6) ರಾಜತಾಂತ್ರಿಕ ಅಧಿಕಾರಗಳಿಗೆ ಸಂಬಂಧಿಸಿದಂತೆ ಕೆಳಗಿನ ಹೇಳಿಕೆಗಳನ್ನು ಗಮನಿಸಿರಿ. ಹೇಳಿಕೆ -1: ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಕೌಲುಗಳು (Treaties) ಮತ್ತು ಒಡ೦ಬಡಿಕೆಗಳು ಭಾರತದ ರಾಷ್ಟ್ರಪತಿಯವರ ಹೆಸರಿನಲ್ಲಿ ವ್ಯವಹರಿಸಲ್ಪಡುತ್ತವೆ ಮತ್ತು ನಿರ್ಣಯಿಸಲ್ಪಡುತ್ತವೆ. ಆದಾಗ್ಯೂ ಅವು ಸಂಸತ್ತಿನ ಅಂಗೀಕಾರಕ್ಕೊಳಪಡುತ್ತವೆ. ಹೇಳಿಕೆ-2: ರಾಯಭಾರಿಗಳು, ಹೈಕಮಿಶನರ್ ಮೊದಲಾದ ರಾಯಭಾರಿ ಪ್ರತಿನಿಧಿಗಳನ್ನು ರಾಷ್ಟ್ರಪತಿಯವರು ಕಳಿಸುತ್ತಾರೆ ಮತ್ತು ಬರಮಾಡಿಕೊಳ್ಳುತ್ತಾರೆ. ಸರಿ ಆಯ್ಕೆಗಳನ್ನು ಗುರುತಿಸಿರಿ.