡಸಾಲುಗಳಲ್ಲಿ ಎರಡನೇ ಬೆಳೆಯನ್ನೂ ಬೆಳೆಯಲಾಗುತ್ತದೆ.

  • ಉದಾಹರಣೆಗೆ:- ಸೋಯಾಬೀನ್ + ಮೆಕ್ಕೆ ಜೋಳ, ಸಜ್ಜೆ + ಚಪ್ಪರದ ಅವರೆ. ಬೇರೆ ಬೇರೆ ಪೋಷಕಾಂಶಗಳ ಅವಶ್ಯಕತೆಯಿರುವ ಬೆಳೆಗಳನ್ನು ಆಯ್ಕೆ ಮಾಡಲಾಗುತ್ತದೆ . ಇದು ಒದಗಿಸಿದ ಪೋಷಕಾಂಶಗಳು ಗರಿಷ್ಠ ಪ್ರಮಾಣದಲ್ಲಿ ಬಳಕೆಯಾಗುವುದನ್ನು ನಿಶ್ಚಿತಗೊಳ್ಳಿಸುತ್ತದೆ

ಮತ್ತು ಕೀಟಗಳು ಹಾಗೂ ರೋಗಗಳು

ಕೃಷಿ ಭೂಮಿಯಲ್ಲಿನ ಒಂದು ಬೆಳೆಗೆ ಸೇರಿದ

ಎಲ್ಲಾ ಸಸ್ಯಗಳಿಗೆ ಹರಡುವುದನ್ನು ತಡೆಗಟ್ಟುತ್ತದೆ.

(iii) ಬೆಳೆಯ ಮಾದರಿಗಳು (Cropping Patterns):

62 of 132

  • ಇದು ಒದಗಿಸಿದ ಪೋಷಕಾಂಶಗಳು ಗರಿಷ್ಠ ಪ್ರಮಾಣದಲ್ಲಿ ಬಳಕೆಯಾಗುವುದನ್ನು ನಿಶ್ಚಿತಗೊಳ್ಳಿಸುತ್ತದೆ ಮತ್ತು ಕೀಟಗಳು ಹಾಗೂ ರೋಗಗಳು ಕೃಷಿ ಭೂಮಿಯಲ್ಲಿನ ಒಂದು ಬೆಳೆಗೆ ಸೇರಿದ ಎಲ್ಲಾ ಸಸ್ಯಗಳಿಗೆ ಹರಡುವುದನ್ನು ತಡೆಗಟ್ಟುತ್ತದೆ.

  • ಈ ರೀತಿಯಾಗಿ ಎರಡೂ ಬೆಳೆಗಳು ಉತ್ತಮ ಇಳುವರಿಯನ್ನು ಕೊಡುತ್ತವೆ .

(iii) ಬೆಳೆಯ ಮಾದರಿಗಳು (Cropping Patterns):

63 of 132

ಅಂತರ ಬೇಸಾಯ :

64 of 132

  • ಒಂದು ತುಂಡು ಭೂಮಿಯಲ್ಲಿ ಬೇರೆ ಬೇರೆ ಬೆಳೆಗಳನ್ನು ಪೂರ್ವನಿರ್ಧರಿತ ಅನುಕ್ರಮದಲ್ಲಿ ಬೆಳೆಯುವುದಕ್ಕೆ ಸರದಿ ಬೇಸಾಯ ಎನ್ನಲಾಗುತ್ತದೆ.

  • ಬೆಳವಣಿಗೆ ಕಾಲಾವಧಿಯ ಆಧಾರದ ಮೇಲೆ ಸರದಿ ಬೇಸಾಯವನ್ನು ವಿಭಿನ್ನ ಬೆಳೆ ಸಂಯೋಜನೆಗಳೊಂದಿಗೆ ಮಾಡಲಾಗುತ್ತದೆ.

  • ಒಂದು ಬೆಳೆಯ ಕೊಯ್ಲಿನ ನಂತರ ತೇವಾಂಶದ ಲಭ್ಯತೆ ಮತ್ತು ನೀರಾವರಿ ಅನುಕೂಲತೆಗಳು ಮತ್ತೊಂದು ಬೆಳೆಯ ಆಯ್ಕೆಯನ್ನು ನಿರ್ಧರಿಸುತ್ತವೆ.

  • ಒಂದೊಮ್ಮೆ ಸರದಿ ಬೇಸಾಯವನ್ನು ಸಮರ್ಪಕವಾಗಿ ಮಾಡಿದಲ್ಲಿ ಒಂದು ವರ್ಷದಲ್ಲಿ ಎರಡು ಅಥವಾ ಮೂರು ಬೆಳೆಗಳನ್ನು ಉತ್ತಮ ಇಳುವರಿಗಳೊಂದಿಗೆ ಬೆಳೆಯಬಹುದು.

: ಸರದಿ ಬೇಸಾಯ

65 of 132

ಚಟುವಟಿಕೆ 1.1.2

ಅಂತರ ಬೇಸಾಯ

ಸರದಿ ಬೇಸಾಯ

ಈ ಕೆಳಗಿನ ವ್ಯತ್ಯಾಸಗಳು ಬರೆಯಿರಿ

66 of 132

ಈ ಕೆಳಗಿನ ನಕ್ಷ ಹಾಳೆಯನ್ನು ಪೂರ್ಣಗೊಳಿಸು.

67 of 132

ಈ ಕೆಳಗಿನ ನಕ್ಷ ಹಾಳೆಯನ್ನು ಪೂರ್ಣಗೊಳಿಸು.

ಚಟುವಟಿಕೆ 1.1.3

68 of 132

ಬೆಳೆ ರಕ್ಷಣೆಯ ನಿರ್ವಹಣೆ(crop protection management):

  • ಕೃಷಿ ಬೆಳೆಗಳು ಅಸಂಖ್ಯಾತ ಕಳೆಗಳಿಂದ, ಕೀಟ ಪೀಡೆಗಳಿಂದ ಮತ್ತು ರೋಗಗಳಿಂದ ತೊಂದರೆಗೆ ಒಳಗಾಗುತ್ತವೆ.

  • ಒಂದು ವೇಳೆ ಕಳೆಗಳನ್ನು ಮತ್ತು ಕೀಟಗಳನ್ನು ಸರಿಯಾದ ಸಮಯದಲ್ಲಿ ನಿಯಂತ್ರಿಸದಿದ್ದರೆ ಅವು ಬೆಳೆಗಳಿಗೆ ಅಧಿಕ ಪ್ರಮಾಣದಲ್ಲಿ ಹಾನಿಯುಂಟು ಮಾಡಿ ಬೆಳೆ ಬಹುತೇಕ ನಷ್ಟವಾಗುತ್ತದೆ.

ಕಳೆ

ಕೀಟ ಪೀಡೆ

69 of 132

ಬೆಳೆ ರಕ್ಷಣೆಯ ನಿರ್ವಹಣೆ(crop protection management):

  • ಕಳೆಗಳು ಕೃಷಿ ಭೂಮಿಯಲ್ಲಿ ಬೆಳೆಯುವ ನಮಗೆ ಬೇಡದ ಸಸ್ಯಗಳಾಗಿವೆ.

  • ಉದಾಹರಣೆಗೆ, ಕ್ಸ್ಯಾಂಥಿಯಮ್, ಪಾರ್ಥೇನಿಯಂ, ಸೈಪರಿನಸ್ ರೊಟಂಡಸ್.

  • ಅವು ಆಹಾರ, ಸ್ಥಳ ಮತ್ತು ಬೆಳಕಿಗಾಗಿ ಸ್ಪರ್ಧಿಸುತ್ತವೆ.

  • ಕಳೆಗಳು ಪೋಷಕಾಂಶಗಳನ್ನು ಹೀರಿಕೊಂಡು ಬೆಳೆಯ ಬೆಳವಣಿಗೆಯನ್ನು ಕಡಿಮೆ ಮಾಡುತ್ತವೆ.

  • ಆದ್ದರಿಂದ ಉತ್ತಮ ಇಳುವರಿಗಾಗಿ ಬೆಳೆಯ ಬೆಳವಣಿಗೆಯ ಪ್ರಾರಂಭಿಕ ಹಂತಗಳಲ್ಲಿಯೇ ಕಳೆಗಳನ್ನು ಕೃಷಿ ಭೂಮಿಯಿಂದ ತೆಗೆಯುವುದು ಅಗತ್ಯವಾಗಿದೆ.

ಪಾರ್ಥೇನಿಯಂ,

ಸೈಪರಿನಸ್ ರೊಟಂಡಸ್

70 of 132

  • ಸಾಮಾನ್ಯವಾಗಿ ಕೀಟ ಪಿಡುಗುಗಳು ಸಸ್ಯಗಳನ್ನು ಮೂರು ವಿಧಗಳಲ್ಲಿ ಆಕ್ರಮಿಸುತ್ತವೆ.
  • ಅವು ಬೇರು, ಕಾಂಡ ಮತ್ತು ಎಲೆಗಳನ್ನು ಕತ್ತರಿಸುತ್ತವೆ.
  • ಸಸ್ಯದ ವಿವಿಧ ಭಾಗಗಳಿಂದ ಕೋಶರಸವನ್ನು ಅವುಗಳು ಹೀರುತ್ತವೆ.
  • ಅವು ಕಾಂಡ ಮತ್ತು ಹಣ್ಣುಗಳನ್ನು ಕೊರೆಯುತ್ತವೆ. ಹೀಗೆ

ಅವು ಬೆಳೆಯ ಆರೋಗ್ಯದ ಮೇಲೆ ಪರಿಣಾಮ ಉಂಟುಮಾಡಿ ಇಳುವರಿಯನ್ನು ಕಡಿಮೆ ಮಾಡುತ್ತವೆ.

  • ಬ್ಯಾಕ್ಟೀರಿಯಾ , ಶಿಲಿಂದ್ರ ಮತ್ತು ವೈರಸ್ ಗಳಂತಹ ರೋಗಕಾರಕಗಳಿಂದ ಸಸ್ಯಗಳಲ್ಲಿ ರೋಗಗಳು ಉಂಟಾಗುತ್ತವೆ. ಈ ರೋಗಕಾರಕಗಳು ಮಣ್ಣು, ನೀರು ಮತ್ತು ಗಾಳಿಯಲ್ಲಿದ್ದು, ಅವುಗಳ ಮೂಲಕವೇ ಹರಡುತ್ತವೆ.

ಬೆಳೆ ರಕ್ಷಣೆಯ ನಿರ್ವಹಣೆ(crop protection management):

71 of 132

  • ಕಳೆಗಳು, ಕೀಟಗಳು ಮತ್ತು ರೋಗಗಳನ್ನು ಹಲವು ವಿಧಾನಗಳಿಂದ ನಿಯಂತ್ರಿಸಬಹುದು.

  • ಸಾಮಾನ್ಯವಾಗಿ ಹೆಚ್ಚು ಬಳಕೆಯಲ್ಲಿರುವ ಒಂದು ವಿಧಾನವೆಂದರೆ ಪೀಡೆನಾಶಕಗಳ ಬಳಕೆ, ಅವು ಕಳೆನಾಶಕಗಳು, ಕೀಟನಾಶಕಗಳು, ಮತ್ತು ಶಿಲೀಂಧ್ರನಾಶಕಗಳನ್ನು ಒಳಗೊಂಡಿವೆ.

  • ಈ ರಾಸಾಯನಿಕಗಳನ್ನು ಬೆಳೆ ಸಸ್ಯಗಳ ಮೇಲೆ ಸಿಂಪಡಿಸುತ್ತಾರೆ ಅಥವಾ ಬಿತ್ತನೆ ಬೀಜಗಳು ಮತ್ತು ಮಣ್ಣನ್ನು ಸಂಸ್ಕರಿಸಲು ಬಳಸುತ್ತಾರೆ.

  • ಆದಾಗ್ಯೂ ಇಂತಹ ರಾಸಾಯನಿಕಗಳ ಅತಿಯಾದ ಬಳಕೆಯು ಸಮಸ್ಯೆಗಳನ್ನು ಉಂಟುಮಾಡುತ್ತದೆ.
  • ಏಕೆಂದರೆ ಅವು ಅನೇಕ ಸಸ್ಯ ಮತ್ತು ಪ್ರಾಣಿ ಪ್ರಭೇದಗಳಿಗೆ ವಿಷಕಾರಿಯಾಗಿ ಪರಿಣಮಿಸಬಹುದು ಮತ್ತು ಅವು ಪರಿಸರ ಮಾಲಿನ್ಯವನ್ನು ಉಂಟುಮಾಡಬಹುದು.

ಬೆಳೆ ರಕ್ಷಣೆಯ ನಿರ್ವಹಣೆ(crop protection management):

72 of 132

  • ಯಾಂತ್ರಿಕವಾಗಿ ಕಳೆ ಸಸ್ಯಗಳನ್ನು ಕೀಳುವುದೂ ಕೂಡಾ ಕಳೆಗಳ ನಿಯಂತ್ರಣ ವಿಧಾನಗಳಲ್ಲಿ ಒಂದಾಗಿದೆ.

  • ಸಮರ್ಪಕ ಬೀಜ ಪಾತ್ರದ (seed bed) ತಯಾರಿಕೆ, ನಿಗದಿತ ಸಮಯದಲ್ಲಿ ಬಿತ್ತನೆ, ಅಂತರ ಬೇಸಾಯ ಪದ್ಧತಿ ಮತ್ತು ಬೆಳೆ ಸರದಿ ವಿಧಾನಗಳು ಮುಂತಾದ ನಿಯಂತ್ರಣ ವಿಧಾನಗಳೂ ಕೂಡಾ ಕಳೆ ನಿಯಂತ್ರಿಸಲು ಸಹಾಯ ಮಾಡುತ್ತವೆ.

  • ಪೀಡೆಗಳ ವಿರುದ್ಧದ ಇನ್ನಿತರ ನಿಯಂತ್ರಣ ವಿಧಾನಗಳೆಂದರೆ, ಪ್ರತಿರೋಧ ತಳಿಗಳ ಬಳಕೆ ಮತ್ತು ಬೇಸಿಗೆ ಉಳುಮೆ, ಇಲ್ಲಿ ಕಳೆಗಳು ಮತ್ತು ಪೀಡೆಗಳನ್ನು ನಾಶಪಡಿಸಲು ಬೇಸಿಗೆ ಕಾಲದಲ್ಲಿ ಕೃಷಿ ಭೂಮಿಯನ್ನು ಆಳವಾಗಿ ಉಳುಮೆ ಮಾಡಲಾಗುತ್ತದೆ.

ಬೆಳೆ ರಕ್ಷಣೆಯ ನಿರ್ವಹಣೆ(crop protection management):

73 of 132

ಪ್ರಶ್ನೆ:

  1. ಈ ಕೆಳಗಿನ ಯಾವ ಪರಿಸ್ಥಿತಿಗಳು ಗರಿಷ್ಟ ಲಾಭವನ್ನು ಕೊಡುತ್ತವೆ? ಏಕೆ?

  1. ರೈತರು ಅತ್ಯುತ್ತಮ ಗುಣಮಟ್ಟದ ಬೀಜಗಳನ್ನು ಬಳಸುತ್ತಾರೆ. ಅವರು ನೀರಾವರಿಯನ್ನು ಅಳವಡಿಸಿಕೊಳ್ಳುವುದಿಲ್ಲ ಅಥವಾ ರಸಗೊಬ್ಬರಗಳನ್ನು ಬಳಸುವುದಿಲ್ಲ.

b) ರೈತರು ಸಾಧಾರಣ ಬೀಜಗಳನ್ನು ಬಳಸುತ್ತಾರೆ ಅವರು ನೀರಾವರಿಯನ್ನು

ಅಳವಡಿಸಿಕೊಳ್ಳುತ್ತಾರೆ ಮತ್ತು ರಸಗೊಬ್ಬರಗಳನ್ನು ಬಳಸುತ್ತಾರೆ.

c) ರೈತರು ಗುಣಮಟ್ಟದ ಬೀಜಗಳನ್ನು ಬಳಸುತ್ತಾರೆ, ನೀರಾವರಿಯನ್ನು ಅಳವಡಿಸಿಕೊಳ್ಳುತ್ತಾರೆ, ರಸಗೊಬ್ಬರಗಳನ್ನು ಬಳಸುತ್ತಾರೆ ಮತ್ತು ಬೆಳೆ ಸಂರಕ್ಷಣೆ ವಿಧಾನಗಳನ್ನು ಬಳಸುತ್ತಾರೆ.

74 of 132

ಚಟುವಟಿಕೆ :

● ಕಳೆ ಪೀಡೆಗೆ ಒಳಗಾಗಿರುವ ಕೃಷಿ ಭೂಮಿಗೆ ಜುಲೈ ಅಥವಾ ಆಗಸ್ಟ್ ತಿಂಗಳಲ್ಲಿ ಭೇಟಿ ನೀಡಿ ಮತ್ತು ಕೃಷಿ ಭೂಮಿಯಲ್ಲಿರುವ ಕಳೆಗಳು ಮತ್ತು ಕೀಟ ಪಿಡುಗುಗಳ ಪಟ್ಟಿ ಮಾಡಿ.

75 of 132

ಧಾನ್ಯಗಳ ಶೇಖರಣೆ(Storage of grains):

  • ಸಂಗ್ರಹಣಾ ನಷ್ಟವು ಕೃಷಿ ಉತ್ಪನ್ನಗಳಲ್ಲಿ ಅತ್ಯಧಿಕವಾಗಿರಬಹುದು.

  • ಇಂತಹ ನಷ್ಟಗಳಿಗೆ ಕಾರಣವಾದ ಜೈವಿಕ ಅಂಶಗಳೆಂದರೆ-ಕೀಟಗಳು, ದಂಶಕಗಳು, ಶಿಲೀಂಧ್ರಗಳು, ಹುಳುಗಳು ಮತ್ತು ಬ್ಯಾಕ್ಟೀರಿಯ ಹಾಗೂ ಅಜೈವಿಕ ಅಂಶಗಳೆಂದರೆ ಸಂಗ್ರಹಣಾ ಸ್ಥಳಗಳಲ್ಲಿರುವ ಅಸಮರ್ಪಕ ತೇವಾಂಶ ಮತ್ತು ತಾಪಮಾನಗಳು.

  • ಈ ಅಂಶಗಳಿಂದಾಗಿ ಉತ್ಪನ್ನಗಳ ಗುಣಮಟ್ಟದ ಕುಸಿತ, ತೂಕನಷ್ಟ, ಕ್ಷೀಣಿಸಿದ ಮೊಳೆಯುವಿಕೆ ಸಾಮಥ್ರ್ಯ, ನಿರ್ವರ್ಣತೆಗಳು ಉಂಟಾಗಿ ಉತ್ಪನ್ನಗಳ ಮಾರುಕಟ್ಟೆ ಮೌಲ್ಯ ಕಡಿಮೆಯಾಗುತ್ತದೆ, ಉತ್ಪನ್ನಗಳ ಸಮರ್ಪಕ ಉಪಚಾರದಿಂದ ಮತ್ತು ಉಗ್ರಾಣಗಳ ಕ್ರಮಬದ್ಧ ನಿರ್ವಹಣೆಯಿಂದ ಈ ಅಂಶಗಳನ್ನು ನಿಯಂತ್ರಿಸಬಹುದು.

76 of 132

ಧಾನ್ಯಗಳ ಶೇಖರಣೆ(Storage of grains):

  • ಭವಿಷ್ಯದ ಬಳಕೆಗಾಗಿ ಧಾನ್ಯಗಳನ್ನು ಶೇಖರಿಸುವ ಮೊದಲು ಹತೋಟಿ ಮತ್ತು ನಿಯಂತ್ರಕ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತದೆ.

  • ಅವುಗಳೆಂದರೆ ಶೇಖರಿಸುವ ಮುನ್ನ ಉತ್ಪನ್ನಗಳನ್ನು ಕಟ್ಟುನಿಟ್ಟಾಗಿ ಸ್ವಚ್ಚಗೊಳಿಸುವುದು. ಮೊದಲು ಸೌರಬಿಸಿಲಿನಲ್ಲಿ ನಂತರ ನೆರಳಿನಲ್ಲಿ ಉತ್ಪನ್ನಗಳನ್ನು ಸಮರ್ಪಕವಾಗಿ ಒಣಗಿಸುವುದು ಹಾಗೂ ಪೀಡೆಗಳನ್ನು ಕೊಲ್ಲುವ ರಾಸಾಯನಿಕ ಧೂಮಗಳನ್ನು (Fumigation) ಬಳಸುವುದು.

ಭಾರತದಲ್ಲಿ, ವಾರ್ಷಿಕ ಶೇಖರಣಾ ನಷ್ಟ 14-ಮಿಲಿಯನ್ ಟನ್ ಮೌಲ್ಯದ ರೂ. 7,000 ಕೋಟಿ ರೂ. ಇದರಲ್ಲಿ ಕೀಟಗಳಿಂದ ಸುಮಾರು ರೂ. 1,300 ಕೋಟಿ ರೂ.

77 of 132

ಚಟುವಟಿಕೆ 1.1.4

ಈ ಕೆಳಗಿನ ನಕ್ಷ ಹಾಳೆಯನ್ನು ಪೂರ್ಣಗೊಳಿಸು.

78 of 132

ಧಾನ್ಯಗಳ ಶೇಖರಣೆ(Storage of grains):

Storage of Grains

79 of 132

ಪ್ರಶ್ನೆಗಳು:

  1. ಬೆಳೆಗಳ ರಕ್ಷಣೆಗಾಗಿ ನಿಯಂತ್ರಣ ಕ್ರಮಗಳಿಗೆ ಮತ್ತು ಜೈವಿಕ ನಿಯಂತ್ರಣ ವಿಧಾನಗಳಿಗೆ ಏಕೆ ಆದ್ಯತೆ ನೀಡಬೇಕು?

2. ಶೇಖರಣಾ ಸಮಯದಲ್ಲಿ ಧಾನ್ಯಗಳ ನಷ್ಟಕ್ಕೆ ಕಾರಣವಾಗಬಹುದಾದ

ಅಂಶಗಳು ಯಾವುವು?

80 of 132

ಚಟುವಟಿಕೆ :

● ಧಾನ್ಯಗಳ, ದ್ವಿದಳಧಾನ್ಯಗಳ ಮತ್ತು ಎಣ್ಣೆ ಬೀಜಗಳ ಹರ್ಬೇರಿಯಮ್ ಮಾಡಿ ಮತ್ತು ಅವುಗಳ ಬಿತ್ತನೆ ಹಾಗೂ ಕೊಯ್ಲಿನ ಋತುಗಳನ್ನು ಗುರುತಿಸಿ.

81 of 132

ಕಲಿಕಾ ಫಲ – 02

ಪಸುಸಂಗೋಪನೆ ದನ ಸಾಕಾಣಿಕೆ, ಕೋಳಿ ಸಾಕಾಣಿಕೆ, ಮೀನು ಸಾಕಾಣಿಕೆ ಮತ್ತು ಜೇನು ಸಾಕಾಣಿಕೆಯ ಮಹತ್ವ ಅರಿಯುವೆನು.

82 of 132

ಭಾರತದಲ್ಲಿ ಹೈನುಗಾರಿಕೆ!!

ಇಡೀ ವಿಶ್ವದಲ್ಲೇ ಭಾರತ ಹೆಚ್ಚು ಹೈನು ಹಾಗು ಹಾಲು ಉತ್ಪಾದಿಸುವ ದೇಶ.

83 of 132

ಬಿಳಿ ಕ್ರಾಂತಿ

  • ಆಪರೇಷನ್ ಫ್ಲಡ್, 13 ಜನವರಿ 1970 ರಂದು ಪ್ರಾರಂಭವಾಯಿತು, ಇದು ವಿಶ್ವದ ಅತಿದೊಡ್ಡ ಡೈರಿ ಅಭಿವೃದ್ಧಿ ಕಾರ್ಯಕ್ರಮವಾದ ಭಾರತದ ರಾಷ್ಟ್ರೀಯ ಡೈರಿ ಅಭಿವೃದ್ಧಿ ಮಂಡಳಿಯ (ಎನ್‌ಡಿಡಿಬಿ) ಒಂದು ಹೆಗ್ಗುರುತು ಯೋಜನೆಯಾಗಿದೆ.

[1] ಇದು ಭಾರತವನ್ನು ಹಾಲಿನ ಕೊರತೆಯಿರುವ ರಾಷ್ಟ್ರದಿಂದ ವಿಶ್ವದ ಅತಿದೊಡ್ಡ ಹಾಲು ಉತ್ಪಾದಕರನ್ನಾಗಿ ಪರಿವರ್ತಿಸಿತು, 1998 ರಲ್ಲಿ ಯುಎಸ್ ಅನ್ನು ಮೀರಿಸಿತು,

[2] 2010–11ರಲ್ಲಿ ಜಾಗತಿಕ ಉತ್ಪಾದನೆಯ ಶೇಕಡಾ 17 ರಷ್ಟಿತ್ತು. 30 ವರ್ಷಗಳಲ್ಲಿ ಇದು ಪ್ರತಿ ವ್ಯಕ್ತಿಗೆ ಲಭ್ಯವಿರುವ ಹಾಲನ್ನು ದ್ವಿಗುಣಗೊಳಿಸಿತು,

[3] ಮತ್ತು ಹೈನುಗಾರಿಕೆಯನ್ನು ಭಾರತದ ಅತಿದೊಡ್ಡ ಸ್ವ-ಸುಸ್ಥಿರ ಗ್ರಾಮೀಣ ಉದ್ಯೋಗ ಉತ್ಪಾದಕವನ್ನಾಗಿ ಮಾಡಿತು.

[4] ರೈತರು ತಮ್ಮದೇ ಆದ ಅಭಿವೃದ್ಧಿಯನ್ನು ನಿರ್ದೇಶಿಸಲು ಸಹಾಯ ಮಾಡಲು ಇದನ್ನು ಪ್ರಾರಂಭಿಸಲಾಯಿತು, ಅವರು ರಚಿಸುವ ಸಂಪನ್ಮೂಲಗಳ ನಿಯಂತ್ರಣವನ್ನು ತಮ್ಮ ಕೈಯಲ್ಲಿ ಇಡುತ್ತಾರೆ. ಇದೆಲ್ಲವನ್ನೂ ಸಾಧಿಸಿದ್ದು ಕೇವಲ ಸಾಮೂಹಿಕ ಉತ್ಪಾದನೆಯಿಂದಲ್ಲ, ಆದರೆ ಜನಸಾಮಾನ್ಯರಿಂದ ಉತ್ಪಾದನೆಯಿಂದ; ಈ ಪ್ರಕ್ರಿಯೆಯನ್ನು ಬಿಳಿ ಕ್ರಾಂತಿ ಎಂದು ಕರೆಯಲಾಗುತ್ತದೆ.

Verghes Kurien.

Anand Milk Union Limited

84 of 132

  • ಭಾರತದಲ್ಲಿ ಸುಮಾರು 20.5 million ಜನರು ಹೈನುಗಾರಿಕೆಯಲ್ಲಿ ತಮ್ಮ ಜೀವನೋಪಾಯ ಕಂಡು ಕೊಂಡಿದ್ದಾರೆ.

ಬಿಳಿ ಕ್ರಾಂತಿ

85 of 132

ಪಶು ಸಂಗೋಪನೆ (Animal Husbandry):

  • ಪಶುಸಂಗೋಪನೆಯು ಜಾನುವಾರುಗಳ ವೈಜ್ಞಾನಿಕ ನಿರ್ವಹಣೆಯಾಗಿದೆ.

  • ಇದು ಪೋಷಣೆ, ಸಂತಾನೋತ್ಪತ್ತಿ ಮತ್ತು ರೋಗ ನಿಯಂತ್ರಣಗಳಂತಹ ಹಲವಾರು ಅಂಶಗಳನ್ನು ಒಳಗೊಂಡಿದೆ.

  • ಪ್ರಾಣಿ ಆಧಾರಿತ ಕೃಷಿಯು, ದನ, ಮೇಕೆ, ಕುರಿ, ಕೋಳಿಗಳ ಸಾಕಾಣಿಕೆ ಮತ್ತು ಮೀನು ಕೃಷಿಗಳನ್ನು ಒಳಗೊಂಡಿದೆ.

86 of 132

ಪಶು ಸಂಗೋಪನೆ (Animal Husbandry):

  • ಜನಸಂಖ್ಯೆ ಹೆಚ್ಚಿದಂತೆಲ್ಲ ಮತ್ತು ಜೀವನಮಟ್ಟ ಹೆಚ್ಚಿದಂತೆಲ್ಲ ಹಾಲು, ಮೊಟ್ಟೆ ಮತ್ತು ಮಾಂಸಕ್ಕೂ ಬೇಡಿಕೆ ಏರುತ್ತಲೇ ಇದೆ,

  • ಹಾಗೂ ಜಾನುವಾರುಗಳನ್ನು ಮಾನವೀಯವಾಗಿ ನಡೆಸಿಕೊಳ್ಳುವ ಬಗ್ಗೆ ಬೆಳೆಯುತ್ತಿರುವ ಅರಿವು ಪಶುಸಂಗೋಪನೆಯಲ್ಲಿ ಹೊಸ ಮಿತಿಗಳನ್ನು ಉಂಟು ಮಾಡಿದೆ.

  • ಹೀಗೆ ಜಾನುವಾರು ಉತ್ಪಾದನೆಯೂ ಸಹ ಸುಧಾರಿಸಬೇಕಾದ ಅಗತ್ಯವಿದೆ.

87 of 132

ಪಶು ಸಂಗೋಪನೆ:

Animal Husbandry & Cattle Farming

88 of 132

ದನಗಳ ಸಾಕಾಣಿಕೆ (Cattle Farming) :

  • ಎರಡು ಉದ್ದೇಶಗಳಿಗಾಗಿ ದನಗಳ ಸಂಗೋಪನೆ ಸ್ಥಳೀಯ ಹಾಲು ಉತ್ಪಾದಕ ಜಾನುವಾರು ಮಾಡಲಾಗುತ್ತದೆ ಅವುಗಳೆಂದರೆ ಹಾಲು ಮತ್ತು ಬರಡು ಕೃಷಿಕಾರ್ಯಗಳಾದ ಉಳುಮೆ, ನೀರಾವರಿ ಮತ್ತು ಸಾಗಾಣಿಕೆ.

ಭಾರತದಲ್ಲಿ ಪಶುಗಳು ಬಾಸ್ ಇಂಡಿಕಸ್, ಹಸುಗಳು ಮತ್ತು ಬಾಸ್ ಬುಬಾಲಿಸ್, ಎಮ್ಮೆಗಳು ಎಂಬ ಎರಡು ವಿಭಿನ್ನ ಪ್ರಭೇದಗಳಿಗೆ ಸೇರಿವೆ, ಹಾಲು ಉತ್ಪಾದಕ ಹೆಣ್ಣು ಪ್ರಾಣಿಗಳನ್ನು ಹೈನು (dairy) ಪ್ರಾಣಿಗಳು, ಹಾಗೆಯೇ ಕೃಷಿಕಾರ್ಯಗಳಿಗೆ ಬಳಸುವ ಪ್ರಾಣಿಗಳನ್ನು ಬರಡು (draught) ಪ್ರಾಣಿಗಳು ಎಂದು ಕರೆಯುತ್ತಾರೆ.

89 of 132

  • ಹಾಲು ಉತ್ವಾದನೆಯ ಪ್ರಮಾಣ ಕ್ಷೀರೋತ್ಪಾದನಾ ಅವಧಿ ಅಂದರೆ ಕರುವಿನ ಜನನದ ನಂತರದ ಕ್ಷೀರ ಉತ್ಪಾದನಾ ಅವಧಿಯ ಮೇಲೆ ಸ್ವಲ್ಪ ಮಟ್ಟಿಗೆ ಅವಲಂಬಿತವಾಗಿದೆ.

  • ಆದ್ದರಿಂದ ಕ್ಷೀರೋತ್ಪಾದನ ಅವಧಿಯನ್ನು ಹೆಚ್ಚಿಸುವ

ಮೂಲಕ ಹಾಲಿನ ಉತ್ಪಾದನೆಯನ್ನು ಹೆಚ್ಚಿಸಬಹುದು.

  • ವಿದೇಶಿ ಅಥವಾ ಅನ್ಯದೇಶೀಯ ತಳಿ

(ಉದಾಹರಣೆಗೆ:- ಜೆರ್ಸಿ, ಬ್ರೌನ್ ಸ್ವಿಸ್)ಗಳನ್ನು ಅಧಿಕ

ಕ್ಷೀರೋತ್ಪಾದನಾ ಅವಧಿಗಾಗಿ ಆಯ್ಕೆಮಾಡಲಾಗಿದೆ.

  • ಹಾಗೆಯೇ ಸ್ಥಳೀಯ ತಳಿ (ಉದಾಹರಣೆಗೆ ಕೆಂಪು ಸಿಂಧಿ,

ಸಾಹಿವಾಲ್)ಗಳು ರೋಗಗಳ ವಿರುದ್ಧ ಉತ್ತಮ ನಿರೋಧಕ

ಶಕ್ತಿಯನ್ನು ಪ್ರದರ್ಶಿಸುತ್ತವೆ.

  • ಎರಡೂ ತಳಿಗಳಲ್ಲಿನ ಅಪೇಕ್ಷಿತ

ಗುಣಗಳನ್ನು ಹೊಂದಿರುವ ಪ್ರಾಣಿಗಳನ್ನು ಪಡೆಯಲು

ಅವುಗಳೆರಡನ್ನೂ ಸಂಕರ ಗೊಳಿಸಬಹುದು.

ದನಗಳ ಸಾಕಾಣಿಕೆ (Cattle Farming) :

90 of 132

ಪ್ರಾಣಿ ಉತ್ಪನ್ನಗಳ ಪೌಷ್ಟಿಕಾಂಶ ಮೌಲ್ಯ.

91 of 132

ಪ್ರಶ್ನೆ :

1. ದನಗಳ ತಳಿಗಳನ್ನು ಸುಧಾರಿಸಲು ಸಾಮಾನ್ಯವಾಗಿ ಯಾವ ವಿಧಾನವನ್ನು ಬಳಸುತ್ತಾರೆ ಮತ್ತು ಏಕೆ?

92 of 132

ಚಟುವಟಿಕೆ :

  • ಜಾನುವಾರು ಸಾಕಾಣಿಕಾ ಕೇಂದ್ರಕ್ಕೆ ಭೇಟಿ ಕೊಡಿ.

ಈ ಕೆಳನವುಗಳನ್ನು ಗಮನಿಸಿ.

1. ದನಗಳ ಸಂಖ್ಯೆ ಮತ್ತು ವಿವಿಧ ತಳಿಗಳ ಸಂಖ್ಯೆ.

2. ವಿವಿಧ ತಳಿಗಳಿಂದ ದೈನಂದಿನ ಹಾಲು ಉತ್ಪಾದನಾ ಪ್ರಮಾಣ.

93 of 132

  • ಪ್ರಾಣಿಗಳ ಆರೋಗ್ಯಕ್ಕಾಗಿ ಮತ್ತು ಶುದ್ಧ ಹಾಲಿನ ಉತ್ಪಾದನೆಗಾಗಿ ಹಾಗೂ ಹಸು ಮತ್ತು ಎಮ್ಮೆಗಳ ಮಾನವೀಯ ಸಾಕಾಣಿಕೆಗಾಗಿ ಸರಿಯಾದ ಸ್ವಚ್ಚತೆ ಮತ್ತು ವಸತಿ ಸೌಕರ್ಯಗಳ ಅವಶ್ಯಕತೆಯಿದೆ.

  • ಸಡಿಲ ಕೂದಲು ಮತ್ತು ಕೊಳೆಯನ್ನು ನಿವಾರಿಸಲು ನಿಯಮಿತವಾಗಿ ಪ್ರಾಣಿಗಳ ಮೈ ಉಜ್ಜಬೇಕು.
  • ಮೇಲ್ಛಾವಣಿ ಇರುವ ಮತ್ತು ಉತ್ತಮ ವಾತಾಯನ ವ್ಯವಸ್ಥೆಯಿರುವ, ಮಳೆ, ಬಿಸಿಲು ಮತ್ತು ಚಳಿಯಿಂದ ರಕ್ಷಣೆ ಒದಗಿಸುವ ಕೊಟ್ಟಿಗೆಗಳಲ್ಲಿ ಅವುಗಳಿಗೆ ಆಶ್ರಯ ಕಲ್ಪಿಸಬೇಕು.

  • ಯಾವಾಗಲೂ ಒಣಗಿದಂತೇ ಇರಲು ಮತ್ತು ಸ್ವಚ್ಚಗೊಳಿಸಲು ಅನುಕೂಲವಾಗುವಂತೆ ಕೊಟ್ಟಿಗೆಗಳ ನೆಲವು ಇಳಿಜಾರಾಗಿರಬೇಕು.

ದನಗಳ ಸಾಕಾಣಿಕೆ (Cattle Farming) :

94 of 132

  • ಹೈನು ಪ್ರಾಣಿಗಳ ಅಗತ್ಯಗಳನ್ನು ಪೂರೈಸುವ ಆಹಾರಗಳಲ್ಲಿ ಎರಡು ವಿಧಗಳಿವೆ.:

  • (A) ನಿರ್ವಹಣಾ ಅಗತ್ಯಗಳನ್ನು ಪೂರೈಸುವ ಆಹಾರ, ಅಂದರೆ ಪ್ರಾಣಿಗಳು ಆರೋಗ್ಯಕರ ಜೀವನ ನಡೆಸಲು ಸಹಾಯ ಮಾಡುವ ಆಹಾರ.

  • (B) ಕ್ಷೀರೋತ್ಪಾದನಾ ಅಗತ್ಯಗಳನ್ನು ಪೂರೈಸುವ ಆಹಾರ, ಇದು ಕ್ಷೀರೋತ್ಪಾದನಾ ಅವಧಿಯಲ್ಲಿ ಅಗತ್ಯವಿರುವ ಆಹಾರ,
  • ಪ್ರಾಣಿಗಳ ಆಹಾರವು ಎ. ನಾರಿನಂಶ, (roughage), ಇವು ಸ್ಥೂಲ ನಾರು ಪದಾರ್ಥಗಳು ಮತ್ತು ಬಿ. ಸಾಂದ್ರಕಗಳು (concentrates)

ದನಗಳ ಸಾಕಾಣಿಕೆ (Cattle Farming) :

95 of 132

  • ಸಾಂದ್ರಕಗಳು (concentrates) ಇವು ಕಡಿಮೆ ನಾರಿನಂಶ ಮತ್ತು ಸಾಪೇಕ್ಷವಾಗಿ ಅಧಿಕಮಟ್ಟದ ಪ್ರೋಟೀನ್ ಮತ್ತು ಇತರ ಪೋಷಕಾಂಶಗಳು, ಇವುಗಳನ್ನು ಒಳಗೊಂಡಿದೆ.

  • ಜಾನುವಾರುಗಳಿಗೆ ಎಲ್ಲಾ ಪೋಷಕಾಂಶಗಳನ್ನು ನಿಗಧಿತ ಪ್ರಮಾಣದಲ್ಲಿ ಹೊಂದಿರುವ ಸಮತೋಲನ ಆಹಾರದ ಅಗತ್ಯವಿದೆ.

  • ಇಂತಹ ಪೌಷ್ಟಿಕ ಆಹಾರದ ಜೊತೆಗೆ ಸೂಕ್ಷ್ಮ ಪೋಷಕಾಂಶಗಳನ್ನು ಹೊಂದಿರುವ ಪೂರಕ ಆಹಾರಗಳು ಹೈನು ಪ್ರಾಣಿಗಳ ಆರೋಗ್ಯ ಮತ್ತು ಹಾಲಿನ ಉತ್ಪತ್ತಿಯನ್ನು ಉತ್ತೇಜಿಸುತ್ತವೆ.

ದನಗಳ ಸಾಕಾಣಿಕೆ (Cattle Farming) :

96 of 132

  • ದನಗಳು ಹಲವಾರು ರೋಗಗಳಿಂದ ನರಳುತ್ತವೆ. ಈ ರೋಗಗಳು ಸಾವನ್ನು ಉಂಟುಮಾಡುವುದಲ್ಲದೇ ಹಾಲಿನ ಉತ್ಪಾದನೆಯನ್ನೂ ಕುಂಠಿತಗೊಳಿಸುತ್ತದೆ.

  • ಒಂದು ಆರೋಗ್ಯವಂತ ಪ್ರಾಣಿಯು ನಿಯಮಿತವಾದ ಆಹಾರ ಸೇವನೆಯಿಂದ ಸಾಮಾನ್ಯವಾದ ದೇಹಸ್ಥಿತಿಯನ್ನು ಹೊಂದಿರುತ್ತದೆ.

  • ದನಗಳಲ್ಲಿನ ಪರಾವಲಂಬಿಗಳಲ್ಲಿ ಬಾಹ್ಯ ಪರಾವಲಂಬಿಗಳು ಮತ್ತು ಅಂತರ್ ಪರಾವಲಂಬಿಗಳು ಎಂದು ಎರಡು ವಿಧಗಳಿರಬಹುದು ಬಾಹ್ಯ ಪರಾವಲಂಬಿಗಳು ಚರ್ಮದ ಮೇಲೆ ವಾಸಿಸುತ್ತಿದ್ದು ಮುಖ್ಯವಾಗಿ ಚರ್ಮ ರೋಗಗಳನ್ನು ಉಂಟುಮಾಡುತ್ತವೆ.

ದನಗಳ ಸಾಕಾಣಿಕೆ (Cattle Farming) :

97 of 132

  • ಹುಳುಗಳಂತಹ ಅಂತರ್ ಪರಾವಂಬಿಗಳು ಜಠರ ಮತ್ತು ಕರುಳಿಗೆ ಹಾನಿಯುಂಟುಮಾಡುತ್ತವೆ, ಹಾಗೆಯೇ ಫ್ಲೂಕ್‍ಗಳಂತಹ ಚಪ್ಪಟೆ ಹುಳುಗಳು ಯಕೃತ್ತಿಗೆ ಹಾನಿಯುಂಟುಮಾಡುತ್ತವೆ.

  • ಬ್ಯಾಕ್ಟೀರಿಯಾ ಮತ್ತು ವೈರಸ್ ಗಳಿಂದ ಸೋಂಕು ರೋಗಗಳು ಕೂಡಾ ಉಂಟಾಗುತ್ತವೆ.

  • ಬ್ಯಾಕ್ಟೀರಿಯಾ ಮತ್ತು ವೈರಸ್‍ಗಳಿಂದುಂಟಾಗುವ ಅನೇಕ ಪ್ರಮುಖ ರೋಗಗಳ ವಿರುದ್ಧ ಸಾಕು ಪ್ರಾಣಿಗಳಿಗೆ ಲಸಿಕೆಗಳನ್ನು ನೀಡಲಾಗುತ್ತದೆ.

ದನಗಳ ಸಾಕಾಣಿಕೆ (Cattle Farming) :

98 of 132

ಶಾಖಹಾರಿ VS ಮಾಂಸಹಾರಿ

  • ನಮ್ಮದೇಶದಲ್ಲಿ ಮಾಂಸಹಾರಿಗಳ

ಸಂಖ್ಯೆ ಹೆಚ್ಚು.

  • ಅದರಂತೆ ಅವರ ಬೇಡಿಕೆ ಪೂರೈಸಲು ಅನೇಕ ಉದ್ಯಮಗಳು ಹುಟ್ಟಿವೆ.

  • ಅದರಲ್ಲಿ ಕೋಳಿ ಸಾಕಾಣಿಕೆ ಮತ್ತು ಮೀನುಗರಿಕೆ ಬಗ್ಗೆ ತಿಳಿಯೋಣ.

99 of 132

ಕೋಳಿ ಸಾಕಾಣಿಕೆ (Poultry farming):

100 of 132

ಕೋಳಿ ಸಾಕಾಣಿಕೆ (Poultry farming):

  • ಮೊಟ್ಟೆ ಮತ್ತು ಕೋಳಿ ಮಾಂಸದ ಉತ್ಪಾದನೆಗಾಗಿ ಸಾಕು ಕೋಳಿಗಳನ್ನು ಬೆಳೆಸುವುದಕ್ಕಾಗಿ ಕೋಳಿ ಸಾಕಾಣಿಕೆಯನ್ನು ಕೈಗೊಳ್ಳಲಾಗುತ್ತದೆ.

  • ಆದ್ದರಿಂದ ಮೊಟ್ಟೆಗಳನ್ನು ಉತ್ಪಾದಿಸಲು ಲೇಯರ್ಸ್ (layers) ಮತ್ತು ಮಾಂಸಕ್ಕಾಗಿ ಬ್ರಾಯ್ಲರ್ಸ್(broilers) ಕೋಳಿಗಳ ಸುಧಾರಿತ ತಳಿಗಳನ್ನು ಅಭಿವೃದ್ಧಿಪಡಿಸಿ ಸಾಕಣೆ ಮಾಡಲಾಗುತ್ತಿದೆ.

101 of 132

  • ಈ ಕೆಳಕಂಡ ಅಪೇಕ್ಷಿತ ಗುಣಗಳಿಗಾಗಿ ಭಾರತೀಯ (ಸ್ವದೇಶಿ ತಳಿ, ಉದಾಹರಣೆಗೆ (ಅಸೀಲ್) ಮತ್ತು ವಿದೇಶಿ (ಅನ್ಯದೇಶೀಯ ತಳಿ, ಉದಾಹರಣೆಗೆ; ಲೆಗ್‍ಹಾರ್ನ್) ತಳಿಗಳನ್ನು ಸಂಕರಗೊಳಿಸಿ ಹೊಸತಳಿಗಳ ಅಭಿವೃದ್ಧಿಯನ್ನು ಕೇಂದ್ರೀಕರಿಸಿ ತಳಿ ಸುಧಾರಣೆಯನ್ನು ಕೈಗೊಳ್ಳಲಾಗುತ್ತಿದೆ. ಆ ಅಪೇಕ್ಷಿತ ಗುಣಗಳೆಂದರೆ,

i) ಕೋಳಿಮರಿಗಳ ಸಂಖ್ಯೆ ಮತ್ತು ಗುಣಮಟ್ಟ :

ii) ವಾಣಿಜ್ಯ ಉದ್ದೇಶಕ್ಕಾಗಿ ಕೋಳಿಮರಿಗಳನ್ನು ಉತ್ಪಾದಿಸಲು ಕುಬ್ಜ ಬ್ರಾಯ್ಲರ್ ಪೋಷಕ ಕೋಳಿಗಳು;

iii) ಬೇಸಿಗೆ ಕಾಲಕ್ಕೆ ಹೊಂದಿಕೊಳ್ಳುವ ಸಾಮಥ್ರ್ಯ/ಅಧಿಕ ತಾಪವನ್ನು ಸಹಿಸಿಕೊಳ್ಳುವ, ಸಾಮಥ್ರ್ಯ ;

iv) ಕಡಿಮೆ ನಿರ್ವಹಣೆ ಬೇಡುವ ಅವಶ್ಯಕತೆಗಳು :

v) ಕೃಷಿಯ ಉಪಉತ್ಪನ್ನಗಳಿಂದ ರೂಪಿಸಿದ ಹೆಚ್ಚಿನ ನಾರಿನಂಶವಿರುವ ಅಗ್ಗದ ಆಹಾರವನ್ನು ಬಳಸುವ ಸಾಮಥ್ರ್ಯದೊಂದಿಗೆ ಮೊಟ್ಟೆ ಇಡುವ ಪಕ್ಷಿಗಳ ಗಾತ್ರವನ್ನು ಕಡಿಮೆ ಮಾಡುವಿಕೆ :

ಕೋಳಿ ಸಾಕಾಣಿಕೆ (Poultry farming):

102 of 132

ಕೋಳಿ ಸಾಕಾಣಿಕೆ (Poultry farming):

103 of 132

ಪ್ರಶ್ನೆ:

  1. ಈ ಕೆಳಗಿನ ಹೇಳಿಕೆಯ ಪರಿಣಾಮಗಳನ್ನು ಚರ್ಚಿಸಿ.

-->`ಭಾರತದಲ್ಲಿ ಪೌಲ್ಟ್ರಿ ಹಕ್ಕಿಗಳು ಅತ್ಯಂತ ಸಮರ್ಥ ಪರಿವರ್ತಕಗಳಾಗಿವೆ,

ಅವು ಕಡಿಮೆ ನಾರಿನಂಶವುಳ್ಳ ಆಹಾರ ಪದಾರ್ಥಗಳನ್ನು (ಅವು ಮನುಷ್ಯರ ಬಳಕೆಗೆ ಅನರ್ಹವಾಗಿವೆ)

ಅತಿಹೆಚ್ಚು ಪೋಷಕಾಂಶಗಳುಳ್ಳ ಪ್ರಾಣಿ ಪ್ರೋಟೀನ್ ಆಹಾರವಾಗಿ ಪರಿವರ್ತಿಸುತ್ತವೆ ಎಂಬುದು ಗಮನಿಸಬಹುದಾದ ಆಶ್ಚರ್ಯಕರ ಸಂಗತಿಯಾಗಿದೆ’.

104 of 132

ಮೊಟ್ಟೆ ಮತ್ತು ಬ್ರಾಯ್ಲರ್ ಉತ್ಪಾದನೆ (Egg & Broiler Production):

  • ಮೊಟ್ಟೆ ಮತ್ತು ಮಾಂಸ ಉತ್ಪಾದನೆ ಒಳ್ಳೆಯ ಬೆಳವಣಿಗೆ ದರ ಮತ್ತು ಉತ್ತಮ ಪೋಷಣಾ ಸಾಮಥ್ರ್ಯವನ್ನು ಪಡೆಯಲು ಬಾಯ್ಲರ್ ಕೋಳಿಗಳಿಗೆ ವಿಟಮಿನ್ ಸಂಮೃದ್ಧವಾದ ಆಹಾರವನ್ನು ನೀಡಬೇಕು.

  • ಮರಣದ ಪ್ರಮಾಣವನ್ನು ತಪ್ಪಿಸಲು ಮತ್ತು ಉದುರಿದ ಗರಿಗಳ ಹಾಗೂ ಕೋಳಿಗಳ ಮೃತದೇಹದ ಸೂಕ್ತ ವಿಲೇವಾರಿಗೆ ಕಾಳಜಿ ವಹಿಸಬೇಕು.

  • ಅವುಗಳನ್ನು ಬ್ರಾಯ್ಲರ್(ಮಾಂಸದ ಕೋಳಿ)ಗಳೆಂದೇ ಬೆಳೆಸಲಾಗುತ್ತದೆ ಮತ್ತು ಮಾಂಸದ ಉದ್ದೇಶಕ್ಕಾಗಿಯೇ ಮಾರುಕಟ್ಟೆಗೆ ಕಳಿಸಲಾಗುತ್ತದೆ.

105 of 132

  • ಪೌಲ್ಟ್ರಿ ಹಕ್ಕಿಗಳ ಉತ್ತಮ ಉತ್ವಾದನೆಗಾಗಿ ಉತ್ತಮ ನಿರ್ವಹಣಾ ಅಭ್ಯಾಸಗಳು ಪ್ರಮುಖವಾಗುತ್ತದೆ.

  • ಇದು ತಾಪಮಾನದ ನಿರ್ವಹಣೆ ಮತ್ತು ಕೋಳಿಗಳ ವಸತಿ ಮತ್ತು ಕೋಳಿ ಆಹಾರಗಳಲ್ಲಿ ನೈರ್ಮಲ್ಯ ಕಾಪಾಡುವುದು ಹಾಗೂ ರೋಗಗಳು ಮತ್ತು ಪೀಡೆಗಳ ತಡೆಗಟ್ಟುವಿಕೆ ಹಾಗೂ ನಿಯಂತ್ರಣಗಳನ್ನು ಒಳಗೊಂಡಿದೆ.

  • ಬ್ರಾಯ್ಲರ್ ಕೋಳಿಗಳ ವಸತಿ, ಪೋಷಣೆ ಮತ್ತು ಪರಿಸರದ ಅಗತ್ಯತೆಗಳು ಮೊಟ್ಟೆ ಇಡುವ ಕೋಳಿಗಳಿಗಿಂತ ಭಿನ್ನವಾಗಿವೆ.

  • ಬ್ರಾಯ್ಲರ್ ಕೋಳಿಗಳ ಪಡಿತರವು (ದಿನನಿತ್ಯದ ಆಹಾರದ ಅಗತ್ಯತೆ) ಸಾಕಷ್ಟು ಕೊಬ್ಬು ಮತ್ತು ಪ್ರೋಟೀನ್ ಸಮೃದ್ಧವಾಗಿರುತ್ತದೆ.

ಮೊಟ್ಟೆ ಮತ್ತು ಬ್ರಾಯ್ಲರ್ ಉತ್ಪಾದನೆ (Egg & Broiler Production):

106 of 132

ಮೊಟ್ಟೆ ಮತ್ತು ಬ್ರಾಯ್ಲರ್ ಉತ್ಪಾದನೆ (Egg & Broiler Production):

  • ಪೌಲ್ಟ್ರಿ ಹಕ್ಕಿಗಳ ಆಹಾರದಲ್ಲಿ ಜೀವಸತ್ವ A ಮತ್ತು K ಗಳು ಅಧಿಕ ಮಟ್ಟದಲ್ಲಿರುತ್ತವೆ.

  • ಪೌಲ್ಟ್ರಿ ಹಕ್ಕಿಗಳು ವೈರಸ್, ಬ್ಯಾಕ್ಟೀರಿಯ, ಶಿಲೀಂಧ್ರ ಮತ್ತು ಪರಾವಲಂಬಿಗಳಿಂದ ಉಂಟಾಗುವ ಹಲವಾರು ರೋಗಗಳಿಂದ ಮತ್ತು ಪೋಷಕಾಂಶಗಳ ಕೊರತೆಯಿಂದ ನರಳುತ್ತವೆ.
  • ಇವು ಸಮರ್ಪಕ ಸ್ವಚ್ಚತೆ, ನೈರ್ಮಲ್ಯ ಮತ್ತು ನಿಯಮಿತ ಕಾಲಗಳಲ್ಲಿ ಸೋಂಕು ನಿವಾರಕಗಳ ಸಿಂಪಡಣೆಯ ಅಗತ್ಯವನ್ನು ಉಂಟುಮಾಡುತ್ತವೆ.

  • ಸೂಕ್ತ ಲಸಿಕೆಗಳು ಸಾಂಕ್ರಾಮಿಕ ರೋಗಗಳ ಉಂಟಾಗುವಿಕೆಯನ್ನು ತಡೆಯುತ್ತವೆ ಮತ್ತು ಏಕಾಏಕಿ ಕಾಣಿಸಿಕೊಳ್ಳುವ ರೋಗದಿಂದ ಪೌಲ್ಟ್ರಿ ಹಕ್ಕಿಗಳ ನಷ್ಟವನ್ನು ಕಡಿಮೆ ಮಾಡುತ್ತವೆ.

107 of 132

ಮೊಟ್ಟೆ ಮತ್ತು ಬ್ರಾಯ್ಲರ್ ಉತ್ಪಾದನೆ (Egg & Broiler Production):

108 of 132

ಪ್ರಶ್ನೆಗಳು:

  1. ಹೈನುಗಾರಿಕೆ ಮತ್ತು ಪೌಲ್ಟ್ರಿ ಫಾರಂಗಳಲ್ಲಿ ಸಾಮಾನ್ಯವಾಗಿರುವ ನಿರ್ವಹಣಾ ಪದ್ಧತಿಗಳು ಯಾವುವು?

2. ಬ್ರಾಯ್ಲರ್ಸ್ ಮತ್ತು ಲೇಯರ್ಸ್‍ಗಳ ನಡುವಿನ ವ್ಯತ್ಯಾಸಗಳೇನು ಮತ್ತು ಅವುಗಳ ನಿರ್ವಹಣೆಯಲ್ಲಿರುವ ವ್ಯತ್ಯಾಸಗಳೇನು?

109 of 132

ಚಟುವಟಿಕೆ :

  • ಸ್ಥಳೀಯ ಪೌಲ್ಟ್ರಿ ಫಾರಂಗೆ ಭೇಟಿ ಕೊಡಿ. ತಳಿಗಳ ವಿಧಗಳನ್ನು ಗಮನಿಸಿ ಮತ್ತು ಅವುಗಳಿಗೆ ನೀಡುವ ಪಡಿತರ ವಿಧ.

  • ವಸತಿ ವ್ಯವಸ್ಥೆ ಮತ್ತು ಬೆಳಕಿನ ಸೌಲಭ್ಯಗಳನ್ನು ಗುರುತಿಸಿಕೊಳ್ಳಿ. ಗ್ರೋವರ್ಸ್, ಲೇಯರ್ಸ್ ಮತ್ತು ಬ್ರಾಯ್ಲರ್ಸ್‍ಗಳನ್ನು ಗುರುತಿಸಿ.

110 of 132

ಭಾರತದಲ್ಲಿ ಮೀನುಗಾರಿಕೆ.

ಸಿಎಮ್‌ಎಫ್‌ಆರ್‌ಐ ಜನಗಣತಿ 2010 ರ ಪ್ರಕಾರ,

9 ಕಡಲ ರಾಜ್ಯಗಳು ಮತ್ತು 2 ಕೇಂದ್ರಾಡಳಿತ ಪ್ರದೇಶಗಳಲ್ಲಿ 3,288 ಸಮುದ್ರ ಮೀನುಗಾರಿಕಾ ಗ್ರಾಮಗಳು ಮತ್ತು 1,511 ಸಮುದ್ರ ಮೀನು ಇಳಿಯುವ ಕೇಂದ್ರಗಳಿವೆ.

ಒಟ್ಟು ಸಮುದ್ರ ಮೀನುಗಾರರ ಜನಸಂಖ್ಯೆಯು ಸುಮಾರು 4 ಮಿಲಿಯನ್ ಆಗಿದ್ದು, 864,550 ಕುಟುಂಬಗಳನ್ನು ಒಳಗೊಂಡಿದೆ. ಸುಮಾರು 61% ಮೀನುಗಾರರ ಕುಟುಂಬಗಳು ಬಿಪಿಎಲ್ ವರ್ಗದಲ್ಲಿದ್ದವು.

111 of 132

ಮೀನು ಉತ್ಪಾದನೆ (Fish Production):

  • ನಮ್ಮ ಆಹಾರಗಳಲ್ಲಿ ಮೀನು, ಪ್ರಾಣಿ ಪ್ರೋಟೀನಿನ ಅಗ್ಗದ ಆಕರವಾಗಿದೆ.

  • ಮೀನಿನ ಉತ್ಪಾದನೆಯು ಈಜುರೆಕ್ಕೆಯುಳ್ಳ ನಿಜವಾದ ಮೀನು ಮತ್ತು ಸೀಗಡಿ, ಮೃದ್ವಂಗಿಗಳಂತಹ ಚಿಪ್ಪು ಮೀನುಗಳನ್ನು ಒಳಗೊಂಡಿದೆ.

  • ಮೀನುಗಳನ್ನು ಪಡೆಯಲು ಎರಡು ವಿಧಾನಗಳಿವೆ. ಒಂದು ನೈಸರ್ಗಿಕ ಸಂಪನ್ಮೂಲಗಳಿಂದ, ಇದನ್ನು ನೈಸರ್ಗಿಕ ಮೀನುಗಾರಿಕೆ ಎನ್ನುತ್ತಾರೆ.

  • ಇನ್ನೊಂದು ವಿಧಾನವೆಂದರೆ ಮೀನು ಸಾಕಾಣಿಕೆ, ಇದನ್ನು ಕೃಷಿ ಮೀನುಗಾರಿಕೆ ಎನ್ನುತ್ತಾರೆ.

112 of 132

  • ಮೀನುಗಳಿಗೆ ನೀರಿನ ಆಕರವೆಂದರೆ ಸಮುದ್ರದ ನೀರು ಅಥವಾ ನದಿ ಮತ್ತು ಕೆರೆಗಳಂತಹ ಸಿಹಿ ನೀರು.

  • ಹೀಗೆ ಸಮುದ್ರ ಮತ್ತು ಸಿಹಿನೀರಿನ ಪರಿಸರ ವ್ಯವಸ್ಥೆಗಳಲ್ಲಿ ಹಿಡಿಯುವ ಅಥವಾ ಬೆಳೆಸುವ ಮೂಲಕ ಮೀನುಗಾರಕೆಯನ್ನು ಮಾಡಬಹುದು.

ಮೀನು ಉತ್ಪಾದನೆ (Fish Production):

113 of 132

ಮೀನು ಉತ್ಪಾದನೆ (Fish Production):

(i) ಸಮುದ್ರ ಮೀನುಗಾರಿಕೆ (Marine fisheries)

  • ಭಾರತದ ಸಮುದ್ರ ಮೀನುಗಾರಿಕೆ ಆಕರಗಳು 7500 ಕಿಮೀ ಗಳಷ್ಟು ಉದ್ದದ ಕರಾವಳಿ ಪ್ರದೇಶ ಮತ್ತು ಇದರ ಆಚೆಗೆ ಆಳ ಸಮುದ್ರವನ್ನು ಒಳಗೊಂಡಿದೆ.

  • ಜನಪ್ರಿಯ ಮೀನಿನ ವಿಧಗಳು ಪಾಂಫ್ರೆಟ್, ಮ್ಯಾಕೆರಲ್, ಟ್ಯೂನ, ಸಾರ್ಡೀನ್ ಮತ್ತು ಬಾಂಬೆ ಡಕ್‍ಗಳನ್ನು ಒಳಗೊಂಡಿದೆ ಮೀನುಗಾರಿಕಾ ದೋಣಿಗಳಲ್ಲಿ ಹಲವು ವಿಧದ ಮೀನಿನ ಬಲೆಗಳನ್ನು ಬಳಸಿ ಸಮುದ್ರ ಮೀನುಗಳನ್ನು ಹಿಡಿಯಲಾಗುತ್ತದೆ.

  • ಕೃತಕ ಉಪಗ್ರಹಗಳು ಮತ್ತು ಶಬ್ದ ಪ್ರತಿಫಲನ ವ್ಯವಸ್ಥೆಯನ್ನು ಬಳಸಿ, ತೆರೆದ ಸಮುದ್ರಗಳಲ್ಲಿ ಮತ್ಸ್ಯಸಂದಣಿಯನ್ನು ಗುರುತಿಸಿ ಇಳುವರಿಯನ್ನು ಹೆಚ್ಚಿಸಲಾಗುತ್ತದೆ.

114 of 132

  • ಹೆಚ್ಚಿನ ವಾಣಿಜ್ಯ ಮೌಲ್ಯವಿರುವ ಕೆಲವು ಸಮುದ್ರ ಮೀನುಗಳನ್ನು ಸಮುದ್ರ ನೀರಿನಲ್ಲಿ ಕೃಷಿ ಮಾಡಲಾಗುತ್ತದೆ.

  • ಇದು ಮ್ಯೂಲೆಟ್ಸ್, ಪರ್ಲ್‍ಸ್ಪಾಟ್ಸ್ ಮತ್ತು ಭೇಟ್ಕಿಗಳಂತಹ ಈಜುರೆಕ್ಕೆ ಇರುವ ಮೀನುಗಳು ಮತ್ತು ಸೀಗಡಿ, ಮಸಲ್ ಗಳು ಹಾಗೂ ಸಮುದ್ರ ಕಳೆಗಳಂತಹ ಚಿಪ್ಪು ಮೀನುಗಳನ್ನು ಒಳಗೊಂಡಿದೆ.

  • ಆಯ್‍ಸ್ಟರ್ ಅಥವಾ ಮುತ್ತಿನ

ಪ್ರಾಣಿಗಳನ್ನು ಅವುಗಳು ಉತ್ವತ್ತಿ

ಮಾಡುವ ಮುತ್ತುಗಳಿಗಾಗಿಯೂ

ಕೃಷಿ ಮಾಡುತ್ತಾರೆ.

(i) ಸಮುದ್ರ ಮೀನುಗಾರಿಕೆ (Marine fisheries)

115 of 132

ಸಮುದ್ರ ಮೀನುಗಳ ಸಂಗ್ರಹಣೆ ಕ್ರಮೇಣ ಕಡಿಮೆಯಾದಂತೆ ಅಧಿಕ ಮೀನಿನ ಬೇಡಿಕೆಯನ್ನು ಸಮುದ್ರ ಮೀನು ಕೃಷಿ ವಿಧಾನದ ಮೂಲಕ ಪೂರೈಸಬಹುದು.

ಚಿತ್ರ 15.5 ಸಿಹಿನೀರು ಮತ್ತು ಸಮುದ್ರ ನೀರು ಸೀಗಡಿಗಳು.

116 of 132

ಮೀನು ಉತ್ಪಾದನೆ (Fish Production):

15.2.3 (ii) ಒಳನಾಡು ಮೀನುಗಾರಿಕೆ (Inland Fisheries)

  • ಕಾಲುವೆಗಳು, ಕೆರೆಗಳು, ಜಲಾಶಯಗಳು ಮತ್ತು ನದಿಗಳನ್ನು ಒಳಗೊಂಡ ಸಿಹಿನೀರಿನ ಆಕರಗಳು ಸಮುದ್ರದ ನೀರು ಮತ್ತು ಸಿಹಿನೀರು ಮಿಶ್ರವಾಗುವ ಅಳಿವೆಗಳು (estuaries) ಮತ್ತು ಲಗೂನ್‍ಗಳಂತಹ ಉಪ್ಪುಪ್ಪಾದ ಕೆಸರು (brackish) ನೀರಿನ ಆಕರಗಳೂ ಸಹ ಮೀನಿನ ಪ್ರಮುಖ ಸಂಗ್ರಹಾಗಾರಗಳಾಗಿವೆ.
  • ಹಾಗೆಯೇ ಇಂತಹ ಒಳನಾಡು ನೀರು ಸಂಗ್ರಹಾಗಾರಗಳಲ್ಲಿ ನೈಸರ್ಗಿಕ ಮೀನುಗಾರಿಕೆ ನಡೆಸಲಾಗುತ್ತದೆ ಆದರೆ ಹೆಚ್ಚಿನ ಇಳುವರಿ ದೊರಕುವುದಿಲ್ಲ.
  • ಈ ಆಕರಗಳಲ್ಲಿ ಗರಿಷ್ಟ ಮೀನು ಉತ್ಪಾದನೆಯು ಜಲಕೃಷಿಯ ಮೂಲಕ ನಡೆಯುತ್ತದೆ. ಮೀನು ಕೃಷಿಯನ್ನು ಕೆಲಮೊಮ್ಮೆ ಭತ್ತದ ಬೆಳೆಯೊಂದಿಗೆ ಸಂಯೋಜಿಸಿ ಮಾಡಲಾಗುತ್ತದೆ.
  • ಹೆಚ್ಚು ತೀವ್ರವಾದ ಮೀನು ಸಾಕಾಣಿಕೆಯನ್ನು (intensive fish farming) ¸ ಸಂಯುಕ್ತ ಮೀನು ಕೃಷಿ ವ್ಯವಸ್ಥೆಗಳಿಂದ ಮಾಡಬಹುದಾಗಿದೆ.
  • ಈ ವ್ಯವಸ್ಥೆಗಳಲ್ಲಿ ಸ್ಥಳೀಯ ಮತ್ತು ವಿದೇಶೀಯ ಮೀನಿನ ಪ್ರಭೇದಗಳನ್ನು ಬೆಳೆಸಲಾಗುತ್ತದೆ.

117 of 132

  • ಇಂತಹ ಒಂದು ವ್ಯವಸ್ಥೆಯಲ್ಲಿ ಐದು ಅಥವಾ ಆರು ಮೀನು ಪ್ರಭೇದಗಳ ಒಂದು ಸಂಯೋಜನೆಯನ್ನು ಒಂದು ಮೀನು ಕೊಳದಲ್ಲಿ ಬಳಸುತ್ತಾರೆ.

  • ಇಲ್ಲಿ ವಿಭಿನ್ನ ಆಹಾರ ಅಭ್ಯಾಸವಿರುವ ಮತ್ತು ಆಹಾರಕ್ಕಾಗಿ ತಮ್ಮೊಳಗೆ ಸ್ಪರ್ಧಿಸದಂತಹ ಮೀನಿನ ಪ್ರಭೇದಗಳನ್ನು ಆಯ್ಕೆ ಮಾಡಲಾಗುತ್ತದೆ.

  • ಇದರ ಪರಿಣಾಮವಾಗಿ ಕೊಳದ ಎಲ್ಲಾ ಭಾಗಗಳಲ್ಲಿ ಲಭ್ಯವಿರುವ ಆಹಾರವು ಬಳಸಲ್ಪಡುತ್ತದೆ.

  • ಕಾಟ್ಲಾ ಮೀನುಗಳು ನೀರಿನ ಮೇಲ್ಮೈಯಲ್ಲಿರುವ ಆಹಾರವನ್ನು ಸೇವಿಸಿದರೆ, ರೋಹು ಮೀನುಗಳು ಕೊಳದ ಮಧ್ಯ ಭಾಗದ ಆಹಾರ ಸೇವಿಸುತ್ತವೆ, ಮ್ರಿಗ್ಯಾಲ್ ಮೀನುಗಳು ಮತ್ತು ಸಾಮಾನ್ಯ ಕಾರ್ಪ್‍ಗಳು ಕೊಳದ ತಳಭಾಗದ ಆಹಾರ ಸೇವಿಸಿದರೆ, ಹುಲ್ಲು ಕಾರ್ಪ್‍ಗಳು ಕಳೆಗಳನ್ನು ಸೇವಿಸುತ್ತವೆ.

15.2.3 (ii) ಒಳನಾಡು ಮೀನುಗಾರಿಕೆ (Inland Fisheries)

118 of 132

15.2.3 (ii) ಒಳನಾಡು ಮೀನುಗಾರಿಕೆ (Inland Fisheries)

  • ಒಟ್ಟಾಗಿ ಈ ಮೀನಿನ ಪ್ರಭೇದಗಳು ಕೊಳದಲ್ಲಿರುವ ಎಲ್ಲಾ ಆಹಾರವನ್ನು ಪರಸ್ಪರ ಸ್ಪರ್ಧೆ ಇಲ್ಲದೇ ಬಳಸಿಕೊಳ್ಳುತ್ತವೆ.

  • ಇದು ಕೊಳದಲ್ಲಿನ ಮೀನಿನ ಇಳುವರಿಯನ್ನು ಹೆಚ್ಚಿಸುತ್ತದೆ.

119 of 132

  • ಸಂಯುಕ್ತ ಮೀನು ಸಾಕಾಣಿಕೆ ವ್ಯವಸ್ಥೆ ಹೊಂದಿರುವ ಒಂದು ಸಮಸ್ಯೆ ಎಂದರೆ ಇವುಗಳಲ್ಲಿ ಬಹುತೇಕ ಮೀನುಗಳು ಮುಂಗಾರಿನ ಸಮಯದಲ್ಲಿ ಮಾತ್ರ ಸಂತಾನೋತ್ಪತ್ತಿ ನಡೆಸುತ್ತವೆ.

  • ನೈಸರ್ಗಿಕವಾಗಿ ಮೀನಿನ ಮೊಟ್ಟೆಗಳನ್ನು ಸಂಗ್ರಹಿಸಿ, ಅದನ್ನು ಇತರ ಪ್ರಭೇದಗಳ ಮೊಟ್ಟೆಗಳೊಂದಿಗೆ ಮಿಶ್ರಣ ಮಾಡಬಹುದಾಗಿದೆ.

15.2.3 (ii) ಒಳನಾಡು ಮೀನುಗಾರಿಕೆ (Inland Fisheries)

120 of 132

  • ಆದ್ದರಿಂದ ಮೀನು ಕೃಷಿಯಲ್ಲಿನ ಪ್ರಧಾನ ಸಮಸ್ಯೆ ಎಂದರೆ ಉತ್ತಮ ಗುಣಮಟ್ಟದ ಮೊಟ್ಟೆಗಳ ಲಭ್ಯತೆಯ ಕೊರತೆ.

  • ಹಾರ್ಮೋನ್‍ಗಳ ಉತ್ತೇಜನದಿಂದ ಕೊಳದಲ್ಲಿನ ಮೀನುಗಳು ಸಂತಾನೋತ್ಪತ್ತಿ ನಡೆಸುವಂತೆ ಮಾಡುವ ಮೂಲಕ ಈ ಸಮಸ್ಯೆಯಿಂದ ಹೊರಬರುವ ಮಾರ್ಗವೊಂದನ್ನು ಈಗ ಕಂಡುಕೊಳ್ಳಲಾಗಿದೆ.

  • ಅಪೇಕ್ಷಿತ ಪ್ರಮಾಣದಲ್ಲಿ ಶುದ್ಧ ಮೀನಿನ ಮೊಟ್ಟೆಗಳ ಸರಬರಾಜನ್ನು ಈ ವಿಧಾನವು ಖಚಿತಗೊಳಿಸಿದೆ.

15.2.3 (ii) ಒಳನಾಡು ಮೀನುಗಾರಿಕೆ (Inland Fisheries).

121 of 132

ಪ್ರಶ್ನೆಗಳು :

  1. ಮೀನುಗಳನ್ನು ಹೇಗೆ ಪಡೆಯಲಾಗುತ್ತದೆ ?

2. ಸಂಯುಕ್ತ ಮೀನು ಸಾಕಾಣಿಕೆಯ ಅನುಕೂಲಗಳೇನು ?

122 of 132

ಚಟುವಟಿಕೆ :

● ಮೀನುಗಳು ಮರಿ ಮಾಡುವ ಕಾಲದಲ್ಲಿ ಮೀನು ಸಾಕಣೆ ಕೇಂದ್ರಕ್ಕೆ ಭೇಟಿ ನೀಡಿ ಮತ್ತು ಈ ಕೆಳಗಿನವುಗಳನ್ನು ಗಮನಿಸಿ.

1. ಕೊಳದಲ್ಲಿರುವ ಮೀನುಗಳ ತಳಿಗಳು.

2. ಕೊಳಗಳ ವಿಧಗಳು.

3. ಸಾಕಣೆ ಕೇಂದ್ರದಲ್ಲಿ ಉಪಯೋಗಿಸುವ

ಆಹಾರದ ಘಟಕಾಂಶಗಳು

4. ಸಾಕಣೆ ಕೇಂದ್ರದ ಉತ್ಪಾದನಾ ಸಾಮಥ್ರ್ಯವನ್ನು ಕಂಡುಕೊಳಿ

123 of 132

ಭಾರತದಲ್ಲಿ ಮೀನು ಉತ್ಪಾದನೆ(Fish Production in India) :

124 of 132

ಜೇನು ಸಾಕಾಣಿಕೆ (Bee Keeping ..Apiculture)

125 of 132

ಚಿತ್ರ 15.7 : (a) ಜೇನುಗೂಡಿನ ವ್ಯವಸ್ಥೆ

(b) ಜೇನುತುಪ್ಪದ ಆಹರಣಕ.

  • ಜೇನುತುಪ್ಪವನ್ನು ವ್ಯಾಪಕವಾಗಿ ಬಳಸುತ್ತಾರೆ ಆದುದರಿಂದ ಜೇನುತುಪ್ಪದ ಉತ್ಪಾದನೆಗಾಗಿ ಜೇನು ಸಾಕಾಣಿಕೆ ಮಾಡುವುದು ಒಂದು ಕೃಷಿ ಉದ್ಯಮವಾಗಿದೆ .

  • ಜೇನು ಸಾಕಾಣಿಕೆಗೆ ಕಡಿಮೆ ಬಂಡವಾಳ ಅಗತ್ಯವಿರುವುದರಿಂದ ಕೃಷಿಕರು ಇದನ್ನು ಹೆಚ್ಚುವರಿ ಆದಾಯ ತರುವ ಚಟುವಟಿಕೆಯಾಗಿ ಬಳಸಿಕೊಳ್ಳುತ್ತಾರೆ.

  • ಜೇನುತುಪ್ಪದ ಜೊತೆಗೆ, ಜೇನುಗೂಡು ಮೇಣದ ಆಕರವಾಗಿದ್ದು ಇದನ್ನು ವಿವಿಧ ಷಧಗಳ ತಯಾರಿಕೆಯಲ್ಲಿ ಬಳಸುತ್ತಾರೆ.

ಜೇನು ಸಾಕಾಣಿಕೆ (Bee Keeping ..Apiculture)

126 of 132

127 of 132

ಜೇನು ಸಾಕಾಣಿಕೆ (Bee Keeping):

128 of 132

ಜೇನು ಸಾಕಾಣಿಕೆ (Bee Keeping):

  • ಜೇನುತುಪ್ಪದ ವಾಣಿಜ್ಯ ಉತ್ಪಾದನೆಗಾಗಿ ಬಳಸುವ ಸ್ಥಳೀಯ ತಳಿಗಳೆಂದರೆ
  • ಏಪಿಸ್ ಸೆರೆನಾಇಂಡಿಕಾ (apis cerenaindica) ಇದನ್ನು ಸಾಮಾನ್ಯವಾಗಿ ಭಾರತೀಯ ಜೇನುಹುಳು ಎನ್ನುವರು.

  • ಏಪಿಸ್ ಡಾರ್‍ಸೆಟಾ, ಕಲ್ಲು ಜೇನುಹುಳು ಮತ್ತು ಏಪಿಸ್ ಫ್ಲೋರೆ, ಸಣ್ಣ ಜೇನುಹುಳು. ಜೇನುತುಪ್ಪದ ಇಳುವರಿಯನ್ನು ಹೆಚ್ಚಿಸಲು ಏಪಿಸ್ ಮೆಲ್ಲಿಫೆರಾ ಎಂಬ ಇಟಲಿ ಜೇನುಹುಳುವಿನ ತಳಿಯನ್ನೂ ಸಹ ತರಲಾಗಿದೆ.

  • ಜೇನುತುಪ್ಪದ ವಾಣಿಜ್ಯ ಉತ್ಪಾದನೆಗಾಗಿ ಸಾಮಾನ್ಯವಾಗಿ ಈ ತಳಿಯನ್ನು ಬಳಸಲಾಗುತ್ತದೆ.

  • ಇಟಲಿಯ ಜೇನುಹುಳುಗಳು ಅಧಿಕ ಜೇನುತುಪ್ಪವನ್ನು ಉತ್ಪಾದಿಸುವ ಸಾಮಥ್ರ್ಯ ಹೊಂದಿವೆ. ಅವುಗಳು ಸಾಮಾನ್ಯವಾಗಿ ಕಡಿಮೆ ಕುಟುಕುತ್ತವೆ.

129 of 132

ಜೇನು ಸಾಕಾಣಿಕೆ (Bee Keeping):

  • ಒದಗಿಸಿದ ಜೇನುಗೂಡುಗಳಲ್ಲಿ ಅವು ದೀರ್ಘಕಾಲದವರೆಗೆ ನೆಲೆಸುತ್ತವೆ ಮತ್ತು ಚೆನ್ನಾಗಿ ಸಂತಾನೋತ್ಪತ್ತಿ ನಡೆಸುತ್ತವೆ.

  • ಜೇನುತುಪ್ಪದ ವಾಣಿಜ್ಯ ಉತ್ಪಾದನೆಗಾಗಿ ಜೇನುಸಾಕಾಣಿಕಾ ಕೇಂದ್ರ (bee farms) ಅಥವಾ ಜೇನು ಕೃಷಿ ಕೇಂದ್ರ (bee farms) ಗಳನ್ನು ಸ್ಥಾಪಿಸಲಾಗಿದೆ.

  • ಜೇನುತುಪ್ಪದ ಗುಣಮಟ್ಟ ಅಥವಾ ಮೌಲ್ಯವು ಮತ್ತು ಪರಾಗವನ್ನು ಸಂಗ್ರಯಿಸಲು ಜೇನುಹುಳುಗಳಿಗೆ ದೊರಕುವ ಸಸ್ಯಸಂಪತ್ತು (pasturage) ಅಥವಾ ಹೂವುಗಳನ್ನು ಅವಲಂಬಿಸಿದೆ.

  • ಸಾಕಷ್ಟು ಪ್ರಮಾಣದ ಸಸ್ಯಗಳ ಜೊತೆಗೆ ದೊರಕುವ ಹೂವುಗಳ ವಿಧವು ಜೇನುತುಪ್ಪದ ರುಚಿಯನ್ನು ನಿರ್ಧರಿಸುತ್ತದೆ.

130 of 132

ಜೇನು ಸಾಕಾಣಿಕೆ (Bee Keeping):

Honey Bee Farming

131 of 132

ಪ್ರಶ್ನೆಗಳು :

  1. ಜೇನುಹುಳುವಿನ ತಳಿಗಳ ಯಾವ ಅಪೇಕ್ಷಿತ ಗುಣಗಳು ಜೇನಿನ ಉತ್ಪಾದನೆಗೆ ಸೂಕ್ತವಾಗಿವೆ?

2. ಸಸ್ಯಸಂಪತ್ತು ಎಂದರೇನು? ಜೇನಿನ ಉತ್ಪಾದನೆಗೆ ಇದು ಹೇಗೆ ಸಂಬಂಧಿಸಿದೆ?

132 of 132

ಚಟುವಟಿಕೆ 1.2.1

ಈ ಕೆಳಗಿನ ನಕ್ಷ ಹಾಳೆಯನ್ನು ಪೂರ್ಣಗೊಳಿಸು.