VivekaDeepti:  Dakshinamurthy Tattva for Youth
                 ವೇದಾಂತಭಾರತೀ, ಬೆಂಗಳೂರು

ವಿವೇಕದೀಪ್ತಿ: ಯುವಕರಿಗೆ ದಕ್ಷಿಣಾಮೂರ್ತಿ ತತ್ತ್ವ

ಪರಮಪೂಜ್ಯ ಶ್ರೀ ಶ್ರೀ ಶಂಕರ ಭಾರತೀ ಮಹಾಸ್ವಾಮಿಗಳವರ ದಿವ್ಯಾನುಗ್ರಹ ಮತ್ತು ಮಾರ್ಗದರ್ಶನದಲ್ಲಿ ವೇದಾಂತ ಭಾರತೀಯು ಯುವಕರಿಗಾಗಿಯೇ ವಿವೇಕದೀಪ್ತಿ ಎಂಬ ವಿನೂತನ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.
ಸ್ಪರ್ಧಾತ್ಮಕವಾಗಿರುವ ಈ ಸಮಾಜದಲ್ಲಿ ಇಂದಿನ ಯುವ ಜನತೆ ಬಹಳಷ್ಟು ರೀತಿಯಲ್ಲಿ ಒತ್ತಡಕ್ಕೆ ಸಿಲುಕಿರುವುದು ಕಂಡುಬರುತ್ತದೆ. ಈ ಕಾರಣದಿಂದ ಎಲ್ಲರೂ ಬಯಸುವ ನೆಮ್ಮದಿಯ ಜೀವನವನ್ನು ಕಾಣಲು ಬಹಳಷ್ಟು ಮಂದಿಗೆ ಕಷ್ಟವೆನಿಸುತ್ತಿದೆ. ಈ ಎಲ್ಲಾ ಸಮಸ್ಯೆಗಳ ಮೂಲವನ್ನು ಸೂಕ್ಷ್ಮವಾಗಿ ಪರಿಶೀಲಿಸಿದಾಗ; ತನ್ನ ಬಗ್ಗೆ, ಪ್ರಪಂಚದ ಬಗ್ಗೆ ಹಾಗೂ ಭಗವಂತನ ಬಗ್ಗೆ ಇರುವ ತಪ್ಪು ತಿಳುವಳಿಕೆಯೇ ಕಾರಣ ಎಂದು ತಿಳಿದು ಬರುತ್ತದೆ.
ವೇದಾಂತ ಭಾರತೀಯು ಈ ಅಂಶವನ್ನು ಮನಗೊಂಡು 18 ರಿಂದ 45 ವರ್ಷಗಳ ವಯೋಮಾನದ ಯುವಕರಿಗೆ ಆದಿ ಶಂಕರಾಚಾರ್ಯರ ದಕ್ಷಿಣಾಮೂರ್ತಿಅಷ್ಟಕ ದಲ್ಲಿರುವ ತತ್ತ್ವ ವನ್ನು 5 ಗೋಷ್ಠಿಗಳಲ್ಲಿ ಯುವಕರಿಗೆ ತಿಳಿಸುವ ಯೋಜನೆಯನ್ನು ಹಮ್ಮಿಕೊಂಡಿದೆ. ಈ ವಿಚಾರವನ್ನು ತಿಳಿದರೆ ತನ್ನ ಸ್ವರೂಪದ ಬಗ್ಗೆ, ಪ್ರಪಂಚದ ಅಸ್ತಿತ್ವದ ವಿಚಾರವಾಗಿ ಹಾಗೂ ಭಗವಂತನ ವಿಚಾರವಾಗಿ ಸ್ಪಷ್ಟ ಕಲ್ಪನೆ ಬಂದು ತನ್ಮೂಲಕ ಜೀವನದಲ್ಲಿ ಬರುವ ಎಲ್ಲಾ ತೊಡಕುಗಳನ್ನು ಸುಲಭವಾಗಿ ಪರಿಹರಿಸಿಕೊಂಡು ನೆಮ್ಮದಿಯ ಜೀವನವನ್ನು ನಡೆಸಲು ಸಾಧ್ಯವಾಗುತ್ತದೆ ಎಂಬುದು ತಿಳಿದವರ ಅನುಭವ.
ಈ ಮೇಲ್ಕಂಡ ಅಂಶಗಳನ್ನು ಯುವಕರಿಗೆ ತಲುಪಿಸಿ ಅವರನ್ನು ಈ ಅಭಿಯಾನದಲ್ಲಿ ಜೋಡಿಸಲು ಸಂಯೋಜಕರಾಗಿ ಕಾರ್ಯನಿರ್ವಹಿಸಲು ಇಚ್ಛೆಯುಳ್ಳವರು ಈ ಕೆಳಕಂಡ ಗೂಗಲ್ ಫಾರ್ಮ್ ಅನ್ನು ತುಂಬಿಸಬೇಕಾಗಿ ಕೋರಿಕೆ.


 ಸಂಯೋಜಕರ ಕರ್ತವ್ಯ :

1. ವಿವೇಕದೀಪ್ತಿಯ ಉದ್ದೇಶವನ್ನು ಯುವಕರಿಗೆ ತಿಳಿಸಿ ತಮ್ಮ ಗುಂಪಿನಲ್ಲಿ ಕನಿಷ್ಠ ನೂರು ಜನ ಯುವಕರನ್ನು ಸೇರಿಸುವುದು
2. 5 ಗೋಷ್ಠಿಯನ್ನು ಆಯೋಜಿಸುವುದು
3. ಪ್ರತಿಯೊಂದು ಮಾಹಿತಿಯನ್ನು ಗುಂಪಿನಲ್ಲಿರುವ ಎಲ್ಲರಿಗೂ ತಲುಪಿಸುವುದು
ಬೆಂಗಳೂರು ಮಹಾನಗರದಲ್ಲಿರುವ ಯುವಕರು, ಸಂಯೋಜಕರಾಗಿ ಈ ಪವಿತ್ರವಾದ ಕಾರ್ಯದಲ್ಲಿ ತೊಡಗಬೇಕೆಂದು ಕೋರಿಕೆ.

                      Vedanta Bharati, Bangalore

VivekaDeepti: Dakshinamurthy Tattva for Youths


With the blessings and guidance of HH Sri Sri Shankara Bharati MahaSwamiji  Peetadhipathi of Yedatore Sri Yoganandeshwara Saraswathi Mutt, Vedanta Bharati has come up with an unique program called VivekaDeepti for the youths.

VedantaBharati intends to take the Dakshinamurthy Tattva (Essence) as mentioned in Dakshinamurthy Astaka by Adi Shankaracharya to the youths (between 18 to 45 yrs of age) through a series of 5 courses followed by contemplation and Meditation sessions.

Proper understanding of Dakshinamurthy Tattva would empower individuals to have the right understanding of the self and the world around, the cosmic being and the relation with all. This would enable everyone to handle stress associated with the competitive nature of the society to the inferiority or superiority complexes and the ego clash associated with it.

We request youngsters (aged b/w 18 to 45yrs) who can volunteer as the coordinators to register in this Google Form. 

 Roles of Coordinators:

1. Commnicate the intent and form a 100 member youth group
2. Coordinate for planning 5 courses for your respective groups
3. Share all the communication within the group.


Request the interested youths in Bangalore to register as Coordinators and be part of this noble cause.

Email *
Clear selection
Next
Clear form
Never submit passwords through Google Forms.
This content is neither created nor endorsed by Google. - Terms of Service - Privacy Policy

Does this form look suspicious? Report