#Personal2Public Partner Registration

Hello! Namaskara!
 
We would like to invite you to join us as a valued partner in a new campaign called #Personal2Public initiated by WRI India and B.PAC in Bengaluru.

This campaign attempts to build a broad coalition of civil society including RWAs, civic groups and corporates to inspire commuters of Bengaluru to use public transport at least twice a week.
As Metro reaches Whitefield and Electronic City, we believe public transport in Bengaluru will get stronger, but needs work on first and last mile connectivity.
As part of this campaign we intend to conduct a commuter survey, take practical suggestions to government agencies that can be implemented and run awareness campaigns along with you.
 
We request you to join us by registering your organization : bit.ly/p2ppartnerreg
 
For more information, you can see this presentation (bit.ly/p2introduction) or video (bit.ly/p2poverview)
 
On behalf of WRI India & B.PAC
Srinivas Alavilli & Sharath S.R

ನಮಸ್ಕಾರ ಬೆಂಗಳೂರು!

ನಮ್ಮ ಬೆಂಗಳೂರು ನಗರದಲ್ಲಿ ಸಂಚಾರ ದಟ್ಟಣೆ ಮತ್ತು ವಾಹನ ಚಾಲನಾ ಒತ್ತಡದಿಂದ ಹತಾಶರಾಗಿದ್ದೇವೆ. ನಾಗರೀಕರ ಪ್ರಯಾಣವನ್ನು ಸುಗಮಗೊಳಿಸುವ ಹಲವು ಸಕಾರಾತ್ಮಕ ಬೆಳವಣಿಗೆಗಳು ನಡೆಯುತ್ತಿವೆ. ಇವುಗಳಲ್ಲಿ  ಬಹುನಿರೀಕ್ಷಿತ ನಗರದಿಂದ ವೈಟ್‌ಫೀಲ್ಡ್ (ಆಗಸ್ಟ್ 2023)ಮತ್ತು ಎಲೆಕ್ಟ್ರಾನಿಕ್ ಸಿಟಿಗೆ (ಡಿಸೆಂಬರ್ 2023) ಸಂಪರ್ಕ ಕಲ್ಪಿಸುವ ಮೆಟ್ರೋ ಮಾರ್ಗಗಳು ಶೀಘ್ರದಲ್ಲೇ ಕಾರ್ಯಾರಂಭ ಮಾಡಲಿವೆ. ಮುಂಬರುವ ದಿನಗಳಲ್ಲಿ ಬಹುಸಂಖ್ಯೆಯ ವಾಹನ ಸವಾರರು ತಮ್ಮ ಪ್ರಯಾಣ ಮಾದರಿಯನ್ನು ಮೆಟ್ರೋಗೆ ಬದಲಾಯಿಸುವ ಸಾಧ್ಯತೆಯಿದೆ. ಆದರೆ, ನಾಗರೀಕರು ತಮ್ಮ ನಿವಾಸದಿಂದ ಹತ್ತಿರದ ಮೆಟ್ರೋ ನಿಲ್ದಾಣಕ್ಕೆ ಮತ್ತು ಇಳಿಯುವ ಮೆಟ್ರೋ ನಿಲ್ದಾಣದಿಂದ ಉದ್ಯೋಗ ಸ್ಥಳಕ್ಕೆ ಕ್ರಮಿಸಲು ಇರುವ ಸಾರಿಗೆ ಸಾದ್ಯತೆಗಳನ್ನು ಸುಧಾರಿಸಲು ಒತ್ತು ನೀಡಿದರೆ ಮೆಟ್ರೋ ಸಾರಿಗೆ ಮತ್ತಷ್ಟು ಅನುಕೂಲಕರವಾಗಲಿದೆ.

ಸ್ವಂತ2ಸಾರ್ವಜನಿಕ ಸಾರಿಗೆ ಎಂಬ ನಾಗರೀಕ ಅಭಿಯಾನವನ್ನು WRI ಇಂಡಿಯಾ ಮತ್ತು ಬಿ.ಪ್ಯಾಕ್ ಆರಂಭಿಸಿದೆ. ಈ ಅಭಿಯಾನದ ಮುಖೇನ ನಗರದ  ನಿವಾಸಿಗಳು ವಾರದಲ್ಲಿ 2 ದಿನಗಳ ಪ್ರಯಾಣವನ್ನು ಸಾರ್ವಜನಿಕ ಸಾರಿಗೆಯಲ್ಲಿ ಪ್ರಯಾಣಿಸುವಂತೆ ಪ್ರೋತ್ಸಾಹಿಸುವ ಉದ್ದೇಶವನ್ನು ಹೊಂದಿದೆ. ಈ ಮೂಲಕ ಸ್ವಲ್ಪಮಟ್ಟಿಗಾದರೂ ಸಂಚಾರ ದಟ್ಟಣೆ ಮತ್ತು ಮಾಲಿನ್ಯ ನಿಯಂತ್ರಿಸುವುದು ನಮ್ಮ ಆಶಯವಾಗಿದೆ.
 
ಈ ಅಭಿಯಾನದ ಭಾಗವಾಗಿ ಬೆಂಗಳೂರಿನಲ್ಲಿ ಉದ್ಯೋಗಿಗಳು ಪ್ರತಿದಿನ ಕ್ರಮಿಸುವ ಪ್ರಯಾಣದ ಮಾದರಿಗಳನ್ನು ಅರ್ಥಮಾಡಿಕೊಳ್ಳಲು, ನಾವು ಆನ್ಲೈನ್‌ ಸಮೀಕ್ಷೆ ನಡೆಸುತ್ತಿದ್ದೇವೆ.  ಈ ಸಮೀಕ್ಷೆಯಲ್ಲಿ ಉದ್ಯೋಗಿಗಳು ವೈಯುಕ್ತಿಕ ವಾಹನಗಳನ್ನು ಬಳಸುತ್ತಾರೋ ಅಥವಾ ಸಾರ್ವಜನಿಕ ಸಾರಿಗೆಯನ್ನು ಬಳಸುತ್ತಾರೋ, ಸಾರ್ವಜನಿಕ ಸಾರಿಗೆ ಕಡೆಗೆ ಬದಲಾಗಲು ಬೇಕಿರುವ ಪೂರಕ ಅಂಶಗಳನ್ನು ತಿಳಿಯಲು ಇಚ್ಚಿಸಿದ್ದೇವೆ.

ಬೆಂಗಳೂರು ಸಾರಿಗೆ ಸಮೀಕ್ಷೆ- http://bit.ly/personal2public ಯಲ್ಲಿ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಹಂಚಿಕೊಳ್ಳಬೇಕೆಂದು ಕೋರಿಕೊಳ್ಳುತ್ತೇವೆ.

ಸಮೀಕ್ಷೆಯಿಂದ ಹೊರಹೊಮ್ಮುವ ಫಲಿತಾಂಶವನ್ನು ವಿಶ್ಲೇಷಿಸಿ, ಮೊದಲ ಮತ್ತು ಕೊನೆ ಹಂತದ ಸಾರಿಗೆ ವ್ಯವಸ್ಥೆಗಳನ್ನು ಸುಧಾರಿಸುವಂತೆ ಕೋರಿ ಬಿಎಂಆರ್‌ಸಿಎಲ್‌, ಬಿಬಿಎಂಪಿ, ಬಿಎಂಟಿಸಿ ಹಾಗೂ ಇತರೆ ಇಲಾಖೆಗಳೊಂದಿಗೆ ಹಂಚಿಕೊಳ್ಳಲು ಉದ್ದೇಶಿಸಿದ್ದೇವೆ. ಹಾಗೂ ಪ್ರಸ್ತುತ ವ್ಯವಸ್ಥೆಯ ಬದಲಾವಣೆಗೆ ಒತ್ತಾಯಿಸುತ್ತೇವೆ.

ಬಹುರಾಷ್ಟೀಯ ಕಾರ್ಪೋರೇಟ್‌ ಸಂಸ್ಥೆಗಳನ್ನೊಳಗೊಂಡಂತೆ ನಗರದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಂಸ್ಥೆಗಳು ನಮ್ಮ ಅಭಿಯಾನಕ್ಕೆ ಪೂರಕವಾಗಿ ಸ್ಪಂದಿಸಿವೆ. ಹಾಗೂ ಸ್ವಂತ ಸಾರಿಗೆಯಿಂದ ಸಾರ್ವಜನಿಕ ಸಾರಿಗೆಯೆಡೆಗೆ ಬದಲಾಯಿಸಲು ಬೇಕಿರುವ ಪೂರಕವಾತಾವರಣ ನಿರ್ಮಿಸುವ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದ್ದಾರೆ.
ಧನ್ಯವಾದಗಳು.
 
WRI ಇಂಡಿಯಾ ಮತ್ತು ಬಿ.ಪ್ಯಾಕ್‌ ಸಹಭಾಗಿತ್ವ

ಶ್ರೀನಿವಾಸ್ ಅಲವಿಲ್ಲಿ ಮತ್ತು ಶರತ್ ಎಸ್.ಆರ್
Sign in to Google to save your progress. Learn more
Would you like to become a partner in #Personal2Public campaign?
*
Next
Clear form
Never submit passwords through Google Forms.
This content is neither created nor endorsed by Google. Report Abuse - Terms of Service - Privacy Policy