ಅಮೌರ್ - ಕ್ವೀರ್ (ಎಲ್ಜಿಬಿಟಿ) ಜನರಿಗೆ ದೀರ್ಘಕಾಲದ ಸಂಗಾತಿ(ಗಳನ್ನು) ಹುಡುಕಲು ಒಂದು ವೇದಿಕೆ
For other language google forms visit: http://amourqueerdating.blogspot.in/

ಅಮೌರ್ - ಕ್ವೀರ್ (ಎಲ್ಜಿಬಿಟಿ) ಜನರಿಗೆ ದೀರ್ಘಕಾಲದ ಸಂಗಾತಿ(ಗಳನ್ನು) ಹುಡುಕಲು ಒಂದು ವೇದಿಕೆ. ಇದು ತಲೆಹಿಡುಕರ ತಾಣವಲ್ಲ ಎಂಬುದು ನೆನಪಿರಲಿ. (ಅದಕ್ಕಾಗಿ ಈಗಾಗಲೇ ಬೇಕಾದಷ್ಟು ವೇದಿಕೆಗಳು ಲಭ್ಯವಿವೆ.) ಅಮೌರ್‌ ಬಗ್ಗೆ ಹೆಚ್ಚಿನ ಮಾಹಿತಿ ಬೇಕಾದಲ್ಲಿ ದಯವಿಟ್ಟು ಈ ಬ್ಲಾಗಿಗೆ ಭೇಟಿ ಕೊಡಿ: http://amourqueerdating.blogspot.in/

ಅಮೌರ್‌ ಡೇಟಾಬೇಸ್‌ ಬಳಕೆಯ ಪರವಾನಿಗೆ ಪಡೆಯಲು ದಯವಿಟ್ಟು ಈ ಕೆಳಗಿನ ಅರ್ಜಿಯನ್ನು ತುಂಬಿಸಿ. ನಿಮ್ಮ ಉತ್ತರಗಳು ಪ್ರಾಮಾಣಿಕವಾಗಿರಲಿ ಮತ್ತು ಬಳಸುವ ಭಾಷೆ ಸೂಕ್ಷ್ಮವಾಗಿರಲಿ (ವಿವರಣಾತ್ಮಕ ಉತ್ತರಗಳಲ್ಲಿ); ಯಾರಿಗಾದರೂ ನೋವಾಗುವಂತಹ ಭಾಷೆಯಲ್ಲಿ ನಿಮ್ಮ ಅಗತ್ಯಗಳನ್ನು ವಿವರಿಸಬೇಡಿ. ಯಾರಾದರೂ ಬೇಜವಬ್ದಾರಿಯ ಭಾಷೆಯನ್ನು ಬಳಸಿದರೆ (ಉದಾಹರಣೆಗೆ ದ್ವಿಲಿಂಗಿಗಳ ಮೇಲಿನ ದ್ವೇಷ, ಗೇ ಅಥವಾ ಲಿಂಗಪರಿವರ್ತಿತರ ಬಗ್ಗೆ ಉಡಾಫೆಯ ಮಾತು ಅಥವಾ ದೈಹಿಕ ವರ್ತನೆಯ ಬಗ್ಗೆ ಮತ್ತು ಚರ್ಮದ ಬಣ್ಣದ ಬಗ್ಗೆ ಅವಹೇಳನಕಾರಿ ಮಾತುಗಳು ಇತ್ಯಾದಿ), ಅಂತಹ ಅರ್ಜಿಯನ್ನು ವಜಾ ಮಾಡುತ್ತೇವೆ. ನೀವು ಕೊಡುವ ಈ ವಿವರಗಳನ್ನು ಮುಂದೆ ಯಾವಾಗ ಬೇಕಾದರೂ ಸಾಂದರ್ಭಿಕವಾಗಿ ನಿಮ್ಮ ಜಿ-ಮೇಲ್‌ ಐಡಿಯ ಮುಖಾಂತರ ನೀವೇ ಬದಲಾಯಿಸಬಹುದು. ಏನಾದರೂ ತಕರಾರು ಬಂದಲ್ಲಿ, ಅಡ್ಮಿನ್‌ರವರ ನಿರ್ಧಾರವೇ ಅಂತಿಮವಾದದ್ದಾಗಿರುತ್ತದೆ.

ಈ ಕೆಳಗಿನ ಅರ್ಜಿಯನ್ನು ನಿಮಗೆ ಸರಿಯೆನ್ನಿಸುವ ಯಾವುದೇ ಭಾಷೆಯಲ್ಲಾದರೂ ತುಂಬಬಹುದು. (ಯಾವುದಾದರೂ ಪ್ರಶ್ನೆ ಅಥವಾ ಆಯ್ಕೆ ತಿಳಿಯದಿದ್ದರೆ ದಯವಿಟ್ಟು ಅಡ್ಮಿನ್‌ ಅವರನ್ನು ಸಂಪರ್ಕಿಸಿ)

ಕೆಲವು ಉದಾಹರಣೆಗಾಗಿ ಈ ಲಿಂಕನ್ನು ಕ್ಲಿಕ್ಕಿಸಿ:
https://docs.google.com/spreadsheets/d/1mJgcoTgYkQ42XRzduQKDNJQn182xW2Ntn62oBSYy1U4/edit?usp=sharing

ಅಮೌರ್‌ ಪ್ರತ್ಯೇಕ ಐಡಿ *
ಅಡ್ಮಿನ್ ನಿಮಗೆಂದೇ ಕೊಟ್ಟ ಅಮೌರ್ ಪ್ರೋಫೈಲ್ ಐಡಿಯನ್ನು ದಯವಿಟ್ಟು ತಿಳಿಸಿ. ನಿಮ್ಮ ಬಳಿ ಅಮೌರ್‌ ಐಡಿ ಇರದಿದ್ದರೆ, ದಯವಿಟ್ಟು ಅಡ್ಮಿನ್‌ರವರಿಗೆ ತಿಳಿಸಿ (ನೀವು ಅಮೌರ್‌ ಫೇಸ್‌ಬುಕ್‌ ಮುಖಾಂತರ ಮೆಸೇಜ್‌ ಮಾಡಬಹುದು ಅಥವಾ amour.queer@gmail.com ಗೆ ಮಿಂಚಂಚೆ ಕಳುಹಿಸಬಹುದು.) ನಮ್ಮ ಬಹುತೇಕ ಸಂಪರ್ಕದಲ್ಲಿ ಇದೇ ಐಡಿಯನ್ನು ಬಳಸುತ್ತೇವೆ. ಆದ್ದರಿಂದ ಈ ಅರ್ಜಿ ತುಂಬುವ ಮೊದಲು ನಿಮ್ಮ ಐಡಿ ಕಡ್ಡಾಯವಾಗಿ ಬೇಕು.
ನಿಮ್ಮ ಲೈಂಗಿಕತೆಯನ್ನು ಹೇಗೆ ಗುರುತಿಸಿಕೊಳ್ಳ ಬಯಸುವಿರಿ? *
ಸಾಮಾನ್ಯವಾಗಿ ಯಾವ ಲೈಂಗಿಕತೆಯಿಂದ ನಿಮ್ಮನ್ನು ಗುರುತಿಸಿಕೊಳ್ಳಲು ಬಯಸುವಿರೋ ತಿಳಿಸಿ. ನಮ್ಮ ಆಯ್ಕೆ ಕೆಳಗಿನ ಪಟ್ಟಿಯಲ್ಲಿ ಸಿಗದಿದ್ದರೆ, “ಇತರೆ” ಎಂದು ನಮೂದಿಸಿ. ಹಾಗೆಂದರೇನೆಂಬುದನ್ನು ಕೊನೆಯ ಕೆಲವು ಪ್ರಶ್ನೆಗಳಲ್ಲಿ ವಿವರವಾಗಿ ತಿಳಿಸಿ.
ಲೈಂಗಿಕ ಅಭಿವ್ಯಕ್ತಿ
ಐಚ್ಛಿಕ ಪ್ರಶ್ನೆ. ನಿಮ್ಮ ಭಾವೀ ಜೊತೆಗಾರಗೆ(ರಿಗೆ) ಈ ಸಂಗತಿ ಮುಂಚೆಯೇ ತಿಳಿದಿರಬೇಕು ಎಂದು ನಿಮಗನ್ನಿಸಿದರೆ ಮಾತ್ರ ಉತ್ತರಿಸಿ. ಲೈಂಗಿಕ ಅಭಿವ್ಯಕ್ತಿಯಲ್ಲಿ ನಿಮ್ಮ ನಿಲುವು ಸಾಂಪ್ರದಾಯಿಕ ಸಮಾಜದ ನಿರೀಕ್ಷೆಗಿಂತಲೂ ಎಷ್ಟು ವಿಭಿನ್ನವಾಗಿದೆ ಎನ್ನುವದನ್ನು 1 ರಿಂದ 5 ರ ಅಳತೆಪಟ್ಟಿಯಲ್ಲಿ ಆಯ್ಕೆ ಮಾಡಿ ತಿಳಿಸಿ (ನೀವು ಹಾಕುವ ಉಡುಗೆ-ತೊಡುಗೆ, ವರ್ತನೆ, ಮಾತಾಡುವ ರೀತಿ ಇತ್ಯಾದಿಗಳನ್ನು ಗಮನದಲ್ಲಿಟ್ಟುಕೊಳ್ಳಿ.) ನೀವು ಕಟ್ಟಾ ಸಾಂಪ್ರದಾಯಬದ್ಧ ನಿರೀಕ್ಷೆಗೆ ಹೊಂದುತ್ತಿದ್ದರೆ 1 ನ್ನು ಆಯ್ಕೆ ಮಾಡಿಕೊಳ್ಳಿ. ಇಲ್ಲದಿದ್ದರೆ 2 ರಿಂದ 5 ರಲ್ಲಿ ನಿಮಗೆ ಸರಿ ಅನ್ನಿಸಿದ್ದನ್ನು ನಮೂದಿಸಿ.
ಸಾಂಪ್ರದಾಯಿಕ
ಬಹುವಿಭಿನ್ನ
ನಿಮ್ಮ ಆಸಕ್ತಿಯ ಸಂಗಾತಿ(ಗಳು) *
ನೀವು ಭೇಟಿಯಾಗಲು ಬಯಸುವ ಸಂಗಾತಿಯ(ಗಳ) ಲೈಂಗಿಕ ಅಭಿವ್ಯಕ್ತಿ ಹೇಗಿರಬೇಕೆಂದು ಆಯ್ಕೆ ಮಾಡಿಕೊಳ್ಳಿ. ನಿಮ್ಮ ಆಯ್ಕೆಯ ನಮೂನೆಯನ್ನು ಕೆಳಗಡೆ ಕೊಟ್ಟಿಲ್ಲವಾದರೆ, ದಯವಿಟ್ಟು “ನನ್ನ ಆಯ್ಕೆ ಬೇರೆ” ಎಂಬುದನ್ನು ಆಯ್ದುಕೊಂಡು, ಅದರ ಬಗ್ಗೆ ವಿವರಗಳನ್ನು ಈ ಪ್ರಶ್ನಾವಳಿಯ ಕೊನೆಯಲ್ಲಿ ಕೊಟ್ಟಿರುವ ವಿವರಣಾತ್ಮಕ ಪ್ರಶ್ನೆಗಳಲ್ಲಿ ತಿಳಿಸಿರಿ.
ಹುಟ್ಟಿದ ವರ್ಷ *
ದಯವಿಟ್ಟು ನೀವು ಹುಟ್ಟಿದ ವರ್ಷವನ್ನು ನಮೂದಿಸಿ (ಉದಾಹರಣೆಗೆ 1994) ಅಥವಾ “ನಾನು 18 ವರ್ಷಕ್ಕಿಂತಲೂ ದೊಡ್ಡವನು ಎಂದು ಧೃಡಪಡಿಸುತ್ತೇನೆ” ಎಂದು ನಮೂದಿಸಿ.
ವೃತ್ತಿ *
ದಯವಿಟ್ಟು ನೀವು ಜೀವನೋಪಾಯಕ್ಕೆ ನಂಬಿಕೊಂಡಿರುವ ವೃತ್ತಿಯನ್ನು ತಿಳಿಸಿ ಅಥವ “ಹೇಳಲು ಇಷ್ಟವಿಲ್ಲ” ಎಂದು ನಮೂದಿಸಿ
ಸ್ಥಳ *
ನಿಮ್ಮ ಸದ್ಯದ ಊರನ್ನು ತಿಳಿಸಿ ಅಥವಾ “ಹೇಳಲು ಇಷ್ಟವಿಲ್ಲ” ಎಂದು ನಮೂದಿಸಿ. ಊರಿನ ಹೆಸರನ್ನು ಸರಕಾರವು ಒಪ್ಪಿಕೊಂಡಿರುವ ಕಾಗುಣಿತದಂತೆ ಬರೆಯಿರಿ. ಉದಾಹರಣೆಗೆ ಬೆಂಗಳೂರು, ಕಲಬುರ್ಗಿ, ಬಳ್ಳಾರಿ, ಮಂಗಳೂರು, ಚಿಕಮಗಳೂರು, ವಿಜಯಪುರ ಇತ್ಯಾದಿ
ಭಾವೀ ಸಂಗಾತಿಯ ಊರು *
ಭಾವೀ ಸಂಗಾತಿಯು(ಗಳು) ಯಾವ ಊರಿನವರಾಗಿರಬೇಕೆಂದು ನೀವು ಬಯಸುವಿರೆಂದು ತಿಳಿಸಿ. “ಯಾವ ಊರಾದರೂ ಪರವಾಗಿಲ್ಲ” ಅಥವಾ “ದಕ್ಷಿಣ ಭಾರತದ ಯಾವುದೇ ಊರು” ಅಥವಾ “ಕರ್ನಾಟಕದ ಯಾವುದೇ ಊರು” – ಇತ್ಯಾದಿಗಳನ್ನೂ ಬರೆಯಬಹುದು. “ಯಾವುದೇ ನಿರೀಕ್ಷೆ ತಿಳಿಸಲು ಆಸಕ್ತಿಯಿಲ್ಲ” ಎಂದರೂ ಆದೀತು.
ಮಾತಾಡುವ ಭಾಷೆಯ(ಗಳ) ಆಯ್ಕೆ *
ನಿಮ್ಮ ಸಂಗಾತಿಗೆ(ಗಳಿಗೆ) ಯಾವ ಭಾಷೆಗಳು ಗೊತ್ತಿರಬೇಕು ಎನ್ನುವದನ್ನು ಕಾಗುಣಿತದ ಅನುಕ್ರಮದಲ್ಲಿ ತಿಳಿಸಿ. “ಭಾಷೆ ಯಾವುದಾದರೂ ಪರವಾಗಿಲ್ಲ” ಎಂದೂ ಹೇಳಬಹುದು.
ಸಂಬಂಧದ ರೀತಿ/ನೀತಿಗಳು *
ನೀವು ನಿರೀಕ್ಷಿಸುವ ಸಂಬಂಧದ / ಬಾಂಧವ್ಯದ ಬಗೆಯನ್ನು ತಿಳಿಸಿ. ನಿಮ್ಮ ಆಯ್ಕೆ ಕೆಳಗಿನ ಪಟ್ಟಿಯಲ್ಲಿ ಇರದಿದ್ದರೆ, “ಇತರೆ” ಎಂಬುದನ್ನು ನಮೂದಿಸಿರಿ. ಅದರ ಬಗ್ಗೆ ವಿವರಗಳನ್ನು ಈ ಪ್ರಶ್ನಾವಳಿಯ ಕೊನೆಯಲ್ಲಿ ನಿರೀಕ್ಷಿಸುವ ವಿವರಣಾತ್ಮಕ ಉತ್ತರಗಳಲ್ಲಿ ತಿಳಿಸಿರಿ.
ಯಾವ ಬಗೆಯ ಸಂಬಂಧ? *
ಯಾವ ಬಗೆಯ ಸಂಬಂಧವನ್ನು ನೀವು ಬಹುವಾಗಿ ಇಷ್ಟಪಡುತ್ತೀರಿ ಎಂದು ತಿಳಿಸಿ. ನಿಮ್ಮ ಆಯ್ಕೆ ಕೆಳಗಿನ ಪಟ್ಟಿಯಲ್ಲಿ ಇರದಿದ್ದರೆ, “ಇತರೆ” ಎಂದು ನಮೂದಿಸಿ. ಅದರ ಬಗ್ಗೆ ವಿವರಗಳನ್ನು ಈ ಪ್ರಶ್ನಾವಳಿಯ ಕೊನೆಯಲ್ಲಿ ನಿರೀಕ್ಷಿಸುವ ವಿವರಣಾತ್ಮಕ ಉತ್ತರಗಳಲ್ಲಿ ತಿಳಿಸಿರಿ.
ನಿಮ್ಮನ್ನು ಯಾರು ಸಂಪರ್ಕಿಸಬಹುದು? *
ನೀವು ಯಾವ ಬಗೆಯ ಸಂಗಾತಿಯನ್ನು(ಗಳನ್ನು) ಭೇಟಿಯಾಗಲು ಇಷ್ಟ ಪಡುತ್ತೀರ ಅಥವಾ ಎಂತಹವರು ನಿಮ್ಮನ್ನು ಸಂಪರ್ಕಿಸಬಹುದು ಎಂದು ವಿವರಿಸಿ. ನೀವು ಸಹಜವಾಗಿ ಯಾವ ತರಹದ ವ್ಯಕ್ತಿತ್ವಕ್ಕೆ ಆಕರ್ಷಿತರಾಗುತ್ತೀರ ಎಂದು ವಿವರಿಸಿ (ಅವರು ನನ್ನನ್ನು ಪ್ರೀತಿಸಬೇಕು, ನನ್ನನ್ನು ಚೆನ್ನಾಗಿ ನೋಡಿಕೊಳ್ಳಬೇಕು ಇತ್ಯಾದಿ ಅಸ್ಪಷ್ಟತೆ ಬೇಡ.) ದಯವಿಟ್ಟು ಧನಾತ್ಮಕವಾದ, ಸಂಭಾವಿತವಾದ ಮತ್ತು ಆಕ್ರಮಣಕಾರಿಯಲ್ಲದ ಭಾಷೆಯನ್ನು ಬಳಸಿ. ಉದಾಹರಣೆಗೆ “ಅಹಂಕಾರಿಗಳು ನನ್ನಿಂದ ದೂರವಿರಿ” ಎನ್ನುವದಕ್ಕೆ ಬದಲು “ವಿನಮ್ರ ವ್ಯಕ್ತಿಗಳನ್ನು ಭೇಟಿಯಾಗಲು ಬಯಸುವೆ” ಎಂದು ತಿಳಿಸಿ.
ನಿಮ್ಮ ಯಾವ ಗುಣಗಳು ಅವರನ್ನು ಆಕರ್ಷಿಸಬಹುದು? *
ನಿಮ್ಮ ಯಾವ ಗುಣಗಳು ಭಾವೀ ಸಂಗಾತಿಗಳನ್ನು ಆಕರ್ಷಿಸಬಹುದು ಎಂದು ವಿವರಿಸಿ. ನಿಮ್ಮ ಭವಿಷ್ಯದ ಬಾಂಧವ್ಯವನ್ನು ಗಟ್ಟಿಗೊಳಿಸುವದಕ್ಕೆ ಸಹಾಯವಾಗುವಂತಹ ನಿಮ್ಮ ವ್ಯಕ್ತಿತ್ವದ ಸಂಗತಿಗಳನ್ನು ತಿಳಿಸಬಹುದು (ಅಸ್ಪಷ್ಟವಾಗಿ “ಪ್ರೀತಿ ನನ್ನ ಹುಟ್ಟುಗುಣ, ಹೂವಿನಂತೆ ಸಂಗಾತಿಯನ್ನು ನೋಡಿಕೊಳ್ಳುವೆ” ಇತ್ಯಾದಿ ಬೇಡ.) ದಯವಿಟ್ಟು ಸಂಭಾವಿತವಾದ ಮತ್ತು ಆಕ್ರಮಣಕಾರಿಯಲ್ಲದ ಭಾಷೆಯನ್ನು ಬಳಸಿ.
ನಿಮ್ಮನ್ನು ಭೇಟಿಯಾಗುವ ಮುನ್ನ ಅವರಿಗೇನು ಗೊತ್ತಿರಬೇಕು? *
ನಿಮ್ಮನ್ನು ಸಂಪರ್ಕಿಸುವದಕ್ಕೆ ಅಥವಾ ಭೇಟಿಯಾಗುವದಕ್ಕೆ ಮುಂಚೆ ನಿಮ್ಮ ಕುರಿತಾದ ಯಾವ ಸಂಗತಿಗಳು ಅವರಿಗೆ ತಿಳಿದಿರಬೇಕು ಎಂಬುದನ್ನು ವಿವರಿಸಿ. ಉದಾಹರಣೆಗೆ ನಿಮ್ಮ ವ್ಯಕ್ತಿತ್ವದ ಪರಿಮಿತಿಗಳು, ದೈಹಿಕ ಮಿಲನದಲ್ಲಿ ನೀವು ವಹಿಸಲು ಬಯಸುವ ಪಾತ್ರ (ಮೇಲೆ, ಕೆಳಗೆ, ವಿಕ್ಷಿಪ್ತ ಇತ್ಯಾದಿ), ನೀವು ರಾಜಿ ಮಾಡಿಕೊಳ್ಳಲು ಸಾಧ್ಯವಿಲ್ಲದ ನಂಬಿಕೆ/ ಸಂಗತಿ / ಮೌಲ್ಯಗಳು (ಉದಾಹರಣೆಗೆ ಲೈಂಗಿಕ ಮತ್ತು ಭಾವನಾತ್ಮಕ ಸಂಬಂಧದ ಪ್ರಾಮಾಣಿಕತೆ), ನಿಮ್ಮ ರಾಜಕೀಯ ನಿಲುವುಗಳು ಅಥವಾ ನೀವು ಬಯಸುವ ಒಳ್ಳೆಯ ಭೇಟಿ/ಸಂಬಂಧ/ನಿವೃತ್ತಿಯ ವಿವರಗಳು.) ಈ ಜಾಗವನ್ನು ನಿಮ್ಮ ವೈಕಲ್ಯವನ್ನು ತಿಳಿಸಲೋ, ನಿಮಗೆ ಬೇಕಾದ ವಿಶೇಷ ಅಗತ್ಯಗಳನ್ನು ತಿಳಿಸಲೋ, ನಿಮ್ಮ ಎಚ್‌ಐವಿ ಸ್ಥಿತಿಗತಿಯನ್ನು ತಿಳಿಸಲೋ, ನಿಮ್ಮ ಜೈವಿಕ ಲಿಂಗವನ್ನು ತಿಳಿಸಲೋ ಬಳಸಬಹುದು (ಗಂಡು/ಹೆಣ್ಣು/ಮಧ್ಯಮ, ಲಿಂಗಪರಿವರ್ತಿತಗೊಂಡ / ಲಿಂಗಪರಿವರ್ತನೆಗೊಂಡಿಲ್ಲದ ಇತ್ಯಾದಿ.) ದಯವಿಟ್ಟು ಧನಾತ್ಮಕವಾದ, ಸಂಭಾವಿತವಾದ ಮತ್ತು ಆಕ್ರಮಣಕಾರಿಯಲ್ಲದ ಭಾಷೆಯನ್ನು ಬಳಸಿ.
ಆಸಕ್ತಿ(ಗಳು) *
ನಿಮ್ಮ ಸಾಂದರ್ಭಿಕ ಆಸಕ್ತಿಗಳನ್ನು ಪಟ್ಟಿ ಮಾಡದೆ, ನಿಮ್ಮ ವ್ಯಕ್ತಿತ್ವವನ್ನು ಪ್ರತಿಬಿಂಬಿಸುವ ಒಂದೆರಡು ಅನುದಿನದ ಹವ್ಯಾಸಗಳನ್ನು ನಮೂದಿಸಿ. ಹವ್ಯಾಸಗಳಿಲ್ಲವೆಂದರೆ “ಯಾವುದೂ ಇಲ್ಲ” ಎಂದು ನಿರ್ಭಿಡೆಯಿಂದ ಹೇಳಿ. ಕೆಲವು ಉದಾಹರಣೆಗಳನ್ನು ಕೊಡಬೇಕೆಂದರೆ – ಕಾರ್ಯಕರ್ತ, ಮಾನವೀಯ ಹಕ್ಕುಗಳು, ಆಧ್ಯಾತ್ಮ, ಧರ್ಮ, ಸೇವಾ ಮನೋಭಾವ, ಓದು, ಸಿನೆಮಾ, ಸಂಗೀತ, ಸ್ವಂತೀ, ಕಲೆ, ಅಡುಗೆ, ಗಾನ, ನರ್ತನ, ರಾಜಕೀಯ, ಪ್ರಾಣಿ ದಯಾಸಂಘ, ಪರಿಸರ, ಹರಟೆ, ಚೆಲ್ಲಾಟ, ಆಟೋಟ, ಸಾಹಸ, ಪ್ರವಾಸ, ಯೋಗ, ಫೇಸ್‌ಬುಕ್‌, ಗ್ರೈಂಡರ್‌, ಕನ್ನಡಿಯಲ್ಲಿ ನೋಡಿಕೊಳ್ಳುವುದು, ಚರ್ಚೆ, ಧಾರ್ಮಿಕ, ಭಾಷೆ ಇತ್ಯಾದಿ. ನಿಮಗ ಖಚಿತವಾಗಿ ಗೊತ್ತಾಗದಿದ್ದರೆ, ನಿಮ್ಮ ಖಾಸಾಗೆಳೆಯರನ್ನು ಕೇಳಿ.
ನಿಮ್ಮ Profile link, ಬೇರೆ ಏನಾದರೂ ಹೇಳಬೇಕೆ?
ನಿಮ್ಮ ಭಾವೀ ಪಾರ್ಟನರ್‌ (ರ್ಸ್‌) ನಿಮ್ಮನ್ನು ಸಂಪರ್ಕಿಸಲು ಅನುಕೂಲವಾಗುವಂತಹ ಇತರ ಮಾಹಿತಿ ಇದ್ದರೆ ತಿಳಿಸಿ. ಈ ಹಿಂದಿನ ಯಾವುದಾದರೂ ಪ್ರಶ್ನೆಗೆ ನೀವು “ಇತರೆ” ಎಂದು ನಮೂದಿಸಿದ್ದರೆ, ಅದರ ವಿವರಗಳನ್ನು ಇಲ್ಲಿ ತಿಳಿಸಬಹುದು. ನಿಮ್ಮ ಬ್ಲಾಗ್‌, ಫೋಟೋ ಆಲ್ಬಂ ಅಥವಾ PR/FB/Instagram/Okcupid/ಇತರೆ ಪ್ರೊಫೈಲ್ ಐಡಿ – ಇತ್ಯಾದಿಗಳನ್ನು ಇಲ್ಲಿ ನಮೂದಿಸಬಹುದು. ನಿಮ್ಮ ಜಿಮೇಲ್‌ ಐಡಿ ಮೂಲಕ ಈ ವಿವರಗಳನ್ನು ನಿಮಗೆ ಬೇಕೆನಿಸಿದಾಗ ಬದಲಾಯಿಸಲೂಬಹುದು.
ಜಿಮೇಲ್‌ ಅಥವಾ ಗೂಗಲ್‌ ಐಡಿ *
ಇದನ್ನು ಎಲ್ಲಿಯೂ ಸಾರ್ವಜನಿಕವಾಗಿ ತೋರಿಸುವದಿಲ್ಲ. ಅಮೌರ್‌ ಬಳಿ ಸಂಗ್ರಹವಾಗಿರುವ ವಿವರಗಳ ಎಕ್ಸ್‌ಲ್ ಪಟ್ಟಿಯನ್ನು ನಿಮಗೆ ನೋಡಲು ಪರವಾನಿಗೆ ಕೊಡುವದಕ್ಕೆ ಮಾತ್ರ ಇದನ್ನು ಅಡ್ಮಿನ್ ಬಳಸಿಕೊಳ್ಳುತ್ತಾರೆ. ಅಗತ್ಯವಿದ್ದರೆ ಅಡ್ಮಿನ್‌ರವರು ನಿಮ್ಮೊಡನೆ ಈ ಐಡಿ ಮೂಲಕ ಸಂಪರ್ಕಿಸುತ್ತಾರೆ. ನಿಮ್ಮ ಐಡಿ ಕೊಡಲು ಸರ್ವಥಾ ನಿಮಗೆ ಒಪ್ಪಿಗೆಯಿರದಿದ್ದರೆ ಪರವಾಗಿಲ್ಲ. ನೀವು ಬೇರೆ ವಿಧಾನದಿಂದ ಅಮೌರ್‌ ಎಕ್ಸೆಲ್‌ ಪಟ್ಟಿಯನ್ನು ನೋಡಬಹುದು. ವಿವರಗಳಿಗೆ ಅಡ್ಮಿನ್‌ರವರನ್ನು ಸಂಪರ್ಕಿಸಿ.
ನನ್ನ ಫೇಸ್‌ಬುಕ್‌ ಅಥವಾ ಇ-ಮೇಲ್‌ ಐಡಿಯನ್ನು ಕೆಳಗಿನವರಿಗೆ ಕೊಡಲು ಅಡ್ಮಿನ್‌ರವರಿಗೆ ಅನುಮತಿ ನೀಡುತ್ತಿರುವೆ. *
Submit
Never submit passwords through Google Forms.
This content is neither created nor endorsed by Google. - Terms of Service - Additional Terms