Google ಫಾರ್ಮ್‌ಗಳು

ನಿಂದನೆಯ ಪ್ರಕಾರ:

ನಗ್ನತೆಯ ಬಗ್ಗೆ ನಮ್ಮ ನೀತಿ

ಅಶ್ಲೀಲತೆ, ಲೈಂಗಿಕತೆಯ ದೃಶ್ಯ ಸಂಕೇತಗಳು, ಅಥವಾ ಇತರ ಅಸಭ್ಯ ಲೈಂಗಿಕತೆಯನ್ನು ಬಿಂಬಿಸುವ ವಿಷಯವನ್ನು ನಾವು ಹಂಚಿಕೊಳ್ಳಲು ಅಥವಾ ಪ್ರಕಟಿಸಲು ಅನುಮತಿಸುವುದಿಲ್ಲ. ವಾಣಿಜ್ಯ ಅಶ್ಲೀಲತೆಯ ಸೈಟ್‌ಗಳಿಗೆ ಹಾದಿ ಮಾಡುವ ಅಥವಾ ಲೈಂಗಿಕಾಸಕ್ತಿ, ನಿಷಿದ್ಧ ಸಂಭೋಗ ಅಥವಾ ಕಾಮೋನ್ಮತ್ತತೆಯನ್ನು ಪ್ರೋತ್ಸಾಹಿಸುವ ವಿಷಯವನ್ನು ಕೂಡ ನಾವು ಅನುಮತಿಸುವುದಿಲ್ಲ.

ಮಕ್ಕಳ ಮೇಲಿನ ಯಾವುದೇ ಬಗೆಯ ದೌರ್ಜನ್ಯದ ಕಂಟೆಂಟ್‍ ಬಗ್ಗೆ ನಾವು ಶೂನ್ಯ ಸಹನೆ ನೀತಿಯನ್ನು ಹೊಂದಿದ್ದೇವೆ. ಇದರ ಅರ್ಥ ಮಕ್ಕಳ ಲೈಂಗಿಕ ಚಿತ್ರಗಳನ್ನು ಹಂಚುವುದು ಅಥವಾ ಪ್ರಕಟಿಸುವುದರ ಕುರಿತು ನಮಗೇನಾದರೂ ಕಂಡು ಬಂದರೆ ನಾವು ಯಾವುದೇ ಬಳಕೆದಾರನ ಖಾತೆಗಳನ್ನು ಅಂತ್ಯಗೊಳಿಸುತ್ತೇವೆ. ಅಲ್ಲದೆ ಕಂಟೆಂಟ್‍ ಮತ್ತು ಅದರ ಮಾಲೀಕರ ಬಗ್ಗೆ ಕಾನೂನು ನಿರ್ಬಂಧಕ್ಕೆ ನಾವು ವರದಿ ಮಾಡುತ್ತೇವೆ.

ಮಕ್ಕಳ ಕಡೆಗೆ ಲೈಂಗಿಕ ಆಕರ್ಷಣೆಯನ್ನು ಪ್ರೇರೇಪಿಸುವ ಅಥವಾ ಉತ್ತೇಜಿಸುವ ವಿಷಯವನ್ನು ಹಂಚಿಕೊಳ್ಳಲು ಅಥವಾ ಪ್ರಕಟಿಸಲು ಕೂಡ ನಾವು ಅನುಮತಿಸುವುದಿಲ್ಲ.