Mayur B Patil,

Assistant Professor,

Dept. of Computer Science & Engg,

S.D.M College of Engg & Tech,

Dharwad - 2

Blog: mayur-patil.blogspot.in

Email Id: mr.mayur.patil@gmail.com

SDM Radio Engineer Swalpa Kelri - A 5 minutes radio-talk by All India Radio (AIR)

Topic: What kind of antivirus should be chosen for computers/laptops/mobiles ?

೧. ವೈರಸ್ ಎಂದರೇನು ?

ಅ: ಮನುಷ್ಯನಿಗೆ ತಗಲುವ ಜೈವಿಕ ವೈರಾಣುವಿನಂತೆ ಗಣಕಯಂತ್ರದ ವೈರಸ್ ಕೂಡ ಅಪಾಯಕಾರಿ. ಇದು ದುರುದ್ದೇಶದಿಂದ   ಮುಖ್ಯವಾಗಿ ಗಣಕಯಂತ್ರವನ್ನು ಹಾಳು ಮಾಡಲು ಅಥವಾ  ಅಸ್ಥಿರ ಗೊಳಿಸಲು  ಅಥವಾ ಮಾಹಿತಿಯನ್ನು ಕದಿಯಲು  ಸಿದ್ದಪಡಿಸಿದ ಒಂದು ತಂತ್ರಾಂಶ. ನಾವು ವೈರಸ್ ತಗುಲಿದ ಕಡತವನ್ನು ತೆರೆದಾಗಲೇ ವೈರಸ್ ನಮ್ಮ ಗಣಕಯಂತ್ರವನ್ನು ಹಾನಿಮಾಡುದು.   ಇದು ಇಮೇಲ್, pendrive ಮೊದಲಾದ ಮಾಧ್ಯಮದ ಮುಖಾಂತರ ಹರಡಬಹುದು. ವೈರಸಗಳನ್ನು ನಾವು ತೋಟದಲ್ಲಿ ಬೆಳೆಯುವ ಕಳೆಗಳಿಗೆ ಹೋಲಿಸಬಹುದು .

೨. ವೈರಸ್ ನಿಂದ ಆಗುವ ಹಾನಿಗಳೆನು ?

ಅ: ೧. ಗಣಕಯಂತ್ರವನ್ನು ನಿಧಾನಗೊಳಿಸುಬಹುದು .

     ೨. ಗಣಕಯಂತ್ರದಿಂದ ನಮ್ಮ ವೈಯಕ್ತಿಕ ಮಾಹಿತಿಯನ್ನು ಕದಿಯಬಹುದು.

     ೩. ಗಣಕಯಂತ್ರದ ಇತರೆ ಭಾಗಗಳನ್ನು ಹಾಳುಮಾಡಬಹುದು .

     ೪. ಗಣಕಯಂತ್ರದ ಕಾಯ್ರವಿಧನವನ್ನು ಬಳಕೆದಾರನಿಗೆ ಅರಿವಿಲ್ಲದೆ ಮಾರ್ಪಾಡು ಮಾಡಬಲ್ಲದು.

     ೫.  ನಮ್ಮ  ಗಣಕ ಯಂತ್ರವನ್ನು ಬಳಸಿ ಇತರ ಗಣಕಯಂತ್ರದ ಮೇಲೆ ಆಕ್ರಮಣ ಮಾಡಬಹುದು .      

೩. ಒಟ್ಟು ಎಷ್ಟು ವಿಧದ ವೈರಸ್ಗಳಿವೆ ?

ಅ: ಗಣಕ ಯಂತ್ರದಲ್ಲಿ ಒಟ್ಟು ಮೂರು ವಿಧದ  ವೈರಸ್ ಗಳಿವೆ :

೧. Worm: ಈ ತರಹದ ವೈರಸ್ ಗಳು ತಮ್ಮನ್ನು ತಾವೇ ನಕಲು ಮಾಡಿಕೊಂಡು ಒಂದು ಯಂತ್ರದಿಂದ ಬೇರೆ ಗಣಕ ಯಂತ್ರಕ್ಕೆ ವರ್ಗಾಯಿಸಿಕೊಂಡು ಯಂತ್ರದ ಎಲ್ಲ ಸಂಪನ್ಮೂಲ ಗಳನ್ನು ಕಬಳಿಸಿ, ತನ್ನದೇ ಆದ ಒಂದು ಜಾಲವನ್ನು ಸೃಷ್ಟಿಸಿ ಯಂತ್ರಗಳನ್ನು ನಿಧಾನ ಗೊಳಿಸುತ್ತವೆ. ಇಂತವುಗಳು ನಿಮ್ಮ ಯಂತ್ರಕ್ಕೆ ತಗುಲಿದ್ದಲ್ಲಿ ನಿಮಗೆ ನಿಮ್ಮ ಯಂತ್ರ slow ಆಗಿ ಕೆಲಸಮಾಡುತ್ತಿದೆಯಲ್ಲಾ ಎನಿಸಬಹುದು.

೨. Trojan: ಇವು ಬಳಕೆದಾರನಿಗೆ ಅರಿವಿಲ್ಲದೆ ಅವನ  ಗಣಕಯಂತ್ರದಿಂದ ದುರುದ್ದೆಶಪುರಿತ ಕಾರ್ಯಗಳನ್ನು ಎಸಗಬಲ್ಲದು. ಉದಾಹರಣೆಗೆ ನಿಮ್ಮ .doc ಫೈಲುಗಳು .exe ಆಗುವಂತಹದ್ದು.

೩. Malware: ಇದು spyware ಅಥವಾ ಬೇಹುಗಾರಿಕಾ ತಂತ್ರಾoಶ .  

೪. Anti - Virus  ತಂತ್ರಾಂಶ ಏನು ಮಾಡುತ್ತದೆ ?

ಅ: Anti -ವೈರಸ್ ತಂತ್ರಾಂಶ ವನ್ನು ನಾವು security guard ಅಥವಾ  ಭದ್ರತಾ  ಪಡೆಗಳಿಗೆ ಹೋಲಿಸಬಹುದು .  ಇದು  ನಮ್ಮ ಯಂತ್ರವನ್ನು ಒಳನುಸುಳುವ ವೈರಸ್ ಗಳಿಂದ ರಕ್ಷಿಸುತ್ತದೆ.  ನಾವು ನಮ್ಮ anti -virus  ತಂತ್ರಾoಶ ವನ್ನು ಪ್ರತೀದಿನ update ಮಾಡಿದರೆ  ಸಂಭಾವ್ಯ ದಾಳಿಗಳಿಂದ ರಕ್ಷಣೆ ಪಡೆಯಬಹುದು .      

೫. ನಮಗೆ ಯಾವ anti -virus ಸಾಫ್ಟ್ವೇರ್  ಸೂಕ್ತವಾದುದು  ?

ಅ : ನಮಗೆ ಯಾವ antivirus ಸೂಕ್ತವಾಗಿದೆ ಎಂಬುವುದು ನಮ್ಮ computing habits ಮತ್ತು internet  browsing habits  ಅಂದರೆ  ನೀವು ಗಣಕಯಂತ್ರವನ್ನು ಮತ್ತು ಅಂತರ್ಜಾಲವನ್ನು ಯಾವ ಯಾವ ಕೆಲಸಗಳಿಗೆ  ಮತ್ತು ಹೇಗೆ  ಬಳಸುತ್ತಿದ್ದಿರಿ ಎಂಬುವುದರ ಮೇಲೆ ನಿರ್ಧರಿತವಾಗಿದೆ. ನೀವು ಅಂತರ್ಜಾಲವನ್ನು ಮತ್ತು cd /pendrive  ಗಳನ್ನು ಬಳಸದೆ ಇದ್ದರೆ ನಿಮ್ಮ ಗಣಕಯಂತ್ರಕ್ಕೆ ಯಾವುದೇ antivirus ನ ಅವಶ್ಯವಿರುವುದಿಲ್ಲ . ಕೇವಲ pendrive ಬಳಸುತ್ತಿದ್ದರೆ ಅದಕ್ಕಾಗಿಯೇ ಮೀಸಲಾಗಿರುವ  usb  antivirus  scanner  ತಂತ್ರಾಂಶ ವನ್ನು ಬಳಸಬಹುದು .  ಕೇವಲ   email  check  ಮಾಡಲು ಗಣಕಯಂತ್ರವನ್ನು ಬಳಸಿದರೆ antivirus software  package  ನ  ಅದೊಂದೇ  ಸೌಕರ್ಯ ಅಂದರೆ feature  ಅನ್ನು  ಖರೀದಿಸಿ ಬಳಸಬಹುದು. ನೀವು ಅಂತರ್ಜಾಲ ಬಳಸಿ ಹಣಕಾಸಿಗೆ ಸಂಭಂದಿಸಿದ ಯಾವುದಾದರು ವ್ಯವಹಾರ ಮಾಡುತ್ತಿದ್ದರೆ ನಿಮಗೆ ವಿಶೇಷ ಭದ್ರತೆಯುಳ್ಳ ತಂತ್ರಾಂಶದ ಅಗತ್ಯವಿದೆ. ಸಂಕ್ಷಿಪ್ತವಾಗಿ ಹೇಳುವುದಾದರೆ  ಕಾರ್ಯೋಚಿತ ಅಂದರೆ task -specific  antivirus  ತಂತ್ರಾಂಶಗಳು  ಲಭ್ಯವಿವೆ .

 

೬. Android ಕಾರ್ಯಾಚರಣೆ ವ್ಯವಸ್ಥೆ ಆಧಾರಿತ ಮೊಬೈಲ್  ಫೋನ್  ಮತ್ತು ಟ್ಯಾಬ್ಲೆಟ್ ಸಾಧನಗಳಿಗೆ  ಯಾವ  ತರಹದ antivirus ಅಳವಡಿಸಬೇಕು ?

ಅ: ಗೂಗಲ್ ಎಂಬ ತಂತ್ರಜ್ಞಾನ ದೈತ್ಯ ಕಂಪನಿಯು ಸ್ಪಷ್ಟಪಡಿಸಿದಂತೆ ಗೂಗಲ್ ನ ಭದ್ರತಾ ಸೇವೆಗಳನ್ನು  android  

ಕಾರ್ಯಾಚರಣೆ ವ್ಯವಸ್ಥೆ ಆಧಾರಿತ ಮೊಬೈಲ್  ಫೋನ್  ಮತ್ತು ಟ್ಯಾಬ್ಲೆಟ್  ಸಾಧನಗಳಿಗೆ ಗರಿಸ್ಟಮಟ್ಟದ ರಕ್ಷಣೆಯನ್ನು ನೀಡಲು ಸಜ್ಜುಮಾಡಲಾಗಿದೆ.  ನೀವು ನಿಮ್ಮ ಸಾಧನದಲ್ಲಿ ಗೂಗಲ್ ಪ್ಲೇ ಸ್ಟೋರ್ ಅಥವಾ ಅಮೆಜಾನ್  appstore  ನಲ್ಲಿ ದೊರೆಯುವ ಉತ್ತಮವಾದ app  ಗಳನ್ನು ಮಾತ್ರ ಅಳವಡಿಸಿಕೊಂಡರೆ  ಹಾಗು ಅನಾಮಧೇಯ  ಅಥವಾ ಸಂಶಯಾಸ್ಪದವಾದ ಸಂದೇಶ / ಇಮೇಲ್ / ಸಂಪರ್ಕ ಕೊಂಡಿ ಅಂದರೆ links ಮತ್ತು app ಗಳನ್ನು ಬಳಸದಿದ್ದರೆ ಸಂಭಾವ್ಯ ವೈರಸ್ ದಾಳಿಗಳಿಂದ  ಯಾವುದೇ  antivirus  ತಂತ್ರಾಂಶವಿಲ್ಲದೆ ರಕ್ಷಿಸಿಕೊಳ್ಳಬಹುದು .  

೭. Linux , Ubuntu ಮೊದಲಾದ open-source ಕಾರ್ಯಾಚರಣೆ ವ್ಯವಸ್ಥೆವುಳ್ಳ ಅಂದರೆ open-source Operating System (OS) ವುಳ್ಳ  ಗಣಕಯಂತ್ರಗಳಿಗೆ  ಯಾವ  antivirus  ನ ಅಗತ್ಯವಿದೆ ?

ಅ: ಲಿನಕ್ಸ್, ಉಬುಂಟು ಮೊದಲಾದ ಓಪನ್-ಸೊರ್ಸ್ ಕಾರ್ಯಾಚರಣೆ ವ್ಯವಸ್ಥೆಯನ್ನು ಯಾವುದೇ ವೈರಸ್ ತಗಲದ ಹಾಗೇ ಭದ್ರವಾಗಿ ಸಿದ್ದಪಡಿಸಲಾಗಿದೆ. ಅದಲ್ಲದೆ opensource ನ ಬೆಂಬಲಿಗರು ಯಾವುದೇ ಲೋಪ ದೋಷಗಳನ್ನು ತ್ವರಿತವಾಗಿ ಸರಿಪಡಿಸು ತ್ತಾರೆ. ಬಳಕೆದಾರರು AVG ಆಂಟಿವೈರಸ್ ಅಥವಾ AVAST Linux Home Edition ಅಥವಾ Bit-Defender ಮೊದಲಾದ antivirus ತಂತ್ರಾಂಶಗಳನ್ನು ಪರಿಗಣಿಸಬಹುದು .

 

೮. ನಕಲಿ antivirus ಸಾಫ್ಟ್ವೇರ್ ಬಗ್ಗೆ ಸ್ವಲ್ಪ ಮಾಹಿತಿ ನೀಡಿರಿ .

ಅ: ಅಂತರ್ಜಾಲದ ಬಳಕೆದಾರರು ಅಸಲಿ ಎಂದು ಬಿಂಬಿಸುವ ನಕಲಿ anti -virus  ತಂತ್ರಾಂಶ ಗಳಿಂದ  ತಮ್ಮನ್ನು  ರಕ್ಷಿಸಿಕೊಳ್ಳ ಬೇಕು.ನಕಲಿ antivirus  ತಂತ್ರಾಂಶಗಳು ಸಾಮಾನ್ಯವಾಗಿ  ನಿಮ್ಮ ಗಣಕಯಂತ್ರಕ್ಕೆ ವೈರಸ್  ತಗುಲಿದೆ ಎಂದು ಭಯಾನಕ ಶಬ್ದಗಳನ್ನು ಬಳಸಿ ಗಾಬರಿಗೊಳಿಸಿ ಆತುರದಿಂದ ನಿರ್ಧಾರ ತೆಗೆದುಕೊಂಡು ಅಸಲಿ ವೈರಸ್ಅನ್ನು ಡೌನ್ಲೋಡ್ ಮಾಡಲು  ಪ್ರಚೋದಿಸುತ್ತವೆ.  ನಕಲಿ anti -virus ತಂತ್ರಾಂಶ ಗಳು  ವೈರಸ್  ಆಗಿರಬಹುದು .    

 

೯. ಪ್ರತಿ ಬಾರಿಯು ಗಣಕಯಂತ್ರದ full-system scan  ಅಗತ್ಯವೇ ?

ಅ: ಮೊದಲಸಾರಿ antivirus software ಅನ್ನು install  ಮಾಡಿದಾಗ  ಗಣಕಯಂತ್ರದ  ಸಂಪೂರ್ಣ  ಸ್ಕ್ಯಾನ್ ಮಾಡಿರಿ ತದನಂತರ ಪ್ರತೀದಿನ antivirus software ಅನ್ನು update  ಆಗಲು  ಬಿಟ್ಟರೆ  ಪುನಃ  ಸಂಪೂರ್ಣ  ಸ್ಕ್ಯಾನ್ ನ  ಅಗತ್ಯವಿಲ್ಲ.    

೧೦.Windows ಕಾರ್ಯಾಚರಣೆ ವ್ಯವಸ್ಥೆವುಳ್ಳ ಗಣಕಯಂತ್ರಗಳಿಗೆ ಉತ್ತಮವಾದ antivirus ತಂತ್ರಾಂಶ ಗಳನ್ನು ಹೆಸರಿಸಿರಿ .

ಅ: Bitdefender antivirus plus  ಇದು  ಈಗ  ಚಾಲನೆ  ಯಲ್ಲಿರುವ  ಗರಿಸ್ಟ  rank ಹೊಂದಿರುವ  ಅತ್ಯುತ್ತಮ  ತಂತ್ರಾಂಶ. ನಂತರ Kaspersky, Quick -Heal , Norton  ಹಾಗು  McAfee  ಕೂಡ  ಉತ್ತಮ antivirus ತಂತ್ರಾಂಶಗಳು.  

   ೩. ಇದೇ ಜುಲೈ ೨೯ಕ್ಕೆ ಬಿಡುಗಡೆಯಾಗುತ್ತಿರುವ Windows 10 ಕಾರ್ಯಾಚರಣೆ ವ್ಯವಸ್ಥೆಗೆ ನೀವು ಉಚಿತವಾಗಿ upgrade ಆದರೆ windows defender ಎಂಬ antivirus  ತಂತ್ರಾಂಶ ಅಂತರ್ನಿರ್ಮಿತ ವಾಗಿ  ಅಂದರೆ inbuilt ಆಗಿ ಲಭ್ಯವಿದೆ  ಮತ್ತು  ಸಮರ್ಥ್ಯವಾಗಿದೆ .    

೧೧.  ಉಚಿತ, free  ಮತ್ತು ಖರೀದಿಸಿದ, paid antivirus  ತಂತ್ರಾಂಶ ಗಳಲ್ಲಿ  ಯಾವುದು ಒಳ್ಳೆಯದು ?

ಅ: ಇದು ಕೂಡ ನಮ್ಮ ಅಂತರ್ಜಾಲ ವಿಕ್ಷಣಾ ಪದ್ಧತಿ ಅಂದರೆ  internet browsing habits  ಅನ್ನು  ಅವಲಂಬಿಸಿದೆ. ಉಚಿತ  antivirus ತಂತ್ರಾಂಶ ಗಳಲ್ಲಿ ಹೆಚ್ಚಿನ ಆಯ್ಕೆಗಳು ಇರುವುದಿಲ್ಲವಾದ್ದರಿಂದ ಇವು ಎಲ್ಲ ತರಹದ ವೈರಸ್  ಗಳಿಂದ  ನಮ್ಮನ್ನು ರಕ್ಷಿಷಲಾರವು . ಖರೀದಿಸಿದ ಪರವಾನಿಗೆವುಳ್ಳ ಅಂದರೆ licensed antivirus ತಂತ್ರಾಂಶಗಳು ಅಳವಡಿಸುವಾಗಲೂ ಸುಲಭ ,  ತಾಂತ್ರಿಕ  ಬೆಂಬಲವೂ  ಲಭ್ಯ ಮತ್ತು ಜಾಹಿರಾತುಗಳನ್ನು ತೋರಿಸದೆ ನಿಮ್ಮ ಸಮಯವನ್ನು ಉಳಿಸುತ್ತದೆ .      

೧೨. ಅಂತಿಮವಾಗಿ ಕೆಲವು ಮುನ್ನೆಚರಿಕೆಗಳು:

ಅ:೧. ಅಂತರ್ಜಾಲವು ಎಂತಹ ಪಳಗಿದ ಬಳಕೆ ದಾರರಿಗೂ ಸುರಕ್ಷಿತವಲ್ಲ . ಈಗಲೂ ನಾವು ಸುಧಾರಿತ ರಸ್ತೆಗಳಿದ್ದರೂ ಆಧುನಿಕ ತಂತ್ರಜ್ಞಾನ  ಆಧಾರಿತ ವಾಹನ ಗಳಿದ್ದರೂ ಪಳಗಿದ ಚಾಲಕರಿದ್ದರೂ ರಸ್ತೆ ಅಫಗಾತ ಆಗುವುದನ್ನುನೋಡಿರುತ್ತೇವೆ.

  ೨. ಒಂದು ಅತ್ಯುತ್ತಮ anti -virus ತಂತ್ರಾಂಶವನ್ನು  ಹೊಂದಿ  ಪ್ರತಿದಿನವು ಅಪ್ಡೇಟ್ ಮಾಡುತ್ತಿದ್ದರೆ  ಶೇ. ೯೯. ೯೯% ವೈರಸ್  ಗಳಿಂದ  ನಮ್ಮ ಗಣಕಯಂತ್ರವನ್ನು  ರಕ್ಷಿಸಬಹುದು.    

  ೩. ನಾವು ಎಸ್ಟೇ ಸುಧಾರಿತ anti -virus   ಅನ್ನು ಹೊಂದಿದ್ದರೂ  ಅನಾಮಧೇಯ  ಅಥವಾ  ಸಂಶಯಾಸ್ಪದ  ಕಡತಗಳನ್ನು /app/ಇಮೇಲ್ / ಸಂದೇಶಗಳನ್ನು  ತೆರೆಯಬಾರದು .    

ಈ ಲೇಖನವು mayur-patil.blogspot.in ಜಾಲತಾಣದಲ್ಲಿ ಲಭ್ಯವಿದೆ.  

ಧನ್ಯವಾದಗಳು